Author: admin

ಕೊರಟಗೆರೆ: ಪ್ರತಿ ತಿಂಗಳ ಮೊದಲನೇ ಶನಿವಾರ ಸ್ವಚ್ಛತಾ ಆಂದೋಲನ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ತಾಲ್ಲೂಕು ಕಚೇರಿಯ ಆವರಣದಲ್ಲಿ ನೂತನ ತಹಶೀಲ್ದಾರ್ ಮುನಿಸ್ವಾಮಿ ರೆಡ್ಡಿ ಕಚೇರಿ ಆವರಣದಲ್ಲಿ ಕಸ ಕಡ್ಡಿ ಇನ್ನಿತರೆ ತ್ಯಾಜ್ಯ ವಸ್ತುಗಳನ್ನ ಸ್ವಚ್ಛತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಆದೇಶದಂತೆ ತುಮಕೂರು ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪ್ರತಿ ತಿಂಗಳ ಮೊದಲನೇ ಶನಿವಾರ ಸ್ವಚ್ಛತಾ ದಿನವನ್ನಾಗಿ ಆಚರಿಸಿ ಕಚೇರಿ ಆವರಣವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದ ಉದ್ದೇಶ ತುಂಬಾ ಚೆನ್ನಾಗಿದೆ. ಮೊದಲು ನಾವಿರುವ ಜಾಗ ಸ್ವಚ್ಛತೆಯಿದ ಇರಬೇಕು. ನಮ್ಮ ನಮ್ಮ ಇಲಾಖೆ ಕಚೇರಿಗಳನ್ನ ಸ್ವಚ್ಛವಾಗಿ ಇರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಆದ್ದರಿಂದ ನಾನು ಬಂದ ಮೊದಲನೇ ದಿನವೇ ಕಚೇರಿಯನ್ನು ಗಮನಿಸಿದೆ . ನಮ್ಮ ಇಲಾಖೆಯ ಸಿಬ್ಬಂದಿ ಗೂ ತುಂಬಾ ಸ್ವಚ್ಛತೆಯಿಂದ ಕಾಪಾಡಿಕೊಂಡಿದ್ದಾರೆ. ಕಚೇರಿ ಆವರಣದಲ್ಲಿ ಮಾತ್ರ ಸ್ವಲ್ಪ ಕಸ ಕಡ್ಡಿ ಇದ್ದಿದ್ದರಿಂದ ಅದನ್ನು ಕೂಡ ಇಂದು ಸ್ವಚ್ಛತೆಯ ಕಾರ್ಯಕ್ರಮದ…

Read More

ತುರುವೇಕೆರೆ: ಎರಡನೇ ತರಗತಿಯ ವಿದ್ಯಾರ್ಥಿಯೋರ್ವನಿಗೆ ಶಿಕ್ಷಕ ಕೋಲಿನಿಂದ ಬಾಸುಂಡೆ ಬರುವಂತೆ ಹಲ್ಲೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಶಿಕ್ಷಕನನ್ನು ಅಮಾನತು ಮಾಡಿರುವ ಘಟನೆ ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿ ಕಲ್ಕೆರೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನಡೆದಿದೆ. ಈ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಜೆ.ರಂಗಸ್ವಾಮಿ ತರಗತಿಯ ಸಮಯದಲ್ಲಿ ಎರಡನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಮ್ರಾನ್ ಗೆ ಕೋಲಿನಿಂದ ಬಾಸುಂಡೆ ಬರುವ ರೀತಿಯಲ್ಲಿ ಬೆನ್ನು ಮತ್ತು ಬುಜದ ಮೇಲೆ ಹೊಡೆದಿದ್ದಾನೆ. ಶಿಕ್ಷಕ ಅಮಾನವೀಯವಾಗಿ ಥಳಿಸಿರುವ ವಿಚಾರವನ್ನು ಬಾಲಕ ಪೋಷಕರ ಗಮನಕ್ಕೆ ತಂದಿದ್ದು, ಈ ಬಗ್ಗೆ ಪೋಷಕರು ಊರಿನ ಸಾರ್ವಜನಿಕರೊಂದಿಗೆ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಸಭೆ ಕರೆದು ಶಿಕ್ಷಕ ರಂಗಸ್ವಾಮಿಯನ್ನು ತರಾಟೆ ತೆಗೆದುಕೊಂಡರು. ಶಾಲಾ ಆವರಣ ಮುಂದೆ ಸುಮಾರು ನೂರಾರು ಸಾರ್ವಜನಿಕರು, ಜಮಾಮಣೆಗೊಂಡು ಘಟನೆಯನ್ನು ಖಂಡಿಸಿದ್ದು, ಇದರ ಬೆನ್ನಲ್ಲೇ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ಮತ್ತು ಸಿ ಆರ್ ಪಿ ಅವರ ಗಮನಕ್ಕೆ ತಂದು ಇದರ…

Read More

ಬಿಹಾರದ ಸುಂದರ್ ‌ಗಢ್‌ನಲ್ಲಿರುವ ಬ್ರಿಲಿಯಂಟ್ ಕಾನ್ವೆಂಟ್ ಶಾಲೆಯ ಪರೀಕ್ಷಾ ಹಾಲ್‌ನಲ್ಲಿ ಹುಡುಗಿಯರು ತುಂಬಿರುವುದನ್ನು ನೋಡಿದ 17 ವರ್ಷದ ಯುವಕ ಪ್ರಜ್ಞೆ ತಪ್ಪಿ ಬಿದ್ದಿರುವ ಘಟನೆ ನಡೆದಿದೆ. ಪರೀಕ್ಷೆ ಹಾಲ್ ‌ ತುಂಬಾ ಹುಡುಗಿಯರನ್ನು ನೋಡಿ ವಿದ್ಯಾರ್ಥಿ ಗೊಂದಲಕ್ಕೊಳಗಾಗಿದ್ದು, ಈ ಆಘಾತದಿಂದ ಈತ ತಲೆತಿರುಗಿ ಬಿದ್ದಿದ್ದಾನೆ ಎಂದು ಹೇಳಲಾಗಿದೆ. ಬಿಹಾರದ ಷರೀಫ್ ಅವರ ಅಲ್ಲಮ ಇಕ್ಬಾಲ್ ಕಾಲೇಜಿನ ವಿದ್ಯಾರ್ಥಿ ಮನೀಶ್ ಶಂಕರ್ ಪ್ರಸಾದ್ (17) ಪರೀಕ್ಷೆಯ ಸೀಸನ್‌ ನ ಮೊದಲ ದಿನ ಗಣಿತ ಪರೀಕ್ಷೆಗೆ ಹಾಜರಾಗಿದ್ದಾಗ ಕುಸಿದುಬಿದ್ದಿದ್ದಾನೆ. ವಿದ್ಯಾರ್ಥಿಯ ಪರೀಕ್ಷಾ ಕೇಂದ್ರವು ಸುಂದರ್‌ಗಢದ ಬ್ರಿಲಿಯಂಟ್ ಕಾನ್ವೆಂಟ್ ಶಾಲೆಯಾಗಿತ್ತು. ಪರೀಕ್ಷಾ ಕೇಂದ್ರವನ್ನು ತಲುಪಿದಾಗ, ಅಭ್ಯರ್ಥಿಗಳಲ್ಲಿ ಅವನು ಒಬ್ಬನೇ ಹುಡುಗ ಎಂದು ವಿದ್ಯಾರ್ಥಿಗೆ ಅರಿವಾಯಿತು. ಇದರಿಂದ ಗಾಬರಿಗೊಂಡ ವಿದ್ಯಾರ್ಥಿ ಸಭಾಂಗಣದಲ್ಲಿ ಕುಸಿದು ಬಿದ್ದಿದ್ದಾನೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

Read More

ತುಮಕೂರು: ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ ಬಳಿ ನಿರ್ಮಾಣಗೊಂಡಿರುವ ಎಚ್‌ ಎಎಲ್ ಹೆಲಿಕಾಫ್ಟರ್ ಘಟಕದ ಲೋಕಾರ್ಪಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಫೆ. 6ರಂದು ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ  ಬಿಜೆಪಿ ಕಾರ್ಯಕರ್ತರು ಪ್ರಧಾನಿಯನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಸೋಮವಾರ ಮಧ್ಯಾಹ್ನ 3:30ಕ್ಕೆ  ಪ್ರಧಾನಿ ಆಗಮಿಸಲಿದ್ದು, ಒಂದು ಗಂಟೆಯಲ್ಲಿ ಸಮಾರಂಭ ಮುಗಿಯಲಿದೆ. ಈ ಎಚ್‌ಎಎಲ್ ಘಟಕಕ್ಕೆ ಪ್ರಧಾನಿ ಮೋದಿಯವರೇ ಶಂಕುಸ್ಥಾಪನೆ ಮಾಡಿದ್ದರು. ಇದೀಗ ಅವರೇ  ಉದ್ಘಾಟನೆಯನ್ನೂ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ 80 ಸಾವಿರ ಬಿಜೆಪಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಚ್.ರವಿಶಂಕರ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

Read More

ಜಾರ್ಖಂಡ್‌ನ ಬುರ್ಹಾ ಪಹಾಡ್ ಪ್ರದೇಶದಲ್ಲಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಸ್ತ್ರಾಸ್ತ್ರಗಳು ಮಾವೋವಾದಿಗಳದ್ದು ಎಂದು ಶಂಕಿಸಲಾಗಿದೆ. ಪೊಲೀಸರು ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ನಡೆಸಿದ ಶೋಧದಲ್ಲಿ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ಪ್ರಬಲ ಮಾವೋವಾದಿಗಳ ಉಪಸ್ಥಿತಿಯನ್ನು ಹೊಂದಿರುವ ಪ್ರದೇಶವಾಗಿದೆ.ಈ ಶೋಧದಲ್ಲಿ ಪ್ರಬಲ ಸ್ಫೋಟಕ್ಕೆ ಕಾರಣವಾಗುವ ಸ್ಫೋಟಕಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದು 1990 ರ ದಶಕ ಮತ್ತು 2000 ರ ದಶಕದ ಆರಂಭದಲ್ಲಿ ಮಾವೋವಾದಿಗಳು ಪೊಲೀಸರೊಂದಿಗೆ ಅನೇಕ ಹಿಂಸಾತ್ಮಕ ಘರ್ಷಣೆಗಳನ್ನು ಹೊಂದಿದ್ದ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಇನ್ನೂ ಮಾವೋವಾದಿಗಳ ಉಪಸ್ಥಿತಿ ಇದೆ ಎಂಬ ಗುಪ್ತಚರ ಮಾಹಿತಿ ಆಧರಿಸಿ ಶೋಧ ನಡೆಸಲಾಗಿತ್ತು. ಕಳೆದ ಕೆಲವು ದಿನಗಳ ಹಿಂದೆ ಈ ಪ್ರದೇಶದಲ್ಲಿ ಮಾವೋವಾದಿಗಳು ಅಡಗಿಕೊಳ್ಳಲು ಬಳಸುತ್ತಿದ್ದ ಬಂಕರ್ ಪತ್ತೆಯಾಗಿತ್ತು. ಈ ಪ್ರದೇಶದಲ್ಲಿ ತೀವ್ರ ಶೋಧ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಈ ಪ್ರದೇಶದಲ್ಲಿ ಮಾವೋವಾದಿಗಳ ಉಪಟಳ ಇನ್ನೂ ಇದೆ ಎಂಬುದು ರಹಸ್ಯ ಮಾಹಿತಿ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…

Read More

ಬೆಳಗಾವಿ: ಮಹಾನಗರ ಪಾಲಿಕೆ ಮಹಾಪೌರ ಹಾಗೂ ಉಪಮಾಪೌರ ಚುನಾವಣೆ ಫೆಬ್ರುವರಿ 6ರಂದು ನಡೆಯಲಿದೆ. ಕಳೆದ ಒಂದೂವರೆ ವರ್ಷಗಳ ಬಳಿಕ ಈ ಚುನಾವಣೆ ನಡೆಯುತ್ತಿರುವುದು ಬೆಳಗಾವಿಯಲ್ಲಿ ಬಹಳ ಕುತೂಹಲವನ್ನು ಮೂಡಿಸಿದೆ. 2021ರಲ್ಲಿ ಮಹಾನಗರ ಪಾಲಿಕೆ ಚುನಾವಣೆ ನಡೆದಿದ್ದು ಇದೇ ಮೊದಲು ಬಾರಿಗೆ ರಾಷ್ಟ್ರೀಯ ಮತ್ತು ಕ್ಷೇತ್ರೀಯ ಪಕ್ಷಗಳು ತಮ್ಮ ಚುನಾವಣೆ ಚಿಹ್ನೆಗಳನ್ನು ಬಳಸಿಕೊಂಡು ಚುನಾವಣೆ ಎದುರಿಸಿದ್ದವು. ಬೆಳಗಾವಿ ಮಹಾನಗರ ಪಾಲಿಕೆ ಮೊದಲಿನಿಂದಲೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪ್ರಬಲ ಮತ್ತು ಭದ್ರಕೋಟೆಯಾಗಿತ್ತು. ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಮಣಿಸಲು ರಾಷ್ಟ್ರೀಯ ಪಕ್ಷಗಳು ತನ್ನದೇ ಆದಂತ ರಣನೀತಿಯನ್ನು ಅನುಸರಿಸಿಕೊಂಡವು. ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಒಂದು ಪಕ್ಷಕ್ಕೆ ಸ್ಪಷ್ಟವಾದ ಬಹುಮತವನ್ನುಪಡೆದುಕೊಂಡಿರುವ ಪಕ್ಷವೆಂದರೆ ಭಾರತೀಯ ಜನತಾ ಪಕ್ಷ 58  ವಾರ್ಡ್ ಗಳಲ್ಲಿ ಭಾರತೀಯ ಜನತಾ ಪಕ್ಷ 35 ಅಭ್ಯರ್ಥಿಗಳು ವಿಜಯಶಾಲಿಯಾಗಿ ಬಂದರೆ ಕಾಂಗ್ರೆಸ್ ನ 10 ಅಭ್ಯರ್ಥಿಗಳು ಜಯಭೇರಿ ಭಾರಿಸಿದವು. ಎ.ಐ.ಎಂ.ಐ.ಎಂ ಪಕ್ಷ ಒಂದು ಸದಸ್ಯರನ್ನು ಹೊಂದಿದ್ದರೆ 12 ಜನ ಪಕ್ಷತರು ಇದ್ದಾರೆ ಇದೇ ಮೊದಲ ಬಾರಿಗೆ…

Read More

ಬೆಂಗಳೂರು: ಇತ್ತಿಚಿನ ದಿನಗಳಲ್ಲಿ ಕ್ರೈಂ ಮತ್ತು ಹಾರರ್ ಸಿನಿಮಾಗಳ ಮಾದರಿಯಲ್ಲಿ ಕೊಲೆ, ಸೂಲಿಗೆಗಳು ನಡೆಯುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಇದೇ ಮಾದರಿಯಲ್ಲಿ ರಾಜಧಾನಿಯ ಅಕ್ಷಯನಗರದಲ್ಲಿ ಒಂದು ಘಟನೆ ನಡೆದಿದ್ದು ಮಲಯಾಳಂ ಕೋಲ್ಡ್ ಕೇಸ್ ಸಿನಿಮಾದಲ್ಲಿ ತೋರಿಸುವ ರೀಲ್​ ಕಥೆ ಇಲ್ಲಿ ರಿಯಲ್​ ಆಗಿದೆ. ಬೆಂಗಳೂರಿನ ಅಕ್ಷಯನಗರದ ಹುಳಿಮಾವು ಮರವೊಂದರ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಅವಶೇಷಗಳು ಪತ್ತೆಯಾಗಿವೆ. ಮರದ ಕೊಂಬೆಯಲ್ಲಿ ನೇತಾಡುತಿದ್ದ ತಲೆ ಬುರುಡೆ ಪತ್ತೆಯಾಗಿದ್ದು ಶವ 6 ತಿಂಗಳಿಂದ ಕೊಳೆಯುತ್ತಿತ್ತು. ಫೆ.2 ರಂದು ಪೊಲೀಸರು ಮೂತ್ರ ವಿಸರ್ಜನೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ನಿನ್ನೆ ಬೆಳಗ್ಗೆ ನಮಗೆ ಮಾನವನ ಅಸ್ತಿಪಂಜರ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ವೇಳೆ ಮಹಿಳೆಯ ಚಪ್ಪಲಿ, ಅಲ್ಲದೆ ಕುತ್ತಿಗೆ ಬಳಸುವ ನೆಕ್ಲೆಸ್ ಎಲ್ಲವೂ ಪತ್ತೆಯಾಗಿತ್ತು. ಹೀಗಾಗಿ ನಾವು ಮಿಸ್ಸಿಂಗ್ ಕೇಸ್ ಗಳನ್ನ ಹುಡುಕಲು ಶುರುಮಾಡಿದ್ವಿ. ನಾವು ಕಳೆದ ವರ್ಷ ಜುಲೈನಲ್ಲಿ ಹುಳಿಮಾವು ಠಾಣೆಯಲ್ಲಿ ನೇಪಾಳಿ ಮಹಿಳೆ ನಾಪತ್ತೆ ಕೇಸ್ ದಾಖಲಾಗಿತ್ತು. ಈಗ ಅಲ್ಲಿ ಸಿಕ್ಕಿರುವ…

Read More

ವಿಜಯಪುರ: ಕಳೆದ ಎರಡು ವರ್ಷಗಳಿಂದ ವಿಜಯಪುರ ಜಿಲ್ಲೆಯ ಗಡಿ ಭಾಗಗಳಲ್ಲಿ ಭೂಕಂಪನದ ಅನುಭವ ಉಂಟಾಗುತ್ತಿದೆ ಎಂದು ಜನರು ಹೇಳುತ್ತಿರುವ ಬೆನ್ನಲ್ಲೇ ಗುರುವಾರ ಭೂಕಂಪನದ ಅನುಭವ ಉಂಟಾಗಿದೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಘೋಣಸಗಿ, ಕಳ್ಳಕವಟಗಿ, ಹುಬನೂರ. ಟಕ್ಕಳಕಿ, ಸಿದ್ದಾಪುರ ಕೆ. ಗ್ರಾಮದಲ್ಲಿ ಭೂಮಿ ಕಂಪಿಸಿದೆ ಎಂದು ಜನರು ಹೇಳುತ್ತಿದ್ದಾರೆ. ಕರ್ನಾಟಕದ ಗಡಿ ಹಾಗೂ ಮಹಾರಾಷ್ಟ್ರದ ಬಿವರಗಿ, ಮೊರಬಗಿ ಗ್ರಾಮದ ಸುತ್ತಮುತ್ತ ಸಹ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿ 10.05 ಮತ್ತು ಇಂದು ಬೆಳಗಿನ ಜಾವ 1.47ಕ್ಕೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.7 ರಷ್ಟು ತೀವ್ರತೆ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ರಾಯಚೂರು ಜಿಲ್ಲೆ ‌ಲಿಂಗಸೂಗೂರು ಪಟ್ಟಣದ ವಿಸಿಬಿ ಕಾಲೇಜಿನಲ್ಲಿ ಕ್ಲಾಸ್ ಅರ್ಧಕ್ಕೆ ಬಿಟ್ಟು ಹಾಸ್ಟೆಲ್‌ಗೆ (Hostel) ಬಂದು ಫ್ಯಾನ್‌ಗೆ ನೇಣು ಹಾಕಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಲಿಂಗಸೂಗೂರು ತಾಲೂಕಿನ ಗೋನವಾಟ್ಲ ತಾಂಡಾದ ಐಶ್ವರ್ಯ (18) ಎಂದು ತಿಳಿದು ಬಂದಿದೆ. ‌ಲಿಂಗಸೂಗೂರು ವಿಶ್ವೇಶ್ವರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದ ಐಶ್ವರ್ಯ ಆತ್ಮಹತ್ಯೆಗೆ (Suicide) ಪ್ರಾಂಶುಪಾಲರೇ ಕಾರಣ ಎಂದು ವಿದ್ಯಾರ್ಥಿನಿ ಪೋಷಕರು ಆರೋಪ ಮಾಡಿದ್ದಾರೆ. ಇನ್ನೂ ವಿದ್ಯಾರ್ಥಿನಿ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದರೂ ಇದುವರೆಗೂ ಮೃತದೇಹ ತೆಗೆಯಲು ಪೋಷಕರು ಬಿಡದೆ ವಸತಿ ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಅಲ್ಲದೇ ಪ್ರಾಂಶುಪಾಲರು ಬರೋ ತನಕ ಮೃತದೇಹ ತೆಗೆಯಲು ಬಿಡಲ್ಲ ಎಂದು ಪೋಷಕರು ಹಾಗೂ ಸಂಬಂಧಿಕರು ರಾತ್ರಿಯ ತನಕ ಪಟ್ಟು ಹಿಡಿದಿದ್ದಾರೆ. ಸದ್ಯ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಲಿಂಗಸೂಗೂರು ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಕಾಲೇಜು ಆಡಳಿತ ‌ಮಂಡಳಿ ಜೊತೆಗೆ ಚರ್ಚೆ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಲಿಂಗಸೂಗೂರು…

Read More

ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ(KMF) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವುದರ ಮೂಲಕ ಅಭ್ಯರ್ಥಿಗಳಿಗೆ ಸಿಹಿಸುದ್ದಿ ನೀಡಿದೆ. ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಹುದ್ದೆಗಳು ಖಾಲಿ ಇದ್ದು194 ಟೆಕ್ನಿಷಿಯನ್, ಕೆಮಿಸ್ಟ್​, ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ನೇಮಕಾತಿ ಅಧಿಸೂಚನೆ ಪ್ರಕಾರ ಮಾರ್ಚ್ 3, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ)- 17, ಸಹಾಯಕ ವ್ಯವಸ್ಥಾಪಕರು (ಆಡಳಿತ)- 1, ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್)- 3, ಎಂಐಎಸ್ /ಸಿಸ್ಟಂ ಆಫೀಸರ್- 1, ಮಾರುಕಟ್ಟೆ ಅಧಿಕಾರಿ- 2, ತಾಂತ್ರಿಕ ಅಧಿಕಾರಿ(ಅಭಿಯಂತರ)-2, ತಾಂತ್ರಿಕ ಅಧಿಕಾರಿ(ಗುಣನಿಯಂತ್ರಣ)- 2, ತಾಂತ್ರಿಕ ಅಧಿಕಾರಿ(ಡಿಟಿ)- 14,ಕೆಮಿಸ್ಟ್ (ದರ್ಜೆ 1)- 4,ವಿಸ್ತರಣಾಧಿಕಾರಿ (ದರ್ಜೆ 3)- 17, ಆಡಳಿತ ಸಹಾಯಕ (ದರ್ಜೆ 2)- 17, ಲೆಕ್ಕ ಸಹಾಯಕ (ದರ್ಜೆ 2)- 12, ಮಾರುಕಟ್ಟೆ ಸಹಾಯಕ (ದರ್ಜೆ 2)- 10,…

Read More