Subscribe to Updates
Get the latest creative news from FooBar about art, design and business.
- ನಾಡಪ್ರಭು ಕೆಂಪೇಗೌಡರದು ಜಾತ್ಯತೀತ ಆಡಳಿತ: ಶಾಸಕ ಎಂ.ಟಿ.ಕೃಷ್ಣಪ್ಪ
- ಸಾರ್ವಜನಿಕ ದೂರು ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಕರ್ತವ್ಯಲೋಪ | ಹೆಗ್ಗರೆ ಗ್ರಾ.ಪಂ. ಪಿಡಿಒ ಅಮಾನತು
- ತುಮಕೂರು: ಜಿಲ್ಲಾ ಪತ್ರಕರ್ತರ ಸಂಘದಿಂದ ಶ್ರವಣ ತಪಾಸಣಾ ಶಿಬಿರ
- ಕೊರಟಗೆರೆ: 10,016 ಮಕ್ಕಳಿಗೆ ಪೋಲಿಯೋ ಲಸಿಕಾ ಗುರಿ: ಡಾ.ಜ್ಯೋತ್ಸ್ನಾ ರೆಡ್ಡಿ ಕರೆ
- ಜುಲೈ 3ರಂದು ‘ದಲಿತ ಜನಾಗ್ರಹ ಸಮಾವೇಶ’: ಸರಗೂರು ಪ್ರವಾಸಿ ಮಂದಿರದಲ್ಲಿ ಪೋಸ್ಟರ್ ಬಿಡುಗಡೆ
- ಮಧುಗಿರಿ: ಸಿದ್ಧಾರ್ಥ ವಸತಿ ಪ್ರೌಢಶಾಲೆಯಲ್ಲಿ 2006ರ ಬ್ಯಾಚ್ ಹಳೆಯ ವಿದ್ಯಾರ್ಥಿಗಳಿಂದ ಉಚಿತ ಸಮವಸ್ತ್ರ ವಿತರಣೆ
- SIR: ಅರ್ಹ ನಾಗರಿಕರ ಮತದಾನದ ಹಕ್ಕು ಕಸಿದುಕೊಳ್ಳುವ ಅಪಾಯ: ಹೆಚ್.ವಿ. ವಾಸು ಆತಂಕ
- ರೈತರು ಭೂಮಿ ಹೊಂದುವುದಷ್ಟೇ ಅಲ್ಲ, ಕಾನೂನು ಅರಿವು ಬೆಳೆಸಿಕೊಳ್ಳುವುದು ಮುಖ್ಯ: ನಿವೃತ್ತ ಕೆಎಎಸ್ ಅಧಿಕಾರಿ ಕೆ.ಎನ್.ಲಿಂಗಪ್ಪ ಪ್ರತಿಪಾದನೆ
Author: admin
ಪ್ರಿಯಕರನನ್ನು ನಂಬಿ ಮದುವೆಯಾಗಲು ಕೆನಡಾದಿಂದ ಭಾರತಕ್ಕೆ ಬಂದಿದ್ದ ಯುವತಿ ಹತ್ಯೆಯಾಗಿದ್ದಾಳೆ. ಕಳೆದ ವರ್ಷ ಜೂನ್‌ನಲ್ಲಿ 23 ವರ್ಷದ ನೀಲಂ ಎಂಬಾಕೆಯನ್ನು ಆಕೆಯ ಗೆಳೆಯ ಸುನಿಲ್ ಗುಂಡಿಟ್ಟು ಕೊಂದಿದ್ದು, ನಂತರ ಆಕೆಯನ್ನು ತನ್ನ ಹೊಲದಲ್ಲಿ ಹೂತು ಹಾಕಿದ್ದ. ಆಕೆಯ ಅಸ್ಥಿಪಂಜರದ ಅವಶೇಷಗಳು ಮಂಗಳವಾರ ಭಿವಾನಿಯಲ್ಲಿ ಪೊಲೀಸರಿಗೆ ಪತ್ತೆಯಾಗಿವೆ. ನೀಲಂ ಅವರನ್ನು ಅಪಹರಿಸಿ ಕೊಂದಿರುವುದಾಗಿ ಸುನೀಲ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಅಪರಾಧವನ್ನು ಮರೆಮಾಚಲು ಆಕೆಯ ತಲೆಗೆ ಎರಡು ಬಾರಿ ಗುಂಡು ಹಾರಿಸಿ ನಂತರ ಶವವನ್ನು ತನ್ನ ಹೊಲದಲ್ಲಿ ಹೂತು ಹಾಕಿದ್ದಾನೆ ಎಂದು ಪೊಲೀಸ್ ಅಧಿಕಾರಿ ರವೀಂದ್ರ ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಬೆಳಗಾವಿ: ಮಹಾರಾಷ್ಟ್ರ ಗಡಿಯ ಕೊಗನೋಳಿ ಚೆಕ್ ಪೋಸ್ಟ್ ನಲ್ಲಿ ಬಸ್ ಪ್ರಯಾಣಿಕನೋರ್ವನಿಂದ ಒಂದೂವರೆ ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಕರ್ತವ್ಯ ನಿರತ ಪೊಲೀಸರು ಮತ್ತು ಚುನಾವಣೆ ಸಿಬ್ಬಂದಿ ಖಾಸಗಿ ಬಸ್ ಒಂದರಲ್ಲಿ ಮುಂಬೈನಿಂದ ಬರುತ್ತಿದ್ದ ಪ್ರಯಾಣಿಕನಲ್ಲಿದ್ದ ಹಣವನ್ನು ವಶಕ್ಕೆ ಪಡೆದರು. ಈ ಹಣಕ್ಕೆ ಆತನ ಬಳಿ ಯಾವುದೇ ದಾಖಲೆಗಳಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಎಸ್ಪಿ ಸಂಜೀವ ಪಾಟೀಲ ಅವರು ಕರ್ತವ್ಯ ನಿರತ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಈ ಹಿಂದೆ 124 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಈಗ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ನಿಪ್ಪಾಣಿ ಕ್ಷೇತ್ರದಲ್ಲಿ ಕಾಕಾ ಸಾಹೇಬ್ ಪಾಟೀಲ್, ಗೋಕಾಕ್ ಕ್ಷೇತ್ರ-ಮಹಾಂತೇಶ್ ಕಡಾಡಿ, ಬೀಳಗಿ ಕ್ಷೇತ್ರ – ಜೆ.ಟಿ.ಪಾಟೀಲ್, ಧಾರವಾಡ – ವಿನಯ್ ಕುಲಕರ್ಣಿ, ಗುರುಮಿಠಕಲ್ ಕ್ಷೇತ್ರ – ಬಾಬುರಾವ್ ಚಿಂಚನಸೂರ್, ಕಿತ್ತೂರು ಕ್ಷೇತ್ರ-ಬಾಬಾಸಾಹೇಬ್ ಬಿ.ಪಾಟೀಲ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಇದ್ರೀಷ್ ಪಾಷಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಹಾಗೂ ಅವರ ನಾಲ್ವರು ಸಹಚರರನ್ನು ರಾಜಸ್ಥಾನದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕನಕಪುರದ ಸಾತನೂರು ಬಳಿ ಪುನೀತ್ ಕೆರೆಹಳ್ಳಿ ಹಾಗೂ ತಂಡ ಗೋವುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ತಡೆದು ಜಾನುವಾರು ರಕ್ಷಣೆ ಮಾಡಿದ್ದರು. ಆದರೆ, ಮರುದಿನ ಅಂದರೆ ಏಪ್ರಿಲ್ 1 ರಂದು ಕ್ಯಾಂಟರ್‌ನಲ್ಲಿದ್ದ ಮಂಡ್ಯದ ಗುತ್ತಲು ನಿವಾಸಿ ಇದ್ರೀಷ್ ಪಾಷಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಇದ್ರೀಷ್ ಪಾಷಾ ಅವರ ಮೃತದೇಹ ಸಾತನೂರು ಗ್ರಾಮದ ಬಳಿ ಶವವಾಗಿ ಪತ್ತೆಯಾಗಿದ್ದರು. ಈ ಕುರಿತು ಪ್ರಕರಣ ದಾಖಲಾಗಿತ್ತು. ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಸೇರಿದಂತೆ ಒಟ್ಟು ಐವರನ್ನು ರಾಜಸ್ಥಾನದಲ್ಲಿ ಬಂಧಿಸುವಲ್ಲಿ ಸಾತನೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಗಳನ್ನು ಅಲ್ಲಿಂದ ಕರೆತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಮಧುಗಿರಿ: ನಗರದ ಮೊದಲನೇ ವಾರ್ಡ್ ಆಶೂಖಾನ ಸಮೀಪದಲ್ಲಿರುವ ನೀರಿನ ಟ್ಯಾಂಕ್ ನ ನಲ್ಲಿಗಳು ಒಡೆದು ಹೋಗಿದ್ದು, ಕಳೆದ ಎರಡು ತಿಂಗಳಿಂದ ನೀರು ಪೋಲಾಗುತ್ತಿದೆ, ನಿತ್ಯ ವಾರ್ಡಿನ ಹಲವಾರು ಮನೆಗಳಿಗೆ ನೀರು ಪೂರೈಸುವ ಈ ನೀರಿನ ಟ್ಯಾಂಕ್ ದುರಸ್ತಿ ಭಾಗ್ಯ ಕಾಣದೆ ನೀರು ಅವ್ಯಾಹತವಾಗಿ ಪೋಲಾಗುತ್ತಿದ್ದು, ಪುರಸಭೆ ಅಧಿಕಾರಿಗಳು ಹಾಗೂ ವಾರ್ಡ ಸದಸ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ದಿನೇ ದಿನೇ ಬಿಸಿಲಿನ ತಾಪ ಜಾಸ್ತಿಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಉಷ್ಣಾಂಶದ ಪ್ರಮಾಣ ಏರುತ್ತಿದೆ. ಚಳಿಗಾಲ ಮುಗಿದು ಬೇಸಿಗೆ ಪ್ರಾರಂಭದ ದಿನಗಳಲ್ಲಿಯೇ ನೀರಿನ ಹಾಹಾಕಾರ ಎಲ್ಲೆಡೆ ಶುರುವಾಗಿದೆ. ಇಂತಹ ಸನ್ನಿವೇಶದಲ್ಲಿ ನೀರಿನ ಟ್ಯಾಂಕ್ ನಲ್ಲಿಗಳಿಂದ ದಿನವಿಡೀ ನಿರಂತರವಾಗಿ ನೀರು ಚರಂಡಿಗೆ ಸೇರುತ್ತಿದೆ,ಈ ಟ್ಯಾಂಕ್ ತುಂಬಾ ತೀರಾ ಹಳೆದಾಗಿದ್ದು, ಮೊದಲೇ ಪುರಸಭೆಯಿಂದ ಸರಿಯಾಗಿ ನಿರ್ವಹಣೆ ಸಹ ಇಲ್ಲ, ಟ್ಯಾಂಕಿನ ಮೇಲ್ಚಾವಣಿ ಸಹ ಕುಸಿದಿದ್ದು ಗಾಳಿಯಲ್ಲಿ ಬರುವ ಧೂಳಿನಿಂದ ಟ್ಯಾಂಕ್ ನೀರು ಕಲುಶ್ಚಿತಗೊಳ್ಳುತ್ತದೆ. ಇದರ ಬಗ್ಗೆ ಪುರಸಭೆ ಆರೋಗ್ಯ ಅಧಿಕಾರಿಗಳು ಗಮನಹರಿಸಿ ಎಚ್ಚೆತ್ತುಕೊಳ್ಳಬೇಕು. ಆದರೆ, ಈ…
ಮಧುಗಿರಿ: ರಾಜ್ಯ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ದಿನಾಂಕ ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಮಧುಗಿರಿ ತಾಲ್ಲೂಕಿನ ಐ ಡಿ ಹಳ್ಳಿ ಹೋಬಳಿಯ ಹೋಸಕೋಟೆ ಗ್ರಾಮದ ತಿಮ್ಮಯ್ಯ ಬಿನ್ ಭೀಮಯ್ಯ ರವರ ಪೆಟ್ಟಿಗೆ ಅಂಗಡಿ ಮೇಲೆ ದಾಳಿ ಮಾಡಿ 16,944 ರೂ ಮೌಲ್ಯದ ಒಟ್ಟು 34.560ಲೀ ಮದ್ಯ, ಜಪ್ತಿ ಮಾಡಲಾಗಿದೆ. ತುಮಕೂರು ಜಿಲ್ಲೆ ಅಬಕಾರಿ ಉಪ ಆಯುಕ್ತ ರವರ ನಿರ್ದೇಶನದಂತೆ ಹಾಗೂ ಅಬಕಾರಿ ಉಪ ಅಧೀಕ್ಷಕರು ಮಧುಗಿರಿ ಉಪ ವಿಭಾಗರವರ ಮಾಗ೯ದಶ೯ನದಲ್ಲಿ ದಾಳಿ ನಡೆಸಿ ಮದ್ಯ ವಶಪಡಿಸಿಕೊಳ್ಳಲಾಗಿದ್ದು, ಆರೋಪಿತನ ವಿರುದ್ಧ CrPC -41(A)(1) ರಡಿಯಲ್ಲಿ ನೋಟಿಸ್ ಜಾರಿಗೊಳಿಸಿ ಪ್ರಕರಣವನ್ನು ದಾಖಲಿಸಲಾಗಿದೆ. ಅಬಕಾರಿ ಉಪ ನಿರೀಕ್ಷಕರಾದ ರಂಗದಾಮಯ್ಯ ಅವರು ಪ್ರಕರಣ ದಾಖಲಿಸಿದ್ದು, ಸಿಬ್ಬಂದಿಗಳಾದ ರಮೇಶ್, ಖಾನ್, ಶರಣಪ್ಪ , ನಿಂಗಣ್ಣ ಇವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ವರದಿ: ಅಬಿದ್, ಮಧುಗಿರಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…
ತುಮಕೂರು : ಕ್ಯಾಂಟರ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ಗಂಭೀರ ಗಾಯಗೊಂಡ ಘಟನೆ ತುಮಕೂರು ತಾಲ್ಲೂಕಿನ ಓಬಳಾಪುರದಲ್ಲಿ ನಡೆದಿದೆ. ರವಿಕುಮಾರ್ ಗಂಭೀರವಾಗಿ ಗಾಯಗೊಂಡವರು. ಗಾಯಗೊಂಡ ರವಿಕುಮಾರ್ ಅವರನ್ನ ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಇನ್ನು ಗಾಯಗೊಂಡ ರವಿಕುಮಾರ್ ಮಧುಗಿರಿ ತಾಲ್ಲೂಕಿನ ಬಡಚೌಡನಹಳ್ಳಿ ಗ್ರಾಮದ ನಿವಾಸಿ. ಕ್ಯಾಂಟರ್ ಸ್ಟೇರಿಂಗ್ ಲಾಕ್ ಆದ ಪರಿಣಾಮ ಈ ಘಟನೆ ನಡೆದಿದೆ ಅಂತಾ ಸ್ಥಳೀಕರು ತಿಳಿಸಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಈ ತಿಂಗಳು 9 ದಿನಗಳ ಬ್ಯಾಂಕ್ ರಜೆಗಳು ಬರಲಿವೆ. ಅದರಲ್ಲಿ ಬಹಳಷ್ಟು ಶುಕ್ರವಾರ ಮತ್ತು ಶನಿವಾರವೂ ಆಗಿರುವುದರಿಂದ ಬ್ಯಾಂಕ್ ವಹಿವಾಟುಗಳು ಮುಚ್ಚುವ ಮೊದಲು ಈ ದಿನಗಳ ಬಗ್ಗೆ ಕಾಳಜಿ ವಹಿಸಬೇಕು. ಏಪ್ರಿಲ್ 7 ಶುಭ ಶುಕ್ರವಾರ. ಏಪ್ರಿಲ್ 8 ರ ಶನಿವಾರವೂ ಬ್ಯಾಂಕ್ ರಜೆ. ಏಪ್ರಿಲ್ 9 ಭಾನುವಾರ. ಆದ್ದರಿಂದ, ಈ ವಾರ ಮೂರು ದಿನಗಳ ಬ್ಯಾಂಕ್ ರಜೆ ಇರುತ್ತದೆ. ಈ ದಿನಗಳಲ್ಲಿ ಬ್ಯಾಂಕ್ ವಹಿವಾಟು ಸಾಧ್ಯವಿಲ್ಲ. ಮುಂದಿನ ವಾರ ಶುಕ್ರವಾರ ಏಪ್ರಿಲ್ 14 ಅಂಬೇಡ್ಕರ್ ಜಯಂತಿ ಮತ್ತು ಏಪ್ರಿಲ್ 15 ಶನಿವಾರ ವಿಷು. ಈ ಎರಡು ದಿನಗಳ ನಂತರ ಭಾನುವಾರದ ನಂತರ, ಈ ವಾರವೂ ಮೂರು ದಿನಗಳ ಬ್ಯಾಂಕ್ ರಜೆ ಇರುತ್ತದೆ. ಮುಂದಿನ ವಾರ ಏಪ್ರಿಲ್ 21 ರಂದು ಈದ್-ಉಲ್-ಫಿತರ್. ಈ ದಿನ ಬ್ಯಾಂಕ್ ಕೆಲಸ ಮಾಡುವುದಿಲ್ಲ. ಏಪ್ರಿಲ್ 22 ರ ಶನಿವಾರ ಮತ್ತು ಏಪ್ರಿಲ್ 23 ರ ಭಾನುವಾರವೂ ಬ್ಯಾಂಕ್ ರಜೆ ಇರುತ್ತದೆ. ಮುಂದಿನ ಭಾನುವಾರ, ಏಪ್ರಿಲ್ 30…
ಬೆಂಗಳೂರು: ಕಳೆದ ಹತ್ತು ವರ್ಷಗಳಿಂದ ಪೊಲೀಸರ ಕೈಗೆ ಸಿಗದಂತೆ ನಾಪತ್ತೆಯಾಗಿದ್ದ ಮೂವರು ರೌಡಿಶೀಟರ್‌ಗಳನ್ನು ಬಂಧಿಸುವಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಖತಾರ್ನಾಕ್ ರೌಡಿಶೀಟರ್‌ಗಳಾದ ಮಹಮ್ಮದ್ ಜಬೀವುದ್ದೀನ್, ಮಹಮ್ಮದ್ ಮೆಹತಾಬ್ ಹಾಗೂ ದಿನೇಶ್ ಬಂಧಿತ ರೌಡಿಗಳು. ಈ ಮೂವರ ಮೇಲೆ ಬರೋಬ್ಬರಿ ಅರವತ್ತಕ್ಕೂ ಹೆಚ್ಚು ಕೇಸ್‌ಗಳಿದ್ದು, ಪೊಲೀಸರ ಕೈಗೆ ಸಿಗದಂತೆ ಓಡಾಡುತ್ತಿದ್ದರು. ಇಂತಹವರನ್ನೇ ಟಾರ್ಗೆಟ್ ಮಾಡಿ ಹುಡುಕಾಟ ನಡೆಸಿದ ಸಿಸಿಬಿ ಕೊನೆಗೂ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬೆಂಗಳೂರು ಸಿಸಿಬಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ನಗರದಲ್ಲಿ ಆ್ಯಕ್ಟಿವ್ ಆಗಿರುವ ರೌಡಿಶೀಟರ್‌ಗಳು, ವಾರೆಂಟ್ ಇದ್ದರೂ ಕೂಡ ಕೋರ್ಟ್‌ಗೆ ಹಾಜರಾಗದೆ ನಾಪತ್ತೆಯಾಗಿರುವ ರೌಡಿಶೀಟರ್‌ಗಳ ಮೇಲೆ ಕಣ್ಣಿಟ್ಟಿದ್ದಾರೆ. ಆ ನಿಟ್ಟಿನಲ್ಲಿ ಕಾರ್ಯಚರಣೆ ನಡೆಸಿದ ಸಿಸಿಬಿ ಪೊಲೀಸರು, ಕಳೆದ ಹತ್ತು ವರ್ಷಗಳಿಂದ ಪೊಲೀಸರ ಕೈಗೆ ಸಿಗದಂತೆ ನಾಪತ್ತೆಯಾಗಿದ್ದ ಮೂವರು ರೌಡಿಶೀಟರ್‌ಗಳನ್ನು ಬಂಧಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…
ಬೆಳಗಾವಿ: ಬೆಳ್ಳಂಬೆಳಗ್ಗೆ ಬೆಳಗಾವಿ ಚುನಾವಣಾ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು, ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಎರಡು ಕೋಟಿ ರೂ. ನಗದು ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ. ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಹಿರೇಬಾಗೇವಾಡಿ ಟೋಲ್ ಬಳಿ ಖಾಸಗಿ ಬಸ್‌ನಲ್ಲಿ ಸಾಗಿಸುತ್ತಿದ್ದ ಕಂತೆ ಕಂತೆ ಹಣವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮುಂಬೈನಿಂದ ಮಂಗಳೂರು ಕಡೆಗೆ ಹೊರಟಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ತಪಾಸಣೆ ನಡೆಸುವ ಸಂದರ್ಭದಲ್ಲಿ ಹಣದ ಬ್ಯಾಗ್ ಪತ್ತೆಯಾಗಿದೆ. ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಆದಾಯ ತೆರಿಗೆ ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA