Author: admin

ತಿಪಟೂರು ತಾಲೂಕು ಕಾಂಗ್ರೆಸ್ ನಲ್ಲಿ ಲೋಕೇಶ್ವರ್ ಬಣ,  ಷಡಕ್ಷರಿ ಬಣ ಎಂಬುವುದು ಇಲ್ಲ, ಪಕ್ಷದ ಹೈಕಮಾಂಡ್ ನನ್ನನ್ನು ಅಭ್ಯರ್ಥಿ ಎಂದು ಘೋಷಿಸಿದ ಬಳಿಕ ಲೋಕೇಶ್ ಅವರು ಪಕ್ಷದ ನಿಯಮಕ್ಕೆ ಬದ್ಧರಾಗಿ ಗೆಲುವಿಗೆ ಹೆಗಲು ಕೊಟ್ಟಿದ್ದಾರೆ ಎಂದು ಮಾಜಿ ಶಾಸಕ ಕೆ.ಷಡಕ್ಷರಿ ತಿಳಿಸಿದರು. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಲೋಕೇಶ್ವರ್ ಹಾಗೂ ಕೆ.ಷಡಕ್ಷರಿ ಅವರು ಕರೆದ ಜಂಟಿ ಸುದ್ದಿಗೋಷ್ಠಿಯಲ್ಲಿ  ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು. ಕ್ಷೇತ್ರದ ಸಮಸ್ಯೆಗಳನ್ನು ಮುಂದಿಟ್ಟು ಮತಯಾಚಿಸುತ್ತೇವೆ, ಜೊತೆಯಾಗಿ ಕೆಲಸ ಮಾಡುತ್ತೇವೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಕೆ.ಷಡಕ್ಷರಿ  ಹೇಳಿದರು. ಲೋಕೇಶ್ ಅವರು ಮಾತನಾಡಿ, ತಡವಾಗಿಯಾದರೂ ಒಳ್ಳೆ ನಿರ್ಧಾರ ಕೈಗೊಳ್ಳಲಾಗಿದೆ. ಸಣ್ಣ ಸಣ್ಣ ನದಿ ಸಮುದ್ರ ಸೇರಿದ ನಂತರ, ನೀರೆಲ್ಲ ಒಂದಾದಂತೆ, ನಾವು ಒಂದಾಗಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ಹಣಕಾಸು ನೀತಿಯನ್ನು ಘೋಷಣೆ ಮಾಡಿದ್ದು, ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ವ್ಯಾಪ್ತಿಯನ್ನು ವಿಸ್ತರಣೆ ಮಾಡಲಾಗಿದೆ. ಈ ಪ್ರಕಟಣೆಯ ಪ್ರಕಾರ, ಸಾಲಗಾರರು ಬ್ಯಾಂಕ್‌ಗಳಿಂದ ಡಿಜಿಟಲ್ ಕ್ರೆಡಿಟ್ ಲೈನ್‌ಗಳನ್ನು ಪ್ರವೇಶಿಸಲು UPI ಅನ್ನು ಬಳಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ. ಆರ್‌ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಪ್ರಕಾರ ‘ಯುಪಿಐ ಭಾರತದಲ್ಲಿ ಚಿಲ್ಲರೆ ಪಾವತಿಗಳ ಮಾದರಿಯನ್ನು ಬದಲಾಯಿಸಿದೆ. ಕಾಲಕಾಲಕ್ಕೆ ಹೊಸ ಉತ್ಪನ್ನಗಳು ಮತ್ತು ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸಲು ಯುಪಿಐನ ಬಲವನ್ನು ಬಳಸಿಕೊಳ್ಳಲಾಗಿದೆ. ಮಾರ್ಚ್ 2023 ರಲ್ಲಿ, UPI 8.7 ಶತಕೋಟಿ ವಹಿವಾಟುಗಳನ್ನು ದಾಖಲಿಸಿಕೊಂಡಿದೆ. ಅಲ್ಲದೆ, ವರ್ಷದಿಂದ ವರ್ಷಕ್ಕೆ, ನೈಜ-ಸಮಯದ ಪಾವತಿಗಳು 60 ಪ್ರತಿಶತದಷ್ಟು ಹೆಚ್ಚಾಗುತ್ತಿದೆ . UPI ಮೂಲಕ ಪಾವತಿಗಳು ಕಳೆದ 12 ತಿಂಗಳುಗಳಲ್ಲಿ ಗಣನೀಯವಾಗಿ ಬೆಳೆದಿದ್ದು, ದೈನಂದಿನ ವಹಿವಾಟು 36 ಕೋಟಿಗಳನ್ನು ದಾಟಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…

Read More

ತುರುವೇಕೆರೆ ವಿಧಾನಸಭಾ ಕ್ಷೇತ್ರದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿ ಹಟ್ಟಯ್ಯ ಎನ್. ಅವರನ್ನು ಆಯ್ಕೆ ಮಾಡಲಾಯಿತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಎನ್. ಮೂರ್ತಿ ಅವರು ಅಭ್ಯರ್ಥಿಯನ್ನು ಘೋಷಿಸಿದರು.  ಇದೇ ವೇಳೆ ಮಾತನಾಡಿದ ಹಟ್ಟಯ್ಯ ಅವರು, ಈ ಚುನಾವಣೆಯಲ್ಲಿ ನಮ್ಮ ಆರ್ ಪಿಐ ಪಕ್ಷದ ಚಿಹ್ನೆಯಾದ ಪೆನ್ನಿಗೆ ಮತ ಹಾಕುವಂತೆ ಮನವಿ ಮಾಡಿಕೊಂಡರು. ನಮ್ಮ ದೇಶಕ್ಕೆ ನಿರುದ್ಯೋಗ ಬಹುದೊಡ್ಡ ಸವಾಲಾಗಿದೆ, ಕೋಮು, ಜಾತಿ ಘರ್ಷಣೆ ತೀವ್ರಗೊಂಡಿವೆ, ಸ್ವಜನ ಪಕ್ಷಪಾತದ ದುರಾಡಳಿತ, ತೀವ್ರ ಭ್ರಷ್ಟಾಚಾರದಿಂದ ರಾಜಕಾರಣ ದಿವಾಳಿಯಾಗಿದೆ, ಜಾಗತಿಕ ಸಮೀಕ್ಷೆಯಂತೆ ಹಸಿವಿನಿಂದ ಭೀಕರ ಸಾವನ್ನಪ್ಪುವ 121 ದೇಶಗಳಲ್ಲಿ ಭಾರತ 107ನೇ ಸ್ಥಾನ ಪಡೆದಿದೆ ಎಂದರು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇಲ್ಲಿಯವರೆಗೂ, ಯಾವ ಪಕ್ಷವೂ ಮಾಡದ ಅಭಿವೃದ್ಧಿ ಕೆಲಸ ಮಾಡಲಾಗುವುದು, ನಮ್ಮ ಪಕ್ಷ ಜಿಲ್ಲೆಯಾದ್ಯಂತ 10 ಕ್ಷೇತ್ರಗಳಿಂದಲೂ  ಸ್ಪರ್ಧಿಸಲಿದ್ದು, ಐದರಿಂದ ಆರು ಕ್ಷೇತ್ರಗಳಲ್ಲಿ  ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಪುಟ್ಟಸ್ವಾಮಿ, ತಾಲೂಕು ಅಧ್ಯಕ್ಷರಾದ ಚಂದ್ರು,…

Read More

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್​-19 ಪ್ರಕರಣಗಳು ಹೆಚ್ಚಾಗುತ್ತಿದ್ದು ರಾಜ್ಯಗಳಿಗೆ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಶುಕ್ರವಾರ ಇದರ ಬಗ್ಗೆ ಸಭೆ ನಡೆಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್​ ಮಾಂಡವೀಯಾ ಅಗತ್ಯ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ಧಾರೆ ಎಂದು ತಿಳಿದು ಬಂದಿದೆ. ​ ಕೋವಿಡ್​ ಗುಣಲಕ್ಷಣ ಹೊಂದಿರುವವರ ಮೇಲೆ ತೀವ್ರ ನಿಗಾ ವಹಿಸಬೇಕು. ಅಗತ್ಯ ವಿದ್ದಲ್ಲಿ ಈ ಹಿಂದೆ ಕೋವಿಡ್​ ಸಂಭವಿಸಿದ ಸಮಯದಲ್ಲಿ ಅನುಸರಿಸಿದ್ದ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಸಲಹೆ ನೀಡಿದ್ದಾರೆ. ಏಪ್ರಿಲ್​ 8 ಮತ್ತು9ರಂದು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ. ಏಪ್ರಿಲ್​ 10 ಮತ್ತು 11ರಂದು ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆಗಾಗಿ ಮಾಕ್​ ಡ್ರಿಲ್​ ನಡೆಸಿ ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್​ ಮಾಂಡವೀಯ ಆದೇಶಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…

Read More

ತುಮಕೂರು: ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಹಾಗೂ ಉತ್ತಮ ವಿದ್ಯಾರ್ಹತೆ ಹೊಂದಿರುವ ಹಾಗೂ ಒಮ್ಮೆ ತುಮಕೂರು ನಗರ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ತಮ್ಮ ಅಳಿಯ ರಫೀಕ್ ಅಹಮದ್ ಗೆ ಟಿಕೆಟ್ ನೀಡುವಂತೆ ಶಿಫಾರಸು ಮಾಡಿದ್ದರೂ ಸಹ ಮಾಜಿ ಉಪ ಮುಖ್ಯಮಂತ್ರಿ ಹಿರಿಯ ಕಾಂಗ್ರೆಸ್ ಮುಖಂಡರು ಟಿಕೆಟ್ ನೀಡದೇ ವಂಚನೆ ಮಾಡಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಶಫಿ ಅಹಮದ್ ಆರೋಪಿಸಿದ್ದಾರೆ. ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಇದರಿಂದ ಮನನೊಂದು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಚುನಾವಣೆಯನ್ನು ಎದುರಿಸಲು ಶಕ್ತಿ ಇಲ್ಲದಂತಹ ವ್ಯಕ್ತಿಯಾಗಿರುವ ಇಕ್ಬಾಲ್ ಅಹಮದ್ ಎಂಬವರಿಗೆ ಟಿಕೆಟ್ ನೀಡಿದ್ದು, ಈ ಹಿಂದೆ ಅನೇಕ ಬಾರಿ ಡಾ.ಜಿ.ಪರಮೇಶ್ವರ್ ಅವರ ಗಮನಕ್ಕೆ ತಂದಿದ್ದ ವೇಳೆ ಟಿಕೆಟ್ ನೀಡುವ ಸಂಬಂಧ ಸಾಕಷ್ಟು ಭರವಸೆ ನೀಡಿದ್ದ ಅವರು ಟಿಕೆಟ್ ಸಿಗದಂತೆ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೂ ಕೂಡ ಈ ಕುರಿತಂತೆ ಮನವಿ…

Read More

ತೀರ್ಥಹಳ್ಳಿ – ಕುಂದಾಪುರ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟ್ ಮೂಲಕ ಸಂಚರಿಸುವ ವಾಹನ ಸವಾರರಿಗೆ ಸಂಚಾರ ನಿರ್ಬಂಧ ಆದೇಶವನ್ನು ಏಪ್ರಿಲ್ 15ರ ವರೆಗೆ ವಿಸ್ತರಿಸಲಾಗಿದೆ. ಘಾಟ್ ನಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿರುವ ಕಾರಣ ಈ ಮೊದಲು ಏಪ್ರಿಲ್ 5 ರ ವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು.ನಂತರ ಕಾಮಗಾರಿ ವ್ಯತ್ಯಯವಾಗಿರುವುದರಿಂದ ನಿರ್ಬಂಧ ಆದೇಶವನ್ನು ಈಗ ಏ.15 ರ ವರೆಗೆ ವಿಸ್ತರಿಸಲಾಗಿದೆ. ಆದ್ದರಿಂದ ವಾಹನ ಸವಾರರು ಬೇರೆ ಮಾರ್ಗದ ಮೂಲಕ ಸಂಚರಿಸಬಹುದಾಗಿದೆ. ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆ ಹೋಗುವ ಲಘು ವಾಹನಗಳು ತೀರ್ಥಹಳ್ಳಿ – ಹಾಲಾಡಿ – ಬಸ್ರೂರು ಕುಂದಾಪುರ ರಸ್ತೆಯ ಮೂಲಕ, ತೀರ್ಥಹಳ್ಳಿ – ಹೆಬ್ರಿ – ಉಡುಪಿ – ಕುಂದಾಪುರ ರಸ್ತೆಯ ಮೂಲಕ ಸಂಚರಿಸಬಹುದಾಗಿ ಸೂಚಿಸಲಾಗಿದೆ. ಹಾಗೆಯೇ ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆಗೆ ಹೋಗುವ ಭಾರಿ ವಾಹನಗಳು ತೀರ್ಥಹಳ್ಳಿ – ಕಾನುಗೋಡು – ನಗರ – ಕೊಲ್ಲೂರು – ಕುಂದಾಪುರ ಮಾರ್ಗವಾಗಿ ಸಂಚರಿಸಲು ಅನುಮತಿ ನೀಡಲಾಗಿದೆ , ತೀರ್ಥಹಳ್ಳಿ -…

Read More

ಉಪನಗರ ರೈಲು ಯೋಜನೆಗಾಗಿ ಬೆಂಗಳೂರಿನಲ್ಲಿ 1200 ಮರಗಳನ್ನು ಶೀಘ್ರದಲ್ಲೇ ಕಡಿಯಲಾಗುವುದು. 2018 ರಿಂದ 2021 ರವರೆಗೆ ಕರ್ನಾಟಕದಾದ್ಯಂತ ರಸ್ತೆಗಳು ಮತ್ತು ಹೆದ್ದಾರಿಗಳ ನಿರ್ಮಾಣಕ್ಕಾಗಿ 1 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದೆ ಎಂದು ರಾಜ್ಯ ಲೋಕೋಪಯೋಗಿ ಇಲಾಖೆ (PWD) ಪ್ರಕಟಿಸಿದೆ. ಹೊಸ ಬೆಂಗಳೂರು-ಮೈಸೂರು ಹೆದ್ದಾರಿ (NH 275) ಅಭಿವೃದ್ಧಿಗಾಗಿ 11,078 ಮರಗಳನ್ನು ಕಡಿಯಲಾಗಿದೆ. 2019 ರಲ್ಲಿ, ನಮ್ಮ ಮೆಟ್ರೋದ ಎರಡನೇ ಹಂತದಲ್ಲಿ – ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ 1,253 ಮರಗಳನ್ನು ಕತ್ತರಿಸಲಾಯಿತು. ರೈಲು ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಪರವಾಗಿ ಆದೇಶ ಹೊರಡಿಸಿರುವುದರಿಂದ ಈ ವರ್ಷ ಬೆಂಗಳೂರಿನಲ್ಲಿ ಹೆಚ್ಚಿನ ಮರಗಳನ್ನು ಕಡಿಯಬೇಕಾಗುತ್ತದೆ. ಫೆಬ್ರವರಿಯಲ್ಲಿ ರೈಲು  ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆಆರ್‌ಐಡಿಇ) ಬೈಯಪ್ಪನಹಳ್ಳಿ ಮತ್ತು ಲೊಟೆಗೊಲ್ಲಹಳ್ಳಿ ನಡುವೆ 1,234 ಮರಗಳನ್ನು ಕಡಿಯಲು ಅನುಮತಿ ನೀಡಿತ್ತು. ಜನವರಿಯಲ್ಲಿ, ನೈಋತ್ಯ ರೈಲ್ವೆಯು ಯಶವಂತಪುರ ರೈಲು ನಿಲ್ದಾಣದಲ್ಲಿ 216 ಮೀಟರ್ ಅಗಲದ ಕಾನ್ಕೋರ್ಸ್, ಮಾಲ್ ಮತ್ತು ವಿಶೇಷ ಪ್ರವೇಶ ಮತ್ತು ನಿರ್ಗಮನ ಬಿಂದುಗಳನ್ನು ನಿರ್ಮಿಸಲು 141 ಮರಗಳನ್ನು…

Read More

“ಶುಭ ಶುಕ್ರವಾರ ಅಥವಾ ಗುಡ್ ಫ್ರೈಡೇ ಎಂಬುದು ಯೇಸು ಕ್ರಿಸ್ತ ಶಿಲುಬೆಯ ಮೇಲೆ ಮರಣ ಹೊಂದಿದ ದಿನ. ಇದು ಸಾಮಾನ್ಯವಾಗಿ ಕ್ರೈಸ್ತರಿಗೆ ಸೂತಕದ ದಿನವಾಗಬೇಕಿತ್ತು; ಆದರೆ “ಶುಭ”ವಾಗಿರುವುದು ಏಕೆ?” ಈ ಕುರಿತು ಸರಳವಾಗಿ ತಿಳಿಸುವುದು ಈ ಲೇಖನದ ಉದ್ದೇಶ. ಕ್ರಿಸ್ತ ಜೀವಿಸಿದ್ದು ಇಸ್ರಯೇಲ್ ರೋಮ್ ಸಾಮ್ರಾಜ್ಯದ ವಸಹಾತುವಾಗಿದ್ದ ಕಾಲಘಟ್ಟದಲ್ಲಿ. ಜನರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಶೋಷಿಸುತ್ತಿದ್ದ ರೋಮ್ ಚಕ್ರಾಧಿಪತ್ಯ ಒಂದೆಡೆಯಾದರೆ, ತಮ್ಮದೇ ಜನರನ್ನು ಕಠಿಣ ಧಾರ್ಮಿಕ ಕಾನೂನು ಆಚರಣೆಗಳ ಮೂಲಕ ಹಿಂಸಿಸುತ್ತಿದ್ದ ಯೆಹೂದ್ಯ ಪುರೋಹಿತ ವರ್ಗ ಮತ್ತೊಂದೆಡೆ. ಇವರಿಬ್ಬರ ನಡುವೆ ಸಾಮಾನ್ಯ ಜನ ನಲುಗಿ ಹೋಗಿದ್ದರು. ತಮ್ಮನ್ನು ಈ ಎಲ್ಲಾ ಸಂಕೋಲೆಗಳಿಂದ ಬಿಡಿಸುವ “ಮೆಸ್ಸಾಯ” (ಉದ್ಧಾರಕ) ನ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದರು. ಆಗ ಬಂದ ಯೇಸು ಕ್ರಿಸ್ತರು ಯೆಹೂದ್ಯ ಪುರೋಹಿತರ ಧಾರ್ಮಿಕ ಡಂಭಾಚಾರ, ಜನರನ್ನು ಮಾನಸಿಕವಾಗಿ ಹಿಂಸಿಸುವ ಕಟು ಆಚರಣೆಗಳನ್ನು ಖಂಡಿಸಿ, ದೇವರು ಮನುಷ್ಯರ ಹೃದಯದಲ್ಲಿದ್ದಾನೆ, ನಿಮ್ಮಂತೆಯೇ ಪರರನ್ನು ಪ್ರೀತಿಸಿದರೆ ಅದು ದೇವರನ್ನೇ ಪ್ರೀತಿಸಿದಂತೆ ಎಂಬ ಮಾನವತೆಯ ಸಂದೇಶವನ್ನು ಸಾರಿದರು. ಯೆಹೂದ್ಯ ಸಮಾಜ…

Read More

ಡಿಸೆಂಬರ್ 22, 2003 ರ ಮೊದಲು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಕೊಡುಗೆ ಪಿಂಚಣಿ ಯೋಜನೆಯ ಅಧಿಸೂಚನೆಯ ನಂತರ ಉದ್ಯೋಗಕ್ಕೆ ಸೇರಿದ ನೌಕರರು ಹಳೆಯ ಪಿಂಚಣಿ ಯೋಜನೆಯ ಸದಸ್ಯರಾಗಲು ಅವಕಾಶವಿದೆ. ಈ ವರ್ಗಕ್ಕೆ ಒಳಪಡುವ ಕೇಂದ್ರ ನೌಕರರು ಹಳೆಯ ಪಿಂಚಣಿ ಯೋಜನೆಗೆ ಬದಲಾಯಿಸಲು ಕೇಂದ್ರ ಸರ್ಕಾರ ಆಗಸ್ಟ್ 31 ರವರೆಗೆ ಕಾಲಾವಕಾಶ ನೀಡಿದೆ. ಕೇಂದ್ರ ಸೇನಾ ಸಿಬ್ಬಂದಿ ಕೂಡ ಹಳೆಯ ಪಿಂಚಣಿ ಯೋಜನೆಗೆ ಬದಲಾಯಿಸಬಹುದು. 2003ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನಿವೃತ್ತಿ ವೇತನದ ಅರ್ಧದಷ್ಟು ಹಣವನ್ನು ಪಿಂಚಣಿಯಾಗಿ ಪಡೆಯುವ ಹಳೆಯ ಪಿಂಚಣಿ ಯೋಜನೆ ಕೊನೆಗೊಂಡಿತ್ತು. ಹೊಸ ಪಿಂಚಣಿ ಯೋಜನೆಯನ್ನು ಆಕರ್ಷಕಗೊಳಿಸಲು ಕೇಂದ್ರ ಸರ್ಕಾರ ಸಮಿತಿಯನ್ನೂ ನೇಮಿಸಿದೆ. ಸಮಿತಿಯು ಹಣಕಾಸು ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಾಲ್ಕು ಸದಸ್ಯರನ್ನು ಒಳಗೊಂಡಿರುತ್ತದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್…

Read More

ನಾಣ್ಯಗಳಂತಹ ವಸ್ತುಗಳನ್ನು ಅರಿವಿಲ್ಲದೆ ನುಂಗುವ ಘಟನೆಗಳನ್ನು ನೀವು ಕೇಳಿರಬಹುದು. ಆದರೆ ಇದೀಗ ಯುವತಿಯೊಬ್ಬಳು ಮೊಬೈಲ್ ನುಂಗಿರುವ ಅಸಾಮಾನ್ಯ ಪ್ರಕರಣ ಮಧ್ಯಪ್ರದೇಶದಿಂದ ಹೊರ ಬಿದ್ದಿದೆ. 2 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ, ಅಂತಿಮವಾಗಿ ಫೋನ್ ಅನ್ನು ಯುವತಿಯ ಹೊಟ್ಟೆಯಿಂದ ತೆಗೆಯಲಾಯಿತು. 18 ವರ್ಷದ ಯುವತಿ ತನ್ನ ಸಹೋದರನೊಂದಿಗೆ ಜಗಳವಾಡಿದ ನಂತರ ತನ್ನ ಮೊಬೈಲ್ ಫೋನ್ ಅನ್ನು ನುಂಗಿದ್ದಾಳೆ. ಫೋನ್ ನುಂಗಿದ ತಕ್ಷಣ ಯುವತಿಗೆ ವಿಪರೀತ ನೋವು ಶುರುವಾಯಿತು. ಕೂಡಲೇ ಸಂಬಂಧಿಕರು  ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರಿಸ್ಥಿತಿ ಹದಗೆಟ್ಟಾಗ ಅವರನ್ನು ಗ್ವಾಲಿಯರ್‌ಗೆ ಕಳುಹಿಸಲಾಯಿತು. ಮೊಬೈಲ್ ಫೋನ್ ಪತ್ತೆ ಮಾಡಲು ಯುವತಿಯನ್ನು ಅಲ್ಟ್ರಾಸೌಂಡ್ ಮತ್ತು ಇತರ ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಗ್ವಾಲಿಯರ್‌ನ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಎಚ್‌ಒಡಿ ಡಾ.ಪ್ರಶಾಂತ್ ಶ್ರೀವಾಸ್ತವ ನೇತೃತ್ವದ ವೈದ್ಯರ ತಂಡ ಆಪರೇಷನ್ ಮಾಡಿ ಆಕೆಯ ಹೊಟ್ಟೆಯಿಂದ ಮೊಬೈಲ್ ಹೊರತೆಗೆದಿದ್ದಾರೆ. ಈಗ ಅವಳ  ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ಗಂಟಲಿನ ಮೂಲಕ ಇಷ್ಟು ದೊಡ್ಡ ವಸ್ತು ಹೊಟ್ಟೆ ಸೇರಿರುವುದು ಇದೇ ಮೊದಲು ಎಂದು ಡಾ.…

Read More