ತುಮಕೂರು: ಹೇಮಾವತಿ ಲಿಂಕ್ ಕೆನಾಲ್ ಯೋಜನೆ ವಿರೋಧಿ ಹೋರಾಟಗಾರರಿಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆಯಾದ ನಾಲ್ವರಿಗೆ ಹೂವಿನ ಹಾರ ಹಾಕಿ ಬಿಜೆಪಿ ಶಾಸಕ ಸುರೇಶ ಗೌಡ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ ಸ್ವಾಗತಿಸಿದರು.
ತುಮಕೂರು ಜಿಲ್ಲಾ ಕಾರಗೃಹದಿಂದ ಬಿಡುಗಡೆ ಎಚ್.ಬಿ.ನವಚೇತನ್, ಬೆಣಚಿಕೆರೆ ಲೋಕೇಶ್, ಎಚ್.ಎನ್.ಚೇತನ್, ಬಿ.ವಿ.ಆನಂದ್ ಅವರನ್ನು ಜೈಲು ಮುಂಭಾಗದಲ್ಲಿಯೇ ಸ್ವಾಗತ ಮಾಡಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಹೇಮಾವತಿ ಲಿಂಕ್ ಕೆ ನಾನು ವಿರೋಧಿ ಹೋರಾಟಗಾರರಿಗೆ ಬಿಜೆಪಿ ಶಾಸಕ ಸುರೇಶ್ ಗೌಡ ನೈತಿಕ ಸ್ಥೈರ್ಯ ತುಂಬಿದರು.
ಹೋರಾಟಗಾರರ ಪರ ಉಚಿತವಾಗಿ ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪರಾಜು ವಾದ ಮಂಡನೆ ಮಾಡಿದ್ದರು.
ಮೇ 31 ರಂದು ತುಮಕೂರಿನ ಗುಬ್ಬಿಯ ಸಂಕಾಪುರದಲ್ಲಿ ಹೇಮಾವತಿ ಕೆನಾಲ್ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಪ್ರತಿಭಟನೆ ನಡೆಸಿದ ಶಾಸಕರು, ಸ್ವಾಮೀಜಿಗಳು, ರೈತ ಮುಖಂಡರು, ರೈತರು ಸೇರಿ 13 ಪ್ರತ್ಯೇಕ ಎಫ್ ಐಆರ್ ದಾಖಲಿಸಿಕೊಂಡು ಐವರನ್ನು ಬಂಧಿಸಲಾಗಿತ್ತು. ಜೂನ್ 2 ರಂದು ಐವರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW