nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೂಡ್ಲಿಗಿ: “ದೈವ ಒಂದೇ, ಅದು ದೇಶ – ದೇಶ ಸೇವೆಯೇ ದೈವ ಸೇವೆ”: ಮಾಜಿ ಸೈನಿಕ ಕಾಟೇರ ರಮೇಶ್

    July 27, 2026

    ಬಿಪಿಎಲ್ ಕಾರ್ಡ್ ಪಡೆಯಲು ವಾರ್ಷಿಕ ಆದಾಯ ಮಿತಿ ₹3 ಲಕ್ಷಕ್ಕೆ ಹೆಚ್ಚಿಸಲು ಕ್ರಮ: ಸಚಿವ ಕೆ.ಹೆಚ್. ಮುನಿಯಪ್ಪ

    July 27, 2026

    ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ನೀರಿಳಿಸಲು ಬಿಜೆಪಿ–ಜೆಡಿಎಸ್ ಸಜ್ಜು: ಬಿ.ವೈ.ವಿಜಯೇಂದ್ರ

    July 27, 2026
    Facebook Twitter Instagram
    ಟ್ರೆಂಡಿಂಗ್
    • ಕೂಡ್ಲಿಗಿ: “ದೈವ ಒಂದೇ, ಅದು ದೇಶ – ದೇಶ ಸೇವೆಯೇ ದೈವ ಸೇವೆ”: ಮಾಜಿ ಸೈನಿಕ ಕಾಟೇರ ರಮೇಶ್
    • ಬಿಪಿಎಲ್ ಕಾರ್ಡ್ ಪಡೆಯಲು ವಾರ್ಷಿಕ ಆದಾಯ ಮಿತಿ ₹3 ಲಕ್ಷಕ್ಕೆ ಹೆಚ್ಚಿಸಲು ಕ್ರಮ: ಸಚಿವ ಕೆ.ಹೆಚ್. ಮುನಿಯಪ್ಪ
    • ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ನೀರಿಳಿಸಲು ಬಿಜೆಪಿ–ಜೆಡಿಎಸ್ ಸಜ್ಜು: ಬಿ.ವೈ.ವಿಜಯೇಂದ್ರ
    • ತುಮಕೂರು: ನಡುರಸ್ತೆಯಲ್ಲೇ ರೌಡಿಶೀಟರ್‌ ಮಲ್ಲ ಬರ್ಬರ ಹತ್ಯೆ!
    • ಧರ್ಮೇಂದ್ರ ಪ್ರಧಾನ್ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿರುವುದು ಸ್ವಾಗತಾರ್ಹ: ಡಾ.ಜಿ.ಪರಮೇಶ್ವರ್‌
    • ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ: 2028ರ ಚುನಾವಣೆಗೆ ಸ್ಪರ್ಧಿಸಲ್ಲವೆಂದು ಸ್ಪಷ್ಟನೆ
    • ರಾಜ್ಯದಲ್ಲಿ ಬರ ಪರಿಸ್ಥಿತಿ: ದೆಹಲಿಯಲ್ಲಿ ಸಂಸದರು, ಕೇಂದ್ರ ಸಚಿವರ ಸಭೆ ಕರೆದ ಸಿಎಂ ಡಿ.ಕೆ. ಶಿವಕುಮಾರ್
    • ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಖರೀದಿ ಪ್ರಕ್ರಿಯೆ ನಿಧಾನ: ಎರಡು ಕಿಲೋ ಮೀಟರ್ ಗೂ ಹೆಚ್ಚು ದೂರ ಸಾಲುಗಟ್ಟಿ ನಿಂತ ರಾಗಿ ತುಂಬಿದ ಟ್ರ್ಯಾಕ್ಟರ್ ಗಳು
    ತುರುವೇಕೆರೆ February 8, 2023

    ಖರೀದಿ ಪ್ರಕ್ರಿಯೆ ನಿಧಾನ: ಎರಡು ಕಿಲೋ ಮೀಟರ್ ಗೂ ಹೆಚ್ಚು ದೂರ ಸಾಲುಗಟ್ಟಿ ನಿಂತ ರಾಗಿ ತುಂಬಿದ ಟ್ರ್ಯಾಕ್ಟರ್ ಗಳು

    By adminFebruary 8, 2023No Comments2 Mins Read
    turuvekere

    ತುರುವೇಕೆರೆ: ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನೆಪೆಡ್ ಮೂಲಕ ರಾಗಿ ಖರೀದಿ ಮಾಡಲು ಕೇಂದ್ರಗಳನ್ನು ತೆರೆಯಲಾಗಿದ್ದು, ಸುಮಾರು ನಾಲ್ಕೈದು ದಿನಗಳಿಂದ ರಾಗಿ ಮಾರಾಟ ಮಾಡಲು ಬಂದಿದ್ದ ರೈತರು ಖರೀದಿ ಕೇಂದ್ರದಲ್ಲಿ ಖರೀದಿ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಯುವಂತಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ತಾವು ತಂದಿದ್ದ ರಾಗಿ ತುಂಬಿದ ಟ್ರಾಕ್ಟರ್ ಗಳನ್ನು ರಸ್ತೆ ಬದಿಯ ಪಕ್ಕದಲ್ಲಿ ಸುಮಾರು ಎರಡರಿಂದ ಮೂರು ಕಿಲೋಮೀಟರ್ ದೂರದವರೆಗೆ ಸಾಲುಗಟ್ಟಿ ನಿಲ್ಲಿಸಲಾಗಿದೆ.

    ಇನ್ನು ಇದೇ ವೇಳೆಯಲ್ಲಿ ತಾಲೂಕು ಅಧ್ಯಕ್ಷರಾದ ರೈತ ಮುಖಂಡ ನಾಗೇಂದ್ರ ಅವರು ಮಾತನಾಡಿ, ಕೇವಲ ಮೂರು ರಾಗಿ ಖರೀದಿ ಕೇಂದ್ರಗಳಿ ಇಲ್ಲಿದ್ದು, ಇಲ್ಲಿ ಖರೀದಿ ಆಮೆ ಗತಿಯಲ್ಲಿ ಸಾಗುತ್ತಿದೆ. ತಾಲೂಕಿನಾದ್ಯಂತ ಹಳ್ಳಿಗಳಿಂದ ಬಂದಂತಹ ರೈತರುಗಳು ಬೇಸತ್ತು ಹೋಗಿದ್ದಾರೆ. ಒಟ್ಟಾರೆ ಈ ತಾಲೂಕಿನಲ್ಲಿ ಸುಮಾರು 13,602 ರೈತರು ನೋಂದಣಿ ಮಾಡಿಸಿದ್ದು, ಇಲ್ಲಿಯವರೆಗೆ ಕೇವಲ 980 ರೈತರಿಂದ ರಾಗಿ ಖರೀದಿ ಮಾಡಲಾಗಿದೆ ,ಏನೇ ಇರಲಿ ಆಹಾರ ಇಲಾಖೆಗೆ ಯಾವುದೇ ಮಂತ್ರಿ ಇಲ್ಲದಿರುವುದು ಈ ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ,  ಜೊತೆಗೆ ಎಪಿಎಂಸಿಯಾಗಲಿ, ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಯಾಗಲಿ ರೈತರಿಗೆ ಸ್ಪಂದಿಸುತ್ತಿಲ್ಲ, ಇನ್ನು ನಾಲ್ಕೈದು ದಿನದಿಂದ ಪ್ರತಿನಿತ್ಯ ಒಬ್ಬ ರೈತರಿಗೆ ಊಟ, ಟ್ರ್ಯಾಕ್ಟರ್, ಬಾಡಿಗೆ, ಅಂತ ಹೇಳಿ ಸುಮಾರು 2,000 ಖರ್ಚು ಬರುತ್ತಿದ್ದು, ನಾಲ್ಕೈದು ದಿನಗಳಿಂದ ನಮ್ಮ ರೈತರುಗಳು ಸಂದಿಗ್ಧ ಪರಿಸ್ಥಿತಿಯಲ್ಲಿ ರಾಗಿ ಮಾರಾಟ ಮಾಡುವ ಹಾಗಾಗಿದೆ ಎಂದರು,

    ಇದೇ ವೇಳೆ ತಾಳಕೆರೆ ಗ್ರಾಮದ ರೈತ ಜವರೇಗೌಡ ಮಾತನಾಡಿ, ನಾವು ರಾಗಿ ಮಾರಾಟ ಮಾಡಲು ಬಂದು ಸುಮಾರು 6 ದಿವಸಗಳು ಕಳೆದಿವೆ, ಇನ್ನು ನಾವು ಬೆಳೆದಂತಹ ರಾಗಿಯನ್ನು ಮಾರಾಟ ಮಾಡಲು ನಮ್ಮಗಳ ಗ್ರಾಮದಿಂದ ಇಲ್ಲಿಯವರೆಗೆ 2,800 ಬಾಡಿಗೆ ಕೊಟ್ಟು ಟ್ರ್ಯಾಕ್ಟರ್ ಮೂಲಕ ರಾಗಿ ತುಂಬಿಕೊಂಡು ಬಂದಿದ್ದೇವೆ, ಇಲ್ಲಿ ನಾವುಗಳು ಬಂದು ಆರು ದಿವಸವಾಗಿದೆ. ಪ್ರತಿ ದಿನಕ್ಕೆ 500 ಟ್ರ್ಯಾಕ್ಟರ್ ಬಾಡಿಗೆ ಕೊಡಬೇಕು. ನಮ್ಮ ಊಟದ ಖರ್ಚು ನಿತ್ಯ 200 ರಿಂದ 300 ರೂ ಆಗಲಿದೆ ನಾವುಗಳು ಏನು ಮಾಡಬೇಕು ಎಂದು ಪ್ರಶ್ನಿಸಿದರು.

    turuvekere

    ರಾಗಿ ಖರೀದಿಗೆ ಸಂಬಂಧಪಟ್ಟಂತೆ ಯಾವೊಬ್ಬ ಅಧಿಕಾರಿಯು ರಾಗಿ ಕೇಂದ್ರದಲ್ಲಿ ವೇಗವಾಗಿ ಖರೀದಿ ನಡೆಸುತ್ತಿಲ್ಲ. ಕೇವಲ ಮೂರು ಕೇಂದ್ರಗಳಿದ್ದು ಇನ್ನು 200ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳು ಜೊತೆಗೆ ರೈತರು ನಾವು ತಂದಿದ್ದ ರಾಗಿ ಬಿಸಿಲಿನಲ್ಲೇ ಒಣಗುತ್ತಿದ್ದೇವೆ. ನಮ್ಮ ಕಷ್ಟಗಳನ್ನು ಆಲಿಸುವರು ಯಾರು ಸ್ವಾಮಿ? ಎಂದು ಪ್ರಶ್ನಿಸಿದರು.

    ಇದಲ್ಲದೆ ಸರ್ಕಾರದಿಂದ ಕೊಡುವಂತ ಚೀಲದಲ್ಲಿ ನಾವು ತಂದಿದ್ದ ರಾಗಿಗಳನ್ನು  ತುಂಬಿಸುತ್ತಾರೆ. ಅದರಲ್ಲಿ ಅರ್ಧ ಕೆ.ಜಿ. ಎಷ್ಟು ಹೆಚ್ಚುವರಿ ರಾಗಿ ಚೀಲದಿಂದ ಹೊರಗೆ ಹೋಗುತ್ತದೆ ,ಪ್ರತಿ ಚೀಲಕ್ಕೆ ಅರ್ಧದಿಂದ ಒಂದು ಕೆಜಿಯಷ್ಟು ರಾಗಿ ಹೊರಗೆ ಹೋದರೆ ನಮ್ಮ ಗತಿ ಏನು,  ಸರ್ಕಾರದಿಂದ ಚೀಲ ಖರೀದಿಯಲ್ಲೋ ಅವ್ಯವಹಾರ ಮಾಡಿ ಗುಣಮಟ್ಟವಿಲ್ಲದ ಚೀಲಗಳಲ್ಲಿ ರಾಗಿ ತುಂಬಿಸಿ ರೈತರ ಹೊಟ್ಟೆಯ ಮೇಲೆ ಬರೆ ಹಾಕುತ್ತಿದ್ದಾರೆ ಸರಿಯಾದ ರೀತಿಯಲ್ಲಿ ಚೀಲ ದೊರಕಿಸಿ ಕೊಟ್ಟಿಲ್ಲ ಎಂದು ಆರೋಪಿಸಿದರು.

    ಇದೇ ಸಂದರ್ಭದಲ್ಲಿ , ರೈತರಾದ ಜವರೇಗೌಡ.ಶಶಿಧರ್ ಟಿ.ಎಸ್ ಈಶ್ವರಯ್ಯ ಕಡೆಹಳ್ಳಿ .ನಾಗೇಶ್ ಕೆ.ಶಿವು.ಶ್ರೀನಿವಾಸ ಕೆ ಟಿ ಕಣ್ಣತೂರು.ಇನ್ನು ಅನೇಕ ರೈತರು ಸ್ಥಳದಲ್ಲಿ ಇದ್ದರು.

    ವರದಿ: ಸುರೇಶ್ ಬಾಬು ಎಂ. ತುರುವೇಕೆರೆ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

    admin
    • Website

    Related Posts

    ಬೆಳೆ ವಿಮೆ ನೋಂದಣಿ: ರೈತರಿಗೆ ಸಲಹೆ

    July 10, 2026

    ಹಸಿರು ಶಾಲು ರೈತರಿಗೆ ನ್ಯಾಯ ಕೊಡಿಸುವ ಅಸ್ತ್ರ: ಇಂದುವಾಳು ಚಂದ್ರಶೇಖರ್

    July 7, 2026

    ಹೊಸ ಮೊಬೈಲ್ ಆಪ್ ನಿಂದ ಗೊಂದಲ: ಹಳೇ ರಸಗೊಬ್ಬರ ಮಾರಾಟ ವ್ಯವಸ್ಥೆ ಮುಂದುವರಿಸಲು ಕೃಷಿ ಪರಿಕರ ಮಾರಾಟಗಾರರ ಒತ್ತಾಯ

    June 30, 2026

    Comments are closed.

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    Uncategorized

    ಕೂಡ್ಲಿಗಿ: “ದೈವ ಒಂದೇ, ಅದು ದೇಶ – ದೇಶ ಸೇವೆಯೇ ದೈವ ಸೇವೆ”: ಮಾಜಿ ಸೈನಿಕ ಕಾಟೇರ ರಮೇಶ್

    July 27, 2026

    ಕೂಡ್ಲಿಗಿ (ವಿಜಯನಗರ):  “ದೇಶ ಸೇವೆಯೇ ಈಶ ಸೇವೆ ಎಂಬ ನಾಣ್ಣುಡಿಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮನಗಾಣಬೇಕಾಗಿದೆ” ಎಂದು ಮಾಜಿ ಸೈನಿಕ…

    ಬಿಪಿಎಲ್ ಕಾರ್ಡ್ ಪಡೆಯಲು ವಾರ್ಷಿಕ ಆದಾಯ ಮಿತಿ ₹3 ಲಕ್ಷಕ್ಕೆ ಹೆಚ್ಚಿಸಲು ಕ್ರಮ: ಸಚಿವ ಕೆ.ಹೆಚ್. ಮುನಿಯಪ್ಪ

    July 27, 2026

    ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ನೀರಿಳಿಸಲು ಬಿಜೆಪಿ–ಜೆಡಿಎಸ್ ಸಜ್ಜು: ಬಿ.ವೈ.ವಿಜಯೇಂದ್ರ

    July 27, 2026

    ತುಮಕೂರು: ನಡುರಸ್ತೆಯಲ್ಲೇ ರೌಡಿಶೀಟರ್‌ ಮಲ್ಲ ಬರ್ಬರ ಹತ್ಯೆ!

    July 27, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.