ತುಮಕೂರು: ನೀಟ್ ಎಕ್ಸಾಮ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಬಳಿ ಕೆಲವು ಮಾನದಂಡಗಳನ್ನು ಪರೀಕ್ಷಾ ಸಿಬ್ಬಂದಿಗಳು ಅನುಸರಿಸುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ.
ವಿದ್ಯಾರ್ಥಿನಿಯರ ಕಿವಿಯೋಲೆ ಹೇರ್ ಕ್ಲಿಪ್, ಪೆನ್ನುಗಳು ಸೇರಿದಂತೆ ಅನೇಕ ವಸ್ತುಗಳನ್ನು ಪರೀಕ್ಷಾ ಸಿಬ್ಬಂದಿಗಳು ತೆಗೆಸುತ್ತಿರುವ ದೃಶ್ಯ ಕಂಡು ಬಂದಿತು.
ಪರೀಕ್ಷಾ ಕೊಠಡಿಯೊಳಗೆ ತೆರಳುವ ವಿದ್ಯಾರ್ಥಿಗಳ ಸಂಪೂರ್ಣ ಪರಿಶೀಲನೆಯನ್ನು ಪೊಲೀಸ್ ಸಿಬ್ಬಂದಿಗಳು ಮಾಡುತ್ತಿದ್ದಾರೆ. ನೀಟ್ ಎಕ್ಸಾಮ್ ಬರೆಯಲು ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ನಿರಾಕರಿಸಲಾಯಿತು.
ಅಲ್ಲದೆ ಬೇರೆ ಪ್ಯಾಂಟ್ ಧರಿಸಿ ಬರುವಂತೆ ಪರೀಕ್ಷಾ ಸಿಬ್ಬಂದಿಗಳು ಸೂಚಿಸಿದ ನಂತರ ತಕ್ಷಣ ಮನೆಗೆ ವಾಪಸ್ ತೆರಳಿ ಬೇರೆ ಪ್ಯಾಂಟ್ ಧರಿಸಿ ವಿದ್ಯಾರ್ಥಿಯೋ ಬಂದು ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸಿದ ಘಟನೆ ನಡೆದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————