ವ್ಯಕ್ತಿಯೊಬ್ಬ 9 ಮಕ್ಕಳನ್ನು ಸೈಕಲ್ ಮೇಲೆ ಕೂರಿಸಿಕೊಂಡು ಹೋಗುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶ್ವದಲ್ಲಿ ಜನಸಂಖ್ಯೆ 800 ಕೋಟಿ ದಾಟಿದ ದಾಖಲೆಯ ಬೆನ್ನಲ್ಲೇ ಜೈಕಿ ಯಾದವ್ ಎಂಬ ವ್ಯಕ್ತಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಈ ಚಿಕ್ಕ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಗತ್ತಿನಲ್ಲಿ ಜನಸಂಖ್ಯೆ 800 ಕೋಟಿ ದಾಟಿದೆ. ಈ ರೀತಿಯ ಜನರು ಇಂತಹ ಸಾಧನೆಗಳಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ ಎಂದು ಜೈಕಿ ಯಾದವ್ ವೀಡಿಯೊ ಮೇಲೆ ಶೀರ್ಷಿಕೆ ಪ್ರಕಟಿಸಿದ್ದಾರೆ.
ಮೂವರು ಮಕ್ಕಳು ಹಿಂಬದಿ ಚಕ್ರದ ಮೇಲೆ ಕುಳಿತಿದ್ದರೆ, ಒಬ್ಬ ಎಲ್ಲರ ಮೇಲೆ ನಿಂತಿದ್ದಾನೆ. ಮತ್ತೊಬ್ಬಾಕೆ ವ್ಯಕ್ತಿಯ ಭುಜ ಹಿಡಿದು ನಿಂತಿದ್ದಾಳೆ. ಇಬ್ಬರು ಮಕ್ಕಳು ಹ್ಯಾಂಡಲ್ ಮೇಲೆ ಕುಳಿದಿದ್ದರೆ, ಒಬ್ಬ ಮುಂದಿನ ಚಕ್ರದ ಮೇಲೆ ಹ್ಯಾಂಡಲ್ ಹಿಡಿದು ಕುಳಿತಿದ್ದಾನೆ.
ಮಂಗಳವಾರ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ಇಲ್ಲಿಯವರೆಗೆ 2,16,000 ಜನರು ವೀಕ್ಷಿಸಿದ್ದರೆ, 7 ಸಾವಿರ ಮಂದಿ ಲೈಕ್ ಮಾಡಿದ್ದಾರೆ.
ಕೆಲವರು ಪೋಸ್ಟ್ ಅನ್ನು ಒಂದೇ ದೃಷ್ಟಿಯಿಂದ ನೋಡುವುದು ತಪ್ಪಾಗುತ್ತದೆ. ಏಕೆಂದರೆ ಎಲ್ಲಾ 9 ಮಕ್ಕಳು ಆತನದ್ದೇ ಎಂಬುದು ಹೇಳಲಾಗದು. ಅವರಿಗೆ ಸಾರ್ವಜನಿಕ ಸಾರಿಗೆ ಸೌಲಭ್ಯ ಸಿಗದೇ ಇರಬಹುದು. ಪುಸ್ತಕದ ಕವರ್ ನೋಡಿ ಪುಸ್ತಕ ಅಳೆಯಲಾಗದು ಎಂದು ಪ್ರತಿಕ್ರಿಯಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy