Author: admin

ತಿಪಟೂರು: ನಗರದ ಮೋರ್ ಮುಂಭಾಗ ಲಾರಿ ಮತ್ತು ಟಿವಿಎಸ್ ಬೈಕ್ ನಡುವೆ ಡಿಕ್ಕಿಯಾಗಿದ್ದು, ಬೈಕ್ ನಲ್ಲಿದ್ದ ವೃದ್ಧ ದಂಪತಿಗೆ ಗಾಯವಾಗಿದೆ. ಹಿಂದೆಯಿಂದ ಬಂದ ಲಾರಿ ಬೈಕ್ ಗೆ ಡಿಕ್ಕಿ ಒಡೆದ ಪರಿಣಾಮ ಬೈಕ್ ನಲ್ಲಿದ್ದ ವೃದ್ದ ದಂಪತಿಗಳಿಗೆ ತೀವ್ರ ಗಾಯವಾಗಿದೆ. ಕೆಲಸದ ನಿಮಿತ್ತ ನಗರಕ್ಕೆ ಬಂದಿದ್ದ ಚನ್ನರಾಯಪಟ್ಟಣ ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದ ವಾಸಿ ಮಹಾಲಿಂಗಯ್ಯ ಮತ್ತು ಸುಜಾತ ಅಪಘಾತದಲ್ಲಿ ಗಾಯಗೊಂಡವರಾಗಿದ್ದಾರೆ. ಸುಜಾತಾ ಅವರ ಕಾಲು ಮುರಿದಿದೆ. ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಿಪಟೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ವರದಿ: ಆನಂದ್  ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA admin

Read More

ಬೆಂಗಳೂರು: “ಕರ್ನಾಟಕ ರಾಜ್ಯದ ಪ್ರತಿಷ್ಠಿತ ಯೋಜನೆ ಅನ್ನಭಾಗ್ಯ ಜಾರಿಗೆ ಅಗತ್ಯ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಆಹಾರ ಪ್ರಾಧಿಕಾರ ಅವಕಾಶ ನಿರಾಕರಿಸಿರುವುದು ಬಿಜೆಪಿಯ ದ್ವೇಷ ರಾಜಕಾರಣ ಹಾಗೂ ಬಡವರ ವಿರೋಧಿ ನೀತಿಗೆ ಸಾಕ್ಷಿ. ಇದರ ವಿರುದ್ಧ ಕರ್ನಾಟಕ ಕಾಂಗ್ರೆಸ್ ಇದೇ 20 ರಂದು ಮಂಗಳವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿ ಜನರಲ್ಲಿ ಅರಿವು ಮೂಡಿಸಲಿದೆ” ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ನೀಡಲು ಬದ್ಧವಾಗಿದೆ’ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು; “ಕಾಂಗ್ರೆಸ್ ಐದು ಗ್ಯಾರಂಟಿ ಘೋಷಿಸಿತ್ತು. ಇದರ ಜಾರಿ ಬಗ್ಗೆ ವಿರೋಧ ಪಕ್ಷದ ಸ್ನೇಹಿತರು ಅನೇಕ ಟೀಕೆ ಮಾಡುತ್ತಾ ಬಂದಿದ್ದಾರೆ. ಸರ್ಕಾರ ಬಂದ ಮೊದಲ ದಿನವೇ ಮೊದಲ ಆದೇಶ ಹೊರಡಿಸಿ ನಮ್ಮ ಬದ್ಧತೆ ಪ್ರದರ್ಶಿಸಿದ್ದೇವೆ. ಎರಡನೇ ಸಂಪುಟ ಸಭೆಯಲ್ಲಿ…

Read More

ಬೆಂಗಳೂರು: ಶಿವಕುಮಾರ್ ಅಣ್ಣ ನೀವು ಕೊಟ್ಟಿರೋ ಭರವಸೆ, ಮೋದಿ ಕೊಟ್ಟಿರೋ ಭರವಸೆ ಅಲ್ಲ. ನೀವು ಈಡೇರಿಸಬೇಕು. ಗ್ಯಾರಂಟಿ ಕೊಡಲು ಆಗದೇ ಹೋದರೆ ಅಧಿಕಾರ ಬಿಟ್ಟು ಹೋಗಿ. ಮೋದಿ ಮೇಲೆ ಯಾಕೆ ಆರೋಪ ಮಾಡ್ತೀರಾ ಎಂದು ಮಾಜಿ ಸಚಿವ ಆರ್ ಅಶೋಕ್ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್, ಗ್ಯಾರಂಟಿ ಘೋಷಣೆ ಮಾಡೋವಾಗ ಕೇಂದ್ರ ಸರ್ಕಾರದ ಅನುಮತಿ ಪಡೆದಿದ್ರಾ? ಕೇಂದ್ರವನ್ನು ಕೇಳಿ ಭರವಸೆ ಕೊಟ್ಟಿದ್ದೀರಾ? ನಿಮ್ಮ ಗ್ಯಾರಂಟಿ ಜಾರಿ ಮಾಡೋದು ನಿಮ್ಮ ಕರ್ತವ್ಯ. ಅದಕ್ಕೆ ಮೋದಿ ಮೇಲೆ ಯಾಕೆ ಮಾತಾಡ್ತೀರಾ? ಎಂದು ಪ್ರಶ್ನಿಸಿದ್ದಾರೆ. ಅಕ್ಕಿ ಬಗ್ಗೆ ಈಗ ಆರೋಪ ಮಾಡುತ್ತಾರೆ. ಕೇಂದ್ರ ಸರ್ಕಾರ ಅತ್ತೆ ಮನೆ ಅಲ್ಲ. ಸುರ್ಜೆವಾಲ ಮಂತ್ರಿ ಹಾಗೆ ಆಡ್ತಿದ್ದಾರೆ. ಘೋಷಣೆ ಮಾಡೋವಾಗ ಪರಿಜ್ಞಾನ ಇರಲಿಲ್ಲವಾ? ಮಾತು ಕೊಡೋವಾಗ ನೀವು ಕೇಂದ್ರ ಸರ್ಕಾರವನ್ನು ಕೇಳಿದ್ರಾ? ನಾವೇನು ಅಕ್ಕಿ ರಾಜಕೀಯ ಮಾಡಲ್ಲ. ಇಡೀ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉಚಿತವಾಗಿ ಅಕ್ಕಿ ಕೊಡ್ತಿದ್ದಾರೆ.…

Read More

ಬೆಂಗಳೂರು: ನಗರ ಪಶ್ಚಿಮ‌ ವಿಭಾಗದ ಪೊಲೀಸರು 4 ಮೊಬೈಲ್ ಫೋನ್‌ಗಳು ಮತ್ತು ನಗದು ಹಣ ಸುಲಿಗೆ ಮಾಡಿದ ಮೂರು ಜನ ಆರೋಪಿತರ ಬಂಧಿಸಿದ್ದಾರೆ. ಕಳೆದ‌‌ ದಿನಾಂಕ 10 ರಂದು ರಾತ್ರಿ ಸುಮಾರು 11-50 ಗಂಟೆಯ ಸಮಯದಲ್ಲಿ ಆರ್‌ಐ ಕಾಲೇಜ್‌ನ ವಿದ್ಯಾರ್ಥಿಗಳಾದ ಮನ್ವಿತ್ ರಾವ್ 19 ವರ್ಷ, ಜೋಸ್ಟಾ 18 ವರ್ಷ, ದೃಷ್ಟಿ 19 ವರ್ಷ, ಆರೈತ 18 ವರ್ಷ, ರಿಯಾ 18 ವರ್ಷ, ಎಂಬುವರುಗಳು ಸೇರಿಕೊಂಡು ಟ್ರಕ್ಕಿಂಗ್ ಮಾಡಿದ್ದರು. ಸೂರ್ಯೋದಯವನ್ನು ನೋಡುವ ಉದ್ದೇಶದಿಂದ ಪಿಇಎಸ್‌ ಕಾಲೇಜ್ ಹತ್ತಿರದಲ್ಲಿರುವ ವೀರಭದ್ರೇಶ್ವರ ದೇವಸ್ಥಾನಕ್ಕೆ ಹೋಗುವ ಸಲುವಾಗಿ ತಮ್ಮ ಮೊಬೈಲ್‌ನಲ್ಲಿ ಕಾಲ‌ ಕ್ಯಾರ್ ಮಿಕ್ ಮಾಡಿಕೊಂಡು ಬಂದಿದ್ದು, ಈ ಸಮಯದಲ್ಲಿ ತಾವು ಹೋಗಬೇಕಾಗಿದ್ದ ಲೋಕೇಷನ್‌ ಅನ್ನು ತಪ್ಪಾಗಿ ನರದಾಗಿದ್ದರಿಂದ ಮೇಲ್ಕಂಡ 5 ಜನ ವಿದ್ಯಾರ್ಥಿಗಳು ತಡರಾತ್ರಿ 12-30 ಗಂಟೆಯ ಸಮಯದಲ್ಲಿ ಅಂದಹಳ್ಳಿ ಮುಖ್ಯರಸ್ತೆಯ ವೆಂಕಟೇಶ್ವರ ಬಡಾವಣೆಯಲ್ಲಿರುವ ಫಾರ್ಮಸಿ ಬಳಿ ಬಂದು ವಿಳಾಸ ಪರಿಶೀಲಿಸಿದಾಗ ಯಾರೋ 3 ಜನ ಅಪರಿಚಿತ ವ್ಯಕ್ತಿಗಳು ಒಂದು ಹೊಂಡಾ ಆಕ್ಟಿವಾ ದಿವಾ…

Read More

ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ ಸಜೀವ ದಹನವಾಗಿರುವ ಆಘಾತಕಾರಿ ಘಟನೆ ನಡೆದಿದೆ. ಅಮರನಾಥ್ (15) ಟ್ಯೂಷನ್ ಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕನನ್ನು ಗುಂಟೂರಿನ ಸರ್ಕಾರಿ ಜನರಲ್ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ. ಚೆರುಕುಪಲ್ಲಿ ಮಂಡಲದ ರಾಜವೋಲು ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದೆ. ಅಮರನಾಥ್ ಸೈಕಲ್ ನಲ್ಲಿ ಟ್ಯೂಷನ್ ಗೆ ತೆರಳುತ್ತಿದ್ದಾಗ ಕೆಲ ಯುವಕರು ಬಾಲಕನನ್ನುತಡೆದಿದ್ದಾರೆ.ನಂತರ ಬಾಲಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.ಬಾಲಕನ ಕಿರುಚಾಟ ಕೇಳಿ ಸ್ಥಳೀಯರು ಅಮರನಾಥ ಆಸ್ಪತ್ರೆಗೆ ಧಾವಿಸಿದರೂ ಆತನ ಪ್ರಾಣ ಉಳಿಸಲಾಗಲಿಲ್ಲ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ತುಮಕೂರು: ರಾಷ್ಟ್ರೀಯ, ಸಂಸ್ಕೃತಿ ವಿಚಾರ ಎಲ್ಲಿ ತೆಗೆಯಬೇಕೋ ಅಲ್ಲಿ ತೆಗೆದಿದ್ದಾರೆ. ಅವರು ಗೆದಿರುವುದು ಮುಸ್ಲಿಂ ಮತಗಳಿಂದಲೇ ಗೆದಿದ್ದಾರೆ ಭಾವಿಸಿದಂತಿದೆ ಎಂದು ಸಿಎಂ ಸಿದ್ಧರಾಮಯ್ಯ ವಿರುದ್ಧ ಮಾಜಿ ಶಿಕ್ಷಣ ಸಚಿವ ಬಿಸಿ ನಾಗೇಶ್ ವಾಗ್ದಾಳಿ ಮಾಡಿದ್ದಾರೆ. ಸಾವರ್ಕರ್, ಹೆಡ್ಗೆವಾರ್ ಹಾಗೂ ಸೂಲಿಬೆಲೆ ಪಠ್ಯ ಕೈ ಬಿಟ್ಟ ವಿಚಾರವಾಗಿ ಮಾತನಾಡಿದ ಅವರು, ರೈತರು, ಮಕ್ಕಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಯೋಚನೆಯೇ ಇಲ್ಲ. ಸಿದ್ದರಾಮಯ್ಯಗೆ ಕಾಣುತ್ತಿರುವುದು ಟಿಪ್ಪು ಸುಲ್ತಾನ್ ಅಷ್ಟೇ. ಸಿದ್ದರಾಮಯ್ಯ ಹಿಂದೂ ವಿರೋಧಿ, ಇದರಲ್ಲಿ ಅನುಮಾನವೇ ಇಲ್ಲ. ರಾಜ್ಯ ಸರ್ಕಾರ ಮಕ್ಕಳಿಗೆ ಸುಳ್ಳು ಇತಿಹಾಸ ಹೇಳಲು ಹೊರಟಿದೆ ಎಂದು ವಾಗ್ದಾಳಿ ಮಾಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಮಹಾರಾಷ್ಟ್ರದ 16 ವರ್ಷದ ಬಾಲಕಿ ಸತತ ಐದು ದಿನಗಳ ಕಾಲ ನೃತ್ಯ ಮಾಡಿ ಗಿನ್ನಿಸ್ ದಾಖಲೆ ಬರೆದಿದ್ದಾಳೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, “ಶ್ರುತಿ ಸುಧೀರ್ ಜಗತಾಪ್ ಒಬ್ಬ ವ್ಯಕ್ತಿಯಿಂದ 127 ಗಂಟೆಗಳಲ್ಲಿ ಸುದೀರ್ಘವಾದ ಡ್ಯಾನ್ಸ್ ಮ್ಯಾರಥಾನ್‌ನ ದಾಖಲೆಯನ್ನು ಹೊಂದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ನೇಪಾಳಿ ನೃತ್ಯಗಾರ್ತಿ ಬಂದಾನ ಅವರ ಹೆಸರಿನಲ್ಲಿತ್ತು. ನೃತ್ಯದ ಅವಧಿ 126 ಗಂಟೆಗಳು. ಇದನ್ನು 2018 ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಯಿತು. ಪ್ರದರ್ಶನವನ್ನು ವಿವರಿಸುತ್ತಾ, ಡ್ಯಾಂಗ್ರಿಕರ್ GWR ಅಧಿಕೃತ ಕನಸಿನಲ್ಲಿ ಹೇಳಿದರು: “ಶ್ರುತಿ ಅವರ ಡ್ಯಾನ್ಸ್ ಮ್ಯಾರಥಾನ್ ಅವರ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಅವಳು ತುಂಬಾ ದಣಿದ ಕ್ಷಣಗಳು ಇದ್ದವು. ಆದರೆ ಪೋಷಕರು ಯಾವಾಗಲೂ ಇದ್ದರು. ಅವಳನ್ನು ತಾಜಾವಾಗಿಡಲು ಅವಳ ಮುಖದ ಮೇಲೆ ನೀರು ಚಿಮುಕಿಸಲಾಯಿತು,” ಎಂದು ಸ್ವಪ್ನಿಲ್ ಹೇಳಿದರು. “ಒಟ್ಟಾರೆಯಾಗಿ ಶ್ರುತಿ ತುಂಬಾ ಪ್ರಭಾವಶಾಲಿ ಅಭಿನಯ ನೀಡಿದ್ದಾರೆ. ಮೇ 29ರ ಬೆಳಗ್ಗೆ ಆರಂಭವಾದ ನೃತ್ಯ ಜೂನ್ 3ರ ಮಧ್ಯಾಹ್ನದವರೆಗೆ ನಡೆಯಿತು. ಆ ನಂತರ ಶ್ರುತಿ ಇಡೀ ದಿನ…

Read More

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದ ಎಲ್ಲ ಸಚಿವರನ್ನು ದೆಹಲಿಗೆ ಕರೆಸಿದರು. ಇದೇ 21ರಂದು ಸಭೆ ನಡೆಯಲಿದೆ. ಪಕ್ಷದ ನಾಯಕತ್ವದೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ಸಚಿವರನ್ನು ದೆಹಲಿಗೆ ಕರೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ವಿವಿಧ ಯೋಜನೆಗಳ ಅನುಷ್ಠಾನ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಮತ್ತು ಕೇಂದ್ರ ಸಚಿವರನ್ನು ಭೇಟಿ ಮಾಡಲು ಸಾಧ್ಯವಿದೆ. ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಯನ್ನು ಭೇಟಿ ಮಾಡಬಹುದು ಎಂದೂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಬಗ್ಗೆಯೂ ನಾಯಕತ್ವದೊಂದಿಗಿನ ಸಭೆಯಲ್ಲಿ ಚರ್ಚಿಸಲಾಗುವುದು. ರಾಜ್ಯದಲ್ಲಿ ಜಾರಿಗೆ ತರಬೇಕಾದ ವಿವಿಧ ಯೋಜನೆಗಳ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗುವುದು. ರಾಜಕೀಯ ಭಿನ್ನಾಭಿಪ್ರಾಯಗಳಿಲ್ಲದೆ ಕರ್ನಾಟಕದ ಹಿತದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಈಗಾಗಲೇ ಹಲವರು ಭರವಸೆ ನೀಡಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ತುಮಕೂರು: ಚರಂಡಿ‌ ನೀರು ಹರಿದುಹೋಗುವ ವಿಚಾರದಲ್ಲಿ ಎರಡು ಕುಟುಂಬದ ಹೊಡೆದಾಟ ನಡೆದಿದ್ದು, ಈ ಗಲಾಟೆಯಲ್ಲಿ ಗಾಯಗೊಂಡ ಯುವಕ ಸಾವನ್ನಪ್ಪಿದ ಘಟನೆ  ತಿಪಟೂರು ತಾಲೂಕಿನ ಕನ್ನುಘಟ್ಟ ಗ್ರಾಮದಲ್ಲಿ ನಡೆದಿದೆ. ವಸಂತ ಕುಮಾರ್‌(24) ಮೃತ ಯುವಕನಾಗಿದ್ದಾನೆ. ಶಿವಬಸವಯ್ಯ ಮತ್ತು ಬಸವಲಿಂಗಯ್ಯರ ಕುಟುಂಬದ ನಡುವೆ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಶಿವಬಸವಯ್ಯರ ಕುಟುಂಬದ ಮೇಲೆ ಬಸವಲಿಂಗಯ್ಯ ಕುಟುಂಬ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಪರಿಣಾಮವಾಗಿ ಶಿವಬಸವಯ್ಯರ ಪುತ್ರ ವಸಂತ ಕುಮಾರ್ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಬಸವಲಿಂಗಯ್ಯ, ಕುಮಾರ್, ವಿಜಯ್‌ ಸೇರಿದಂತೆ ಒಟ್ಟು 8 ಜನರ ವಿರುದ್ದ ದೂರು  ದಾಖಲಾಗಿದ್ದು, ನೊಣವಿನಕೆರೆ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಉಚಿತ ಪ್ರಯಾಣ ಮಾಡುತ್ತಿರುವ ಮಹಿಳಾ ಪ್ರಯಾಣಿಕರು ಯೋಜನೆಯ ಬಗ್ಗೆ ಕೊಂಡಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ  ಹೇಳಿದರು. ಯೋಜನೆಯ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಹಿಳೆಯರಿಗೆ ಅನುಕೂಲ ಆಗಲಿ ಅಂತ ಈ ಯೋಜನೆ ಜಾರಿಗೆ ತಂದೆವು. ಅನುಕೂಲ ಆಗ್ತಿದೆ. ಧಾರ್ಮಿಕ ಕ್ಷೇತ್ರಗಳಿಗೆ ಒಟ್ಟಿಗೆ ಹೋಗ್ತಿದ್ದಾರೆ. ಅದಕ್ಕೆ ಕೆಲ ಬಸ್‍ಗಳು ರಶ್ ಆಗ್ತಿವೆ. 15 ದಿನದೊಳಗೆ ಒಂದು ಹಂತಕ್ಕೆ ಬರುತ್ತೆ ಎಂದ್ರು. ಶಾಲಾ ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ಹೋಗುವವರಿಗೆ ಈ ಯೋಜನೆ ನೆರವಾಗಿವೆ. ಶಕ್ತಿ ಯೋಜನೆಯಿಂದ ನಮ್ಮ ಸಂಸ್ಥೆಗಳಿಗೆ ಯಾವುದೇ ಆರ್ಥಿಕ ಹೊರೆಯಾಗಲ್ಲ.  ಕೆಲವು ಬಸ್ ಗಳಲ್ಲಿ ನಕಲಿ ಆಧಾರ್ (Adhar Card) ತೋರಿಸಿ ಪ್ರಯಾಣ ಮಾಡ್ತಿರೋ ಬಗ್ಗೆಯೂ ಮಾತನಾಡಿದ ಸಚಿವರು, ನಮ್ಮ ಅಧಿಕಾರಿಗಳು ಅಲರ್ಟ್ ಆಗಿರಬೇಕು. ಅಕ್ರಮವಾಗಿ ನಕಲಿ ಮಾಡಿದ್ರ ಮೇಲೆ ದೂರು ನೀಡಿ, ಅವ್ರ ಮೇಲೆ ಕ್ರಮ ಆಗಬೇಕು ಅಂತ ನಮ್ಮ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.…

Read More