ತುರುವೇಕೆರೆ: ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಇರುವ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಜನೌಷಧಿ ಮಾರಾಟ ಮಳಿಗೆ ಕಳೆದ ಎರಡು ವರ್ಷಗಳಿಂದ ಮುಚ್ಚಿಟ್ಟು ಮತ್ತೆ ಕಳೆದ ಮೂರು ತಿಂಗಳಿನಿಂದ ಎಂ.ಎಸ್.ಐ ಎಲ್ ನವರು ಮಾರಾಟ ಮಳಿಗೆಯನ್ನು ತೆರೆದಿದ್ದು ಮಾರಾಟ ಮಾಡಲು ಒಬ್ಬ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕಮಾಡಿಕೊಂಡಿದೆ.
ಈ ಸಿಬ್ಬಂದಿ ಎಂಆರ್ ಪಿ ಬೆಲೆಗಿಂತ ಹೆಚ್ಚು ಬೆಲೆ ತೆಗೆದುಕೊಳ್ಳುತ್ತಿದ್ದು, ಇಂದು ತಾಲೂಕಿನ ದಂಡಿನಶಿವರ ಹೋಬಳಿಯ ಬೀಚನಹಳ್ಳಿ ಗ್ರಾಮದ ವಾಸಿ ಸುನಿಲ್ ಬಿನ್ ಚನ್ನಯ್ಯ ಎಂಬುವರು ಸರ್ಕಾರಿ ಆಸ್ಪತೆಗೆ ತನ್ನ ಬಾಣಂತಿ ಹೆಂಡತಿಯನ್ನು ವೈದ್ಯರ ಬಳಿ ಪರೀಕ್ಷೆ ಮಾಡಿಸಿದ್ದಾರೆ. ವೈದ್ಯರು ಮೆಡಿಸನ್ ಮತ್ತು ಮಾತ್ರೆಯನ್ನು ಬರೆದಿದ್ದು, ಮಾತ್ರೆಕೊಳ್ಳಲು ಈ ಜನೌಷಧಿ ಮಳಿಗೆಗೆ ಹೋಗಿ ಕೊಂಡುಕೊಂಡು ಬೆಲೆಕೇಳಿದಾಗ ಹೆಚ್ಚುಪಟ್ಟು ಪಡೆದಿರುವುದು ಕಂಡು ಬಂದಿದೆ.
ಈ ಮಾತ್ರೆಯ ಲೇಬಲ್ ಮೇಲೆ 18 ರೂ. ಇದ್ದು ಆದರೆ ಈ ಮಾರಾಟ ಸಿಬ್ಬಂದಿ ಮಾತ್ರೆ ಲೇಬಲ್ 118 ಆಗಿ ಮಾರ್ಕರ್ ಪೆನ್ನಿನಲ್ಲಿ ಬರೆದಿರುವುದು ಬೆಳಕಿಗೆ ಬಂದಿದೆ. ಇದನ್ನು ಮತ್ತೆ ಸಿಬ್ಬಂದಿ ವಾಪಸ್ಸು ತೆಗೆದುಕೊಂಡಿದ್ದಾನೆ. ಮೆಡಿಸನ್ ತೆಗೆದುಕೊಳ್ಳಲು ಬಂದಿದ್ದ, ಮತ್ತೊಬ್ಬ ವ್ಯಕ್ತಿಯ ಬಳಿಯೂ ಎಮ್ ಆರ್ ಪಿ 44 ರೂ. ಬೆಲೆಯ ಟಾನಿಕ್ ತೆಗೆದುಕೊಂಡಿದ್ದು, 44ರ ಬದಲು 50 ರೂ ತೆಗೆದುಕೊಂಡು ಕಳುಹಿಸಿದ್ದಾನೆ ಎನ್ನಲಾಗಿದೆ.
ಈ ಮಳಿಗೆಯ ಸಿಬ್ಬಂದಿ ತುರುವೇಕೆರೆ ಟೌನ್ ವಾಸಿ ಮಧು ಎಂದು ತಿಳಿದುಬಂದಿದ್ದು, ಈತನ ಅಣ್ಣ ತುರುವೇಕೆರೆ ಪಟ್ಟಣದಲ್ಲಿ ಮಕ್ಕಳ ಕ್ಲಿನಿಕ್ ನಡೆಸುತ್ತಿರುತ್ತಾರೆ. ಈ ಜನರಿಕ್ ಮಳಿಗೆಯ ಬಳಿ ನೂರಾರು ರೋಗಿಗಳು ಮೆಡಿಸನ್ ಕೊಳ್ಳಲುಬರುತ್ತಾರೆ. ಇಲ್ಲಿ ಎಂ ಆರ್ ಪಿ ಗಿಂತ ಅಧಿಕ ಬೆಲೆ ತೆಗೆದುಕೊಳ್ಳಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ವರದಿಗಾರರು ಕೇಳಿದರೆ ಈ ಮಾರಾಟ ಸಿಬ್ಬಂದಿ ಯಾವುದೇ ಉತ್ತರ ನೀಡಿಲ್ಲ. ಈ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಕರೆ ಮಾಡಿದರೆ, ಯಾವುದೋ ಸಭೆಯಲ್ಲಿ ಇದ್ದೇನೆ ಎಂದು ಕಾರಣ ಹೇಳಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ವರದಿ: ಸುರೇಶ್ ಬಾಬು ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz