Author: admin

ಕೊರಟಗೆರೆ : ಪರಮೇಶ್ವರ್ ಗೆ ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳೋಕೆ ಅಧಿಕಾರ ಬೇಕಿದೆ. ಸ್ನೇಹಜೀವಿ ಸುಧಾಕರಲಾಲ್‍ಗೆ  ಜನಸೇವೆ ಮಾಡಲು ಅಧಿಕಾರ ಬೇಕಿದೆ. ಕೊರಟಗೆರೆ ಜನರೇ ಕಾಂಗ್ರೇಸ್-ಬಿಜೆಪಿಗೆ ಮತ ಹಾಕಿದ್ರೇ ನಿಮ್ಮ ಕೆಲಸಕ್ಕೆ ಬೆಂಗಳೂರು ಮತ್ತು ತುಮಕೂರು ನಗರಕ್ಕೆ ಹೋಗ್ಬೇಕು. ಜೆಡಿಎಸ್ ಪಕ್ಷಕ್ಕೆ ಮತ ಹಾಕಿದ್ರೇ ನಿಮ್ಮ ಮನೆ ಬಾಗಿಲಿಗೆ ಲಾಲ್ ಬರ್ತಾರೇ ಎಂದು ಹಿಂದುಳಿದ ವರ್ಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಡಿಮಡು ರಂಗಶಾಮಯ್ಯ ಎಂದು  ತಿಳಿಸಿದರು. ಕೊರಟಗೆರೆ ಪಟ್ಟಣದ ಜಾಮೀಯಾ ಸಮುದಾಯ ಭವನದ ಆವರಣದಲ್ಲಿ ಜಾತ್ಯತೀತಾ ಜನತಾದಳ ಪಕ್ಷದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಹಿಂದುಳಿದ ವರ್ಗಗಳ ಜೆಡಿಎಸ್ ರಾಜ್ಯಾಧ್ಯಕ್ಷ ಜಯರಾಂ ಮಾತನಾಡಿ ಹಿಂದುಳಿದ ವರ್ಗದ ಪರವಾಗಿ ಹೋರಾಟ ಮಾಡುವ ನಾಯಕ ನಮ್ಮ ದೇವೇಗೌಡರು ಮಾತ್ರ. ಪಂಚರತ್ನ ಯೋಜನೆಯು ಮಾಜಿ ಸಿಎಂ ಕುಮಾರಸ್ವಾಮಿಯ ಕರ್ನಾಟಕ ಸಮಗ್ರ ಅಭಿವೃದ್ದಿಯ ಕನಸು. ಕೊರಟಗೆರೆ ಕ್ಷೇತ್ರದ ಲಾಲ್ 25ವರ್ಷದ ಜನಸೇವೆಯೇ ಅವರ ಗೆಲುವಿಗೆ ಆಧಾರಸ್ತಂಭ. ಆರೋಗ್ಯ ಸೇವೆ ಪಡೆದಿರುವ…

Read More

ಮಧುಗಿರಿ: ಬಡವನಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಜಲ್ದಿ ಉತ್ಸವ ಬಹಳ ಅದ್ದೂರಿಯಾಗಿ  ನೆರವೇರಿತು. ಈ ಜಲಧಿ ಉತ್ಸವದಲ್ಲಿ ಭೂತನ ಸೇವೆ ಹಾಗೂ ಬಾಣ ಹೋರುವ ಪೂಜ ಕಾರ್ಯಕ್ರಮ ನೆರವೇರಿತು. ಸಾವಿರಾರು ಭಕ್ತಾದಿಗಳು ಶ್ರೀ ಲಕ್ಷ್ಮಿ ರಂಗನಾಥನ ಸ್ವಾಮಿ ಆಶೀರ್ವಾದ ಪಡೆದರು. ವಿಶೇಷವೇನೆಂದರೆ ತಣ್ಣೀರು ಮಾಡಿ ಸ್ನಾನ ಮತ್ತು ಸುತ್ತಮುತ್ತಲಿನಿಂದ ಬಂದಂತಹ ಭಕ್ತಾದಿಗಳು, ಆಹಾರ ಊಟದ ವ್ಯವಸ್ಥೆ ಮಜ್ಜಿಗೆ ಪಾನಕ ಹೆಸರು ಬೆಳೆ ಇನ್ನು ಮುಂತಾದವು ಭಕ್ತಾದಿಗಳಿಗೆ ಸಹಕರಿಸಿದರು. ರಂಗನಾಥ್ ಹೇಮಂತ್ ರವರಿಂದ ಭೂತನ ಸೇವೆಗೆ ಮಣೆವು  ವ್ಯವಸ್ಥೆ ಮಾಡಿದರು. ಈ ಉತ್ಸವಕ್ಕೆ  ಆರ್.ರಾಜೇಂದ್ರ ರವರು  ಶಾಸಕರಾದ ವೀರಭದ್ರಯ್ಯನವರು ಭೇಟಿ ನೀಡಿದರು. ದೇವಸ್ಥಾನದ ಅರ್ಚಕರು ಕೈವಾಡದವರು ಸಂಘ ದವರು ಯಜಮಾನರು ಭಕ್ತಾದಿಗಳು ಭಾಗವಹಿಸಿದ್ದರು.    ವರದಿ: ದೊಡ್ಡೇರಿ ಮಹಾಲಿಂಗಯ್ಯ

Read More

ವಿಟಮಿನ್ ಬಿ: ಆರೋಗ್ಯವಂತರಾಗಿರಲು ದೇಹಕ್ಕೆ ವಿಟಮಿನ್ ಬಿ ತುಂಬ ಮುಖ್ಯವಾಗಿದೆ. ದೇಹದಲ್ಲಿ ವಿಟಮಿನ್ ಬಿ ಕೊರತೆ ಉಂಟಾದಾಗ ದೇಹದಲ್ಲಿ ದೌರ್ಬಲ್ಯ, ಆಯಾಸ, ಆಲಸ್ಯ, ಮೈಕೈ ನೋವಿನಂತಹ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಿಟಮಿನ್ ಬಿ ಕೊರತೆಯನ್ನು ನೀಗಿಸಲು ಮೊಟ್ಟೆ, ಮಾಂಸಾಹಾರ ಪದಾರ್ಥಗಳು ತುಂಬಾ ಪ್ರಯೋಜನಕಾರಿ ಆಗಿವೆ. ಆದರೆ, ಕೆಲವು ಸಸ್ಯಾಹಾರಗಳಿಂದಲೂ ಸಹ ಸಮಸ್ಯೆಗೆ ಸುಲಭ ಪರಿಹಾರವನ್ನು ಪಡೆಯಬಹುದು. ಅಂತಹ ಆಹಾರಗಳು ಯಾವುವು ಎಂದು ತಿಳಿದುಕೊಳ್ಳೋಣ. ವಿಟಮಿನ್ ಬಿ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಮೂಲಕ, ಹೊಸ ರಕ್ತ ಕಣಗಳನ್ನು ರಚಿಸುವ ಮೂಲಕ ಮತ್ತು ಆರೋಗ್ಯಕರ ಚರ್ಮದ ಕೋಶಗಳು, ಮೆದುಳಿನ ಕೋಶಗಳು ಮತ್ತು ಇತರ ದೇಹದ ಅಂಗಾಂಶಗಳನ್ನು ನಿರ್ವಹಿಸುವ ಮೂಲಕ ಅವು ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತವೆ. ವಿಟಮಿನ್ ಬಿ ಕೊರತೆ ನೀಗಿಸುವ ಸಸ್ಯಾಹಾರಗಳು:ಹಸಿರು ಸೊಪ್ಪು ತರಕಾರಿಗಳು ,ಅದರಲ್ಲೂ ಮುಖ್ಯವಾಗಿ ಪಾಲಕ್ ಸೊಪ್ಪು, ಮೆಂತೆ ಸೊಪ್ಪು ಎಲೆಕೋಸಿನಂತರ ತರಕಾರಿಗಳಲ್ಲಿಯೂ ಕಬ್ಬಿಣದಂಶದ ಜೊತೆಗೆ, ವಿಟಮಿನ್ ಬಿ ಹೇರಳವಾಗಿ ಇದರಲ್ಲಿ ಕಂಡುಬರುತ್ತದೆ. ದ್ವಿದಳ ಧಾನ್ಯಗಳು: ಕಪ್ಪು ಉದ್ದಿನ ಕಾಳು,…

Read More

ನ್ಯೂಯಾರ್ಕ್: ಅಮೆರಿಕದ ಔಷಧೀಯ ದೈತ್ಯ ಜಾನ್ಸನ್ ಪೌಡರ್ ಉತ್ಪನ್ನಗಳು ಕ್ಯಾನ್ಸರ್ ಗೆ ಕಾರಣವೆಂದು ಹೇಳುವ ವರ್ಷಗಳ ಹಿಂದಿನ ಮೊಕದ್ದಮೆಗಳನ್ನು ಪರಿಹರಿಸಲು 8.9 ಬಿಲಿಯನ್ ಡಾಲರ್ ಪಾವತಿಗೆ ಕಂಪನಿ ಮುಂದಾಗಿದೆ. ನ್ಯಾಯಾಲಯದ ಅನುಮೋದನೆಯ ಪ್ರಕಾರ ‘ಕಾಸ್ಮೆಟಿಕ್ ಟಾಲ್ಕ್ ದಾವೆಯಿಂದ ಉದ್ಭವಿಸುವ ಎಲ್ಲಾ ಹಕ್ಕುಗಳನ್ನು ಸಮಾನವಾಗಿ ಪರಿಹರಿಸುತ್ತದೆʼ ಎಂದು ನ್ಯೂಜೆರ್ಸಿ ಮೂಲದ ಕಂಪನಿ ಹೇಳಿದೆ. ಕ್ಯಾನ್ಸರ್‌ಗೆ ಕಾರಣವಾದ ಕಲ್ನಾರಿನ ಕುರುಹುಗಳನ್ನು ಹೊಂದಿರುವ ಟಾಲ್ಕಮ್ ಪೌಡರ್‌ನ ಮೇಲೆ ಸಾವಿರಾರು ಮೊಕದ್ದಮೆಗಳನ್ನು ಎದುರಿಸುತ್ತಿದೆ. ಸಂಸ್ಥೆಯು ಇಂದಿಗೂ ತಪ್ಪನ್ನು ಒಪ್ಪಿಕೊಂಡಿಲ್ಲ. ಆದರೆ, ಮೇ 2020 ರಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಅದರ ಟಾಲ್ಕ್ ಆಧಾರಿತ ಬೇಬಿ ಪೌಡರ್ ಮಾರಾಟವನ್ನು ನಿಲ್ಲಿಸಿದೆ ಎಂದು ಹೇಳಲಾಗಿದೆ. ‘ಈ ಹಕ್ಕುಗಳು ವಿಶೇಷ ಮತ್ತು ವೈಜ್ಞಾನಿಕ ಅರ್ಹತೆಯ ಕೊರತೆಯನ್ನು ಕಂಪನಿಯು ನಂಬುವುದನ್ನು ಮುಂದುವರೆಸಿದೆ’ ಎಂದು ಜೆ & ಜೆ ನ ವ್ಯಾಜ್ಯದ ಉಪಾಧ್ಯಕ್ಷ ಎರಿಕ್ ಹಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…

Read More

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶೈಕ್ಷಣಿಕ ಅರ್ಹತೆಗಳ ಚರ್ಚೆಯ ನಡುವೆ ಆಮ್ ಆದ್ಮಿ ಪಕ್ಷವು ‘ಡಿಗ್ರಿ ದಿಖಾವೋ’ ಅಭಿಯಾನದೊಂದಿಗೆ ಎಎಪಿ ನಾಯಕ ಅತಿಶಿ ಪ್ರಚಾರ ಆರಂಭಿಸಿದರು. ಬಿಜೆಪಿ ಮುಖಂಡರು ಸೇರಿದಂತೆ ರಾಜಕೀಯ ಮುಖಂಡರು ತಮ್ಮ ಪದವಿ ಪ್ರಮಾಣ ಪತ್ರ ಪ್ರದರ್ಶಿಸಿ ಶೈಕ್ಷಣಿಕ ಅರ್ಹತೆ ಸಾಬೀತುಪಡಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಾನು ದೆಹಲಿ ವಿಶ್ವವಿದ್ಯಾಲಯದಿಂದ ನನ್ನ ಬಿಎ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಎರಡು ಸ್ನಾತಕೋತ್ತರ ಪ್ರಮಾಣಪತ್ರಗಳನ್ನು ಪ್ರದರ್ಶಿಸುವ ಮೂಲಕ ಈ ಅಭಿಯಾನವನ್ನು ಪ್ರಾರಂಭಿಸುತ್ತಿದ್ದೇನೆ. ಬಿಜೆಪಿ ನಾಯಕರು ಸೇರಿದಂತೆ ಎಲ್ಲಾ ನಾಯಕರು ತಮ್ಮ ಶೈಕ್ಷಣಿಕ ಅರ್ಹತೆಯನ್ನು ರಾಷ್ಟ್ರಕ್ಕೆ ಸಾಬೀತುಪಡಿಸಲು ಈ ಅಭಿಯಾನದಲ್ಲಿ ಭಾಗವಹಿಸಬೇಕು,” ಎಂದು ಅತಿಶಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಪದವಿ ಪಡೆದಿದ್ದಾರೆ ಎಂದು ಹೇಳಲಾದ ಗುಜರಾತ್ ವಿಶ್ವವಿದ್ಯಾಲಯದಿಂದ ಪದವಿ ಪ್ರಮಾಣಪತ್ರವನ್ನು ನೀಡಲು ಆಕೆ ಅಸಮರ್ಥಳಾಗಿದ್ದಾಳೆ ಎಂದು ಅತಿಶಿ ಟೀಕಿಸಿದ್ದಾರೆ. ಭಾರತದ ಪ್ರಧಾನಿ ಮತ್ತು ರಾಷ್ಟ್ರಪತಿಗಳು ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಓದಿದ್ದರೆ, ಗುಜರಾತ್ ವಿಶ್ವವಿದ್ಯಾಲಯ ಅದನ್ನು ಹೆಮ್ಮೆಯಿಂದ ಏಕೆ ಘೋಷಿಸಲು ಸಾಧ್ಯವಿಲ್ಲ? ರಾಜ್ಯಶಾಸ್ತ್ರ ವಿಭಾಗವನ್ನು…

Read More

ದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದೆ. ಸಮೀಕ್ಷೆಯಲ್ಲಿ 3167 ಹುಲಿಗಳಿರುವುದು ಕಂಡುಬಂದಿದೆ.   ದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದು ಪ್ರಧಾನಿ ಹೇಳಿದರು. ಪ್ರಾಜೆಕ್ಟ್ ಟೈಗರ್‌ನ ಯಶಸ್ಸು ಭಾರತಕ್ಕೆ ಮಾತ್ರವಲ್ಲದೆ ವಿಶ್ವಕ್ಕೆ ಹೆಮ್ಮೆಯ ವಿಷಯವಾಗಿದೆ. ನಮ್ಮ ದೇಶವು ಹುಲಿಗಳನ್ನು ಸಂರಕ್ಷಿಸುವುದಲ್ಲದೆ ಅವುಗಳಿಗೆ ಅಭಿವೃದ್ಧಿ ಹೊಂದಲು ಆವಾಸಸ್ಥಾನವನ್ನು ಒದಗಿಸುತ್ತದೆ. ಭಾರತವು ಆರ್ಥಿಕತೆ ಮತ್ತು ಪರಿಸರದ ಸಹಬಾಳ್ವೆಯನ್ನು ನಂಬುವ ದೇಶವಾಗಿದೆ. ಭಾರತವು ವಿಶ್ವದಲ್ಲೇ ಅತಿ ದೊಡ್ಡ ಹುಲಿ ಶ್ರೇಣಿಯನ್ನು ಹೊಂದಿದೆ. ದೊಡ್ಡ ಯಶಸ್ಸು ಮತ್ತು ಹುಲಿಗಳ ಸಂಖ್ಯೆ ಹೆಚ್ಚಳವು ನಮ್ಮ ವನ್ಯಜೀವಿಗಳನ್ನು ಉಳಿಸಲು ದೇಶವು ಎಷ್ಟು ಪ್ರಗತಿ ಸಾಧಿಸಿದೆ ಎಂಬುದನ್ನು ತೋರಿಸುತ್ತದೆ ಎಂದು ಪ್ರಧಾನಿ ಹೇಳಿದರು. ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ಸ್ ಅಲೈಯನ್ಸ್ (ಐಬಿಸಿಎ) ಟೈಗರ್ ರಿಸರ್ವ್ಸ್ನ ಮ್ಯಾನೇಜ್ಮೆಂಟ್ ಎಫೆಕ್ಟಿವ್ನೆಸ್ ಅಸೆಸ್ಮೆಂಟ್ನ ಐದನೇ ಸಾರಾಂಶ ವರದಿಯನ್ನು ಬಿಡುಗಡೆ ಮಾಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್…

Read More

ಮಧುಗಿರಿ: ಕ್ಷೇತ್ರದ ಹಾಲಿ ಶಾಸಕರಾದ ಎಂ.ವಿ. ವೀರಭದ್ರಯ್ಯ ರವರ ನಿವಾಸ ಡಿ ಕೈಮರದಲ್ಲಿ ಹಮ್ಮಿಕೊಂಡಿದ್ದ ವಿವಿಧ ಪಕ್ಷಗಳಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶ ಕಾರ್ಯಕ್ರಮವನ್ನು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಹಲವಾರು ಪಕ್ಷಗಳಲ್ಲಿ ಸೇವೆ ಸಲ್ಲಿಸಿದ ಜನಸೇವಕರು, ಸಮಾಜ ಸೇವಕರು ಹಾಗೂ ಹಲವಾರು ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರುಗಳು ಸುಮಾರು 2,000ಕ್ಕೂ ಹೆಚ್ಚು ಜನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ತೊರೆದು ವೀರಭದ್ರಯ್ಯ ರವರ ಚುನಾವಣಾ ಬೆಂಬಲಕ್ಕೆ ನಿಂತು ಜೆಡಿಎಸ್ ಪಕ್ಷ ಸೇರ್ಪಡೆ ಆಗಿದ್ದು ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಮಳೆಯ ಆಧಾರದಲ್ಲಿ ಜೀವನ ಮಾಡುವ ಕ್ಷೇತ್ರ ಇದು, ತೀರ ಬಡಪೀಡಿತ ಪ್ರದೇಶ. ಬೋರ್ವೆಲ್ ಇದ್ದರೆ ಮಾತ್ರ ರೈತರು ಕೃಷಿ ಮಾಡಬಹುದು ಆದ್ದರಿಂದ ರೈತರಿಗಾಗಿ ಶಾಶ್ವತ ನೀರಿನ ಪರಿಹಾರ ರೂಪಿಸಬೇಕು, ರಾಜ್ಯದಲ್ಲಿ ಕುಡಿಯುವ ನೀರಿನ…

Read More

ದೆಹಲಿ ಮಕ್ಕಳ ಹಕ್ಕುಗಳ ಆಯೋಗವು ಸಲಿಂಗ ವಿವಾಹವನ್ನು ಬೆಂಬಲಿಸುತ್ತದೆ. ಸಲಿಂಗ ವಿವಾಹವನ್ನು ಬೆಂಬಲಿಸಿದ ಆಯೋಗವು ಸಲಿಂಗ ದಂಪತಿಗಳಿಗೆ ದತ್ತು ಮತ್ತು ಪಿತ್ರಾರ್ಜಿತ ಹಕ್ಕುಗಳಿಗೆ ಕಾನೂನು ಬೆಂಬಲವನ್ನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತು. ಆಯೋಗವು ಮಕ್ಕಳ ಮೇಲೆ ಸಲಿಂಗ ವಿವಾಹದ ಪ್ರಭಾವದ ಕುರಿತು ಅಧ್ಯಯನವನ್ನು ನಡೆಸಿತು. ಇದನ್ನು ಆಧರಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ಇದೇ 18ರಂದು ನಡೆಯಲಿದೆ. ಅನೇಕ ದೇಶಗಳಲ್ಲಿ ಸಲಿಂಗ ದಂಪತಿಗಳು ಮಕ್ಕಳನ್ನು ಕಾನೂನುಬದ್ಧವಾಗಿ ದತ್ತು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಸಲಿಂಗ ಕುಟುಂಬಗಳಲ್ಲಿ ಬೆಳೆಯುವ ಈ ಮಕ್ಕಳ ಮಾನಸಿಕ ಪ್ರಭಾವದ ಬಗ್ಗೆ ಕಾಳಜಿಯು ಆಧಾರರಹಿತವಾಗಿದೆ. ಸಲಿಂಗ ವಿವಾಹ ಕಾನೂನುಬದ್ಧವಾಗಿರುವ ಹಲವು ದೇಶಗಳಲ್ಲಿ ಇಂತಹ ಸಮಸ್ಯೆಗಳಿಲ್ಲ ಎಂದು ದೆಹಲಿ ಮಕ್ಕಳ ಹಕ್ಕುಗಳ ಆಯೋಗವು ಅರ್ಜಿಯಲ್ಲಿ ಗಮನಸೆಳೆದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ:…

Read More

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ಕಾಂಗ್ರೆಸ್‌ನ ಎರಡು ಪಟ್ಟಿಯಲ್ಲಿ 166 ಅಭ್ಯರ್ಥಿಗಳ ಹೆಸರು ಬಿಡುಗಡೆಯಾಗಿದೆ. ಜೆಡಿಎಸ್‌ ತನ್ನ 93 ಅಭ್ಯರ್ಥಿಗಳ ಒಂದು ಪಟ್ಟಿಯನ್ನು ಸಹ ಪ್ರಕಟಿಸಿದೆ. ಆದ್ರೆ, ಆಡಳಿತರೂಢ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, ಇಂದು(ಏಪ್ರಿಲ್ 10) ಯಾವುದೇ ಕ್ಷಣದಲ್ಲಾದರೂ ಬಿಡುಗಡೆಯಾಗಹುದು. ಕಳೆದ ಹತ್ತರಿಂದ 15 ದಿನಗಳಿಂದ ಹೈವೋಲ್ಟೇಜ್‌ ಮೀಟಿಂಗ್‌ ಮಾಡಿರುವ ನಾಯಕರು, 175 ಅಭ್ಯರ್ಥಿಗಳ ಪಟ್ಟಿಯನ್ನ ರೆಡಿ ಮಾಡಿದ್ದಾರೆ. ಯಾರಿಗೆ ಕೊಡಬೇಕು? ಯಾರಿಗೆ ಕೊಡಬಾರದು.? ಬಂಡಾಯ ಶಮನ ಮಾಡುವುದು ಹೇಗೆ? ಸರ್ವೆ ರಿಪೋರ್ಟ್ ಏನ್ ಹೇಳುತ್ತೆ? ಹೀಗೆ ಎಲ್ಲವನ್ನೂ ಅಳೆದು ತೂಗಿ ಹೈಕಮಾಂಡ್‌ ಅಭ್ಯರ್ಥಿಗಳ ಪಟ್ಟಿ ತಯಾರಿಸಿದ್ದು, ಟಿಕೆಟ್​ ಘೋಷಣೆಗೂ ಮುನ್ನ ಬಿಜೆಪಿ ನಾಯಕರು ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ಇಂದು ಬೆಳಗ್ಗೆ 9.30ಕ್ಕೆ ದೆಹಲಿಯಲ್ಲಿ ಧರ್ಮೇಂದ್ರ ಪ್ರಧಾನ್​ ನೇತೃತ್ವದಲ್ಲಿ ಸಭೆ  ನಡೆಸಿದ್ದು , ಬಳಿಕ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಾಯಕರು ಸುದ್ದಿಗೋಷ್ಟಿ ನಡೆಸಲಿದ್ದಾರೆ. ಈ ವೇಳೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್​…

Read More

ಕೋಲ್ಕತಾ: ಇಬ್ಬರು ಯುವತಿಯರು ಸಿಗರೇಟ್‌ ಸೇದುತ್ತಾ ರಾಷ್ಟ್ರಗೀತೆಗೆ ಅಪಮಾನ ಮಾಡಿ, ಹುಚ್ಚಾಟ ನಡೆಸಿದ್ದಾರೆ. ಅಲ್ಲದೇ ಈ ಸನ್ನಿವೇಶವನ್ನ ವೀಡಿಯೋ ಮಾಡಿ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ. ಈ ವೀಡಿಯೋ ಆಧರಿಸಿ ವಕೀಲ ಅತ್ರಯೀ ಹಾಲ್ದರ್ ಅವರು ಲಾಲ್‌ಬಜಾರ್ ಸೈಬರ್ ಘಟಕ ಹಾಗೂ ಬಾರಕ್‌ಪುರದಲ್ಲಿ ದೂರು ದಾಖಲಿಸಿದ್ದಾರೆ. ಈ ಪೋಸ್ಟ್ ಮಾಡಲಾಗಿದ್ದ ಫೇಸ್‌ಬುಕ್ ಖಾತೆಯನ್ನು ಡಿಲೀಟ್ ಮಾಡಿರುವುದರಿಂದ ಈಗ ವಿಡಿಯೋ ಅದರಲ್ಲಿ ಲಭ್ಯವಿಲ್ಲ. ಆದರೆ ಕೆಲವರು ವೀಡಿಯೋವನ್ನ ಟ್ವಿಟ್ಟರ್‌ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಸಿಗರೇಟ್ ಸೇದುತ್ತಾ ಕುಳಿತಿರುವ ಯುವತಿಯರು ಉದ್ದೇಶಪೂರ್ವಕವಾಗಿ ರಾಷ್ಟ್ರಗೀತೆಯ ಸಾಲುಗಳನ್ನ ವ್ಯಂಗ್ಯವಾಗಿ ಹಾಡಿ, ಅಪಮಾನ ಮಾಡಿದ್ದಾರೆ ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More