Subscribe to Updates
Get the latest creative news from FooBar about art, design and business.
- ಕೊರಟಗೆರೆ: ಜೂ.28 ರಿಂದ ಪೋಲಿಯೋ ಲಸಿಕೆ ಕಾರ್ಯಕ್ರಮ
- ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಪಿಎಸ್ ಐ ತೀರ್ಥೇಶ್
- ಬಿ.ಕೆ.ಶ್ರೀನಿವಾಸ್ (ಬೆಂಕೋಷ್ಣಿ) ಅವರ ‘ಜೀವನಯಾನ’ ಪುಸ್ತಕ ಬಿಡುಗಡೆ
- ಬಿಡದಿಯಲ್ಲಿ ಟೌನ್ ಶಿಪ್ ನಿರ್ಮಾಣದಲ್ಲಿ ಕಾಂಗ್ರೆಸ್ ಪಾಲುದಾರಿಕೆ: ಶಾಸಕರ ಎಂ.ಟಿ.ಕೃಷ್ಣಪ್ಪ ಆರೋಪ
- ತುಮಕೂರು: ವಿವಿಧ ಸೌಲಭ್ಯಕ್ಕಾಗಿ ಆನ್ ಲೈನ್ ಅರ್ಜಿ
- ಜೂ. 28ರಂದು ಪಲ್ಸ್ ಪೋಲಿಯೋ ಲಸಿಕೆ, ಜಿಲ್ಲೆಯಾದ್ಯಂತ 1,86,831 ಮಕ್ಕಳಿಗೆ ಲಸಿಕೆ ಗುರಿ: ಡಾ.ಚಂದ್ರಶೇಖರ್
- ಬಿಜೆಪಿ ಶಾಸಕರ ವಿರುದ್ಧ ಅಡ್ಡಮತದಾನದ ಅಪಪ್ರಚಾರ: ಎಸ್ ಪಿ ಕಚೇರಿ ಬಳಿ ಪ್ರತಿಭಟನೆ: ಕ್ರಮಕ್ಕೆ ಆಗ್ರಹ
- ಗ್ರಾಮೀಣ ಮೂಲಭೂತ ಸೌಕರ್ಯ ಕಲ್ಪಿಸುವುದೇ ನಮ್ಮ ಆದ್ಯತೆ, ಜು.1 ರಿಂದ ನರೇಗಾ ಬದಲು ವಿಬಿಜಿ ರಾಮ್ ಜಿ ಯೋಜನೆ ಜಾರಿ : ಜಿಪಂ ಸಿಇಒ
Author: admin
ಉಸಿರಾಟದ ವೈಫಲ್ಯದಿಂದ ಕಾಶ್ಮೀರದಲ್ಲಿ ಮೃತಪಟ್ಟ ಯೋಧ ಕೆ.ಟಿ.ನುಫೈಲ್ ಅವರ ಸಾರ್ವಜನಿಕ ದರ್ಶನ ಆರಂಭವಾಯಿತು. ಮೃತದೇಹವನ್ನು ಮಲಪ್ಪುರಂ ಕುಣಿಯಲ್ಲಿರುವ ಕೊಡುಮಂಕಟ್ಟೆ ಮೈದಾನಕ್ಕೆ ತರಲಾಯಿತು. ಇರಿಪಾಕುಳಂ ಜುಮಾ ಮಸೀದಿಯಲ್ಲಿ ದಫನ ನಡೆಯಲಿದೆ. ಸಾರ್ವಜನಿಕ ವೀಕ್ಷಣೆಯನ್ನು ಅಧಿಕೃತ ಗೌರವಗಳೊಂದಿಗೆ ಮಾಡಲಾಗುತ್ತದೆ. ಕಾರ್ಯಕ್ರಮದಲ್ಲಿ ಅನೇಕ ಸಾಮಾಜಿಕ, ಸಾಂಸ್ಕೃತಿಕ ಗಣ್ಯರು ಭಾಗವಹಿಸಿದ್ದರು. ನಿನ್ನೆ ರಾತ್ರಿ ಮಲಪ್ಪುರಂ ವಿಮಾನ ನಿಲ್ದಾಣದಲ್ಲಿ ಮೃತದೇಹವನ್ನು ಜಿಲ್ಲಾಧಿಕಾರಿ ಬರಮಾಡಿಕೊಂಡರು. ಮದುವೆಯಾದ ಒಂದು ವಾರದ ನಂತರ ನುಫೈಲ್ ದೇಶದಿಂದ ಹಿಂದಿರುಗಿದ್ದ. ಅವರು ಸೇನಾ ಅಂಚೆ ಸೇವೆಯಲ್ಲಿ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದರು. 8 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ನುಫೈಲ್ ಎರಡು ವರ್ಷಗಳಿಂದ ಕಾಶ್ಮೀರದಲ್ಲಿದ್ದರು. ಅವರು ಡಿಸೆಂಬರ್ ಕೊನೆಯಲ್ಲಿ ಮನೆಗೆ ಬಂದರು.ಈ ತಿಂಗಳ 2ರಂದು ಮುಕ್ಕಂ ಕುಳಂಗರ ಮೂಲದವರೊಂದಿಗೆ ವಿವಾಹವಾದ ಬಳಿಕ 22ರಂದು ವಾಪಸಾದ ಅವರು ಕೊಯಮತ್ತೂರಿಗೆ ತೆರಳುವ ನಿರೀಕ್ಷೆಯಲ್ಲಿದ್ದಾಗ ಕೊನೆಯುಸಿರೆಳೆದಿದ್ದಾರೆ. ಗುರುವಾರ ಬೆಳಗ್ಗೆ 10.30ಕ್ಕೆ ಪ್ರೇಯಸಿಗೆ ಕರೆ ಮಾಡಲಾಗಿತ್ತು. ರಾತ್ರಿ 9.30ರ ಸುಮಾರಿಗೆ ಅವರ ಸಾವಿನ ಸುದ್ದಿ ತಿಳಿಯಿತು. ತಂದೆ ಮುಹಮ್ಮದ್ ಕುನ್ಹಾನ್ ಮೊನ್ನೆ ತೀರಿಕೊಂಡರು.…
ಧಾರ್ಮಿಕ ವ್ಯವಹಾರಗಳ ಸಚಿವಾಲಯದ ಹಜ್ ಮತ್ತು ಉಮ್ರಾ ಇಲಾಖೆಯು ಈ ವರ್ಷದ ಹಜ್ ನಿರ್ವಹಿಸಲು ಕುವೈತ್ ನಿವಾಸಿಗಳು ಮತ್ತು ವಿದೇಶಿಯರಿಗೆ ಆನ್‌ಲೈನ್ ನೋಂದಣಿ ಜನವರಿ 29 ರಿಂದ ಪ್ರಾರಂಭವಾಗಲಿದೆ ಎಂದು ಪ್ರಕಟಿಸಿದೆ. ಅರ್ಜಿಯನ್ನು ಸಚಿವಾಲಯದ ಅಧಿಕೃತ ವೆಬ್‌ಸೈಟ್ (http://hajj-register.awqaf.gov.kw) ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 28. ಈ ಹಿಂದೆ ಹಜ್ ಯಾತ್ರೆ ಮಾಡದವರಿಗೆ ಆದ್ಯತೆ ನೀಡಲಾಗುತ್ತದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮನ್ನಾರ್ಕ್ಕಾಡ್‌ನ ಆವರಣದಲ್ಲಿರುವ ಕೋಳಿಗೂಡಿನಲ್ಲಿ ಹುಲಿ ಸಿಲುಕಿ ಮೃತಪಟ್ಟಿದೆ. ಹುಲಿ ಹಲವು ಗಂಟೆಗಳ ಕಾಲ ಕಬ್ಬಿಣದ ಬಲೆಯಲ್ಲಿ ಸಿಲುಕಿಕೊಂಡಿತ್ತು. ಡಾ. ಅರುಣ್ ಜಕಾರಿಯಾ ನೇತೃತ್ವದ ತಂಡ ವಯನಾಡಿನಿಂದ ಬಂದು ಹುಲಿಗೆ ಮದ್ದು ನೀಡಲು ನಿರ್ಧರಿಸಿತ್ತು. ಇಂದು ನಸುಕಿನ 1 ಗಂಟೆ ಸುಮಾರಿಗೆ ಮನ್ನಾರ್ಕ್ಕಾಡ್‌ನ ಪಾಲಕ್ಕಾಡ್‌ನ ಕುಂಟಿಪಾಡಂನಲ್ಲಿ ಫಿಲಿಪ್ ಅವರ ಮನೆಯ ಕೋಳಿ ಗೂಡಿನಲ್ಲಿ ಬಲೆಗೆ ಸಿಕ್ಕಿಹಾಕಿಕೊಂಡ ಸ್ಥಿತಿಯಲ್ಲಿ ಹುಲಿ ಪತ್ತೆಯಾಗಿದೆ. ಸದ್ದು ಕೇಳಿದ ಫಿಲಿಪ್ ಹುಲಿಯ ದಾಳಿಯಿಂದ ತಲೆಗೆ ಪೆಟ್ಟಾಗಿ ಪಾರಾಗಿದ್ದಾರೆ. ಬೋನಿಗೆ ಏರಲು ಯತ್ನಿಸುತ್ತಿದ್ದಾಗ ಹುಲಿಯ ಕಾಲು ಬೋನಿನ ಬಲೆಗೆ ಸಿಲುಕಿತು. ಹುಲಿಯ ದೇಹವನ್ನು ಮನ್ನಾರ್ಕ್ಕಾಡ್ ಅರಣ್ಯ ವಲಯದ ಕಚೇರಿಗೆ ಸ್ಥಳಾಂತರಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಹುಲಿ ಸಾವಿಗೆ ಕಾರಣ ತಿಳಿಯಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ: ಜೆಡಿಎಸ್ ಪಂಚರತ್ನ ಯಾತ್ರೆ ಮಾಡುವ ಬದಲು ನವಗ್ರಹ ಯಾತ್ರೆ ಮಾಡಲಿ. ಕರ್ನಾಟಕದಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಸಚಿವ ಪ್ರಹ್ಲಾದ ಜೋಷಿ ಜೆಡಿಎಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಬೆಳಗಾವಿಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು ಬಿಜೆಪಿಯು ದೇಶದ ಅಭಿವೃದ್ಧಿಯಲ್ಲಿ ಸಕಾರಾತ್ಮಕವಾಗಿ ತೊಡಗಿಕೊಂಡಿದ್ದ ಆರ್ಟಿಕಲ್ 370ಯನ್ನು ಕಿತ್ತೆಸೆದಿದ್ದು ಇಂದಿಗೂ ಪ್ರಂಶಂಸನಾರ್ಹ. ಕಿತ್ತೂರ ರಾಣಿ ಚೆನ್ನಮ್ಮ ನಾಡಿನಲ್ಲಿ ಕಾಂಗ್ರೆಸ್ ಬಡವರನ್ನ ನಿರ್ಮೂಲನೆ ಮಾಡಿದ್ದಾರೆ. ಕಾಂಗ್ರೆಸ್ ತಮ್ಮ ಟೈಮ್ ನಲ್ಲಿ ಕರೆಂಟ್ ಉಚಿತ ಕೊಡಲಿಲ್ಲ ಇವಾಗ ಫ್ರೀ ಆಮಿಷ ಒಡ್ಡಿದ್ದಾರೆ. ಸುಳ್ಳು ಹೇಳುವುದರಲ್ಲೇ ಕಾಂಗ್ರೆಸ್ ಜೀವನ ಕಳೆದಿದೆ ಇನ್ನು ಜೆ ಡಿಎಸ್ ಮೇಲೆ ಡೈರೆಕ್ಟ್ ವಾರ್ ಮಾಡಿದ ಅವರು “ಪಂಚ ರತ್ನ ಅಲ್ಲ ನವ ಗ್ರಹ ಯಾತ್ರೆ ಮಾಡಲಿ” ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಬೆಳಗಾವಿಯಿಂದ ಅದ್ದೂರಿ ಚಾಲನೆ ದೊರೆತಿದ್ದು ಚೆನ್ನಮ್ಮನ ಕಿತ್ತೂರಿನಲ್ಲಿ ಅಮಿತ್ ಶಾ ಭಾಷಣ ಮಾಡಿದರು. ದೇವಿ ಯಲ್ಲಮ್ಮ ರವರಿಗೆ ನಮಿಸಿ ಭಾಷಣ ಶುರು ಮಾಡಿದ ಅವರು ಬೊಮ್ಮಾಯಿ ಜನ್ಮ ದಿನದ ಶುಭಾಶಯ ತಿಳಿಸಿದರು. ರಾಣಿ ಚೆನ್ನಮ್ಮ ಮತ್ತು ಸಿದ್ದೇಶ್ವರ್ ಸ್ವಾಮೀಜಿ,ವೀರ ಸಾವರ್ಕರ್,ಆಲೂರ್ ವೆಂಕಟ ರಾವರವನ್ನು ನೆನೆಯುತ್ತ ಮುಂದಿನ 5ವರ್ಷ ಕರ್ನಾಟಕದಲ್ಲಿ ಬಿಜೆಪಿಯೇ ಆಡಳಿತದಲ್ಲಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ಮತ್ತು ಕಾಗ್ರೇಸ್ ಮೇಲೆ ಹರಿಹಾಯ್ದಶಾ, ಕರ್ನಾಟಕದ ವಿಕಾಸ್ ಬಿಜೆಪಿ ಯಿಂದ ಮಾತ್ರ ಸಾಧ್ಯ ಕರೆಂಟ್, ಶೌಚಾಲಯ, ಗ್ಯಾಸ್, ಅಯುಷ್ಮಾನ್ ಭಾರತ ನೀಡಿದ್ದೆ ಬಿಜೆಪಿ. 5ಕಿಲೋ ಫ್ರೀ ಅಕ್ಕಿ ನೀಡಿದ್ದೆ ಬಿಜೆಪಿ, 2 ಕೋವಿಡ್ ವ್ಯಾಕ್ಸಿನ್ ಬೂಸ್ಟರ್ ಡೋಸ್ ನೀಡಿದ್ದೆ ಬಿಜೆಪಿ, ರಾಮ್ ನಾಥ್ ಕೊವಿಂದ್ ಮತ್ತು ದ್ರೌಪದಿ ಮುರ್ಮು ಅವರನ್ನು ರಾಷ್ಟ್ರ ಪತಿ ಮಾಡಿದ್ದೆ ಬಿಜೆಪಿ ಎಂದು ಅಭಿವೃದ್ಧಿ ಯೋಜನೆಗಳ ಕುರಿತು ಭಾಷಣ ಮಾಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…
ಬೆಂಗಳೂರಿನ ಭೈರಸಂಧ್ರದಲ್ಲಿ ಸ್ಯಾಂಡಲ್ ವುಡ್ ನ ಹಿರಿಯ ಹಾಸ್ಯ ನಟ ಮನ್ ದೀಪ್ ರಾಯ್ (75) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬೆಂಗಳೂರಿನ ಭೈರಸಂಧ್ರದ ನಿವಾಸದಲ್ಲಿ ಮಧ್ಯರಾತ್ರಿ 1.45 ರ ಸುಮಾರಿಗೆ ಮನ್ ದೀಪ್ ರಾಯ್ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇಂದು ಸಂಜೆ ಮನ್ ದೀಪ್ ರಾಯ್ ಅಂತ್ಯಕ್ರಿಯೆ ನಡೆಯಲಿದೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಮನ್ ದೀಪ್ ರಾಯ್ ಅವರು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅನಂತ್ ನಾಗ್ ಹಾಗೂ ಶಂಕರ್ ನಾಗ್ ಜೊತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಮಿಂಚಿನ ಓಟ, ಏಳು ಸುತ್ತಿನ ಕೋಟೆ, ಆಕಸ್ಮಿಕ, ರೇ, ಬೆಂಕಿಯ ಬಲೆ, ಆಪ್ತ ರಕ್ಷಕ, ಅಮೃತಧಾರೆ, ಕುರಿಗಳು ಸಾರ್ ಕುರಿಗಳು ಸೇರಿದಂತೆ 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುರುವೇಕೆರೆ: ತಾಲೂಕಿನ ದಂಡಿನ ಶಿವರ,ಹೋಬಳಿಯ ಸಂಪಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಂಪಲಾಪುರ ಗ್ರಾಮದಲ್ಲಿ ಬಹಳ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದ ಕಾರಣ, ತುರುವೇಕೆರೆ ಕ್ಷೇತ್ರದ ಶಾಸಕರಾದ ಮಸಾಲ ಜಯರಾಮ್ ರವರು ಗ್ರಾಮಸ್ಥರ ಮನವಿಯ ಮೇರೆಗೆ ವೈಯಕ್ತಿಕವಾಗಿ ತಮ್ಮ ಸ್ವಂತ ಹಣದಲ್ಲಿ ಬೋರ್ವೆಲ್ ಕೊರೆಸಿ ಪಂಪು ಮತ್ತು ಮೋಟರುಗಳನ್ನ ಅಳವಡಿಸಿ ಗ್ರಾಮಸ್ಥರಿಗೆ ನೀರಿನ ವ್ಯವಸ್ಥೆ ಮಾಡಿದ್ದಾರೆ. ಶಾಸಕರ ಈ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಗ್ರಾಮಸ್ಥರು ಶಾಸಕರು ಜನ ಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದು, ಶಾಸಕರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಈ ಗ್ರಾಮದ ಮುಖಂಡರು ಹಾಗೂ ಮಹಿಳೆಯರು ಜೆಡಿಎಸ್ ಪಕ್ಷದ ಕಾರ್ಯವೈಖರಿಯಿಂದ ಬೇಸತ್ತು ಭಾರತೀಯ ಜನತಾ ಪಕ್ಷದ ಸಿದ್ಧಾಂತ ಹಾಗೂ ಶಾಸಕರಾದ ಮಸಾಲ ಜಯರಾಮ್ ರವರ ಸರಳತೆ ಹಾಗೂ ಜನಪರ ಅಭಿವೃದ್ಧಿ ಕೆಲಸಗಳ ಮೆಚ್ಚಿ ಅಧಿಕೃತವಾಗಿ ಪಕ್ಷ ಸೇರ್ಪಡೆಯಾದರು. ವರದಿ: ಸುರೇಶ್ ಬಾಬು ಎಂ., ತುರುವೇಕೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…
ತುಮಕೂರು: ಮಳೆ ನೀರು ಇಂಗುವ ಕಟ್ಟೆಯೊಳಗೆ ಬಿದ್ದಿದ್ದ ನಾಯಿಯನ್ನು ಸಿದ್ದಗಂಗಾ ತಾಂತ್ರಿಕ ಮಹಾ ವಿದ್ಯಾಲಯದ ಸಿಬ್ಬಂದಿಯ ಮುತುವರ್ಜಿಯಿಂದ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯ ಕಾರ್ಯಾಚರಣೆಯಿಂದ ರಕ್ಷಣೆ ಮಾಡಲಾಗಿದೆ. ಬಿ.ಹೆಚ್.ರಸ್ತೆಯಲ್ಲಿರುವ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಆಟದ ಮೈದಾನದಲ್ಲಿ ಸುಮಾರು 20/15 ಅಡಿ ಆಳ ಅಗಲವುಳ್ಳ ಮಳೆನೀರು ಇಂಗುವ ಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ. ನಿನ್ನೆ ರಾತ್ರಿಯಲ್ಲಿ ಆ ಕಟ್ಟೆಯೊಳಗೆ ಎರಡು ನಾಯಿಗಳು ಬಿದ್ದಿದ್ದು, ಕಟ್ಟೆಯಿಂದ ಹೊರ ಬರಲಾಗದೇ ಕಟ್ಟೆಯಲ್ಲೇ ಸಿಲುಕಿಕೊಂಡಿದ್ದವು. ಇಂದು ಬೆಳಗ್ಗೆ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಸಿಬ್ಬಂದಿ ನಾಯಿಗಳನ್ನು ನೋಡಿದ್ದು, ನಾಯಿಗಳನ್ನು ಮೇಲೆತ್ತಲು ಕಾಲೇಜಿನ ಸಿಬ್ಬಂದಿ ಹರಸಾಹದಪಟ್ಟಿದ್ದು, ಆದರೆ ನಾಯಿಗಳನ್ನು ಹೊರ ತೆಗೆಯಲು ಸಾಧ್ಯವಾಗಿಲ್ಲ. ಇದೇ ವೇಳೆ ಕಾಲೇಜಿನ ಸಿಬ್ಬಂದಿ ವರ್ಗದವರಾದ ಮಾಚನಹಳ್ಳಿ ಮುನಿರಾಜು ಅವರಿಗೆ ಈ ವಿಚಾರ ತಿಳಿಸಿದ್ದು, ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಬಳಿಕ ಸಂಬಂಧ ಪಟ್ಟ ಮಹಾನಗರ ಪಾಲಿಕೆ ಹಾಗೂ ಆ ಭಾಗದ ಸ್ಥಳಿಯ ಕಾರ್ಪೋರೇಟರ್ ರವರಿಗೆ ವಿಷಯ ಮುಟ್ಟಿಸಿದ್ದಾರೆ. ಆದರೆ ಅವರು ಇಲ್ಲದ ನೆಪಗಳನ್ನು ಹೇಳಿ…
ತುರುವೇಕೆರೆ: ತಾಲೂಕಿನ ದಬ್ಬೆಘಟ್ಟ ಹೋಬಳಿ ಅರೇಮಲ್ಲೇನಹಳ್ಳಿಯಲ್ಲಿರುವ. ಕಿತ್ತೂರುರಾಣಿ ವಸತಿ ಶಾಲೆಯ ಕ್ರೀಡಾಂಗಣದಲ್ಲಿ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಸಲಾಯಿತು. ಧ್ವಜಾರೋಹಣವನ್ನು ಜಮ್ಮು ಮತ್ತು ಕಾಶ್ಮೀರ ವಲಯದ ಮಾಜಿ ಯೋಧ ಯೋಗಾನಂದ ಸ್ವಾಮಿ ನೆರವೇರಿಸಿದರು. ಧ್ವಜಾರೋಹಣವಾದ ನಂತರ ಶಾಲಾ ಮಕ್ಕಳಿಂದ ಪಥಸಂಚಲನ ನಡೆಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರೋ ಬ್ರಿಕ್ಸ್ ಸಹ ಆಯೋಜಿಸಲಾಗಿತ್ತು. ಇನ್ನು ಈ ಕಾರ್ಯಕ್ರಮದಲ್ಲಿ ಅರೆ ಮಲ್ಲೇನಹಳ್ಳಿಯ ವಸತಿ ಶಾಲೆಯ ಪ್ರಾಂಶುಪಾಲರಾದ ಪರಣ್ಣ ಮಣೆ ಚೆಂಡೂರು ವಸತಿ ಶಾಲೆಯ ಗದಗಯ್ಯ ಹಿರೇಮಠ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಎರಡೂ ಶಾಲೆಯ ಶಿಕ್ಷಕ ವೃಂದ ಹಾಗೂ ಮಕ್ಕಳು ಹಾಜರಿದ್ದರು. ವರದಿ: ಸುರೇಶ್ ಬಾಬು ಎಂ., ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಎಲ್ಲರೂ ಉತ್ತಮವಾದ ದೇಹವನ್ನು ಹೊಂದಲು ಇಷ್ಟಪಡುತ್ತಾರೆ. ದೇಹದಲ್ಲಿ ಬೊಜ್ಜು ಬಾರದಂತೆ ತಡೆಯಲು ಕೆಲವರು ಇನ್ನಿಲ್ಲದ ಕಸರತ್ತನ್ನು ನಡೆಸುತ್ತಾರೆ. ಆದರೆ ತಮ್ಮ ದಿನಚರಿಗಳಲ್ಲಿ ಬದಲಾವಣೆ ಮಾಡಿಕೊಳ್ಳದೇ ದೇಹಕ್ಕೆ ಕಸರತ್ತು ನೀಡಿದರೆ ಯಾವುದೇ ಪ್ರಯೋಜನವಿಲ್ಲ. ಹೌದು..! ನಮ್ಮ ದೇಹ ಬೊಜ್ಜು ಮುಕ್ತವಾಗಬೇಕಾದರೆ, ನಾವು ವ್ಯಾಯಾಮವನ್ನು ಮಾಡಬೇಕು, ಕೇವಲ ವ್ಯಾಯಾಮ ಮಾಡಿದರೆ ಸಾಲದು ನಮ್ಮ ಆಹಾರದಲ್ಲೂ ನಿಯಂತ್ರಣ ಇರಬೇಕು. ದೇಹದಲ್ಲಿ ಕೊಲೆಸ್ಟ್ರಾಲ್ ಉತ್ಪಾದನೆ ಮಾಡುವ ಆಹಾರಗಳನ್ನು ಸೇವಿಸಲೇ ಬಾರದು. ಅದರ ಜೊತೆಗೆ ನಮ್ಮ ದಿನಚರಿಯನ್ನು ಕೂಡ ಬದಲಾವಣೆ ಮಾಡಬೇಕು. ತಡವಾಗಿ ಮಲಗುವುದು ಮತ್ತು ಬೆಳಗ್ಗೆ ತಡವಾಗಿ ಏಳುವುದು ನಮ್ಮ ದೇಹಕ್ಕೆ ಉತ್ತಮವಲ್ಲ, ಆದಷ್ಟು ಬೇಗನೇ ಮಲಗಿ ಬೇಗನೇ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಹೆಚ್ಚು ಹೊತ್ತು ಆಲಸ್ಯದಿಂದ ಮಲಗಿಕೊಳ್ಳುವುದು ಉತ್ತಮ ಅಭ್ಯಾಸವಲ್ಲ, ಇದು ನಮ್ಮ ದೇಹದ ಆರೋಗ್ಯಕ್ಕೂ ಹಾನಿ ಮಾಡುತ್ತದೆ. ನಮ್ಮ ದೇಹದ ಚಯಾಪಚಯ ವ್ಯವಸ್ಥೆ ಇದರಿಂದ ಕೆಡುತ್ತದೆ. ನಮ್ಮ ದೇಹಕ್ಕೆ ದಿನಕ್ಕೆ 7 ಲೋಟ ನೀರು ಬೇಕಾಗುತ್ತದೆ. ನೀರು ಕುಡಿಯದೇ ಇದ್ದರೆ, ಹೊಟ್ಟೆಯ ಸುತ್ತ ಕೊಬ್ಬು…