ತುಮಕೂರು: ನಗರದಲ್ಲಿ ಮುಸ್ಲಿಂ ಸಮುದಾಯದ ಶಬ್-ಎ-ಬಾರಾತ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲಾಯಿತು.
ಈ ವೇಳೆ ಸಮಾಜ ಸೇವಕರಾದ ಮುಹಮ್ಮದ್ ಇಷ್ಟಿಯಾಕ್ (ಬಾಬು) ರವರು ಸುದ್ದಿಗಾರರ ಜೊತೆ ಮಾತನಾಡಿ, ತುಮಕೂರು ನಗರ ಹಾಗೂ ಜಿಲ್ಲಾದ್ಯಂತ ಶಾಂತಿಯುತವಾಗಿ ಹಬ್ಬವನ್ನು ಆಚರಿಸಲಾಗಿದೆ. ಹಬ್ಬವನ್ನು ಆಚರಿಸಲು ಸಹಕಾರ ನೀಡಿದ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ನಾಡಿನ ಸಮಸ್ತ ಜನರಿಗೆ ಶಬ್-ಎ-ಬಾರಾತ್ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ ಎಂದು ಇದೇ ವೇಳೆ ಅವರು ಹಬ್ಬದಸ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಸಯ್ಯದ್ ವಾಸೀಂ, ಫಯಾಜ್ ಪಾಷಾ, ಮತ್ತು ಇತರರು ಜೊತೆಗಿದ್ದರು.
ವರದಿ : ಉದಯ್ (ಫೋಟೋಗ್ರಾಫರ್)
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB