Subscribe to Updates
Get the latest creative news from FooBar about art, design and business.
- ಇ–ಸ್ವತ್ತು ದಾಖಲೆ ವಿಳಂಬ: ಮಹಾನಗರ ಪಾಲಿಕೆಗೆ ಡಿಸಿ ಶುಭ ಕಲ್ಯಾಣ್ ದಿಢೀರ್ ಭೇಟಿ
- ತಿಪಟೂರು | ‘ಶೌರ್ಯ ಪ್ರಶಸ್ತಿ’ ಪುರಸ್ಕೃತ ಪ್ರಣವ್ ಬೆಳ್ಳೂರು ಅವರಿಗೆ ಸನ್ಮಾನ
- ರಾಗಿ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ಬೆಲೆ ನಿಗದಿ
- ಏತ ನೀರಾವರಿ ಯೋಜನೆಗೆ ಹೆಚ್ಚುವರಿ ಅನುದಾನ ಮಂಜೂರು ಮಾಡಿ: ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯ
- ತಿಪಟೂರು: ನ.21ರವರೆಗೆ ಕಲ್ಪೋತ್ಸವ ಕಾರ್ಯಕ್ರಮ
- ಬಂಜಾರ ಸಂಸ್ಕೃತಿ ಉಳಿವಿಗೆ ತುಮಕೂರಿನಲ್ಲಿ ಅದ್ಧೂರಿ ಜಿಲ್ಲಾ ಮಟ್ಟದ ಕಲಾ ಮೇಳ
- ಕಣ್ಣಿನ ಆರೋಗ್ಯಕ್ಕೆ ಸಮತೋಲನ ಆಹಾರ ಸೇವಿಸಬೇಕು: ಸಂಪತ್ ಕುಮಾರ್
- ಮಕ್ಕಳು ಮದ್ಯಪಾನ, ಧೂಮಪಾನ ಚಟುವಟಿಕೆಗಳಿಂದ ದೂರವಿರಬೇಕು: ಶಿಕ್ಷಕ ಮದನ್
Author: admin
ಬೆಳಗಾವಿ: 2023ರ ಕರ್ನಾಟಕ ಚುನಾವಣೆಯಲ್ಲಿ ಕರ್ನಾಟಕ ಕಲ್ಯಾಣ್ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಪ್ರವೀಣ್ ಬಸವರಾಜ್ ಹಿರೇಮಠ್ ಅವರು ಕೆ ಆರ್ ಪಿ ಪಿ ಇಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು ನಗರದಲ್ಲಿ ಹಮ್ಮಿಕೊಳ್ಳಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಗಾವಿ ನಗರ ಸ್ಮಾರ್ಟ್ ಸಿಟಿ ಯಾಗಿ ಪರಿವರ್ತನೆಗೊಂಡ ಸಂದರ್ಭದಲ್ಲಿನಾನು ನೋಡುತ್ತಿರುವ ನಗರ ಇದು ಸ್ಮಾರ್ಟ್ ಸಿಟಿ ಹೌದು ಅಥವಾ ಅಲ್ಲು ಎಂಬ ಭ್ರಮೆಯಲ್ಲಿ ನಾನಿದ್ದೇನೆ! ಎಲ್ಲಿ ನೋಡಿದಲ್ಲಿ ಅವ್ಯವಸ್ಥೆಯ ಗೂಡಾಗಿರುವ ಬೆಳಗಾವಿ ನಗರ ರಾಜ್ಯ ಹಾಗೂ ದೇಶದಲ್ಲಿ ಪ್ರಸಿದ್ಧಿ ಪಡೆದಿರುವಂತ ನಗರ. ಈ ನಗರ ಹಾಗೂ ಇಲ್ಲಿಯ ರಾಜಕಾರಣವನ್ನು ಬದಲಾವಣೆ ಮಾಡಲು ನಮ್ಮಂತ ಯುವಕರು ರಾಜಕಾರಣಕ್ಕೆ ಬರಬೇಕೆಂದು ನಾನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಜನಾರ್ಧನ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಲು ನಾವು ಸಿದ್ಧರಿದ್ದೇವೆ ಎಂದರು. ಈ ಪಕ್ಷ ಬೆಳಗಾವಿ ಜಿಲ್ಲೆಯಲ್ಲಿ ಉತ್ತರ ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿಯನ್ನು ಈಗ ಘೋಷಣೆ ಮಾಡಲಾಗಿದೆ ಮುಂಬರುವ ದಿನಗಳಲ್ಲಿ ನಮ್ಮ ಹಿರಿಯ…
ಬೆಂಗಳೂರು: ಚುನಾವಣೆ ಹೊತ್ತಲ್ಲಿ ಬಿಜೆಪಿ ರಾಜ್ಯದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ. ದಾವಣಗೆರೆಯಲ್ಲಿ ಇಂದು (ಮಾ.25) ನಡೆಯಲಿರುವ ‘ವಿಜಯ ಸಂಕಲ್ಪ ಯಾತ್ರೆ’ಯ ಸಮಾರೋಪ ಸಮಾರಂಭ ಹಾಗೂ ಬೆಂಗಳೂರಿನಲ್ಲಿ ಕೆ.ಆರ್.ಪುರಂ ಮತ್ತು ವೈಟ್ ಫೀಲ್ಡ್ ನಡುವಿನ ಮೆಟ್ರೋ ಉದ್ಘಾಟನೆಗೆ ಮೋದಿ ಬರುತ್ತಿದ್ದಾರೆ. ಬಹುನೀರಿಕ್ಷೀತ ಕೆ.ಆರ್.ಪುರ ಮತ್ತು ವೈಟ್ ಫೀಲ್ಡ್ ನಡುವಿನ ಮೆಟ್ರೋ ಉದ್ಘಾಟನೆ ಕೂಡ ಇಂದು ಪ್ರಧಾನಿ ಮೋದಿ ಅವರಿಂದ ಆಗಲಿದೆ. 4500 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರೋ ಹೊಸ ಮೆಟ್ರೋ ಮಾರ್ಗ ಇಂದು ಲೋಕಾರ್ಪಣೆಗೊಳ್ಳಲಿದೆ. ಮಧ್ಯಾಹ್ನ 13:55ಕ್ಕೆ ಪ್ರಧಾನಿಗಳು ಎಚ್‌ಎಎಲ್‌ನಿಂದ ರಸ್ತೆ ಮೂಲಕ ನೇರವಾಗಿ ವೈಟ್ ಫೀಲ್ಡ್‌ನ ಕಾಡುಗೋಡಿ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 1 ಗಂಟೆಯಿಂದ 1:35 ರ ಒಳಗೆ 13.71 ಕಿ.ಮೀ ಉದ್ದ ಮೆಟ್ರೋ ಮಾರ್ಗವನ್ನ ಉದ್ಘಾಟಿಸಲಿರೋ ಬಳಿಕ ಮೆಟ್ರೋ ಸಂಚಾರ ಕೂಡ ಮಾಡಲಿದ್ದಾರೆ. ವೈಟ್ ಫೀಲ್ಡ್‌ನ ಕಾಡುಗೋಡಿ ನಿಲ್ದಾಣದಿಂದ ಒಂದು ಕಿ.ಮೀ ದೂರದಲ್ಲಿರುವ ಚೆನ್ನಸಂದ್ರ ಮೆಟ್ರೋ ನಿಲ್ದಾಣದವರೆಗೆ ಹೊಸ ಮಾರ್ಗದಲ್ಲಿ ಸಂಚಾರ…
ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಮೊದಲ ಪಟ್ಟಿ ಬಿಡುಗಡೆಗೊಂಡಿದ್ದು, ಕೊನೆಗೂ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾದಿಂದ ಸ್ಪರ್ಧಿಸುವುದು ಖಚಿತವಾಗಿದೆ. ಈ ಮೊದಲು ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸಲು ಭರ್ಜರಿ ಸಿದ್ಧತೆ ನಡೆಸಿದ್ದರು. ಆದರೆ ಹೈಕಮಾಂಡ್ ನಾಯಕರ ಸೂಚನೆ ಬೆನ್ನಲ್ಲೇ ಕೋಲಾರ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಆದರೆ ಇದೀಗ ಕಾಂಗ್ರೆಸ್ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರ ಹೆಸರಿದ್ದು, ಅವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಬೆಂಗಳೂರು: ಹೆಚ್ಚು ಕಡಿಮೆ 90ರಿಂದ 95 ಪರ್ಸೆಂಟ್ ಟಿಕೆಟ್ ಹಾಲಿ ಶಾಸಕರಿಗೆ ಸಿಗುತ್ತದೆ. ಕೆಲವು ಸಂಧಾನಗಳು ಹಾಗೂ ಮಾತುಕತೆಗಳು ನಡೆಯುತ್ತಿವೆ. ಎಲ್ಲವೂ ಸರಿ ಆಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಇನ್ನೂ ಪಟ್ಟಿ ನೋಡಿಲ್ಲ. ಎಲ್ಲಾ ಸರಿ ಹೋಗುತ್ತದೆ. ಕೆಲವು ಕ್ಲಾರಿಫಿಕೇಶನ್‌ಗಳ ನಂತರ ಟಿಕೆಟ್ ಹಂಚಿಕೆ ಆಗುತ್ತದೆ ಎಂದರು. ಸಿದ್ದರಾಮಯ್ಯ ವರುಣಾದಿಂದ ಟಿಕೆಟ್ ಕೇಳಿದ್ದರು. ಅವರಿಗೆ ವರುಣಾದಿಂದಲೇ ಟಿಕೆಟ್ ಕೊಟ್ಟಿದ್ದಾರೆ. ಅವರು ಕೋಲಾರ ಕೇಳಿದ್ದರೆ ಕೋಲಾರವನ್ನು ಕೊಡುತ್ತಿದ್ದರು. ಮೂರು ನಾಲ್ಕು ದಿನದ ಹಿಂದೆಯೇ ಟಿಕೆಟ್ ಹಂಚಿಕೆ ಆಗಬೇಕಿತ್ತು. ಆದರೆ ಅಮವಾಸ್ಯೆ ಸೇರಿದಂತೆ ಹಲವು ಕಾರಣಗಳಿಂದ ತಡವಾಯಿತು. ಅಮವಾಸ್ಯೆಯಂದು ಸೂರ್ಯ ಬಂದಿದ್ದಾನೆ. ಸಿಂಗಲ್ ನೇಮ್ ಇರುವ 124 ಕ್ಷೇತ್ರಗಳ ಹೆಸರು ಕ್ಲಿಯರ್ ಆಗಿದೆ. ಉಳಿದ ಕೆಲವು ಕಡೆ ಸಿಂಗಲ್ ನೇಮ್ ಇದ್ದರೂ, ಚರ್ಚೆಗಳು ನಡೆಯಬೇಕಿದೆ ಎಂದು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…
ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಮೊದಲ ಪಟ್ಟಿ ಬಿಡುಗಡೆಗೊಂಡಿದ್ದು, 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಸಿದ್ದರಾಮಯ್ಯ ಅವರು ವರುಣಾದಿಂದ ಕಡೆಗೂ ಸ್ಪರ್ಧೆ ಮಾಡುವುದು ಅಂತಿಮವಾಗಿದೆ. ಟೀ. ನರಸೀಪುರದಲ್ಲಿ ಹೆಚ್.ಸಿ.ಮಹದೇವಪ್ಪ ಹಾಗೂ ಕನಕಪುರದಿಂದ ಡಿ.ಕೆ. ಶಿವಕುಮಾರ್ ಸ್ಪರ್ಧೆ ಖಚಿತವಾಗಿದೆ. ದೇವನಹಳ್ಳಿಯಿಂದ ಮುನಿಯಪ್ಪಗೆ ಟಿಕೆಟ್, ಬೆಂಗಳೂರು ರಾಜಾಜಿನಗರದಲ್ಲಿ ಪುಟ್ಟಣ್ಣ, ಆರ್ ಆರ್ ನಗರ ಕುಸುಮಾ ಹೆಚ್, ನರಸಿಂಹರಾಜ ತನ್ವಿರ್ ಸೇಠ್‌ಗೆ ಟಿಕೆಟ್ ಘೋಷಣೆಯಾಗಿದೆ. ಚಿಕ್ಕೋಡಿಯಿಂದ ಸದಲಗಾ ಗಣೇಶ ಹುಕ್ಕೇರಿಗೆ, ಕಾಗವಾಡ ಭರಮಗೌಡ ಆಲಗೌಡ ಕಾಗೆ, ಹುಕ್ಕೇರಿಯಿಂದ ಎ.ಬಿ ಪಾಟೀಲ್, ಯಮಕನಮರಡಿಯಿಂದ ಸತೀಶ್ ಜಾರಕಿಹೊಳಿ, ಬೆಳಗಾವಿ ಗ್ರಾಮೀಣದಿಂದ ಲಕ್ಷ್ಮಿ ಹೆಬ್ಬಾಳ್ಕರ್, ಖಾನಾಪುರದಿಂದ ಡಾ. ಅಂಜಲಿ ನಿಂಬಾಳ್ಕರ್,ಬೈಲಹೊಂಗಲದಿಂದ ಮಹಾಂತೇಶ ಶಿವಾನಂದ ಕೌಜಲಗಿ, ರಾಮದುರ್ಗದಿಂದ ಅಶೋಕ್ ಎಂ.ಪಟ್ಟಣ, ಜಮಖಂಡಿಯಿಂದ ಆನಂದ ಸಿದ್ದು ನ್ಯಾಮಗೌಡ ಅವರ ಹೆಸರು ಅಂತಿಮವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್…
ಉಪವಾಸದ ಸೀಸನ್ ಶುರುವಾಗಿದೆ. ಬೆಳಗ್ಗೆ 5 ಗಂಟೆಗೆ ಆರಂಭವಾದ ಉಪವಾಸ ಸಂಜೆ 6.30ರವರೆಗೆ ಇರುತ್ತದೆ. ಭಕ್ತರು ಈ 12ವರೆ ಗಂಟೆಗಳ ಕಾಲ ನೀರು ಕುಡಿಯದೆ ಪ್ರಾರ್ಥನೆಯಲ್ಲಿ ಕಳೆಯುತ್ತಾರೆ. ನೀರು, ಆಹಾರದ ಕೊರತೆಯಿಂದ ದೇಹಕ್ಕೆ ದಣಿವಾಗುವುದು ಸಹಜ. ಬೆಳಿಗ್ಗೆ ಉಪವಾಸವನ್ನು ಮಾಡುವ ಮೊದಲು ನೀವು ರಾತ್ರಿಯ ಊಟದಲ್ಲಿ ಏನು ತಿನ್ನುತ್ತೀರಿ ಎಂಬುದರ ಬಗ್ಗೆ ನೀವು ಗಮನ ಹರಿಸಿದರೆ, ದೇಹದ ಮೇಲೆ ಪರಿಣಾಮ ಬೀರುವ ಅತಿಯಾದ ಆಯಾಸವನ್ನು ನೀವು ತಪ್ಪಿಸಬಹುದು. ಡೇಟ್ ಓಟ್ಸ್ ಸ್ಮೂಥಿ ಒಂದು ಶಕ್ತಿ ಪಾನೀಯವಾಗಿದ್ದು ಅದು ನಿಮ್ಮನ್ನು ದಿನವಿಡೀ ಚೈತನ್ಯದಿಂದ ಇರುವಂತೆ ಮಾಡುತ್ತದೆ. ಅದನ್ನು ಹೇಗೆ ತಯಾರಿಸಬೇಕೆಂದು ನೋಡೋಣ. ಕಾಲು ಕಪ್ ಓಟ್ಸ್, ಅರ್ಧ ಕಪ್ ಕತ್ತರಿಸಿದ ಖರ್ಜೂರ, ಒಂದು ಸಣ್ಣ ಹಣ್ಣು, ಒಂದೂವರೆ ಕಪ್ ಹಾಲು ಮತ್ತು ಬೇಕಾದರೆ ಒಂದು ಚಮಚ ಕಡಲೆಕಾಯಿ ಬೆಣ್ಣೆಯನ್ನು ಮಿಶ್ರಣ ಮಾಡಿ. ಬೆಳಗ್ಗೆ ಇದನ್ನು ಕುಡಿದರೆ ಇಡೀ ದಿನ ಶಕ್ತಿ ಬರುತ್ತದೆ ಎನ್ನುತ್ತಾರೆ ತಜ್ಞರು. ಖರ್ಜೂರವು ವಿಟಮಿನ್ ಎ, ಬಿ6, ಫೋಲಿಕ್ ಆಮ್ಲ,…
ಪ್ರಯಾಣಿಕರಿಂದ 1 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದ ಮಹಿಳಾ ಟಿಕೆಟ್ ಇನ್ಸ್‌ಪೆಕ್ಟರ್‌ಗೆ ಕೇಂದ್ರ ರೈಲ್ವೆ ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ. ದಕ್ಷಿಣ ರೈಲ್ವೆಯ ಮುಖ್ಯ ಟಿಕೆಟ್ ಪರೀಕ್ಷಕ ರೋಸಲಿನ್ ಆರೋಗ್ಯ ಮೇರಿ ಅವರು ಟಿಕೆಟ್ ಖರೀದಿಸದ ಪ್ರಯಾಣಿಕರಿಂದ 1.03 ಕೋಟಿ ರೂ.ರೈಲ್ವೇ ಸಚಿವಾಲಯದ ಟ್ವೀಟ್‌ಗೆ ರೊಸಾಲಿನ್ ಅರೋಕಿಯಾ ಮೇರಿ ಅವರ ಕೆಲಸದ ಬಗ್ಗೆ ಪ್ರಾಮಾಣಿಕತೆ ಎಂದು ಶೀರ್ಷಿಕೆ ನೀಡಲಾಯಿತು ಮತ್ತು 1.03 ರೂಪಾಯಿ ದಂಡವನ್ನು ಸಂಗ್ರಹಿಸಿದ ಮೊದಲ ಮಹಿಳಾ ಟಿಕೆಟ್ ತಪಾಸಣೆ ಸಿಬ್ಬಂದಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿವಿಧ ಮೂಲೆಗಳಿಂದ ನೌಕರನನ್ನು ಅಭಿನಂದಿಸಲು ಅನೇಕರು ಬಂದರು. ದೇಶಕ್ಕೆ ಇನ್ನೂ ಸಮರ್ಪಿತ ಮತ್ತು ಸವಾಲುಗಳನ್ನು ಎದುರಿಸಲು ಸಿದ್ಧವಿರುವ ಮಹಿಳೆಯರು ಅಗತ್ಯವಿದೆ. ಅಭಿನಂದನೆಗಳು ರೊಸಾಲಿನ್. ಉತ್ತಮ ಕೆಲಸವನ್ನು ಮುಂದುವರಿಸಿ ಎಂದು ಕೇಂದ್ರ ರೈಲ್ವೆ ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್…
ಇಂದು ರಾಜ್ಯಗಳಲ್ಲಿ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ತೀವ್ರಗೊಳ್ಳಲಿದೆ.ಸೋಮವಾರದಿಂದ ದೇಶವ್ಯಾಪಿ ಪ್ರತಿಭಟನೆಗೆ ಎಐಸಿಸಿ ಕರೆ ನೀಡಿದೆ. ರಾಹುಲ್ ಗಾಂಧಿ ಇಂದು ಮಾಧ್ಯಮದವರನ್ನು ಭೇಟಿಯಾಗಲಿದ್ದಾರೆ.ಮಧ್ಯಾಹ್ನ 1 ಗಂಟೆಗೆ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಯಲಿದೆ.ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ನಡೆಯುತ್ತಿರುವ ಮೊದಲ ಪತ್ರಿಕಾಗೋಷ್ಠಿ ಇದಾಗಿದೆ.ಸೂರತ್ ಕೋರ್ಟ್ ತೀರ್ಪಿನ ವಿರುದ್ಧ ಕಾಂಗ್ರೆಸ್ ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದೆ. ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಲು ಉದ್ದೇಶಿಸಿದೆ. ‘ಪ್ರಜಾಪ್ರಭುತ್ವ ಉಳಿಸಿ’ ಆಂದೋಲನವನ್ನು ಕಾಂಗ್ರೆಸ್ ಹುಟ್ಟುಹಾಕಿತು. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ಪಿ.ಚಿದಂಬರ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರತಿಭಟನೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯದ ತೀರ್ಪಿನ ನಂತರ, ಲೋಕಸಭೆ ಸೆಕ್ರೆಟರಿಯೇಟ್ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಅಧಿಸೂಚನೆಯನ್ನು ಹೊರಡಿಸಿತು. ತೀರ್ಪಿನ ಹಿನ್ನೆಲೆಯಲ್ಲಿ ನಿನ್ನೆಯಿಂದ ರಾಹುಲ್…
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ಅನರ್ಹತೆ ಮೂಲಕ ವ್ಯವಸ್ಥಿತವಾಗಿ ಸತ್ಯ ಹೇಳುವವರ ಬಾಯಿ ಮುಚ್ಚಿಸಲು ಕೇಂದ್ರಸರ್ಕಾರ ಯತ್ನಿಸುತ್ತಿದೆ. ಸತ್ಯ ಹೇಳಿದ್ದಕ್ಕೆ ರಾಹುಲ್ ಗಾಂಧಿ ಸದಸ್ಯತ್ವ ಅನರ್ಹಗೊಳಿಸಿದ್ದಾರೆ. ಆದರೆ ನಾವು ಜೈಲಿಗೆ ಹೋಗಲು ಸಿದ‍್ಧರಿದ್ದೇವೆ. ಪ್ರಜಾಪ್ರಭುತ್ವ ರಕ್ಷಣೆಗಾಗಿ ಹೋರಾಡುತ್ತೇವೆ ಎಂದು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ರಾಹುಲ್ ಗಾಂಧಿಗೆ ಸೂರತ್ ಕೋರ್ಟ್ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದ ಹಿನ್ನೆಲೆ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ನಿರ್ಮಲಾನಂದನಾಥ ಶ್ರೀಗಳ ಬಗ್ಗೆ ತಾವು ನೀಡಿದ್ಧ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿದ ಅಡ್ಡಂಡ ಕಾರ್ಯಪ್ಪ, ನಿರ್ಮಲಾನಂದ ಶ್ರಿಗಳು ಈ ನಾಡಿನ ಸಂತ ಅವರ ಬಗ್ಗೆ ನನಗೆ ಬಹಳ ಗೌರವವಿದೆ ಎಂದರು. ನಾನು ಹೇಳಿರುವ ಹೇಳಿಕೆಯನ್ನ ಮಾಧ್ಯಮಗಳು ಅವರಿಗೆ ಬೇಕಾದ ರೀತಿಯಲ್ಲಿ ತಿರುಚಿದ್ದಾರೆ. ನಾನು ನಿರ್ಮಲಾನಂದ ಶ್ರೀಗಳ ಕ್ಷಮೆಯಾಚಿಸುತ್ತೇನೆ. ನಿರ್ಮಲಾನಂದ ಶ್ರೀಗಳು ನಮ್ಮ ಸಂತರು. ನಾನು ಅವರ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಅವರಿಗೆ ಅಪಮಾನ ಮಾಡುವಂತಹ ಕೆಲಸ ಮಾಡಿಲ್ಲ. ಆ ಹೇಳಿಕೆಯನ್ನ ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ನಾನು ಅವರ ಭಕ್ತ ಕೋಟಿಗಳಿಗೆ ಕ್ಷಮೆ ಕೇಳಲ್ಲ. ನಾನು ನಿರ್ಮಲಾನಂದ ಶ್ರೀಗಳಿಗೆ ಮಾತ್ರ ಕ್ಷಮೆಯಾಚಿಸುವೆ ಎಂದರು. ನನಗೆ ಒಕ್ಕಲಿಗರ ಮೇಲೆ ಅಪಾರ ಪ್ರೀತಿ ಇದೆ. ನಾನು ಎಂದೂ ಒಕ್ಕಲಿಗರ ವಿರೋಧಿಯಲ್ಲ. ನಾನು ನಿರ್ಮಲಾನಂದ ಶ್ರೀಗಳ ಪರಮ ಭಕ್ತ. ರಾಜಕೀಯವಾಗಿ ಈ ವಿಚಾರ ಎಳೆದಿರುವುದು ಸರಿಯಲ್ಲ. ಇಲ್ಲಿ ಬಂದು ಪ್ರತಿಭಟನೆ ಮಾಡುವವರಿಗೆ ಕ್ಷಮೆ ಕೇಳುವುದಿಲ್ಲ. ಶ್ರೀಗಳಿಗೆ ನನ್ನ ಹೇಳಿಕೆಯಿಂದ ಬೇಸರವಾಗಿದ್ದರೆ ನಾನು ಅವರಿಗೆ ಕ್ಷಮೆಕೇಳುತ್ತೇನೆ ಎಂದು ಅಡ್ಡಂಡ ಕಾರ್ಯಪ್ಪ…