Author: admin

ಪಾವಗಡ:  ಕಾರು ಹಾಗೂ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರ ಸ್ಥಿತಿ ಗಂಭೀರವಾದ ಘಟನೆ ಪಾವಗಡ ಪಟ್ಟಣದ ಟೋಲ್ ಗೇಟ್ ಬಳಿಯ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಇಂದು ಸಂಜೆ 5 ಗಂಟೆಗೆ ನಡೆದಿದೆ. ಹರೀಶ್ ಮತ್ತು ಭಾಷಾ  ಎಂಬವರು ಗಾಯಗೊಂಡ ಬೈಕ್ ಸವಾರರಾಗಿದ್ದು, ಬಳ್ಳಾರಿ ರಸ್ತೆಯಿಂದ ಬರುತ್ತಿರುವಂತಹ ಕಾರು ಹಾಗೂ ಎದುರಿನಿಮದ ಬರುತ್ತಿದ್ದ ಬೈಕ್ ನಡುವೆ ಅಪಘಾತವಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಮತ್ತು ಹಿಂದೂಪುರಕ್ಕೆ ಕರೆದೊಯ್ಯಲಾಗಿದೆ. ಅಪಘಾತವಾದ ಸಮಯದಲ್ಲಿ ಸ್ಥಳೀಯ ಆಟೋ ಚಾಲಕರು ಹಾಗೂ ಆರ್.ಕೆ.ಆಂಬುಲೆನ್ಸ್ ನವರ ಸಹಾಯದಿಂದ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಅವರನ್ನು ಸೇರಿಸಲಾಯಿತು ಘಟನಾ ಸ್ಥಳಕ್ಕೆ ಪಾವಗಡ ಸರ್ಕಲ್  ಇನ್ಸ್ಪೆಕ್ಟರ್ ಅಜಯ್ ಸಾರಥಿ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ. ವರದಿ: ನಂದೀಶ್ ನಾಯ್ಕ ಪಿ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…

Read More

ಸಮುದಾಯಭವನಗಳ ಅಭಿವೃದ್ಧಿಯನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುತ್ತಿದ್ದು ಅನುದಾನದ ಸಮರ್ಪಕ ವಿನಿಯೋಗದ ಮೂಲಕ ಸಮುದಾಯಭವನಗಳು ಸಮಾಜದ ಜನರ ಸತ್ಕಾರ್ಯಗಳಿಗೆ ಬಳಕೆಯಾಗಬೇಕು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ತಾಲೂಕಿನ ಮಾಸ್ತಮರ್ಡಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಸಮುದಾಯ ಭವನ ಕಟ್ಟಡ ನಿರ್ಮಾಣದ ಸಲುವಾಗಿ 3 ಲಕ್ಷ ರೂ.ಗಳ ಪೈಕಿ ಈಗಾಗಲೇ ಮೊದಲನೇ ಹಂತದ ಚೆಕ್ ನ್ನು ನೀಡಲಾಗಿದ್ದು, ಇಂದು ಕೊನೆಯ ಹಂತದ ಚೆಕ್ ನ್ನು ದೇವಸ್ಥಾನದ ಕಮಿಟಿಯವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು. ಈ ಸಮಯದಲ್ಲಿ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮುಖಂಡರಾದ ಗಂಗಣ್ಣ ಕಲ್ಲೂರ, ಪ್ರಕಾಶ ಪಾಟೀಲ, ಅಶೋಕ ತೋರ್ಲೆ, ದೇವಸ್ಥಾನದ ಕಮಿಟಿಯ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಹಿರಿಯೂರು: ವೃತ್ತಿ ಖಾಯಂ ಮಾಡುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹಿರಿಯೂರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಅಂಗನವಾಡಿ ಫೆಡರೇಶನ್ ಎಐಟಿಯುಸಿಯ ತಾಲ್ಲೂಕು ಅಧ್ಯಕ್ಷರಾದ ಬಿ ಪಿ ನಿರ್ಮಲಾ ಹಾಗೂ ಗೌರವ ಅಧ್ಯಕ್ಷರಾದ ಎಸ್ ಪಿ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ  ಸೇವಾಭತ್ಯೆ , ಸೇವೆ ಖಾಯಂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ  ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಹಿರಿಯೂರು ತಾಲ್ಲೂಕಿನ ಪ್ರಧಾನ ರಸ್ತೆಯಲ್ಲಿರುವ ರಂಜಿತ್ ಲಾಡ್ಜ್ ಬಳಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ  ಗಾಂಧಿ ಸರ್ಕಲ್  ನಿಂದ ಸಾಗಿ ಹಿರಿಯೂರು ತಾಲ್ಲೂಕು ಕಛೇರಿ ಬಳಿ ಸಮಾಪ್ತಿಗೊಂಡಿತು. ಮೆರವಣಿಗೆಯ ಉದ್ದಕ್ಕೂ ಸರ್ಕಾರವ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಪ್ರತಿಭಟನೆಯ ಬಳಿಕ  ನಮ್ಮ ತುಮಕೂರು ಜೊತೆಗೆ ಮುಖಂಡರಾದ ಕ್ರಿಷ್ಟಿ ಜೌನಿತ ಶಿಭ, ತಾಲ್ಲೂಕು ಅಧ್ಯಕ್ಷರಾದ ಬಿ ಪಿ ನಿರ್ಮಲ,ಎಸ್ ಸಿ ಕುಮಾರ್  ಮಾತನಾಡಿ,  46 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕೆಲಸದ…

Read More

ಸಮಾಜದಲ್ಲಿ ನಮ್ಮ ನಡೆ-ನುಡಿಗಳನ್ನು ರೂಪಿಸುವಲ್ಲಿ ಮಾಧ್ಯಮದ ಪಾತ್ರ ಬಹುಮುಖ್ಯವಾದುದು ಆದ್ದರಿಂದ ಮಾಧ್ಯಮವು ಪ್ರಜಾಪ್ರಭುತ್ವದ ಕಾವಲು ನಾಯಿಯಂತೆ, ಸಂವಿಧಾನದ ನಾಲ್ಕನೇಯ ಅಂಗವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮೂಡಲಗಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಬಿ.ಸಿ. ಹೆಬ್ಬಾಳ ತಿಳಿಸಿದರು.ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವತಿಯಿಂದ ಹಮ್ಮಿಕೊಂಡ ಸಮಾಜ ಮತ್ತು ಮಾಧ್ಯಮ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ಅವರು ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸಮಾಜದ ಜನತೆಯನ್ನು,ರಾಷ್ಟ್ರವನ್ನು ಮುನ್ನಡೆಸುವ ಅಂಶಗಳನ್ನು ಒಳಗೊಂಡಿರಬೇಕು ಎಂದು ಹೇಳಿದರು.ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ಆರ್.ಬಿ.ಕೊಕಟನೂರ ವಹಿಸಿ ಮಾತನಾಡಿ, ಸಕಾಲಕ್ಕೆ ಸರಿಯಾದ ಸುದ್ದಿಯನ್ನು ಸಮಗ್ರವಾಗಿ ಜನರಿಗೆ ಒದಗಿಸುವುದು ಮಾಧ್ಯಮಗಳ ಜವಾಬ್ದಾರಿಯಾಗಿದೆ. ಪತ್ರಿಕಾ ಧರ್ಮವನ್ನು ಪಾಲಿಸಿ ನೀವು ಬಾವಿ ಪತ್ರಕರ್ತರಾಗಿ ಸಮಾಜಕ್ಕೆ ನಿಮ್ಮದೇ ಆದ ಕೊಡುಗೆಯನ್ನು ನೀಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಗೆಜೆಟೆಡ್ ಮ್ಯಾನೇಜರ್ ಅರುಣ ಸಕಟ, ಸುಪಿರಿಡೆಂಟ್ ರಾಜು ಹುದ್ದಾರ, ಉಪನ್ಯಾಸಕರಾದ ಗಿರೀಶ ಚವ್ಹಾಣ, ಸಂಜೀವ ಹಾದಿಮನಿ, ವಿಜಯಕುಮಾರ…

Read More

ಕೊರಟಗೆರೆ: ಕೊರಟಗೆರೆ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ 76 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 1,700 ಮೀ ಉದ್ದದ ತ್ರಿವರ್ಣ ಧ್ವಜವನ್ನು ಸರ್ಕಾರಿ ಬಸ್ ನಿಲ್ದಾಣದಿಂದ, ಸರ್ಕಾರಿ ಜೂನಿಯರ್ ಕಾಲೇಜು ಮೈದಾನದವರೆಗೆ ಆಯೋಜಕರು, ಮತ್ತು ಪಟ್ಟಣದ ಶಾಲಾ-ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು ವಂದೇ ಮಾತರಂ ಎಂಬ ಘೋಷಣೆಯೊಂದಿಗೆ ಮೆರವಣಿಗೆ ಸಾಗಿ ದೇಶಾಭಿಮಾನ ಮೆರೆದರು. ಆಯೋಜಕರು ಬಾಲಾಜಿ ದರ್ಶನ್ ಮೆರವಣಿಗೆಯ ವೇಳೆ ಮಾತನಾಡಿ, 76ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೊರಟಗೆರೆ ಇತಿಹಾಸದಲ್ಲೇ ಪ್ರಪ್ರಥಮವಾಗಿ 1700ಮೀ ಉದ್ದದ ತ್ರಿವರ್ಣ ಧ್ವಜ ಮೆರವಣಿಗೆಯ ಕಾರ್ಯಕ್ರಮ ನಡೆಯುತ್ತಿದೆ ಎಂದರು. ರಾಷ್ಟ್ರ ಧ್ವಜ ಹಿಡಿದು ಸಾಗುವುದರಿಂದ ಇನ್ನಷ್ಟೂ ಹೆಚ್ಚಿನ ದೇಶಾಭಿಮಾನ ಸಾರ್ವಜನಿಕರಲ್ಲಿ ಬೆಳೆಯಲಿ ಎಂಬ ಹಿತದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಬಾಲಾಜಿ ಟೆಕ್ಸ್ ಟೈಲ್ಸ್ ನಿಂದ ಆಯೋಜನೆ ಮಾಡಲಾಗಿದೆ ಎಂದರು. ವಾಸವಿ ಯುವಜನ ಸಂಘದ ನಿರ್ದೇಶಕ ಬದ್ರಿಪ್ರಸಾದ್ ಮಾತನಾಡಿ, 1,700 ಮೀ ಉದ್ದದ ತ್ರಿವರ್ಣಧ್ವಜ ಮೆರವಣಿಗೆ ನಮ್ಮ ಪಟ್ಟಣದಲ್ಲಿ ಒಂದು ಹಬ್ಬದ ರೀತಿಯಲ್ಲಿ ಕಾಣುತ್ತಿದೆ. 1,000 ಶಾಲಾ ವಿದ್ಯಾರ್ಥಿಗಳು…

Read More

ಆಧ್ಯಾತ್ಮಿಕ ಗುರು ನಿತ್ಯಾನಂದ ಸ್ವಾಮೀಜಿಗೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ನಿತ್ಯಾನಂದನ ವಿರುದ್ಧ 2010ರಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ನಿತ್ಯಾನಂದನ ಮಾಜಿ ಚಾಲಕ ಲೆನಿನ್ ನೀಡಿರುವ ದೂರಿನ ಅನ್ವಯ ತನಿಖೆ ಮುಂದುವರಿದಿದೆ. 2019ರಿಂದ ಈ ಪ್ರಕರಣದ ವಿಚಾರಣೆಗೆ ಹಾಜರಾಗದ ಕಾರಣ ಬೆಂಗಳೂರಿನ ರಾಮನಗರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಮುಂದಿನ ತಿಂಗಳ 23ರೊಳಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶಿಸಿದೆ. ಈ ಹಿಂದೆ ನಿತ್ಯಾನಂದ ‘ಕೈಲಾಸಂ’ ಹೆಸರಿನಲ್ಲಿ ಪ್ರತ್ಯೇಕ ದೇಶ ಸ್ಥಾಪಿಸಿದ್ದಾರೆ ಎಂದು ಪ್ರಚಾರ ಮಾಡಲಾಗಿತ್ತು. ಆ ವೇಳೆ ನಿತ್ಯಾನಂದ ರಹಸ್ಯ ಪ್ರದೇಶದಲ್ಲಿ ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈಕ್ವೆಡಾರ್ ಬಳಿ ದ್ವೀಪವನ್ನು ಖರೀದಿಸಿರುವುದಾಗಿ ನಿತ್ಯಾನಂದ ಹೇಳಿದ್ದಾರೆ. ಅದಕ್ಕೆ ಕೈಲಾಸಂ ಎಂದು ಹೆಸರಿಡಲಾಗಿದೆ ಎಂದರು. ಆದರೆ, ಅವರು ತಮ್ಮ ದೇಶದಲ್ಲಿ ಇಲ್ಲ ಎಂದು ಈಕ್ವೆಡಾರ್ ಸರ್ಕಾರ ಹೇಳಿಕೊಂಡಿದೆ. ಈ ಹಿಂದೆ ಬೆಂಗಳೂರಿನ ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ವಾರೆಂಟ್ ಜಾರಿ ಮಾಡಿದ್ದರೂ ಪೊಲೀಸರಿಗೆ ಆತನ…

Read More

ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ಮಾದಿಗ ಸಮುದಾಯದ ಆದಿ ಜಾಂಬವ ಸಹಕಾರ ಸಂಘ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಘವನ್ನು ಅಸ್ತಿತ್ವಕ್ಕೆ ತರಲಾಯ್ತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ದುಂಡ ಓಬಳೇಶ್, ಎಲ್ಲಾ ಸಮುದಾಯಗಳಿಗೂ ಎಲ್ಲಾ ಜಾತಿಗಳಿಗೂ ಒಂದೊಂದು ಸಹಕಾರ ಸಂಘಗಳು ಇದೆ. ಹಾಗೆಯೇ ನಮ್ಮ ತುರುವೇಕೆರೆಯಲ್ಲೂ ಮಾದಿಗ ಸಮುದಾಯಕ್ಕೆ ಸಹಕಾರ ಸಂಘವನ್ನು ಮಾಡಬೇಕೆನ್ನುವ ಮಹಾದಾಸೆಯಿಂದ ನಮ್ಮ ಜಾತಿಯ ಮುಖಂಡರುಗಳ ಸಭೆಗಳನ್ನು ಕರೆದು ಚರ್ಚಿಸಿ ಕೊನೆಗೆ ಒಂದು ಹಂತಕ್ಕೆ ಬಂದು ಈ ದಿನ ಸಹಕಾರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆಯು ನಡೆದಿದೆ ಎಂದು ತಿಳಿಸಿದರು. ನಮ್ಮ ಜಾತಿಯಲ್ಲಿ ಹಿಂದುಳಿದ ಬಡ ಜನರಿಗೆ ಸಹಾಯ ಮಾಡುವ ಮತ್ತು ಆರ್ಥಿಕವಾಗಿ ಸದೃಢರಾಗಿ ಮಾಡುವ ಶೈಕ್ಷಣಿಕವಾಗಿ ಬೆಳೆಸುವ ಉದ್ದೇಶದಿಂದ ಈ ಸಹಕಾರ ಸಂಘವನ್ನು ರಚನೆ ಮಾಡಲಾಗುತ್ತಿದೆ ಎಂದು ಇದೇ ವೇಳೆ ಅವರು ತಿಳಿಸಿದರು. ಸಂಘದ ಅಧ್ಯಕ್ಷರಾಗಿ ದುಂಡ ಓಬಳೇಶ್, ಉಪಾಧ್ಯಕ್ಷರಾಗಿ ಮೇಗ ಲಹಳ್ಳಿ ಮಂಜಯ್ಯ , ಕಾರ್ಯದರ್ಶಿಯಾಗಿ ನಂಜಪ್ಪ ಮೇಗಲಹಳ್ಳಿ, ಉಪ ಕಾರ್ಯದರ್ಶಿಯಾಗಿ ಕಮಲ…

Read More

ಸಿನಿಮಾ ಕಾರ್ಮಿಕರಿಗಾಗಿ ಚಿರಂಜೀವಿ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ, ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ಚಲನಚಿತ್ರ ಕಾರ್ಮಿಕರಿಗೆ ಈ ಘೋಷಣೆ ಮಾಡಿದರು. ಇತ್ತೀಚೆಗೆ ಚಿರು ಸೆಲೆಬ್ರಿಟಿ ಕ್ರಿಕೆಟ್ ಕಾರ್ನಿವಲ್ ಜೆರ್ಸಿಯನ್ನು ಅನಾವರಣಗೊಳಿಸಿದ್ದರು. ಈ ಜೆರ್ಸಿ ಲಾಂಚ್ ಕಾರ್ಯಕ್ರಮದಲ್ಲಿ ಚಿತ್ರಪುರಿ ಕಾಲೋನಿಯಲ್ಲಿ ಚಲನಚಿತ್ರ ಕಾರ್ಮಿಕರು ಮತ್ತು ದಿನಗೂಲಿ ಕಾರ್ಮಿಕರಿಗಾಗಿ ಆಸ್ಪತ್ರೆ ನಿರ್ಮಿಸುವುದಾಗಿ ಚಿರು ಘೋಷಿಸಿದರು. ಆಸ್ಪತ್ರೆಯ ಯೋಜನೆಯೂ ಪೂರ್ಣಗೊಂಡಿದೆ ಎಂದ ಅವರು, ತಮ್ಮ ತಂದೆ ಕೊನಿಡೇಲ ವೆಂಕಟ್ ರಾವ್ ಅವರ ಹೆಸರಿನಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲು ಬಯಸುವುದಾಗಿ ತಿಳಿಸಿದರು. ಈ ಜನ್ಮದಿನದಂದು ಶಂಕುಸ್ಥಾಪನೆ ನೆರವೇರಿಸಿ ಮುಂದಿನ ಜನ್ಮದಿನಕ್ಕೂ ಮುನ್ನ ಸೇವೆಗಳನ್ನು ಆರಂಭಿಸಲಾಗುವುದು ಎಂದರು. ಸದ್ಯ ಮೋಹನ್ ರಾಜಾ ನಿರ್ದೇಶನದಲ್ಲಿ ‘ಗಾಡ್ ಫಾದರ್’ಚಿತ್ರದಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಚಿತ್ರೀಕರಣದ ಅಂತಿಮ ಹಂತದಲ್ಲಿರುವ ಈ ಚಿತ್ರ ದಸರಾ ಉಡುಗೊರೆಯಾಗಿ ಅಕ್ಟೋಬರ್ 5 ರಂದು ತೆರೆಗೆ ಬರಲಿದೆ. ಈ ಚಿತ್ರದ ಟೀಸರ್ ಆಗಸ್ಟ್ 21 ರಂದು ಬಿಡುಗಡೆಯಾಗಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…

Read More

ಅಥಣಿಯಲ್ಲಿ ಜರುಗಿದ ಕಾಲೇಜು ಬಸ್ ಅಪಘಾತ ಸ್ಥಳಕ್ಕೆ ಹಾಗೂ ಆಸ್ಪತ್ರೆಗಳಿಗೆ ಬೆಳಗಾವಿ ಎಸ್ ಪಿ ಸಂಜೀವ್ ಪಾಟೀಲ ಭೇಟಿ ನೀಡಿ ಗಾಯಗೊಂಡ ವಿದ್ಯಾರ್ಥಿಗಳ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿ, ಬಸ್ಸಿನಲ್ಲಿ ಅತೀಯಾಗಿ ಮಕ್ಕಳನ್ನು ತುಂಬಿದ್ದಾರೆ ಎಂಬ ಆರೋಪದ ಬಗ್ಗೆ ಪರಿಶೀಲನೆ ಮಾಡಲಾಗುವುದು. ಘಟನೆಯಲ್ಲಿ ಗಾಯಗೊಂಡ ಸುಮಾರು 39 ವಿದ್ಯಾರ್ಥಿಗಳಿಗೆ ನಾಲ್ಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಿಳಿಸಿದರು. ಒಬ್ಬರು ಶಿಕ್ಷಕಿ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ (Belagavi Hospital) ರವಾನಿಸಲಾಗಿದೆ. ದುರ್ಘಟನೆ ಜರುಗಿದಾಗ ಸ್ಥಳೀಯ ಖಾಸಗಿ ವೈದ್ಯರು ಮತ್ತು ಸಾರ್ವಜನಿಕರು ಸಕಾಲಕ್ಕೆ ಸ್ಪಂದಿಸಿದ್ದಾರೆ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು. ಅಪಘಾತದಲ್ಲಿ ಬಸ್  ಹಾಗೂ ಲಾರಿಯ ಇಬ್ಬರೂ ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಲೇಜು ವಾಹನದಲ್ಲಿ ಎಷ್ಟು ಜನ ಇದ್ದರು ಎನ್ನುವ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಬೇರೆಡೆ ಸ್ಥಳಾಂತರಿಸಲಿದ್ದೇವೆ ಎಂದು ಅವರು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಹಲಗೂರು: ಮಂಡ್ಯ ಜಿಲ್ಲೆಯಲ್ಲಿ ಕುರಿ, ಮೇಕೆ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹಲಗೂರು ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳಿಂದ 60 ಸಾವಿರ ನಗದು ಹಾಗೂ ಕಳ್ಳತನಕ್ಕೆ ಬಳಸಿದ ಇನ್ನೋವ ಕಾರು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಪೊಲೀಸ್ ಅಧೀಕ್ಷಕರಾದ ವೇಣುಗೋಪಾಲ್, ಡಿವೈಎಸ್ ಪಿ ನವೀನ್ ಕುಮಾರ್, ಹಲಗೂರು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಮುಖ್ಯಪೇದೆಗಳಾದ ರಿಯಾಜ್, ಉಮೇಶ್, ಪ್ರಭುಸ್ವಾಮಿ, ನಾಗೇಂದ್ರ, ಜಯಕುಮಾರ್, ಸಿದ್ದರಾಜ್, ಮಲ್ಲಿಕಾರ್ಜುನ ತುಳುಕಿ, ರವಿ ಡಿ.ವೈ. ಅವರ ತಂಡ ಆರೋಪಿಗಳನ್ನು ದಸ್ತಗಿರಿ ಮಾಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More