Subscribe to Updates
Get the latest creative news from FooBar about art, design and business.
- ಜೀವ ಪರವಾದ ಸುಸ್ಥಿರ ಸಂಶೋಧನೆಗಳತ್ತ ಗಮನ ಹರಿಸಬೇಕಿದೆ: ಪ್ರೊ.ಎ.ಎಚ್.ರಾಜಾಸಾಬ್
- ಹಣಕ್ಕಾಗಿ ಹೋಟೆಲ್ ಮಾಲೀಕರಿಗೆ ಬ್ಲ್ಯಾಕ್ ಮೇಲ್: ಯೂಟ್ಯೂಬ್ ವಾಹಿನಿಯ ಇಬ್ಬರು ಪತ್ರಕರ್ತರ ಬಂಧನ
- ಇಂದಿನಿಂದ ಹುಲಿ ಸಂರಕ್ಷಿತ ಪ್ರದೇಶ ಅರಣ್ಯ ವ್ಯಾಪ್ತಿಯ ಬೇಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ
- ವಿಜೃಂಭಣೆಯಿಂದ ನೆರವೇರಿದ ಗೊರವನಹಳ್ಳಿ ರಥೋತ್ಸವ
- ಕೊಳ್ಳುರ: ಮಕ್ಕಳ ದಿನಾಚರಣೆ, ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ
- ಬೀದರ್: ತೇಗಂಪೂರ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಣೆ
- ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರಪ್ಪ ಕುಟುಂಬಕ್ಕೆ ಧರ್ಮಸ್ಥಳ ಸಂಘದಿಂದ ಧನ ಸಹಾಯ
- ನವೆಂಬರ್ 19: ಚಿಕ್ಕಪೇಟೆ ಶ್ರೀ ಪ್ರಸನ್ನ ಗಂಗಾಧರೇಶ್ವರ ದೇಗುಲದಲ್ಲಿ ಲಕ್ಷ ದೀಪೋತ್ಸವ
Author: admin
‘ಎಂದೆ ಭೂಮಿ’ ಹೆಸರಿನಲ್ಲಿ ಕೇರಳ ಸರ್ಕಾರ ತಮಿಳುನಾಡು ಮತ್ತು ಕೇರಳದ ಗಡಿ ಭಾಗಗಳಲ್ಲಿ ‘ಡಿಜಿಟಲ್’ ಭೂಮಾಪನ ನಡೆಸುತ್ತಿದ್ದು, ತಮಿಳುನಾಡಿನ ಗಡಿಯೊಳಗೆ ಕೇರಳ ರಾಜ್ಯದ ಗಡಿಯನ್ನು ವಿಸ್ತರಿಸುತ್ತಿದೆ. ಡಿಎಂಕೆಯು ವೈಯಕ್ತಿಕ ರಾಜಕೀಯ ಲಾಭಗಳಿಗಾಗಿ ತಮಿಳುನಾಡಿನ ಹಿತಾಸಕ್ತಿಗಳನ್ನು ತ್ಯಾಗ ಮಾಡಿದ ಇತಿಹಾಸವನ್ನು ಹೊಂದಿದೆ; ಇದನ್ನು ಮುಂದುವರಿಸಲು ತಮಿಳುನಾಡು ಬಿಜೆಪಿ ಬಿಡುವುದಿಲ್ಲ. ತಮಿಳುನಾಡಿನ ಒಂದು ಚದರ ಇಂಚು ಮಣ್ಣನ್ನೂ ಕೇರಳ ಸರ್ಕಾರ ತೆಗೆದುಕೊಳ್ಳಲು ತಮಿಳುನಾಡು ಬಿಜೆಪಿ ಬಿಡುವುದಿಲ್ಲ. ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತಮಿಳುನಾಡು :ಚೆನ್ನೈ, ಮಧುರೈ ಮತ್ತು ತಿರುಚ್ಚಿ ಸೇರಿದಂತೆ 25 ವಿಮಾನ ನಿಲ್ದಾಣಗಳನ್ನು 2022 ಮತ್ತು 2025 ರ ನಡುವೆ ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆಗೆ ನೀಡಲಾಗುವುದು ಎಂದು ವಿಮಾನಯಾನ ಸಚಿವಾಲಯ ಸಂಸತ್ತಿಗೆ ತಿಳಿಸಿದೆ. ಕಂಪನಿಗಳು ವಿಮಾನ ನಿಲ್ದಾಣ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಕೈಗೊಳ್ಳಲಿವೆ ಎಂದು ತಿಳಿದು ಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಅಂದರ್ ಬಾಹರ್ ಜೂಜಾಡುತ್ತಿದ್ದ 3 ಮಹಿಳೆಯರು ಸೇರಿದಂತೆ 7 ಜನರನ್ನ ಮೈಸೂರು ಸಿಸಿಬಿ ಪೊಲೀಸರು ಬಂಧಿಸಿ 33,500 ರೂ. ನಗದು ಹಣವನ್ನ ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮೈಸೂರು ನಗರ ಸಿ.ಸಿ.ಬಿ ಪೊಲೀಸರು ಹೆಬ್ಬಾಳು ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಾಳು 2ನೇ ಹಂತದಲ್ಲಿ ದಾಳಿ ನಡೆಸಿ ಮನೆಯ ನೆಲ ಅಂತಸ್ತಿನಲ್ಲಿ ಜೂಜಾಡುತ್ತಿದ್ದ 3 ಮಹಿಳೆಯರು ಸೇರಿ 7 ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ. ಈ ವೇಳೆ ರೂ. 33,500/- ನಗದು ಹಣ ಹಾಗೂ ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದರು. ಈ ಸಂಬಂಧ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರ್ಯಾಚರಣೆಯನ್ನ ಡಿ.ಸಿ.ಪಿ ಗೀತ. ಎಂ.ಎಸ್ ಹಾಗೂ ಸಿ.ಸಿ.ಬಿ. ಘಟಕದ ಎ.ಸಿ.ಪಿ. ಅಶ್ವಥ್ ನಾರಾಯಣ ಅವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಪೊಲೀಸ್ ಇನ್ಸ್‌ಪೆಕ್ಟರ್ ಮಲ್ಲೇಶ್, ಪಿ.ಎಸ್.ಐ. ಪ್ರತಿಭಾ ಜಂಗವಾಡ, ಹೆಬ್ಬಾಳು ಪೊಲೀಸ್ ಠಾಣೆಯ ಪಿ.ಎಸ್.ಐ. ಸಹಿದಾ ಅಮ್ರಿನ್ ಮತ್ತು ಸಿಬ್ಬಂದಿಗಳಾದ ರಾಜು, ಜೋಸೆಫ್ ನರೋನ, ರಾಧೇಶ್, ರವಿ ಕುಮಾರ್, ಸುಬಾನಲ್ಲಾ ರವರು ಮಾಡಿದ್ದಾರೆ.…
ನೇಕಾರರಿಗೆ ನೇಕಾರ ಸಮ್ಮಾನ ಯೋಜನೆ 2 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುವ ಭರವಸೆ ಬೆನ್ನಲ್ಲೇ ಇದೀಗ ನೇಕಾರರಿಗೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತೊಂದು ಶುಭ ಸುದ್ದಿ ನೀಡಿದ್ದಾರೆ.ಹೌದು ನೇಕಾರರಿಗೆ ತಮಿಳುನಾಡಿನ ರೀತಿ ಉಚಿತ ವಿದ್ಯುತ್ ಪೂರೈಸುತ್ತೇವೆ. ನಾಳೆಯೇ ಈ ಬಗ್ಗೆ ಆದೇಶ ಪ್ರಕಟಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನೇಕಾರರಿಗೆ ತಮಿಳುನಾಡಿನ ರೀತಿ ಉಚಿತ ವಿದ್ಯುತ್ ಪೂರೈಸುತ್ತೇವೆ. ಅಲ್ಲಿ (ತಮಿಳುನಾಡು) ಎಷ್ಟು ಫ್ರೀ ಕೊಡುತ್ತಿದೆಯೋ ಅಷ್ಟನ್ನು ನಾವು ಇಲ್ಲಿ ಕೊಡುತ್ತೇವೆ. ಯುನಿಟ್ ಗೆ 80 ರೂ ಇದ್ದು, ಅದನ್ನ 40 ರೂ.ಗೆ ಇಳಿಸುತ್ತೇವೆ. ನಿಮ್ಮ ಪ್ರಮುಖ ಬೇಡಿಕೆಗಳಿಗೆ ನಾನು ಈಗಾಗಲೇ ಒಪ್ಪಿಗೆ ಕೊಟ್ಟಿದ್ದೇನೆ ಎಂದು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಖಂಡನೆ ವ್ಯಕ್ತಪಡಿಸಿದ್ದಾರೆ.ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆಯಾಗುತ್ತಿದೆ. ಅನೈತಿಕ ಮಾರ್ಗದಲ್ಲಿ ಬೊಮ್ಮಾಯಿ ಸರ್ಕಾರ ಬಂದಿದೆ. ರಾಜ್ಯದಲ್ಲಿ ಸಾಕಷ್ಟು ಭ್ರಷ್ಟಾಚಾರ, ನೇಮಕಾತಿ ಹಗರಣಗಳು ನಡೆದಿದೆ. ಆದರೆ ಈ ಬಗ್ಗೆ ಕ್ರಮ ಇಲ್ಲ. ಜನರು ರೈತರ ಸಮಸ್ಯೆ ನಿವಾರಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಕಿಡಿಕಾರಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಶರಣಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಯಶೋಧಾ(70), ಸುಮನ್(41), ನರೇಶ್ ಗುಪ್ತಾ(36) ಆತ್ಮಹತ್ಯೆಗೆ ಶರಣಾದವರು. ಮೇಲ್ನೋಟಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನ ಮನೆಯೊಂದರಲ್ಲಿ ವಾಸವಾಗಿದ್ದ ತಾಯಿ, ಮಗಳು ಹಾಗೂ ಮಗ ಆತ್ಮಹತ್ಯೆ ಮಾಡಿಕೊಂಡಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೃತ ತಾಯಿ ಯಶೋಧಾರಿಗೆ ಮೂವರು ಮಕ್ಕಳಿದ್ದಾರೆ. ಈ ಪೈಕಿ ಒಬ್ಬ ಮಗಳು ಮದುವೆ ಆಗಿ ರಾಜಾಜಿನಗರದಲ್ಲಿ ನೆಲೆಸಿದ್ದಾಳೆ. ಮಗ ನರೇಶ್, ಮತ್ತೋರ್ವ ಪುತ್ರಿ ಸುಮನ್ ತಾಯಿ ಯಶೋಧಾ ಜತೆ ನೆಲೆಸಿದ್ದರು. ಆದ್ರೆ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತ ನರೇಶ್ ವೃತ್ತಿಯಲ್ಲಿ ಕಾಂಟ್ರಾಕ್ಟರ್ ಆಗಿದ್ದ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮಕ್ಕಳಲ್ಲಿ ಹೃದ್ರೋಗ ಸಮಸ್ಯೆ ಜಾಸ್ತಿಯಾಗಿರುವ ಕಾರಣ ಶಾಲಾ ಸಮಯ ಬದಲಿಸಬೇಕೆಂಬ ಮಹತ್ವದ ಸಲಹೆಯನ್ನು ಜಯದೇವ ಹೃದ್ರೋಗ ಆಸ್ಪತ್ರೆ ಡಾ. ಮಂಜುನಾಥ್ ನೀಡಿದ್ದಾರೆ. 7-8 ವರ್ಷದ ಮಕ್ಕಳಿಗೆ ಹೆಚ್ಚು ನಿದ್ರೆ ಬೇಕು. ಆದರೆ ನಿದ್ರಾಹೀನತೆಗೆ ಅವರ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಹೃದ್ರೋಗಕ್ಕೆ ಕಾರಣವಾಗುತ್ತಿದೆ. 7 ವರ್ಷದಲ್ಲಿ 6000 ಹೃದಯ ಚಿಕಿತ್ಸೆ ನೀಡಿದ್ದು, ಚಿಕ್ಕವಯಸ್ಸಿನಲ್ಲಿ ಒತ್ತಡದಿಂದ ಆರೋಗ್ಯ ಹದಗೆಡುತ್ತಿದೆ. 2ನೇ ಕ್ಲಾಸ್‌ವರೆ ಶಾಲಾ ಸಮಯ 10AM-12.30PM ಮಾಡಬೇಕೆಂದು ಎಚ್ಚರಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ: ಹಿಂದೂಗಳಾಗಿ ಹುಟ್ಟಿದ ನಾವು ಹಿಂದೂಗಳಾಗಿಯೇ ಸಾಯುತ್ತೇವೆ. ಬಿಜೆಪಿಯವರದ್ದು ನಾಟಕ. ಒಳಗಿಂದ ನಮ್ಮಲ್ಲಿ ಹಿಂದುತ್ವವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುವರ್ಣಸೌಧದ ಮುಂಭಾಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಾಂಧಿ ಹಾಗೂ ಅಂಬೇಡ್ಕರ್ ಸೇರಿದಂತೆ ಮಹನೀಯರ ಫೋಟೋ ಹಾಕ್ತೀವಿ ಅಂತ ಸ್ಪೀಕರ್ ಹೇಳಿದರು. ಆದ್ರೆ ಇಲ್ಲಿ ಬಂದ ಬಳಿಕ ಸಾವರ್ಕರ್ ಫೋಟೋ ಹಾಕುವ ವಿಚಾರ ತಿಳಿಯಿತು. ಸಾವರ್ಕರ್ ವಿವಾದಿತ ವ್ಯಕ್ತಿ ಅಂತ ಎಲ್ಲರಿಗೂ ಗೊತ್ತು ಎಂದು ಅವರು ಇದೇ ವೇಳೆ ಹೇಳಿದರು. ಕಮಿಷನ್, ಹಗರಣ, ಮತದಾರರ ಪಟ್ಟಿ ಹಗರಣ ವಿಚಾರ ಚರ್ಚೆಯಾಗಬಾರದು ಅನ್ನೋ ಕಾರಣಕ್ಕೆ ಈ ವಿವಾದವನ್ನು ಬಿಜೆಪಿಯವರು ತಂದಿಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಸುಳ್ಯ: ದೇವರ ಕಾನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸೆಂಬರ್ 14ರಂದು ಪ್ರತಿಭಾ ದಿನಾಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಸಚಿವರಾದ ಎಸ್.ಅಂಗಾರ, ಎ.ವಿ.ತೀರ್ಥರಾಮ, ಬಾಲಕೃಷ್ಣ ಕೀಲಾಡಿ, ನವೀನ್ ಸಾರಕೆರೆ ಮತ್ತು ಮದರ್ ಡ್ರೀಮ್ಸ್ ರೂರಲ್ ಅಂಡ್ ಅರ್ಬನ್ ಎಜುಕೇಶನ್ ಡೆವಲಪ್ಮೆಂಟ್ ಸೊಸೈಟಿ ರಿಜಿಸ್ಟರ್ಡ್ ಮತ್ತು “ಶ್ರೀರಾಮ ಗೋಶಾಲೆ” ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂಸ್ಥೆಯಿಂದ ದಿನನಿತ್ಯ ಉಚಿತ ಸಂಜೆ ಪಾಠ ಶಾಲೆ ನಡೆಸುವ ಮೂಲಕ ಮಾದರಿಯಾಗಿದೆ. ಕಾರ್ಯಕ್ರಮದಲ್ಲಿ ಮಕ್ಕಳಿಗೆ 50 ಪ್ರಮಾಣ ಪತ್ರ, 50 ಪುಸ್ತಕ , 50 ಹಣ್ಣಿನ ಗಿಡಗಳನ್ನು ನೀಡುವ ಮೂಲಕ ಶಿಕ್ಷಕಿಯಾದ ಸಂಪ್ರೀತ ಅವರಿಗೆ ಸನ್ಮಾನವನ್ನು ಮಾಡಿದರು ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪ್ರದೀಪ್, ಹೆಚ್ಚು ಕಾರ್ಯದರ್ಶಿಯಾದ ಮಹಾಂತೇಶ್ ಡಿ., ದಕ್ಷಿಣ ಕನ್ನಡ ಜಿಲ್ಲೆಯ ಸಂಚಾಲಕರಾದ ಮಂಜುನಾಥ್, ಶ್ರೀರಾಮ ಗೋಶಾಲೆಯ ಅಧ್ಯಕ್ಷರಾದ ಸೋಮಪ್ರಸಾದ್ ರೈ, ಕಾರ್ಯದರ್ಶಿಗಳಾದ ಚಂದ್ರಶೇಖರ್ ಮೇಣಾಲ ಮತ್ತು ಪದಾಧಿಕಾರಿಗಳು ಮತ್ತು ಪ್ರಮುಖ ಮುಖಂಡರು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…
ಪ್ರತಿ ವರ್ಷದಂತೆ, ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿ ಈ ವರ್ಷವೂ ಭಾರತೀಯರು ಹೆಚ್ಚು ಆರ್ಡರ್ ಮಾಡಿದ ಆಹಾರವನ್ನು ಬಹಿರಂಗಪಡಿಸಿದೆ. ಸ್ವಿಗ್ಗಿ ವರದಿಯ ಪ್ರಕಾರ, ಈ ವರ್ಷ ಅತಿ ಹೆಚ್ಚು ಆರ್ಡರ್ ಮಾಡಿದ ಭಕ್ಷ್ಯಗಳ ಪಟ್ಟಿಯಲ್ಲಿ ಬಿರಿಯಾನಿ ಅಗ್ರಸ್ಥಾನದಲ್ಲಿದೆ. ಬಿರಿಯಾನಿ ಸತತ ಏಳನೇ ಬಾರಿಗೆ ಅಗ್ರಸ್ಥಾನದಲ್ಲಿದೆ. ಈ ವರ್ಷ ಬಿರಿಯಾನಿಗಾಗಿ ಸೆಕೆಂಡಿಗೆ ಸರಾಸರಿ 2.28 ಆರ್ಡರ್‌ಗಳು ಬಂದಿವೆ. ಅಂದರೆ ಪ್ರತಿ ನಿಮಿಷಕ್ಕೆ ಸುಮಾರು 140 ಆರ್ಡರ್‌ಗಳು. ವರದಿಯ ಪ್ರಕಾರ, ಈ ವರ್ಷ ಸ್ವಿಗ್ಗಿಯಲ್ಲಿ ಹೆಚ್ಚು ಆರ್ಡರ್ ಮಾಡಿದ ಇತರ ಭಕ್ಷ್ಯಗಳೆಂದರೆ: ಚಿಕನ್ ಬಿರಿಯಾನಿ, ಮಸಾಲಾ ದೋಸೆ, ಚಿಕನ್ ಫ್ರೈಡ್ ರೈಸ್, ಪನೀರ್ ಬಟರ್ ಮಸಾಲಾ, ಬಟರ್ ನಾನ್, ವೆಜ್ ಫ್ರೈಡ್ ರೈಸ್, ವೆಜ್ ಬಿರಿಯಾನಿ ಮತ್ತು ತಂದೂರಿ ಚಿಕನ್. ಇಟಾಲಿಯನ್ ಪಾಸ್ಟಾ, ಪಿಜ್ಜಾ, ಮೆಕ್ಸಿಕನ್ ಬೌಲ್, ಮಸಾಲೆಯುಕ್ತ ರಾಮೆನ್ ಮತ್ತು ಸುಶಿಯಂತಹ ಭಕ್ಷ್ಯಗಳು. ಭಾರತೀಯ ಆಹಾರದ ಹೊರತಾಗಿ, ಈ ವರ್ಷ ಭಾರತೀಯರು ಇತರ ಪಾಕಪದ್ಧತಿಗಳನ್ನು ಪ್ರಯೋಗಿಸಿದ್ದಾರೆ ಎಂದು ಸ್ವಿಗ್ಗಿ ಬಹಿರಂಗಪಡಿಸುತ್ತದೆ. ಅವುಗಳಲ್ಲಿ,…