Subscribe to Updates
Get the latest creative news from FooBar about art, design and business.
- ರಾಗಿ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ಬೆಲೆ ನಿಗದಿ
- ಏತ ನೀರಾವರಿ ಯೋಜನೆಗೆ ಹೆಚ್ಚುವರಿ ಅನುದಾನ ಮಂಜೂರು ಮಾಡಿ: ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯ
- ತಿಪಟೂರು: ನ.21ರವರೆಗೆ ಕಲ್ಪೋತ್ಸವ ಕಾರ್ಯಕ್ರಮ
- ಬಂಜಾರ ಸಂಸ್ಕೃತಿ ಉಳಿವಿಗೆ ತುಮಕೂರಿನಲ್ಲಿ ಅದ್ಧೂರಿ ಜಿಲ್ಲಾ ಮಟ್ಟದ ಕಲಾ ಮೇಳ
- ಕಣ್ಣಿನ ಆರೋಗ್ಯಕ್ಕೆ ಸಮತೋಲನ ಆಹಾರ ಸೇವಿಸಬೇಕು: ಸಂಪತ್ ಕುಮಾರ್
- ಮಕ್ಕಳು ಮದ್ಯಪಾನ, ಧೂಮಪಾನ ಚಟುವಟಿಕೆಗಳಿಂದ ದೂರವಿರಬೇಕು: ಶಿಕ್ಷಕ ಮದನ್
- ತುಮಕೂರು | ನವೆಂಬರ್ 21—22ರಂದು ವಿಜ್ಞಾನ ವಸ್ತು ಪ್ರದರ್ಶನ
- ಸಾಲಬಾಧೆ: ರೈತ ಸಾವಿಗೆ ಶರಣು
Author: admin
ಆಧುನಿಕತೆ ಭರಾಟೆಯಲ್ಲಿ ಮೈಸೂರಿನ ಸಿನಿಮಾ ಮಂದಿರಗಳು ಇತಿಹಾಸದ ಪುಟ ಸೇರುತ್ತಿದ್ದು, ನಗರದ ಬಹುತೇಕ ಚಿತ್ರಮಂದಿರಗಳು ಅಳಿವಿನ ಅಂಚಿನಲ್ಲಿವೆ. ಅಂತೆಯೇ ಗತಕಾಲದ ಇತಿಹಾಸ ಹೊಂದಿದ್ದ ಮೈಸೂರಿನ ‘ಲಕ್ಷ್ಮಿ ಟಾಕೀಸ್’ ತೆರವು ಕಾರ್ಯಾಚರಣೆ ಆರಂಭವಾಗಿದೆ. ಅಂಗೈಯಲ್ಲೇ ಸಿನಿಮಾ ನೋಡುವ ಕಾಲ ಬಂದ ನಂತರ ಸಿನಿಪ್ರಿಯರು ಸಿನಿಮಾ ಥಿಯೇಟರ್ ಗಳತ್ತ ಬರುವುದನ್ನ ಕಡಿಮೆ ಮಾಡಿದ್ದು, ಮೈಸೂರಿನಲ್ಲಿ ಒಂದೊಂದಾಗಿ ಚಿತ್ರಮಂದಿರಗಳು ಬಾಗಿಲು ಮುಚ್ಚಿ ಅವನತಿಯತ್ತ ಸಾಗಿತ್ತಿವೆ. ಈಗಾಗಲೇ ಶಾಂತಲ, ನಾಗರಾಜ, ಲಕ್ಷ್ಮಿ, ತಿಬ್ಬಾದೇವಿ ಸೇರಿದಂತೆ ನಗರದ ಹತ್ತಾರು ಚಲನಚಿತ್ರ ಮಂದಿರ ಬಾಗಿಲು ಮುಚ್ಚಿವೆ. ಈಗ ಅದೇ ಸಾಲಿಗೆ ಲಕ್ಷ್ಮಿ ಟಾಕೀಸ್ ಸೇರಿದ್ದು 75 ವರ್ಷಗಳ ಹಳೆಯದಾದ ಲಕ್ಷ್ಮಿ ಟಾಕೀಸ್ ಅನ್ನು ತೆರವುಗೊಳಿಸಲಾಗುತ್ತಿದೆ. ಲಕ್ಷ್ಮಿ ಟಾಕೀಸ್ ನಗರದ ಹೃದಯ ಭಾಗದಲ್ಲಿದ್ದು ಒಂದು ಕಾಲದ ಪ್ರಸಿದ್ದ ಸಿನಿಮಾ ಮಂದಿರವಾಗಿತ್ತು. ಇಂದಿನಿಂದ ಲಕ್ಷ್ಮಿ ಥಿಯೇಟರ್ ತೆರವು ಕಾರ್ಯ ನಡೆಯುತ್ತಿದೆ . ಲಕ್ಷ್ಮಿ ಟಾಕೀಸ್ ಮಾಲೀಕರು ಬೆಂಗಳೂರು ಮೂಲದ ವ್ಯಕ್ತಿಗೆ ಮಾರಾಟ ಮಾಡಿದ್ದು, ಹಳೇ ಕಟ್ಟಡ ಕೆಡವಿ ಹೊಸದಾಗಿ ವಾಣಿಜ್ಯ ಕಟ್ಟಡ ನಿರ್ಮಾಣ…
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಇತಿಹಾಸ ತಿರುಚಲು ಉರಿಗೌಡ, ನಂಜೇಗೌಡ ದ್ವಾರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿರುವ ಡಿಜಿಪಿ ಪ್ರವೀಣ್ ಸೂದ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ. ನಗರರದ ಪೂರ್ಣಿಮಾ ಪ್ಯಾಲೇಸ್ ನಲ್ಲಿ ಮಂಗಳವಾರ ತಿಗಳರ ಸಮಾವೇಶದಲ್ಲಿ ಭಾಗವಹಿಸುವ ಮುನ್ನ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್, ನಾನು ಡಿಜೆಪಿ ಪ್ರವೀಣ್ ಸೂದ್ ಒಳ್ಳೆಯವರು, ನಿಷ್ಪಕ್ಷಪಾತ ವ್ಯಕ್ತಿ ಅಂದುಕೊಂಡಿದ್ದೆ. ಆದರೆ ಬಿಜೆಪಿಯ ಬಾಲಬಡುಕರಾಗಿ ಕೆಲಸ ಮಾಡುತ್ತಿದ್ದಾರೆ. ಆ ದ್ವಾರ ನಿರ್ಮಾಣಕ್ಕೆ ಇವರು ಹೇಗೆ ಅನುಮತಿ ಕೊಟ್ಟರು? ಎಂದು ಪ್ರಶ್ನಿಸಿದರು. ‘ಬಿಜೆಪಿಯವರು ಮೊದಲಿಂದಲೂ ಇತಿಹಾಸ ತಿರುಚಲು ಪ್ರಯತ್ನಿಸುತ್ತಿದ್ದಾರೆ. ಕುವೆಂಪು, ಬಸವಣ್ಣ, ನಾರಾಯಣ ಗುರು, ಅಂಬೇಡ್ಕರ್, ಶ್ರೀ ಬಾಲಗಂಗಾಧರ ಸ್ವಾಮಿಜಿ, ಶ್ರೀ ಶಿವಕುಮಾರ ಸ್ವಾಮೀಜಿ – ಹೀಗೆ ಯಾರನ್ನೂ ಬಿಡದೇ ಇತಿಹಾಸ ತಿರುಚುತ್ತಿದ್ದಾರೆ. ಈಗ ಉರಿಗೌಡ, ನಂಜೇಗೌಡರ ಹೆಸರು ತೆಗೆದುಕೊಂಡಿದ್ದಾರೆ. ಇವರ ಇತಿಹಾಸ ಎಲ್ಲಿದೆ? ಇವರ ಹೆಸರು ಸೃಷ್ಟಿಸಿ ಇಡೀ…
ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆ ರೈತ ಸಂಘಟನೆಗಳಿಂದ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು. ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈತ ಸಂಘಟನೆ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು. ಬಳಿಕ ಮಾತನಾಡಿದ ಕುರುಬೂರು ಶಾಂತಕುಮಾರ್, ರೈತರ ಹೆಸರನ್ನ ಹೇಳಿಕೊಂಡು ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ. ಬಳಿಕ ನಮ್ಮ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ವಿಫಲವಾಗುತ್ತಾರೆ. ಆಗಾಗಿ ಈ ಬಾರಿಯ ಚುನಾವಣೆಯಲ್ಲಿ ನಾವು ಸಹ ರೈತರ ಸಮಸ್ಯೆ ಮತ್ತು ಬೇಡಿಕೆಯ ಕುರಿತು ಪ್ರಣಾಳಿಕೆಯನ್ನ ಬಿಡುಗಡೆ ಮಾಡುತ್ತಿದ್ದೇವೆ. ನಮ್ಮ ಪ್ರಣಾಳಿಕೆಯನ್ನ ಯಾರು ಒಪ್ಪಿಕೊಂಡು ಬೆಂಬಲ ಸೂಚಿಸುತ್ತಾರೆ. ಅಂತಹ ಪಕ್ಷಗಳಿಗೆ ನಾವು ಬೆಂಬಲ ನೀಡುತ್ತೇವೆ ಎಂದರು. ಇನ್ನು ಇದೆ ವೇಳೆ ಮೈಸೂರು ಬೆಂಗಳೂರು ಟೋಲ್ ವಿಚಾರವಾಗಿ ಮಾತನಾಡಿದ ಕುರುಬೂರು ಶಾಂತಕುಮಾರ್, ಹೈವೇ ಕಾಮಗಾರಿ ಇನ್ನ ಪೂರ್ಣಗೊಂಡಿಲ್ಲ. ರೈತರ ಭೂಮಿ ಪಡೆದ ಮೇಲೆ ಕೆಲ ರೈತರಿಗೆ ಪರಿಹಾರವನ್ನೇ ನೀಡಿಲ್ಲ. ರೈತರ ವಾಹನಗಳಿಗೆ ಶುಲ್ಕ ತೆಗೆದುಕೊಳ್ಳಬಾರದು ಎಂದು ಆಗ್ರಹಿಸಿದರು. ನಮ್ಮತುಮಕೂರು.ಕಾಂನ ಕ್ಷಣ…
ಬೆಳಗಾವಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ರಚಿಸಲಾಗಿರುವ ತಂಡಗಳು ಕಾರ್ಯೋನ್ಮುಖರಾಗಿ ಚುರುಕಿನಿಂದ ಕೆಲಸ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಮುಂಬರುವ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಮಾ.13) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಈಗಾಗಲೇ ನಿಯೋಜಿಸಲಾಗಿರುವ ತಂಡಗಳು ಪ್ರತಿಯೊಂದು ವಾಹನಗಳ ಮೇಲೆ ನಿಗಾ ವಹಿಸಬೇಕು.ಪ್ರತಿಯೊಂದು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸದ್ಯಕ್ಕೆ ಒಂದು ತಂಡ ಇಪ್ಪತ್ನಾಲ್ಕು ಗಂಟೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಗೊದಾಮು, ಕಾರ್ಖಾನೆ, ಭವನಗಳು, ಮನೆಗಳಲ್ಲಿ ಅಕ್ರಮ ದಾಸ್ತಾನು ಕಂಡುಬಂದರೆ ಸಂಬಂಧಿಸಿದ ಇಲಾಖೆಯ ತಂಡಗಳು ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು. ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಕೂಡ ತಮ್ಮ ವ್ಯಾಪ್ತಿಯಲ್ಲಿನ ಮತಗಟ್ಟೆಗಳು, ಮಸ್ಟರಿಂಗ್, ಡಿಮಸ್ಟರಿಂಗ್ ಕೇಂದ್ರಗಳು, ಚೆಕ್ ಪೋಸ್ಟ್ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ರೀತಿಯ…
ಹಿರಿಯ ಪತ್ರಕರ್ತ, ಲೇಖಕ ಅಂಶಿ ಪ್ರಸನ್ನಕುಮಾರ್ ಅವರ ಎರಡು ಕೃತಿಗಳು ಮಾರ್ಚ್ 19 ರಂದು ಲೋಕಾರ್ಪಣೆಯಾಗಲಿವೆ. ವಿಸ್ಮಯ ಬುಕ್‌ಹೌಸ್ ಹಾಗೂ ಸಾಹಿತ್ಯ ಲೋಕ ಸಂಸ್ಥೆಯು ಅಂದು ಸಂಜೆ 4.30ಕ್ಕೆ ಹುಣಸೂರು ರಸ್ತೆಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ’ಸಾಹಿತ್ಯ ಸಂಪದ’ ಹಾಗೂ ‘ಸಾಹಿತ್ಯ ಸಂಗಮ’ ಕೃತಿಗಳನ್ನು ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಎಸ್. ನಾಗಾಭರಣ ಬಿಡುಗಡೆ ಮಾಡುವರು. ಪಂಪ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಪ್ರೊ.ಸಿ.ಪಿ. ಕೃಷ್ಣಕುಮಾರ್ ಅಧ್ಯಕ್ಷತೆ ವಹಿಸುವರು. ಅಂಕಣಕಾರ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಎನ್‌ಎಸ್‌ಎಸ್ ರಾಜ್ಯ ಸಂಯೋಜನಾಧಿಕಾರಿ ಡಾ.ಗುಬ್ಬಿಗೂಡು ರಮೇಶ್ ಮುಖ್ಯ ಅತಿಥಿಯಾಗಿರುವರು. ಸಂಜೆ 4ಕ್ಕೆ ಖ್ಯಾತ ಗಾಯಕ ಅಮ್ಮ ರಾಮಚಂದ್ರ ಮತ್ತು ತಂಡದಿಂದ ಗೀತಗಾಯನ ಕಾರ್ಯಕ್ರಮ ಇರುತ್ತದೆ. ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು ಆಗಮಿಸುವಂತೆ ಸಾಹಿತ್ಯ ಲೋಕ ಸಂಸ್ಥೆಯ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಹಾಗೂ ವಿಸ್ಮಯ ಬುಕ್ ಹೌಸ್ ನ ಪ್ರಕಾಶ್ ಚಿಕ್ಕಪಾಳ್ಯ ಕೋರಿದ್ದಾರೆ. ‘ಸಾಹಿತ್ಯ ಸಂಪದದಲ್ಲಿ ಸುಮಾರು 160…
5 ಮತ್ತು 8ನೇ ತರಗತಿ ಬೋರ್ಡ್ ಎಕ್ಸಾಮ್ ರದ್ಧು ಆದೇಶ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿ ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ಮುಂದೂಡಿದೆ. ರಾಜ್ಯ ಸರ್ಕಾರದ 5 ಮತ್ತು 8ನೇ ತರಗತಿ ಬೋರ್ಡ್ ಎಕ್ಸಾಮ್ ಆದೇಶವನ್ನ ಹೈಕೋರ್ಟ್ ಏಕಸದಸ್ಯ ಪೀಠ ರದ್ದುಗೊಳಿಸಿತ್ತು. ಇದನ್ನ ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ನರೇಂದರ್ ಮತ್ತು ನ್ಯಾ. ಅಶೋಕ್ ಅವರ ನೇತೃತ್ವದ ವಿಭಾಗೀಯ ಪೀಠ, ಈ ಸಂಬಂಧ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಮಾಣ ಪತ್ರ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನ ನಾಳೆಗೆ ಮುಂದೂಡಿತು. ಸರ್ಕಾರ ಪರವಾಗಿ ಎಎಜಿ ವಾದ ಮಂಡನೆ ಮಾಡಿದರು. ಸರ್ಕಾರದ5 ಮತ್ತು 8ನೇ ತರಗತಿ ಬೋರ್ಡ್ ಎಕ್ಸಾಮ್ ಆದೇಶ ರದ್ದುಪಡಿಸುವಂತೆ ಕೋರಿ ಪೋಷಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಸರ್ಕಾರದ ಆದೇಶವನ್ನ ರದ್ದುಪಡಿಸಿತ್ತು. ನಮ್ಮತುಮಕೂರು.ಕಾಂನ ಕ್ಷಣ…
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಗ್ರಾಮದಲ್ಲಿ ಮಸೀದಿ ವ್ಯಾನ್, ಆಟೋ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮಾರ್ಚ್ 9 ರಂದು ಹಿಂದೂಪರ ಕಾರ್ಯಕರ್ತರು ನಡೆಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೆರವಣಿಗೆಗೆ ಮಸ್ಲಿಂ ಸಮುದಾಯದ ಯುವಕರು ಅಡ್ಡಿಪಡಿಸಿದ್ದರು ಎನ್ನಲಾಗಿತ್ತು. ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೆರವಣಿಗೆಗೆ ತಡೆಯೊಡ್ಡಿದ್ದನ್ನ ವಿರೋಧಿಸಿ ಇಂದು ಹಿಂದೂ ಕಾರ್ಯಕರ್ತರು ರಾಲಿ ನಡೆಸಿದ್ದರು. ಈ ವೇಳೆ ಮಸೀದಿ, ಮನೆ ಮತ್ತು ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ. ಮುಸ್ಲಿಮರ ಮನೆ, ವಾಹನಗಳ ಮೇಲೂ ಕಲ್ಲುತೂರಾಟ ಮಾಡಲಾಗಿದೆ. ಹಿಂದೂ ಕಾರ್ಯಕರ್ತರು ಕಾರು, ಓಮ್ನಿ ಕಾರಿನ ಗ್ಲಾಸ್ ಒಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಇದೀಗ ಮುಸ್ಲಿಮರು ವಾಸಿಸುವ ಪ್ರದೇಶಗಳು ಹಾಗೂ ಮಸೀದಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…
ಬೆಳಗಾವಿ: ಹಿರೇ ಬಾಗೇವಾಡಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸ್ಥಾಪಿಸಲಾಗಿರುವ ವಿಶ್ವಗುರು ಜಗಜ್ಯೋತಿ ಶ್ರೀ ಬಸವೇಶ್ವರ ಅಶ್ವಾರೂಢ ಮೂರ್ತಿಯನ್ನು ಮಾರ್ಚ್ 20ರಂದು ಲೋಕಾರ್ಪಣೆಗೊಳಿಸಲು ನಿರ್ಧರಿಸಲಾಗಿದೆ. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಮಂಗಳವಾರ ಗ್ರಾಮದ ಎಲ್ಲ ಸಮಾಜಗಳ ಹಿರಿಯರ ಜೊತೆ ನಡೆಸಿದ ಸಭೆಯಲ್ಲಿ ಒಮ್ಮತದ ಮೇರೆಗೆ ಮೂರ್ತಿಯ ಉದ್ಘಾಟನೆಯನ್ನು ಇದೇ ತಿಂಗಳು 20 ರಂದು ನಡೆಸಲು ನಿರ್ಧರಿಸಲಾಯಿತು. ಈ ಸಮಯದಲ್ಲಿ ಸುರೇಶ ಇಟಗಿ, ಸಿ ಸಿ ಪಾಟೀಲ ಅಣ್ಣ, ಅಡಿವೇಶ ಇಟಗಿ, ಶ್ರೀಕಾಂತ ಮಧುಭರಮಣ್ಣವರ, ಈರಪ್ಪ ಅರಳೀಕಟ್ಟಿ, ಪಿ ಎನ್ ಪಾಟೀಲ, ರಘು ಅಂಕಲಗಿ, ಶಿವಾನಂದ ಅಂಕಲಗಿ, ಉಳವಪ್ಪ ರೊಟ್ಟಿ, ಬಸವರಾಜ ತೋಟಗಿ, ನಾಗರಾಜ ಉಪ್ಪಾರ, ರಾಜಶೇಖರ ಸಾಲಿಮನಿ, ನಿಂಗಪ್ಪ ತಳವಾರ, ಗೌಸಮೊದ್ದಿನ ಜಾಲಿಕೊಪ್ಪ, ಮಹ್ಮದಲಿ ಕರಿದಾವಲ್, ಯಲ್ಲಪ್ಪ ಕೆಳಗೇರಿ ಹಾಗೂ ಮುಂತಾದವರು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್…
ಮಧುಗಿರಿ : ಕರ್ನಾಟಕ ರಾಜ್ಯ ಜೆಡಿಎಸ್ ಪಕ್ಷ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ ಮಧುಗಿರಿಯ ಪಾವಗಡ ಸರ್ಕಲ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಜೆಡಿಎಸ್ ನ ಹಾಲಿ ಶಾಸಕರಾದ ಎಂ.ವಿ.ವೀರಭದ್ರಯ್ಯ ರವರು ಪಟ್ಟಣದ ಮೊದಲನೆಯ ವಾರ್ಡ್ ಆಶುಖಾನದಲ್ಲಿ ಆಯೋಜಿಸಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಭಾಗವಹಿಸಿದರು. ಈ ವೇಳೆ ಮಾತನಾಡಿದ ಸಿಎಂ ಇಬ್ರಾಹಿಂ ಕನ್ನಡ ನಾಡು ಕನ್ನಡ ನಾಡಿನ ಜನ ಎರಡು ಹೊತ್ತು ಹೊಟ್ಟೆತುಂಭಾ ಊಟ ಮಾಡಿ ಸುಖವಾಗಿ ಜೀವಿಸಬೇಕು, ಹಿಂದೂ ಮುಸಲ್ಮಾನರು ಒಂದು ತಾಯಿಯ ಮಕ್ಕಳಂತೆ ಬಾಳಬೇಕು ಅದನ್ನ ನಾವು ಕಣ್ಣಾರೆ ನೋಡಬೇಕು, ಹಳ್ಳಿಗಾಡಲಿ ಜಾತಿ ಭೇದವಿಲ್ಲ, ಇವತ್ತು ಕೂಡ ಜನ ಹಳ್ಳಿಗಳಲ್ಲಿ ಅನ್ಯೂನತೆಯಿಂದ ಬಾಳುತ್ತಿದ್ದಾರೆ, ಆದರೆ ದುರ್ದೈವ ರಾಜಕಾರಣಿಗಳು ಮತಗಳಿಗೋಸ್ಕರ ಸಮಾಜಗಳನ್ನು ಹೊಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ಹಿಂದೂ ಧರ್ಮದಲ್ಲೂ ಸಹ ಸರ್ವಧರ್ಮ ಸಮನ್ವಯ ಸರ್ವೇ ಜನಾ ಸುಖಿನೋ ಭವಂತು ಎಂಬ ಒಳ್ಳೆಯ ಸಂದೇಶವಿದೆ ಇದರ ಅರ್ಥವನ್ನು ಎಲ್ಲಾ ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕು, ಕರ್ನಾಟಕ ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ರವರ…
ನಿಮಗೆ ತಿಳಿದಿರುವಂತೆ ಶಿವಶಕ್ತಿ ಬಾಲಾಜಿ ಎಂಬ ವ್ಯಕ್ತಿ ಸಂವಾದ ಎಂಬ ಯುಟ್ಯೂಬ್ ಫೇಸ್ಬುಕ್ ಚಾನಲ್ ನಲ್ಲಿ ಕ್ರೈಸ್ತ ಸಭಾ ಪಾಲಕರ ದೇವರ ಹಾಗೂ ಬೈಬಲ್ ವಿರುದ್ಧವಾಗಿ ಮಾತನಾಡುತ್ತಾ ವಿಷ ಬೀಜ ಬಿತ್ತುವ ಕಾರ್ಯವನ್ನು ಮಾಡುತ್ತಿದ್ದ . ಇದು ರಾಜ್ಯದ ಕ್ರೈಸ್ತರಲ್ಲಿ ಬಹಳ ನೋವುಂಟು ಮಾಡಿದ್ದು.. ಈ ಸಂದರ್ಭದಲ್ಲಿ *ಅಖಿಲ ಭಾರತ ಕ್ರೈಸ್ತ ಮಹಾಸಭಾ (ರಿ) ಸಂಸ್ಥೆಯ ನೇತೃತ್ವದಲ್ಲಿ ಈ ವ್ಯಕ್ತಿಯ ಮೇಲೆ ಮಾನ್ಯ ಪೊಲೀಸ್ ಮಹಾ ನಿರ್ದೇಶಕರು (ಡಿಜಿಪಿ) ರವರಿಗೆ ದೂರು ನೀಡಲಾಗಿತ್ತು. ಹಾಗೂ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಮ್ಮ ಜಿಲ್ಲಾಧ್ಯಕ್ಷರಾದ ರವಿಕುಮಾರ್ ಹಾಗೂ ಸಲೋಮಾನ್ ರವರಿಂದ ಅವನ ಮೇಲೆ ದೂರು ದಾಖಲು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾ ವರಿಷ್ಠಾಧಿಕಾರಿಗಳು ಆತನ ಮೇಲೆ ಕ್ರಮವನ್ನು ಕೈಗೊಂಡಿದ್ದರು ಅದಾಗಿಯೂ ಮತ್ತೆ ಕ್ರೈಸ್ತರನ್ನು ನಿಂದಿಸುವ ಕಾರ್ಯ ಮುಂದುವರಿಸಿದಾಗ ದಿನಾಂಕ.02.03.2023 ರಂದು ಮಾನ್ಯ ಡಿಜಿಪಿ ರವರಿಗೆ ದೂರು ನೀಡಲಾಗಿತ್ತು. ಈ ಸಂದರ್ಭದಲ್ಲಿ ಸ್ಪಂದಿಸಿದ ಪೊಲೀಸ್ ಇಲಾಖೆ ಹಾಗೂ ದಂಡಾಧಿಕಾರಿಗಳು 5, ಲಕ್ಷದ ಬಾಂಡ್…