Subscribe to Updates
Get the latest creative news from FooBar about art, design and business.
- ಮಾ.18ರಂದು ಶ್ರೀ ಹುಲಿಯೂರಮ್ಮ ಜಾತ್ರಾ ರಥೋತ್ಸವ
- ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಸಾವು ಪ್ರಕರಣ: ಸ್ಥಳಕ್ಕೆ ಶಿರಾ ತಹಶೀಲ್ದಾರ್ ರೇಷ್ಮಾ ಕೆ.ಎಸ್. ಭೇಟಿ
- ಶುಲ್ಕ ಮರುಪಾವತಿ ಸೌಲಭ್ಯ: ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
- ಮಾ.14ರಂದು ಕಾಲಜ್ಞಾನಿ ಶ್ರೀ ಯೋಗಿ ನಾರೇಯಣ ಯತೀಂದ್ರರ ಜಯಂತೋತ್ಸವ
- ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ
- ಬೇಸಿಗೆ ಸಹಾಯವಾಣಿ ಸ್ಥಾಪನೆ
- ಐಸಿಎಸ್ ಎಸ್ ಆರ್ ಪ್ರಾಯೋಜಿತ ಸಂಶೋಧನ ಕಾರ್ಯಾಗಾರ ಆರಂಭ: ಸಂಶೋಧನೆ ಶ್ರೇಷ್ಠ ಕೆಲಸ: ಪ್ರೊ.ಎಂ.ವೆಂಕಟೇಶ್ವರಲು
- ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ!
Author: admin
ತುಮಕೂರು: ಜಿಲ್ಲಾ ವಿಧಾನಪರಿಷತ್ ಕಾಂಗ್ರೆಸ್ ನ ಆರ್.ರಾಜೇಂದ್ರ ಜಯಭೇರಿ ಬಾರಿಸಿರುವುದರ ಮೂಲಕ ನಿರೀಕ್ಷಿತ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರ್.ರಾಜೇಂದ್ರ ಅಭೂತಪೂರ್ವ ಗೆಲುವನ್ನು ಜಿಲ್ಲೆಯಾದ್ಯಂತ ಹಾಗೂ ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟಾಕಿ ಹಚ್ಚುವುದರ ಮೂಲಕ ಸಂಭ್ರಮಿಸಲಾಯಿತು. ಈ ಗೆಲುವಿನ ಸಂಭ್ರಮದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು, ಉಪಾಧ್ಯಕ್ಷರಾದ ಸಿ.ಡಿ.ಚಂದ್ರಶೇಖರ್, ಕಾರ್ಯದರ್ಶಿಗಳಾದ ಬ್ರಹ್ಮಾನಂದ, ಎಸ್.ಸಿ.ಘಟಕದ ಅಧ್ಯಕ್ಷರಾದ ಶಿವಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸಾಸಲು ಮಂಜು, ವಕ್ತಾರರಾದ ಕೃಷ್ಣೇಗೌಡ, ಕಾಂಗ್ರೆಸ್ ಮುಖಂಡರುಗಳಾದ ಮುಜೀಬ್, ಕಾತ್ರಿಕೆ ಹಾಲ್ ಗೋವಿಂದರಾಜು, ತರಬೇನಹಳ್ಳಿ ಚಿದಾನಂದಮೂರ್ತಿ, ಆಗಸರಹಳ್ಳಿ ನರಸಿಂಹಮೂರ್ತಿ, ಬಾಚಿಹಳ್ಳಿ ಬಸವರಾಜು ಮುಂತಾದ ತಾಲೂಕು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸಿ.ಡಿ.ಚಂದ್ರಶೇಖರ್, ರಾಜೇಂದ್ರ ರಾಜಣ್ಣನವರ ಜನಪರ ಕಾರ್ಯಗಳನ್ನು ಮೆಚ್ಚಿ ಮತ್ತು ಸ್ಥಳೀಯ ಅಭ್ಯರ್ಥಿಗೆ ಮನ್ನಣೆ ನೀಡಿ ಗೆಲ್ಲಿಸಿದ ಎಲ್ಲಾ ಸ್ಥಳೀಯ ಸಂಸ್ಥೆಗಳ ಸದಸ್ಯರು, ಅಧ್ಯಕ್ಷರೂ, ಉಪಾಧ್ಯಕ್ಷರು ಮತ್ತು ರಾಜೇಂದ್ರ ರವರನ್ನು ಶತಾಯಗತಾಯ ಗೆಲ್ಲಿಸಲು ಪಣತೊಟ್ಟು ಹಗಲಿರುಳೆನ್ನದೆ ಶ್ರಮಿಸಿದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ…
ತಿಪಟೂರು: ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಅವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಿಬ್ಬನಹಳ್ಳಿ ಹೋಬಳಿ ಕೆ.ಬಿ.ಕ್ರಾಸಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಿಸಿದರು. ಕಾಂಗ್ರೆಸ್ ಬಾವುಟ ನೆಟ್ಟು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದ ಕಾರ್ಯಕರ್ತರು, ಗೆಲುವಿನ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭ ಕಾಂಗ್ರೆಸ್ ನ ಸ್ಥಳೀಯ ಮುಖಂಡರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು. ವರದಿ: ಮಂಜು ಗುರುಗದಹಳ್ಳಿ ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ತುಮಕೂರು: ಡಿಸೆಂಬರ್ 10ರಂದು ನಡೆದಿದ್ದ ಸ್ಥಳೀಯ ಸಂಸ್ಥೆ ವಿಧಾನ ಪರಿಷತ್ ಚುನಾವಣೆಗೆ ತುಮಕೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆರ್.ರಾಜೇಂದ್ರ ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಲೋಕೇಶ್ ಗೌಡ, ಜೆಡಿಎಸ್ ಪಕ್ಷದ ಅಭ್ಯರ್ಥಿ ಅನಿಲ್ ಕುಮಾರ್ ಸೋಲನುಭವಿಸಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೊದಲ ಸುತ್ತಿನಲ್ಲಿ ಹಾಗೂ ಎರಡನೇ ಸುತ್ತಿನಲ್ಲಿ ಸಹ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಗೆಲುವಿನ ನಿರೀಕ್ಷೆಯನ್ನು ಮೊದಲೇ ಮೂಡಿಸಿದ್ದರು. ಕೊನೆಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್. ರಾಜೇಂದ್ರ ಅವರಿಗೆ ಮತದಾರರ ಒಲವು ಸಿಕ್ಕಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಆರ್.ರಾಜೇಂದ್ರ ಪರ ಘಟಾನುಘಟಿ ನಾಯಕರುಗಳದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಾಕಷ್ಟು ಹಿರಿಯ ನಾಯಕರು ಜಿಲ್ಲೆಯಾದ್ಯಂತ ಭರ್ಜರಿ ಪ್ರಚಾರ ನಡೆಸಿದ್ದರು. ಡಾ.ಜಿ.ಪರಮೇಶ್ವರ್ ಅವರು ವಿಶೇಷ ಮುತುವರ್ಜಿ ವಹಿಸಿ, ಬಿಡುವಿಲ್ಲದೇ ಪ್ರಚಾರ ನಡೆಸಿದ್ದು, ಆರ್.ರಾಜೇಂದ್ರ ಗೆಲುವಿಗೆ ಪ್ರಮುಖ ಕಾರಣವಾಗಿದ್ದಾರೆ. ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಿದ್ದಂತೆಯೇ, ಕಾಂಗ್ರೆಸ್…
ಹಾಸನ: ವಿಧಾನ ಪರಿಷತ್ ಚುನಾವಣೆಯಲ್ಲಿ ಹಾಸನ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹಾಸನ ಕ್ಷೇತ್ರದಲ್ಲಿ ಸೂರಜ್ ರೇವಣ್ಣ ಭರ್ಜರಿ ಗೆಲುವು ದಾಖಲಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಎಂ.ಶಂಕರ್ ಹಾಗೂ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಸೋಲನುಭವಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಂ.ಶಂಕರ್ 731 ಮತಗಳನ್ನು ಪಡೆದುಕೊಂಡಿದ್ದರೆ, ಬಿಜೆಪಿ ಅಭ್ಯರ್ಥಿ 354 ಮತಗಳನ್ನು ಪಡೆದುಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ 1433 ಮತಗಳನ್ನು ಪಡೆದುಕೊಂಡು ಭರ್ಜರಿ ಗೆಲುವು ಸಾಧಿಸಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಬೆಂಗಳೂರು ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್.ಎಸ್.ಗೋಪಿನಾಥ್ ರೆಡ್ಡಿ ಗೆಲುವು ಸಾಧಿಸಿದ್ದಾರೆ. ಬೆಂಗಳೂರು ನಗರ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಭಾರೀ ಪೈಪೋಟಿ ಸೃಷ್ಟಿಯಾಗಿತ್ತು. ಎರಡೂ ಪಕ್ಷಗಳು ಕೂಡ ಭರ್ಜರಿಯಾಗಿ ಪ್ರಚಾರ ನಡೆಸಿದ್ದವು. ಕಾಂಗ್ರೆಸ್ ಅಭ್ಯರ್ಥಿ ಯೂಸೂಫ್ ಷರೀಫ್ (ಕೆ.ಜಿ.ಎಫ್. ಬಾಬು) ಪರವಾಗಿ ಕಾಂಗ್ರೆಸ್ ಘಟನಾನುಘಟಿ ನಾಯಕರು ಪ್ರಚಾರ ನಡೆಸಿದ್ದರು. ಅಂತಿಮವಾಗಿ ಇದೀಗ ಬಿಜೆಪಿ ಅಭ್ಯರ್ಥಿ ಹೆಚ್.ಎಸ್.ಗೋಪಿನಾಥ್ ಗೆಲುವು ದಾಖಲಿಸಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಬೀದರ್: ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ನಡೆದು ಬೀದರ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಪ್ರಕಾಶ್ ಖಂಡ್ರೆ ಸೋಲನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಸೋಲು ಕಂಡಿದ್ದು, 221 ಮತಗಳ ಅಂತರದಲ್ಲಿ ಭೀಮರಾವ್ ಪಾಟೀಲ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ 1,776 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದರೆ, ಬಿಜೆಪಿ ಅಭ್ಯರ್ಥಿ 1,555 ಮತಗಳನ್ನು ಪಡೆದು 221 ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಕೊಡಗು: ವಿಧಾನ ಪರಿಷತ್ ಚುನಾವಣೆಯಲ್ಲಿ ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಎ.ಮಂಜು ಅವರ ಪುತ್ರ ಮಂಥರ್ ಗೌಡ ಸೋಲನುಭವಿಸಿದ್ದಾರೆ. ಕೊಡಗು ಕ್ಷೇತ್ರದಲ್ಲಿ ಒಟ್ಟು 1,229 ಮತಗಳಿದ್ದು, 105 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದ್ದಾರೆ. ಸುಜಾ ಕುಶಾಲಪ್ಪ 705 ಮತಗಳನ್ನು ಪಡೆದಿದ್ದು, ಡಾ.ಮಂಥರ್ ಗೌಡ 603 ಮತಗಳನ್ನು ಪಡೆದುಕೊಂಡಿದ್ದರು. ಒಟ್ಟು 1,224 ಮತಗಳು ಚಲಾವಣೆಯಾಗಿದ್ದು, 17 ಮತಗಳು ಅನರ್ಹಗೊಂಡಿದೆ. ಜೆಡಿಎಸ್ ಅಭ್ಯರ್ಥಿ ಕೊನೆಯ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡೆದುಕೊಂಡಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ತಿಪಟೂರು: ಸರ್ಕಾರಕ್ಕೆ ಶೇ.70ರಷ್ಟು ಬೆಂಗಳೂರು ನಗರ ತೆರಿಗೆ ನೀಡುತ್ತಿದೆ. ಆದರೆ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷ ಕಳೆದರು ಸರ್ಕಾರದ ಯೋಜನೆಗಳು ಸರಿಯಾದ ರೀತಿಯಲ್ಲಿ ಜಾರಿಯಾಗಿಲ್ಲ ಎಂದು ಮಾಹಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ತಾಲೂಕಿನ ನೊಣವಿನಕೆರೆ ಹೋಬಳಿ ಬಜಗೂರು ಗ್ರಾಮದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ದೇಶದಲ್ಲಿ ಧಾರ್ಮಿಕ ಸಂಸ್ಕೃತಿ ಉಳಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದರು. ನಮ್ಮ ರಾಜ್ಯದಲ್ಲಿ ಜೆಡಿಎಸ್ ಸರ್ಕಾರವಿದ್ದ ಸಂದರ್ಭದಲ್ಲಿ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಲಾಗಿದೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ, ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಕ್ಷಣ ಸೇರಿದಂತೆ ಪ್ರತಿ ಒಂದು ಸೌಲಭ್ಯ ಒದಗಿಸುವ ಜೆಡಿಎಸ್ ಸರ್ಕಾರ ಇದಾಗಿದೆ ಜೊತೆಗೆ ನಿಮ್ಮೆಲ್ಲರ ಆಶೀರ್ವಾದ ಬೇಕಾಗಿದೆ ಎಂದರು. ಈ ದೇಶದಲ್ಲಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಹೆಚ್.ಡಿ.ದೇವೇಗೌಡ ಅವರು ತುಂಬಾ ಕೊಡುಗೆ ನೀಡಿದ್ದರು. ಕಾಶ್ಮೀರದ ಸಮಸ್ಯೆಗಳ ಪರಿಹಾರ ನೀಡುವ ಕೆಲಸ ಕೂಡ ಮಾಡಿದ್ದಾರೆ. ರಾಜ್ಯ ಮತ್ತು ಕೇಂದ್ರಗಳಲ್ಲಿರುವ ಸರ್ಕಾರಗಳು ಗ್ರಾಮೀಣ ಭಾಗದ…
ಚಂದ್ರಹಾದನೂರು ಸರಗೂರು: ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನ ಕ್ಷೇತ್ರದ ಜನಸಾಮಾನ್ಯರ ಹಿತಕ್ಕಾಗಿ ಎಂತಹ ಹೋರಾಟ ಬೇಕಾದರೂ ಕೂಡ ಮಾಡಲು ಸಿದ್ಧ ಎಂದು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಹೇಳಿದರು. ತಾಲ್ಲೂಕಿನ ಕಬಿನಿ ಜಲಾಶಯದ ಬೀಚನಹಳ್ಳಿ ಮುಖ್ಯ ರಸ್ತೆಯ 25 ಕೋಟಿ ರೂ. ವೆಚ್ಚ ದ ಕಾಮಗಾರಿಯ ಅವ್ಯವಸ್ಥೆ ಖಂಡಿಸಿ ಕಬಿನಿ ಕಾರ್ಯಪಾಲಕ ಅಭಿಯಂತರರ ಕಚೇರಿ ಮುಂಭಾಗದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾಮಗಾರಿ ಆರಂಭಗೊಂಡು 4-5 ತಿಂಗಳಾದರೂ ಸಮರ್ಪಕವಾಗಿ ಗುತ್ತಿಗೆದಾರದಿಂದ ಕಾಮಗಾರಿ ನಡೆಸುವಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಆರೋಪಿಸಿದರು. ಈ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿರುವ ಗ್ರಾಮಗಳ ನಿವಾಸಿಗಳು ಪ್ರತಿ ನಿತ್ಯವೂ ಧೂಳನ್ನು ಉಸಿರಾಡುವಂತಾಗಿದೆ. ಇದ್ದರಿಂದ ಆರೋಗ್ಯದ ಮೇಲೆ ಬಹಳಷ್ಟು ದುಷ್ಟರಿಣಾಮ ಬೀರುತ್ತದೆ. ಸಮರ್ಪಕವಾಗಿ ಹಂತ ಹಂತವಾಗಿ ಕಾಮಗಾರಿಯನ್ನು ಉತ್ತಮವಾಗಿ ನಿರ್ವಹಿಸದೇ, 10 ಕಿ.ಮೀ.ವರೆಗೂ ಅವ್ಯವಸ್ಥೆ ಉಂಟು ಮಾಡಲಾಗಿದೆ ಎಂದು ಆರೋಪಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಕಾವೇರಿ ನೀರಾವರಿ ನಿಗಮದ ಇಲಾಖೆಯ…
ಅಂತರಸಂತೆ: ವಿಶಾಲವಾದ ಸ್ಥಳಾವಕಾಶವಿದ್ದರೂ ಸರಿಯಾದ ನಿರ್ವಹಣೆಯ ಕೊರತೆಯಿಂದಾಗಿ ಇದೀಗ ಕೆರೆಯೊಂದು ನೀರಿನ ಬದಲು ತ್ಯಾಜ್ಯಗಳಿಂದಲೇ ತುಂಬುವ ಹಂತವನ್ನು ತಲುಪಿದ್ದು, ಗ್ರಾಮದ ಕೆರೆಯನ್ನು ರಕ್ಷಣೆ ಮಾಡಬೇಕು ಎಂಬ ಕೂಗು ಅಂತರಸಂತೆ ಗ್ರಾಮಸ್ಥರಿಂದ ಕೇಳಿಬಂದಿದೆ. ಹೌದು, ಹೆಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದಲ್ಲಿನ ಮುಖ್ಯ ಕೆರೆ ಇದೀಗ ನಿರ್ವಹಣೆಯ ಸಮಸ್ಯೆಯಿಂದಾಗಿ ಪ್ಲಾಸ್ಟಿಕ್ ಮಯವಾಗುವ ಜೊತೆಗೆ ಅನೈತಿಕ ಚಟುವಟಿಕೆಯ ತಾಣವಾಗಿ ಬದಲಾಗುತ್ತಿದ್ದು, ಕೆರೆಯ ಸುತ್ತಲು ತ್ಯಾಜ್ಯ ಸಂಗ್ರಹವಾಗುತ್ತಿದೆ. ಮೈಸೂರು ಮಾನಂದವಾಡಿ ಮುಖ್ಯರಸ್ತೆಯ ಬದಿಯಲ್ಲಿ ಈ ಕೆರೆಯಿದ್ದು, ಅಂತರಸಂತೆ ಸೇರಿದಂತೆ ನೂರಲಕುಪ್ಪೆ, ನೂರಲಕುಪ್ಪೆ ಬಿ. ಗ್ರಾಮಗಳ ಕೃಷಿ ಮತ್ತು ದನಕರುಗಳಿಗೆ ನೀರಿನ ಮೂಲವಾಗಿದೆ. ಸಧ್ಯ ಈ ಕೆರೆಯನ್ನು ಸ್ವಚ್ಛಗೊಳಿಸಿ ಸ್ಥಳೀಯ ಜಾನುವಾರುಗಳಿಗೆ ನೀರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ. ಸಮರ್ಪಕ ದಾರಿ ಇಲ್ಲ: ಇನ್ನೂ ಕೆರೆಯ ಸುತ್ತಲು ಸಂಪೂರ್ಣ ಲಾಂಟನಾದಂತಹ ಕಳೆ ಸಸ್ಯಗಳು ಹೆಚ್ಚಾಗಿ ಬೆಳೆದುಕೊಂಡಿವೆ. ಇದರಿಂದಾಗಿ ಕೆರೆಯ ಅಂಗಳದಲ್ಲಿ ದನಕರುಗಳಿಗೆ ಸರಿಯಾದ ಮೇವು ಸಹ ಸಿಗದಂತಾಗಿದೆ. ಅಲ್ಲದೇ ಕೆರೆಗೆ ಹೋಗಲು ಇದ್ದ ಮಾರ್ಗಗಳ ಪೈಕಿ ಸಾಕಷ್ಟು…