Author: admin

ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬೂದಗವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನೇಗಲಾಲ ಗ್ರಾಮ ದಲ್ಲಿರುವ ಶ್ರೀ ಕಾವಲಮ್ಮ ದೇವಿಯ ಉತ್ಸವ ಕಾರ್ಯಕ್ರಮವು ಜೂನ್ 5ಮತ್ತು 6ರಂದು ಜರುಗಲಿದೆ. 5ರಂದು ನೇಗಲಾಲ ಗ್ರಾಮದಲ್ಲಿರುವ ದೇವಸ್ಥಾನದಿಂದ ಶ್ರೀ ಕಾವಲಮ್ಮ ದೇವಿಯ ಉತ್ಸವವು ಹೊರಟು ತೋಪಿನಲ್ಲಿರುವ ಮೂಲ ದೇವಾಲಯಕ್ಕೆ ತೆರಳುವುದು ಮತ್ತು ದಿನಾಂಕ 6ರ ಮುಂಜಾನೆಯಿಂದ ಅಮ್ಮನವರಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ನಂತರ ರಾತ್ರಿ ತೋಪಿನಲ್ಲಿರುವ ಮೂಲ ದೇವಾಲಯದಿಂದ ನೇಗಲಾಲ ಗ್ರಾಮದ ದೇವಾಲಯಕ್ಕೆ ವಿವಿಧ ಕಾರ್ಯಕ್ರಮಗಳ ಮೂಲಕ ತೆರಳುವುದು. ಈ ಉತ್ಸವದ ಕಾರ್ಯಕ್ರಮಕ್ಕೆ ಬಂದಂತಹ ಭಕ್ತಾದಿಗಳಿಗೆ  ಅನ್ನ ಸಂತರ್ಪಣೆ ಇರುವುದು ಎಂದು ಕಾರ್ಯನಿರ್ವಾಹಕರು ಮತ್ತು ಸೇವಾ ಕರ್ತರು ತಿಳಿಸಿದ್ದಾರೆ. ವರದಿ: ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ತುರುವೇಕೆರೆ: ಶಿಕ್ಷಣ ಸಚಿವ ,ಬಿ.ಸಿ ನಾಗೇಶ್ ರಾಜೀನಾಮೆಗೆ ಹಾಗೂ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಬಂಧಿಸಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ , ಚಲವಾದಿ ಮಹಾಸಭಾ, ಸಿ.ಐ.ಟಿ.ಯು ., ವಾಲ್ಮೀಕಿ ನಾಯಕ ಸಮಾಜ , ಮುಸ್ಲಿಂ ಸಂಘಟನೆ ಹಾಗೂ ಸಮಾನ ಮನಸ್ಕರ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ರಾಜ್ಯ ಬಿಜೆಪಿ ಸರ್ಕಾರ ಶಾಲಾ ಪಠ್ಯ ಪುಸ್ತಕಗಳ ಪರಿಷ್ಕರಣೆ ಮಾಡುತ್ತಿದ್ದು, ಈ ಮೂಲಕ ದಲಿತರ, ಮಹಿಳೆಯರ , ಶೂದ್ರರ, ವೈಚಾರಿಕ ವಾದಿಗಳ , ಬರಹಗಳಿಗೆ ತಿಲಾಂಜಲಿ ನೀಡಲಾಗಿದೆ. ಪೆರಿಯಾರ್ ಅಂಬೇಡ್ಕರ್ , ಭಗತ್ ಸಿಂಗ್ ಕುರಿತ ಬರಹಗಳನ್ನು ಕೈಬಿಟ್ಟು, ಸನಾತನ, ಜಾತಿವಾದಿ ಬ್ರಾಹ್ಮಣ್ಯಶಾಹಿ ಮತ್ತು ಮಹಿಳಾ ವಿರೋಧಿ ಬರಹಗಳನ್ನು ಸೇರಿಸಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಶಾಲಾ ಮಕ್ಕಳ ಪಾಠಗಳನ್ನು ಮನುಸ್ಮೃತಿ ಯನ್ನಾಗಿ ಮಾಡಲಾಗುತ್ತಿದೆ. ಕುವೆಂಪು, ಅಂಬೇಡ್ಕರ್, ಸೇರಿದಂತೆ ಶೂದ್ರ, ದಲಿತ ಚಿಂತಕರನ್ನು ಅವಹೇಳನ ಮಾಡಿದ ಅವರ ಬರಹಗಳನ್ನು ,…

Read More

ಬೆಂಗಳೂರು: ಇನ್ಮುಂದೆ ವಾರಕ್ಕೊಂದು ದಿನ ಜಿಲ್ಲಾಧಿಕಾರಿಗಳು ತಾಲೂಕು ಕಚೇರಿಗೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸುವಂತೆ ಮೂರು ದಿನದಲ್ಲಿ ಆದೇಶ ಹೊರಡಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಜನರಿಗೆ ಇನ್ನಷ್ಟು ಹತ್ತಿರವಾಗಲು ತಿಂಗಳಿಗೆ ನಾಲ್ಕು ಬಾರಿ ತಹಸೀಲ್ದಾರ್ ಕಚೇರಿಗಳಿಗೆ ಭೇಟಿ ನೀಡಿ ಅಹವಾಲು ಸ್ವೀಕರಿಸಿ ಪರಿಹರಿಸುವ ಸಂಬಂಧ ಆದೇಶ ಹೊರಡಿಸುತ್ತೇನೆ ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿಗಳು ತಿಂಗಳಿಗೆ ನಾಲ್ಕು ಬಾರಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ತಹಸೀಲ್ದಾರ್ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳು ಭೇಟಿ ನೀಡಬೇಕು.  ಯಾವ್ಯಾವ ಜಿಲ್ಲಾಧಿಕಾರಿಗಳು ಯಾವ್ಯಾವ ತಾಲೂಕಿಗೆ ಭೇಟಿ ನೀಡಬೇಕು ಎಂಬ ಕುರಿತು ಪಟ್ಟಿ ತಯಾರಿಸಿ ವೇಳಾಪಟ್ಟಿ ಬಿಡುಗಡೆ ಮಾಡಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಪ್ರತಿ ಮಂಗಳವಾರ ಕಚೇರಿಗೆ ಹೋಗುವಂತೆ ಸಚಿವ ಆರ್. ಅಶೋಕ್ ವೇಳಾಪಟ್ಟಿ ನಿಗದಿಪಡಿಸಿದ್ದಾರೆ.  ಯಾವ ಜಿಲ್ಲಾಧಿಕಾರಿ ಯಾವ ದಿನಾಂಕ, ಯಾವ ತಾಲೂಕಿಗೆ ಹೋಗಬೇಕು ಎನ್ನುವುದನ್ನು ನಿರ್ಧರಿಸಿ ವೇಳಾಪಟ್ಟಿ ಬಿಡುಗಡೆ ಮಾಡಿದ್ದಾರೆ. ಮೇ 31ರಿಂದ ಆಗಸ್ಟ್…

Read More

ಬೆಂಗಳೂರು:ಇಂದು ಬೆಂಗಳೂರಿನಲ್ಲಿ ನಡೆದಿದೆ ರೈತ ಮುಖಂಡರ ಸಭೆ ಅಕ್ಷರಶಃ ರಣಾಂಗಣವಾಗಿದೆ. ಕೋಡಿಹಳ್ಳಿ ಚಂದ್ರಶೇಖರ್ ಮಾಡಿರುವ ಆರೋಪಗಳಿಗೆ ಉತ್ತರ ನೀಡುತ್ತಿದ್ದ ವೇಳೆ ರೈತ ಮುಖಂಡ ರಾಕೇಶ್ ಟಿಕಾಯತ್ ಮತ್ತು ಯುದ್ಧ್ ​ವೀರ್​ ಸಿಂಗ್ ಮೇಲೆ ಕಪ್ಪು ಮಸಿ ಎರಚಲಾಗಿದೆ. ಕರ್ನಾಟಕದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾಡಿರುವ ಆರೋಪದ ಬಗ್ಗೆ ಸ್ಪಷ್ಟನೆ ನೀಡುತ್ತಿರುವಾಗ ಟಿಕಾಯತ್ ಮತ್ತು ಸಿಂಗ್ ಮುಖಕ್ಕೆ ಮಸಿ ಎರಚಲಾಗಿದೆ. ನಾವು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಕೋಡಿಹಳ್ಳಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟಿಕಾಯತ್ ಮತ್ತು ಸಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಯುತ್ತಿದ್ದಂತೆ ಕೆಲವರು ವಾಗ್ವಾದಕ್ಕಿಳಿದು ಮಸಿ ಎರಚಿದ್ದಾರೆ. ಗಾಂಧಿಭವನದಲ್ಲಿ ನಡೆದ ಸುದ್ದಿ ಗೋಷ್ಠಿಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕರ್ನಾಟಕ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಬಗ್ಗೆ ಪ್ರಾದೇಶಿಕ ವಾಹಿನಿಯೊಂದರ ಸ್ಟಿಂಗ್ ಆಪರೇಷನ್ ವಿಡಿಯೋ ಬಗ್ಗೆ ಟೀಕಾಯತ್ ಮಾತನಾಡುತ್ತಿದ್ದ ವೇಳೆ ಅವರ ಮೇಲೆ ಮಸಿ ಎಸೆಯಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಕೆಲವರು ವಾಗ್ವಾದಕ್ಕಿಳಿದಿದ್ದು, ಅಲ್ಲಿದ್ದ ಕುರ್ಚಿಗಳನ್ನು ಎಸೆಯಲು ಆರಂಭಿಸಿದ್ದಾರೆ. ರೈತ ಮುಖಂಡ ಚಂದ್ರಶೇಖರ್…

Read More

ತುಮಕೂರು: ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಹಾಗೂ ಹಗರಣಗಳ ಸರಮಾಲೆ ಇಂದ ಜನರು ಹೈರಾಣಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ  ಕಾಂಗ್ರೆಸ್ ಪಕ್ಷದ ವತಿಯಿಂದ ತುಮಕೂರಿನಲ್ಲಿ ಬೃಹತ್ ಜನಾಕ್ರೋಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಿ.ಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಹಿನ್ನೆಲೆಯಲ್ಲಿ ಎಂ.ಎಲ್ ಸಿ ರಾಜೇಂದ್ರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ಶಶಿ ಹುಲಿಕುಂಟೆ, ಮೋಹನ್, ರಾಜೇಶ್ ದೊಡ್ಮನೆ ಸೇರಿದಂತೆ ಹಲವು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಇನ್ನು ಸುಮಾರು ಮುನ್ನೂರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಪೊಲೀಸ್ ಸರ್ಪಗಾವಲು ಹಾಕಿದ್ದ ಪೊಲೀಸರು ತಡೆದರು .ಇದೆ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರ ಹಾಗೂ ಪೊಲೀಸರ ನಡುವೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಪ್ರತಿಕ್ರಿಯಿಸಿರುವ ತುಮಕೂರು ಜಿಲ್ಲಾ ಯುವ ಕಾಂಗ್ರೆಸ್…

Read More

ವಿಶ್ವವಿದ್ಯಾನಿಲಯ ಅನುದಾನ ಆಯೋಗವು ಪಿಜಿ ಕೋರ್ಸ್‌ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಯೋಜನೆಯನ್ನು ಪ್ರಕಟಿಸಿದೆ. ಈ ಯೋಜನೆಯಡಿ, ವೃತ್ತಿಪರ ಪಿಜಿ ಕೋರ್ಸ್‌ಗಳನ್ನು ಅನುಸರಿಸುವ ವಿದ್ಯಾರ್ಥಿಗಳಿಗೆ ತಿಂಗಳಿಗೆ 4,500 ಮತ್ತು 7,800 ರೂ. ವಿದ್ಯಾರ್ಥಿ ವೇತನ ದೊರೆಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಸಲ್ಲಿಸಬಹುದು. ತಾಂತ್ರಿಕ, ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ಫಾರ್ಮಸಿ ಮತ್ತು ಇತರ ಶಿಕ್ಷಣ ಕೋರ್ಸ್‌ಗಳನ್ನು ಅನುಸರಿಸುವ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಾರೆ. ಎಂಇ ಮತ್ತು ಎಂಟೆಕ್ ವಿದ್ಯಾರ್ಥಿಗಳಿಗೆ ಮಾಸಿಕ 7,800 ರೂ., ಇತರೆ ಪಿಜಿ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಮಾಸಿಕ 4,500 ರೂ. ಎಸ್‌ಸಿ, ಎಸ್‌ಟಿ ವರ್ಗದ ವಿದ್ಯಾರ್ಥಿಗಳು ಈ ಯೋಜನೆಯಡಿ ಪ್ರಯೋಜನ ಪಡೆಯುತ್ತಾರೆ. ಈ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ: ವೃತ್ತಿಪರವಲ್ಲದ ಕೋರ್ಸ್‌ಗಳಿಗೆ ಸೇರುವ ವಿದ್ಯಾರ್ಥಿಗಳು ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆಯುವುದಿಲ್ಲ. UGC ಮಾರ್ಗಸೂಚಿಗಳ ಪ್ರಕಾರ MA, MSc, MCom, MSW ನಂತಹ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮವು ವೃತ್ತಿಪರೇತರ ಕೋರ್ಸ್‌ಗಳ ಭಾಗವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಕೋರ್ಸ್‌ಗಳನ್ನು…

Read More

ಮೇ 7 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ಅಂಗವಿಕಲ ಮಗುವಿಗೆ ಬೋರ್ಡಿಂಗ್ ನಿರಾಕರಿಸಿದ್ದಕ್ಕಾಗಿ ವೈಮಾನಿಕ ನಿಯಂತ್ರಕ ಡಿಜಿಸಿಎ ಇಂಡಿಗೋ ಏರ್‌ಲೈನ್‌ಗೆ ರೂ 5 ಲಕ್ಷ ದಂಡ ವಿಧಿಸಿದೆ. ಮಗುವು ಮೇ 9 ರಂದು ರಾಂಚಿ-ಹೈದರಾಬಾದ್ ಟ್ರಿಪ್ ಹತ್ತಲು ಇಂಡಿಗೋ ಅನುಮತಿ ನಿರಾಕರಿಸಿತು.ಮಗುವು ನೋಡಲಿಕ್ಕೆ ಭಯಭೀತನಾಗಿದೆ ಎಂದು ಅದು ಕಾರಣ ನೀಡಿತ್ತು. ಯಾವಾಗ ಇಂಡಿಗೋ ವಿಮಾನ ಮಗುವಿಗೆ ಅವಕಾಶ ನೀಡಲಿಲ್ಲವೋ, ಆಗ ಅದರ ಪೋಷಕರು ಸಹಿತ ಪ್ರಯಾಣಿಸಲು ನಿರಾಕರಿಸಿದರು ಎನ್ನಲಾಗಿದೆ.ವಿಮಾನಯಾನದ ವಾಚ್‌ಡಾಗ್ ಆಗಿರುವ ಡಿಜಿಸಿಎ ವಿಮಾನಯಾನ ಸಂಸ್ಥೆಗೆ ಆರ್ಥಿಕ ದಂಡ ವಿಧಿಸಿರುವುದು ಇದೇ ಮೊದಲು ಎನ್ನಲಾಗಿದೆ. ಈ ಘಟನೆ ಕುರಿತು ತನಿಖೆ ನಡೆಸಲು ಡಿಜಿಸಿಎ ಮೇ 9ರಂದು ಮೂವರು ಸದಸ್ಯರ ತಂಡವನ್ನು ರಚಿಸಿತ್ತು. “ಇಂಡಿಗೋ ಸಿಬ್ಬಂಧಿ ಅಂಗವಿಕಲ ಮಗುವನ್ನು ನಿರ್ವಹಿಸುವುದರಲ್ಲಿ ನ್ಯೂನತೆಯನ್ನು ಎಸೆಗಿದೆ, ಆ ಮೂಲಕ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ ಎಂದು ಗಮನಿಸಲಾಗಿದೆ” ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಹೇಳಿಕೆ ತಿಳಿಸಿದೆ. ಹೆಚ್ಚು ಸಹಾನುಭೂತಿಯ ನಿರ್ವಹಣೆಯನ್ನು ಸುಗಮಗೊಳಿಸುತ್ತದೆ, ಮಗುವನ್ನು ಶಾಂತಗೊಳಿಸುತ್ತದೆ ಮತ್ತು ಪ್ರಯಾಣಿಕರಿಗೆ…

Read More

ಲಖನೌ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಂತರ, ಮಥುರಾ, ವೃಂದಾವನ, ವಿಂಧ್ಯವಾಸಿನಿ ಧಾಮ ಮತ್ತು ನೈಮಿಶ್ ಧಾಮದಂತೆ ದೇವಾಲಯಗಳ ಪಟ್ಟಣವಾದ ಕಾಶಿಯು ಎಚ್ಚರಗೊಳ್ಳುತ್ತಿರುವಂತೆ ತೋರುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಹೇಳಿದರು. ಲಖನೌ ದಲ್ಲಿ ನಡೆದ ಬಿಜೆಪಿಯ ಒಂದು ದಿನದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಕೋಮುಗಲಭೆ ನಡೆದಿಲ್ಲ. ಇತ್ತೀಚಿನ ಹಬ್ಬಗಳನ್ನು ಪ್ರಸ್ತಾಪಿಸಿ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈದ್‌ನ ಹಿಂದಿನ ಕೊನೆಯ ಶುಕ್ರವಾರದ ನಮಾಜ್ ಅನ್ನು ರಸ್ತೆಗಳಲ್ಲಿ ನಡೆಸಲಾಗಿಲ್ಲ ಎಂದು ಹೇಳಿದರು. ಕಾಶಿ ವಿಶ್ವನಾಥ ದೇವಸ್ಥಾನದ ಕಾರಿಡಾರ್ ಉದ್ಘಾಟನೆಯನ್ನು ಉಲ್ಲೇಖಿಸಿದ ಆದಿತ್ಯನಾಥ್, ಪ್ರತಿದಿನ ಒಂದು ಲಕ್ಷ ಭಕ್ತರು ಕಾಶಿಗೆ ಭೇಟಿ ನೀಡುತ್ತಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಸ್ಥಳವು ತನ್ನ ಹೆಸರಿನ ಮಹತ್ವವನ್ನು ಸಾಬೀತುಪಡಿಸುತ್ತಿದೆ ಎಂದರು. ರಾಮ ನವಮಿ ಮತ್ತು ಹನುಮ ಜಯಂತಿಯನ್ನು ಶಾಂತಿಯುತವಾಗಿ ನಡೆಸಲಾಯಿತು. ಇದೇ ಮೊದಲ ಬಾರಿಗೆ ಈದ್ ಹಿಂದಿನ ಕೊನೆಯ ಶುಕ್ರವಾರದ ನಮಾಜ್…

Read More

ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲ್ ಹರಾಜು ಪ್ರಕ್ರಿಯೆ ನಡೆದಿದೆ. 5 ಅಡಿ 11 ಇಂಚು ಉದ್ದದ ಈ ಬಾಟಲಿಯು 311 ಲೀಟರ್ ವಿಸ್ಕಿಯಿಂದ ತುಂಬಿದೆ. ಈ ಬಾಟಲಿಯನ್ನು ಅಂತಿಮವಾಗಿ ಆನ್‌ಲೈನ್ ಮಾರಾಟದಲ್ಲಿ ಹರಾಜು ಮಾಡಲಾಯಿತು. ಹರಾಜು-ಸಂಘಟನಾ ಕಂಪನಿ ಲಿಯಾನ್ ಮತ್ತು ಟರ್ನ್‌ಬುಲ್ ಪ್ರಕಾರ 5 ಅಡಿ 11 ಇಂಚು ಉದ್ದ ಮತ್ತು 311 ಲೀಟರ್‌ ಸ್ಕಾಚ್ ವಿಸ್ಕಿ ಇದ್ದ ವಿಶ್ವದ ಅತಿದೊಡ್ಡ ಬಾಟಲಿ ಸುಮಾರು 1.4 ಮಿಲಿಯನ್ ಡಾಲರ್ (10,85,88,900 ರೂ.) ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರ ಬಿಡ್ ಅನ್ನು ಆನ್‌ಲೈನ್‌ನಲ್ಲಿ ಇರಿಸಲಾಗಿತ್ತು. ಅಂತಿಮವಾಗಿ ಅಂತರಾಷ್ಟ್ರೀಯ ಅಪರಿಚಿತ ಸಂಗ್ರಾಹಕ ಅದನ್ನು ಖರೀದಿಸಿದರು. ಈ ವಿಸ್ಕಿಗೆ ‘ದಿ ಇಂಟ್ರೆಪಿಡ್’ ಎಂದು ಹೆಸರಿಡಲಾಗಿದೆ ಎಂದು ಹರಾಜು ಕಂಪನಿ ತಿಳಿಸಿದೆ. ಇದು ಸುಮಾರು 32 ವರ್ಷಗಳಷ್ಟು ಹಳೆಯದಾದ ಸಿಂಗಲ್ ಮಾಲ್ಟ್ ಆಗಿದೆ. ಇದನ್ನು 1989 ರಲ್ಲಿ ಸ್ಪೈಸೈಡ್‌ನ ಪ್ರತಿಷ್ಠಿತ ದಿ ಮಕಲನ್‌ನಲ್ಲಿ ಭಟ್ಟಿ ಇಳಿಸಲಾಯಿತು. ಸೆಪ್ಟೆಂಬರ್ 2021 ರಲ್ಲಿ ವಿಸ್ಕಿಯನ್ನು ಭರ್ತಿ ಮಾಡಿದಾಗ ಗಿನ್ನೆಸ್…

Read More

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.ಮಾನ್ಸಾದ ಜವಾಹರ್ಕೆ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದ ಗುಂಡಿನ ದಾಳಿಯಲ್ಲಿ ಸಿಧು ಮೂಸೆವಾಲಾ ಸೇರಿದಂತೆ ಕನಿಷ್ಠ ಮೂವರು ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಾನ್ಸಾದ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಸಿಧು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಅವರಿಗೆ 27 ವರ್ಷ ವಯಸ್ಸಾಗಿತ್ತು. ಪಂಜಾಬ್‌ನಲ್ಲಿ ಶನಿವಾರದಂದು ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷ ಸರ್ಕಾರವು ಮೂಸೆವಾಲಾ ಅವರ ಭದ್ರತೆಯನ್ನು ಕಡಿತಗೊಳಿಸಿತ್ತು. ಮೂಸೆವಾಲಾ ಅವರಿಗೆ ನಾಲ್ವರು ಪೊಲೀಸ್ ಬಂದೂಕುಧಾರಿಗಳಿದ್ದರು, ಅವರಲ್ಲಿ ಇಬ್ಬರನ್ನು ಹಿಂತೆಗೆದುಕೊಳ್ಳಲಾಯಿತು. ಸುದ್ದಿ ಮೂಲಗಳ ಪ್ರಕಾರ ಅವರು ತಮ್ಮ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ದಾಳಿಕೋರರು ಸಿಧು ಮೂಸೆವಾಲಾ ಮತ್ತು ಅವರ ಇಬ್ಬರು ಸ್ನೇಹಿತರ ಮೇಲೆ ಗುಂಡು ಹಾರಿಸಿದ್ದಾರೆ.ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಮೂಸೆವಾಲಾ ಅವರು ಈ ಹಿಂದೆ 18 ನೇ ಶತಮಾನದ ಸಿಖ್ ಯೋಧ ಮೈ…

Read More