Author: admin

ಪತ್ರಕರ್ತರು ಅಖಂಡ ಕರ್ನಾಟಕದ ಪತ್ರಕರ್ತರಾಗಬೇಕು. ಪತ್ರಿಕೆ ಇರಲಿಲ್ಲ ನಾವು ಇರುತ್ತಿರಲಿಲ್ಲ. ರಾಜಕಾರಣಿಗಳು ಇಲ್ಲ ಅಂದಿದ್ರೆ ಪತ್ರಕರ್ತರು ಇರುತ್ತಿರಲಿಲ್ಲ. ಪತ್ರಕರ್ತರು ಮತ್ತು ರಾಜಕಾರಣಿಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಲಿದರು. ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿರುವ ಪತ್ರಕರ್ತರ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪತ್ರಕರ್ತರ ಸಂಘ ಗುರುತಿಸಿದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತದೆ. ನಿವೃತ್ತ ಪತ್ರಕರ್ತರಿಗೆ ಮಾಶಾಸನ ಹೆಚ್ಚಳಕ್ಕೂ ಕ್ರಮ ಕೈಗೊಳ್ಳುತ್ತೇವೆ. ರಾಜ್ಯ ಪತ್ರಕರ್ತರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ಹೈಬ್ರೀಡ್ ಕಾಲದಲ್ಲೂ ವಿಜಯಪುರ ಜೋಳ ಶ್ರೇಷ್ಟ.  ವಿಜಯಪುರ ಇಡೀ ದೇಶಕ್ಕೆ ಅನ್ನ ನೀಡುತ್ತದೆ. ನನ್ನನ್ನು ನಾಡದೊರೆ ಎನ್ನಬೇಡಿ ನಾಡದೊರೆ ಎಂದರೆ ನನಗೆ ಮುಜುಗರವಾಗುತ್ತೆ ಅದಕ್ಕೆ ಬ್ರೇಕ್ ಹಾಕಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…

Read More

ಪಾವಗಡ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಗುರುವಾರ ಬೆಳಿಗ್ಗೆ ಅಪರಿಚಿತ ಗಂಡಸಿನ ಮೃತದೇಹವೊಂದು ಪತ್ತೆಯಾಗಿರುವ ಘಟನೆ ನಡೆದಿದೆ. ಸುಮಾರು 40 ವರ್ಷ ವಯಸ್ಸಿನ ಈ ವ್ಯಕ್ತಿ ಪಟ್ಟಣದಲ್ಲಿ ಭಿಕ್ಷುಕನಂತೆ ಕಂಡು ಬಂದಿದ್ದ ಎಂದು ಸ್ಥಳೀಯರು  ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗೋಧಿ ಬಣ್ಣ ದುಂಡುಮುಖ, ಸಾಧಾರಣ ಶರೀರ, ಕಪ್ಪು ಮಿಶ್ರಿತ ಬಿಳಿ ಕೂದಲು, ನೀಲಿ ಕಪ್ಪು ಮಿಶ್ರಿತ ಅಂಗಿ, ಸಿಮೆಂಟ್ ಕಲರ್ ಲುಂಗಿ, ಕಂದು ಬಣ್ಣದ ಡ್ರಾಯರ್  ಧರಿಸಿರುವ ಈ ವ್ಯಕ್ತಿ ಅಪರಿಚಿತನಾಗಿದ್ದಾನೆ. ಈ ವ್ಯಕ್ತಿಯ ವಾರಸುದಾರರು  ತಿಳಿದವರು ಯಾರಾದರೂ ಇದ್ದರೆ ಕೂಡಲೇ ಪಾವಗಡ ಪೊಲೀಸ್ ಠಾಣೆಗೆ ಮಾಹಿತಿ ನೀಡಿ  ಎಂದು ಪಟ್ಟಣ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಅಜಯ್ ಸಾರಥಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಸಂಪರ್ಕಕ್ಕಾಗಿ: 08136-245666,9480802977,9480802941 ವರದಿ: ನಂದೀಶ್ ನಾಯ್ಕ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

Read More

ಪಶ್ಚಿಮ ಬಂಗಾಳ ಬಿಜೆಪಿ-ರಾಜ್ಯಪಾಲರ ಘರ್ಷಣೆಗೆ ಕೇಂದ್ರ ನಾಯಕತ್ವದ ಮಧ್ಯಪ್ರವೇಶ. ರಾಜ್ಯಪಾಲರೊಂದಿಗಿನ ಭಿನ್ನಾಭಿಪ್ರಾಯ ಬಗೆಹರಿಸುವಂತೆ ಬಿಜೆಪಿ ಕೇಂದ್ರ ನಾಯಕತ್ವ ರಾಜ್ಯ ಬಿಜೆಪಿ ನಾಯಕರಿಗೆ ಅಲ್ಟಿಮೇಟ್ ನೀಡಿದೆ. ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡಬಾರದು ಎಂದು ಕೇಂದ್ರ ನಾಯಕತ್ವ ಕಟ್ಟುನಿಟ್ಟಿನ ಸೂಚನೆ ನೀಡಿದೆ. ರಾಜಭವನಕ್ಕೆ ಮಾನಹಾನಿ ಮಾಡುವ ಹೇಳಿಕೆ ನೀಡಬೇಡಿ. ರಾಜ್ಯಪಾಲರು ಮಮತಾ ಅವರು ಸರ್ಕಾರಕ್ಕೆ ಮಿತಿ ಮೀರಿ ಸಹಾಯ ಮಾಡುತ್ತಿದ್ದಾರೆ ಎಂದು ರಾಜ್ಯ ನಾಯಕರು ಆರೋಪಿಸಿದ್ದರು. ವಿವಾದದ ಹಿನ್ನೆಲೆಯಲ್ಲಿ ಆನಂದ ಬೋಸ್ ದೆಹಲಿಗೆ ಭೇಟಿ ನೀಡಿದ್ದರು. ಈ ವಿಚಾರದಲ್ಲಿ ಕೇಂದ್ರ ನಾಯಕತ್ವದ ಮಧ್ಯಪ್ರವೇಶ. ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಿಕಟವರ್ತಿಯಾಗಿದ್ದಾರೆ ಎಂದು ಕೇಂದ್ರ ನಾಯಕತ್ವವು ಬಂಗಾಳದ ನಾಯಕರಿಗೆ ವಿವರಿಸಿದೆ. ಆನಂದ ಬೋಸ್ ಅವರ ಮಾನಹಾನಿ ಮಾಡುವುದು ನರೇಂದ್ರ ಮೋದಿಯವರ ಮಾನಹಾನಿ ಮಾಡಿದಂತೆ ಎಂದು ನಾಯಕತ್ವ ನೆನಪಿಸಿದೆ. ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸಿವಿ ಆನಂದ ಬೋಸ್ ಅವರನ್ನು…

Read More

ಚಿಕ್ಕನಾಯಕನಹಳ್ಳಿ: ದೇವಾಲಯದೊಳಗೆ ನುಗ್ಗಿರುವ ಕಳ್ಳರು, ದೇವಸ್ಥಾನದೊಳಗಿದ್ದ ದೇವರ ಮೂರ್ತಿ ಸಹಿತ ಬೆಲೆಬಾಳುವ ವಸ್ತುಗಳನ್ನು ದೋಚಿರುವ ಘಟನೆ  ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಕೆಂಕೆರೆಯಲ್ಲಿ ನಡೆದಿದೆ. ಕೆಂಕೆರೆಯಲ್ಲಿರುವ ಕಾಳಮ್ಮ ದೇವಸ್ಥಾನಕ್ಕೆ ನುಗ್ಗಿರುವ ಕಳ್ಳರು,  ಕಾಳಮ್ಮ ದೇವರ 3 ಬಂಗಾರದ ಮುಖ ಪದ್ಮ, ಛತ್ರಿ, ದೇವಸ್ಥಾನದ ಹುಂಡಿಯನ್ನು ಕದ್ದೊಯ್ದಿದ್ದಾರೆ. ಕಳವಾಗಿರುವ ವಸ್ತುಗಳ ಒಟ್ಟು ಮೌಲ್ಯ 2.50 ಕೋಟಿ ಎಂದು ಹೇಳಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ತುಮಕೂರು ಡಿಸಿ, ಎಸ್ ಪಿ ಸ್ಥಳಕ್ಕೆ ದೌಡಾಯಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಳ್ಳರು ದೇವರನ್ನು ಕೂರಿಸುವ ಹಲಗೆಯೊಂದನ್ನು ಬಿಟ್ಟು ಬೇರೆಲ್ಲ ವಸ್ತುಗಳನ್ನು ದೋಚಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

Read More

ಹುಬ್ಬಳ್ಳಿ: ಮೂರು ಮಕ್ಕಳ ತಂದೆಯೊಬ್ಬ 17 ವರ್ಷದ ಅಪ್ರಾಪ್ತೆಯನ್ನು ಮದುವೆಯಾದ ಘಟನೆ ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಹನುಮಂತ ಉಪ್ಪಾರ ಈಗಾಗಲೇ ಮದುವೆಯಾಗಿ ಮೂರು ಮಕ್ಕಳಿದ್ದರೂ ಈಗ ಅಪ್ರಾಪ್ತ ಬಾಲಕಿಯೊಂದಿಗೆ ಎರಡನೇ ಮದುವೆಯಾಗಿದ್ದಾನೆ. ಎಂದು ಫೋಟೋಗಳ ಸಮೇತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹನುಮಂತ ಉಪ್ಪಾರ ಹುಬ್ಬಳ್ಳಿಯ ಮಹದೇವ ನಗರದ ನಿವಾಸಿಯಾಗಿದ್ದು, ನೇತ್ರಾ ಎಂಬಾಕೆಯನ್ನು ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ. ಇಬ್ಬರಿಗೂ ಮೂರು ಮಕ್ಕಳು ಕೂಡ ಜನಿಸಿದ್ದಾರೆ. ಆದರೆ ಈಗ ಆರೋಪಿ ಮೊದಲ ಪತ್ನಿ ನೇತ್ರಾ ಅವರನ್ನು ಬಿಟ್ಟು ಮತ್ತೊಂದು ಮದುವೆಯಾಗಿದ್ದಾನೆ. ಅದರಲ್ಲೂ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಆರೋಪಿ ಮದುವೆಯಾಗಿದ್ದು, ಆಕೆಗೆ ಹಣದ ಆಮಿಷ ತೋರಿಸಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾನೆ ಎಂದು ಮೊದಲ ಪತ್ನಿ ಆರೋಪಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ವಾಣಿ ಜೈರಾಮ್ ಅವರು ಫೆಬ್ರವರಿ 4 ರಂದು ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಇತ್ತೀಚೆಗೆ ಅವರು ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದರು. ಅವರ ಹಠಾತ್ ನಿಧನ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ದೇಶಾದ್ಯಂತ. ಅವರು ತಮ್ಮ ವೃತ್ತಿಜೀವನದಲ್ಲಿ 10,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದರು. ಅವರ ಹಠಾತ್ ನಿಧನವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು,. ಈ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ನಿರೀಕ್ಷಿಸಲಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

Read More

ನವದೆಹಲಿ: ಅಗ್ನಿಪಥ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ತರಲಾಗಿದ್ದು ದೈಹಿಕ ಕ್ಷಮತೆ ಪರೀಕ್ಷೆಗೂ ಮುನ್ನ ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಬೇಕಾಗುತ್ತದೆ ಎಂದು ಭಾರತೀಯ ಸೇನೆ ಘೋಷಿಸಿದೆ. ಇದಕ್ಕೆ ಸಂಬಂಧಸಿದಂತೆ ಸೇನೆಯು ಶುಕ್ರವಾರ ಜಾಹೀರಾತು ಬಿಡುಗಡೆ ಮಾಡಿದ್ದು ಅಗ್ನಿವೀರರ ನೇಮಕಕ್ಕೆ ಸಂಬಂಧಿಸಿದ ಮೂರು ಹಂತಗಳ ಬಗ್ಗೆ ವಿವರಣೆ ನೀಡಿದೆ. ಅಗ್ನಿವೀರರಾಗಿ ನೇಮಕಗೊಳ್ಳಲು ಬಯಸುವ ಅಭ್ಯರ್ಥಿಗಳು ಮೊದಲು ಆನ್ಲೈನ್ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆ (ಅಇಇ) ಬರೆಯಬೇಕಾಗುತ್ತದೆ. ನಂತರ ದೈಹಿಕ ಕ್ಷಮತೆ ಪರೀಕ್ಷೆ ಹಾಗೂ ನೇಮಕಾತಿಗೂ ಮುನ್ನ ನಡೆಸುವ ವೈದ್ಯಕೀಯ ಪರೀಕ್ಷೆಗಳು ನಡೆಯಲಿವೆ. ನೇಮಕಾತಿ ರ‍್ಯಾಲಿಗಳಿಗೆ ಬರುವ ಸಾವಿರಾರು ಅಭ್ಯರ್ಥಿಗಳು ನಿಭಾಯಿಸಲು ತಗಲುವ ಆಡಳಿತಾತ್ಮಕ ವೆಚ್ಚ, ಸಾಗಾಟದ ವ್ಯವಸ್ಥೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗಿದೆ. ಇದೀಗ ಮೊದಲು ಪ್ರವೇಶ ಪರೀಕ್ಷೆ ಮಾಡುವುದರಿಂದ  ಅರ್ಹ ಅಭ್ಯರ್ಥಿಗಳು ಮಾತ್ರ ನೇಮಕಾತಿ ರ‍್ಯಾಲಿಗಳಿಗೆ ಬರುವಂತಾಗುತ್ತದೆ. ಇದು ನೇಮಕಾತಿ ಪ್ರಕ್ರಿಯೆಯನ್ನು ಸುಗಮಗೊಳಿಸಲಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಹೊಸ ನೇಮಕಾತಿ ನಿಯಮ ೨೦೨೩-೨೪ರಲ್ಲಿ ಸೇನೆ ಸೇರ ಬಯಸುವ ೪೦,೦೦೦ ಅಭ್ಯರ್ಥಿಗಳಿಗೆ…

Read More

ಸರಕಾರಿ ಕೆಲಸ ಹುಡುಕುವವರಿಗೆ ಭಾರತೀಯ ಸೇನೆಯ ಗಡಿ ಭದ್ರತಾ ಪಡೆ ಸಿಹಿ ಸುದ್ದಿ ನೀಡಿದ್ದು 1410 ಕಾನ್ಸ್ಟೇಬಲ್ (ಟ್ರೇಡ್ಸ್ಮೆನ್) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗೆ ಅರ್ಜಿ ಸಲ್ಲಿಸಲು ಮಾರ್ಚ್ 1, 2023 ಕೊನೆಯ ದಿನಾಂಕವಾಗಿದ್ದು ಗಡಿ ಭದ್ರತಾ ಪಡೆಯ ಅಧಿಕೃತ ವೆಬ್ಸೈಟ್ rectt.bsf.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಕಾನ್ಸ್ಟೇಬಲ್ (ಪುರುಷ)- 1343 ಹುದ್ದೆಗಳು ಕಾನ್ಸ್ಟೇಬಲ್ (ಮಹಿಳೆ)- 67 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಈ ಹುದ್ದೆಗಳಿಗೆ 10ನೇ ತರಗತಿಯಲ್ಲಿ ಪಾಸಾಗಿರುವವರು ಮಾರ್ಚ್ 1, 2023ಕ್ಕೆ ಅನುಗುಣವಾಗಿ 18 ರಿಂದ 25 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇನ್ನು ಕೆಲ ಹುದ್ದೆಗಳಿಗೆ ಎಸ್ಎಸ್ಎಲ್ಸಿ ಜೊತೆ ಐಟಿಐ ಪ್ರಮಾಣ ಪತ್ರವೊಂದಿರಬೇಕೆಂದು ತಿಳಿಸಲಾಗಿದೆ. ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ಅಧಿಸೂಚನೆಯಲ್ಲಿ ಪರಿಶೀಲಿಸಬಹುದು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಉಡುಪಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಚಿಸುವವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು ಇದೀಗ ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಜೋರಾಗಿದೆ. ಕೆಪಿಸಿಸಿ ಎಲೆಕ್ಷನ್ ಕಮಿಟಿ ಮಹತ್ವದ ಸಭೆ ನಡೆಸಿದ್ದು 37 ಅಭ್ಯರ್ಥಿಗಳ ಪಟ್ಟಿ ಸಭೆ ಮುಂದೆ ಬಂದಿದೆ, ಇದೀಗ ಮೊದಲ ಪಟ್ಟಿ ಸ್ಕ್ರೀನಿಂಗ್ ಕಮಿಟಿಗೆ ರವಾನಿಸಿದ್ದು, ಫೆಬ್ರವರಿ ಅಂತ್ಯದೊಳಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ. ಉಡುಪಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ವಿಧಾನಪರಿಷತ್ ಪ್ರದೇಶ ಎಲೆಕ್ಷನ್ ಕಮಿಟಿಯ ಜವಾಬ್ದಾರಿ ಮುಕ್ತಾಯವಾಗಿದೆ. ಅಭ್ಯರ್ಥಿಗಳ ಪಟ್ಟಿಗಳು ಈಗಾಗಲೇ ನಿನ್ನೆ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ೩೭ ಜನರ ಸಮ್ಮುಖ ಬಂದಿದೆ. ಸಭೆಯಲ್ಲಿ ಎಲ್ಲರೂ ತಮ್ಮ ಅಭಿಪ್ರಾಯ, ಶಿಫಾರಸುಗಳನ್ನು ಕೊಟ್ಟಿದ್ದಾರೆ. ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ನಾಯಕರು ಘೋಷಿಸಲಿದ್ದಾರೆ. ಫೆಬ್ರವರಿ ಅಂತ್ಯದೊಳಗೆ ಅಭ್ಯರ್ಥಿಗಳ ಹೆಸರು ಘೋಷಣೆ ಸಾಧ್ಯತೆ ಇದೆ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಅವರು ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಿದ್ದಾರೆ ಎಂದು…

Read More

ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಯರ‍್ರಮ್ಮನಹಳ್ಳಿ ಗ್ರಾಮದಲ್ಲಿ ಪಡಿತರದಾರರಿಗೆ ನೀಡಿದ ಅಕ್ಕಿಯಲ್ಲಿ ರಸಗೊಬ್ಬರದ ಹರಳುಗಳು ಮಿಶ್ರಣವಾಗಿರುವುದು ಬುಧವಾರ ಬೆಳಕಿಗೆ ಬಂದಿದೆ. ಬೂದಿಬೆಟ್ಟ ಪಂಚಾಯಿತಿ ವ್ಯಾಪ್ತಿಯ ಯರ‍್ರಮ್ಮನಹಳ್ಳಿ ಗ್ರಾಮದಲ್ಲಿ ಬುಧವಾರ ಪಡಿತರ ವಿತರಿಸಲಾಗಿದೆ. ಪಡಿತರದಾರರು ಮನೆಗೆ ಅಕ್ಕಿಯನ್ನು ತೆಗೆದುಕೊಂಡು ಹೋಗಿ ಅಕ್ಕಿಯನ್ನು ಶುಭ್ರಮಾಡುವಾಗ ಅದರಲ್ಲಿ ಯೂರಿಯಾ ಮತ್ತು ಕಾಂಪ್ಲೆಕ್ಸ್ ಗೊಬ್ಬರದ ಹರಳುಗಳು ಗೋಚರಿಸಿವೆ. ಅನುಮಾನಗೊಂಡು ಅಕ್ಕಪಕ್ಕದ ಮನೆಗಳಲ್ಲಿನ ಪಡಿತರವನ್ನು ಪರೀಕ್ಷಿಸಿದಾಗ ಅವುಗಳಲ್ಲೂ ಗೊಬ್ಬರದ ಹರಳು ಕಂಡುಬಂದಿದೆ. ಗ್ರಾಮಸ್ಥರೆಲ್ಲಾ ಸೇರಿ ಈ ಬಗ್ಗೆ ಸಂಬಂಧಿಸಿದವರಿಗೆ ಮಾಹಿತಿ ನೀಡಲಾಗಿದೆ. ತಹಶೀಲ್ದಾರರ ಆದೇಶದ ಅನ್ವಯ ತಕ್ಷಣ ಪಡಿತರ ವಿತರಣೆಯನ್ನು ನಿಲ್ಲಿಸಲಾಗಿದೆ. ಗುರುವಾರ ಬೆಳಿಗ್ಗೆ ಗ್ರಾಮಕ್ಕೆ ಆಹಾರ ಪರಿವೀಕ್ಷಕ ಮಂಜುನಾಥ ಮತ್ತು ವಿತರಕ ರಾಮಚಂದ್ರರೆಡ್ಡಿ ಬೇಟಿ ನೀಡಿ ಪ್ರತಿ ಮನೆಯಲ್ಲಿ ಪರೀಕ್ಷಿಸಿದಾಗ ಎಲ್ಲದರಲ್ಲೂ ಮಿಶ್ರಣ ಕಂಡುಬಂದಿದೆ. ಸಾರ್ವಜನಿಕರ ಸೂಚನೆಯಂತೆ ಪಡಿತರ ಕೇಂದ್ರದ ದಾಸ್ತಾನುಗಳ ಮೂಟೆಗಳನ್ನು ಪರೀಕ್ಷಿಸಿದಾಗ ಅದರಲ್ಲೂ ಗೊಬ್ಬರ ಮಿಶ್ರಣ ಇರುವುದು ಖಾತ್ರಿಯಾಗಿದೆ. ಈ ಬಗ್ಗೆ ಸ್ಥಳೀಯರು ಆತಂಕಗೊಂಡು ಅದಿಕಾರಗಳ ಬೇಜವಾಬ್ದಾರಿಯ ಬಗ್ಗೆ ಬೇಸರೊಂಡಾಗ ಪುಡ್ ಇನ್ಸ್ಪೆಕ್ಟರ್ ಮಂಜುನಾಥ…

Read More