ನಾಸಿಕ್ : ಪತ್ನಿಯೇ ತನ್ನ ಪತಿಗೆ ಬ್ಲಾಕ್ ಮೇಲ್ ಮಾಡಿ 4.5 ಲಕ್ಷ ರೂಪಾಯಿ ಹಣ ಪಡೆದಿರುವ ಪ್ರಕರಣ ನಾಸಿಕ್ನಲ್ಲಿ ನಡೆದಿದೆ. ಮಹಿಳೆ ತನ್ನ ಬೆತ್ತಲೆ ಫೋಟೋಗಳನ್ನು ಪತಿಗೆ ಕಳುಹಿಸಿ, ಬ್ಲಾಕ್ ಮೇಲ್ ಮಾಡಿದ್ದಾಳೆ.ಈ ಸಂಬಂಧ ಪತಿ ಅಂಬಾಡ್ ಪೊಲೀಸ್ ಠಾಣೆಯಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ತ ಪತಿ ನೀಡಿರುವ ದೂರಿನ ಪ್ರಕಾರ, ನನಗೆ ಅಪರಿಚಿತ ನಂಬರ್‌ನಿಂದ ಕರೆ ಬಂದಿದೆ. ಮದುವೆಯಾದ ನಂತರವೂ ನಿಮ್ಮ ಪತ್ನಿ ಬೇರೆ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ.
ನನ್ನ ಬಳಿ ಅವರಿಬ್ಬರ ಖಾಸಗಿ ಫೋಟೋಗಳು ಮತ್ತು ವಿಡಿಯೋ ಇದೆ ಎಂದು ಹೇಳಿ ಪತ್ನಿಯ ನಗ್ನ ಫೋಟೋಗಳನ್ನು ಮೊಬೈಲ್ ಫೋನ್ಗೆ ಕಳುಹಿಸಿದ್ದಾರೆ. ಈ ಫೋಟೋಗಳನ್ನು ಎಲ್ಲೂ ಶೇರ್ ಮಾಡಬಾರದು ಎಂದರೇ, ಹಣ ನೀಡುವಂತೆ ಕೇಳಿದ್ದಾರೆ.ಪತ್ನಿಯೇ ಪ್ರಿಯಕರನ ನೆರವಿನಿಂದ ಸಂಚು ರೂಪಿಸಿ, ಮೊಬೈಲ್ನಲ್ಲಿ ಇಬ್ಬರ ಅಶ್ಲೀಲ ಫೋಟೋ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾನ ಮರ್ಯಾದೆಗೆ ಹೆದರಿ 4 ಲಕ್ಷ 50 ಸಾವಿರ ರೂ. ನೀಡಿದ್ದೇನೆ. ಆಸ್ತಿ ಕಬಳಿಸುವ ಉದ್ದೇಶದಿಂದ ಪತ್ನಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಸಂತ್ರಸ್ತ ವ್ಯಕ್ತಿ ದೂರು ದಾಖಲಿಸಿದ್ದಾರೆ.ನ್ಯಾಯಾಲಯ ವಿಚಾರಣೆ ನಡೆಸಿ, ಪತ್ನಿ ಮತ್ತು ಆಕೆಯ ಪ್ರೇಮಿಯ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಿದೆ. ಬಳಿಕ ಅಂಬಾಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy