Subscribe to Updates
Get the latest creative news from FooBar about art, design and business.
- ನವೆಂಬರ್ 22: ತಲ್ಲಣಿಸದಿರು ಮನವೆ ಕಾರ್ಯಕ್ರಮ
- ವೈ.ಎನ್.ಹೊಸಕೋಟೆಯಲ್ಲಿ ಸಾಂಪ್ರದಾಯಿಕ ಗೋವಿನ ಹಬ್ಬ
- ವಿಜೃಂಭಣೆಯಿಂದ ನೆರವೇರಿದ ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನ ಜಾತ್ರಾ ಮಹೋತ್ಸವ
- ಸರ್ಕಾರಿ ಶಾಲೆಗಳು ಬೇಡವಾಗಿದೆ, ಕಾರಣ ಅರಿಯಬೇಕಿದೆ: ಶಾಸಕ ಎಂ.ಟಿ.ಕೃಷ್ಣಪ್ಪ
- ಸಾಹಿತಿಗಳು ಸರ್ಕಾರದ ಆಶ್ರಯ ಪಡೆಯುವುದನ್ನು ನಿಲ್ಲಿಸಬೇಕು: ಬಂಜಗೆರೆ ಜಯಪ್ರಕಾಶ್
- ದುಪ್ಪಟ್ಟು ಹಣ ಲಾಭ ಗಳಿಸುವ ಆಮಿಷಕ್ಕೆ ಬಲಿಯಾಗಿ 14 ಲಕ್ಷ ರೂ. ಕಳೆದುಕೊಂಡ ಹೊಟೇಲ್ ಸಿಬ್ಬಂದಿ!
- ಎರಡು ಲಾರಿಗಳ ನಡುವೆ ಅಪಘಾತ: ಲಾರಿಯಿಂದ ಚೆಲ್ಲಿದ ಗೋದಿ ಕಂಡವರ ಪಾಲು!
- ಮಧುಗಿರಿ: ಸೊಳ್ಳೆಗಳ ವಿಪರೀತ ಕಾಟಕ್ಕೆ ಬಳಲಿ ಬೆಂಡಾದ ಜನ
Author: admin
ಅಧಿಕೃತ ಮೂಲಗಳ ಪ್ರಕಾರ ಸಿರಿಯಾ ಮತ್ತು ಟರ್ಕಿಯಲ್ಲಿ ಭೂಕಂಪಗಳಿಂದ ಸತ್ತವರ ಸಂಖ್ಯೆ 15,000 ಮೀರಿದೆ. ಟರ್ಕಿಯಲ್ಲಿ 12,391 ಮತ್ತು ಸಿರಿಯಾದಲ್ಲಿ 2,992 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 15,383 ಕ್ಕೆ ಏರಿದೆ ಎಂದು ಗಾರ್ಡಿಯನ್ ವರದಿ ಮಾಡಿದೆ. ಭೂಕಂಪದ ಕೇಂದ್ರಬಿಂದುವಿಗೆ ಭೇಟಿ ನೀಡಿದ ರೆಸೆಪ್ ತಯ್ಯಿಪ್ ಎರ್ಡೊಗನ್, ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ. ವಿಕೋಪದಿಂದ ತೀವ್ರ ಹಾನಿಗೊಳಗಾದ 10 ಪ್ರಾಂತ್ಯಗಳಲ್ಲಿ ವಸತಿ ರಹಿತರಿಗೆ ಮನೆ ನಿರ್ಮಿಸಿಕೊಡುವುದಾಗಿ ಸರ್ಕಾರ ಭರವಸೆ ನೀಡಿದೆ. ಸಿರಿಯಾದಲ್ಲಿ 2,98,000 ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆಯಬೇಕಾಯಿತು ಎಂದು ಸಿರಿಯನ್ ರಾಜ್ಯ ಮಾಧ್ಯಮ ವರದಿ ಮಾಡಿದೆ. ವಾಯುವ್ಯದಲ್ಲಿ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳಲ್ಲಿ 1,730 ಜನರು ಕೊಲ್ಲಲ್ಪಟ್ಟರು. ದೇಶದಲ್ಲಿ ಸರ್ಕಾರಿ ನಿಯಂತ್ರಿತ ಪ್ರದೇಶಗಳಲ್ಲಿ ಸಾವಿನ ಸಂಖ್ಯೆ 1,262 ಕ್ಕೆ ಏರಿದೆ. ಸುಮಾರು 5,108 ಜನರು ಗಾಯಗೊಂಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ತಜ್ಞರ ತಂಡಗಳನ್ನು ಮತ್ತು ವೈದ್ಯಕೀಯ ಸಾಮಗ್ರಿಗಳೊಂದಿಗೆ ಟರ್ಕಿ ಮತ್ತು ಸಿರಿಯಾಕ್ಕೆ ವಿಶೇಷ ವಿಮಾನಗಳನ್ನು ಕಳುಹಿಸುತ್ತಿದೆ…
ಅದಾನಿ ಅವ್ಯವಹಾರದ ಕುರಿತು ನಾನು ಕೇಳಿದ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸಲಿಲ್ಲ. ಈ ಮೂಲಕ ಅದಾನಿಯನ್ನ ಮೋದಿಯವರು ರಕ್ಷಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದರು. ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಪ್ರಧಾನಿ ಮೋದಿ ಈ ವೇಳೆ ವಿಪಕ್ಷಗಳನ್ನ ಟೀಕಿಸಿದರು. ಇದೇ ಸಮಯದಲ್ಲಿ ಗೌತಮ್ ಅದಾನಿ ಅವ್ಯವಹಾರದ ಬಗ್ಗೆ ತನಿಖೆಗೆ ಆಗ್ರಹಿಸಿ ವಿಪಕ್ಷಗಳಾದ ಬಿಆರ್ ಎಸ್, ಕಾಂಗ್ರೆಸ್ ಸಭಾತ್ಯಾಗ ಮಾಡಿದ ಘಟನೆ ನಡೆಯಿತು. ನಂತರ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ನನ್ನ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಅದಾನಿ ವಿರುದ್ಧದ ತನಿಖೆ ಬಗ್ಗೆ ಮಾತನಾಡಲಿಲ್ಲ ಮೋದಿ ಅದಾನಿಯನ್ನ ರಕ್ಷಿಸುತ್ತಿದ್ದಾರೆ. ಪ್ರಧಾನಿ ಉತ್ತರದಿಂದ ನಮಗೆ ನಿರಾಸೆ ಉಂಟಾಗಿದೆ. ಅದಾನಿ ಅವ್ಯವಹಾರದ ಬಗ್ಗೆ ತನಿಖೆ ಮಾಡಿಸಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ (Sidlaghatta) ಕಾನೂನು ಮಾಪನ ಇಲಾಖೆ ಕಚೇರಿಯಲ್ಲಿ ಪೆಟ್ರೋಲ್ ಬಂಕ್ ಮಾಲೀಕರಿಂದ ಲಂಚ ಪಡೆಯುತ್ತಿದ್ದ ವೇಳೆ ಸಹಾಯಕ ನಿಯಂತ್ರಕಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಾನೂನು ಮಾಪನ ಇಲಾಖೆಯ ಸಹಾಯಕ ನಿಯಂತ್ರಕಿ ಎಸ್.ಮಾಲಾ ಕಿರಣ್ ಅವರು, ₹ 8 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು ಮಂಗಳವಾರ ಹಣ ಪಡೆಯುತ್ತಿರುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪ್ರತಿ ವರ್ಷ ಕಾನೂನು ಮಾಪನ ಇಲಾಖೆಯ (Legal Measurement Department) ಅಧಿಕಾರಿಗಳು ಪೆಟ್ರೋಲ್ ಬಂಕ್ ತಪಾಸಣೆ ಮಾಡಿ ಪ್ರಮಾಣ ಪತ್ರ ನೀಡುವರು. ಅದರಂತೆ ಶಿಡ್ಲಘಟ್ಟ ರಸ್ತೆಯ ಬಸವೇಶ್ವರ ಪೆಟ್ರೋಲ್ ಬಂಕ್ ಮಾಲೀಕ ಭಾಸ್ಕರ್ ಅವರು ಬಂಕ್ ತಪಾಸಣೆ ಮಾಡಿ ಸ್ಟಾಂಪಿಂಗ್ ಮಾಡುವಂತೆ ಜ.31ರಂದು ಕಾನೂನು ಮಾಪನ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಫೆ.6ರಂದು ಮಾಲಾ ಕಿರಣ್ ಪೆಟ್ರೋಲ್ ಬಂಕ್‌ಗೆ ಬಂದು ತಪಾಸಣೆ ಮಾಡಿ ಸ್ಟಾಂಪಿಂಗ್ ಮಾಡಿದ್ದರು. ಪೆಟ್ರೋಲ್ ಬಂಕ್‌ನಲ್ಲಿ ಎರಡು ಪಂಪ್ ಇದ್ದು ಇದಕ್ಕೆ ನಾಲ್ಕು ನಾಜಲ್ ಇವೆ. ಪ್ರತಿ ನಾಜಲ್‌ಗೆ ₹ 2 ಸಾವಿರಂತೆ ₹…
ಬೆಳಗಾವಿ: ಹುಟ್ಟಿದಾಗಿನ ಹಾಗೂ ನಡುವಿನ ಬದುಕಿನ ಅಗತ್ಯಗಳು ಎಷ್ಟು ಮುಖ್ಯವೋ ಮನುಷ್ಯನ ಅಂತ್ಯದಲ್ಲಿನ ಸಂಸ್ಕಾರಗಳು ಅದಕ್ಕಿಂತ ಮುಖ್ಯ. ಒಬ್ಬ ಮನುಷ್ಯನನ್ನು ಸಾವಿನಲ್ಲೂ ಗೌರವಯುತವಾಗಿ ನಡೆಸಿಕೊಳ್ಳಬೇಕಾದುದು ಎಲ್ಲರ ಕರ್ತವ್ಯ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು. ಬಡಸ್ ಕೆ.ಎಚ್. ಗ್ರಾಮದ ದಲಿತ ಸಮಾಜದ ಸ್ಮಶಾನ ಭೂಮಿಯ ಸಲುವಾಗಿ ಇಂದು ವೈಯಕ್ತಿಕ 3 ಲಕ್ಷ ರೂ. ಸಹಾಯಧನ ನೀಡಿ ಮಾತನಾಡಿದರು. ಈ ಸಹಾಯಧನ ಬಳಸಿ ಸ್ಮಶಾನ ಭೂಮಿಯನ್ನು ಯಾವುದೇ ಮೂಲಸೌಕರ್ಯಗಳ ಕೊರತೆ ಇಲ್ಲದಂತೆ ಅಭಿವೃದ್ಧಿಪಡಿಸಿಕೊಳ್ಳುವಂತೆ ಅವರು ಸಮುದಾಯದ ಮುಖಂಡರಿಗೆ ಸಲಹೆ ನೀಡಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ಶಂಕರ ಗಿಡ್ಡಬಸನ್ನವರ, ಇನಾಯತ್ ಅಲಿ ಅತ್ತಾರ, ಮನ್ಸೂರ್ ಅಲಿ, ಪ್ರಶಾಂತ ಪಾಟೀಲ, ಶಂಕರ ಪಾಟೀಲ, ಭರ್ಮಾ ಶೀಗಿಹಳ್ಳಿ, ಗೌಸ್ ಶಿಂಪಿ, ಸದೆಪ್ಪ ಹಾದಿಮನಿ, ಕಲ್ಲಪ್ಪ ವಣ್ಣೂರ, ಅರ್ಜುನ ಜಿಮ್ಮನ್ನವರ, ಭೀಮಶಿ ಹಾದಿಮನಿ ಮತ್ತಿತರರು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…
ಮಂಗಳೂರು ಜಿಲ್ಲೆಯ ಮುಲ್ಕಿ ಸಮೀಪದ ಎಸ್ ಕೋಡಿ ಎಂಬಲ್ಲಿ ಅತಿಥಿ ಉಪನ್ಯಾಸಕಿ ಅಮಿತಾ ಬಿವಿ (34) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ತಿಳಿದು ಬಂದಿದೆ. ಅಮಿತಾ ಮದುವೆಯಾಗಿ 12 ವರ್ಷಗಳಾಗಿದ್ದು ತಾಯಿ ಮನೆಯಿಂದ ಗಂಡನ ಮನೆಗೆ ಬಂದು ಬೆಡ್ ರೂಮ್ ನ ಫ್ಯಾನ್ ಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮುಲ್ಕಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಅಮಿತಾ ಅತ್ಯಂತ ಕ್ರಿಯಾಶೀಲ ಮಹಿಳೆಯಾಗಿದ್ದು, ಇವಳು ವಾಮದಪದವು ಕಾಲೇಜಿನಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಪ್ರತಿ ವಿಭಾಗದ ವಿದ್ಯಾರ್ಥಿಗಳಿಗೂ ಇವರು ಅಚ್ಚುಮೆಚ್ಚಿನ ಉಪನ್ಯಾಸಕಿಯಾಗಿದ್ದರು ಎಂದು ತಿಳಿದು ಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ದೇಶದಲ್ಲಿ ಭ್ರಷ್ಟಾಚಾರ, ಕುಟುಂಬ ರಾಜಕಾರಣ ಅಂತ್ಯವಾಗಿದೆ. ಯುಪಿಎ ಅವದಿಯಲ್ಲಿ ಅರ್ಥ ವ್ಯವಸ್ಥೆ ಪಾತಾಳಕ್ಕೆ ಕುಸಿದಿತ್ತು. ಈಗ ಅರ್ಥವ್ಯವಸ್ಥೆ ಸರಿಯಾಗಿರುವುದನ್ನ ಕಂಡು ಕೆಲವರಿಗೆ ನಿರಾಸೆಯಾಗಿದೆ ಎಂದು ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಟಿ ಬೀಸಿದರು. ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿ ವಿಪಕ್ಷಗಳನ್ನ ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ, 2004ರಿಂದ 2014ರವರೆಗೆ ಭಾರತೀಯ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಈಗ ಅರ್ಥವ್ಯವಸ್ಥೆ ಸುಧಾರಿಸಿದೆ. ಮೊಬೈಲ್ ಉತ್ಪಾದನೆಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ದ್ವೇಷದ ಭಾವನೆಯ ರಾಜಕಾರಣ ಈಗ ಬಯಲಾಗಿದೆ. ದ್ವೇಷದ ಹಿಂದಿನ ಸತ್ಯ ಎಲ್ಲರ ಮುಂದೆ ಬಯಲಾಗಿದೆ ಎಂದು ಹೇಳಿದರು. ಕ್ರಮೇಣವಾಗಿ ದೇಶ ಭ್ರಷ್ಟಾಚಾರದಿಂದ ಮುಕ್ತವಾಗಿದೆ. ದೇಶದಲ್ಲಿ ಕುಟುಂಬ ರಾಜಕಾರಣ ಭ್ರಷ್ಟಾಚಾರ ಅಂತ್ಯವಾಗಿದೆ. ವಿಶ್ವದ ಸಮೃದ್ಧ ದೇಶಗಳಲ್ಲಿ ಭಾರತ ಒಂದಾಗಿದೆ. ಈ ಬಾರಿ ಭಾರತಕ್ಕೆ ಜಿ-20 ಅಧ್ಯಕ್ಷತೆ ಸಿಕ್ಕಿರುವುದರಿಂದ ಕೆಲವರಿಗೆ ದುಃಖವಾಗುತ್ತಿದೆ . ಅನೇಕ ದೇಶಗಳು ನಿರುದ್ಯೋಗ ಹಸಿವು ಬಡತನದಿಂದ ಬಳಲುತ್ತಿವೆ. ಭಾರತ ವಿಶ್ವದ 5ನೇ ಬಲಿಷ್ಠ ಆರ್ಥಿಕತೆ ಹೊಂದಿದೆ. ಭಾರತ…
ಗೋಕಾಕ್: ಫೆ. 24ರಿಂದ ನಾಲ್ಕು ದಿನಗಳ ಕಾಲ ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಪ್ರವಾಸ ಹಮ್ಮಿಕೊಳ್ಳಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು. ನಗರದ ಹಿಲ್ಲ್ ಗಾರ್ಡನ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫೆ. 28 ರಂದು ಸಂಜೆ ಗೋಕಾಕ್ ನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುವುದು. 2023ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 1ನೇ ಹಂತದಲ್ಲಿ ಪ್ರಜಾಧ್ವನಿ ಯಾತ್ರೆ ಯಶಸ್ಸಿಯಾಗಿ ನಡೆಸಲಾಗಿದ್ದು, 2ನೇ ಹಂತದ ಯಾತ್ರೆಯನ್ನು ವಿಧನಸಭಾ ಕ್ಷೇತ್ರವಾರು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಪ್ರಜಾಧ್ವನಿ ಯಾತ್ರೆಯಲ್ಲಿ ಘೋಷಿಸಿದ ಯೋಜನೆಗಳನ್ನುಮನೆ ಮನೆಗೆ ತಿಳಿಸಲಾಗುವುದು, ಇನ್ನು ಅನೇಕ ಯೋಜನೆಗಳನ್ನು ಘೋಷಿಸಲಾಗುವುದು, ಇದರಲ್ಲಿ ಜಿಲ್ಲಾವಾರು ಯೋಜನೆಗಳು ಹಂಚಿಕೆಯಾಗಿವೆ. ಜನ ಆಶೀರ್ವಾದ ಮಾಡಿದರೆ ಈ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…
ತುರುವೇಕೆರೆ: ತಾಲೂಕಿನ ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ.ಹೊಸಹಳ್ಳಿ ಗ್ರಾಮದಲ್ಲಿ ಜೈ ಮಾರುತಿ ವಾಲಿಬಾಲ್ ಕ್ಲಬ್ ವತಿಯಿಂದ ಎರಡನೇ ವರ್ಷದ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಫೆಬ್ರವರಿ 18ರಂದು ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ಶಿಕ್ಷಕ ಕೆ ಶಿವಣ್ಣ ತಿಳಿಸಿದರು. ತಾಲೂಕಿನ ಎ ಹೊಸಹಳ್ಳಿಯ ಮಾರುತಿ ಮಾರುತಿ ದೇವಾಲಯದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರುತಿ ದೇವಾಲಯದ ಮುಂಭಾಗ ಶನಿವಾರ ಸಂಜೆ 6 ಗಂಟೆಗೆ ಪಂದ್ಯಾವಳಿ ಪ್ರಾರಂಭವಾಗಲಿದೆ. ಪ್ರಥಮ ಬಹುಮಾನ 30,000 ನಗದು, ದ್ವಿತೀಯ ಬಹುಮಾನ 20,000 ನಗದು ತೃತಿಯ 10,000 ನಗದು ಚತುರ್ಥ ಬಹುಮಾನ 5000 ಬಹುಮಾನವಿದೆ ಎಂದು ತಿಳಿಸಿದರು. ಈ ಪಂದ್ಯಾವಳಿಗೂ ಮುನ್ನ ವೇದಿಕೆ ಕಾರ್ಯಕ್ರಮವಿದ್ದು, ಅದರಲ್ಲಿ ಅಧ್ಯಕ್ಷತೆಯನ್ನ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಗ್ರಾಮದ ಹಿರಿಯ ಮುಖಂಡ ಶಿವಣ್ಣ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜೆಡಿಎಸ್ ತಾಲೂಕು ಯುವ ಘಟಕದ ಅಧ್ಯಕ್ಷ ಬಾಣಸಂದ್ರ ರಮೇಶ್ ಜನಪ್ರತಿನಿಧಿಗಳು ಊರಿನ ಮುಖಂಡರು ಭಾಗವಹಿಸಲಿದ್ದಾರೆ . ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಕುಡಿಯುವ…
ತುರುವೇಕೆರೆ: ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನೆಪೆಡ್ ಮೂಲಕ ರಾಗಿ ಖರೀದಿ ಮಾಡಲು ಕೇಂದ್ರಗಳನ್ನು ತೆರೆಯಲಾಗಿದ್ದು, ಸುಮಾರು ನಾಲ್ಕೈದು ದಿನಗಳಿಂದ ರಾಗಿ ಮಾರಾಟ ಮಾಡಲು ಬಂದಿದ್ದ ರೈತರು ಖರೀದಿ ಕೇಂದ್ರದಲ್ಲಿ ಖರೀದಿ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಯುವಂತಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ತಾವು ತಂದಿದ್ದ ರಾಗಿ ತುಂಬಿದ ಟ್ರಾಕ್ಟರ್ ಗಳನ್ನು ರಸ್ತೆ ಬದಿಯ ಪಕ್ಕದಲ್ಲಿ ಸುಮಾರು ಎರಡರಿಂದ ಮೂರು ಕಿಲೋಮೀಟರ್ ದೂರದವರೆಗೆ ಸಾಲುಗಟ್ಟಿ ನಿಲ್ಲಿಸಲಾಗಿದೆ. ಇನ್ನು ಇದೇ ವೇಳೆಯಲ್ಲಿ ತಾಲೂಕು ಅಧ್ಯಕ್ಷರಾದ ರೈತ ಮುಖಂಡ ನಾಗೇಂದ್ರ ಅವರು ಮಾತನಾಡಿ, ಕೇವಲ ಮೂರು ರಾಗಿ ಖರೀದಿ ಕೇಂದ್ರಗಳಿ ಇಲ್ಲಿದ್ದು, ಇಲ್ಲಿ ಖರೀದಿ ಆಮೆ ಗತಿಯಲ್ಲಿ ಸಾಗುತ್ತಿದೆ. ತಾಲೂಕಿನಾದ್ಯಂತ ಹಳ್ಳಿಗಳಿಂದ ಬಂದಂತಹ ರೈತರುಗಳು ಬೇಸತ್ತು ಹೋಗಿದ್ದಾರೆ. ಒಟ್ಟಾರೆ ಈ ತಾಲೂಕಿನಲ್ಲಿ ಸುಮಾರು 13,602 ರೈತರು ನೋಂದಣಿ ಮಾಡಿಸಿದ್ದು, ಇಲ್ಲಿಯವರೆಗೆ ಕೇವಲ 980 ರೈತರಿಂದ ರಾಗಿ ಖರೀದಿ ಮಾಡಲಾಗಿದೆ ,ಏನೇ ಇರಲಿ ಆಹಾರ ಇಲಾಖೆಗೆ ಯಾವುದೇ ಮಂತ್ರಿ ಇಲ್ಲದಿರುವುದು ಈ ಸರ್ಕಾರಕ್ಕೆ ನಾಚಿಕೆಗೇಡಿನ…
ತುರುವೇಕೆರೆ: ತಾಲೂಕಿನ ಕಸಬಾ ಹೋಬಳಿ, ಕೊಡಿಗೆಹಳ್ಳಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೀಣಾ ಎಂಬ ಮುಖ್ಯ ಶಿಕ್ಷಕಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕೆಲಸಕ್ಕಾಗಿ ಯೋಜನೆ ಮಾಡಿಕೊಂಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳ ಪೋಷಕರುಗಳಾದ ರಘುಕುಮಾರ್ ರವರ ನೇತೃತ್ವದಲ್ಲಿ ಇಂದು ಸರ್ಕಾರಿ ಶಾಲೆಯ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ರಘುಕುಮಾರ್ ಮುಖ್ಯ ಶಿಕ್ಷಕಿ ವೀಣಾ ಅವರು, ಬಂದಾಗಿನಿಂದ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಉತ್ತಮವಾಗಿದ್ದು, ಎಸ್, ಎಸ್, ಎಲ್, ಸಿ ,ಫಲಿತಾಂಶ ಜಿಲ್ಲೆಯಲ್ಲಿ ಮೂರನೇ ಸ್ಥಾನಕ್ಕೆ ಕೊಂಡೊಯ್ಯಲು ಈ ಶಿಕ್ಷಕಿಯು ನೀಡುವ ಗುಣಮಟ್ಟದ ಶಿಕ್ಷಣ, ಹಾಗೂ ಇಂಗ್ಲಿಷ್ ಪರಿಣಿತಿ, ಮಕ್ಕಳಲ್ಲೂ ಉತ್ತೇಜಿಸಿ, ಇಂಗ್ಲಿಷ್ ಭಾಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಾಗಿರುತ್ತಾರೆ. ಜೊತೆಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪೆಣಂಬೂತವಾಗಿರುವ ಇಂಗ್ಲಿಷ್ ಭಾಷೆಯನ್ನು ಸುಲಲಿತವಾಗಿ ಮಕ್ಕಳಿಗೆ ಅರ್ಥೈಸುತ್ತಿದ್ದರು, ಆದರೆ ಈ ಮುಖ್ಯ ಶಿಕ್ಷಕಿಯನ್ನು ತಾಲೂಕು ಶಿಕ್ಷಣಾಧಿಕಾರಿಯ ಕಚೇರಿಗೆ ನಿಯೋಜನೆ ಮಾಡಿಕೊಂಡಿರುವುದು ಖಂಡನೀಯ ಎಂದರು. ಈ ಬಗ್ಗೆ ಈ ಶಾಲೆಯ ಎಸ್ ಡಿ ಎಂ…