Author: admin

ತುಮಕೂರು: ತೋಟವೊಂದರಲ್ಲಿ ಮರ ಕಡಿಯಲು ಹೋಗಿದ್ದ ವ್ಯಕ್ತಿ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬಗ್ಗನಹಳ್ಳಿ ಗೊಲ್ಲರಹಟ್ಟಿಯಲ್ಲಿ ಸಂಭವಿಸಿದೆ. ಹೊಸಪಾಳ್ಯ ಗ್ರಾಮದ 45 ವರ್ಷ ವಯಸ್ಸಿನ ಲೋಕೇಶ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಗೊಲ್ಲರಹಟ್ಟಿಯ ತೋಟಕ್ಕೆ ಕೆಲಸಕ್ಕೆ ತೆರಳಿದ್ದ ಅವರು, ಮರಗಳ ಕೊಂಬೆ ಕತ್ತರಿಸುತ್ತಿದ್ದು, ಬಹುತೇಕ ಕೊಂಬೆಗಳನ್ನು ಕತ್ತರಿಸಿದ್ದರು. ಆದರೆ ಏಕಾಏಕಿ ಕಾಲು ಜಾರಿ ಅವರು ಮರದಿಂದ ಕೆಳಗೆ ಬಿದ್ದಿದ್ದು,  ನೆಲಕ್ಕೆ ಬಿದ್ದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ರಾಯಚೂರು: ಕಲುಷಿತ ನೀರು‌ ಸೇವನೆಯಿಂದ ಮೃತಪಟ್ಟ ಮೂರು ಜನ ಅವಲಂಬಿತರ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ‌ ಶಂಕರ ಪಾಟೀಲ ಮುನೇನಕೊಪ್ಪ‌ ಅವರು ನಗರಸಭೆಯ 10 ಲಕ್ಷ ರೂಪಾಯಿಯ ಪರಿಹಾರ ಚೆಕ್ ಅನ್ನು ಮಂಗಳವಾರ ಹಸ್ತಾಂತರಿಸಿದರು. ರಾಜ್ಯ ಸರ್ಕಾರದಿಂದಲೂ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದ್ದು,ಶೀಘ್ರದಲ್ಲೇ ಇದನ್ನು ಒದಗಿಸಲಾಗುವುದು. ಏನೇ ಪರಿಹಾರ ಒದಗಿಸಿದರೂ ಮೃತಪಟ್ಟವರ ಪ್ರಾಣ ತಂದುಕೊಡಲಾಗುವುದಿಲ್ಲ. ಈ ಮೂಲಕ ಅವಲಂಬಿತರಿಗೆ ಧೈರ್ಯ ತುಂಬುವ ಕೆಲಸವನ್ನು ನಗರಸಭೆ ಮಾಡಿರುವುದು ಅಭಿನಂದನೀಯ ಎಂದರು. ಮೃತ ಮಲ್ಲಮ್ಮ ಪತಿ ಮುದುಕಪ್ಪ ಅವರಿಗೆ, ಮೃತ ಅಬ್ದುಲ್ ಗಫೂರ್ ತಾಯಿ ಅಮಿನಾ‌ಬೀ‌ ಅವರಿಗೆ ಹಾಗೂ ಮೃತ ನೂರ‌ ಮಹ್ಮದ್ ಸಹೋದರಿ ಕೈಕಶಾ ಅವರಿಗೆ ಪರಿಹಾರದ ಚೆಕ್ ನೀಡಲಾಯಿತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ತುಮಕೂರು:  ಜಿಲ್ಲೆಯ ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿ, ಹುಲ್ಲೇಕೆರೆ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪ ಕೇಳಿ ಬಂದಿದೆ. ಎಂದಿನಂತೆ ಪಂಚಾಯಿತಿಯ ,ಧ್ವಜಸ್ತಂಬದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗಿತ್ತು. ಆದರೆ ರಾಷ್ಟ್ರಧ್ವಜವನ್ನು ತಳಕೆಳಕಾಗಿ ಹಾರಿಸಲಾಗಿತ್ತು. ಇದನ್ನು ಪಂಚಾಯತಿಯ ಸಿಬ್ಬಂದಿ ಯಾರೂ, ಗಮನಿಸಿರಲಿಲ್ಲ ಇದರಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿಯವರ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಈ ದೃಶ್ಯವನ್ನು ಮಧ್ಯಾಹ್ನ ರಾಷ್ಟ್ರೀಯ ಮಾನವ ಹಕ್ಕು ಆಯೋಗ  ಹಾಗೂ  ಮಾಹಿತಿ ಹಕ್ಕು ಕಾರ್ಯಕರ್ತರು ಮತ್ತು ಗ್ರಾಮಸ್ಥರು ಗಮನಿಸಿದ್ದರಿಂದಾಗಿ  ಅಚಾತುರ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ ರವನ ವಿಚಾರಿಸಿದಾಗ, ಸಾಮಾಜಿಕ ಕಾರ್ಯಕರ್ತರಿಗೆ ಉಡಾಫೆಯ ಉತ್ತರವನ್ನು ನೀಡಿದ್ದಾರೆ. ಇಂತಹ ಅಧಿಕಾರಿಯನ್ನು ಅಮಾನತ್ತು ಮಾಡಬೇಕೆಂದು ಸಾರ್ವಜನಿಕರು ಮಾಹಿತಿ ಹಕ್ಕು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರವನ್ನು ತುರುವೇಕೆರೆಯ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಾದ ಸತೀಶ್ ಕುಮಾರ್ ಗಮನಕ್ಕೆ ತಂದು ಇಂತಹ ಬೇಜವಾಬ್ದಾರಿ ,ಅಧಿಕಾರಿಯನ್ನ ಈ ತಕ್ಷಣವೇ ಅಮಾನತ್ತು ಮಾಡಬೇಕೆಂದು  ಮನವಿಮಾಡಿದ್ದಾರೆ. ತಾಲೂಕು…

Read More

ತುಮಕೂರು: ಜಿಲ್ಲೆಯ, ತುರುವೇಕೆರೆ ಪಟ್ಟಣದಲ್ಲಿರುವ ಬೆಮೆಲ್, ಕಚೇರಿಯಲ್ಲಿ ಮಾಜಿ ವಿಧಾನ ಪರಿಷತ್ತಿನ ,ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ತಾಲೂಕಿನ  ಕೊಂಡಜ್ಜಿ ಗ್ರಾಮ ಪಂಚಾಯ್ತಿ, ಮಾಡಿಹಳ್ಳಿ ಗ್ರಾಮ ಪಂಚಾಯ್ತಿ ,ಆನೆಕೆರೆ ಗ್ರಾಮ ಪಂಚಾಯಿತಿಗೆ ಸೇರಿದ ಹಲವು ಮಹಿಳೆಯರು ಕಚೇರಿಯಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.  ಈ ವೇಳೆ ಮಾತನಾಡಿದ ಬೆಮೆಲ್ ಕಾಂತರಾಜು, ಕಳೆದ ನಾಲ್ಕು ವರ್ಷಗಳಿಂದ ಬೇರೆ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಜನರ ಸೇವೆಗಾಗಿ ತೊಡಗಿದ್ದೇನೆ.,ಮುಂದಿನ ದಿನಗಳಲ್ಲಿ ತಮ್ಮನ್ನು ನನ್ನೊಂದಿಗೆ ನಮ್ಮೆಲ್ಲರನ್ನು ಕೊಂಡೊಯ್ಯುತ್ತೇನೆ, ಪಕ್ಷವನ್ನು ಉತ್ತಮ ರೀತಿಯಲ್ಲಿ ಬೆಳೆಸೋಣ, ಕಳೆದ ಬಾರಿ ಆದ ಸಣ್ಣ ಎಡವಟ್ಟಿನಿಂದ ಕಾಂಗ್ರೆಸ್ ಪಕ್ಷದ ಮತಗಳು ಬಿಜೆಪಿ ಪಕ್ಷದ ಪಾಲಾಗಿ ಹೋದವು. ಆದರೆ ಈಗ ನಾನು ಪ್ರವಾಸ ಮಾಡಿದ ಪ್ರತಿ ಹಳ್ಳಿಗಳಲ್ಲೂ 40ರಿಂದ 50 ಜನ ನಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ನಮ್ಮ ಪಕ್ಷವು ಬಹಳ ಸದೃಢವಾಗಿದೆ ಎಂದರು. ತಮ್ಮ ಗ್ರಾಮಗಳಲ್ಲಿ ಸಣ್ಣ ಪುಟ್ಟ ಗ್ರಾಮ ಕಾರ್ಯಕ್ರಮಗಳು ಆದಾಗ ನಮಗೆ ತಿಳಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ. ನಿಮ್ಮ ಸಹಕಾರ ಸದಾ…

Read More

ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಮಂಡಳಿ ಮತ್ತು ಎಐಟಿಯುಸಿ ಜಿಲ್ಲಾ ಸಮಿತಿ ವತಿಯಿಂದ ಇತ್ತೀಚೆಗೆ ನಿಧನರಾದ ಸಿಪಿಐ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಎಐಟಿಯುಸಿ ಜಿಲ್ಲಾಧ್ಯಕ್ಷರಾಗಿದ್ದ  ಎನ್.ಶಿವಣ್ಣನವರಿಗೆ ನುಡಿನಮನ ಸಲ್ಲಿಸಲಾಯಿತು. ನುಡಿನ ನಮನ ಕಾರ್ಯಕ್ರಮದಲ್ಲಿ ಅಗಲಿದ ಎನ್.ಶಿವಣ್ಣನವರಿಗೆ ಮೌನಾಚರಣೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ  ಹಾಡುಗಳ ಮೂಲಕ ಶಿವಣ್ಣ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಹಲವು ಗಣ್ಯರು, ಶಿವಣ್ಣ ಅವರಿಗೆ ನುಡಿನಮನ ಸಲ್ಲಿಸಿ ಗೌರವಿಸಿದರು. ಕಾರ್ಯಕ್ರಮಕ್ಕೂ ಮೊದಲು ಶಿವಣ್ಣನವರ ಭಾವ ಚಿತ್ರಕ್ಕೆ ಪುಷ್ಪಾರ್ಷಚನೆ ಮಾಡುವ ಮೂಲಕ ಗೌರವಿಸಲಾಯಿತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ತುಮಕೂರು: ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ತುಮಕೂರು ಜಿಲ್ಲಾಶಾಖೆ ವತಿಯಿಂದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 395ನೇ ಜಯಂತ್ಯುತ್ಸವವನ್ನು ಮರಾಠ ಕ್ಷತ್ರಿಯ ಸಮಾಜ ಕಚೇರಿ ಆವರಣದಲ್ಲಿ ಆಚರಿಸಲಾಯಿತು. ಬಿಜಿಎಸ್ ವೃತ್ತದಿಂದ ಜಾನಪದ ಕಲಾತಂಡದೊಂದಿಗೆ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ  ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿಗಳು ದಿವ್ಯ ಸಾನಿಧ್ಯವಹಿಸಿದ್ದರು. ಎಸ್. ಸುರೇಶ್ ರಾವ್ ಸಾಠೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಜ್ಯೋತಿಗಣೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿ ವೇತನ ವಿತರಿಸಿದರು. ಟಿ.ಆರ್.ವೆಂಕಟರಾವ್ ಚವಾಣ್, ಜನಾರ್ಧನ್ ರಾವ್ ಸೋನಾಲೆ, ಶ್ರೀನಿವಾಸ್ ರಾವ್ ಸಾಳಂಕೆ, ಟಿ.ಆರ್.ಸುನೀಲ್ ಚವಾಣ್, ಟಿ.ಎಲ್.ಸುರೇಶ್ ರಾವ್ ಸೋನಾಲೆ,  ಎಸ್.ಪಿ.ಚಿದಾನಂದ್, ಶ್ರೀನಿವಾಸರಾವ್ ಮಗಾರ್, ವಿಷ್ಣುವರ್ಧನ್, ಮಹಮ್ಮದ್ ಜಿಯಾವುಲ್ಲಾ, ದನಿಯಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಕೊಪ್ಪಳ: ಗಂಗಾವತಿ ತಾಲೂಕಿನ ಮಾಜಿ ಎಂಎಲ್‌ ಸಿ ಹೆಚ್‌.ಆರ್‌ ಶ್ರೀನಾಥ್‌ ಜೆಡಿಎಸ್‌ ಪಕ್ಷದಿಂದ ಹೊರನಡೆದಿದ್ದು, ಇದೀಗ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ. ಮಾಜಿ ಸಂಸದ ಹೆಚ್‌.ಜಿ ರಾಮುಲು ಅವರ ಪುತ್ರ ಹೆಚ್‌ ಆರ್‌ ಶ್ರೀನಾಥ್‌ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ರನ್ನು ಭೇಟಿಯಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಜೆಡಿಎಸ್‌ ಪಕ್ಷ ಸೇರಿದ್ದ ಶ್ರೀನಾಥ್‌ ಇದೀಗ ಮರಳಿ ಗೂಡಿಗೆ ಕಾಲಿಟ್ಟಿದ್ದಾರೆ. ಗಂಗಾವತಿ ವಿಧಾನಸಭೆ ಟಿಕೆಟ್ ಆಕಾಂಕ್ಷಿ ಆಗಿರುವ ಶ್ರೀನಾಥ್‌ ಶೀಘ್ರವೇ ಕಾಂಗ್ರೆಸ್‌ ಮರು ಸೇರ್ಪಡೆಗೊಳ್ಳಲಿದ್ದಾರೆ. ಇನ್ನು ಶ್ರೀನಾಥ್ ಸೇರ್ಪಡೆಗೆ ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಡಿಕೆಶಿಯನ್ನು ಶ್ರೀನಾಥ್ ಭೇಟಿ ಮಾಡಿದ ಬಳಿಕ ಅನ್ಸಾರಿಯವರಿಗೂ ಟೆನ್ಶನ್‌ ಶುರುವಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಅನ್ಸಾರಿಯನ್ನು ವಿರೋಧಿಸಿ ಶ್ರೀನಾಥ್‌ ಜೆಡಿಎಸ್ ಪಕ್ಷಕ್ಕೆ ಸೇರಿದ್ದರು. ಇನ್ನು ಕಳೆದ ಕೆಲ ದಿನಗಳ ಹಿಂದೆ ಬಿಕೆ ಹರಿಪ್ರಸಾದ್ ಗಂಗಾವತಿಗೆ ಭೇಟಿ ನೀಡಿದ್ದು, ಆ ಸಂದರ್ಭದಲ್ಲಿ ಈ ಬಾರಿ ಹಿಂದೂಗಳಿಗೆ…

Read More

ಜುಲೈ 28 ರಿಂದ ಪ್ರಾರಂಭವಾಗುವ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತದ ಕುಸ್ತಿ ತಂಡವು 8-9 ಚಿನ್ನದ ಪದಕಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್ ಶುಕ್ರವಾರದಂದು ಹೇಳಿದ್ದಾರೆ. ರವಿ ದಹಿಯಾ (57 ಕೆಜಿ), ಬಜರಂಗ್ ಪುನಿಯಾ (65 ಕೆಜಿ), ನವೀನ್ (74 ಕೆಜಿ), ನವೀನ್ (74 ಕೆಜಿ) ), ದೀಪಕ್ ಪುನಿಯಾ (86 ಕೆಜಿ), ದೀಪಕ್ (97 ಕೆಜಿ) ಮತ್ತು ಮೋಹಿತ್ ದಹಿಯಾ (125 ಕೆಜಿ) ಅವರು ಈ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇನ್ನೊಂದೆಡೆಗೆ ಮಹಿಳೆಯರ ವಿಭಾಗದಲ್ಲಿ ಪೂಜಾ ಗೆಹ್ಲೋಟ್ (50 ಕೆಜಿ), ವಿನೇಶ್ ಫೋಗಟ್ (53 ಕೆಜಿ), ಅಂಶು ಮಲಿಕ್ (57 ಕೆಜಿ), ಸಾಕ್ಷಿ ಮಲಿಕ್ (62 ಕೆಜಿ), ದಿವ್ಯಾ ಕಕ್ರನ್ (68 ಕೆಜಿ) ಮತ್ತು ಪೂಜಾ ಧಂಡಾ (76 ಕೆಜಿ) ಇದ್ದಾರೆ. ಇವೆರಲ್ಲರೂ ಈಗ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ದೇಶವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಕುಸ್ತಿಗೆ ಕಾಮನ್‌ವೆಲ್ತ್ ಕ್ರೀಡಾಕೂಟವು…

Read More

ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆ ಗುಣರಂಜನ್ ಶೆಟ್ಟಿ ಕೊಲೆಗೆ ಸ್ಕೆಚ್ ಎಂಬ ವದಂತಿ ಹರಿದಾಡ್ತಿದೆ. ಈ ಬಗ್ಗೆ ಗುಣರಂಜನ್ ಶೆಟ್ಟಿ ಕೂಡ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಹಿರಿಯ ಪೊಲೀಸರ ಮಾಹಿತಿ ಪ್ರಕಾರ ಜೈಲಿನಲ್ಲಿ ಗುಣರಂಜನ್ ಶೆಟ್ಟಿ ಕೊಲೆಗೆ ಸ್ಕೆಚ್ ತಯಾರಾಗಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಮುತ್ತಪ್ಪ ರೈ ಸಂಬಂಧಿ ಮನ್ಮಿತ್ ರೈನಿಂದ ಕೊಲೆಗೆ ಸ್ಕೆಚ್ ಎಂಬ ಸುದ್ದಿ ಹರಿದಾಡ್ತಿದೆ. ಆದರೆ ಮನ್ಮಿತ್ ರೈ ವಿದೇಶದಲ್ಲಿರುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಇನ್ನೂ ಗುಣರಂಜನ್ ‌ಕೊಲೆಗೆ ಸ್ಕೆಚ್ ಸಂಬಂಧಿಸಿದಂತೆ ಬಂಟ್ವಾಳದ ಮುತ್ತಪ್ಪ ರೈ ಆಪ್ತ ರಾಕೇಶ್ ಮಲ್ಲಿಯನ್ನ ಮಂಗಳೂರು ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ. ರಾಕೇಶ್ ಮಲ್ಲಿ ಹಾಗೂ ಮನ್ಮಿತ್ ಆಪ್ತರಾಗಿದ್ದು, ಇದೇ ವಿಚಾರಕ್ಕೆ ಪೊಲೀಸರು ‌ಕರೆಸಿ ವಿಚಾರಣೆ ಮಾಡಿದ್ದಾರೆ. ರೈ ಬದುಕಿದ್ದಾಗ ಒಟ್ಟಿಗೆ ಇದ್ದ ರಾಕೇಶ್ ಮಲ್ಲಿ, ಮನ್ಮಿತ್ ಹಾಗೂ ಗುಣರಂಜನ್ ಶೆಟ್ಟಿ ರೈ ಸಾವಿನ‌ ನಂತರ ದೂರಾಗಿದ್ದರು. ರೈ ಸಾವಿನ ನಂತರ ಡಾನ್ ಪಟ್ಟಕ್ಕೇರಲು, ದೊಡ್ಡ…

Read More

ಇಲ್ಲೊಬ್ಬ ವ್ಯಕ್ತಿ ದಿನಕ್ಕೆ 14ರಿಂದ 15ಕೆಜಿ ಆಹಾರ ಸೇವಿಸುತ್ತಾನಂತೆ. ಕೇಳೋದಿಕ್ಕೆ ಆಶ್ಚರ್ಯ ಆದ್ರೂ ಸತ್ಯ ಸಂಗತಿ. ಈತನ ತೂಕ ಕೇಳಿದ್ರೆ ದಂಗಾಗೋದು ನೀವು ಗ್ಯಾರಂಟಿ. ಬರೋಬ್ಬರಿ 200 ಕೆಜಿ ತೂಕ ಇರುವ ಈ ವ್ಯಕ್ತಿಗೆ ದಿನವೊಂದಕ್ಕೆ 3ಕೆಜಿ ಅನ್ನ, 4ಕೆಜಿ ರೊಟ್ಟಿ, 2 ಕೆಜಿ ಮಾಂಸ, 1.5ಕೆಜಿ ಮೀನು ಬೇಕಂತೆ. ಹೌದು, ಈ ಸುದ್ದಿ ನೋಡಿದ್ರೆ ಒಮ್ಮೆ ಶಾಕ್‌ ಆಗೋದು ಖಂಡಿತ. ಪ್ರತೀ ದಿನ ಮಾಂಸಾಹಾರ ಸೇವನೆ ಮಾಡುವ ಈ ವ್ಯಕ್ತಿಯ ಹೆಸರು ಮೊಹಮ್ಮದ್‌ ರಫೀಕ್‌ ಅದ್ನಾನ್‌. ವಯಸ್ಸು ಕೇವಲ 30 ವರ್ಷ. ಆದರೆ ಈತನ ಧಡೂತಿ ದೇಹ ಕಂಡರೆ ಎಲ್ಲರೂ ಬೆರಗಾಗೋದು ಖಂಡಿತ. ಈ ವ್ಯಕ್ತಿಗೆ ಒಂದಿಷ್ಟು ನಡೆದರೂ ಸಹ ಸುಸ್ತಾಗಿ ಏದುಸಿರು ಬಿಡಲು ಪ್ರಾರಂಭಿಸುತ್ತಾನಂತೆ. ಹೀಗಾಗಿ ಕೊಂಚ ದೂರ ನಡೆಯಬೇಕು ಎಂದರೂ ಸಹ ಬುಲೆಟ್‌ ಬೈಕ್‌ನಲ್ಲಿ ಪ್ರಯಾಣಿಸುತ್ತಾನೆ. ಅತಿಯಾದ ಆಹಾರ ಸೇವನೆಯಿಂದ ದೇಹದ ಗಾತ್ರವೂ ಹೆಚ್ಚಾಗಿದೆ. ಅಷ್ಟೇ ಅಲ್ಲದೆ, ಈತನ ಆಹಾರ ಪದ್ಧತಿ ಕಂಡ ಜನರು ಯಾವುದೇ ಕಾರ್ಯಕ್ರಮಗಳಿಗೂ…

Read More