Author: admin

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪ್ರಧಾನ ರಸ್ತೆಯಾದ ಗಾಂಧಿಸರ್ಕಲ್ ನಿಂದ ಹಿರಿಯೂರು ನಗರದ ರಂಜಿತ ಲಾಡ್ಜ್ ನವರೆಗೂ ಬೀದಿ ದೀಪಗಳು ಕೆಟ್ಟು ಹೋಗಿ ತಿಂಗಳುಗಳೇ ಕಳೆದರೂ ಸಂಬಂಧಪಟ್ಟ ಆಡಳಿತ ಅಧಿಕಾರಿಗಳು ಹಾಗು ಸ್ಥಳೀಯ ಶಾಸಕರು ಇದರ ಬಗ್ಗೆ ಗಮನಹಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರು ಹಾಗೂ ಬಾಂಬೆ , ರಾಯಚೂರು ಹುಬ್ಬಳ್ಳಿ-ಧಾರವಾಡ ಕ್ಕೆ ತೆರಳುವಂತಹ ಪ್ರಧಾನ ರಸ್ತೆ ಇದಾಗಿದ್ದು, ಗಾಂಧಿಸರ್ಕಲ್ ನಿಂದ ಹಿರಿಯೂರು ಸಾರಿಗೆ ಬಸ್ ನಿಲ್ದಾಣ ಹಾಗೂ ರಂಜಿತ ಲಾಡ್ಜ್ ನವರೆಗೂ ಸಹ ಬೀದಿ ದೀಪಗಳು ಕೆಟ್ಟುಹೋಗಿದ್ದು, ಈವರೆಗೆ ಸಂಬಂಧಪಟ್ಟ ಆಡಳಿತ ಅಧಿಕಾರಿಗಳಾಗಲಿ , ಸ್ಥಳೀಯ ಶಾಸಕರಾಗಲಿ ಇದರ ಬಗ್ಗೆ ಸ್ವಲ್ಪವೂ ಸಹ ಗಮನಹರಿಸಿಲ್ಲ ಎನ್ನುವ ಅಸಮಾಧಾನ ಸಾರ್ವಜನಿಕರಿಂದ ಕೇಳಿ ಬಂದಿದೆ. ಬೀದಿ ದೀಪಗಳಿಲ್ಲದ ಕಾರಣ ಈ ಪ್ರದೇಶಗಳು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದ್ದು, ಈ ಪ್ರದೇಶಗಳಲ್ಲಿ ಸಾರ್ವಜನಿಕರು ಭೀತಿಯಿಂದ ಓಡಾಡುವಂತಾಗಿದೆ ಎಂದು ನಮ್ಮತುಮಕೂರು.ಕಾಂ ಜೊತೆಗೆ ಸಾರ್ವಜನಿಕರು ಅಭಿಪ್ರಾಯ ಹಂಚಿಕೊಂಡರು. ಇನ್ನೂ ಇಲ್ಲಿನ ಸಾರಿಗೆ ಸಂಸ್ಥೆಯ ವ್ಯವಸ್ಥೆಯು ಸಹ ಹದಗೆಟ್ಟಿದೆ…

Read More

ತಿಪಟೂರು: ಪರಿಶಿಷ್ಟಜಾತಿ ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಯು, ನಗರದ  ಕಲ್ಪತರು ಸಭಾಂಗಣ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಅಶೋಕ್,   ಗೌಡನಕಟ್ಟೆ  ದಲಿತರಿಗೆ ಈ ರಾಜ್ಯದಲ್ಲಿ ಆಗುತ್ತಿರುವ ಅನ್ಯಾಯಗಳ ಬಗ್ಗೆ  ತಹಸೀಲ್ದಾರ್ ಅವರ ಗಮನ ಸೆಳೆದರು. ತಾಲೂಕಿನ ಹೋನವಳ್ಳಿ ಹೋಬಳಿಯ ಗುರುಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಗುರುಗದಹಳ್ಳಿ ಕಾಲೋನಿಯಲ್ಲಿ ಖಾಲಿ ಜಾಗವಿದ್ದು, ಈ ಜಾಗ ಪಕ್ಕದ ಮನೆಯವರು ಈ ಜಾಗ ನಮ್ಮದು ಎಂದು ಕಾಲೋನಿಯ ನಿವಾಸಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಈ  ಸಂಬಂಧ ನಾವು ನಿಮ್ಮ ಗಮನಕ್ಕೆ ತಂದಿದ್ದೇವೆ. ಈ ಜಾಗವನ್ನು ಅಳತೆ ಮಾಡಿ  ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರು ಮಾಡಬೇಕೆಂದು ತಹಶೀಲ್ದಾರ್ ಗೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್,  ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಇಓ ಸುದರ್ಶನ್,  ತಾಲೂಕು ಡಿಎಸ್ಎಸ್ ಅಧ್ಯಕ್ಷ ಅಶೋಕ ಗೌಡನಕಟ್ಟೆ, ತಾಲೂಕು ಉಪಾಧ್ಯಕ್ಷ ಮತ್ತಿಘಟ್ಟ ಶಿವಕುಮಾರ್,  ಪರಿಶಿಷ್ಟ ಜಾತಿ-ಪರಿಶಿಷ್ಟಪಂಗಡದ ಮುಖಂಡರುಗಳು  ಭಾಗಿಯಾಗಿದ್ದರು. ವರದಿ:…

Read More

ಪೌರಕಾರ್ಮಿಕರ ಎಲ್ಲ ಇಲಾಖೆಗಳಿಂದ ಮಾಹಿತಿ ಪಡೆದು ಆರ್ಥಿಕ ಹೊರೆಯ ಬಗ್ಗೆ ಪರಿಶೀಲನೆ ನಡೆಸಿ ಅವರನ್ನು ಖಾಯಂ ಮಾಡುವ ಬಗ್ಗೆ ಸೂಕ್ತ ನಿರ್ಧಾರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ತಿಳಿಸಿದರು. ಶೂನ್ಯವೇಳೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕ ಪಿ.ರಾಜೀವ್ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಮುಖ್ಯಮಂತ್ರಿ, ಪೌರಕಾರ್ಮಿಕರನ್ನು ಗುತ್ತಿಗೆದಾರರು ನೇಮಕ ಮಾಡಿಕೊಂಡಿದ್ದು, ಅವರಿಗೆ ಸರಿಯಾಗಿ ವೇತನ ಕೊಡುತ್ತಿರಲಿಲ್ಲ. ಈಗ ಪೌರಕಾರ್ಮಿಕರ ಖಾತೆಗಳಿಗೆ ವೇತನ ಜಮೆಯಾಗುತ್ತಿದೆ. ಪೌರಕಾರ್ಮಿಕರ ಆರೋಗ್ಯಕ್ಕಾಗಿ ಪ್ರತಿ ತಿಂಗಳು 2 ಸಾವಿರ ರೂ. ಒದಗಿಸಲು ಬಜೆಟ್‍ನಲ್ಲಿ ಘೋಷಿಸಲಾಗಿದೆ. ವೈದ್ಯಕೀಯ ಸೌಲಭ್ಯ ಒದಗಿಸುವುದು ಸೇರಿದಂತೆ ಅವರಿಗೆ ಅಗತ್ಯ ಅನುಕೂಲಗಳನ್ನು ಮಾಡಿಕೊಡುವ ಕಡೆ ಸರ್ಕಾರ ಗಮನಹರಿಸಿದೆ ಎಂದರು. ಕಾರ್ಮಿಕರ ಸ್ಥಿತಿ ಗೊತ್ತಿದೆ. ಸ್ವಚ್ಚತೆ ಮಾಡುವಾಗ ಪ್ರಾಣ ಕಳೆದುಕೊಂಡ ಘಟನೆಗಳು ನಡೆದಿವೆ. ಮತ್ತೆ ಮರುಕಳಿಸಿವೆ. ಎಲ್ಲ ಇಲಾಖೆಗಳಿಂದ ಮಾಹಿತಿ ಪಡೆದು ಖಾಯಂ ಮಾಡುವ ನಿರ್ಧಾರ ಮಾಡಲಾಗುವುದು ಎಂದರು. ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ ಸೇವೆ ಖಾಯಂ ಮಾಡುವುದು ಸೇರಿದಂತೆ 27…

Read More

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ನಾಯಂಡಹಳ್ಳಿ ಜಂಕ್ಷನ್‍ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್‍ವರೆಗಿನ ರಸ್ತೆಗೆ ನಾಮಕರಣ ಮಾಡಲು ಮುಹೂರ್ತ ನಿಗದಿಯಾಗಿದೆ. ಇದೇ ಮಾ.30ರಂದು ಈ ರಸ್ತೆಗೆ ಪುನೀತ್‍ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗುವುದು.ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ರಾಜ್ ಕುಟುಂಬಸ್ಥರು ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಅದೇ ದಿನ ಈ ರಸ್ತೆಯ ಎಲ್ಲಾ ನಾಮಫಲಕಗಳನ್ನು ಕೂಡ ಬದಲಾಯಿಸಲಾಗುವುದು ಎನ್ನಲಾಗಿದೆ. ಕಮರ್ಷಿಯಲ್ ಅಂಗಡಿಗಳ ಫಲಕ ಗಳಲ್ಲಿಯೂ ಪುನೀತ್ ರಾಜ್‍ಕುಮಾರ್ ರಸ್ತೆ ಎಂದು ಬದಲಾಯಿಸಲಾಗುವುದು ಎಂದು ಹೇಳಲಾಗಿದೆ. ಒಟ್ಟಿನಲ್ಲಿ 12 ಕಿಮೀ ಉದ್ದದ ರಸ್ತೆಗೆ ಪುನೀತ್ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ.ಈ ರಸ್ತೆಗೆ ಅಪ್ಪು ಹೆಸರಿಡುವಂತೆ ಬಿಬಿಎಂಪಿ ಮಾಜಿ ಆಡಳಿತ ಪಕ್ಷ ನಾಯಕ ಎನ್.ಆರ್. ರಮೇಶ್ ಪ್ರಸ್ತಾಪ ಮಾಡಿದ್ದರು. ಇದೀಗ ಬಿಬಿಎಂಪಿ ಆಡಳಿತಾಧಿಕಾರಿ ವತಿಯಿಂದ ಇದಕ್ಕೆ ಅನುಮತಿ ಸಿಕ್ಕಿದೆ. ಬನಶಂಕರಿ 2ನೇ ಹಂತ , ಬನಶಂಕರಿ 3ನೇ ಹಂತದ…

Read More

ರಸ್ತೆ ಗುಂಡಿಯಲ್ಲಿ ಬಿದ್ದು ಯುವಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಜಲಮಂಡಳಿ, ಬೆಸ್ಕಾಂ ಸೇರಿದಂತೆ ಇದಕ್ಕೆ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಬಲಿಯಾಗಿದ್ದು, ಇದಕ್ಕೆ ಕಾರಣವೆನ್ನಲಾದ ಜಲಮಂಡಳಿ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು. ಜೊತೆಗೆ ಬೆಸ್ಕಾಂ ಸೇರಿದಂತೆ ಇದಕ್ಕೆ ಸಂಬಂಧಿಸಿದ ಸಂಸ್ಥೆಗಳ ವಿರುದ್ಧವೂ ಐದು ಪ್ರಕರಣ ದಾಖಲು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.ಕಳೆದ ರಾತ್ರಿ ಎಂಎಸ್ ಪಾಳ್ಯದ ಮುನೇಶ್ವರ ಬಡಾವಣೆಯಲ್ಲಿ ಸಂಭವಿಸಿದ ದುರಂತದಲ್ಲಿ ಯುವಕ ಬಲಿಯಾಗಿದ್ದಾನೆ. ಇದಾಗ ಬಾರದಿತ್ತು. ಆದರೆ, ನಡೆದುಹೋಗಿದೆ. ಒಟ್ಟಿನಲ್ಲಿ ಜಲಮಂಡಳಿ ತಪ್ಪಿನಿಂದ ಇಂತಹ ಅನಾಹುತ ಆಗಿದೆ ಎಂದರು.ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬಿಬಿಎಂಪಿಗೆ ಮಾಹಿತಿ ನೀಡದೆ ರಸ್ತೆ ಅಗೆದಿದ್ದರಿಂದ ಇಂತಹ ಅನಾಹುತ ಆಗಿದೆ. ಇನ್ನೂ, ಈಗಾಗಲೇ ಜಲಮಂಡಳಿ, ಬೆಸ್ಕಾಂ ಸೇರಿದಂತೆ ಇಂತಹ ಸಂಸ್ಥೆಗಳ ವಿರುದ್ಧ ಐದು ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.…

Read More

ಬೆಂಗಳೂರು ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ನಡೆಯುವ ಕರಗ ಉತ್ಸವಗಳಿಗೆ ರಾಜ್ಯ ಸರ್ಕಾರದಿಂದ ಅನುದಾನ ನೀಡ ಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್‍ನ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ನ ಪಿ.ಆರ್. ರಮೇಶ್ ಅವರ ಪ್ರಶ್ನೆ ಕೇಳಿ, ಶ್ರಮ ಸಂಸ್ಕೃತಿಯ ಜನ ಆಚರಿಸುವ ಕರಗ ಉತ್ಸವಕ್ಕೆ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರ ಅನುದಾನ ನೀಡಿತ್ತು.ಈ ಬಾರಿ ಬಜೆಟ್ ನಲ್ಲಿ ಅನುದಾನ ಮೀಸಲಿಟ್ಟಿಲ್ಲ. ಜಾತ್ಯತೀತವಾಗಿ ಎಲ್ಲಾ ಜನ ಕರಗದಲ್ಲಿ ಭಾಗವಹಿಸುತ್ತಿದ್ದಾರೆ. ರಾಜ್ಯದಲ್ಲಿ 10ಕ್ಕೂ ಹೆಚ್ಚು ಜಿಲ್ಲಾಗಳಲ್ಲಿ 147 ಕಡೆ ಕರಗ ಉತ್ಸವ ನಡೆಯುತ್ತದೆ. ಅವುಗಳಿಗೆ ತಲಾ 5 ಲಕ್ಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಹಿರಿಯ ಸದಸ್ಯ ಎಚ್.ವಿಶ್ವನಾಥ್ ಅವರು, ಕೆಂಗಲ್ ಹನುಮಂತಯ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆರಂಭಿಸಿದರು, ವೀರಪ್ಪ ಮೊಯ್ಲಿ ಕಾಲದಲ್ಲಿ ಸ್ವತಂತ್ರ ನಿರ್ದೇಶನಾಲಯವಾಗಿದೆ. ನಾನು ಆಗ ಆ ಖಾತೆ ನಿರ್ವಹಣೆ ಮಾಡಿದ್ದೆ. ಈಗ ಇಲಾಖೆಯ ಹಣ ಸಂಸ್ಕೃತಿ ರಕ್ಷಣೆ ಬದಲು…

Read More

ತುಮಕೂರು: ತುಮಕೂರಿನಲ್ಲಿ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ  ಎಸಿಬಿ ಶಾಕ್ ನೀಡಿದ್ದು, ಮೂರು ಕಡೆಯ ಫಾಮ್ ಹೌಸ್‌ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಸಮಾಜ ಕಲ್ಯಾಣ ಇಲಾಖೆಯ ಜನರಲ್ ಮ್ಯಾನೇಜರ್  ಶ್ರೀನಿವಾಸ್ ಅವರಿಗೆ ಸೇರಿದ  3 ಫಾರ್ಮ್ ಹೌಸ್ ಗಳ ಮೇಲೆ ಎಸಿಬಿ ದಾಳಿ ನಡೆದಿದೆ. ತುಮಕೂರಿನ ಕೌತಮಾರನಹಳ್ಳಿ ಕೊಟ್ಟೆಗೆ ಗೊಲ್ಲಹಳ್ಳಿ ಹಾಗೂ ಮಧುಗಿರಿ ತಾಲೂಕಿನ ಪುರವರ ಬಳಿಯಿರೋ ಎಜಿಓ ಫಾಮ್ ಹೌಸ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಬೆಳಗ್ಗೆ 7 ಗಂಟೆಯಿಂದ ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಈ ಸಂಬಂಧ  ಇನ್ನಷ್ಟು ಮಾಹಿತಿಗಳಿಗಾಗಿ ನಿರೀಕ್ಷಿಸುತ್ತಿದ್ದೇವೆ. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಹೆಚ್.ಡಿ.ಕೋಟೆ: ಹೆಚ್.ಡಿ.ಕೋಟೆಯ ಪಟ್ಟಣದ  ಸಿದ್ದಪಾಜಿ  ರಸ್ತೆ ನಿವಾಸಿ, ರಾಜಮ್ಮ ಅವರು ಅಪಘಾತದಿಂದಾಗಿ ಅಕಾಲಿಕವಾಗಿ ನಿಧನರಾಗಿದ್ದು, ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿ, ಆದಿ ಕರ್ನಾಟಕ ಮಹಾಸಭಾ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹೆಚ್.ಡಿ.ಕೋಟೆ ಪಟ್ಟಣದ ಸಿದ್ಧಪಾಜಿ ರಸ್ತೆ ನಿವಾಸಿಯಾಗಿರುವ ರಾಜಮ್ಮ ಅವರು,  ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಸ್ವಚ್ಛತಾ ಸೈನಿಕರಾಗಿ ಕೆಲಸ ಮಾಡುತ್ತಿದ್ದರು. ತಮ್ಮ ಕರ್ತವ್ಯದ ಜೊತೆಗೆ ಸಮಾಜ ಸೇವೆಗೂ ಮನಮಿಡಿದಿದ್ದರು. ಆದರೆ, ಕರ್ತವ್ಯ ಮುಗಿಸಿ ತಮ್ಮ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಇಲ್ಲಿನ 1ನೇ ಮುಖ್ಯ ರಸ್ತೆಯ ಶ್ರೀಮಾರಮ್ಮನ ಗುಡಿಯ ಮುಂದೆ ಹಂಸ್ ಮೇಲೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ. ಹೆಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜಮ್ಮ ಅವರಿಗೆ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.  ಈ ಸಭೆಗೆ ಎಲ್ಲಾ ರಾಜಕೀಯ ಮುಖಂಡರು ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಗೂ ದಿನಗೂಲಿ ನೌಕರರು ಹಾಜರಿದ್ದರು. ಈ ಸಭೆಯಲ್ಲಿ ಮಹಾ…

Read More

ತುಮಕೂರು: ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ಕರ್ನಾಟಕ ಹಸಿರು ಸೇನೆ, ರೈತ ಸಂಘಟನೆ ಹಾಗೂ ಪ್ರಗತಿಪರ, ಸಂಘಟನೆಗಳು , ತುರುವೇಕೆರೆ ತಾಲೂಕು ರೈತ ಸಂಘಟನೆಯ ಅಧ್ಯಕ್ಷ ಶ್ರೀನಿವಾಸ್ ಗೌಡರ ನೇತೃತ್ವದಲ್ಲಿ, ಭ್ರಷ್ಟ ಬೆಸ್ಕಾಂ ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಪ್ರಮುಖ ರಸ್ತೆಯಲ್ಲಿ ನೂರಾರು ಪ್ರತಿಭಟನಾಕಾರರು, ಕಾಲ್ನಡಿಗೆ ,ಮೂಲಕ ಸಂಚರಿಸಿ, ಬೆಸ್ಕಾಂ ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ ಬೆಸ್ಕಾಂ ಕಚೇರಿಯ ಬಳಿ ತೆರಳಿ,ಕಚೇರಿಯ ಮುಂಭಾಗದಲ್ಲಿ, ನೂರಾರು ಹೋರಾಟದ ರೈತರು, ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು, ಕಾರ್ಮಿಕ ಸಂಘಟನೆಗಳು ಜಮಾಯಿಸಿ, ಧರಣಿ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ ಉದ್ದೇಶಿಸಿ ಮಾತನಾಡಿದ, ಸಿ.ಐ. ಟಿ. ಯು.ಕಾರ್ಮಿಕ ಸಂಘಟನೆಯ ತಾಲ್ಲೂಕು ಕಾರ್ಯದರ್ಶಿ ಸತೀಶ್, ತುರುವೇಕೆರೆ ತಾಲೂಕಿನ, ರೈತರು ಶಾಂತಿ ಪ್ರಿಯರು ಎಂಬುದು ಇಡೀ ನಾಡಿಗೆ ಗೊತ್ತಿದೆ. ಅದನ್ನು ದುರುಪಯೋಗಪಡಿಸಿಕೊಂಡು ನಮ್ಮನ್ನು ಯಾರು ಕೇಳುತ್ತಾರೆ ಅನ್ನೋ ತಾತ್ಸಾರ ತೋರಲಾಗುತ್ತಿದೆ. ರೈತರು ಸಿಡಿದು ನಿಂತ್ರೆ ಕಚೇರಿಯ ಕಟ್ಟಡನೆ ಇರಲ್ಲ. ನಾವು ಕಟ್ಟುತ್ತಿರುವ ಟ್ಯಾಕ್ಸ್ ಹಣದಲ್ಲಿ ಅಧಿಕಾರಿಗಳು ಸಂಬಳ…

Read More

ತಿಪಟೂರು:  ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಬಿ.ಹೊಸಳ್ಳಿಯ ಎಸ್.ಬಿ.ಕೆ ಕ್ರಿಕೆಟರ್ಸ್ ತಂಡದ ವತಿಯಿಂದ ರಾಜರತ್ನ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥವಾಗಿ ಎರಡನೇ ವರ್ಷದ ಕ್ರಿಕೆಟ್ ಪಂದ್ಯಾಟ ನಡೆಯಿತು. ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಜನಸ್ಪಂದನ ಟ್ರಸ್ಟ್ ಅಧ್ಯಕ್ಷ     ಸಿ.ಬಿ.ಶಶಿಧರ್, ಗ್ರಾಮದ ಹಿರಿಯ ಮುಖಂಡ ಚಿದಾನಂದ್ ಮತ್ತು ಲಕ್ಷ್ಮಿ ಕ್ರಿಕೆಟರ್ಸ್ ನ ಚಿರಂಜೀವಿ  ಭಾಗವಹಿಸಿ ಮಾತನಾಡಿದರು. ಸಮಾಜ ಸೇವಕ ಬಿ.ಆರ್.ಶಶಿಧರ್,  ಗ್ರಾಪಂ ಸದಸ್ಯ ಸಿದ್ದಯ್ಯ, ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಬಿ.ಟಿ. ಕುಮಾರ್, ಯುವ ಮುಖಂಡ ಶರತ್, ವಕೀಲ ಪ್ರಶಾಂತ್, ಭರತ್, ಉಮಾಶಂಕರ್, ಜಗನ್ನಾಥ್ ಮತ್ತು ಶಂಕರಲಿಂಗಪ್ಪ ಸೇರಿದಂತೆ ಎಸ್.ಬಿ.ಕೆ ಕ್ರಿಕೆಟರ್ಸ್ ನ ಪದಾಧಿಕಾರಿಗಳು, ಗ್ರಾಮದ ಮುಖಂಡರುಗಳು ಹಾಗೂ  ಕ್ರೀಡಾಭಿಮಾನಿಗಳು  ಭಾಗವಹಿಸಿದ್ದರು ಈ ಪಂದ್ಯಾವಳಿಗೆ ಸುಮಾರು ಇಪ್ಪತ್ತು ತಂಡಗಳು ಭಾಗವಹಿಸಿದ್ದು,ಮೊದಲನೇ ಬಹುಮಾನ 12,000 ರೂ.ಗಳನ್ನು ಮಾದಾಪುರದ ಜೈಮಾರುತಿ ಕ್ರಿಕೆಟ್ ತಂಡ, ಎರಡನೇ ಬಹುಮಾನ 8,000 ರೂ.ಗಳನ್ನು ಬಿ.ಹೊಸಳ್ಳಿಯ  ಎಸ್.ಬಿ.ಕೆ ಕ್ರಿಕೆಟ್ ತಂಡ, ಮೂರನೇ ಬಹುಮಾನ 3,000 ರೂ.ಗಳನ್ನು  ಸಾರ್ಥವಳ್ಳಿಯ ಶ್ರೀ ಲಕ್ಷ್ಮೀ ಕ್ರಿಕೆಟರ್ಸ್…

Read More