Author: admin

ಅಹಮದಾಬಾದ್: ಏರ್‌ ಇಂಡಿಯಾ ವಿಮಾನ ಪತನಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರತಿಕ್ರಿಯೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅಮಿತ್ ಶಾ,  ಪತನಗೊಂಡ ಏರ್‌ ಇಂಡಿಯಾ ವಿಮಾನದಲ್ಲಿ ಸುಮಾರು 1.25 ಲಕ್ಷ ಲೀಟರ್ ಇಂಧನವಿತ್ತು. ಮಧ್ಯಾಹ್ನ ಹೆಚ್ಚಿನ ತಾಪಮಾನದಿಂದಾಗಿ ಪ್ರಯಾಣಿಕರನ್ನು ರಕ್ಷಿಸುವ ಅವಕಾಶವಿರಲಿಲ್ಲ ಎಂದು ತಿಳಿಸಿದ್ದಾರೆ. ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಮತ್ತು ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಅವರು ಆರೋಗ್ಯ ವಿಚಾರಿಸಿದರು. ಅಪಘಾತದ ನಡೆದ 10 ನಿಮಿಷಗಳಲ್ಲಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ಸಿಕ್ಕಿತು ಎಂದು ಇದೇ ವೇಳೆ ತಿಳಿಸಿದರು. ನಾನು ಗುಜರಾತ್ ಮುಖ್ಯಮಂತ್ರಿ ಮತ್ತು ನಾಗರಿಕ ವಿಮಾನಯಾನ ಸಚಿವರನ್ನು ಸಂಪರ್ಕಿಸಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸ್ವಲ್ಪ ಸಮಯದಲ್ಲೇ ಕರೆ ಮಾಡಿದ್ದಾರೆ. ಎಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂದು ತಿಳಿಸಿದರು. ದುರಂತ ನಡೆದ ಸ್ಥಳಕ್ಕೆ ನಾನು ಹೋಗಿದ್ದೆ. 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಇದ್ದರು. ಒಬ್ಬರು…

Read More

ಅಹ್ಮದಾಬಾದ್: ಗುಜರಾತ್ ರಾಜಧಾನಿ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ವಿಮಾನ ಅಪಘಾತಕ್ಕೀಡಾಗಿದ್ದು, ಇಡೀ ವಿಮಾನ ನಿಲ್ದಾಣದಾದ್ಯಂತ ದಟ್ಟ ಹೊಗೆ ಆವರಿಸಿದೆ. ಗುಜರಾತ್​ನ ಅಹಮದಾಬಾದ್​ ನಲ್ಲಿ ವಿಮಾನ ಪತನಗೊಂಡಿದ್ದು, ಅಹಮದಾಬಾದ್​ ಏರ್​ಪೋರ್ಟ್ ಬಳಿ ಟೇಕ್ ಆಫ್ ಆಗುತ್ತಿದ್ದಏರ್ ಇಂಡಿಯಾ ವಿಮಾನ ಏಕಾಏಕಿ ವಿಮಾನ ಪತನಗೊಂಡ ಪರಿಣಾಮ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಏರ್​ ಪೋರ್ಟ್ ಬಳಿ ಮೇಧಿನಿ ನಗರ್​ನಲ್ಲಿ ಈ ಘಟನೆ ಸಂಭವಿಸಿದೆ. ಬೋಯಿಂಗ್ 787–8 ಡ್ರೀಮ್‌ಲೈನರ್ ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರೊಂದಿಗೆ ಲಂಡನ್‌ಗೆ ತೆರಳುತ್ತಿತ್ತು. ವಿಮಾನವು ನಗರದ ವಿಮಾನ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಫೋರೆನ್ಸಿಕ್ ಕ್ರಾಸ್ ರಸ್ತೆಯ ಬಳಿ ಪತನಗೊಂಡಿತು ಎನ್ನಲಾಗಿದೆ. ಟೇಕ್ ಆಫ್ ಆಗುತ್ತಿದ್ದಂತೆ ವಿಮಾನ ಪತನವಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರ ಪೈಕಿ ಹಲವು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ವಿಮಾನದ ಪ್ರಕಾರದ ಕುರಿತು ಅಧಿಕಾರಿಗಳು…

Read More

ತುಮಕೂರು:  ಬುದ್ದಿಮಾಂದ್ಯ ವ್ಯಕ್ತಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಕುಣಿಗಲ್ ಶಾಸಕ ಡಾ.ರಂಗನಾಥ್  ಮಾನವೀಯತೆ‌ ಮೆರೆದಿದ್ದಾರೆ. ತಾನೇ ಕೈಯಾರೇ ಬುದ್ದಿಮಾಂದ್ಯ ವ್ಯಕ್ತಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿದ ಶಾಸಕ ರಂಗನಾಥ್ ಮಾನವೀಯತೆ ಮೆರೆದರು. ಬುದ್ದಿಮಾಂದ್ಯ ವ್ಯಕ್ತಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಚಿಕಿತ್ಸೆ ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತುರುವೇಕೆರೆ ತಾಲೂಕಿನ ಬಾಣಸಂದ್ರ ಗ್ರಾಮದ ಪ್ರಭಾಕರ್ ಎಂಬ ವ್ಯಕ್ತಿ ಬುದ್ಧಿಮಾಂದ್ಯನಾಗಿದ್ದು, ಹಲವು ದಿನಗಳಿಂದ ಕುಣಿಗಲ್ ತಾಲ್ಲೂಕು ಆಸ್ಪತ್ರೆ ಬಳಿ ಅನಾರೋಗ್ಯಕ್ಕೆ ಒಳಗಾಗಿ ಮಲಗುತ್ತಿದ್ದ. ಆಸ್ಪತ್ರೆಗೆ ಭೇಟಿ ಕೊಟ್ಟ ವೇಳೆ ಈತನನ್ನ ಕಂಡ ಕುಣಿಗಲ್ ಶಾಸಕ ರಂಗನಾಥ್. ಕೂಡಲೇ ಆತನ ಬಳಿ ಹೋಗಿ ಆತನಿಗೆ ಸ್ನಾನ ಮಾಡಿಸಿ, ಹೊಸ ಪ್ಯಾಂಟ್ ಶರ್ಟ್ ತೊಡಿಸಿ, ಚಿಕಿತ್ಸೆ ಕೊಡಿಸಿದರು. ಬಳಿಕ ಆತನನ್ನ ಅನಾಥಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದರು. ಶಾಸಕ ಡಾ.ರಂಗನಾಥ್ ಮಾನವೀಯ ಸೇವೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…

Read More

ಔರಾದ: ಬೀದರ್ ಜಿಲ್ಲೆಯ ಔರಾದ ತಾಲೂಕಿನ ಜೋಜನಾ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗೂರ (ಎಂ) ಗ್ರಾಮದಲ್ಲಿ ವಾಂತಿ ಬೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ವಾಂತಿ ಬೇದಿ ಪ್ರಕರಣ ಬೆಳಕಿಗೆ ಬಂದ ತಕ್ಷಣ ಗ್ರಾಮಕ್ಕೆ ಗ್ರಾಪಂ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಬೇಟಿ ನೀಡಿದ್ದು ಪರಿಶೀಲನೆ ನಡೆಸಿ ಗ್ರಾಮಸ್ಥರಿಗೆ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿದರು. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದು, ಗ್ರಾಮದಲ್ಲಿ ಸಮಪರ್ಕವಾದ ಚರಂಡಿ ವ್ಯವಸ್ಥೆ ಇಲ್ಲದೆ ಅಸ್ವಚ್ಛತೆ ತಾಂಡವವಾಡುತ್ತಿದೆ. ಅದಕ್ಕಾಗಿಯೇ ಗ್ರಾಮದಲ್ಲಿ ವಾಂತಿ ಬೇದಿ ಉಲ್ಬಣಿಸಿದೆ. ಈಗಾಗಲೇ ನಾಲ್ಕೈದು ಜನರು  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮಳೆಯ ನೀರು ರಸ್ತೆಗಳ ಮಧ್ಯೆದಲ್ಲಿಯೇ ಕೆರೆಯಂತೆ ನಿಲ್ಲುತ್ತಿವೆ. ಇದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದ್ದು, ಕೂಡಲೇ ಅಧಿಕಾರಿಗಳು ಶುದ್ಧ ಕುಡಿಯುವ ನೀರು ಸಮರ್ಪಕ ಚರಂಡಿ ವ್ಯವಸ್ಥೆ ಬ್ಲೀಚಿಂಗ್ ಪೌಡರ್ ಸಿಂಪಡಿಸುವಂತೆ ಒತ್ತಾಯಿಸಿದರು. ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ ಮಾತನಾಡಿ, ಗ್ರಾಮದಲ್ಲಿ ಸಿಸಿ ರಸ್ತೆ ಸೂಕ್ತವಾದ ಚರಂಡಿಗಳಿಲ್ಲದೇ ಮಲೀನ…

Read More

ಬೀದರ್: ಜಿಲ್ಲೆಯಲ್ಲಿ ಬೀಜ ಹಾಗೂ ರಸಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾ ಉಲ್ ಹಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈಗಾಗಲೇ ಮುಂಗಾರು ಬಿತ್ತನೆಗೆ ಬೀಜ, ರಸಗೊಬ್ಬರ ಮಾರಾಟ ಜೋರಾಗಿವುದರಿಂದ ಕೃಷಿ ಇಲಾಖೆಯಿಂದ ಭರದ ಸಿದ್ದತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಸೋಯಾ 2.25 ಸಾವಿರ ಹೆಕ್ಟರ್, ತೊಗರಿ 1.18 ಸಾವಿರ ಹೆಕ್ಟರ್, 20 ಸಾವಿರ ಹೆಕ್ಟರ್ ನಲ್ಲಿ ಉದ್ದು ಬಿತ್ತನೆಯಾಗಲಿದೆ. ಎಲ್ಲಾ 30 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ಸಂಗ್ರಹಿಸಲಾಗಿದ್ದು, ಅತಿ ಹೆಚ್ಚಾಗಿ ಸೊಯಾ ಬಿತ್ತನೆಗೆ ಗಡಿ ಜಿಲ್ಲೆಯಲ್ಲಿ ರೈತರು ಮುಂದಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ 95 ಸಾವಿರ ಕ್ವಿಂಟಾಲ್ ಬೀಜಗಳ ಸಂಗ್ರಹ ಲಭ್ಯವಿದೆ. 37 ಸಾವಿರ ಕ್ವಿಂಟಾಲ್ ವಿವಿಧ ರಸಗೊಬ್ಬರ ಬೇಡಿಕೆ ಇರುವುದರಿಂದ ಈಗಾಗಲೇ ಮೂರುವರೆ ಸಾವಿರ ಕ್ವಿಂಟಾಲ್ ಡಿಎಪಿ, ಯೂರಿಯಾ ಗೊಬ್ಬರದ ಸ್ಟಾಕ್ ಸಾಕಷ್ಟು ಪ್ರಮಾಣದಲ್ಲಿದೆ. ಉಳಿದ ರಸಗೊಬ್ಬರ ಸಮಯಕ್ಕೆ ಸರಿಯಾಗಿ ಜಿಲ್ಲೆಗೆ ಬರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ…

Read More

ತುಮಕೂರು: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಡಿ.ರಾಂಪುರ ಗ್ರಾಮದ ಬಳಿ ನಡೆಯುತ್ತಿರುವ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಳದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಅಧಿಕಾರಿಗಳ ಬಳಿ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಹಾಜರಿದ್ದ ಲಿಂಕೆನಲ್ ವಿರೋಧಿ ಹೋರಾಟಗಾರರು ಹಾಗೂ ರೈತರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆ ಅವರನ್ನು ಸಮಾಧಾನಪಡಿಸಿದ ಸಚಿವ ಸೋಮಣ್ಣ ಅಧಿಕಾರಿಗಳ ಬಳಿ ವಿಸ್ತೃತ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ರೈತ ಮುಖಂಡರು ಹಾಜರಿದ್ದರು. ಸ್ಥಳ ಪರಿಶೀಲನೆ: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಡಿ ರಾಂಪುರ ಗ್ರಾಮದ ಬಳಿ ನಡೆಯುತ್ತಿರುವ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಳದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ವಿವಾದಿತ ಕಾಮಗಾರಿಯ ಕುರಿತು ಸ್ಥಳ ಪರಿಶೀಲನೆ ನಡೆಸಿದರು. ತುಮಕೂರು ಜಿಲ್ಲೆಗೆ ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಿಂದ ಹರಿದು ಬರುತ್ತಿರುವ ನೀರಿನ ಚಾನಲ್ ಅನ್ನು ಕೂಡ ವೀಕ್ಷಿಸಿದರು. ನಮ್ಮತುಮಕೂರಿನ…

Read More

ತುಮಕೂರು:  ಹೇಮಾವತಿ ಲಿಂಕ್ ಕೆನಾಲ್ ಯೋಜನೆ ವಿರೋಧಿ ಹೋರಾಟಗಾರರಿಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆಯಾದ ನಾಲ್ವರಿಗೆ ಹೂವಿನ ಹಾರ ಹಾಕಿ ಬಿಜೆಪಿ ಶಾಸಕ ಸುರೇಶ ಗೌಡ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ ಸ್ವಾಗತಿಸಿದರು. ತುಮಕೂರು ಜಿಲ್ಲಾ ಕಾರಗೃಹದಿಂದ ಬಿಡುಗಡೆ ಎಚ್.ಬಿ.ನವಚೇತನ್, ಬೆಣಚಿಕೆರೆ ಲೋಕೇಶ್, ಎಚ್.ಎನ್.ಚೇತನ್, ಬಿ.ವಿ.ಆನಂದ್ ಅವರನ್ನು ಜೈಲು ಮುಂಭಾಗದಲ್ಲಿಯೇ ಸ್ವಾಗತ ಮಾಡಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಹೇಮಾವತಿ ಲಿಂಕ್ ಕೆ ನಾನು ವಿರೋಧಿ ಹೋರಾಟಗಾರರಿಗೆ ಬಿಜೆಪಿ ಶಾಸಕ ಸುರೇಶ್ ಗೌಡ ನೈತಿಕ ಸ್ಥೈರ್ಯ ತುಂಬಿದರು. ಹೋರಾಟಗಾರರ ಪರ ಉಚಿತವಾಗಿ ತುಮಕೂರು ಜಿಲ್ಲಾ ವಕೀಲರ‌ ಸಂಘದ ಅಧ್ಯಕ್ಷ ಕೆಂಪರಾಜು‌ ವಾದ ಮಂಡನೆ ಮಾಡಿದ್ದರು. ಮೇ 31 ರಂದು ತುಮಕೂರಿನ ಗುಬ್ಬಿಯ ಸಂಕಾಪುರದಲ್ಲಿ ಹೇಮಾವತಿ ಕೆನಾಲ್ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಈ‌ ವೇಳೆ ಪ್ರತಿಭಟನೆ ನಡೆಸಿದ ಶಾಸಕರು, ಸ್ವಾಮೀಜಿಗಳು, ರೈತ ಮುಖಂಡರು, ರೈತರು  ಸೇರಿ 13 ಪ್ರತ್ಯೇಕ ಎಫ್ ಐಆರ್ ದಾಖಲಿಸಿಕೊಂಡು ಐವರನ್ನು ಬಂಧಿಸಲಾಗಿತ್ತು. ಜೂನ್ 2 ರಂದು…

Read More

ಕೊರಟಗೆರೆ:  ತುಮಕೂರು ಜಿಲ್ಲೆಯ ಹತ್ತು ತಾಲ್ಲೂಕು ಕಚೇರಿಗಳಿಗೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರಿಂದ ದಾಳಿ ನಡೆದಿದ್ದು,  ಕೊರಟಗೆರೆ, ಮಧುಗಿರಿ, ಪಾವಗಡ, ಚಿಕ್ಕನಾಯಕನಹಳ್ಳಿ ಸೇರಿದಂತೆ ಹತ್ತು ತಾಲ್ಲೂಕು ಕಛೇರಿಗೆ ಲೋಕಾಯುಕ್ತರು ದಿಢೀರ್ ಭೇಟಿ ನೀಡಿದರು. ಲೋಕಾಯುಕ್ತ ನ್ಯಾಯಾಧೀಶರ ಆದೇಶದಂತೆ ತುಮಕೂರು ಲೋಕಾಯುಕ್ತ ಎಸ್ಪಿ ರವರ ಮಾರ್ಗದರ್ಶನದಂತೆ ದಿಢೀರ್ ಭೇಟಿ ನೀಡಲಾಗಿದೆ.  ಹತ್ತು ತಂಡಗಳಾಗಿ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ಹತ್ತು ತಾಲ್ಲೂಕು ಕಛೇರಿಗೆ ಭೇಟಿ ನೀಡಿದ್ದಾರೆ. ಇಂದು ಬೆಳಗ್ಗೆ 10:45 ಕ್ಕೆ ಸರಿಯಾಗಿ ತುಮಕೂರು ಲೋಕಾಯುಕ್ತ ಅಧಿಕಾರಿಗಳು ಕೊರಟಗೆರೆಯ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ್ದಾರೆ.  ತಹಶೀಲ್ದಾರ್ ಕೊಠಡಿ ಸೇರಿದಂತೆ ಎಲ್ಲಾ ಸಿಬ್ಬಂದಿಗಳ ಕೊಠಡಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಕಚೇರಿ ಒಳಗಿನ ಶೌಚಾಲಯ, ಸಭಾಂಗಣ (ಮೀಟಿಂಗ್ ಹಾಲ್), ಸಕಾಲ ಕೇಂದ್ರ, ಪಹಣಿ ವಿತರಣೆ ಕೇಂದ್ರ, ಸಿಬ್ಬಂದಿಗಳ ಹಾಜರಾತಿ ಪರಿಶೀಲನೆ ನಡೆಸಲಾಯಿತು.  ಬಗರ್ ಹುಕ್ಕುಂ ಸಾಗುವಳಿ ಕಡತಗಳ ಪರಿಶೀಲನೆ ಕೂಡ  ಮಾಡಲಾಗಿದೆ. ಪರಿಶೀಲನೆ ವೇಳೆ  ಕಚೇರಿಯ ಒಳಗೆ ಸಾರ್ವಜನಿಕರನ್ನು ಪ್ರವೇಶಿಸದಂತೆ ಕಚೇರಿಯ ಮುಖ್ಯ ದ್ವಾರವನ್ನು ಲೋಕಾಯುಕ್ತ…

Read More

ತುಮಕೂರು: ತೋಟಗಾರಿಕೆ ಇಲಾಖೆ ವತಿಯಿಂದ 2025–26ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಾದ ಕೃಷಿ ವಿಸ್ತರಣೆ ಮತ್ತು ತರಬೇತಿ ಅಭಿಯಾನ ಹಾಗೂ ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕಾರ್ಯಕ್ರಮದಡಿ ಸಹಾಯಧನ ಸೌಲಭ್ಯ ಕಲ್ಪಿಸಲು ತೋಟಗಾರಿಕೆ ರೈತರು ಹಾಗೂ ಉದ್ದಿಮೆದಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ರೈತರಿಗೆ ಅಡಿಕೆ ಸುಲಿಯುವ ಯಂತ್ರ, ದೋಟಿ, ಬ್ರಷ್ಕಟರ್, ಟಿಲ್ಲರ್, ಪವರ್ ವೀಡರ್, ಸ್ಪ್ರೇಯರ್, ರೋಟೋವೇಟರ್, ಡಿಗ್ಗರ್ ಹಾಗೂ ಇತರೆ ಯಂತ್ರಗಳನ್ನು ಖರೀದಿಸಲು ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ/ಅತೀ ಸಣ್ಣ ಹಾಗೂ ಮಹಿಳಾ ರೈತರಿಗೆ ಶೇ.50ರಷ್ಟು ಹಾಗೂ ಸಾಮಾನ್ಯ, ಇತರೆ ವರ್ಗದ ರೈತರಿಗೆ ಶೇ. 40ರಷ್ಟು(ಗರಿಷ್ಠ 1.25 ಲಕ್ಷ ಅಥವಾ 5 ಯಂತ್ರೋಪಕರಣ ಮಾತ್ರ) ಸಹಾಯಧನ ನೀಡಲಾಗುವುದು. ಆಸಕ್ತ ರೈತರು ಹಾಗೂ ಉದ್ದಿಮೆದಾರರು ಭರ್ತಿ ಮಾಡಿದ ಅರ್ಜಿಯೊಂದಿಗೆ ಪಹಣಿ, ಬೆಳೆ ದೃಢೀಕರಣ, ಚೆಕ್ ಬಂದಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಜಾತಿ ಪ್ರಮಾಣ ಪತ್ರ (ಪ.ಜಾತಿ/ಪ.ಪಂಗಡ ರೈತರಿಗೆ) ಜಂಟಿ ಖಾತೆಯಿದ್ದರೆ ಒಪ್ಪಿಗೆ ಪತ್ರ, ಖಾತೆದಾರರ ಮರಣ ಹೊಂದಿದ್ದಲ್ಲಿ ಮರಣ…

Read More

ತುಮಕೂರು: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯಲ್ಲಿ 2025–26ನೇ ಸಾಲಿನ ಡಿಪ್ಲೋಮಾ ಇನ್ ಡ್ರಾಮಾ ಆರ್ಟ್ಸ್ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಕನಿಷ್ಠ ಎಸ್‌ ಎಸ್‌ ಎಲ್‌ ಸಿ ಉತ್ತೀರ್ಣರಾಗಿರಬೇಕು. ಪದವೀಧರರಿಗೆ ಹಾಗೂ ರಂಗಭೂಮಿಯಲ್ಲಿ ಆಸಕ್ತಿ/ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಸೌಲಭ್ಯದೊಂದಿಗೆ ಕರ್ನಾಟಕ ಹಾಗೂ ಭಾರತದ ಖ್ಯಾತ ರಂಗತಜ್ಞರು/ ಅತಿಥಿ ಉಪನ್ಯಾಸಕರಿಂದ ಭಾರತೀಯ ರಂಗಭೂಮಿ, ಕನ್ನಡ ಮತ್ತು ನಾಟಕ ಸಾಹಿತ್ಯ ಪರಂಪರೆ, ಪಾಶ್ಚಾತ್ಯ ರಂಗಭೂಮಿ, ಆಹಾರ್ಯ, ಶಿಕ್ಷಣದಲ್ಲಿ ರಂಗಭೂಮಿ ಕುರಿತಾದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ತರಬೇತಿ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ವೆಬ್‌ಸೈಟ್ www.theatreschoolsanehalli.org  ಮೂಲಕ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಭರ್ತಿ ಮಾಡಿದ ಅರ್ಜಿಯನ್ನು ಜೂನ್ 25ರೊಳಗೆ ಪ್ರಾಚಾರ್ಯರು, ಶ್ರೀ ಶಿವಕುಮಾರ ರಂಗಪ್ರಯೋಗಶಾಲೆ, ಸಾಣೇಹಳ್ಳಿ–577597, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ. 9448398144 / 8861043553ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಾಚಾರ್ಯರು…

Read More