Subscribe to Updates
Get the latest creative news from FooBar about art, design and business.
- ಡಾ.ಜಿ.ಪರಮೇಶ್ವರರವರು ಮುಖ್ಯಮಂತ್ರಿಯಾಗಲಿ ಎಂದು 108 ತೆಂಗಿನಕಾಯಿ ಹೊಡೆದು ಹರಕೆ
- ಪರಿಶಿಷ್ಟರ ಸಮಸ್ಯೆಗಳ ಶೀಘ್ರ ವಿಲೇವಾರಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ
- ಜ.31ರವರೆಗೆ ರಸ್ತೆ ಸುರಕ್ಷಾ ಮಾಸಾಚರಣೆ ಅಭಿಯಾನ
- ಡ್ರಾಪ್ ಕೊಡುವ ನೆಪದಲ್ಲಿ ಚಿನ್ನದ ಆಭರಣ ದೋಚುತ್ತಿದ್ದ ಕಳ್ಳನ ಬಂಧನ
- ತುಮಕೂರು: 40 ವರ್ಷ ವಾಸವಿದ್ದರೂ ಸಿಗದ ಹಕ್ಕು ಪತ್ರ: ನಿವಾಸಿಗಳ ಆಕ್ರೋಶ
- ಹುಯಿಲ್ ದೊರೆ ನೂತನ ಗ್ರಾ.ಪಂ. ಕಟ್ಟಡ ಉದ್ಘಾಟನೆ: ಗ್ರಾಮ ಪಂಚಾಯ್ತಿಗಳೇ ಗ್ರಾಮಗಳ ಸರ್ಕಾರವಾಗಬೇಕು: ಶಾಸಕ ಟಿ.ಬಿ.ಜಯಚಂದ್ರ
- ತುಮಕೂರು: ಗಾಜಿನ ಮನೆಯಲ್ಲಿ ‘ಸಿರಿಧಾನ್ಯ ಖಾದ್ಯಗಳ’ ಘಮಲು!
- 48 ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ: ಎಸ್ಪಿ ಅಶೋಕ್ ಗೆ ಪದೋನ್ನತಿ
Author: admin
ತುಮಕೂರು: ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಆಗಿದೆ, ಪ್ರತಿಬಾರಿ ಬಜೆಟ್ ಮಂಡನೆ ಮಾಡಿದ ತಕ್ಷಣ ಬೆಲೆ ಏರಿಕೆ ಮಾಡೋ ಚಾಳಿ ಇಟ್ಟುಕೊಂಡಿದ್ದಾರೆ. ಗೃಹ ಲಕ್ಷ್ಮಿ ಹಣ ಬಾರದೇ ಮೂರು ತಿಂಗಳು ಆಯಿತು. ಸತ್ತವರಿಗೆ ಹಿಡಿ ಮಣ್ಣು ಹಾಕಲೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಹರಿಹಾಯ್ದಿದ್ದಾರೆ.. ಜನಾಕ್ರೋಶ ಸಮಾವೇಶ ಹಿನ್ನೆಲೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಅಂಚಿಗೆ ತಂದಿದ್ದಾರೆ. ಈ ಸರ್ಕಾರ ಕಿತ್ತೊಗೆಯುವವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದರು. ಡಿಕೆಶಿ , ಸತೀಶ್ ಜಾರಕಿಹೊಳಿ ಹಾಗೂ ಪರಮೇಶ್ವರ ಸಿಎಂ ಆಗಲು ಪೈಪೋಟಿಯಲ್ಲಿ ಇದ್ದಾರೆ. ಈ ಕಾದಾಟದಲ್ಲಿ ರಾಜ್ಯದ ಜನರ ಹಿತ ಮರೆತಿದ್ದಾರೆ ಎಂದರು. ಸದನದಲ್ಲಿ ಶಾಸಕ ಬಿ.ಸುರೇಶ್ ಗೌಡ ಸೇರಿದಂತೆ ಬಿಜೆಪಿ ಶಾಸಕ ಅಮಾನತು ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಅಮಾನತು ಮಾಡುವ ಹಕ್ಕು ಸ್ಪೀಕರ್ ಗೆ ಇಲ್ಲ, ಒಂದು ದಿನ ಮಾತ್ರ ಸ್ಪೀಕರ್ ಅಮಾನತು ಮಾಡಬಹುದು. …
ಕಲಬುರಗಿ: ನೀಟ್ ಪರೀಕ್ಷೆ ವೇಳೆ ವಿದ್ಯಾರ್ಥಿಯೊಬ್ಬನ ಜನಿವಾರ ತೆಗಿಸಲಾಗಿದೆ ಎಂದು ಆರೋಪಿಸಿ ಕಲಬುರಗಿಯ ಪರೀಕ್ಷಾ ಕೇಂದ್ರದ ಹೊರಗೆ ಬ್ರಾಹ್ಮಣ ಸಮುದಾಯದ ಸದಸ್ಯರು ಇಂದು ಪ್ರತಿಭಟನೆ ನಡೆಸಿದರು. ನೀಟ್ ಪರೀಕ್ಷೆ ಬರೆಯಲು ನಗರದ ಸೆಂಟ್ ಮೇರಿ ಶಾಲೆಗೆ ಬಂದಿದ್ದ ಬಸವ ಕಲ್ಯಾಣದ ಶ್ರೀಪಾದ ಪಾಟೀಲ್ ಎಂಬ ವಿದ್ಯಾರ್ಥಿಯನ್ನು ತಪಾಸಣಾ ಸಿಬ್ಬಂದಿ ತಡೆದು, ಪರೀಕ್ಷಾ ಕೇಂದ್ರದ ಒಳಗೆ ಹೋಗುವಾಗ ಜನಿವಾರ ತೆಗೆಯುವಂತೆ ಸೂಚನೆ ನೀಡಿದ್ದಾರೆ. ಜನಿವಾರ ತೆಗೆಸಿದ ಘಟನೆ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಬ್ರಾಹ್ಮಣ ಸಮಾಜದ ಕೆಲ ಮುಖಂಡರು ಪರೀಕ್ಷಾ ಕೇಂದ್ರದ ಸಮೀಪ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW ————————————
ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ ಪಾನ್ ಉಗುಳಿದ ಪ್ರಯಾಣಿಕನೊಬ್ಬನಿಗೆ ಬಿಎಂಆರ್ಸಿಎಲ್ ದಂಡ ವಿಧಿಸಿದೆ. ಮೇ 2 ರಂದು ಸಂಜೆ 6.30 ಕ್ಕೆ ದೊಡ್ಡಕಲ್ಲಸಂದ್ರ ಗ್ರೀನ್ ಲೈನ್ ಮೆಟ್ರೋ ನಿಲ್ದಾಣದ ಪ್ಲಾಟ್ ಫಾರ್ಮ್ 1 ರ ಲಿಫ್ಟ್ ಬಳಿ ಪ್ರಯಾಣಿಕ ಪಾನ್ ಮಸಾಲ ಜಗಿದು ಉಗುಳುತ್ತಿದ್ದ. ಈ ವೇಳೆ ಪ್ರಯಾಣಿಕನಿಗೆ ಮೆಟ್ರೋ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಮೆಟ್ರೊ ಆವರಣದಲ್ಲಿ ಉಗುಳುವುದು ಮತ್ತು ಕಸದಂಚುಗಳನ್ನು ಎಸೆಯುವುದು ಪರಿಸರ ಹಾಳಾಗುವುದಲ್ಲದೆ, ಇತರ ಪುಯಾಣಿಕರ ಆರೋಗ್ಯಕ್ಕೂ ಅಪಾಯವನ್ನು ಉಂಟುಮಾಡುತ್ತದೆ. ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ಸ್ವಚ್ಛ, ಆರೋಗ್ಯಕರ ಮತ್ತು ಸುರಕ್ಷಿತ ಸಾರ್ವಜನಿಕ ಸಾರಿಗೆಯ ವ್ಯವಸ್ಥೆಗಾಗಿ ಕಟಿಬದ್ಧವಾಗಿದೆ. ಸ್ವಚ್ಛತಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಪ್ರಯಾಣಿಕರು ಸಹಕರಿಸಿ, ಇಂತಹ ಘಟನೆಗಳು ಸಂಭವಿಸಿದರೆ ತಕ್ಷಣವೇ ಮೆಟ್ರೊ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಬಿಎಂಆರ್ಸಿಎಲ್ ಭಾನುವಾರ ಪ್ರಕಟಣೆಯಲ್ಲಿ ಮನವಿ ಮಾಡಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…
ಹಾವೇರಿ: ಕುಸುಮ್ ಯೋಜನೆ ಮೂಲಕ ಪ್ರತಿ ತಾಲ್ಲೂಕಿನಲ್ಲಿ 20 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆ ಮಾಡಿ ಇದರಿಂದ ಹಗಲು ಹೊತ್ತಿನಲ್ಲಿಯೇ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡಲು ಸರ್ಕಾರ ತೀರ್ಮಾನಿಸಲಾಗಿದೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಅಕ್ಕಿ ಆಲೂರಿನಲ್ಲಿ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಮಾಜಿ ಸಿಎಂ ಬಂಗಾರಪ್ಪ ಅವರ ಅವಧಿಯಲ್ಲಿ ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡಲಾಯಿತು. 2013 ರ ಕಾಂಗ್ರೆಸ್ ಸರ್ಕಾರದ ವೇಳೆ ನಾನು ಇಂಧನ ಸಚಿವನಾಗಿದ್ದಾಗ ರೈತರ ಪಂಪ್ ಸೆಟ್ ಗಳಿಗೆ ನೀಡುವ ತ್ರೀ ಫೇಸ್ ವಿದ್ಯುತ್ ಪೂರೈಕೆಯನ್ನು 6 ಗಂಟೆಯಿಂದ 7 ಗಂಟೆಗೆ ಹೆಚ್ಚಳ ಮಾಡಲಾಯಿತು ಎಂದು ಹೇಳಿದರು. 665.75 ಕೋಟಿ ಹಣವನ್ನು ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ನೀಡುತ್ತಿದ್ದೇವೆ. 418 ಕೋಟಿ ವೆಚ್ಚದಲ್ಲಿ ಬಾಳಂಬೀಡು ಹಾಗೂ ಇತರೇ 72 ಗ್ರಾಮಗಳ 162 ಕೆರೆಗಳು. 116 ಕೋಟಿ ವೆಚ್ಚದಲ್ಲಿ…
ಬೆಂಗಳೂರು: ಕನ್ನಡ ಅಭಿಮಾನವನ್ನು ಪಹಲ್ಗಾಮ್ ಉಗ್ರರ ದಾಳಿಗೆ ಹೋಲಿಸಿದ ಗಾಯಕ ಸೋನು ನಿಗಮ್ ವಿರುದ್ಧ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇದರ ನಡುವೆಯೇ ಸೋನು ನಿಗಮ್ ವಿರುದ್ಧ ಸಮನ್ಸ್ ಜಾರಿ ಮಾಡಲು ಪೊಲೀಸರು ಮುಂದಾಗಿದ್ದಾರೆ. ಬೆಂಗಳೂರಿನ ಕಾಲೇಜು ಒಂದರಲ್ಲಿ ನಡೆದ ಈವೆಂಟ್ ಕಾರ್ಯಕ್ರಮದಲ್ಲಿ ಗಾಯಕ ಸೋನು ನಿಗಮ್ ‘ಕನ್ನಡ ಹಾಡು ವಿನಂತಿ ಮಾಡಿದಕ್ಕೆ ಪಹಲ್ಲಾಮ್ನಲ್ಲಿ ಆಗಿದ್ಯಲ್ಲ.. ಅದಕ್ಕೆ ಇದೇ ಕಾರಣ ಎಂದಿದ್ದರು. ಈ ಹೇಳಿಕೆ ಬೆನ್ನಲ್ಲೇ ಸೋನು ನಿಗಮ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ತನಿಖಾ ಅಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW ————————————
ಪಾವಗಡ: ರಾಷ್ಟೀಯ ಗೋರ್ ಸಿಕವಾಡಿ & ಗೋರ್ ಸೇನಾ ಸಂಘಟನೆ ಹಾಗೂ ಭೀಮಾಸತಿ ಗ್ರಾಮೀಣಾಭಿವೃದ್ಧಿ ಮತ್ತು ಯುವಕರ ಸಬಲೀಕರಣ ಸಂಸ್ಥೆ(ರಿ.) ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಎಲ್ಲಾ ಬಂಜಾರ ತಾಂಡಾಗಳಲ್ಲಿ ಪರಿಶಿಷ್ಟ ಜಾತಿಗಳ ಉಪವರ್ಗೀಕರಣ (ಒಳಮೀಸಲಾತಿ) ಸಮೀಕ್ಷೆಯ ಕುರಿತು ಜನಜಾಗೃತಿ ಹಾಗೂ ಸಮಾಲೋಚನ ಅಭಿಯಾನ ನಡೆಯಿತು. ಪ್ರತಿ ತಾಂಡದಲ್ಲಿ ಜಾತಿ ಸಮೀಕ್ಷೆಯ ಉದ್ದೇಶ, ಅಗತ್ಯ ಮಾಹಿತಿ , ತಾಂಡಾದ ಪ್ರತಿ ಮನೆಯೂ, ಕುಟುಂಬದ ಸದಸ್ಯನೂ ಅವರು ಎಲ್ಲೇ ಇದ್ದರೂ, ಈ ಒಂದು ಸಮೀಕ್ಷೆ ಯಿಂದ ಹೊರಗುಳಿಯಬಾರದು ಹಾಗೂ ಉಪಜಾತಿ ಕಾಲಂನಲ್ಲಿ ಕಡ್ಡಾಯವಾಗಿ ಲಂಬಾಣಿ ಎಂದು ಬರೆಸಲು ಮಾಹಿತಿ ನೀಡಲಾಯಿತು. ಪ್ರತಿ ತಾಂಡಾದ ಹಿರಿಯರು , ಯುವಕರು & ಮಹಿಳೆಯರು ತುಂಬಾ ಒಳ್ಳೆಯ ಸಂದೇಶ, ಕೆಲಸ ಮಾಡುತ್ತಿದ್ದೀರಿ ತಮಗೆ ಧನ್ಯವಾದಗಳು ತಿಳಿಸಿದರು. ಅವರಿಗೆಲ್ಲರಿಗೂ ಅಭಾರಿ ಯಾಗಿರುತ್ತೇವೆ ಎಂದರು. ತಾಂಡಾಗಳ ನಾಯಕ್ , ಡಾವೋ, ಕಾರಬಾರಿ & ಪ್ರತಿನಿಧಿಗಳು , ವಿದ್ಯಾವಂತ ಯುವಕ, ಯುವತಿಯರು ಈ ಸಮೀಕ್ಷೆಯನ್ನು ತಮ್ಮ ಸ್ವಂತ ಕೆಲಸವೆಂದು ತಿಳಿದು ತಮ್ಮ…
ತುಮಕೂರು: ಮಂಗಳೂರು ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ನಿಷ್ಕ್ರಿಯ ಆದಾಗ ಎನ್ ಐಎ ಮತ್ತು ಕೇಂದ್ರ ಸರಕಾರ ಮಧ್ಯೆ ಪ್ರವೇಶಿಸಲಿದೆ. ಅಂತಹ ಆರೋಪಿಗಳನ್ನು ರಕ್ಷಣೆ ಮಾಡುವುದನ್ನು ರಾಜ್ಯ ಸರಕಾರ ಬಿಡಬೇಕು. ಮನುಷ್ಯನ ಜೀವವನ್ನು ತೆಗೆಯುತ್ತೇವೆ ಎಂಬುವರ ಮೇಲೆ ಅನುಕಂಪ ತೋರಿಸಬಾರದು. ಪಹಲ್ಗಾಮ್ ಘಟನೆಗೆ ಸಂಬಂಧಿಸಿದಂತೆ ತೆಗೆದುಕೊಂಡ ಕಠಿಣ ಕ್ರಮವನ್ನು ಮಂಗಳೂರು ಘಟನೆಗೂ ತೆಗೆದುಕೊಳ್ಳಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಮಾತನಾಡಿದ ಅವರು, ಮುಲಾಜಿಲ್ಲದೆ ಗೃಹ ಸಚಿವ ತಮ್ಮ ಅನುಭವವನ್ನು ಇದ್ರಲ್ಲಿ ತೋರಿಸಬೇಕು. ಇಲ್ಲದಿದ್ದರೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಗೊತ್ತಾಗದಿದ್ದಲ್ಲಿ ಕೇಂದ್ರ ಸರಕಾರ ಪತ್ರ ಬರೆಯಲಿ, 10 ನಿಮಿಷದಲ್ಲಿ ಕ್ರಮ ಆಗಲಿದೆ ಎಂದರು. ಕೆಲ ಅಯೋಗ್ಯರು, ದೇಶಕ್ಕೆ ಮಾರಕವಾಗಿರ ಬಗ್ಗೆ ಮೃಧು ಧೋರಣೆ ಅನುಸರಿಸಿದರೆ ಬಹಳ ಕಷ್ಟವಾಗಲಿದೆ. ಆರೋಪಿಗಳು ಎಷ್ಟೆ ದೊಡ್ಡವರಾದ್ರೂ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು. ರಾಜ್ಯ ಸರಕಾರ ಮಾತನಾಡುವುದನ್ನು ಕಡಿಮೆ ಮಾಡಿ, ಆರೊಪಿಗಳನ್ನು ಸರಿಯಾದ…
ತುಮಕೂರು: ನೀಟ್ ಎಕ್ಸಾಮ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಬಳಿ ಕೆಲವು ಮಾನದಂಡಗಳನ್ನು ಪರೀಕ್ಷಾ ಸಿಬ್ಬಂದಿಗಳು ಅನುಸರಿಸುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ. ವಿದ್ಯಾರ್ಥಿನಿಯರ ಕಿವಿಯೋಲೆ ಹೇರ್ ಕ್ಲಿಪ್, ಪೆನ್ನುಗಳು ಸೇರಿದಂತೆ ಅನೇಕ ವಸ್ತುಗಳನ್ನು ಪರೀಕ್ಷಾ ಸಿಬ್ಬಂದಿಗಳು ತೆಗೆಸುತ್ತಿರುವ ದೃಶ್ಯ ಕಂಡು ಬಂದಿತು. ಪರೀಕ್ಷಾ ಕೊಠಡಿಯೊಳಗೆ ತೆರಳುವ ವಿದ್ಯಾರ್ಥಿಗಳ ಸಂಪೂರ್ಣ ಪರಿಶೀಲನೆಯನ್ನು ಪೊಲೀಸ್ ಸಿಬ್ಬಂದಿಗಳು ಮಾಡುತ್ತಿದ್ದಾರೆ. ನೀಟ್ ಎಕ್ಸಾಮ್ ಬರೆಯಲು ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ನಿರಾಕರಿಸಲಾಯಿತು. ಅಲ್ಲದೆ ಬೇರೆ ಪ್ಯಾಂಟ್ ಧರಿಸಿ ಬರುವಂತೆ ಪರೀಕ್ಷಾ ಸಿಬ್ಬಂದಿಗಳು ಸೂಚಿಸಿದ ನಂತರ ತಕ್ಷಣ ಮನೆಗೆ ವಾಪಸ್ ತೆರಳಿ ಬೇರೆ ಪ್ಯಾಂಟ್ ಧರಿಸಿ ವಿದ್ಯಾರ್ಥಿಯೋ ಬಂದು ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸಿದ ಘಟನೆ ನಡೆದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW ————————————
ತುಮಕೂರು: ನಗರದ ಮಹಾಲಕ್ಷ್ಮಿ ಬಡಾವಣೆ ವಾಸಿ ಶಿವಣ್ಣ ಟೈರ್ಸ್ ಮಾಲಿಕರಾದ ಕಾರ್ತಿಕ್ ರವರ ಕಟ್ಟಡ ಕಾರ್ಮಿಕರ ಶೆಡ್ ನಲ್ಲಿ ಕಾಣಿಸಿಕೊಂಡ 43 ಕೊಳಕುಮಂಡಲ (ರಸೆಲ್ಸ್ ವೈಪರ್) ಮರಿಗಳು ಹಾಗೂ 4 ಅಡಿ ಉದ್ದದ ತಾಯಿ ಕೊಳಕುಮಂಡಲ ಹಾವು ಕಾಣಿಸಿಕೊಂಡಿದೆ. ಈ ಹಾವುಗಳು ನವೆಂಬರ್ ಡಿಸೆಂಬರ್ ನಲ್ಲಿ ಮಿಲನಗೊಂಡು ಪೂರ್ವ ಮುಂಗಾರು ಸಮಯದಲ್ಲಿ ಸಂತಾನೋತ್ಪತಿ ಮಾಡುತ್ತವೆ. ಕೊಳಕುಮಂಡಲ ಹಾವುಗಳು (Ovoviviparous) ಅಂದರೆ ತಾಯಿಯ ದೇಹದೊಳಗೆ ಮೊಟ್ಟೆಗಳು ಬೆಳೆದು ಹೊಟ್ಟೆ ಒಳಗಿನಿಂದಲೆ ಜೀವಂತ ಮರಿಗಳು ಹೊರಬಂದಿವೆ. ಈ ವಿಷಯ ತಿಳಿದ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯ (ವಾರ್ಕೊ) ಉರಗ ರಕ್ಷಕರಾದ ಚಂದನ್, ಮನು ಅಗ್ನಿವಂಶಿ ಮತ್ತು ಕಾರ್ತಿಕ್ ಸಿಂಗ್ ರವರು ಸುರಕ್ಷಿತವಾಗಿ ಹಾವಿನ ಮರಿಗಳನ್ನು ರಕ್ಷಸಿ ಸಮೀಪದ ದೇವರಾಯನ ದುರ್ಗಾ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ತುಮಕೂರು ನಗರ ಹಾಗೂ ಹೊರವಲಯಗಳಲ್ಲಿ ಈ ಪ್ರಕ್ರಿಯೆ ಪ್ರಸ್ತುತ ಪ್ರಾರಂಭವಾಗಿದ್ದು ಸಾರ್ವಜನಿಕರು ಹೆಚ್ಚು ಜಾಗೃತವಾಗಿರಬೇಕು, ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಸಂಜೆ ಕತ್ತಲು ಸಮಯದಲ್ಲಿ ಟಾರ್ಚ್…
ತುಮಕೂರು: ಜಿಲ್ಲೆಯ ವಿವಿಧ ಪ್ರದೇಶಗಳ ತೆಂಗಿನ ತೋಟಗಳಲ್ಲಿ ರೋಗೋಸ್ ಬಿಳಿ ನೊಣ ಬಾಧೆಯು ಹೆಚ್ಚಾಗಿ ಕಂಡು ಬರುತ್ತಿದ್ದು, ರೋಗವನ್ನು ಸಮಗ್ರವಾಗಿ ಹತೋಟಿ ಮಾಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತೋಟಗಾರಿಕೆ ಇಲಾಖೆ ಸಲಹೆ ನೀಡಿದೆ. ರೋಗದಿಂದ ಹಾನಿಯ ಲಕ್ಷಣಗಳು : ಬಿಳಿನೊಣದ ಪ್ರೌಢಕೀಟವು ಇತರೆ ಸಾಮಾನ್ಯ ಬಿಳಿನೊಣ ಗಳಿಗಿಂತ ಮೂರುಪಟ್ಟು ದೊಡ್ಡದಾಗಿರುತ್ತದೆ. ಹೆಣ್ಣು ಬಿಳಿನೊಣವು ಎಲೆಯ ಕೆಳಭಾಗದಲ್ಲಿ ವೃತ್ತಾಕಾರವಾಗಿ ಮೊಟ್ಟೆಯನ್ನು ಇಡುತ್ತದೆ. ಕೀಟವು ಹಳದಿ ಮೈಬಣ್ಣ ಹೊಂದಿದ್ದು, ಬಿಳಿಬಣ್ಣದ ರೆಕ್ಕೆಗಳ ಹಿಂಬದಿಯಲ್ಲಿ ಕಪ್ಪಾದ ಮಚ್ಚೆಗಳಿರುತ್ತದೆ. ಮರಿಗಳು ಹಾಗೂ ಪ್ರೌಢಕೀಟಗಳು ಎಲೆಗಳಿಂದ ರಸ ಹೀರುತ್ತವೆ. ಕೀಟಗಳು ಸಿಹಿಯಾದ ಅಂಟು ದ್ರಾವಣವನ್ನು ವಿಸರ್ಜನೆ ಮಾಡುವುದರಿಂದ ಬೂದುಬಣ್ಣದ ಶಿಲೀಂದ್ರ ಬೆಳೆದು ಎಲೆಗಳು ಕಪ್ಪುಬಣ್ಣಕ್ಕೆ ತಿರುಗುತ್ತವೆ. ಹತೋಟಿ ಕ್ರಮಗಳು : ತೆಂಗಿನ ತೋಟಗಳಲ್ಲಿ ಎಕರೆಗೆ 10ರಂತೆ ಹಳದಿ ಅಂಟಿನ ಬಲೆಗಳನ್ನು ಅಳವಡಿಸುವುದರಿಂದ ಅಥವಾ 5 ಮಿಲಿ ಬೇವಿನಎಣ್ಣೆ ಮತ್ತು 0.5 ಗ್ರಾಂ ಸಾಬೂನು ಪುಡಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ 15 ದಿನಗಳ ಅಂತರದಲ್ಲಿ ಮೂರು ಬಾರಿ ಸಿಂಪಡಣೆ…