ಭಾರತ- ಪಾಕಿಸ್ತಾನದ ಗಡಿ ಭಾಗವಾದ ಅಟ್ಟಾರಿಯ ವಾಘಾಗಡಿ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ ಮತ್ತು ಪಾಕಿಸ್ತಾನ ರೇಂಜರ್‌ಗಳು ಈದ್ ಅಲ್-ಅಧಾ ಹಿನ್ನೆಲೆ ಸಂದರ್ಭದಲ್ಲಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು.
ಈ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಬಿಎಸ್‌ಎಫ್ ಕಮಾಂಡೆಂಟ್ ಜಸ್ಬೀರ್ ಸಿಂಗ್, “ಈದ್ ಅಲ್ ಅಧಾ ಸಂದರ್ಭದಲ್ಲಿ, ಜಂಟಿ ಚೆಕ್ ಪೋಸ್ಟ್ ಅಟ್ಟಾರಿ ಗಡಿಯಲ್ಲಿ ಬಿಎಸ್‌ಎಫ್ ಪಾಕಿಸ್ತಾನ ರೇಂಜರ್‌ಗಳು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡಿವೆ ಎಂದರು. ಎರಡೂ ದೇಶಗಳ ಗಡಿ ಕಾವಲು ಪಡೆಗಳ ನಡುವಿನ ಸಾಂಪ್ರದಾಯಿಕ ಸೂಚಕವಾಗಿದೆ. ಇದು ಸ್ನೇಹದ ಸಂಪ್ರದಾಯ, ಸದ್ಭಾವನೆ ಮತ್ತು ಶಾಂತಿಯ ಸಂಕೇತವಾಗಿದೆ ಎಂದಿದ್ದಾರೆ.
ಈದ್ ಅಲ್-ಅಧಾ ಅಥವಾ ಬಕ್ರಾ ಈದ್ ಅನ್ನು ’ತ್ಯಾಗದ ಹಬ್ಬ’ ಎಂದೂ ಕರೆಯಲಾಗುತ್ತದೆ . ಹಬ್ಬದ ಸಂದರ್ಭದಲ್ಲಿ ಮಟನ್ ಬಿರಿಯಾನಿ, ಘೋಷ್ಟ್ ಹಲೀಮ್, ಶಮಿ ಕಬಾಬ್ ಮತ್ತು ಮಟನ್ ಕೊರ್ಮಾದಂತಹ ಹಲವಾರು ಭಕ್ಷ್ಯಗಳು, ಜೊತೆಗೆ ಖೀರ್ ಮತ್ತು ಶೀರ್ ಖುರ್ಮಾದಂತಹ ಸಿಹಿಭಕ್ಷ್ಯಗಳನ್ನು ಈ ದಿನ ತಯಾರು ಮಾಡಲಾಗುತ್ತದೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ದಾನವನ್ನು ನೀಡುವುದು ಈದ್ ಅಲ್-ಅಧಾದ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy