Subscribe to Updates
Get the latest creative news from FooBar about art, design and business.
- ಚಿರತೆಗಳ ಕಾದಾಟ: ಎರಡು ವರ್ಷದ ಗಂಡು ಚಿರತೆ ಸಾವು
- ತುಮಕೂರು| ಪತ್ರಕರ್ತರ ಸಂಘದ ಚುನಾವಣೆ: ಕೊರಟಗೆರೆಯ ಮೂವರು ಪತ್ರಕರ್ತರ ಆಯ್ಕೆ
- ಸರಗೂರು: ಕಾಡಾನೆ ದಾಳಿಯಿಂದ ಲಕ್ಷಾಂತರ ರೂ. ಬೆಳೆ ನಾಶ: ರೈತರಿಂದ ಆಕ್ರೋಶ
- ಬೀದರ್ | 96,510 ರೈತರ ಖಾತೆಗೆ ₹69 ಕೋಟಿ ಬೆಳೆ ಪರಿಹಾರದ ಹಣ ಜಮೆ: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
- ನಂದಿಹಳ್ಳಿ ಮಲ್ಲಸಂದ್ರ ಬೈಪಾಸ್ ರಸ್ತೆಗೆ ವಿರೋಧ: ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳು ವಾಪಸ್
- ಕುಣಿಗಲ್ | ನರೇಗಾ ಯೋಜನೆ ಬಿಲ್ ಪಾವತಿಗೆ ಒತ್ತಾಯಿಸಿ ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟನೆ
- ಅಂತರ್ಜಲ ಹೆಚ್ಚಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ: ಶಾಸಕ ಟಿ.ಬಿ.ಜಯಚಂದ್ರ
- ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು ಕಾನೂನಾತ್ಮಕವಾಗಿರಬೇಕು: ಶಾಸಕ ಸಿ.ಬಿ.ಸುರೇಶ್ ಬಾಬು
Author: admin
ವ್ಯಕ್ತಿಯೊಬ್ಬ 9 ಮಕ್ಕಳನ್ನು ಸೈಕಲ್ ಮೇಲೆ ಕೂರಿಸಿಕೊಂಡು ಹೋಗುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶ್ವದಲ್ಲಿ ಜನಸಂಖ್ಯೆ 800 ಕೋಟಿ ದಾಟಿದ ದಾಖಲೆಯ ಬೆನ್ನಲ್ಲೇ ಜೈಕಿ ಯಾದವ್ ಎಂಬ ವ್ಯಕ್ತಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಈ ಚಿಕ್ಕ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಗತ್ತಿನಲ್ಲಿ ಜನಸಂಖ್ಯೆ 800 ಕೋಟಿ ದಾಟಿದೆ. ಈ ರೀತಿಯ ಜನರು ಇಂತಹ ಸಾಧನೆಗಳಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ ಎಂದು ಜೈಕಿ ಯಾದವ್ ವೀಡಿಯೊ ಮೇಲೆ ಶೀರ್ಷಿಕೆ ಪ್ರಕಟಿಸಿದ್ದಾರೆ. ಮೂವರು ಮಕ್ಕಳು ಹಿಂಬದಿ ಚಕ್ರದ ಮೇಲೆ ಕುಳಿತಿದ್ದರೆ, ಒಬ್ಬ ಎಲ್ಲರ ಮೇಲೆ ನಿಂತಿದ್ದಾನೆ. ಮತ್ತೊಬ್ಬಾಕೆ ವ್ಯಕ್ತಿಯ ಭುಜ ಹಿಡಿದು ನಿಂತಿದ್ದಾಳೆ. ಇಬ್ಬರು ಮಕ್ಕಳು ಹ್ಯಾಂಡಲ್ ಮೇಲೆ ಕುಳಿದಿದ್ದರೆ, ಒಬ್ಬ ಮುಂದಿನ ಚಕ್ರದ ಮೇಲೆ ಹ್ಯಾಂಡಲ್ ಹಿಡಿದು ಕುಳಿತಿದ್ದಾನೆ. ಮಂಗಳವಾರ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ಇಲ್ಲಿಯವರೆಗೆ 2,16,000 ಜನರು ವೀಕ್ಷಿಸಿದ್ದರೆ, 7 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಕೆಲವರು ಪೋಸ್ಟ್ ಅನ್ನು ಒಂದೇ…
ಮಂಗಳೂರಿನಲ್ಲಿ ಅಟೋದಲ್ಲಿ ಕುಕ್ಕರ್ ಸ್ಫೋಟ ಪ್ರಕರಣ ಉಗ್ರರ ಸಂಚು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ದೃಢಪಡಿಸಿದ್ದಾರೆ. ಭಾನುವಾರ ಬೆಳಿಗ್ಗೆ ಟ್ವೀಟ್ ಮಾಡಿದ ಅವರು, ಉದ್ದೇಶಪೂರ್ವಕವಾಗಿ ಸಾವು ನೋವು ಹಾನಿ ಉಂಟು ಮಾಡಲು ಮಾಡಿದ್ದ ಸಂಚು ಇದಾಗಿದ್ದು, ಕೇಂದ್ರ ತನಿಖಾ ಸಂಸ್ಥೆಗಳ ಜೊತೆ ಕರ್ನಾಟಕ ಪೊಲೀಸ್ ಸೂಕ್ಷ್ಮವಾಗಿ, ಆಳವಾಗಿ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ. ಶನಿವಾರ ಸಂಜೆ 5 ಗಂಟೆಯ ವೇಳೆ ಮಂಗಳೂರಿನ ಪಂಪ್‍ವೆಲ್‍ನಿಂದ ನಾಗುರಿ ಕಡೆ ಚಲಿಸುತ್ತಿದ್ದ ಆಟೋ ಕಂಕನಾಡಿ ಪೊಲೀಸ್ ಠಾಣೆ ಬಳಿ ಸ್ಫೋಟಗೊಂಡಿತ್ತು. ದಾರಿ ಮಧ್ಯೆ ವ್ಯಕ್ತಿಯೊಬ್ಬ ಕೈಯಲ್ಲಿ ಕುಕ್ಕರ್ ಹಿಡಿದುಕೊಂಡು ಆಟೋ ಹತ್ತಿದ ಕೆಲವೇ ಕ್ಷಣಗಳಲ್ಲಿ ಸ್ಫೋಟ ಸಂಭವಿಸಿತ್ತು. ಆಟೋದಲ್ಲಿ ಸ್ಫೋಟಗೊಂಡ ಕುಕ್ಕರ್ ನಲ್ಲಿ ನಟ್, ಬೋಲ್ಟ್, ಬ್ಯಾಟರಿ, ಸರ್ಕಿಟ್ ರೀತಿಯ ವೈರಿಂಗ್ ಇರುವ ವಸ್ತುಗಳು ಪತ್ತೆಯಾಗಿದೆ. ಲಘು ತೀವ್ರತೆ ಇರುವ ಸ್ಪೋಟಕ ಬಳಸಿರುವ ಶಂಕೆ ವ್ಯಕ್ತವಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ, ಬಾಂಬ್ ನಿಷ್ಕ್ರೀಯ ದಳದಿಂದ ತೀವ್ರ ಪರಿಶೀಲನೆ ನಡೆಯುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…
ಚಲಿಸುವ ಕಾರಿನಲ್ಲಿ 19 ವರ್ಷದ ಯುವ ರೂಪದರ್ಶಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಎರ್ನಾಕುಲಂ ಪೊಲೀಸರು ಒಬ್ಬ ಮಹಿಳೆ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಕೊಚ್ಚಿನ್ ಶಿಪ್ ಯಾರ್ಡ್ ಬಳಿಯ ಪಬ್ ಗೆ ತೆರಳಿದ್ದು, ಮದ್ಯ ಸೇವಿಸಿದ್ದಳು. ಈ ವೇಳೆ ಕಾಕ್ಕನಾಡ್ ಗೆ ಡ್ರಾಪ್ ಕೊಡುವ ನೆಪದಲ್ಲಿ ಕರೆದೊಯ್ಯುವಾಗ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ. ರಾತ್ರಿಯೀಡಿ ರೂಪದರ್ಶಿ ಮೇಲೆ ಅತ್ಯಾಚಾರ ಎಸಗಲಾಗಿದ್ದು, ಮನೆ ಬಳಿ ಬಿಟ್ಟ ದುಷ್ಕರ್ಮಿಗಳು ಹೋಗಿದ್ದಾರೆ. ರೂಪದರ್ಶಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಆಕೆಯ ಮೇಲೆ ದೌರ್ಜನ್ಯ ಎಸಗಿರುವುದು ದೃಢಪಟ್ಟಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ : ಜನರ ಮನೆಬಾಗಿಲಿಗೆ ಆಡಳಿತವನ್ನು ಕೊಂಡೊಯ್ದು ಸ್ಥಳೀಯವಾಗಿ ಅವರ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬ ಸರಕಾರದ ಆಶುದಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಇಂದು ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು. ಬೆಳಿಗ್ಗೆ ಸವದತ್ತಿ ಯಲ್ಲಮ್ಮ ದೇವಿಯ ದರ್ಶನವನ್ನು ಪಡೆದುಕೊಂಡು ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳನ್ನು ಬಸವೇಶ್ವರ ವೃತ್ತದ ಬಳಿ ಗ್ರಾಮಸ್ಥರು ಪ್ರೀತಿಯಿಂದ ಬರಮಾಡಿಕೊಂಡರು. ಪೂರ್ಣಕುಂಭ ಹೊತ್ತ ಮಹಿಳೆಯರು ಹಾಗೂ ಡೊಳ್ಳಿನ ಮೇಳದವರು ಮೆರವಣ ಗೆಯ ಮೂಲಕ ಕಾರ್ಯಕ್ರಮದ ವೇದಿಕೆ ಇರುವ ರೇ.ಹ.ಹಳಮನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯವರೆಗೆ ಕರೆದುಕೊಂಡು ಹೋದರು. ಬಾರ್ ಗೆ ನುಗ್ಗಿ ಬಾಗಿಲು ಬಂದ್ ಮಾಡಿಸಿದ ಜಿಲ್ಲಾಧಿಕಾರಿ!: ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಕಾರಿನಿಂದಿಳಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲರು ನೇರವಾಗಿ ಪಕ್ದಲ್ಲೇ ಇರುವ ಆನಂದ ಬ್ರ್ಯಾಂಡಿ ಶಾಪ್ ಗೆ ತೆರಳಿ ಲೈಸೆನ್ಸ್, ಲಭ್ಯವಿರುವ ಮದ್ಯದ ಸಂಗ್ರಹ ಹಾಗೂ ಗುಣಮಟ್ಟದ ಬಗ್ಗೆ ಪರಿಶೀಲನೆ ಕೈಗೊಂಡರು. ಜಿಲ್ಲಾಧಿಕಾರಿಗಳು ಬಸವೇಶ್ವರ ವೃತ್ತದಲ್ಲಿ ಇರುವ ಆನಂದ…
ಮಂಗಳೂರು: 20,000 ಅಂಗನವಾಡಿ ಮತ್ತು 6000 ಪ್ರಾಥಮಿಕ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಉದ್ದೇಶಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 25 ರಂದು ಎನ್ ಇಪಿ ಜಾರಿಗೆ ಉದ್ದೇಶಿಸಿದ್ದು, ಇದರ ರಾಜ್ಯ ಪಠ್ಯಕ್ರಮ ನವೆಂಬರ್ ಅಂತ್ಯಕ್ಕೆ ಬರಲಿದೆ ಎಂದು ಹೇಳಿದ್ದಾರೆ. ಎನ್ ಇಪಿ ವಿಶೇಷತೆ ಎಂದರೆ ಪಠ್ಯಪುಸ್ತಕಗಳನ್ನು ಹೇರುವುದಿಲ್ಲ. ಬದಲಾಗಿ ಪಠ್ಯದ ಹೊರೆ ಕಡಿಮೆಯಾಗಲಿದೆ. ಒಂದನೇ ಮತ್ತು ಎರಡನೇ ತರಗತಿಗೆ ಎರಡೆರಡು ಪುಸ್ತಕಗಳು ಇರುತ್ತವೆ. ಸಂಖ್ಯಾಶಾಸ್ತ್ರ ವಿಚಾರಗಳನ್ನು ತಿಳಿಸುವುದು, ಅಕ್ಷರ ಜ್ಞಾನ ನೀಡುವ ಪುಸ್ತಕ ಇರುತ್ತದೆ. ಈಗಾಗಲೇ ರಾಜ್ಯದ ಶಾಲೆಗಳಲ್ಲಿ ಮಕ್ಕಳಿಗೆ ಚಿಲಿಪಿಲಿ, ನಲಿ-ಕಲಿ ಮೂಲಕ ಎನ್ ಇಪಿ ಆಶಯಗಳನ್ನು ಜಾರಿಗೊಳಿಸಲಾಗಿದೆ. ಅಂಗನವಾಡಿ ಶಿಕ್ಷಕಿಯರಿಗೆ ಎನ್‌ಇಪಿ ತರಬೇತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಬೆಳಗಾವಿ : ಕಳಸಾ, ಬಂಡೂರಿ ಯೋಜನೆ ಕಾಮಗಾರಿ ನಡೆಯುವ ಸ್ಥಳಕ್ಕೆ ಗೋವಾ ಶಾಸಕ ವಿಜಯ ಸರದೇಸಾಯಿ ಅನುಮತಿ ಇಲ್ಲದೆ ಪ್ರವೇಶಿಸಿದ ಘಟನೆ ನಡೆದಿದೆ. ಖಾನಾಪುರ ತಾಲೂಕಿನ ಕಣಕುಂಬಿ ಪ್ರದೇಶಕ್ಕೆ ವಿಜಯ ಸರದೇಸಾಯಿ ಭೇಟಿ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಗೋವಾ ಫಾರ್ವರ್ಡ್ ಪಾರ್ಟಿಯ ಅಧ್ಯಕ್ಷರೂ ಆಗಿರುವ ವಿಜಯ ಸರದೇಸಾಯಿ, ಯೋಜನೆಗೆ ಸಂಬಂಧಿಸಿ ಕರ್ನಾಟಕದ ವಿರುದ್ಧ ಆರೋಪಿಸಿದ್ದಾರೆ. ಕಾಮಗಾರಿಯ ಫೋಟೊಗಳನ್ನು ಗೋವಾದಲ್ಲಿ ಬಿಡುಗಡೆ ಮಾಡಿದ್ದಾರೆ. ಗೋವಾದ ಪರಿಸರವಾದಿಗಳನ್ನು ಎತ್ತಿಕಟ್ಟುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಮಹದಾಯಿ ಯೋಜನೆ ಅನುಷ್ಠಾನಕ್ಕೆ ಗೋವಾ ಆಕ್ಷೇಪಿಸುತ್ತಿದೆ. ಬಂಡೂರಿ ನೀರು ಬಳಸಲು ಅಣೆಕಟ್ಟೆ ಹಾಗೂ ಅರಣ್ಯ ಪ್ರದೇಶದಲ್ಲಿ ಟನಲ್ ನಿರ್ಮಾಣದ ಅಗತ್ಯ ಇದೆ. ಈ ಕಾಮಗಾರಿಗೆ ಗೋವಾ ಅಡ್ಡಿಪಡಿಸುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಚಾಮರಾಜನಗರ : ದಲಿತ ಮಹಿಳೆ ಟ್ಯಾಂಕ್ ನಿಂದ ನೀರು ಕುಡಿದರೆಂಬ ಕಾರಣಕ್ಕೆ ಟ್ಯಾಂಕ್ ಅನ್ನು ಖಾಲಿ ಮಾಡಿಸಿ ಸ್ವಚ್ಛಗೊಳಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ನಡೆದಿದೆ. ದಲಿತ ಯುವಕನ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ವಧುವಿನ ಕಡೆಯಿಂದ ಹೆಚ್.ಡಿ.ಕೋಟೆ ತಾಲ್ಲೂಕಿನ ಸರಗೂರಿನಿಂದ ಮಹಿಳೆಯು ಬಂದಿದ್ದರು. ಈ ವೇಳೆ ಮಧ್ಯಾಹ್ನದ ಊಟ ಮುಗಿಸಿ ಬಸ್ ಗೆ ಹೋಗುವ ಸಂದರ್ಭದಲ್ಲಿ ಮಹಿಳೆಯೊಬ್ಬರು ಗ್ರಾಮದ ಸವರ್ಣೀಯರ ಬೀದಿಯಲ್ಲಿನ ತೊಂಬೆಯ ನಲ್ಲಿಯಲ್ಲಿ ನೀರು ಕುಡಿದಿದ್ದಾರೆ. ಅದೇ ಬೀದಿಯವರು ಇದನ್ನು ನೋಡಿದ್ದಾರೆ. ಆ ಮಹಿಳೆ ದಲಿತ ಸಮುದಾಯದವಳು ಎಂದು ಗೊತ್ತಾಗುತ್ತಿದ್ದಂತೆ ನೀರನ್ನು ಖಾಲಿ ಮಾಡಿಸಿ ಗೋ ಮೂತ್ರದಿಂದ ತೊಳೆದಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಹೆಚ್.ಡಿ.ಕೋಟೆ: ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಪ್ರಯುಕ್ತ ಕಂದಾಯ ಸಚಿವ ಆರ್. ಅಶೋಕ್ ಹೆಚ್ ಡಿ ಕೋಟೆ ತಾಲ್ಲೂಕಿನ ಎನ್.ಬೇಗೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಭೀಮನ ಕೊಲ್ಲಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದರು. ನಂದಿ ಕಂಬಕ್ಕೆ ಪೂಜೆ ಸಲ್ಲಿಸಿ ಸಚಿವ ಅಶೋಕ್ ರನ್ನು ಟ್ರಾಕ್ಟರ್ ನಲ್ಲಿ ಸುಮಾರು ಇನ್ನೂರು ಮೀಟರ್ ತನಕ ಜಾನಪದ ಕಲಾ ತಂಡಗಳ ಮೂಲಕ ಮೆರವಣಿಗೆ ತರಲಾಯಿತು. ಭೀಮನಕೊಲ್ಲಿ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಆರ್.ಅಶೋಕ್ ಹಾಗೂ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ರವರು ಪುಷ್ಪಾರ್ಚನೆ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಕಾರ್ಯಕ್ರಮದ ಪ್ರಯುಕ್ತ ತೆರೆದಿದ್ದ ಮಳಿಗೆಗಳನ್ನು ಉದ್ಘಾಟಿಸಿ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು ವರದಿ: ಮಲಾರ ಮಹದೇವಸ್ವಾಮಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಹೆಚ್.ಡಿ.ಕೋಟೆ: ಕಳೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಚರ್ಚಿಸಿರುವ ವಿಷಯಗಳ ಬಗ್ಗೆ ನೀಡಿರುವ ಅನು ಪಾಲನ ವರದಿಯನ್ನು ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ನೀಡಿದ್ದಾರೆ. ನಾವು ಹೇಳಿರುವುದು ಒಂದು, ಇಲ್ಲಿ ಬರೆದಿರೋದು ಒಂದು, ಇಲ್ಲಿ ನಡೆದಿರುವುದು ಮತ್ತೊಂದು. ಈ ವಿಷಯ ಸಭೆಯಲ್ಲಿ ತೀರ್ಮಾನವೇ ಆಗಿಲ್ಲ, ಇದರ ಬಗ್ಗೆ ಚರ್ಚೆ ಆಗಿಲ್ಲ ಹೇಗ್ರಿ ಅನುಪಾಲನ ವರದಿ ನೀಡಿದ್ದೀರಿ? ಎಂದು ಪುರಸಭೆ ಸದಸ್ಯರು ಒಬ್ಬರ ಮೇಲೆ ಒಬ್ಬರಂತೆ ಪುರಸಭೆ ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡ ಘಟನೆಗೆ ಇಂದಿನ ಸಭೆ ಸಾಕ್ಷಿ ಆಯಿತು. ಪಟ್ಟಣದ ಪುರಸಭೆ ದಿವಂಗತ ಎಸ್.ಚಿಕ್ಕಮಾಧು ಸಭಾಂಗಣದಲ್ಲಿ ಶುಕ್ರವಾರ ಪುರಸಭೆ ಅಧ್ಯಕ್ಷ ಅನಿತಾ ನಿಂಗನಾಯಕ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಸಭೆ ಪ್ರಾರಂಭವಾಗುತ್ತಿದ್ದಂತೆ ಮುಂದೂಡಿದ ಸಾಮಾನ್ಯ ಸಭೆ ನಡಾವಳಿಯ ಅನುಪಾಲನ ವರದಿಯಲ್ಲಿ ಸದಸ್ಯರು ಚರ್ಚಿಸಿದ್ದ ವಿಷಯಗಳನ್ನು ಕೈ ಬಿಟ್ಟಿರುವುದು ಹಾಗೂ ಅಧಿಕಾರಿಗಳು ತಮಗೆ ಇಷ್ಟ ಬಂದಂತೆ ಅನು ಪಾಲನಾ ವರದಿ ನೀಡಿರುವುದಕ್ಕೆ ಗರಂ ಅದ ಸದಸ್ಯರು ಮುಖ್ಯ ಅಧಿಕಾರಿ ಸುರೇಶ್ ಸೇರಿದಂತೆ…
ಇನ್ಮುಂದೆ ಫೇಸ್‌ಬುಕ್‌ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡುವಾಗ ಧರ್ಮ, ರಾಜಕೀಯ, ಲೈಂಗಿಕ ಆದ್ಯತೆಗೆ ಸಂಬಂಧಿತ ಫೀಲ್ಡ್‌ಗಳು ಇರುವುದಿಲ್ಲ ಎಂದು ಮೆಟಾ ಸಂಸ್ಥೆ ತಿಳಿಸಿದೆ. ಫೇಸ್‌ಬುಕ್ ಆರಂಭಗೊಂಡಾಗ ಖಾಸಗಿತನ ರಕ್ಷಣೆ, ಮಾಹಿತಿ ಸೋರಿಕೆಯ ನಿಯಂತ್ರಣ ವಿಚಾರ ದೊಡ್ಡ ಸಮಸ್ಯೆಯಾಗಿ ಇರಲಿಲ್ಲ. ಜನರು ಅಳುಕಿಲ್ಲದೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಪ್ರಸ್ತುತ ಮಾಹಿತಿ ಸೋರಿಕೆ ಹಾಗೂ ಖಾಸಗಿತನವು ಗಂಭೀರ ವಿಚಾರವಾಗಿದೆ ಎಂದು ಮೆಟಾ ಹೇಳಿದೆ. ವೈಯಕ್ತಿಕ ಮಾಹಿತಿಯ ದುರ್ಬಳಕೆಯೂ ಆಗುತ್ತಿದೆ. ಹೀಗಾಗಿ ತೀರಾ ವೈಯಕ್ತಿಕವಾದ ಮಾಹಿತಿಯನ್ನು ಪ್ರೊಫೈಲ್‌ನಲ್ಲಿ ಸಂಗ್ರಹಿಸದಿರಲು ಸಂಸ್ಥೆಯು ನಿರ್ಧರಿಸಿದೆ ಎಂದು ಸಂಸ್ಥೆ ತಿಳಿಸಿದೆ. ಭಾರತದಲ್ಲಿ ವೈಯಕ್ತಿಕ ದತ್ತಾಂಶ ಸೋರಿಕೆ ತಡೆಯಲು ಕೇಂದ್ರ ಸರಕಾರ ಬಿಗಿ ಕ್ರಮಕ್ಕೆ ಮುಂದಾಗಿರುವ ಸಂದರ್ಭದಲ್ಲೇ ಫೇಸ್‌ಬುಕ್‌ನಿಂದ ಇಂಥಹದ್ದೊಂದು ಮಾಹಿತಿ ಪ್ರಕಟವಾಗಿದೆ. ಮುಂದಿನ ತಿಂಗಳಿಂದ ಬಳಕೆದಾರರ ವೈಯಕ್ತಿಕ ಮಾಹಿತಿ ವಿಭಾಗದಲ್ಲಿ ಅವರ ವಿಳಾಸ, ಧರ್ಮ, ರಾಜಕೀಯ ಅಭಿಪ್ರಾಯ, ಆಸಕ್ತಿಗಳು ಇತ್ಯಾದಿ ಕುರಿತಾದ ಮಾಹಿತಿಯನ್ನು ಕಂಪನಿ ಕಲೆಹಾಕುವುದಿಲ್ಲ ಎಂದು ಫೇಸ್‌ಬುಕ್ ಸ್ಪಷ್ಟನೆ ನೀಡಿದೆ. ಹಿಂದಿನಂತೆ ಇಂಥ ಮಾಹಿತಿಗಳನ್ನು ಸಂಗ್ರಹಿಸಿ, ಅದಕ್ಕೆ ಅನುಗುಣವಾಗಿ…