Author: admin

ಹಾಲಿನ ದರದ ಬೆನ್ನಲ್ಲೇ ತುಪ್ಪದ ಬೆಲೆಯನ್ನು ದಿಢೀರ್ ಹೆಚ್ಚಿಸಿದೆ.ಕಂಪನಿಯ ಡೈರಿ ಉತ್ಪನ್ನಗಳ ಬೆಲೆಯು ಕಾಲಕಾಲಕ್ಕೆ ಬದಲಾವಣೆ ಮತ್ತು ಮಾರಾಟಕ್ಕೆ ಒಳಪಟ್ಟಿರುತ್ತದೆ. ಇತ್ತೀಚೆಗೆ ಕಿತ್ತಳೆ ಹಾಲಿನ ಪ್ಯಾಕೆಟ್‌ಗಳು, ಮೊಸರು, ತುಪ್ಪ, ಐಸ್‌ಕ್ರೀಂ ಇತ್ಯಾದಿಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಹಾಲಿನ ಉತ್ಪನ್ನಗಳ ಬೆಲೆ ಏರಿಕೆಗೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವಾಗಲೇ ಇದೀಗ ಮತ್ತೆ ತುಪ್ಪದ ಬೆಲೆ ಏರಿಕೆಯಾಗಿದೆ. ತುಪ್ಪದ ಬೆಲೆ ಲೀಟರ್ ಗೆ 580 ರೂ.ನಿಂದ 630 ರೂ.ಗೆ ಏರಿಕೆಯಾಗಿದೆ. ಆವಿನ್ ನಲ್ಲಿ 5 ಲೀಟರ್ ತುಪ್ಪದ ಬಾಟಲಿ ರೂ.2,900ಕ್ಕೆ ಮಾರಾಟವಾಗುತ್ತಿದ್ದು, ಈಗ ರೂ.3,250.500 ಎಂಎಲ್ ಗೆ ಏರಿಕೆಯಾಗಿದೆ. ತುಪ್ಪವನ್ನು ರೂ.290ರಿಂದ ರೂ.315ಕ್ಕೆ ಹೆಚ್ಚಿಸಲಾಗಿದೆ. 200 ಮಿ.ಲೀ. 130 ರೂ.ನಿಂದ 145 ರೂ.ಗೆ ಮತ್ತು 100 ಎಂಎಲ್ ತುಪ್ಪವನ್ನು 70 ರಿಂದ 75 ರೂ.ಗೆ ಹೆಚ್ಚಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ವೈದ್ಯಕೀಯ ಕೋರ್ಸ್ ಗಳಿಗೆ ನೀಟ್ ಪ್ರವೇಶ ಪರೀಕ್ಷೆ ಮೇ 7 ರಂದು ದೇಶಾದ್ಯಂತ ನಡೆಯಲಿದೆ ಎಂದು ಘೋಷಿಸಲಾಗಿದೆ. ಜೆಇಇ ಮುಖ್ಯ ಪೂರ್ವಭಾವಿ ಪರೀಕ್ಷೆಯು ಜನವರಿ 24 ರಂದು ಪ್ರಾರಂಭವಾಗಲಿದೆ ಮತ್ತು ಎರಡನೇ ಪರೀಕ್ಷೆಯು ಏಪ್ರಿಲ್ 6 ರಂದು ಪ್ರಾರಂಭವಾಗಲಿದೆ ಎಂದು ಘೋಷಿಸಲಾಗಿದೆ. ಎಂ.ಬಿ.ಬಿ.ಎಸ್., ಬಿ.ಡಿ.ಎಸ್. ಜೂನಿಯರ್ ವೈದ್ಯಕೀಯ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ಪ್ರವೇಶಿಸಲು ದೇಶಾದ್ಯಂತ NEET ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) 2023-24ರ ಶೈಕ್ಷಣಿಕ ವರ್ಷಕ್ಕೆ ಕೆಲವು ಪ್ರಮುಖ ಪರೀಕ್ಷೆಗಳಿಗೆ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ. ವೇಳಾಪಟ್ಟಿಯ ಪ್ರಕಾರ, NTA ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET UG) 2023 ಅನ್ನು ಮೇ 7 ರಂದು ಮತ್ತು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET) 2023 ಅನ್ನು ಮೇ 21 ರಿಂದ 31, 2023 ರವರೆಗೆ ನಡೆಸುತ್ತದೆ. ಈ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು. ಮುಂದಿನ ವರ್ಷ ನೀವು ವಿವರಗಳನ್ನು ಪರಿಶೀಲಿಸಲು NTA ಅಧಿಕೃತ ವೆಬ್‌ಸೈಟ್ https://nta.ac.in/ ಗೆ…

Read More

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಈ ದುಷ್ಕೃತ್ಯ ನಡೆದಿದೆ. ಮೋದಿನಗರದ ಉಮೇಶ್ ಶರ್ಮಾ ಎಂಬ ವ್ಯಕ್ತಿ ತನ್ನ ಬಾಡಿಗೆ ಮನೆಯಲ್ಲಿದ್ದ ಪಿಎಚ್‌ಡಿ ವಿದ್ಯಾರ್ಥಿ ಅಂಕಿತ್ ಗೋಖರ್ ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ಶವವನ್ನು ತುಂಡು ತುಂಡಾಗಿ ಕತ್ತರಿಸಿ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾರೆ. ಘಟನೆ ಅಕ್ಟೋಬರ್ 5 ರಂದು ನಡೆದಿದೆ. ಇತ್ತೀಚೆಗಷ್ಟೇ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಉಮೇಶ್ ಶರ್ಮಾ ಮತ್ತು ಆತನ ಸ್ನೇಹಿತ ಪರ್ವೇಶ್ ನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. 100 ರೂ.ಗಾಗಿ ಉಮೇಶ್ ಶರ್ಮಾ ಪಿಎಚ್‌ಡಿ ವಿದ್ಯಾರ್ಥಿ ಅಂಕಿತ್‌ನನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಮನೆಯಲ್ಲಿ ದೇಹವನ್ನು ವಿರೂಪಗೊಳಿಸಲು ಬಳಸಿದ ಮರ, ಸುಟ್ಟ ಬಟ್ಟೆ, ಅಂಕಿತ್‌ನ ಕೂದಲು ಮತ್ತು ರಕ್ತದ ಕಲೆಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಂಕಿತ್ ಸ್ನೇಹಿತರು 3 ವಾರಗಳಿಂದ ಕರೆ ಮಾಡುತ್ತಿದ್ದರೂ ಅವರು ಸ್ವೀಕರಿಸಲಿಲ್ಲ. ಬಳಿಕ ಪೊಲೀಸರಿಗೆ ದೂರು ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.…

Read More

ರಾಯಚೂರು: ಚಿಪ್ಸ್​ ಪ್ಯಾಕೆಟ್​ನಲ್ಲಿ 500 ರೂಪಾಯಿಯ ಗರಿ ಗರಿ ನೋಟು ಸಿಗುತ್ತದೆ ಅಂದರೆ ನೀವು ನಂಬುತ್ತೀರಾ?ನಂಬಲು ಅಸಾಧ್ಯವಾದರೂ ಇದು ಸತ್ಯವಾಗಿದೆ.ಹೌದು, ಕುರ್​​​ಕುರೆ ಖರೀದಿ ಮಾಡಿ ಸುಮಾರು 20 ಸಾವಿರಕ್ಕೂ ಹೆಚ್ಚು ಹಣವನ್ನು ರಾಯಚೂರು ಜಿಲ್ಲೆಯ ಜನ ಪಡೆದಿದ್ದಾರೆ. ಜಿಲ್ಲೆಯ ಲಿಂಗಸಗೂರು ತಾಲೂಕಿನ ಹನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಕುರ್​ಕುರೆ ಪ್ಯಾಕೆಟ್​ ತೆಗೆದುಕೊಳ್ಳಲು ಜನ ಮುಗಿಬಿದ್ದಿದ್ದಾರೆ. 5 ರೂಪಾಯಿ ಕುರ್​ಕುರೆ ಪ್ಯಾಕೆಟ್​ನಲ್ಲಿ 500 ರೂ. ಬಂದಿದ್ದನ್ನು ಕಂಡು ಜನ ಸಂತಸಗೊಂಡಿದ್ದಾರೆ. ಫ್ಲಿಂಗ್ಸ್​ ಪಂಜಾಬ್​ ತಡ್ಕಾ ಹೆಸರಿನ ಕುರ್​ಕುರೆ ಬ್ರಾಂಡ್​ನ ಪ್ಯಾಕೆಟ್​ನಲ್ಲಿ ಹಣ ಪತ್ತೆಯಾಗಿದೆ. ಬಹುಶಃ ತಮ್ಮ ಉತ್ಪನ್ನದ ಜಾಹಿರಾತು ಹಾಗೂ ಮಾರಾಟವನ್ನು ಹೆಚ್ಚಿಸುವ ಸಲುವಾಗಿ ಕಂಪನಿಯೇ ಪ್ಯಾಕೆಟ್​ನಲ್ಲಿ ಹಣವಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಖಚಿತ ಕಾರಣ ಏನು ಎಂಬುದು ಯಾರಿಗೂ ತಿಳಿದಿಲ್ಲ. ತನಿಖೆಯ ಬಳಿಕವಷ್ಟೇ ಈ ಬಗ್ಗೆ ಖಚಿತ ಮಾಹಿತಿ ತಿಳಿಯಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…

Read More

ತಿಪಟೂರು: ದಕ್ಷತೆ, ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆಗೆ ಹೆಸರಾಗಿ ತಿಪಟೂರು ನಗರಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಸ್ಮಾನ್ ಸಾಬ್‌ ಗೆ ರಾಷ್ಟ್ರಪತಿ ಸೇವಾ ಪ್ರಶಸ್ತಿ ದೊರೆತಿರುವುದು ಅವರ ಕರ್ತವ್ಯ ನಿಷ್ಟೆಗೆ ಹಿಡಿದ ಕೈಗನ್ನಡಿ ಎಂದು ಬಿ.ಜೆ.ಪಿ. ಮುಖಂಡ ಕೆ.ಎಸ್. ಸದಾಶಿವಯ್ಯ ತಿಳಿಸಿದರು. ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಅದರಲ್ಲೂ ಗಾಂಧಿನಗರ ಪೊಲೀಸ್ ಚೌಕಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಸ್ಮಾನ್ ಸಾಬ್ ಅಪರಾಧ ದಳದ ಸದಸ್ಯರಾಗಿದ್ದು, ತಮ್ಮ ಕೆಲಸದ ಜವಾಬ್ದಾರಿಗಳನ್ನು ನಿಷ್ಠೆ, ಪ್ರಾಮಾಣಿಕ ಮತ್ತು ಸಮರ್ಪಣಾ ಭಾವದಿಂದ ನಿರ್ವಹಿಸುತ್ತಿದ್ದಾರೆ. ತಿಪಟೂರು ತಾಲ್ಲೂಕಿನ ಇಂತಹ ಸಾಧಕರಿಗೆ ರಾಷ್ಟ್ರಪತಿ ಸೇವಾ ಪ್ರಶಸ್ತಿ ದೊರೆತಿರುವುದು ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ತಿಪಟೂರು ತಾಲ್ಲೂಕಿನ ಹಾಗೂ ನಗರದ ಜನತೆಯ ಪರವಾಗಿ ಬಿ.ಜೆ.ಪಿ ಸ್ಥಾಪಕ ಕೆ.ಎಸ್ ಸದಾಶಿವಯ್ಯ ಅಭಿನಂದನೆ ಸಲ್ಲಿಸಿದ್ದಾರೆ. ವರದಿ: ಆನಂದ್, ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ನಾಸಿಕ್ : ಪತ್ನಿಯೇ ತನ್ನ ಪತಿಗೆ ಬ್ಲಾಕ್ ಮೇಲ್ ಮಾಡಿ 4.5 ಲಕ್ಷ ರೂಪಾಯಿ ಹಣ ಪಡೆದಿರುವ ಪ್ರಕರಣ ನಾಸಿಕ್​​ನಲ್ಲಿ ನಡೆದಿದೆ. ಮಹಿಳೆ ತನ್ನ ಬೆತ್ತಲೆ ಫೋಟೋಗಳನ್ನು ಪತಿಗೆ ಕಳುಹಿಸಿ, ಬ್ಲಾಕ್ ಮೇಲ್ ಮಾಡಿದ್ದಾಳೆ.ಈ ಸಂಬಂಧ ಪತಿ ಅಂಬಾಡ್ ಪೊಲೀಸ್ ಠಾಣೆಯಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತ ಪತಿ ನೀಡಿರುವ ದೂರಿನ ಪ್ರಕಾರ, ನನಗೆ ಅಪರಿಚಿತ ನಂಬರ್‌ನಿಂದ ಕರೆ ಬಂದಿದೆ. ಮದುವೆಯಾದ ನಂತರವೂ ನಿಮ್ಮ ಪತ್ನಿ ಬೇರೆ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ. ನನ್ನ ಬಳಿ ಅವರಿಬ್ಬರ ಖಾಸಗಿ ಫೋಟೋಗಳು ಮತ್ತು ವಿಡಿಯೋ ಇದೆ ಎಂದು ಹೇಳಿ ಪತ್ನಿಯ ನಗ್ನ ಫೋಟೋಗಳನ್ನು ಮೊಬೈಲ್ ಫೋನ್​​ಗೆ ಕಳುಹಿಸಿದ್ದಾರೆ. ಈ ಫೋಟೋಗಳನ್ನು ಎಲ್ಲೂ ಶೇರ್​ ಮಾಡಬಾರದು ಎಂದರೇ, ಹಣ ನೀಡುವಂತೆ ಕೇಳಿದ್ದಾರೆ.ಪತ್ನಿಯೇ ಪ್ರಿಯಕರನ ನೆರವಿನಿಂದ ಸಂಚು ರೂಪಿಸಿ, ಮೊಬೈಲ್​ನಲ್ಲಿ ಇಬ್ಬರ ಅಶ್ಲೀಲ ಫೋಟೋ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಾನ ಮರ್ಯಾದೆಗೆ ಹೆದರಿ 4 ಲಕ್ಷ 50 ಸಾವಿರ ರೂ.…

Read More

ಬೆಂಗಳೂರು : ಅಪರಾಧಿಗಳ ಪತ್ತೆ ಸಂಬಂಧ ಪೊಲೀಸರಿಗೆ ಸುಳಿವು ನೀಡುವ ಖಾಸಗಿ ವ್ಯಕ್ತಿಗಳಿಗೆ ರಾಜ್ಯ ಸರ್ಕಾರವು ಇನ್ಮುಂದೆ ಬರೋಬ್ಬರಿ 5 ಲಕ್ಷ ರೂ. ಬಹುಮಾನ ನೀಡಲಿದೆ. ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ , ಮಾದಕ ವಸ್ತು ಸಾಗಾಣಿಕೆ, ಸೇರಿದಂತೆ ಹಲವು ಸಮಾಜಘಾತುಕ ಚಟುವಟಿಕೆಗಳ ಮಾಹಿತಿ ನೀಡಿದರೆ ಭಾರೀ ಬಹುಮಾನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ಗೃಹ ಸಚಿವ ಅರಗಜ್ಞಾನೇಂದ್ರ ಮಾಹಿತಿ ನೀಡಿದ್ದು , ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ , ಕಳ್ಳಸಾಗಾಣಿಕೆ , ಮಾದಕ ವಸ್ತು ಸಾಗಾಣಿಕೆ, ಆಯುಧ ಕಳ್ಳಸಾಗಾಣಿಕೆ ಸೇರಿದಂತೆ ಹಲವು ಸಮಾಜಘಾತುಕ ಚಟುವಟಿಕೆಗಳ ಮಾಹಿತಿ ನೀಡಿದರೆ ಪ್ರಕರಣದ ತೀವ್ರತೆ ಆಧಾರದ ಮೇಲೆ ಕನಿಷ್ಠ 20 ಸಾವಿರ ರೂ.ನಿಂದ 5 ಲಕ್ಷ ರೂ.ರವರೆಗೆ ಬಹಮಾನ ಘೋಷಿಸುವ ಪ್ರಸ್ತಾವನೆಗೆ ಅನುಮತಿ ನೀಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ವಿಜಯನಗರ : ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ವಿಜಯನಗರ ಜಿಲ್ಲೆ ರಾಜಧಾನಿಯಾಗುವ ಸಾಧ್ಯತೆ ಇದೆ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ನಗರದ ಬಿಜೆಪಿ ಜಿಲ್ಲಾ ಭವನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಅವರು, ವಿಜಯನಗರ ನೆಲದ ಗುಣವೇ ವಿಶೇಷವಾಗಿದೆ. ಗತವೈಭವ ಸಾರಿದ ನಾಡು ಇದು. ಆದ್ದರಿಂದ ಉತ್ತರ ಕರ್ನಾಟಕ ರಾಜ್ಯವಾದರೆ ನೂತನ ವಿಜಯನಗರ ಜಿಲ್ಲೆ ರಾಜಧಾನಿಯಾಗುವ ಸಾಧ್ಯತೆ ಇದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ಇಂದು ನೇಕಾರ ಸಮ್ಮಾನ್ ಯೋಜನೆಯಡಿ ಕೈಮಗ್ಗ ನೇಕಾರರಿಗೆ ತಲಾ 5000 ರೂ. ಹಣ ಬಿಡುಗಡೆ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ಕೈಮಗ್ಗ ನೇಕಾರರಿಗೆ ವಾರ್ಷಿಕ ಆರ್ಥಿಕ ನೆರವು ತಲಾ 5000 ರೂ.ನಂತೆ 23.43 ಕೋಟಿ ರೂ. ಮೊತ್ತವನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಿದ್ದಾರೆ. ಸಂಕಷ್ಟದಲ್ಲಿರುವ ಕೈಮಗ್ಗ ನೇಕಾರರಿಗೆ ನೆರವಾಗಲು ನೇಕಾರ ಸಮ್ಮಾನ್ ಯೋಜನೆಯನ್ನು ಮುಖ್ಯಮಂತ್ರಿಗಳು 2020 -21ನೇ ಸಾಲಿನಿಂದ ಅನ್ವಯವಾಗುವಂತೆ ಘೋಷಣೆ ಮಾಡಿದ್ದು, ಕೈಮಗ್ಗ ನೇಕಾರರಿಗೆ ಇದು ನೆರವಾಗಲಿದೆ ಎಂದು ಕೈಮಗ್ಗ ಮತ್ತು ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕೊರಟಗೆರೆ: ತಾಲ್ಲೂಕಿನ ವಜ್ಜನಕುರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಜಿ.ಕಂಬದಹಳ್ಳಿ ಗ್ರಾಮದಲ್ಲಿ ರಂಗರಾಜು ಎಂಬ ರೈತನ ಎಡವಟ್ಟಿನಿಂದ ಇಡಿ ಗ್ರಾಮವೇ ಅಪಾಯಕ್ಕೀಡಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಅದೃಷ್ಟವಶಾತ್ ಯಾವುದೇ ಅಂತಹ ಘಟನೆಗಳು ಸಂಭವಿಸದೇ ಗ್ರಾಮಸ್ಥರು ದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಪಕ್ಕದ ಜಮೀನಿನ ಮಾಲೀಕ ಸರ್ಕಾರಿ ಭೂಮಿಯನ್ನು ಉಳುಮೆ ಮಾಡಿ ಒತ್ತುವರಿ ಮಾಡುವ ಭರದಲ್ಲಿ ರಸ್ತೆ ಪಕ್ಕದಲ್ಲಿ ವಿದ್ಯುತ್ ಕಂಬವಿದ್ದರು ಸಹ ರೈತ ರಂಗರಾಜುವಿನ ದುರಾಸೆಗೆ ಮಣ್ಣು ತೆಗೆಸಿ ಭೂ ಸ್ವಾಧೀನ ಮಾಡಿಕೊಂಡು ವಿದ್ಯುತ್ ಕಂಬವನ್ನು ನೆಲಕ್ಕುರುಳಿಸಿದ್ದಾನೆ. ಆದ್ದರಿಂದ ಇಂತಹ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬೆಸ್ಕಾಂ ಇಲಾಖೆ ನಿರ್ಲಕ್ಷ್ಯ: ಕಳೆದ ಎರಡು ತಿಂಗಳ ಹಿಂದೆಯೇ ಕಂಬ ಬೀಳುವ ಸಾಧ್ಯತೆ ಕಂಡುಬಂದಿತ್ತು. ಇದನ್ನು ಕಂಡ ಸ್ಥಳೀಯರು ತೀತಾ ಬೆಸ್ಕಾಂ ಇಲಾಖೆಯ ಗಮನಕ್ಕೆ ಅರ್ಜಿ ನೀಡಿ ಬೇರೆಡೆಗೆ ಕಂಬ ಸ್ಥಳಾಂತರಿಸಿ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಲು ತಿಳಿಸಿದ್ದರು . ಆದರೆ ಇವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ಅರ್ಜಿಯನ್ನು…

Read More