Subscribe to Updates
Get the latest creative news from FooBar about art, design and business.
- ಮಧುಗಿರಿ: ಸೊಳ್ಳೆಗಳ ವಿಪರೀತ ಕಾಟಕ್ಕೆ ಬಳಲಿ ಬೆಂಡಾದ ಜನ
- ಮಧುಗಿರಿ: ಬಿಜೆಪಿ ಒಬಿಸಿ ಮೋರ್ಚಾ ಸಭೆ
- ಬೀದರ್ | ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತನಿಂದ ಉರುಳು ಸೇವೆ
- ನ.19ರಂದು ಎಲ್.ಜಿ.ಹಾವನೂರು ಪ್ರತಿಮೆ ಅನಾವರಣ
- ತುಮಕೂರು | ನವೆಂಬರ್ 18ರಂದು ನಗರದಲ್ಲಿ ಸಹಕಾರ ಸಪ್ತಾಹ
- ತುಮಕೂರು | ನ.30ರಂದು ರಾಪಿಡ್ ಚೆಸ್ ಟೂರ್ನಮೆಂಟ್
- ಕಬ್ಬು ಬೆಳೆಗಾರರ ಸಮಸ್ಯೆ ಸೇರಿ ಹಲವು ಸಮಸ್ಯೆ ಬಗ್ಗೆ ಪ್ರಧಾನಿಗಳ ಜತೆ ಸಿಎಂ ಚರ್ಚೆ: ಸಚಿವ ಪರಮೇಶ್ವರ್
- ಆಗ್ನೆಯ ಪದವೀಧರರ ಮತದಾರರರ ನೋಂದಣಿ: ನ.25ರಿಂದ ಡಿ.10ರವರೆಗೆ ಮುಂದೂಡಿಕೆ
Author: admin
ನವದೆಹಲಿ: ಜನವರಿ 31 ರಂದು ಸಂಸತ್ ಬಜೆಟ್ ಅಧಿವೇಶನ ಆರಂಭವಾಗಿ ಏಪ್ರಿಲ್ 6 ರವರೆಗೂ ನಡೆಯಲಿದೆ. ಫೆಬ್ರವರಿ 1 ರಂದು ಬಜೆಟ್ ಮಂಡಿಸಲಾಗುತ್ತದೆ. ಒಟ್ಟು 27 ದಿನಗಳ ಕಾಲ ಸಂಸತ್ ಬಜೆಟ್ ಅಧಿವೇಶನ ನಡೆಯಲಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮೊದಲ ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅಧಿವೇಶನದ ಮೊದಲ ಅವಧಿ ಫೆಬ್ರವರಿ 14ರಂದು ಮುಕ್ತಾಯವಾಗಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಗುಂಡ್ಲುಪೇಟೆ: ಕೌಟುಂಬಿಕ ಕಲಹಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಹಳ್ಳದಕೇರಿ ನಿವಾಸಿ ಪವಿತ್ರಾ(27) ಮೃತ ದುರ್ದೈವಿ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಂದು ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ, ಗುಂಡ್ಲುಪೇಟೆ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ತುರುವೇಕೆರೆ.ತಾಲೂಕಿನ ಕಸಬಾ ಹೋಬಳಿ, ಕೊಡಗಿಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸೂಳೆಕೆರೆ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕರಾದ ಮಸಾಲ ಜಯರಾಮ್ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಗುದ್ದಲಿ ಪೂಜೆಯಲ್ಲಿ ಆದಿಜಾಂಭವ ಸಮಾಜದ ನಿವೃತ್ತ ಮುಖ್ಯೋಪಾಧ್ಯಾಯರಾದ ಆರ್. ಚಂದ್ರಯ್ಯ ಕೂಡ ಆಗಮಿಸಿದ್ದರು, ಪೂಜೆಯ ನಂತರ ಆರ್ ಚಂದ್ರಯ್ಯ ಮನೆಗೆ ಭೇಟಿಕೊಟ್ಟ ಶಾಸಕ ಮಸಾಲ ಜಯರಾಮ್ ಅವರ ಮನೆಯಲ್ಲಿ ತಂಪು ಪಾನೀಯ ಬಿಸ್ಕೆಟ್ ಸೇವಿಸಿದರು. ತದನಂತರ ಅವರ ಗೃಹದಲ್ಲಿ ಕೆಲವು ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರುಗಳು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಇದೇ ವೇಳೆ ಮಾತನಾಡಿದ ಆರ್.ಚಂದ್ರಯ್ಯ, ಶಾಸಕರು ನಮ್ಮನ್ನು ಗುರುತಿಸಿ ನಮ್ಮ ಸಮಸ್ಯೆಗಳನ್ನು ಆಲಿಸಿ ಅಭಿವೃದ್ಧಿಯತ್ತ ಗಮನ ಕೊಡುತ್ತಿದ್ದು, ಇಂದು ಕೂಡ ನಮ್ಮ ಊರಿನಲ್ಲಿ ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಹಾಗಾಗಿ ನಾವು ಬಿಜೆಪಿ ಸಿದ್ದಾಂತವನ್ನು ಒಪ್ಪಿ ಬಿಜೆಪಿ ಪಕ್ಷ ಸೇರ್ಪಡೆಗೊಳ್ಳುತ್ತಿದ್ದೇವೆ ಎಂದು ಹೇಳಿದರು, ಇದೇ ಸಮಯದಲ್ಲಿ ಆದಿ ಜಾಂಬವ ಸಮಾಜದ ನಾಗರಾಜು, ಬಸವರಾಜು, ಮುನಿಸ್ವಾಮಿ, ಇನ್ನು ಅನೇಕ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ…
ತುರುವೇಕೆರೆ: ಪಟ್ಟಣದ ದಬ್ಬೇಘಟ್ಟ ರಸ್ತೆಗೆ ಹೊಂದಿಕೊಂಡಿರುವ ಮುತ್ತುರಾಯನಗರ ಬಡಾವಣೆಯಲ್ಲಿ ಮಂಜುಳಾ ಅನಂತ್ ಕುಮಾರ್ ಎಂಬುವರ ಮನೆಗೆ ಹಾಡಹಗಲೇ ಕನ್ನ ಹಾಕಿರುವ ಘಟನೆ ನಡೆದಿದೆ ಮಧ್ಯಾಹ್ನ ಸುಮಾರು 2:30 ರಿಂದ ಸಂಜೆ 5:00 ಒಳಗೆ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕನ್ನ ಹಾಕಿದ ಕಳ್ಳರು, 100 ರಿಂದ 110 ಗ್ರಾಂ ಚಿನ್ನ, ಒಂದು ಕೆ.ಜಿ. ಬೆಳ್ಳಿ 2,70,000 ನಗದನ್ನು ದೋಚಿ ಪರಾರಿಯಾಗಿದ್ದಾರೆ. ಮನೆಯ ಮಾಲೀಕರಾದ ಮಂಜುಳಾರವರು ಎರಡು ದಿನಗಳ ಹಿಂದೆ ಯಾವುದೋ ಕಾರ್ಯನಿಮಿತ್ತ ತಮ್ಮ ಸಂಬಂಧಿಕರ ಊರಿಗೆ ತೆರಳಿದ್ದಾರೆ ಮನೆಯಲ್ಲಿ ಅವರ ಪತಿ ಆನಂದ್ ಕುಮಾರ್ ಒಬ್ಬರೇ ಇದ್ದು, ಇವರು ಬೆಸ್ಕಾಂ ಇಲಾಖೆಯಲ್ಲಿ ಮೀಟರ್ ರೀಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಎಂದಿನಂತೆ ಅವರು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದಾರೆ . ಮಧ್ಯಾಹ್ನ 2 ಗಂಟೆಗೆ ಮನೆಗೆ ಊಟಕ್ಕೆಂದು ಬಂದಿದ್ದಾರೆ, ಊಟ ಮುಗಿಸಿಕೊಂಡು ನಂತರ ಮನೆಯ ಬೀಗ ಹಾಕಿಕೊಂಡು ಮೀಟರ್ ರೀಡಿಂಗ್ ಕೆಲಸಕ್ಕೆ ಹೊರಗೆ ಹೋಗಿದ್ದಾರೆ. ಇದನ್ನೇ ಕಾದು ಕುಳಿತು ಕಳ್ಳರು ಮನೆಯ ಮುಖ್ಯ ದ್ವಾರದ…
ನಮ್ಮ ಸರ್ಕಾರ ಬಂದ ನಂತರ 9000 ಕೋಟಿ ರೂ. ನ್ನು ಎಸ್ಕಾಂಗಳಿಗೆ ನೀಡಿ ನೀವು ಮಾಡಿದ್ದ ಆಡಳಿತ ವೈಫಲ್ಯ ಸರಿಪಡಿಸಿದ್ದೇವೆ, ಮತಕ್ಕಾಗಿ ಇಂಧನ ಮಾರಾಟ ಮಾಡಬೇಡಿ ಎಂಬ ಸಚಿವ ಸುನೀಲ್ ಕುಮಾರ್ ಹೇಳಿಕೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಸ್ಕಾಂ ಗಳಿಗೆ ನೀಡಿದ್ದು 6000 ಕೋಟಿಯೋ? 9000 ಕೋಟಿಯೋ? ಯಾವುದು ನಿಜ ಲೆಕ್ಕ? ಯಾವುದು ಸುಳ್ಳು ಲೆಕ್ಕ? ಎಂಬುದನ್ನು ಸಚಿವ ಸುನೀಲ್ ಕುಮಾರ್ ಅವರು ಮೊದಲು ಹೇಳಬೇಕು ಎಂದು ಸಿದ್ದರಾಮಯ್ಯ ಪ್ರಶ್ನೆಗಳ ಬಾಣ ಪ್ರಯೋಗಿಸಿದ್ದಾರೆ. 2013ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಹೊತ್ತಿಗೆ ಹಿಂದಿನ ಸರ್ಕಾರ ವಿದ್ಯುತ್ ಇಲಾಖೆಯ ಮೇಲೆ ದೊಡ್ಡ ಮೊತ್ತದ ಸಾಲದ ಗಂಟನ್ನು ಹೊರಿಸಿ ಹೋಗಿತ್ತು, ಸಾಲ ಮಾಡಿ ಈ ಎಸ್ಕಾಂಗಳ ಬಾಕಿ ಮೊತ್ತ ತೀರಿಸಿ, ಕುತ್ತಿಗೆವರೆಗೂ ಮುಳುಗಿದ್ದ ಎಸ್ಕಾಂಗಳನ್ನು ಮೇಲೆತ್ತಿದವರು ನಾವು. ಅಗತ್ಯ ಇರುವ ಕ್ಷೇತ್ರಕ್ಕೆ ಹಣ ಹಾಕುವುದನ್ನು ನಷ್ಟ ಎನ್ನುವುದಿಲ್ಲ, ಬದಲಾಗಿ ಬಂಡವಾಳ ಹೂಡಿಕೆ ಎನ್ನುತ್ತಾರೆ ಎಂಬ…
ಬೆಂಗಳೂರು : ಸ್ಯಾಂಡಲ್ ವುಡ್ ನಿರ್ದೇಶಕ, ನಟ ಗುರುಪ್ರಸಾದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಬೆಂಗಳೂರಿನ ಗಿರಿನಗರ ಠಾಣೆ ಪೊಲೀಸರು ನಿರ್ದೇಶಕ ಗುರು ಪ್ರಸಾದ್ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. ಗುರುಪ್ರಸಾದ್ ಕನ್ನಡ ಚಿತ್ರರಂಗದ ನಟ ಮತ್ತು ನಿರ್ದೇಶಕ. ನಿರ್ದೇಶಕರಾಗಿ ಅವರ ಚೊಚ್ಚಲ ಚಿತ್ರ ಮಠ (2006) ಈ ಸಿನಿಮಾ ಅಂದು ಸಖತ್ ಸದ್ದು ಮಾಡಿತ್ತು. ನಿರ್ದೇಶಕರಾಗಿ ಅವರ ಎರಡನೇ ಚಿತ್ರ ಎದ್ದೇಳು ಮಂಜುನಾಥ ಈ ಎರಡೂ ಚಲನಚಿತ್ರಗಳನ್ನು ಉತ್ತಮ ವಿಮರ್ಶೆಗಳೊಂದಿಗೆ ಅನೇಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಗಣ್ಯ ವ್ಯಕ್ತಿಗಳ ಪ್ರೀತಿಯ ಮಾಮಾ, ಸ್ಯಾಂಟ್ರೋ ರವಿ, ಇಂದು ಕರ್ನಾಟಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತನ್ನ ಅಕ್ರಮ ದಂಧೆಗಳಿಂದ ಕೋಟ್ಯಂತರ ರೂ. ಆಸ್ತಿ ಮಾಡಿರುವ ಕೆ.ಎಸ್.ಮಂಜುನಾಥ್ ಯಾನೆ ಸ್ಯಾಂಟ್ರೋ ರವಿಯ ಕಥೆಗಳು ದಿನಕ್ಕೊಂದು ಟ್ವಿಸ್ಟ್ ಪಡೆದುಕೊಂಡಿತ್ತು. ಸ್ಯಾಂಟ್ರೋ ರವಿಗೆ ಮನೆ ಬಾಡಿಗೆಗೆ ನೀಡಿದ್ದ ವ್ಯಕ್ತಿ ಹೇಳುವ ಪ್ರಕಾರ, ಸ್ಯಾಂಟ್ರೋ ರವಿ ಅಪಾರ್ಟ್ ಮೆಂಟ್ ಬಾಡಿಗೆ ಪಡೆದುಕೊಂಡಿದ್ದಾಗ, ಮನೆಗೆ ನಟಿಯರು, ಮಾಡೆಲ್ ಗಳು, ಸರ್ಕಾರಿ ಅಧಿಕಾರಿಗಳು ಬರುತ್ತಿದ್ದರು ಎಂದು ಹೇಳಿದ್ದಾರೆ. 2000ನೇ ಇಸವಿಯಿಂದ 2005ರವರೆಗೆ ಮಂಡ್ಯ, ಮೈಸೂರಿನಲ್ಲಿ ತನ್ನ ವೃತ್ತಿಯನ್ನು ಆರಂಭಿಸಿದ್ದ ಸ್ಯಾಂಟ್ರೋ ರವಿ, ಗಣ್ಯ ವ್ಯಕ್ತಿಗಳಿಗೆ ಹುಡುಗಿಯರನ್ನು ಸಪ್ಲೈ ಮಾಡುವ ಕೆಲಸ ಮಾಡುತ್ತಿದ್ದ. ತನ್ನ ಪತ್ನಿ ವಕೀಲೆ ಎಂದು ಬೆದರಿಸಿ ಹಲವರಿಗೆ ವಂಚಿಸಿದ್ದ ಎನ್ನಲಾಗಿದೆ. ತನ್ನ ಶೋಕಿಗಾಗಿ ಮೂರು ನಾಲ್ಕು ಕಾರುಗಳನ್ನು ಈತ ಇಟ್ಟುಕೊಂಡಿದ್ದ. ಆರ್.ಆರ್ ನಗರ ಪೊಲೀಸರ ಎದುರೇ ಸ್ಯಾಂಟ್ರೋ ರವಿ ತಾವು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನಂತೆ.. ಸರಿ ಸುಮಾರು 3-4 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಸೇವೆ…
ಬೆಂಗಳೂರು: ರಾಜ್ಯದಲ್ಲಿ ಭಾರೀ ಚರ್ಚೆಗೀಡಾಗಿದ್ದ ಸ್ಯಾಂಟ್ರೋ ರವಿ ಕೇಸ್ ಗೆ ಇದೀಗ ಹೊಸ ಟ್ವಿಸ್ಟ್ ದೊರಕಿದ್ದು, ಕೊನೆಗೂ ಸ್ಯಾಂಟ್ರೋ ರವಿ ಯಾನೆ ಕೆ.ಎಸ್.ಮಂಜುನಾಥ್ ನ್ನು ಪೊಲೀಸರು ಬಂಧಿಸಿದ್ದಾರೆ. ಸ್ಯಾಂಟ್ರೋ ರವಿ ಗುಜರಾತ್ ನಲ್ಲಿ ತಲೆ ಮರೆಸಿಕೊಂಡಿದ್ದು, ಅಲ್ಲಿಗೆ ತೆರಳಿದ ಕರ್ನಾಟಕ ಪೊಲೀಸರು ಆತನನ್ನು ಬಂಧಿಸಿ ಬೆಂಗಳೂರಿಗೆ ಕರೆತರುತ್ತಿದ್ದಾರೆ. ಸ್ಯಾಂಟ್ರೋ ರವಿ ಬಂಧನಕ್ಕೆ ನಾಲ್ವರು ಎಸ್ ಪಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು. ರಾಮನಗರ, ಮಂಡ್ಯ, ಮೈಸೂರು ಹಾಗೂ ಕೇರಳದಲ್ಲಿ ಕಾರ್ಯಾಚರಣೆ ಮಾಡಲಾಗಿತ್ತು. ಸ್ಯಾಂಟ್ರೋ ರವಿ ಗುಜರಾತ್ ನಲ್ಲಿರುವ ಸುಳಿವು ಪೊಲೀಸರಿಗೆ ಲಭ್ಯವಾಗಿದ್ದು, ರಾಜ್ಯ ಪೊಲೀಸರ ತಂಡ ಗುಜರಾತ್ ನಲ್ಲಿ ಸ್ಯಾಂಟ್ರೋ ರವಿಯನ್ನು ಬಂಧಿಸಿ, ರಾಜ್ಯಕ್ಕೆ ಕರೆತರಲು ಕ್ರಮಕೈಗೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ವ್ಯಕ್ತಿಯೋರ್ವ ಮಹಿಳೆ ಮೇಲೆ ಮೂತ್ರ ಮಾಡಿದ ಘಟನೆ ದೊಡ್ಡ ಸುದ್ದಿಯಾಗಿತ್ತು. ಇದೀಗ ಆರೋಪಿ ಶಂಕರ್ ಮಿಶ್ರಾ, ನಾನು ಮೂತ್ರ ಮಾಡಿಲ್ಲ, ಮಹಿಳೆ ತಾನಾಗಿಯೇ ಮೂತ್ರ ಮಾಡಿಕೊಂಡಿದ್ದಾಳೆ ಎಂದು ವಾದಿಸಿದ್ದಾನೆ. ದೆಹಲಿ ಕೋರ್ಟ್ ನಲ್ಲಿ ಶಂಕರ್ ಮಿಶ್ರಾ ತನ್ನ ವಕೀಲರ ಮೂಲಕ ಈ ವಾದ ಮಂಡಿಸಿದ್ದಾನೆ. ನಾನು ದೂರುದಾರರ ಮೇಲೆ ಮೂತ್ರ ವಿಸರ್ಜನೆ ಮಾಡಿಲ್ಲ ಎಂದು ವಾದಿಸಿದ್ದಾನೆ. ದೂರುದಾರ ಮಹಿಳೆಯ ಆಸನವನ್ನು ನಿರ್ಬಂಧಿಸಲಾಗಿತ್ತು. ಶಂಕರ್ ಮಿಶ್ರಾಗೆ ಮಹಿಳೆ ಇದ್ದ ಸ್ಥಳಕ್ಕೆ ಹೋಗಲು ಸಾಧ್ಯವಿಲ್ಲ. ದೂರುದಾರಳಿಗೆ ಮೂತ್ರ ವಿಸರ್ಜಿಸುವ ಸಮಸ್ಯೆ ಇದೆ. ಅವಳು ಕಥಕ್ ಡಾನ್ಸರ್ ಆಗಿದ್ದಾಳೆ. ಶೇ.80ರಷ್ಟು ಕಥಕ್ ಡಾನ್ಸ್ರರ್ ಗೆ ಈ ಸಮಸ್ಯೆ ಇದೆ ಎಂದು ಮಿಶ್ರಾನ ವಕೀಲರು ವಾದಿಸಿದ್ದಾರೆ. ವಿಮಾನದ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗಲು ಸಾಧ್ಯವಿಲ್ಲ ಅನ್ನೋ ಮಿಶ್ರಾನ ವಾದವನ್ನು ತಳ್ಳಿ ಹಾಕಿರುವ ನ್ಯಾಯಾಧೀಶರು, ನಾನು ಕೂಡ ವಿಮಾನದಲ್ಲಿ ಪ್ರಯಾಣಿಸಿದ್ದೇನೆ ಯಾವುದೇ ಸಾಲಿನಲ್ಲಿ ಬಂದರೂ ಆಸನದತ್ತ ಹೋಗಬಹುದು ಎಂದಿದ್ದು, ಈ ಬಗ್ಗೆ…
ಸುಮಾರು 120ಕ್ಕೂ ಹೆಚ್ಚು ಸ್ತ್ರೀಯರ ಮೇಲೆ ಅತ್ಯಾಚಾರ ನಡೆಸಿದ್ದ ಜಿಲೇಬಿ ಬಾಬಾ ಅಲಿಯಸ್ ಅಮರ್ ವೀರ್ ನ ವಿರುದ್ಧ ಸಾಲು ಸಾಲು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. 2017ರಲ್ಲಿ ಈತನ ಮೇಲೆ ಮೊದಲ ಬಾರಿಗೆ ಕೇಸ್ ದಾಖಲಾಯ್ತು. ಆದರೆ ಇದರಲ್ಲಿ ಈತ ಜಾಮೀನು ಪಡೆದುಕೊಂಡಿದ್ದ, 2018ರಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಇದರಲ್ಲೂ ಬಾಬಾ ಜಮೀನು ಪಡೆದುಕೊಂಡಿದ್ದ. 2018ರಲ್ಲೇ ಮತ್ತೊಂದು ಅತ್ಯಾಚಾರ ಕೇಸ್ ಈತನ ಮೇಲೆ ದಾಖಲಾಗಿತ್ತು. ಜಿಲೇಬಿ ಬಾಬಾನ ಅಶ್ಲೀಲ ವಿಡಿಯೋವೊಂದು ಹೊರ ಬಂದ ವೇಳೆ ಪೊಲೀಸರು ಈತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಆತನ ಆಶ್ರಮಕ್ಕೆ ದಾಳಿ ನಡೆಸಿದ ವೇಳೆ ಮಾದಕ ದ್ರವ್ಯ, ಮಾತ್ರೆಗಳು, ವಿಸಿಆರ್ ಮಾತ್ರವಲ್ಲದೇ ಆಕ್ಷೇಪಕಾರಿ ವಸ್ತುಗಳು ಪತ್ತೆಯಾಗಿದ್ದವು. ಬಾಬಾ ನ ಮೊಬೈಲ್ ಪಡೆದು ಪರಿಶೀಲಿಸಿದಾಗ ಸುಮಾರು 120 ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದವು. ಈ ಕಾಮಿ ಬಾಬಾನ ಮೊಬೈಲ್ ನಲ್ಲಿದ್ದ 120 ವಿಡಿಯೋ ಒಬ್ಬರದ್ದಲ್ಲ, ಬದಲಾಗಿ 120 ಮಂದಿ ಬೇರೆ ಬೇರೆ ಮಹಿಳೆಯರದ್ದಾಗಿತ್ತು. ಬಾಲಕಿಯೋರ್ವಳ ಮೇಲೆ 2 ಬಾರಿ…