Subscribe to Updates
Get the latest creative news from FooBar about art, design and business.
- ತುಮಕೂರು–ಬೆಂಗಳೂರು ಮೆಟ್ರೋ ಸಂಪರ್ಕ ಯೋಜನೆ: ಕೇಂದ್ರದ ಅನುಮತಿಗೆ ರಾಜ್ಯ ಸರ್ಕಾರ ಪತ್ರ!
- ಅಂಗನವಾಡಿ ಮೇಲ್ಛಾವಣಿಯ ಸಿಮೆಂಟ್ ಪ್ಲಾಸ್ಟರ್ ಕುಸಿತ: ನಾಲ್ವರು ಮಕ್ಕಳು, ಕಾರ್ಯಕರ್ತೆಗೆ ಗಾಯ
- RSS ಅಷ್ಟೊಂದು ಉತ್ತಮವಾಗಿದ್ದರೆ, ಬಿಜೆಪಿ ನಾಯಕರ ಮಕ್ಕಳು ಏಕೆ ಸ್ವಯಂ ಸೇವಕರಾಗುತ್ತಿಲ್ಲ?: ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ
- ಸತ್ತವರು ಬೇಟೆಗಾರರಲ್ಲ, ರೈತರು: ಹನೂರು ಶೂಟೌಟ್ ಪ್ರಕರಣದಲ್ಲಿ ಅರಣ್ಯ ಸಿಬ್ಬಂದಿ ವಿರುದ್ಧ ಮೃತರ ಕುಟುಂಬಸ್ಥರ ಗಂಭೀರ ಆರೋಪ
- ತುಮಕೂರಿಗೆ ಏರ್ ಪೋರ್ಟ್, ಮೆಡಿಕಲ್ ಕಾಲೇಜು: ಶೀಘ್ರ ಸಿಎಂ ಭೇಟಿ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
- 80ನೇ ಸ್ವಾತಂತ್ರ್ಯ ದಿನಾಚರಣೆ: ಹುತಾತ್ಮರ ಕನಸಿನ ಭಾರತ ನಿರ್ಮಿಸಲು ವಿದ್ಯಾರ್ಥಿಗಳಿಂದ ಪ್ರತಿಜ್ಞೆ!
- ಗಿರಿನಗರ ಸರ್ಕಾರಿ ಶಾಲೆ ಅಭಿವೃದ್ಧಿಗೆ ₹1 ಲಕ್ಷ ದೇಣಿಗೆ ಘೋಷಿಸಿದ ಸಮಾಜ ಸೇವಕ ಸದಾನಂದ
- ಪ್ರಾಣತ್ಯಾಗ ಬಲಿದಾನದಿಂದ ಬಂದ ಸ್ವಾತಂತ್ರ್ಯವನ್ನ ಇವತ್ತೀನ ಯುವ ಪೀಳಿಗೆ ಅರಿಯಬೇಕು: ತಹಶೀಲ್ದಾರ್ ಮಂಜುನಾಥ್
Author: admin
ಕೊರಟಗೆರೆ: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾಗಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರು ಮುಖ್ಯಮಂತ್ರಿ ಕುರ್ಚಿ ಕಿತ್ತಾಟದಲ್ಲೇ ಕಾಲಹರಣ ಮಾಡುತ್ತಾ ರೈತರ ಮತ್ತು ಸಾರ್ವಜನಿಕರಿಗೆ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ, ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ತಾಲ್ಲೂಕು ಬಿಜೆಪಿ ಮಂಡಲಾಧ್ಯಕ್ಷ ರುದ್ರೇಶ್ ಆಕ್ರೋಶ ವ್ಯಕ್ತ ಪಡಿಸಿದರು. ಅವರು ಕೊರಟಗೆರೆ ಪಟ್ಟಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಮತ್ತು ಜನ ವಿರೋಧಿ ಆಡಳಿತ ನಡೆಸುತ್ತಿರುವ ಬಗ್ಗೆ ಮತ್ತು ಸೂಕ್ತ ಬೆಂಬಲ ಬೆಲೆ ಘೋಷಣೆ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ತಹಶೀಲ್ದಾರ್ ಕೆ.ಮಂಜುನಾಥ್ ಮೂಲಕ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಅಧಿಕಾರ ಕುರ್ಚಿಗಾಗಿ ಸಿಎಂ ಮತ್ತು ಡಿಸಿಎಂ ಕಿತ್ತಾಡುತ್ತಿದ್ದು, ರಾಜ್ಯದ ಜನರನ್ನು ಮರೆತಿದ್ದಾರೆ ಜನ ವಿರೋಧಿ ಆಡಳಿತದಿಂದ ಸಾರ್ವಜನಿಕರು ಬೇಸತ್ತಿದ್ದು ನಿಮಗೆ ಬುದ್ದಿ ಕಲಿಸುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದ…
ಸರಗೂರು: ಎಐಸಿಸಿ ಅಧ್ಯಕ್ಷ ದಲಿತ ಬಲಗೈ ಸಮುದಾಯದ ಪ್ರಮುಖ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಸುನೀಲ್ ಬೋಸ್ ಅಭಿಮಾನಿಗಳ ಬಳಗದ ತಾಲೂಕು ಅಧ್ಯಕ್ಷ ದೇವಲಾಪುರ ಸಿದ್ದರಾಜು ಆಗ್ರಹಿಸಿದರು. ಪಟ್ಟಣದಲ್ಲಿ ಶನಿವಾರದಂದು ಪತ್ರಿಕೆ ಪ್ರಕಟಣೆಯಲ್ಲಿ ಮಾತನಾಡಿದ ಅವರು, ‘ಆಯಾ ಸಮುದಾಯದ ಹಿತ ಕಾಪಾಡಬೇಕಾದದ್ದು ಆಯಾ ಸಮಾಜದ ಮುಖಂಡರ ಕರ್ತವ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದಿದ್ದಾರೆ. ಅದೇ ರೀತಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಮೈಸೂರು ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಎಸ್.ಸಿ.ಮಹದೇವಪ್ಪ ರವರು ಮುಖ್ಯಮಂತ್ರಿ ಬಲಗೈ ಸಮಾಜಕ್ಕೆ ಅನುಕೂಲ ಮಾಡಬೇಕು ಎಂದು ಮನವಿ ಸಲ್ಲಿಸುತ್ತೇನೆ. ದಲಿತ ಬಲಗೈ ಸಮುದಾಯದ ಮುಖಂಡ ಹಾಗೂ ಸುನೀಲ್ ಬೋಸ್ ಅಭಿಮಾನಿಗಳ ಬಳಗದ ಅಧ್ಯಕ್ಷಯಾಗಿ ಬಲಗೈ ಸಮುದಾಯದ ಪರವಾಗಿ ಹಕ್ಕೊತ್ತಾಯ ಮಾಡುತ್ತಿದ್ದೇನೆ ಎಂದರು. ಮುಖ್ಯಮಂತ್ರಿ ಬದಲಾವಣೆ ವಿಚಾರ ಚರ್ಚೆಯಲ್ಲಿದೆ. ದಲಿತ ಮುಖ್ಯಮಂತ್ರಿ ವಿಚಾರ ಬಂದರೆ ಬಲಗೈ ಸಮುದಾಯಕ್ಕೆ ಅವಕಾಶ ನೀಡಬೇಕು…
ತುಮಕೂರು: ಕರ್ನಾಟಕ ಎಲ್ಲಾ ಕಾಲದಿಂದಲೂ ವೈವಿಧ್ಯಮಯ ಪ್ರದೇಶ, ಇಲ್ಲಿಗೆ ಬಂದು ನೆಲೆಸಲು, ಕಾರ್ಯ ನಿರ್ವಹಿಸಲು ಎಲ್ಲ ರಾಜ್ಯದ ಜನರು, ಉನ್ನತ ಹಂತದ ಅಧಿಕಾರಿಗಳು ಇಷ್ಟಪಡುತ್ತಾರೆ ಎಂದರೆ ಇಲ್ಲಿ ನೆಲೆಸಿರುವ ಶಾಂತಿ, ಸೌಹಾರ್ದತೆ, ಜನರ ತಾಳ್ಮೆ, ಪ್ರೀತಿಯ ಮನೋಭಾವನೆ ಕಾರಣ ಎಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಧಿಕಾರಿಗಳಾದ ಬಿ. ನಂಜುಂಡಪ್ಪ ಹೇಳಿದರು. ಶ್ರೀ ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯ ತುಮಕೂರು ಇಲ್ಲಿ ನಡೆದ ವೈಭವದ ಕನ್ನಡ ರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಭಾಷೆಯ ಬಗ್ಗೆ ಅತೀ ಹೆಚ್ಚು ಸಂಶೋಧನೆ, ಅಧ್ಯಯನ ನಡೆದಿರುವುದು ಕೂಡ ಕನ್ನಡ ಭಾಷೆಯ ಬಗ್ಗೆ ಮಾತ್ರವೇ, ಅದನ್ನು ಅರಿಯುವ, ಪಸರಿಸುವ ಜವಾಬ್ದಾರಿ ನಮ್ಮದು. ಪ್ರೋಟೊ ದ್ರಾವಿಡ ಭಾಷೆಯಿಂದ ಪಂಚ ದ್ರಾವಿಡ ಭಾಷೆ ಹುಟ್ಟಿದೆ, ಅದರ ಇತಿಹಾಸ, ಮೂಲವನ್ನು ಮತ್ತು ಬೆಳವಣಿಗೆ ಬಗ್ಗೆ ನಾವೆಲ್ಲ ತಿಳಿಯಬೇಕು ಎಂದರು. ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಶಿಕ್ಷಣಾಧಿಕಾರಿಗಳಾದ ಹೆಚ್.ತಿಪ್ಪೇಸ್ವಾಮಿ ಅವರು ದಾಸ ಶ್ರೇಷ್ಠ ಕನಕದಾಸರ ಜನ್ಮ ವೃತ್ತಾಂತ, ಅವರ ಸಾರ್ಥಕ ಜೀವನ…
ತುಮಕೂರು: ಕಾರ್ಮಿಕ ಇಲಾಖೆ ಅಧಿಕಾರಿಗಳು ನಿಯಮಿತವಾಗಿ ತಪಾಸಣೆ ನಡೆಸಿ ಬಾಲ ಕಾರ್ಮಿಕರನ್ನು ರಕ್ಷಿಸಿ, ಪುನರ್ವಸತಿ ಕಲ್ಪಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ನಿರ್ದೇಶಿಸಿದರು. ನಗರದ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಗುರುವಾರ ನಡೆದ ಮಕ್ಕಳು ಮತ್ತು ಹದಿಹರೆಯದವರ ಕಾರ್ಮಿಕ ಪದ್ಧತಿ (ನಿಷೇಧ ಹಾಗೂ ನಿಯಂತ್ರಣ) ಕಾಯ್ದೆ–1986ರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಗ್ಯಾರೇಜ್, ಟೋಲ್, ಕಾರ್ಖಾನೆ, ಹೋಟೆಲ್, ಅಂಗಡಿ, ಮತ್ತಿತರ ಅಪಾಯಕಾರಿ ಉದ್ಯೋಗದ ಸ್ಥಳಗಳಲ್ಲಿ ತಪಾಸಣೆ ಹೆಚ್ಚಿಸಬೇಕು. ತಪಾಸಣೆ ತೀವ್ರವಾದರೆ ಬಾಲ ಕಾರ್ಮಿಕರನ್ನು ಕೆಲಸದಲ್ಲಿ ತೊಡಗಿಸಿಕೊಳ್ಳಲು ಉದ್ಯೋಗದಾತರು ಹೆದರುತ್ತಾರೆ. ಪತ್ತೆ ಹಚ್ಚಿದ ಬಾಲ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಿ ಮುಖ್ಯವಾಹಿನಿಗೆ ತಂದರೆ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಬಾಲ ಕಾರ್ಮಿಕರ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಮಕ್ಕಳು ಬಾಲಕಾರ್ಮಿಕರಾಗುವುದನ್ನು ತಪ್ಪಿಸಬಹುದು. ಇಲ್ಲವಾದರೆ ಕೊನೆಯವರೆಗೂ ಕಾರ್ಮಿಕರಾಗಿಯೇ ಉಳಿದುಬಿಡುತ್ತಾರೆ ಎಂದು ಎಚ್ಚರಿಸಿದರು. ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ವಾಹನಗಳಲ್ಲಿ ಬಾಲ ಕಾರ್ಮಿಕರ ನಿಷೇಧ…
ಔರಾದ: ತಾಲೂಕಿನ ಬೆಳಕುಣಿ ಚೌದ್ರಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸ.ಪ್ರಾ ಶಾಲೆ ಬೆಳಕುಣಿ ಚೌದ್ರಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ತಾಲೂಕು ನೋಡೆಲ್ ಅಧಿಕಾರಿ ಸಂಜಯ ಮೆತ್ರೆ, ಎಲ್ಲ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗೆ ಅನುಗುಣವಾಗಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಪಂಢರಿ ಅಡೆ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಬೋಧನೆ ನೀಡುವ ಮೂಲಕ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಮಹೇಶ್ ಎಸ್.ಡಿ.ಎಂ.ಸಿ ಅಧ್ಯಕ್ಷ, ಪ್ರೌಢ ಶಾಲೆ ಎಸ್.ಡಿ.ಎಮ್.ಸಿ ಅಧ್ಯಕ್ಷ ಎಂ.ಡಿ ನಯುಮ್, ಪಂಚಾಯತ ಸದಸ್ಯ ದೇವಿದಾಸ್ ಧುಳೆ, ಸಂತೋಷ ರೆಡ್ಡಿ, ಸಚಿನ ಶಿಂಧೆ, ವಿವೇಕಾನಂದ್ ಢಗೆ, ಬಿ.ಆ.ಪಿ.ನಾಯ್ಮೊದ್ದಿನ, ಸಿ.ಆ.ಪಿ.ಪ್ರಕಾಶ, ಪ್ರವೀಣ, ನವನಾಥ್ ಹಾಗೂ ಅಝೀಮ್ ಫ್ರೇಂಜಿ ಫೌಂಡೇಷನ್ ನೋಡಲ್ ಶಿವಾಜಿ ಹಾಗೂ ಸಂಜೀವನ್ ಬಿರಾದಾರ ಇವರು ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ಸಿ. ಆರ್. ಪಿ. ಸಂತೋಷ ರೆಡ್ಡಿ ಸ್ವಾಗತಿಸಿದರು. ಸೂತ್ರ ಸಂಚಲನ ಪ್ರಕಾಶ ದೇಶಮುಖ್…
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಉಡುಪಿಯಲ್ಲಿ ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಭಗವದ್ಗೀತೆಯ 15ನೇ ಅಧ್ಯಾಯದ 10 ಶ್ಲೋಕಗಳನ್ನು ಪಠಿಸಿದರು. ಬಳಿಕ ಮಾತನಾಡಿದ ಅವರು, ಶ್ರೀಕೃಷ್ಣನ ದಿವ್ಯ ದರ್ಶನದಿಂದ ಸಿಗುವ ಸಂತೃಪ್ತಿ, ಶ್ರೀಮದ್ಭಗವದ್ಗೀತೆಯ ಮಂತ್ರಗಳ ಆಧ್ಯಾತ್ಮಿಕ ಅನುಭವ ಮತ್ತು ಹಲವಾರು ಪೂಜ್ಯ ಸಂತರು ಮತ್ತು ಗುರುಗಳ ಉಪಸ್ಥಿತಿಯು ನನಗೆ ಒಂದು ದೊಡ್ಡ ಸೌಭಾಗ್ಯ. ನನಗೆ, ಇದು ಅಸಂಖ್ಯಾತ ಸದ್ಗುಣಗಳನ್ನು ಪಡೆದಂತೆ. ಇದನ್ನು ಪದಗಳಲ್ಲಿ ವರ್ಣಿಸಲಸಾಧ್ಯ. ನನ್ನೊಳಗಿನ ಈ ಭಾವನೆಗಳಿಂದ ನಾನು ವಿನಮ್ರನಾಗಿದ್ದೇನೆ ಮತ್ತು ನನ್ನ ಮೇಲೆ ಸುರಿಸಲಾದ ಆಶೀರ್ವಾದಗಳಿಗೆ ಕೃತಜ್ಞನಾಗಿದ್ದೇನೆ ಎಂದಿದ್ದಾರೆ. ಕೇವಲ ಮೂರು ದಿನಗಳ ಹಿಂದೆ ನಾನು ಗೀತೆಯ ನಾಡು ಕುರುಕ್ಷೇತ್ರದಲ್ಲಿದ್ದೆ. ಇಂದು, ಶ್ರೀಕೃಷ್ಣ ಪರಮಾತ್ಮನಿಂದ ಆಶೀರ್ವದಿಸಲ್ಪಟ್ಟ ಮತ್ತು ಜಗದ್ಗುರು ಶ್ರೀ ಮಧ್ವಾಚಾರ್ಯರಿಂದ ಪ್ರಸಿದ್ಧವಾದ ಈ ಭೂಮಿಗೆ ಭೇಟಿ ನೀಡಿ ಸಂತೃಪ್ತನಾಗಿದ್ದೇನೆ. ಈ ಶುಭ ಸಂದರ್ಭದಲ್ಲಿ ಲಕ್ಷಾಂತರ ಜನರು ಏಕಕಾಲದಲ್ಲಿ ಭಗವದ್ಗೀತೆ ಶ್ಲೋಕಗಳನ್ನು ಪಠಿಸುವಾಗ ಸಂಪೂರ್ಣ ವಿಶ್ವದ ಜನರು ಭಾರತದ ಸಹಸ್ರ ವರ್ಷಗಳ ದಿವ್ಯತೆಯ ಸಾಕ್ಷಾತ್ ದರ್ಶನ ಪಡೆದರು…
ಕೊರಟಗೆರೆ : ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ಪ್ರತಿಭೆಗಳಿದ್ದು ಅವುಗಳನ್ನು ಹೊರತರುವ ಪ್ರೋತ್ಸಾಹದ ಕೆಲಸವನ್ನು ನಾವೇಲ್ಲಾರು ಮಾಡಬೇಕಾಗಿದೆ ಎಂದು ತಹಶೀಲ್ದಾರ್ ಮಂಜುನಾಥ್ ತಿಳಿಸಿದರು. ಅವರು ಕೊರಟಗೆರೆ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿ, ಯಾವುದೇ ವ್ಯಕ್ತಿ ಮಹಾನ್ ವ್ಯಕ್ತಿಯಾಗಿ ರೂಪಗೊಳ್ಳಬೇಕಾದರೆ, ಅವನು ಆಧ್ಯಯನಶೀಲನಾಗಿ ಗುರಿಯನ್ನು ಇಟ್ಟುಕೊಂಡು ಶಕ್ತಿಯುತವಾಗಿ ಬೆಳೆಯುತ್ತಾ ಗುರುವಿನ ಮಾರ್ಗದರ್ಶನದಲ್ಲಿ ಮುನ್ನುಗ್ಗಬೇಕು, ಗ್ರಾಮೀಣ ಮಕ್ಕಳಲ್ಲಿ ಪ್ರತಿಭೆಗೆ ಕೊರತೆ ಇಲ್ಲ ಅವರಿಗೆ ಅವಕಾಶ ಕೊರತೆ ಇದ್ದು ಅದನ್ನು ಶಿಕ್ಷಕರು ಪೋಷಕರು ಮನಗೊಂಡು ಅವಕಾಶ ಮಾಡಿಕೊಡಬೇಕು ಎಂದರು. ಗೃಹ ಸಚಿವರ ವಿಶೇಷ ಅಧಿಕಾರಿ ಡಾ.ಕೆ.ನಾಗಣ್ಣ ಮಾತನಾಡಿ, ಗೃಹ ಸಚಿವರ ಕ್ಷೇತ್ರದಲ್ಲಿ ಉತ್ತಮ ಪ್ರತಿಭೆಗಳಿವೆ, ಅವರನ್ನು ಹೊರತಬೇಕಾಗಿದೆ ಮಕ್ಕಳಲ್ಲಿ ಪ್ರತಿಭೆ ಜೊತೆಯಲ್ಲಿ ಅವರಿಗೆ ಸಂವಿಧಾನ ಅರಿವು ಮಹತ್ವವನ್ನು ತಿಳಿಸಬೇಕು ಸಂವಿಧಾನ ಮುಂದೆ ಎಲ್ಲರೂ ಸಮಾನರು ಮಕ್ಕಳಲ್ಲಿ ಜಾತಿ ಧರ್ಮದ ವಿಷವನ್ನು ಬಿತ್ತಬಾರದು ಎಂದರು.…
ಪಾವಗಡ: ತುಮಕೂರು ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ದಿನಗೂಲಿ ನೌಕರರಿಗೆ ಕಳೆದ ಎಂಟು ತಿಂಗಳಿಂದ ವೇತನ ಸಿಕ್ಕಿಲ್ಲ ಹೀಗಾಗಿ ನೌಕರರ ಕುಟುಂಬಗಳ ನಿರ್ವಹಣೆ ಕಷ್ಟಕರವಾಗಿದೆ ಎಂದು ನೌಕರರು ಅಲವತ್ತುಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಂಭತ್ತು ನೌಕರರ ವೇತನ ನೀಡಿಲ್ಲ ಬೇರೆ ಇಲಾಖೆಗಳಲ್ಲಿ ದಿನಗೂಲಿ ನೌಕರರ ವೇತನ ನೀಡುತ್ತಿದ್ದಾರೆ. ಆದರೆ ಈ ಕಚೇರಿಯಲ್ಲಿ ಮಾತ್ರ ವೇತನ ನೀಡದೆ ತಡೆ ಹಿಡಿದಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ, ನಮ್ಮ ಎಂಟು ತಿಂಗಳ ವೇತನ ನೀಡಬೇಕು. ನಮ್ಮ ಜೀವನ ತುಂಬಾ ಕಷ್ಟಕರವಾಗಿದೆ. ತಕ್ಷಣವೇ ವೇತನ ಬಿಡುಗಡೆಗೊಳಿಸಿ ನಮ್ಮ ಜೀವನಮಟ್ಟ ಸುಧಾರಿಸಬೇಕೆಂದು ಒತ್ತಾಯಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ತುಮಕೂರು: ಕರ್ನಾಟಕ ಜನಪರ ವೇದಿಕೆ, ಸಿದ್ದಯ್ಯನರಸ್ತೆ, ಬೆಂಗಳೂರು ಇವರ ವತಿಯಿಂದ ನ.29ರಂದು ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ. ನ.30 ರಂದು ಸಂಜೆ 5:30ಕ್ಕೆ ಜೋಳಂಬಳ್ಳಿ, ಗೂಳೂರು ಹೋಬಳಿ ತುಮಕೂರು ಇಲ್ಲಿ ಕಬಡ್ಡಿ ಪಂದ್ಯಾವಳಿ ಮತ್ತು ವಾಲಿಬಾಲ್ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಡಿ.ಸಿ.ಗೌರಿಶಂಕರ್, ವೇದಿಕೆಯ ರಾಜ್ಯಾಧ್ಯಕ್ಷ ಸು.ಜಿ.ನೀಲೇಶ್ ಗೌಡ ಹಾಗೂ ಪದಾಧಿಕಾರಿಗಳು ಉಪಸ್ಥಿತರಿರುವರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಮಿಡಿಗೇಶಿ: ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮ ಪಂಚಾಯತಿಗೆ ಸೇರಿದ ಜೀರಿಗೆಹಳ್ಳಿ ಹಾಗೂ ನಲ್ಲೇಕಾಮನಹಳ್ಳಿ ಗ್ರಾಮದ ಹೊರವಲಯದಲ್ಲಿ ನೆಲೆಸಿರುವ ಶ್ರೀ ಪ್ರಸನ್ನಾಂಜನೇಯ ಮತ್ತು ಪಂಚಮುಖಿ ಆಂಜನೇಯಸ್ವಾಮಿಯವರಿಗೆ 28ನೇ ವರ್ಷದ ಶ್ರೀ ಹನುಮ ಜಯಂತಿ ಹಾಗೂ ಪವಮಾನ ಹೋಮ ಪೂಜಾ ಕಾರ್ಯಕ್ರಮ ಡಿ.2 ರಂದು ನಡೆಯಲಿವೆ. ವಿಶೇಷ ಆಹ್ವಾನಿತರಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ, ಶಾಸಕ ಕೆ.ಎನ್.ರಾಜಣ್ಣ, ವಿ.ಪ.ಸದಸ್ಯರಾದ ಆರ್.ರಾಜೇಂದ್ರ, ಮಾಜಿ ಜಿ.ಪಂ. ಅಧ್ಯಕ್ಷರಾದ ಶಾಂತಲಾ ರಾಜಣ್ಣ, ಟಿಎಪಿಸಿಎಂಎಸ್ ನ ಅಧ್ಯಕ್ಷರಾದ ಎಂ.ಎಸ್. ಮಲ್ಲಿಕಾರ್ಜುನಯ್ಯ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಉಪಾಧ್ಯಕ್ಷರಾದ ಜಿ.ಜೆ. ರಾಜಣ್ಣ ಭಾಗಿಯಾಗಲಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC