Subscribe to Updates
Get the latest creative news from FooBar about art, design and business.
- ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರಾ ಹಾಲಹರವಿ ಕೊಂಡೋತ್ಸವ: ಲಾಡು ಪ್ರಸಾದ ಟೆಂಡರ್
- ಜೈ ಭೀಮ್ ದಮನಿತರ ಸೇವಾ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ
- ಅಂಗನವಾಡಿ | ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ
- ನ.20: ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ
- ನವೆಂಬರ್ 7ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ
- ಡಿಸೆಂಬರ್ 2ರವರೆಗೆ ಕಾಲುಬಾಯಿ ಜ್ವರದ ವಿರುದ್ಧ ಸಾಮೂಹಿಕ ಲಸಿಕಾ ಅಭಿಯಾನ
- ನವೆಂಬರ್ 16ರಂದು ನವೋದಯ ಶಾಲೆ ಮಾಕ್ ಪರೀಕ್ಷೆ
- ಖ್ಯಾತ ಖಳನಟ ಹರೀಶ್ ರಾಯ್ ನಿಧನ
Author: admin
ತುಮಕೂರು: ಜಿಲ್ಲೆಯಲ್ಲಿ ಕೋವಿಡ್ ದೃಢಪಡುವ ಪ್ರಮಾಣ ನಿಧಾನವಾಗಿ ಏರಿಕೆ ಕಾಣುತ್ತಿದ್ದು, ಬಹುತೇಕ ಶೂನ್ಯಕ್ಕೆ ಇಳಿದಿದ್ದ ಕೊವಿಡ್ ಪ್ರಕರಣಗಳು ಕೆಲವು ದಿನಗಳಿಂದ ಏರಿಕೆಯಾಗಿವೆ. ಸೋಮವಾರದ ವೇಳೆಗೆ ಕಳೆದ 24 ಗಂಟೆಗಳಲ್ಲಿ ಮೂವರಿಗೆ ಸೋಂಕು ದೃಢಪಟ್ಟಿದೆ. ತುಮಕೂರು, ಗುಬ್ಬಿ, ತುರುವೇಕೆರೆ ತಾಲ್ಲೂಕಿನಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 10ಕ್ಕೆ ಹೆಚ್ಚಳವಾಗಿದೆ. ತುಮಕೂರು ತಾಲ್ಲೂಕಿನಲ್ಲಿ 5, ಶಿರಾ 3, ಗುಬ್ಬಿ, ತುರುವೇಕೆರೆ ತಾಲ್ಲೂಕಿನಲ್ಲಿ ತಲಾ ಒಂದು ಸಕ್ರಿಯ ಪ್ರಕರಣಗಳಿವೆ. ಕೊವಿಡ್ ಕುರಿತಂತೆ ಸಾರ್ವಜನಿಕರು ಇದೀಗ ಹೆಚ್ಚಿನ ಮಹತ್ವ ನೀಡುತ್ತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದರೂ ಮಾಸ್ಕ್ ಧರಿಸುವವರ ಸಂಖ್ಯೆ ತೀರಾ ಇಳಿಮುಖವಾಗಿದೆ. ದೈಹಿಕ ಅಂತರದ ಮಾತೇ ಇಲ್ಲವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಗುಬ್ಬಿ: ಗುಂಡು ತೋಪು ಅಭಿವೃದ್ಧಿ ನೆಪದಲ್ಲಿ ಪೆದ್ದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್, ಬೆಳೆದು ನಿಂತ 100 ಕ್ಕೂ ಹೆಚ್ಚು ಮರಗಳನ್ನು ಕತ್ತಿರಿಸಿ ಹಾಕಿರುವ ಘಟನೆ ಕಡಬ ಹೋಬಳಿಯ ಕುಣ್ಣಾಘಟ್ಟ ಗ್ರಾಮದಲ್ಲಿ ಶನಿವಾರ ಜರುಗಿದೆ. ಪೆದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಂ.ನಂ.104 ವಿಸ್ತಿರ್ಣ 4.07 ಗುಂಟೆ ಜಮೀನಿದ್ದು, ಈ ಜಮೀನಿನಲ್ಲಿ ಸುಮಾರು ನೂರು ಸಂಖ್ಯೆಯ ವಿವಿಧ ಜಾತಿಯ ಮರಗಳು ಬೆಳೆದಿದ್ದು, ಗ್ರಾಮಸ್ಥರ ಅನುಕೂಲಕ್ಕಾಗಿ ಮೀಸಲಾಗಿರುವ ಈ ಜಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಮರಗಳು ಬೆಳೆದಿರುವುದನ್ನು ಲೆಕ್ಕಿಸದೆ ಅಭಿವೃದ್ಧಿ ನೆಪವೊಡ್ಡಿ ಮರಗಳ ಮಾರಣಹೋಮ ನಡೆಸಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ನ ದರ್ಪ: ಪೆದ್ದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಂಭಂಧ ಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರದೆ ಉದ್ದೇಶ ಪೂರ್ವಕವಾಗಿ ಗ್ರಾಮ ಪಂಚಾಯಿತಿ ಹಣ ಹೊಡೆಯಲು ಈ ಕೆಲಸ ಕ್ಕೆ ಮುಂದಾಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು…
ತುಮಕೂರು: ಕ್ಷುಲ್ಲಕ ಕಾರಣಕ್ಕೆ ತಂದೆಯನ್ನು ಮಗನೇ ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ ನಡೆದಿದೆ. ಮರಳೂರು ದಿಣ್ಣೆಯ 10ನೇ ಕ್ರಾಸ್ ನಲ್ಲಿ ವಾಸವಾಗಿದ್ದ ತಂದೆ-ಮಗನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು, ಘಟನೆಯ ಬಳಿಕ ಆರೋಪಿ ಮಗನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆಸಿಫ್ (56) ಹತ್ಯೆಯಾಗಿರುವವರಾಗಿದ್ದು, ಮಗ ಇಮ್ರಾನ್ ಬಂಧಿತ ಆರೋಪಿಯಾಗಿದ್ದಾನೆ. ಹತ್ಯೆಗೀಡಾದ ಆಸಿಫ್ ಟೈಲ್ಸ್ ಕೆಲಸ ಮಾಡುತ್ತಿದ್ದು, ಮಗ ಪೇಂಟರ್ ವೃತ್ತಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವರದಿ: ಮಾರುತಿ ಪ್ರಸಾದ್ ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಮೈಸೂರು: ಇಬ್ಬರು ಮಕ್ಕಳ ಜೊತೆಗೆ ನೇಣು ಹಾಕಿಕೊಂಡು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ರಾಮೇಗೌಡನಪುರ ಗ್ರಾಮದಲ್ಲಿ ನಡೆದಿದೆ. ತಾಯಿ ಸರೋಜ (32) ತನ್ನ ಇಬ್ಬರು ಮಕ್ಕಳಾದ ಗೀತಾ (6) ಹಾಗೂ ಕುಸುಮಾ (4) ಮಕ್ಕಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಆತ್ಮಹತ್ಯೆ ನಡೆದಿದೆ ಎನ್ನಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಮುಂಬೈ: ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಪರಿಣಾಮ ಓರ್ವ ಮೃತಪಟ್ಟು ಹಲವರು ಅವಶೇಷಗಳಡಿಯಲ್ಲಿ ಸಿಲುಕಿದ ಘಟನೆ ಮುಂಬೈಯ ಕುರ್ಲ ಪ್ರದೇಶದಲ್ಲಿ ನಡೆದಿದೆ. ಅವಶೇಷಗಳಡಿಯಲ್ಲಿ ಸಿಲುಕಿದ್ದ 12 ಮಂದಿಯನ್ನು ಈಗಾಗಲೇ ರಕ್ಷಿಸಲಾಗಿದೆ, ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕುರ್ಲಾದ ನಾಯಕ್ ನಗರ ಸೊಸೈಟಿಯಲ್ಲಿರುವ ವಸತಿ ಕಟ್ಟಡದ ಒಂದು ಭಾಗ ಕಳೆದ ಮಧ್ಯರಾತ್ರಿಯ ಸುಮಾರಿಗೆ ಕುಸಿದಿದೆ. ಗಾಯಾಳುಗಳನ್ನು ಘಾಟ್ಕೋಪರ್ ಮತ್ತು ಸಿಯಾನ್ನಲ್ಲಿರುವ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು, ಬದುಕುಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅವಶೇಷಗಳ ಅಡಿಯಲ್ಲಿ ಇನ್ನೂ 20ರಿಂದ 22 ಮಂದಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸ್ಥಳದಲ್ಲಿ ಅಗ್ನಿಶಾಮಕದಳ ಹಾಗೂ ಎನ್ ಡಿಆರ್ ಎಫ್ ತಂಡ ಕಾರ್ಯಾಚರಣೆ ನಡೆಸುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದಲ್ಲಿ ಮೀನುಗಾರು ಅಪರೂಪದ ಬೃಹತ್ “ಟೆಲಿಯಾ ಭೋಲಾ” ಮೀನನ್ನು ಸೆರೆ ಹಿಡಿದಿದ್ದು, ಈ ಮೀನು ಸುಮಾರು 55 ಕೆಜಿ ತೂಕ ಹೊಂದಿದೆ. ಮೀನನ್ನು ಹರಾಜಿನಲ್ಲಿ ಕಂಪನಿಯೊಂದು ಪ್ರತಿ ಕೆಜಿಗೆ 26 ಸಾವಿರ ರೂಪಾಯಿಗೆ ಖರೀದಿಸಿದೆ. ಈ ಮೀನು ಒಟ್ಟು 13 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಟೆಲಿಯಾ ಭೋಲಾ ಮೀನಿನ ವೈಶಿಷ್ಟ್ಯವೆಂದರೆ ಅದು ಬಹಳಷ್ಟು ಮಾವ್ (Maw) ಅನ್ನು ಹೊಂದಿರುತ್ತದೆ, ಇದರಿಂದ ಔಷಧಿಗಳನ್ನು ತಯಾರಿಸಲಾಗುತ್ತದೆ. ವರದಿಗಳ ಪ್ರಕಾರ ಈ ಮೀನಿನ ಮಾವನ್ನು ವಿದೇಶದಲ್ಲೂ ಮಾರಾಟ ಮಾಡಲಾಗುತ್ತದೆ. ಈ ಮೀನನ್ನು ನೋಡಲು ಅಪಾರ ಸಂಖ್ಯೆ ಜನರು ಜಮಾಯಿಸಿದ್ದರು. ಮೀನಿನ ಒಟ್ಟು ತೂಕ 55 ಕೆ.ಜಿ ಇದ್ದು 5 ಕೆಜಿ ಮೊಟ್ಟೆಗಳನ್ನು ಹೊರತುಪಡಿಸಿದರೇ, ಮೀನಿನ ಒಟ್ಟು ತೂಕ 50 ಕೆ.ಜಿ. ಇದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ತುಮಕೂರು: ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ನಾಡುಕಂಡ ಶ್ರೇಷ್ಠ ದೂರ ದೃಷ್ಟಿಯ ಆಡಳಿತಗಾರ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದ ಬಳಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡರು ಅಲ್ಲಿಂದ ಕಾಲ್ನಡಿಗೆಯಲ್ಲಿ ಹಾಗೂ ಬೈಕ್ ರ್ಯಾಲಿ ಮೂಲಕ ಹಿರಣ್ಣಯ್ಯ ಬಯಲುರಂಗ ಮಂದಿರದ ವೇದಿಕೆ ಕಾರ್ಯಕ್ರಮಕ್ಕೆ ಸಾಗಿದರು. ರ್ಯಾಲಿಯ ಉದ್ದಕ್ಕೂ ಕೆಂಪೇಗೌಡರಿಗೆ ಘೋಷಣೆಗಳನ್ನು ಕೂಗುತ್ತ ಸಾಗಿದರು ರ್ಯಾಲಿಯಲ್ಲಿ ವಿವಿಧ ಜಾನಪದ ತಂಡಗಳು ಜನರನ್ನು ಮನರಂಜಿಸಿದವು . ತುರುವೇಕೆರೆ ಕ್ಷೇತ್ರದ ಶಾಸಕ ಮಸಾಲ ಜಯರಾಮ್ ರವರ ಏಕಲವ್ಯ ಹೆಸರಿನ ಹೋರಿ ಜನರ ಆಕರ್ಷಣೆಯಾಗಿದ್ದುವು. ದಾರಿಯುದ್ದಕ್ಕೂ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಮಸಾಲ ಜಯರಾಮ್ . ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ , ಮಾಜಿ ವಿಧಾನ ಪರಿಷತ್ತಿನ ಸದಸ್ಯ ಬೆಮೆಲ್ ಕಾಂತರಾಜು ಸುಬ್ರಮಣ್ಯ ಶ್ರೀಕಠೇಗೌಡ ,ಬಾಣಸಂದ್ರ ರಮೇಶ್ , ದೊಡ್ಡಾಘಟ್ಟ ಚಂದ್ರೇಶ್ ,ಕೊಂಡಜ್ಜಿ ವಿಶ್ವನಾಥ್ ಮತ್ತಿತರರು ಹಾಜರಿದ್ದರು ವರದಿ: ಸುರೇಶ್ ಬಾಬು, ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…
ಕೊರಟಗೆರೆ : ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ 513ನೇ ಜಯಂತೋತ್ಸವವನ್ನು ತಾಲೂಕು ಆಡಳಿತ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ಸರಳ ಸುಂದರ ಜಯಂತ್ಯುತ್ಸವನ್ನು ಆಚರಿಸಲಾಯಿತು. ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ಒಕ್ಕಲಿಗ ಸಮುದಾಯ ಭವನಕ್ಕೆ ಹಾಗೂ ಇನ್ನಿತರ ಕಾರ್ಯಕ್ರಮಗಳ ಆಯೋಜನೆ ಮಾಡಲು ಖಾಲಿ ಸ್ಥಳವನ್ನು ಸಮುದಾಯಕ್ಕೆ ನೀಡಬೇಕು ಎಂದು ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ನೀಡಿದರು . ತಾಲ್ಲೂಕು ದಂಡಾಧಿಕಾರಿ ನಹೀದಾ ಜಮ್ ಜಮ್ ಮಾತನಾಡಿ, ನಮ್ಮ ನಾಡಿಗೆ ಮಾತ್ರವಲ್ಲ ನಮ್ಮ ಇಡೀ ವಿಶ್ವಕ್ಕೆ ಮಾದರಿ ನಗರವನ್ನಾಗಿ ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರ ಜಯಂತಿ ಕೇವಲ ಒಕ್ಕಲಿಗ ಸಮುದಾಯಕ್ಕೆ ಸೀಮಿತವಲ್ಲ ಇಡೀ ದೇಶದ ಜನತೆಯ ಆಸ್ತಿ ನಾಡಪ್ರಭು ಕೆಂಪೇಗೌಡರು ಎಂದರೆ ತಪ್ಪಾಗಲಾರದು ಅವರು ಬೆಂಗಳೂರನ್ನು ನಿರ್ಮಿಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ ಅವರಿಂದಲೇ ಇಂದು ಸುಂದರ ಬೆಂಗಳೂರು ನಿರ್ಮಾಣವಾಗಲು ಸಾಧ್ಯವಾಗಿದೆ ಎಂದು ತಿಳಿಸಿದರು. ಸಮುದಾಯದ ಮುಖಂಡ ವೀರಕ್ಯಾತಯ್ಯ ಮಾತನಾಡಿ ನಾಡಪ್ರಭು ಕೆಂಪೇಗೌಡರ ಜಯಂತಿ ಕೇವಲ 4 ಗೋಡೆಗಳ ಮಧ್ಯೆ…
ತುಮಕೂರು: ಅಗ್ನಿಪಥ ಯೋಜನೆಯನ್ನು ವಿರೋಧಿಸಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಅಗ್ನಿಪಥ ಯೋಜನೆಯ ಹೆಸರಿನಲ್ಲಿ ಸೈನಿಕರಿಗೆ ದ್ರೋಹ ಮಾಡುತ್ತಿರುವ ಬಿಜೆಪಿಗೆ ಧಿಕ್ಕಾರ, ಬಿಜೆಪಿ ಸರ್ಕಾರ ತೊಲಗಲಿ ಎಂದು ಕಾಂಗ್ರೆಸ್ ಮುಖಂಡರು ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದ್ದಾರೆ. ಉದ್ಯೋಗದ ಹೆಸರಿನಲ್ಲಿ ಬಿಜೆಪಿ ಸರ್ಕಾರ ಯುವಕರನ್ನು ಬೀದಿ ಪಾಲು ಮಾಡಲಾಗುತ್ತಿದೆ. ಅಧಿಕಾರ ಹಿಡಿಯುವ ಸಲುವಾಗಿ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದವರು ಮತ್ತೆ ಈ ಬಗ್ಗೆ ಮಾತನಾಡಲಿಲ್ಲ. ಅವರ ಪ್ರಕಾರ ಇದುವರೆಗೆ 16 ಕೋಟಿ ಉದ್ಯೋಗ ನೀಡಬೇಕಿತ್ತು. ಆದರೆ, ಸುಳ್ಳು ಹೇಳುವುದರಲ್ಲಿ ಕೇಂದ್ರ ಸರ್ಕಾರ ಮುಳುಗಿದೆ ಕಾಂಗ್ರೆಸ್ ಕಾರ್ಯಕರ್ತರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸೇನೆಯಲ್ಲಿ ಶಾಶ್ವತವಾದ ಸ್ಥಾನ ನೀಡಲಿ. ಅಗ್ನಿಪಥ ಬಿಜೆಪಿ ಕಾರ್ಯಾಲಯದಲ್ಲಿಯೇ ಇರಲಿ. ಪ್ರತಿಯೊಬ್ಬರು ಯೋಜನೆ ವಿರೋಧಿಸುತ್ತಿದ್ದಾರೆ. ರೈತರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ರೀತಿಯಲ್ಲಿ ಅಗ್ನಿಪಥ ಹಿಂದಕ್ಕೆ ಪಡೆಯಬೇಕು. ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕಸಬಾ ಹೋಬಳಿ ಮಲ್ಲಾಘಟ್ಟ ಕೆರೆಯ ಕೋಡಿ ಬಿದ್ದಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಈ ಕ್ಷೇತ್ರದಲ್ಲಿ ಶ್ರೀ ಗಂಗಾಧರೇಶ್ವರ ದೇವಾಲಯ ಇದೆ. ಈ ಕೆರೆಯು ಮೈದುಂಬಿ ಹರಿಯುತ್ತಿರುವುದರಿಂದ ದೂರದ ಬೆಂಗಳೂರು, ಮೈಸೂರು ಅರಸೀಕೆರೆ ಹಾಸನ ಮುಂತಾದ ಕಡೆಯಿಂದ ಸಾವಿರಾರು ಪ್ರವಾಸಿಗರ ದಂಡು ಈ ಕೆರೆಯ ಕೋಡಿಯ ಮನೋಹರವಾದ ದೃಶ್ಯವನ್ನು ನೋಡಲು ಬರುತ್ತಿದ್ದಾರೆ. ಈ ಸ್ಥಳದಲ್ಲಿ ತಾಲೂಕಿನ ಗ್ರಾಮದೇವತೆಗಳ ಪುಣ್ಯ ಸ್ನಾನಕ್ಕೆ ಭಕ್ತರು ಆಗಮಿಸಿ ಹೋಮ-ಹವನಗಳನ್ನು ಮಾಡಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಮಕ್ಕಳಾಗದ ದಂಪತಿಗಳು ಗಂಗಾ ಪೂಜೆ ಮಾಡಿಸಿ ಕೊಂಡು ಹೋಗುತ್ತಾರೆ. ಈ ಸ್ಥಳಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ತಾಲೂಕು ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ, ಜಲಾನಯನ ಇಲಾಖೆಯಾಗಲಿ ,ಜನಪ್ರತಿನಿಧಿಗಳಾಗಲಿ ಕಿಂಚಿತ್ತೂ ಕಾಳಜಿ ತೋರಿಸುತ್ತಿಲ್ಲ ಎನ್ನುವ ಚರ್ಚೆ ಕೇಳಿ ಬಂದಿದೆ. ಇನ್ನಾದರೂ ಈ ಸ್ಥಳದ ಅಭಿವೃದ್ಧಿಗಾಗಿ ಕಾಳಜಿ ವಹಿಸುತ್ತಾರಾ ಪ್ರೇಕ್ಷಣೀಯ ಸ್ಥಳ ಮಾಡುತ್ತಾರಾ ? ಎಂದು ಕಾದುನೋಡಬೇಕಾಗಿದೆ. ವರದಿ: ಸುರೇಶ್ ಬಾಬು, ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ…