Subscribe to Updates
Get the latest creative news from FooBar about art, design and business.
- ಹಾವೇರಿ: ವಾಯವ್ಯ ಸಾರಿಗೆ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ – ಓರ್ವ ಪ್ರಯಾಣಿಕ ಸಾವು, 6 ಜನರಿಗೆ ಗಾಯ
- 100 ದಿನಗಳ ಸಾಧನೆ ತಿಳಿಯಲು 30 ಸಚಿವರು ಕನ್ನಡಿಯಲ್ಲಿ ಮುಖ ನೋಡಿಕೊಳ್ಳಿ: ಶಾಸಕ ಸುನೀಲ್ ಕುಮಾರ್ ವಾಗ್ದಾಳಿ
- ಮೈಸೂರು ದಸರಾ: ಸ್ತಬ್ಧಚಿತ್ರ ಪ್ರದರ್ಶನ 15 ಜಿಲ್ಲೆಗಳಿಗೆ ಸೀಮಿತ; ಡಿಸಿಎಂ ಪರಮೇಶ್ವರ್ ತವರು ತುಮಕೂರಿಗೆ ಅವಕಾಶವಿಲ್ಲ!
- ಕಾವೇರಿ ಜಲ ವಿವಾದ: CWMA ಆದೇಶ ಪಾಲನೆ ಮುಂದುವರಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ
- ಕೇಂದ್ರೀಯ ರೇಷ್ಮೆ ಮಂಡಳಿಯಲ್ಲಿ ಉದ್ಯೋಗಾವಕಾಶ: ಪದವಿಧರರಿಗೆ 17 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಅನುಕಂಪದ ಆಧಾರದ ಮೇಲೆ ನೇಮಕಗೊಂಡವರು ಉನ್ನತ ಹುದ್ದೆಗಳನ್ನು ಕೇಳುವಂತಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
- ಹಣಕಾಸು ಇಲಾಖೆಯ ಸಲಹೆ ರಾಜಕೀಯ ಮಾಡುವ ವಿಷಯವಲ್ಲ, ಬಿಜೆಪಿ ಪ್ರತಿಭಟಿಸಲಿ: ಡಿ.ಕೆ. ಶಿವಕುಮಾರ್ ತಿರುಗೇಟು
- ಮಧುಗಿರಿ: ಪೌತಿ ಖಾತೆಗೆ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ಅಧಿಕಾರಿ ನಾಗೇಶ್!
Author: admin
ಕೊರಟಗೆರೆ: ಪ್ರತಿನಿತ್ಯ ತಮ್ಮ ಕೂಲಿ ಕೆಲಸವನ್ನು ಬಿಟ್ಟು ಕಚೇರಿಗಳತ್ತ ಅಲೆದಾಡುವ ರೈತರ ಹಾಗೂ ಸಾರ್ವಜನಿಕರ ಕಷ್ಟಗಳನ್ನು ಆಲಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ತಹಶೀಲ್ದಾರ್ ನಾಹಿದ ಜಮ್ ಜಮ್ ಹೇಳಿದರು. ತಾಲ್ಲೂಕಿನ ಕೋಳಾಲ ಹೋಬಳಿಯ ವೀರಪುರ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳೇ ಖುದ್ದಾಗಿ ಹಳ್ಳಿಹಳ್ಳಿಗೆ ತಲುಪಿ ಜನರ ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ ಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇದರಿಂದಾಗಿ ಜನರು ತಾಲೂಕು ಕಚೇರಿಗೆ ಅಲೆಯುವುದು , ಅಧಿಕಾರಿಗಳಿಗಾಗಿ ಕಾಯುವುದು ತಪ್ಪುತ್ತದೆ ಎಂದರು. ಸಹಾಯಕ ಕೃಷಿ ನಿರ್ದೇಶಕರು ಹೆಚ್ ನಾಗರಾಜು ಮಾತನಾಡಿ, ನಮ್ಮ ತಾಲೂಕಿನ ರೈತರು ಬುದ್ಧಿವಂತರಾಗಿದ್ದಾರೆ ಅವರ ಜಮೀನುಗಳಲ್ಲಿ ಬೆಳೆಯುವ ಬೆಳೆಗಳಿಗೆ ಯಾವ ಯಾವ ಕಾಲದಲ್ಲಿ ಯಾವ ಬೆಳೆ ಬೆಳೆಯಬೇಕು ಎನ್ನುವುದರ ಮಾಹಿತಿ ನಮ್ಮ ಬಳಿ ತಿಳಿದುಕೊಳ್ಳುತ್ತಾರೆ. ಅದರಲ್ಲೂ ಇತ್ತೀಚಿಗೆ ವಿದ್ಯಾವಂತ ಯುವಕರು ಕೂಡ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಅವರ ನೂತನ ಶೈಲಿಯ…
ಹೆಚ್.ಡಿ.ಕೋಟೆ: ಪುರಸಭಾ ವ್ಯಾಪ್ತಿಯಲ್ಲಿ ಬರುವ ವಡ್ಡರಗುಡಿ ಹಾಡಿಯನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತನೆ ಮಾಡಲು ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಸೂಚನೆ ನೀಡಿದರು. ತಾಲೂಕಿನ ಹೊಸಹಳ್ಳಿ ಹಾಡಿ ವಿವೇಕಾನಂದ ಗಿರಿಜನ ಶೈಕ್ಷಣಿಕ ಕೇಂದ್ರದಲ್ಲಿ ಭಾನುವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಎರಡನೇ ದಿನದ ಗಿರಿಜನರ ಕುಂದುಕೊರತೆ ಸಮಾಲೋಚನೆ ಸಭೆಯಲ್ಲಿ ಗಿರಿಜನ ಮುಖಂಡರಿಂದ ಆಹುವಾಲು ಸ್ವೀಕರಿಸಿ ಮಾತನಾಡಿದರು. ವಡ್ಡರಗುಡಿ ಹಾಡಿಯನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತನೆ ಮಾಡದೆ ಪುರಸಭೆ ವ್ಯಾಪ್ತಿಗೆ ಸೇರಿಸಿರುವುದರಮದ ಹಾಡಿಯ ಜನರು ಮುಂದಿನ ದಿನಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ತೊಂದರೆ ಆಗುತ್ತದೆ ಹಾಗಾಗಿ ಶೀಘ್ರವಾಗಿ ಪರಿಶೀಲನೆ ನಡೆಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು. ಹಾಡಿಯ ಮುಖಂಡ ವಡ್ಡರಗುಡಿ ಚಿಕ್ಕಣ್ಣ ಮಾತನಾಡಿ, ಜಿಲ್ಲೆಯಲ್ಲಿ 125 ಹಾಡಿಗಳ ಪೈಕಿ ವಡ್ಡರಗುಡಿ ಹಾಡಿ ಒಂದನ್ನು ಪುರಸಭಾ ವ್ಯಾಪ್ತಿಗೆ ಸೇರಿಸಲಾಗಿದೆ. ಆದರೆ ಕಂದಾಯ ಗ್ರಾಮವನ್ನಾಗಿ ಸೇರ್ಪಡೆ ಮಾಡದೆ ಪುರಸಭೆ ಸೇರ್ಪಡೆ ಮಾಡಿರುವುದರಿಂದ 86 ಕುಟುಂಬಗಳಿಗೆ…
ಇಂದಿನ ಪತ್ರಿಕೆ ತಿರುವುತ್ತಿದ್ದೆ. ಶಾಲೆಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಾರಣ ಪರೀಕ್ಷೆಯಲ್ಲಿ ಚೀಟಿ ಇಟ್ಟಿದ್ದಳೆಂದು ಕ್ಲಾಸ್ ಟೀಚರ್ ಬೈದಿದ್ದರು. ಅವಮಾನ ತಾಳಲಾರದೆ ಮನೆಯಲ್ಲಿ ನೇಣುಬಿಗಿದುಕೊಂಡಿದ್ದಳು. ಪೋಷಕರು ಮತ್ತು ಊರವರು ಶಾಲೆಯ ಮುಂದೆ ವಿದ್ಯಾರ್ಥಿನಿಯ ಶವ ಇಟ್ಟು ಧರಣಿ ಕೂತಿದ್ದರು. ಅವರ ಬೇಡಿಕೆ ಸ್ಪಷ್ಟ “ಹುಡುಗಿಯ ಸಾವಿಗೆ ಟೀಚರೇ ಕಾರಣ, ಅವರನ್ನು ನಮ್ಮ ಕೈಗೆ ಕೊಡಿ” ಬಹುಶಃ ಕೈಗೆ ಸಿಕ್ಕರೆ ಮಗುವಿನೊಂದಿಗೆ ಟೀಚರನ್ನೂ ಸಮಾಧಿ ಮಾಡುವ ಯೋಚನೆ ಇರಬಹುದು. ಸ್ವಲ್ಪ ದಿನದ ಮುಂಚೆ ಇದೇ ರೀತಿಯ ಪ್ರಸಂಗ ನಡೆದಿತ್ತು. ಪರೀಕ್ಷೆಯಲ್ಲಿ ಚೀಟಿ ಇಟ್ಟು ಸಿಕ್ಕಿಬಿದ್ದ ಹುಡುಗನೊಬ್ಬನನ್ನು ಶಿಕ್ಷಕಿ ಹೊರಗೆ ನಿಲ್ಲುವಂತೆ ಸೂಚಿಸಿದ್ದರು. ಹುಡುಗ ನೇರ ಅಪಾರ್ಟ್ ಮೆಂಟ್ ಗೆ ತೆರಳಿ, ಕಟ್ಟಡದಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದ. ಕಾರಣ ಆತನಿಗೆ ಅದು ಸಹಿಸಲಾರದ ಅವಮಾನವಾಗಿತ್ತು. ಪೋಷಕರು ರೊಚ್ಚಿಗೆದ್ದು ಶಿಕ್ಷಕಿ ಮೇಲೆ ಕೇಸು ದಾಖಲಿಸಿದ್ದರು. ಈ ಎರಡೂ ಪ್ರಕರಣದಲ್ಲಿ ವಿದ್ಯಾರ್ಥಿಗಳು ಹತ್ತನೇ ತರಗತಿ ಕಲಿಯುತ್ತಿದ್ದರು. ಈ ಮೇಲಿನ ಎರಡು ಘಟನೆಗಳಲ್ಲದೆ ಇನ್ನೂ ನೂರಾರು ಘಟನೆಗಳು ನಮ್ಮ…
5 ಅಂತಸ್ತಿನ ವಸತಿ ಸಂಕೀರ್ಣ ಕುಸಿದ ಪರಿಣಾಮ 9 ಮಂದಿ ಮೃತಪಟ್ಟು ಒಬ್ಬರು ನಾಪತ್ತೆಯಾಗಿರುವ ಘಟನೆ ರಷ್ಯಾದ ಫೆಸಿಫಿಕ್ ದ್ವೀಪ ಸಕಲೇನ್ ನಲ್ಲಿ ಸಂಭವಿಸಿದೆ. ಗ್ಯಾಸ್ ಸ್ಫೋಟದಿಂದ ಕಟ್ಟಡ ಕುಸಿದಿದೆ ಎಂದು ಹೇಳಲಾಗಿದ್ದು, ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. 9 ಮೃತದೇಹಗಳು ಪತ್ತೆಯಾಗಿದ್ದು, ಒಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 20 ಲೀಟರ್ ಅಡುಗೆ ಗ್ಯಾಸ್ ಸಿಲಿಂಡರ್ ಸಂಪರ್ಕ ಈ ಕಟ್ಟಡದ ವಸತಿಗಳಿಗೆ ಕಲ್ಪಿಸಲಾಗಿತ್ತು. ಸಿಲಿಂಡರ್ ಸ್ಫೋಟದಿಂದ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದ್ದು, ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಐಟಿಟಿಎಫ್-ಎಟಿಟಿಯು ಏಷ್ಯನ್ ಕಪ್ ನಲ್ಲಿ ಕಂಚಿನ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಇತಿಹಾಸ ಬರೆದಿದ್ದಾರೆ. ಕಂಚಿನ ಪದಕಕ್ಕಾಗಿ ಶನಿವಾರ ನಡೆದ ವನಿತೆಯರ ಸಿಂಗಲ್ಸ್ ಪಂದ್ಯದಲ್ಲಿ ಮಾಣಿಕ್ ಬಾತ್ರಾ 4-2 (11-6, 6-11, 11-7, 12-10, 4-11, 11-2) ವಿಶ್ವದ 6ನೇ ಶ್ರೇಯಾಂಕಿತೆ ಹಾಗೂ ಮೂರು ಬಾರಿಯ ಏಷ್ಯನ್ ಚಾಂಪಿಯನ್ ಹೀನಾ ಹಯಾತ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದರು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮಾಣಿಕಾ ಬಾತ್ರಾ 4-2 ಸೆಟ್ ಗಳಿಂದ ಮಿಮಾ ವಿರುದ್ಧ ಆಘಾತ ಅನುಭವಿಸಿ ಫೈನಲ್ ಪ್ರವೇಶಿಸುವ ಅವಕಾಶದಿಂದ ವಂಚಿತರಾದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಕೇಂದ್ರ ಚುನಾವಣಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಶನಿವಾರ ಹೊರಡಿಸಿದ ಆದೇಶದಲ್ಲಿ ರಾಷ್ಟ್ರಪತಿ ಅನುಮತಿ ಮೇರೆಗೆ ಅರುಣ್ ಗೋಯೆಲ್ ಯಾವಾಗ ಅಧಿಕಾರ ಸ್ವೀಕರಿಸುತ್ತಾರೆ ಅಂದಿನಿಂದಲೇ ಆದೇಶ ಜಾರಿಗೆ ಬರಲಿದೆ ಎಂದು ಹೇಳಿದೆ. 1985ರ ಬ್ಯಾಚ್ ನ ಅರುಣ್ ಗೋಯೆಲ್ ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನೂಪ್ ಚಂದ್ರ ಪಾಂಡೆ ಅವರ ಜೊತೆ ಕರ್ತವ್ಯ ನಿರ್ವಹಿಸಲಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಅನಾರೋಗ್ಯದಿಂದ ಮೃತಪಟ್ಟ ಗೆಳತಿಯ ಮೃತದೇಹಕ್ಕೆ ತಾಳಿ ಕಟ್ಟುವ ಮೂಲಕ ಪ್ರಿಯಕರ ಆಕೆಯ ಕೊನೆಯ ಆಸೆ ಈಡೇರಿಸಿದ ಮನಕಲಕುವ ಘಟನೆ ಅಸ್ಸಾಂನಲ್ಲಿ ನಡೆದಿದೆ. ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಈ ಘಟನೆ ನಡೆದಿದೆ. ಮೊಯಿರ್‌ಗಾಂವ್ ನಿವಾಸಿ ಬಿಟುಪಾನ್ ತಮುಲಿ ಮೃತಪಟ್ಟ ಗೆಳತಿ ಕೊಸುವಾ ಗ್ರಾಮ ನಿವಾಸಿ ಪ್ರಾರ್ಥನಾ ಬೋರಾ ಮೃತದೇಹಕ್ಕೆ ತಾಳಿ ಕಟ್ಟಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೇ ಜೀವನದಲ್ಲಿ ಮದುವೆ ಆಗದೇ ಇರುವುದಾಗಿ ಘೋಷಿಸಿದ್ದಾರೆ. ಬಿಟುಪಾನ್ ತಮುಲಿ ಮತ್ತು ಪ್ರಾರ್ಥನಾ ಬೋರಾ ಪರಸ್ಪರ ಪ್ರೀತಿಸುತ್ತಿದ್ದು, ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ನೀಡಿದ್ದವು. ಕೆಲ ದಿನಗಳ ಹಿಂದೆ ಪ್ರಾರ್ಥನಾ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಆಕೆಯನ್ನು ಗುವಾಹಟಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಸಂಜೆ ಪ್ರಾರ್ಥನಾ ಮೃತಪಟ್ಟಿದ್ದರು. ಗೆಳೆತಿಯ ಸಾವಿನ ಸುದ್ದಿ ತಿಳಿದ ಬಿಟುಪಾನ್ ತಮುಲಿಯ ದುಃಖ ತಡೆಯಲಾರದೇ ಮದುವೆಯ ಸಾಮಗ್ರಿಗಳೊಂದಿಗೆ ಅಂತ್ಯಕ್ರಿಯೆಗೆ ಬಂದಿದ್ದಾನೆ. ಅಲ್ಲಿಯೇ ಮೃತ ಗೆಳತಿ ಪ್ರಾರ್ಥನಾಳನ್ನೇ ಮದುವೆಯಾಗುವುದಾಗಿ ಘೋಷಿಸಿದ್ದಾನೆ. ಬಿಕ್ಕಿ ಬಿಕ್ಕಿ ಅಳುತ್ತಲೇ ಮದುವೆ ಕಾರ್ಯ ನೆರವೇರಿಸಿದ್ದಾನೆ. ಇದನ್ನು…
ವ್ಯಕ್ತಿಯೊಬ್ಬ 9 ಮಕ್ಕಳನ್ನು ಸೈಕಲ್ ಮೇಲೆ ಕೂರಿಸಿಕೊಂಡು ಹೋಗುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶ್ವದಲ್ಲಿ ಜನಸಂಖ್ಯೆ 800 ಕೋಟಿ ದಾಟಿದ ದಾಖಲೆಯ ಬೆನ್ನಲ್ಲೇ ಜೈಕಿ ಯಾದವ್ ಎಂಬ ವ್ಯಕ್ತಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಈ ಚಿಕ್ಕ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಗತ್ತಿನಲ್ಲಿ ಜನಸಂಖ್ಯೆ 800 ಕೋಟಿ ದಾಟಿದೆ. ಈ ರೀತಿಯ ಜನರು ಇಂತಹ ಸಾಧನೆಗಳಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ ಎಂದು ಜೈಕಿ ಯಾದವ್ ವೀಡಿಯೊ ಮೇಲೆ ಶೀರ್ಷಿಕೆ ಪ್ರಕಟಿಸಿದ್ದಾರೆ. ಮೂವರು ಮಕ್ಕಳು ಹಿಂಬದಿ ಚಕ್ರದ ಮೇಲೆ ಕುಳಿತಿದ್ದರೆ, ಒಬ್ಬ ಎಲ್ಲರ ಮೇಲೆ ನಿಂತಿದ್ದಾನೆ. ಮತ್ತೊಬ್ಬಾಕೆ ವ್ಯಕ್ತಿಯ ಭುಜ ಹಿಡಿದು ನಿಂತಿದ್ದಾಳೆ. ಇಬ್ಬರು ಮಕ್ಕಳು ಹ್ಯಾಂಡಲ್ ಮೇಲೆ ಕುಳಿದಿದ್ದರೆ, ಒಬ್ಬ ಮುಂದಿನ ಚಕ್ರದ ಮೇಲೆ ಹ್ಯಾಂಡಲ್ ಹಿಡಿದು ಕುಳಿತಿದ್ದಾನೆ. ಮಂಗಳವಾರ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ಇಲ್ಲಿಯವರೆಗೆ 2,16,000 ಜನರು ವೀಕ್ಷಿಸಿದ್ದರೆ, 7 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಕೆಲವರು ಪೋಸ್ಟ್ ಅನ್ನು ಒಂದೇ…
ಮಂಗಳೂರಿನಲ್ಲಿ ಅಟೋದಲ್ಲಿ ಕುಕ್ಕರ್ ಸ್ಫೋಟ ಪ್ರಕರಣ ಉಗ್ರರ ಸಂಚು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ದೃಢಪಡಿಸಿದ್ದಾರೆ. ಭಾನುವಾರ ಬೆಳಿಗ್ಗೆ ಟ್ವೀಟ್ ಮಾಡಿದ ಅವರು, ಉದ್ದೇಶಪೂರ್ವಕವಾಗಿ ಸಾವು ನೋವು ಹಾನಿ ಉಂಟು ಮಾಡಲು ಮಾಡಿದ್ದ ಸಂಚು ಇದಾಗಿದ್ದು, ಕೇಂದ್ರ ತನಿಖಾ ಸಂಸ್ಥೆಗಳ ಜೊತೆ ಕರ್ನಾಟಕ ಪೊಲೀಸ್ ಸೂಕ್ಷ್ಮವಾಗಿ, ಆಳವಾಗಿ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ. ಶನಿವಾರ ಸಂಜೆ 5 ಗಂಟೆಯ ವೇಳೆ ಮಂಗಳೂರಿನ ಪಂಪ್‍ವೆಲ್‍ನಿಂದ ನಾಗುರಿ ಕಡೆ ಚಲಿಸುತ್ತಿದ್ದ ಆಟೋ ಕಂಕನಾಡಿ ಪೊಲೀಸ್ ಠಾಣೆ ಬಳಿ ಸ್ಫೋಟಗೊಂಡಿತ್ತು. ದಾರಿ ಮಧ್ಯೆ ವ್ಯಕ್ತಿಯೊಬ್ಬ ಕೈಯಲ್ಲಿ ಕುಕ್ಕರ್ ಹಿಡಿದುಕೊಂಡು ಆಟೋ ಹತ್ತಿದ ಕೆಲವೇ ಕ್ಷಣಗಳಲ್ಲಿ ಸ್ಫೋಟ ಸಂಭವಿಸಿತ್ತು. ಆಟೋದಲ್ಲಿ ಸ್ಫೋಟಗೊಂಡ ಕುಕ್ಕರ್ ನಲ್ಲಿ ನಟ್, ಬೋಲ್ಟ್, ಬ್ಯಾಟರಿ, ಸರ್ಕಿಟ್ ರೀತಿಯ ವೈರಿಂಗ್ ಇರುವ ವಸ್ತುಗಳು ಪತ್ತೆಯಾಗಿದೆ. ಲಘು ತೀವ್ರತೆ ಇರುವ ಸ್ಪೋಟಕ ಬಳಸಿರುವ ಶಂಕೆ ವ್ಯಕ್ತವಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ, ಬಾಂಬ್ ನಿಷ್ಕ್ರೀಯ ದಳದಿಂದ ತೀವ್ರ ಪರಿಶೀಲನೆ ನಡೆಯುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…
ಚಲಿಸುವ ಕಾರಿನಲ್ಲಿ 19 ವರ್ಷದ ಯುವ ರೂಪದರ್ಶಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಎರ್ನಾಕುಲಂ ಪೊಲೀಸರು ಒಬ್ಬ ಮಹಿಳೆ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಕೊಚ್ಚಿನ್ ಶಿಪ್ ಯಾರ್ಡ್ ಬಳಿಯ ಪಬ್ ಗೆ ತೆರಳಿದ್ದು, ಮದ್ಯ ಸೇವಿಸಿದ್ದಳು. ಈ ವೇಳೆ ಕಾಕ್ಕನಾಡ್ ಗೆ ಡ್ರಾಪ್ ಕೊಡುವ ನೆಪದಲ್ಲಿ ಕರೆದೊಯ್ಯುವಾಗ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ. ರಾತ್ರಿಯೀಡಿ ರೂಪದರ್ಶಿ ಮೇಲೆ ಅತ್ಯಾಚಾರ ಎಸಗಲಾಗಿದ್ದು, ಮನೆ ಬಳಿ ಬಿಟ್ಟ ದುಷ್ಕರ್ಮಿಗಳು ಹೋಗಿದ್ದಾರೆ. ರೂಪದರ್ಶಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಆಕೆಯ ಮೇಲೆ ದೌರ್ಜನ್ಯ ಎಸಗಿರುವುದು ದೃಢಪಟ್ಟಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy