Author: admin

ಲಂಡನ್ : ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಮುರುಗೇಶ ಆರ್ ನಿರಾಣಿ ಅವರು ವೇದಾಂತ ಗ್ರೂಪ್ ಅಧ್ಯಕ್ಷರಾದ ಅನಿಲ್ ಅಗರ್ವಾಲ್ ಅವರನ್ನು ಲಂಡನ್ನಲ್ಲಿ ಗುರುವಾರ ಸಂಜೆ ಭೇಟಿ ಮಾಡಿ, ರಾಜ್ಯದಲ್ಲಿನ ಹೂಡಿಕೆ ಅವಕಾಶಗಳ ಕುರಿತು ಮಾಹಿತಿ ನೀಡಿದರು. ನವೆಂಬರ್ 2ರಿಂದ 4ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಅಂತಾರಾಷ್ಟ್ರೀಯ ರೋಡ್ ಶೋ ಭಾಗವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಮುರುಗೇಶ ಆರ್. ನಿರಾಣಿ ನೇತೃತ್ವದ ನಿಯೋಗ 7 ದಿನಗಳ ಯೂರೋಪ್ ಪ್ರವಾಸ ಕೈಗೊಂಡಿದೆ. ನಿಯೋಗವು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಡಾ. ಇ.ವಿ ರಮಣರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ ಒಳಗೊಂಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬಾಗಲಕೋಟೆ: ಕೆಎಸ್‌ ಆರ್ ಟಿಸಿ ಬಸ್ ನಿಯಂತ್ರಣ ತಪ್ಪಿದ ಪರಿಣಾಮ ಗಂಡ ಮತ್ತು ಮಗುವಿನೊಂದಿಗೆ ದೇವಸ್ಥಾನಕ್ಕೆ ಹೋಗ್ತಿದ್ದ ಮಹಿಳೆ ಮೃತಪಟ್ಟ ದುರ್ಘಟನೆ ಜಿಲ್ಲೆಯ ಬಾದಾಮಿ ಪಟ್ಟಣದ ಹೊರವಲಯದಲ್ಲಿ ಘಟನೆ ನಡೆದಿದೆ. ಬಸ್ ಪಾಟಾ ಕಟ್ ಆದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಹೋಗ್ತಿದ್ದ ವೆಂಕುಬಾಯಿ ಚವ್ಹಾಣ್ (35) ಎಂಬ ಮಹಿಳೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಬಾದಾಮಿಯಿಂದ ಕೆರೂರು ಕಡೆಗೆ ಹೋಗುತ್ತಿತ್ತು. ಮೃತ ವೆಂಕುಬಾಯಿ ತನ್ನ ಗಂಡ ಹಾಗೂ ಮಗುವಿನೊಂದಿಗೆ ಕರೆಮ್ಮ ದೇವಸ್ಥಾನಕ್ಕೆ ಹೋಗ್ತಿದ್ದಾಗ ಡಿಕ್ಕಿಯಾಗಿದೆ. ಅದೃಷ್ಟವಶಾತ್ ವೆಂಕುಬಾಯಿ ಗಂಡ ಹಾಗೂ ಮಗುವಿಗೆ ಯಾವುದೇ ಗಾಯಗಳಾಗಿಲ್ಲ. ಬಾದಾಮಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ನಾಮಪತ್ರವನ್ನು ಸಲ್ಲಿಸಿದ್ದಾರೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನವಾಗಿದೆ. ಇದಕ್ಕೂ ಮುನ್ನ ದೆಹಲಿಯ ಎಐಸಿಸಿ ಕಚೇರಿಗೆ ತೆರಳಿದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾನು ನನ್ನ ನಾಮಪತ್ರವನ್ನು ಸಲ್ಲಿಸಲಿದ್ದೇನೆ ಎಂದು ಹೇಳಿದ್ದಾರೆ. ಅಶೋಕ್ ಗೆಹ್ಲೋಟ್, ದಿಗ್ವಿಜಯ್ ಸಿಂಗ್ ಮತ್ತು ಭೂಪಿಂದರ್ ಹೂಡಾ ಸೇರಿದಂತೆ ಕಾಂಗ್ರೆಸ್ ನಾಯಕರು ಖರ್ಗೆ ಅವರನ್ನು ಬೆಂಬಲಿಸಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಹಾಜರಿದ್ದರು. ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ಶಶಿ ತರೂರ್ ನಾಮಪತ್ರ ಸಲ್ಲಿಸಿದ್ದರು. ಜಾರ್ಖಂಡ್ ಕಾಂಗ್ರೆಸ್ ನಾಯಕ ಕೆ.ಎನ್.ತ್ರಿಪಾಠಿ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕೊರಟಗೆರೆ: ತಾಲ್ಲೂಕಿನ  ಚನ್ನರಾಯನದುರ್ಗದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ  ಆಯೋಜಿಸಲಾಗಿದ್ದ ಪೋಷಣ್ ಅಭಿಯಾನದ ಅಡಿಯಲ್ಲಿ ಭಾಗ್ಯಲಕ್ಷ್ಮಿ, ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್ ಬುಕ್ ಗಳನ್ನು ಶಾಸಕರಾದ ಡಾ.ಜಿ.ಪರಮೇಶ್ವರ್  ಫಲಾನುಭವಿಗಳಿಗೆ ವಿತರಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಹಳ್ಳಿಗಳಲ್ಲಿ ಮಾಡುತ್ತಿದ್ದ ಆಗಿನ ಅಡುಗೆಗಳು ತುಂಬ ಪೌಷ್ಟಿಕಾಂಶ ಕೂಡಿರುತ್ತಿತ್ತು. ಈಗ ಫಾಸ್ಟ್ ಫುಡ್ ಗಳ ಮೊರೆ ಹೋಗಿರುವ ನಮ್ಮ ಜನರಲ್ಲಿ ಪೌಷ್ಠಿಕಾಂಶ ಕುಗ್ಗುತ್ತಿದೆ. ಆದ್ದರಿಂದ ಎಲ್ಲರೂ ಆರೋಗ್ಯಕರವಾದ ಉಪಾಹಾರವನ್ನು ಸೇವಿಸುವ ಮೂಲಕ ಪೌಷ್ಟಿಕಾಂಶವನ್ನು ಹೆಚ್ಚಿಸಿಕೊಳ್ಳಿ, ಗರ್ಭಿಣಿಯರು, ಬಾಣಂತಿಯರು  ಹಾಗೂ ಹುಟ್ಟುವ ಮಕ್ಕಳಿಗೆ ಆದಷ್ಟು ಪೌಷ್ಟಿಕಾಂಶವುಳ್ಳ ಆಹಾರಗಳನ್ನು  ಕೊಡಿ ಎನ್ನುವುದೇ ಈ ಪೋಷಣ್ ಅಭಿಯಾನದ ಮುಖ್ಯ ಉದ್ದೇಶ. ಇಂತಹ ಅನೇಕ ಕಾರ್ಯಕ್ರಮಗಳು ಎಂದಿನಿಂದಲೂ ಸರ್ಕಾರಗಳು ರೂಪಿಸುತ್ತಿವೆ ಒಳ್ಳೆಯ ಆಹಾರಗಳನ್ನು ಸೇವಿಸಿ  ಎಲ್ಲರೂ  ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ತಿಳಿಸಿದರು. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ: ಡಾ.ಜಿ.ಪರಮೇಶ್ವರ್ ದೇಶದ ಅಭಿವೃದ್ದಿಯಲ್ಲಿ ಮಹಿಳೆಯ ಪಾತ್ರ ಮುಖ್ಯವಾಗಿದ್ದು ಮಕ್ಕಳಿಗೆ ಉತ್ತಮ…

Read More

ಮಧುಗಿರಿ: ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರಿಗೆ ಇರಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್ ಹಾಗೂ ಮಧುಸೂದನ್ ತಿಳಿಸಿದರು. ತಾಲೂಕಿನ ದೊಡ್ಡೇರಿ ಹೋಬಳಿ ರಂಗಾಪುರ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತೆಯೇ ಸೇವೆ ಆಂದೋಲನದ ಅಂಗವಾಗಿ ಜಯನಗರ ಗ್ರಾಮ ಬಳಿ ಇದ್ದ ಪುರಾತನ ಮೇರಾ ಮಡುಗು ಕಲ್ಯಾಣಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪೂರ್ವಜರು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ನೀರಿನ ಸೆಲೆಗಳನ್ನು ಗುರುತಿಸಿ ಕಲ್ಯಾಣಿ ಕಟ್ಟೆಗಳನ್ನು ನಿರ್ಮಿಸಿದ್ದಾರೆ. ಅವುಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಮರೆಮಡುಗು ಕಲ್ಯಾಣಿಯು ಅತ್ಯಂತ ಪುರಾತನವಾಗಿದ್ದು, ಕಾಡಿನ ಮಧ್ಯದಲ್ಲಿದೆ. ಗಿಡಗಂಟೆಗಳು ಬೆಳೆದು ಯಾರು ಗುರುತಿಸಿದೆ ಸ್ವಚ್ಛಗೊಳಿಸದೆ ಉಪಯೋಗಕ್ಕೆ ಬಾರದಂತಿತ್ತು ಗ್ರಾಮ ಪಂಚಾಯಿತಿ ವತಿಯಿಂದ ಆಂದೋಲನ ಕಮ್ಮಿ ಕೊಂಡು ಕಲ್ಯಾಣಿಗೆ ಕಾಯಕಲ್ಪ ನೀಡಲಾಗಿದೆ  ಎಂದರು. ಹೆಣ್ಣು ಮಕ್ಕಳಿಗೆ ಸಂತಾನ ಭಾಗ್ಯಕ್ಕಾಗಿ ಈ ಕಲ್ಯಾಣಿಯಲ್ಲಿ ಗಂಗಾ ಪೂಜೆ ಮಾಡಿದರೆ ಸಂತಾನ ಫಲ ಸಿಗುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಆದರೆ ಇತ್ತೀಚೆಗೆ ನಿರ್ಲಕ್ಷ ಕೊಳಗಾಗಿ ಸುತ್ತಲೂ ಪೊದೆ…

Read More

ಪಾವಗಡ: ಸಾರ್ವಜನಿಕ ಆಸ್ಪತ್ರೆಯಲ್ಲಿ ಸರ್ಕಾರಿ ಆಂಬುಲೆನ್ಸ್ ಗಳು ಇದ್ದರೂ ಸಹ, ಪ್ರೈವೇಟ್ ಆಂಬುಲೆನ್ಸ್ ಗಳಲ್ಲಿ ರೋಗಿಗಳನ್ನು ಸಾಗಿಸಲು ಆಸ್ಪತ್ರೆಯ ಸಿಬ್ಬಂದಿ ಮುಂದಾಗಿದ್ದಾರೆ ಎಂದು ಪಾವಗಡ ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ. ಸರ್ಕಾರಿ ಆಂಬುಲೆನ್ಸ್ ಇದ್ದರೂ, ಖಾಸಗಿ ಆಂಬುಲೆನ್ಸ್ ಯಾಕೆ ಬಳಸಲಾಗುತ್ತಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಕಿರಣ್ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗದ ಪಾವಗಡ ತಾಲೂಕು ಅಧ್ಯಕ್ಷ ಲಕ್ಷ್ಮೀನಾರಾಯಣ ಅವರು ಪ್ರಶ್ನಿಸಿದ್ದು, ಈ ವೇಳೆ ಅವರು, ಸರ್ಕಾರಿ ಆಂಬುಲೆನ್ಸ್ ನ ಇಂಜಿನ್ ಸರಿ ಇಲ್ಲ, ಗಾಡಿಗೆ ಡ್ರೈವರ್ ಇಲ್ಲ ಎಂಬ ಹಾರಿಕೆಯ ಉತ್ತರ ನೀಡಿದ್ದಾರೆ. 4 ಗಾಡಿಗಳು ಕೂಡ ರಿಪೇರಿಯಲ್ಲಿವೆಯೇ ಎಂದು ಮರು ಪ್ರಶ್ನೆ ಹಾಕಿದಾಗ ಅವರು ಯಾವುದೇ ಉತ್ತರ ನೀಡದೇ ತೆರಳಿದ್ದಾರೆನ್ನಲಾಗಿದೆ. ಈ ವೇಳೆ ಕರವೇ ಪಾವಗಡ ತಾಲೂಕು ಉಪಾಧ್ಯಕ್ಷರು ನರಸಿ ಪಾಟೀಲ್, ಯೂತ್ ಪ್ರೆಸಿಡೆಂಟ್ ಲಚ್ಚಿ, ರಂಗನಾಯಕ ನಾಗೇಂದ್ರ ಅಗೋರ, ರಾಜು ಶ್ರೀನಿವಾಸ್, ನರೇಶ್, ಕರವೇ ನಾಗಲಮಡಿಕೆ, ಹೋಬಳಿ ಉಪಾಧ್ಯಕ್ಷರು ಮಲ್ಲಿಕಾರ್ಜುನ್ ನಾಗಲಮಡಿಕೆ ಹಾಗೂ ಎಲ್ಲಾ…

Read More

ಕೊರಟಗೆರೆ : ತಾಲ್ಲೂಕಿನ ಕಸಬಾ ಹೋಬಳಿಯ ತುಂಬಾಡಿ ಗ್ರಾಮದ ಮಾಜಿ ಸೈನಿಕ ಗಿರಿಯಪ್ಪ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ತಮ್ಮ 75ನೇ ವಯಸ್ಸಿನಲ್ಲಿ ಅವರು ನಿಧನರಾಗಿದ್ದಾರೆ. ಗಿರಿಯಪ್ಪನವರು ಸುಮಾರು 20 ವರ್ಷಗಳ ಕಾಲ ದೇಶದ ನಾನಾ ಗಡಿಭಾಗಗಳಲ್ಲಿ ತಮ್ಮ ಸೈನಿಕ ಸೇವೆಯನ್ನು ಸಲ್ಲಿಸಿದ್ದರು. ಕೆಲವು ತಿಂಗಳ ಹಿಂದೆ ವಯೋಸಹಜ ಕಾಯಿಲೆಗಳಿಗೆ ತುತ್ತಾದ ಅವರು ಇಂದು ದೈವಾಧೀನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ತಾಲ್ಲೂಕು ದಂಡಾಧಿಕಾರಿಗಳಾದ ನಹೀದಾ ಜಮ್ ಜಮ್ ಸೇರಿದಂತೆ ತಾಲ್ಲೂಕಿನ ಮಾಜಿ ಸೈನಿಕರು ಹಾಗೂ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಸಂತಾಪ ಸೂಚಿಸಿದರು. ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ನಮ್ಮತುಮಕೂರು ಜೊತೆಗೆ ಮಾತನಾಡಿದ ತಾಲೂಕಿನ ಮಾಜಿ ಸೈನಿಕರು, ದೇಶದ ಸೇವೆಯನ್ನು ಮಾಡಿದ ನಮಗೆ ಸರ್ಕಾರದಿಂದ ನೀಡಬೇಕಿರುವ ಸೌಲಭ್ಯಗಳನ್ನು ನೀಡದೆ ಅವಮಾನಿಸುತ್ತಿರುವುದು ನಮಗೆ ಬೇಸರ ತಂದಿದೆ. ಆದ್ದರಿಂದ ಇನ್ನು ಮುಂದೆಯಾದರೂ ಸರ್ಕಾರ ನಮಗೆ ನೀಡಬೇಕಾದ ಗೌರವ ಮತ್ತು ಮೂಲಭೂತ ಸೌಕರ್ಯಗಳನ್ನ ನೀಡಬೇಕೆಂದು ಆಗ್ರಹಿಸಿದರು. ವರದಿ: ಮಂಜುಸ್ವಾಮಿ.ಎಂ.ಎನ್.,…

Read More

ಮಧುಗಿರಿ: ತಾಲೂಕಿನ ದೊಡ್ಡೇರಿ ಹೋಬಳಿಯ ಮಾಯಗೊಂಡನಹಳ್ಳಿ ಗ್ರಾಮದಲ್ಲಿ ಶಾಸಕರಾದ ಎಂ.. ವೀರಭದ್ರಯ್ಯ ಮತ್ತು ತುಮಲ್ ನಿರ್ದೇಶಕರಾದ ಕೊಂಡವಾಡಿ ಚಂದ್ರಶೇಖರ್ ಹಾಲಿನ ಡೈರಿ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ನಂತರ ನಿರ್ದೇಶಕರಾದ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಈ ಹಿಂದೆ ಹಾಲಿನ ಡೈರಿ ಪ್ರಾರಂಭಮಾಡಿದ ಉದ್ದೇಶವೇ ಬೇರೆ ಆಗಿತ್ತು. ರೈತರ ಮನೆಗಳಲ್ಲಿ ನಾಟಿ ಸೀಮೆ ಹಸುಗಳಿಂದ ಕರಿತಕ್ಕಂತಹ ಹಾಲನ್ನು ಮೊದಲು ಮನೆ ಬಳಕೆಗೆ ಉಪಯೋಗಿಸಿ ನಂತರ ಉಳಿಕೆ ಹಾಲನ್ನು ಡೈರಿಗೆ ಹಾಕಲಾಗುತ್ತಿತ್ತು. ಆದರೆ ಈಗ ಹಂಗಲ್ಲ ಮನೆಗಳಲ್ಲಿ ಸರಿಯಾಗಿ ಹಾಲು ಉಪಯೋಗಿಸದೆ ಸಂಪೂರ್ಣ ಹಾಲನ್ನು ಡೈರಿಗೆ ಹಾಕಲಾಗುತ್ತಿದೆ ಇದರಿಂದ ಮನೆ ಮಕ್ಕಳ ಪೌಷ್ಠಿಕತೆಗೆ ಹಾನಿಯಾಗುತ್ತಿದೆ. ಆದ್ದರಿಂದ ಮನೆ ಮಕ್ಕಳ ಪೌಷ್ಟಿಕತೆಯ ಬಗ್ಗೆ ಕಾಳಜಿವಹಿಸಿ ಎಂದು ಅವರು ಸಲಹೆ ನೀಡಿದರು. ರೈತರಿಗೆ ಹೈನುಗಾರಿಕೆ ಅನ್ನೋದು ಒಂದು ರೀತಿಯಲ್ಲಿ ಶ್ರೀರಕ್ಷೆ ಇದ್ದಹಾಗೆ. ರೈತರಿಗೆ ವಾರಕ್ಕೊಮ್ಮೆ ಬಟವಾಡಿ ರೂಪದಲ್ಲಿ ನೇರವಾಗಿ ಹಣ ಸಿಗುತ್ತದೆ ಇದರಿಂದ ಜೀವನ ನಿರ್ವಹಣೆಗೆ ಅಲ್ಪ ಮಟ್ಟದಲ್ಲಿ ಸಹಾಯವಾಗುತ್ತದ ಎಂದು ತಿಳಿಸಿದರು. ಶಾಸಕರಾದ…

Read More

ಬೆಂಗಳೂರು : ರಾಜ್ಯದ ಆರ್ ಟಿಓ ಚೆಕ್ ಪೋಸ್ಟಗಳ ಮೇಲೆ ಲೋಕಾಯುಕ್ತ ತಂಡ ಇಂದು ಧಿಡೀರ್ ದಾಳಿ ನಡೆಸಿದೆ. ವಾಹನ ಸವಾರರಿಂದ ಹಣ ವಸೂಲಿ ದೂರುಗಳು ಕೇಳಿ ಬಂದ ಹಿನ್ನೆಲೆ ಕಲಬುರಗಿ, ಬೀದರ್ ನಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ರಾಜ್ಯದ ಹಲವು ಲೋಕಾಯುಕ್ತ ತಂಡ ಧಿಡೀರ್ ದಾಳಿ ನಡೆಸಿದೆ. ಕಲಬುರಗಿ, ಬೀದರ್, ಲೋಕಾಯುಕ್ತ ತಂಡ ಕಾರ್ಯಾಚರಣೆ ನಡೆಸಿ ಪರಿಶೀಲನೆ ನಡೆಸಿದೆ ಎಂದು ತಿಳಿದು ಬಂದಿದೆ. ಲೋಕಾಯುಕ್ತ ಅಧಿಕಾರಿಗಳು ಬೀದರನ ಹುಮ್ನಾಬಾದ್, ಬೆಂಗಳೂರಿನ ಅತ್ತಿಬೆಲೆ ಆರ್ ಟಿ ಓ ಚೆಕ್ ಪೋಸ್ಟ್ ಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ನವದೆಹಲಿ: ಸಿಮ್ ಕಾರ್ಡ್ ಪಡೆಯಲು ನಕಲಿ ದಾಖಲೆ ನೀಡಿದರೇ ಭಾರತೀಯ ದೂರಸಂಪರ್ಕ ಮಸೂದೆ 2022 ರ ಸಿದ್ಧಪಡಿಸಿದ ಕರಡು ಪ್ರತಿಯ ಪ್ರಕಾರ, ನೀವು ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಅಥವಾ 50,000 ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ. ಕರಡು ಮಸೂದೆಯಲ್ಲಿ ಉಲ್ಲೇಖಿಸಲಾದ ನಿಬಂಧನೆಯನ್ನು ಆನ್‌ಲೈನ್ ಗುರುತಿನ ವಂಚನೆಯ ಪಿಡುಗನ್ನು ನಿಭಾಯಿಸುವ ಪ್ರಯತ್ನದಲ್ಲಿ ಸಿದ್ಧಪಡಿಸಲಾಗಿದೆ. ಸೈಬರ್ ವಂಚನೆಗಳನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಆದ್ದರಿಂದ, ಗುರುತಿನಿಗೆ ಸಂಬಂಧಿಸಿದ ನಿಬಂಧನೆಗಳನ್ನು ಸಂಬಂಧಿತ ಸ್ಥಳಗಳಲ್ಲಿ ಮಸೂದೆಯಲ್ಲಿ ಸೇರಿಸಲಾಗಿದೆ ಎಂದು ಸಂವಹನ ಇಲಾಖೆ ಕರಡು ಮಸೂದೆಯಲ್ಲಿ ತಿಳಿಸಿದೆ. ಭಾರತೀಯ ದೂರಸಂಪರ್ಕ ಮಸೂದೆ 2022 ರ ಕರಡಿನಲ್ಲಿ ಬರೆದಿರುವಂತೆ ಮೆಟಾ ಒಡೆತನದ ವಾಟ್ಸಾಪ್, ಝೂಮ್ ಮತ್ತು ಗೂಗಲ್ ಡ್ಯುಯೋವನ್ನು ಟೆಲಿಕಾಂ ಪರವಾನಗಿಯ ವ್ಯಾಪ್ತಿಗೆ ತರಲು ಕೇಂದ್ರವು ಪ್ರಸ್ತಾಪಿಸಿದೆ. ಆದಾಗ್ಯೂ, ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಗೆ ಮಾನ್ಯತೆ ಪಡೆದ ವರದಿಗಾರರನ್ನು ಭಾರತದಲ್ಲಿ ಪ್ರಕಟಿಸಲು ಉದ್ದೇಶಿಸಿರುವ ಪತ್ರಿಕಾ ಸಂದೇಶಗಳಿಗೆ ಅಡ್ಡಿಪಡಿಸುವುದರಿಂದ ವಿನಾಯಿತಿ ನೀಡಲು ಸರ್ಕಾರ ಪ್ರಸ್ತಾಪಿಸಿದೆ. ದೂರಸಂಪರ್ಕ ಸೇವೆಗಳು ಮತ್ತು ದೂರಸಂಪರ್ಕ…

Read More