Subscribe to Updates
Get the latest creative news from FooBar about art, design and business.
- ಕುಲವಿಲ್ಲದ ನೆಲೆಗಾಗಿ ನಡೆದಾಡಿದ ಸಂತ ಕವಿ ಕನಕದಾಸರು: ಬಿಡಗಲು ಶಿವಣ್ಣ ಅಭಿಮತ
- ಸಾಮಾಜಿಕ ನ್ಯಾಯ ಎತ್ತಿ ಹಿಡಿದವರು ಕನಕದಾಸರು: ಎಂ.ಬಿ.ಆನಂದ
- ರಾಜ್ಯ ಮಟ್ಟದ ಕನ್ನಡ ಸೇವಾರತ್ನ ಪ್ರಶಸ್ತಿಗೆ ಡಾ.ಸತ್ಯಕ್ಕ ಗಡ್ಡೆ ಆಯ್ಕೆ
- ನರಹಂತಕ ವ್ಯಾಘ್ರನ ಸೆರೆ: ಜನರ ನಿದ್ದೆಗೆಡಿಸಿದ 9 ವರ್ಷದ ಹುಲಿಯನ್ನು ಹಿಡಿದ ಅರಣ್ಯ ಇಲಾಖೆ
- ನರಹಂತಕ ಹುಲಿಯ ಸೆರೆಗಾಗಿ ಮುಂದುವರಿದ ಕಾರ್ಯಾಚರಣೆ: ಡ್ರೋನ್ ಕ್ಯಾಮೆರಾದಲ್ಲಿ ಹುಲಿ ಪತ್ತೆ!
- ಮಧುಗಿರಿ: ಎರಡು ವರ್ಷದ ಚಿರತೆ ಸೆರೆ
- ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಂಗಕ್ಕೆ ಕನಕದಾಸರ ಕೊಡುಗೆ ಅಪಾರ: ಪ.ಪಂ. ಅಧ್ಯಕ್ಷ ಶಿವಕುಮಾರ್
- ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಗೆ ತೀರ್ಮಾನ: ಸಿಎಂ ಸಿದ್ದರಾಮಯ್ಯ
Author: admin
ತಿಪಟೂರು: ನಗರದ ಶಾರದಾ ನಗರ ರೈಲ್ವೆ ಗೇಟ್ ಮುಂಭಾಗ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಒತ್ತಾಯಿಸಿ, ಕಾಂಗ್ರೆಸ್ ಮುಖಂಡರುಹಾಸನ್ ಸರ್ಕಲ್ ರೈಲ್ವೆ ಗೇಟ್ ಬಳಿ ಪ್ರತಿಭಟನೆ ನಡೆಸಿದರು. ಕೆಪಿಸಿಸಿ ರಾಜ್ಯ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಕೆ. ಟಿ. ಶಾಂತಕುಮಾರ್ ಅವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಹಾಸನಕ್ಕೆ ತೆರಳುವ ಅಕ್ಕಪಕ್ಕದ ಊರುಗಳಾದ ಗುರುಗದಲ್ಲಿ ಮಾರನಗೆರೆ ಸುಮಾರು ಊರುಗಳು ಬರುತ್ತವೆ. ಇಲ್ಲಿ ಸಾವಿರಾರು ವಾಹನಗಳು ಓಡಾಡುತ್ತಿವೆ. ಇದರಿಂದಾಗಿ ಸಾರ್ವಜನಿಕರ ಓಡಾಟಕ್ಕೆ ತುಂಬಾ ತೊಂದರೆ ಆಗಿದೆ. ಇಲ್ಲಿ ಪ್ರತಿ ಹತ್ತು ನಿಮಿಷಕ್ಕೆ ಬೆಂಗಳೂರು ಕಡೆ ಹೋಗುವ ಟ್ರೈನ್ ಗಳು ಬರುತ್ತಿದ್ದು, ಒಂದು ಸಾರಿ ಗೆಟ್ ಮುಚ್ಚಿದರೆ ಸುಮಾರು ಒಂದು ಗಂಟೆಗಳ ಕಾಲ ಇಲ್ಲಿ ಕಾಯಬೇಕಾಗುತ್ತದೆ ಎಂದು ಅವರು ಹೇಳಿದರು. ಓದುವ ವಿದ್ಯಾರ್ಥಿಗಳಿಗೆ ಗಂಟೆಗಟ್ಟಲೆ ಕಾಯುವ ಸ್ಥಿತಿ ಬಂದಿದೆ. ನಗರದಿಂದ ಪಟ್ಟಣ ಪಕ್ಕದ ಬಡಾವಣೆಗಳಿಗೆ ತೆರಳಲು ವೃದ್ಧರು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಈ ಭಾಗದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಿ, ಸಾಕಷ್ಟು ಜನರಿಗೆ ವಾಹನಗಳಿಗೆ ಬೇರೆ ಊರುಗಳಿಗೆ ಹೋಗುವ ವಾಹನಗಳಿಗೂ…
ತುರುವೇಕೆರೆ: ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕಕ್ಕೆ ನೂತನ ಸದಸ್ಯರು ಸೇರ್ಪಡೆಗೊಂಡಿದ್ದು, ಸಂಘಟನೆಯ ಅಧ್ಯಕ್ಷರಾದ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನೂತನ ಸದಸ್ಯರನ್ನು ಸಂಘಟನೆಗೆ ಬರಮಾಡಿಕೊಳ್ಳಲಾಯಿತು. ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಸುರೇಶ್, ಈ ಕುಟುಂಬದಲ್ಲಿ ಎಲ್ಲರೂ ಸಮಾನರು ಸಂಘಟನೆಯನ್ನು ಒಗ್ಗೂಡಿ ಮುನ್ನಡೆಸೋಣ , ಸಾಮಾನ್ಯ ಜನರ ಜನ ಮಾನಸದಲ್ಲಿ ಉಳಿಯುವಂತೆ ಕಾರ್ಯಕ್ರಮಗಳನ್ನು ಮಾಡೋಣ ಎಂದರು. ಬಿಗನೆನಹಳ್ಳಿ ಪುಟ್ಟರಾಜು ,ಬಿ.ಪುರ ತಮ್ಮಯ್ಯ, ವಿಠ್ಠಲದೇವರಹಳ್ಳಿ ನರಸಿಂಹ ಮೂರ್ತಿ, ವಿವೇಕಾನಂದನಗರದ ದಿಲೀಪ್ ,ವಿಠ್ಠಲ ದೇವರಹಳ್ಳಿ ಚಂದ್ರು ,ಬಿ.ಪುರ ಚಿಕ್ಕರಾಮಯ್ಯ, ಚಿಕ್ಕಯ್ಯ, ಮೇಲಿನವಳಗೆರೆ ರಂಗಸ್ವಾಮಿ , ಹಳ್ಳದಹೊಸಹಳ್ಳಿ ಮಂಜು ಕಾರ್ಯಕ್ರಮದಲ್ಲಿ ಜಯಕರ್ನಾಟಕ ಸಂಘಟನೆಗೆ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು . ವರದಿ: ಸುರೇಶ್ ಬಾಬು ಎಂ.ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಹಿರಿಯೂರು: ನಗರದ ಪ್ರಧಾನ ರಸ್ತೆಯ ಭಾರತ್ ಪೆಟ್ರೋಲಿಯಂ ನ ಪೆಟ್ರೋಲ್ ಬಂಕ್ ನಲ್ಲಿ ಗ್ರಾಹಕರಿಗೆ ಮೋಸ ನಡೆಯುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದು, 300 ರೂಪಾಯಿ ಪೆಟ್ರೋಲ್ ಹಾಕಿ ಎಂದರೆ, 200 ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು 100 ರೂಪಾಯಿ ವಂಚನೆ ಮಾಡುತ್ತಿದ್ದಾರೆ ಎಂದು ಗ್ರಾಹಕರು ಅಳಲು ತೋಡಿಕೊಂಡೊದ್ದಾರೆ. ಮೊದಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಈ ನಡುವೆ ಪೆಟ್ರೋಲ್ ಬಂಕ್ ನ ಸಿಬ್ಬಂದಿ ಜನರಿಗೆ ಮೋಸ ಮಾಡುವ ಮೂಲಕ ಸತಾಯಿಸುತ್ತಿದ್ದಾರೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪ್ರಧಾನ ರಸ್ತೆಯಾದ ಬಾಲಕಿಯರ ಗಿರೀಶ ಸ್ಕೂಲ್ ಪಕ್ಕದಲ್ಕಿರುವ ಭಾರತ್ ಪೆಟ್ರೋಲಿಯಂ ಬಂಕ್ ವಿರುದ್ಧ ಇಂತಹದ್ದೊಂದು ಗಂಭೀರವಾದ ಆರೋಪ ಕೇಳಿ ಬಂದಿದೆ. ಈ ಕುರಿತು ನಮ್ಮ ತುಮಕೂರು ಜೊತೆಗೆ ಮಾತನಾಡಿದ ಗ್ರಾಹಕರೊಬ್ಬರು, ಬೆಳಗ್ಗೆ ಹಾಲು ತೆಗೆದುಕೊಳ್ಳೋಣ ಎಂದು ಬಂದೆ. 300 ರೂಪಾಯಿ ಪೆಟ್ರೋಲ್ ಹಾಕಿ ಎಂದಿದ್ದೆ. ಅವರು 200 ರೂಪಾಯಿ ಪೆಟ್ರೋಲ್ ಹಾಕಿ, 300 ರೂಪಾಯಿ ತೆಗೆದುಕೊಂಡಿದ್ದಾರೆ. ನಾವು ಏನಾದರೂ ಕೆಲಸ…
ತುಮಕೂರು: ರಾಜ್ಯದಲ್ಲಿ ಹಾಗೂ ದೇಶದಲ್ಲಿ ಯಾವುದೇ ರಾಜಕೀಯ ಪಕ್ಷ ಸುಧೀರ್ಘವಾಗಿ ಆಡಳಿತ ನಡಸಿಲ್ಲ. ಹಾಗಾಗಿ ಪ್ರಾದೇಶಿಕ ಪಕ್ಷಗಳೆಲ್ಲಾ ಒಗ್ಗೂಡಿ ಆಡಳಿತ ನಡೆಸುವ ಕಾಲ ಒಂದಲ್ಲ, ಒಂದು ದಿನ ಬಂದೇ ಬರುತ್ತದೆ ಎಂದು ಹೇಳುವ ಮೂಲಕ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತೃತೀಯ ರಂಗದ ಸುಳಿವನ್ನು ಬಿಚ್ಚಿಟ್ಟರು. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಳ್ಳಗೆರೆ ಗ್ರಾಮದ ಶ್ರೀಚಿಕ್ಕಮ್ಮದೇವಿ ಅಮ್ಮನವರ ನೂತನ ದೇವಾಲಯ ಮತ್ತು ಮೂಲಶಿಲಾಬಿಂಭ ಪ್ರತಿಷ್ಟಾಪನೆ ಹಾಗೂ ವಿಮಾನಗೋಪುರ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ದೇವಾಲಯದ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಇದೆ.ರಾಜಧಾನಿಯಲ್ಲಿ ಏನೇನು ನಡೆಯುತ್ತಿದೆ ಎಂಬ ವಿದ್ಯಾಮಾನಗಳ ಅರಿವಿದೆ. ಇದುವರೆಗೂ ರಾಜ್ಯದ ಮತದಾರರು ನಮಗೆ ಪೂರ್ಣ ಬಹುಮತ ನೀಡಿಲ್ಲ. ಹಾಗಿದ್ದೂ ಸಹ ಸಿದ್ದರಾಮಯ್ಯನ ವಿರೋಧದ ನಡುವೆಯೂ 25 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಮೂಲಕ ಈ ರಾಜ್ಯದ ರೈತರ ಬೆನ್ನಿಗೆ ನಿಂತಿದ್ದೇವೆ ಎಂದರು. ಸಿದ್ದರಾಮಯ್ಯ ಅಹಿಂದ ಸೋಗಿನಲ್ಲಿ ಜನರಲ್ಲಿ ವಿಷ ಬೀಜ ಬಿತ್ತುತಿದ್ದಾರೆ.ನಾವು ಎಲ್ಲಾ ಜನಾಂಗದವರಿಗೂ ಒಳ್ಳೆಯ ಕೆಲಸವನ್ನೇ…
ತುಮಕೂರು: ತುರುವೇಕೆರೆ ಪಟ್ಟಣದಲ್ಲಿರುವ ತಾಲೋಕು ಕಚೇರಿಯಲ್ಲಿ ಮೈಸೂರು ದೊರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಆಚರಿಸಲಾಯಿತು. ಒಡೆಯರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಪಟ್ಟಣದ ಶ್ರೀ ಕಾಂತರಾಜ್ ಅರಸ್, ಬಳಿಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹುಟ್ಟು ಹಬ್ಬದ ಶುಭಾಶಯವನ್ನು ಕೋರಿದರು. ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ಸರ್ಕಾರಿ ಆಚರಣೆಯನ್ನಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ಕಾರ್ಯಕ್ರಮಕ್ಕೆ ಸಂಘ, ಸಂಸ್ಥೆಗಳಿಗೆ ತಿಳಿಸಿ ಆಚರಣೆಗೆ ಆಹ್ವಾನ ನೀಡಬೇಕಾಗಿತ್ತು. ಆದರೆ ಸಮಯದ ಅಭಾವ ಇರುವುದರಿಂದ ಸಾಧ್ಯವಾಗಿಲ್ಲ ಎಂದು ತಹಸೀಲ್ದಾರರ ಪರವಾಗಿ ಶ್ರೀ ಕಾಂತರಾಜ್ ಅರಸ್ ವಿಷಾದ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಹಾಗೂ ಸಿಬ್ಬಂದಿ ಭಾಗವಹಿಸಿ ಪೂಜೆ ಸಲ್ಲಿಸಿದರು . ಈ ಸಮಾರಂಭದಲ್ಲಿ ಇಲಾಖೆಯ ಎಲ್ಲಾ ಸಿಬ್ಬಂದಿ ಹಾಜರಿದ್ದರು. ವರದಿ: ಸುರೇಶ್ ಬಾಬು ಎಂ.ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಕಳೆದ ಒಂದು ವರ್ಷದಿಂದ ನಿಯಂತ್ರಣದಲ್ಲಿದ್ದ ಕೊರೊನಾ ಸೋಂಕು ಎರಡು ದಿನಗಳಿಂದ ಏರಿಕೆ ಗತಿಯಲ್ಲಿದ್ದು ದೈನಂದಿನ ಸೋಂಕು 3,962ರಷ್ಟಾಗಿದೆ. ಈ ನಡುವೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಂಕು ಹೆಚ್ಚಿರುವ ಐದು ರಾಜ್ಯಗಳಿಗೆ ಪತ್ರ ಬರೆದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ಆತಂಕಕಾರಿ ಬೆಳವಣಿಗೆಯಲ್ಲಿ ಇಂದು ಸೋಂಕಿನಿಂದ ಸಾವಿನ ಸಂಖ್ಯೆ 26ರಷ್ಟಾಗಿದೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 5,24,677ರಷ್ಟಾಗಿದ್ದು, ಶೇಕಡವಾರು 1.22ರ ಮಿತಿಯಲ್ಲಿದೆ.ನಿನ್ನೆ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದ ಬುಲೇಟಿನನಲ್ಲಿ ದೈನಂದಿನ ಸೋಂಕು 4041ರಷ್ಟಿದ್ದು, ಸಾವಿನ ಸಂಖ್ಯೆ 10 ಎಂದು ನಮೂದಿಸಲಾಗಿತ್ತು. 84 ದಿನಗಳ ಬಳಿಕ ದೈನಂದಿನ ಸೋಂಕು ನಾಲ್ಕು ಸಾವಿರ ಗಡಿ ದಾಟಿತ್ತು. ಇಂದು ಬೆಳಗ್ಗೆ ಬಿಡುಗಡೆ ಮಾಡಲಾದ ವರದಿಯಲ್ಲಿ ದೈನಂದಿನ ಸೋಂಕು ನಾಲ್ಕು ಸಾವಿರದ ಗಡಿಯ ಸಮೀಪದಲ್ಲಿದೆ. ನಿನ್ನೆಗಿಂತಲೂ ಕಡಿಮೆ ಇದೆ ಎಂದು ಸಮಾಧಾನ ಪಟ್ಟುಕೊಳ್ಳುವ ವೇಳೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿರುವುದು ಆತಂಕ ಮೂಡಿಸಿದೆ. ಈ ಮೊದಲು ಎರಡನೆ ಮತ್ತು ಮೂರನೇ ಅಲೆಯ ಮುನ್ಸೂಚನೆಯನ್ನು…
ಏಕದಾಂಪತ್ಯ ನಿರ್ಧಾರ ಮಾಡಿರುವ ವಡೋದರದ ಯುವತಿ ಕ್ಷಮಾ ಬಿಂಧು ನಿರ್ಧಾರ ಹುಚ್ಚುತನದ್ದು ಎಂದು ಟೀಕಿಸಿರುವ ಬಿಜೆಪಿ ಮುಖಂಡರು, ಆಕೆ ದೇವಸ್ಥಾನದಲ್ಲಿ ಮದುವೆಯಾಗಲು ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ. ಸಮಾಜಶಾಸ್ತ್ರದಲ್ಲಿ ಪದವಿ ಪಡೆದು ಖಾಸಗಿ ಕಂಪೆನಿಯಲ್ಲಿ ಹಿರಿಯ ನೇಮಕಾತಿ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಕ್ಷಮಾರ ತಂದೆ ದಕ್ಷಿಣ ಆಫ್ರಿಕಾದಲ್ಲಿ ಇಂಜಿನಿಯರ್ ಆಗಿದ್ದು, ತಾಯಿ ಅಹಮದಾಬಾದ್ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಂದು ಹುಡುಗಿಗೂ ತನ್ನ ಮದುವೆಯ ಬಗ್ಗೆ ಕನಸುಗಳು ಇರುತ್ತವೆ. ವರ ಕುದುರೆಯ ಮೇಲೆ ಬಂದು ಆಕೆಯನ್ನು ಕರೆದುಕೊಂಡು ಹೋಗಬೇಕು ಎಂಬ ನಾನಾ ರೀತಿಯ ಕಲ್ಪನೆಗಳಿರುತ್ತವೆ. ಆದರೆ ಕ್ಷಮಾ ಭಿನ್ನವಾದ ಆಲೋಚನೆ ಹೊಂದಿದ್ದಾಳೆ. ಅಂದರೆ ಆಕೆ ಬೇರೆಯವರನ್ನು ಮದುವೆಯಾಗಲು ಇಷ್ಟ ಪಟ್ಟಿಲ್ಲ. ಬದಲಾಗಿ ತನ್ನಲ್ಲೇ ತನ್ನ ವರನನ್ನು ಕಂಡುಕೊಂಡಿದ್ದಾಳೆ. ಬಹಳ ದಿನಗಳಿಂದ ತನ್ನಲ್ಲೇ ಉಳಿದುಕೊಂಡಿದ್ದ ಆಲೋಚನೆಗಳನ್ನು ಜಾರಿಗೆ ತರಲು ಅಂಜಿ ಮೌನವಾಗಿದ್ದಳು. ಅಂತಿಮವಾಗಿ ದೃಢ ನಿರ್ಧಾರ ಮಾಡಿ ಏಕದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾಳೆ. ಅಂತಿಮವಾಗಿ ಜೂನ್ 11ರಂದು ವಡೋದರದ ದೇವಸ್ಥಾನದಲ್ಲಿ ಎಲ್ಲಾ ಸಂಪ್ರದಾಯಗಳ ಪ್ರಕಾರ…
ಶಿವಮೊಗ್ಗ, ಜೂ. 3 ಹೌದು. ಇದು ವಿಚಿತ್ರವಾದರೂ ಸತ್ಯ! ಪ್ರಸ್ತುತ ಮಾರುಕಟ್ಟೆಯಲ್ಲಿ ಲೀಟರ್ ಡಿಸೇಲ್ ದರ 89ದೆ! ಮಾರುಕಟ್ಟೆಯ ದರಕ್ಕೆ ಹೋಲಿಸಿದರೆ, ಪ್ರತಿ ಲೀಟರ್ ಗೆ ಸರಿಸುಮಾರು 22ರೂ. ಹೆಚ್ಚು ದರ ಹೆಚ್ಚು ನೀಡಿ ಖರೀದಿಸುತ್ತಿದೆ!ಇದು ಕೆ.ಎಸ್.ಆರ್.ಟಿ.ಸಿ.ಗೆ ಅಕ್ಷರಶಃ ದುಬಾರಿ ಯಾಗಿ ಪರಿಣಮಿಸಿದೆ. ಇಂಧನ ವೆಚ್ಚ ಕಾರಣದಿಂದಲೇ ಹಲವೆಡೆ ಬಸ್ ಓಡಿಸಲು ಹಿಂದೇಟು ಹಾಕುವಂತಾಗಿದೆ. ಈ ಕಾರಣದಿಂದ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು, ಪೆಟ್ರೋಲ್ ಬಂಕ್ ಗಳಲ್ಲಿ ಡಿಸೇಲ್ ಖರೀದಿಗೆ ಮುಂದಾಗುತ್ತಿದ್ದಾರೆ. ಆದರೆ ಇದಕ್ಕೂ ಅಡ್ಡಗಾಲು ಹಾಕುವ ಹುನ್ನಾರಗಳು ನಡೆಯುತ್ತಿರುವುದು ಸತ್ಯ. ಕೆ.ಎಸ್.ಆರ್.ಟಿ.ಸಿ. ಸಂಸ್ಥೆಗೆ ಇಂಧನ ಮಾರಾಟ ಮಾಡದಂತೆ ಬಂಕ್ ಗಳಿಗೆ ಪರೋಕ್ಷ ಒತ್ತಡ ಹಾಕಲಾಗುತ್ತಿದೆ. ತೈಲ ಕಂಪೆನಿಯಿಂದಲೇ ನೇರವಾಗಿ ಇಂಧನ ಖರೀದಿಸುವ ತಂತ್ರಗಳು ನಡೆಯುತ್ತಲೆ ಇದೆ. ನಷ್ಟ: ಕಳೆದೆರೆಡು ವರ್ಷಗಳ ಅವಧಿಯಲ್ಲಿ, ಕೋವಿಡ್ ಕಾರಣದಿಂದ ಸರ್ಕಾರಿ ಸಾರಿಗೆ ಸಂಸ್ಥೆಯು ಭಾರೀ ನಷ್ಟಕ್ಕೀಡಾಗಿದೆ. ನೌಕರರಿಗೆ ಸಂಬಳ ನೀಡಲು ಸಾಧ್ಯವಾಗದಂತಹ ಸ್ಥಿತಿಗೆ ತಲುಪಿತ್ತು. ಪ್ರಸ್ತುತ ಸಂಸ್ಥೆ ಚೇತರಿಸಿಕೊಳ್ಳುತ್ತಿದ್ದ ಸಂಸ್ಥೆಯ ಕಾರ್ಯನಿರ್ವಹಣೆ ಸಹಜ ಸ್ಥಿತಿಗೆ ಬರುತ್ತಿದೆ. ಈ…
ಅತಿವೇಗವಾಗಿ ಹೋಗುತ್ತಿದ್ದ ಸ್ಪೋರ್ಟ್ ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಪ್ರೆಸ್ಟೀಜ್ ಕಂಪನಿಯ ಉದ್ಯೋಗಿಯಾಗಿದ್ದ ನಿವೃತ್ತ ಎಸ್ ಪಿ ಗುರುಪ್ರಸಾದ್ ಪುತ್ರ ಹಾಗೂ ಆತನ ಗೆಳತಿ ಇಬ್ಬರು ಸಾವನ್ನಪ್ಪಿದ ದಾರುಣ ಘಟನೆ ನಗರದ ಹೊರವಲಯದ ಸರ್ಜಾಪುರದಲ್ಲಿ ಇಂದು ನಸುಕಿನಲ್ಲಿ ನಡೆದಿದೆ. ಪ್ರೆಸ್ಟೀಜ್ ಕಂಪನಿಯ ಉದ್ಯೋಗಿಗಳಾದ ಮಾರತ್ ಹಳ್ಳಿಯ ಗಗನ್ ದೀಪ್ ಹಾಗೂ ಆತನ ಗೆಳತಿ ವೈಟ್ ಫೀಲ್ಡ್ ನ ಹೊಂಗಸಂದ್ರದ ಯಶಸ್ವಿನಿಮೃತ ದುರ್ದೈವಿಗಳು. ಸಿಬಿಐನಲ್ಲಿ ಎಸ್ ಪಿಯಾಗಿದ್ದ ನಿವೃತ್ತರಾಗಿದ್ದ ಗುರುಪ್ರಸಾದ್ ಅವರ ಪುತ್ರರಾಗಿದ್ದ ಗಗನ್ ದೀಪ್ ಹಾಗೂ ಆತನ ಗೆಳತಿ ಇಬ್ಬರು ಸರ್ಜಾಪುರದ ಪ್ರೆಸ್ಟೀಜ್ ಕಂಪನಿಯ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.ರಾತ್ರಿ ಪಾಳೆಯಲ್ಲಿ ಕೆಲಸ ಮುಗಿಸಿದ ಇವರಿಬ್ಬರೂ ಮುಂಜಾನೆ ೨.೩೦ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಡುಕಾಟಿ ಸ್ಪೋರ್ಟ್ ಬೈಕ್ ನಲ್ಲಿ ವೇಗವಾಗಿ ಹೋಗುತ್ತಿದ್ದರು. ಮಾರ್ಗ ಮಧ್ಯದ ರಸ್ತೆ ತಿರುವಿನಲ್ಲಿ ಗಗನ್ ದೀಪ್ ಅವರಿಗೆ ನಿಯಂತ್ರಣಕ್ಕೆ ಸಿಗದ ಬೈಕ್, ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ…
ಯುದ್ಧದಿಂದ ನಲುಗಿಹೋಗಿರುವ ಉಕ್ರೇನ್ ದೇಶಕ್ಕೆ ನ್ಯಾಟೋ ರಾಷ್ಟ್ರಗಳ ಬೆಂಬಲ ಸಿಕ್ಕಿದೆ. ಇದರಿಂದಾಗಿ ರಷ್ಯಾ ವಿರುದ್ದ ಹೋರಾಟ ಮಾಡಲು ಮತ್ತಷ್ಟು ಬಲ ಬಂದಂತಾಗಿದೆ. ಪಾಶ್ಚಿಮಾತ್ಯ ಮಿಲಿಟರಿ ಒಕ್ಕೂಟ, ಉಕ್ರೇನ್ ಅನ್ನು ಬೆಂಬಲಿಸುವ “ಜವಾಬ್ದಾರಿ” ಹೊಂದಿದೆ ಎಂದು ನ್ಯಾಟೋ ಮುಖ್ಯಸ್ಥ ಜೆನ್ ಸ್ಟೋಲ್ಟೆನ್ಬರ್ಗ್ ಹೇಳಿದ್ದಾರೆ. ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರನ್ನು ಶ್ವೇತಭವನದಲ್ಲಿ ಭೇಟಿ ಮಾಡಿದ ಸುದೀರ್ಘ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೆನ್ , ಉಕ್ರೇನ್ನಲ್ಲಿ ಸುದೀರ್ಘವಾದ ” ಯುದ್ಧವಿರೋದಿ ” ನಿಲುವು ತೆಗೆದಕೊಳ್ಳಲು ಉಕ್ರೇನ್ ಬೆಂಬಲಸಲು ನ್ಯಾಟೋ ದೇಶಗಳು ಮುಂದಾಗಿವೆ ಎಂದು ಅವರು ಹೇಳಿದ್ದಾರೆ. ಉಕ್ರೇನಿಯನ್ನರು “ಯುದ್ಧಭೂಮಿಯಲ್ಲಿ ತಮ್ಮ ದೇಶವನ್ನು ರಕ್ಷಿಸಲು ಹೆಚ್ಚಿನ ಬೆಲೆ ಪಾವತಿಸುತ್ತಿದ್ದಾರೆ, ಆದರೆ ರಷ್ಯಾ ಹೆಚ್ಚಿನ ಸಾವು ನೋವು ತೆಗೆದುಕೊಳ್ಳುತ್ತಿದೆ.ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಬೆಳವಣಿಗೆಯನ್ನು ನಾವು ಸೂಕ್ಷ್ಮವಾಗಿ ನೋಡುತ್ತೇವೆ” ಎಂದು ಹೇಳಿದ್ದಾರೆ. ನ್ಯಾಟೋ, ರಷ್ಯಾದೊಂದಿಗೆ ನೇರ ಮುಖಾಮುಖಿಯಾಗಲು ಬಯಸುವುದಿಲ್ಲ ಎಂದು ಹೇಳಿರುವ ಅವರು ಯುದ್ಧದ ಸನ್ನಿವೇಶಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು…