ತಿಪಟೂರು: ತಾಲೂಕು ಜಕ್ಕನಹಳ್ಳಿ ಮತ್ತು ಚೌಡಲಾಪುರ ಗ್ರಾಮದ ರೈತರು ಗೋಮಾಳದಲ್ಲಿ ಉಳುಮೆ ಮಾಡಲು ಅರಣ್ಯಾಧಿಕಾರಿಗಳು ಅಡ್ಡಿಪಡಿಸುತ್ತಿದ್ದು, ರೈತರಿಗೆ ಅಡ್ಡಿಪಡಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಿಪಟೂರು ತಾಲೂಕು ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಕೆ.ಟಿ. ಶಾಂತಕುಮಾರ್ ಮಾತನಾಡಿ, ತಾಲೂಕಿನ ಬಡ ರೈತರಿಗೂ ಸರ್ಕಾರಿ ಆದೇಶದಂತೆ ಸಾಗುವಳಿ ಚೀಟಿ ನೀಡಬೇಕು, ಅರ್ಜಿ ನಮೂನೆ 57ರಲ್ಲಿ ಸಲ್ಲಿಸಿದವರಿಗೂ ಅಕ್ರಮ ಸಕ್ರಮ ಯೋಜನೆ ಬಡವರಿಗೆ ಸಿಗಬೇಕು. ಉಳ್ಳವರಿಗಲ್ಲ, ರೈತರಿಗೆ ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದರು .
ಈ ಪ್ರತಿಭಟನೆಯಲ್ಲಿ ರೈತ ಸೇವ್ ಸಂಘದ ಅಧ್ಯಕ್ಷ ಇಂದ್ರೇಶ್, ಉಪಾಧ್ಯಕ್ಷ ಎಚ್.ಆರ್. ಭೋಜರಾಜ್ , ಸೇವಾ ಸಹಕಾರ ಸಂಘದ ಗೊರಗಂಡನಹಳ್ಳಿಯ ಸುದರ್ಶನ್ ಸುತ್ತಮುತ್ತ ಹಳ್ಳಿಯ ರೈತರು ಭಾಗವಹಿಸಿದ್ದರು
ವರದಿ: ಆನಂದ್, ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz