Subscribe to Updates
Get the latest creative news from FooBar about art, design and business.
- ಬೇಲದಕುಪ್ಪೆ ಶ್ರೀ ಮಹದೇಶ್ವರ ಜಾತ್ರಾ ಹಾಲಹರವಿ ಕೊಂಡೋತ್ಸವ: ಲಾಡು ಪ್ರಸಾದ ಟೆಂಡರ್
- ಜೈ ಭೀಮ್ ದಮನಿತರ ಸೇವಾ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ
- ಅಂಗನವಾಡಿ | ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ
- ನ.20: ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ
- ನವೆಂಬರ್ 7ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ
- ಡಿಸೆಂಬರ್ 2ರವರೆಗೆ ಕಾಲುಬಾಯಿ ಜ್ವರದ ವಿರುದ್ಧ ಸಾಮೂಹಿಕ ಲಸಿಕಾ ಅಭಿಯಾನ
- ನವೆಂಬರ್ 16ರಂದು ನವೋದಯ ಶಾಲೆ ಮಾಕ್ ಪರೀಕ್ಷೆ
- ಖ್ಯಾತ ಖಳನಟ ಹರೀಶ್ ರಾಯ್ ನಿಧನ
Author: admin
ತುಮಕೂರು: ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನಗರದಲ್ಲಿ ನೀರು ಸರಬರಾಜು ಮಾಡುವ ಹೊರಗುತ್ತಿಗೆ ನೌಕರರನ್ನು ನೇರ ನೇಮಕಾತಿಯಲ್ಲಿ ಕಾಯಂಗೊಳಿಸುವಂತೆ ಒತ್ತಾಯಿಸಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ನೌಕರರು ಇಂದು ವಾಪಸ್ ಪಡೆದರು. ಪಾಲಿಕೆ ಸದಸ್ಯರು ಇಂದು ತುರ್ತು ಸಭೆ ಕರೆದು ನೇರ ನೇಮಕಾತಿ ಅಡಿಯಲ್ಲಿ ನೌಕರರನ್ನು ಕಾಯಂಗೊಳಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ನೌಕರರು ತಮ್ಮ ಅನಿರ್ದಿಷ್ಟಾವಧಿ ಧರಣಿ ಮುಷ್ಕರವನ್ನು ವಾಪಸ್ ಪಡೆದರು . ಈ ವೇಳೆ ಮಹಾನಗರ ಪಾಲಿಕೆಯ ಮೇಯರ್ ಕೃಷ್ಣಪ್ಪ ಪಾಲಿಕೆ ಆಯುಕ್ತ ರೇಣುಕಾ ಸೇರಿದಂತೆ ಪಾಲಿಕೆ ಸದಸ್ಯರು ಮಾತನಾಡಿದರು. ವರದಿ: ಎ.ಎನ್. ಪೀರ್ , ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ತುಮಕೂರು: ಮೇ 18ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ತುಮಕೂರು ಜಿಲ್ಲೆಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಪರೀಕ್ಷಾ ಮಂಡಳಿಯ ಗೈಡ್ ಲೈನ್ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಪಿಯು ಇಲಾಖೆ ಸುಸೂತ್ರವಾಗಿ ಪರೀಕ್ಷೆ ನಡೆಸಲು ಸರ್ವ ಸಿದ್ಧತೆ ನಡೆಸಿದ್ದು, ಜಿಲ್ಲೆಯಲ್ಲಿ ಈ ಭಾರಿ ಒಟ್ಟು 28,090 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು 34 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ ಕಲಾವಿಭಾಗದಲ್ಲಿ 8,185, ವಾಣಿಜ್ಯ ವಿಭಾಗದಲ್ಲಿ 11,177 ಹಾಗೂ ವಿಜ್ಞಾನ ವಿಭಾಗದಲ್ಲಿ 8,725 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಡಿಡಿಪಿಯು ನರಸಿಂಹಮೂರ್ತಿ ಮಾಹಿತಿ ನೀಡಿದರು. ವರದಿ: ಎ.ಎನ್. ಪೀರ್ , ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಹೆಚ್ ಡಿ ಕೋಟೆ /ಸರಗೂರು: ತಾಲ್ಲೂಕಿನ 75 ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರ ಆದೇಶದ ಮೇರೆಗೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕು ಮಟ್ಟದ ಆರೋಗ್ಯ ಮೇಳದಲ್ಲಿ ಉಚಿತವಾಗಿ ಡಿಜಿಟಲ್ ಐಡಿ ಕ್ರಿಯೇಷನ್, ಎ.ಬಿ.- ಎ.ಆರ್.ಕೆ.ಕಾರ್ಡ್ ವಿತರಣೆಯನ್ನು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದು ವಿವಿಧ ಬಗೆಯ ಶಿಬಿರವನ್ನು ನಡೆಸಿದರು. ಶಾಸಕರು ಅನಿಲ್ ಚಿಕ್ಕಮಾದುಭಾಗವಹಿಸಿ.ಆರೋಗ್ಯ ವಸ್ತು ಪ್ರದರ್ಶನವನ್ನು ಟೇಪ್ ಕತ್ತರಿಸುವ ಮೂಲಕ ಹಾಗೂ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು ಬಳಿಕ ಮಾತನಾಡಿದ ಅವರು, ಈ ಸುಂದರವಾದ ಅರ್ಥಪೂರ್ಣವಾದ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಮಗೆ ಬಹಳ ಸಂತೋಷದ ಸಂಗತಿಯಾಗಿದೆ. ಸುಮಾರು 50 ಕ್ಕೂ ಹೆಚ್ಚು ವೈದ್ಯರುಗಳು ಹಾಜರಿದ್ದು. ಸಂತಾನೋತ್ಪತ್ತಿ,ಮಕ್ಕಳ ಅರೋಗ್ಯ,ಹದಿಹರೆಯದವರ ಸಮಗ್ರ ಆರೋಗ್ಯ,ಗರ್ಭ ನಿರೋಧಕಸೇವೆ,ಸಾಂಕ್ರಾಮಿಕ ರೋಗಗಳ ಚಿಕಿತ್ಸೆ ಹೀಗೆ ಇನ್ನೂ ಹಲವು ಸಮಸ್ಯೆಗಳನ್ನು ತಪಾಸಣೆ ನಡೆಸಿ ಔಷಧಿಗಳನ್ನು ನೀಡುವ ದೃಷ್ಟಿಯಿಂದ ಈ ಆರೋಗ್ಯಮೇಳ ಕಾರ್ಯವನ್ನು ಆಯೋಜನೆ ಮಾಡಿದ್ದು, ಇದನ್ನು ನಮ್ಮ ತಾಲೂಕಿನ ಜನತೆಯು ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ತಾಲ್ಲೂಕಿನ…
ದೇಶದಲ್ಲಿ ಬಿಸಿಲಿನ ತಾಪ ಅಧಿಕವಾಗಿದ್ದು ಜನರು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉಪಕರಣಗಳನ್ನು ಉಪಯೋಗಿಸುತ್ತಾರೆ. ಇದರ ನಡುವೆ ಕಲ್ಲಿದ್ದಲು ಕೊರತೆ ಉಂಟಾಗಿದ್ದು, ಸುಮಾರು 8 ಗಂಟೆ ವಿದ್ಯುತ್ ಪೂರೈಕೆ ಕಡಿತ ಆಗುವ ಭೀತಿ ಎದುರಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನು ಪರಿಹರಿಸಲು ಸರಕಾರಗಳು ಹರಸಾಹಸ ಪಡುವಂತಾಗಿದೆ.ಉತ್ತರ ಪ್ರದೇಶ, ಪಂಜಾಬ್, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಲ್ಲಿದ್ದಲು ಕೊರತೆ ಕಂಡುಬಂದಿದೆ.ಕಲ್ಲಿದ್ದಲು ಕೊರತೆ ಹೆಚ್ಚಾದರೆ ರಾಜ್ಯಗಳಲ್ಲಿ 8 ಗಂಟೆಗಳ ವಿದ್ಯುತ್ ಕಡಿತ ಮಾಡುವುದು ಅನಿವಾರ್ಯವಾಗಿದೆ. ಅಖಿಲ ಭಾರತ ವಿದ್ಯುತ್ ಇಂಜಿನಿಯರ್ ಗಳ ಸಂಘಟನೆ ಅಧ್ಯಕ್ಷ ಶೈಲೇಂದ್ರ ದುಬೆ ಈ ವಿಷಯವನ್ನು ಒಪ್ಪಿಕೊಂಡಿದ್ದು, ದೇಶದಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆ ಎದುರಾಗಿದೆ ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಅರಿಶಿನಗುಂಡಿ ಗ್ರಾಮದ ಕಣಿವೆ ಮಾರಮ್ಮ ಜಾತ್ರೆಯ ಮಹೋತ್ಸವದ ಸಲುವಾಗಿ ಇಂದು ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಅರಿಶಿನಗುಂಡಿ ಗ್ರಾಮದಲ್ಲಿನ ಹೆಸರಾಂತ ಕಣಿವೆ ಮಾರಮ್ಮನ ದ್ವಾರಬಾಗಿಲನ್ನು ಹಿರಿಯೂರು ತಾಲ್ಲೂಕಿನ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಿ.ಸಿ. ಪಾಪಣ್ಣ ನವರು ಅರಿಶಿನಗುಂಡಿ ಕಣಿವೆ ಮಾರಮ್ಮನ ದ್ವಾರಬಾಗಿಲು ಉದ್ಘಾಟನೆಗೆ ಚಾಲನೆ ನೀಡುವ ಮೂಲಕ ಕಣಿವೆ ಮಾರಮ್ಮನ ಕೃಪೆಗೆ ಪಾತ್ರರಾದರು. ಇದೇ ಸಂದರ್ಭದಲ್ಲಿ ಅರಿಶಿನ ಗುಂಡಿ ಕಣಿವೆ ಮಾರಮ್ಮನ ಅರ್ಚಕರು ಆಡಳಿತ ಅಧಿಕಾರಿಗಳು ಬಿ ಸಿ ಪಾಪಣ್ಣ ನವರನ್ನು ಸನ್ಮಾನಿಸಿ ಗೌರವಿಸಿದರು . ಈ ಸಂಧರ್ಭದಲ್ಲಿ ಕಣೆವೆ ಮಾರಮ್ಮ ದೇವಸ್ಥಾನದ ಅರ್ಚಕರು , ಆಡಳಿತ ಅಧಿಕಾರಿಗಳು, ಗ್ರಾಮದ ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು. ವರದಿ: ಮುರುಳಿಧರನ್ ಆರ್. ಹಿರಿಯೂರು. ( ಚಿತ್ರದುರ್ಗ – ದಾವಣಗೆರೆ). ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಕೊರಟಗೆರೆ: ತಾಲ್ಲೂಕಿನಲ್ಲಿ ನಿನ್ನೆ ಸುರಿದ ಭಾರೀ ಮಳೆ ಹಾಗೂ ಗುಡುಗು ಸಿಡಿಲಿನಿಂದ ಸಿರಾ ತಾಲ್ಲೂಕಿನ ಕಸಬಾ ಹೋಬಳಿ ಮೇಲುಕೋಟೆ ಗ್ರಾಮ ಪಂಚಾಯಿತಿಯ ಗೊಲ್ಲರಹಟ್ಟಿ ಗ್ರಾಮದ ಕುರಿಗಾಯಿ ಗಂಗಮ್ಮ ಈರಣ್ಣ ಅವರಿಗೆ ಸೇರಿದ 11 ಕುರಿ 1ಮೇಕೆ ಹಾಗೂ 1ಟಗರು ಸಿಡಿಲಿಗೆ ಬಲಿಯಾಗಿವೆ. ವಿಷಯ ತಿಳಿದ ಕೊರಟಗೆರೆಯ ತಹಶೀಲ್ದಾರ್ ನಹಿದಾ ಜಮ್ ಜಮ್ ಹಾಗೂ ಪಶು ವೈದ್ಯರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತಕ್ಷಣ ಸ್ಥಳೀಯ ಶಾಸಕರ ಗಮನಕ್ಕೆ ತಂದು ಅವರ ಅನುಪಸ್ಥಿತಿಯಲ್ಲಿ ಕುರಿಗಾಹಿಗಳಿಗೆ 39ಸಾವಿರದ ಚೆಕ್ಕನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಜನಸ್ನೇಹಿ ಅಧಿಕಾರಿಗಳು ಇರುವವರೆಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದ್ದು, ಜನಸ್ನೇಹಿ ತಹಶೀಲ್ದಾರ್ ನಹಿದಾ ಜಮ್ ಜಮ್ ಅವರ ಕರ್ತವ್ಯ ನಿಷ್ಠೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ಬೆಂಗಳೂರು, ರಾಜ್ಯದಲ್ಲಿ ಅಜಾನ್ ವಿರುದ್ಧ ತಿರುಗಿ ಬಿದ್ದಿರುವ ಹಿಂದೂಪರ ಸಂಘಟನೆಗಳು ಮೇ 9ರಂದು ದೇವಾಲಯಗಳು ಹಾಗೂ ಮಠಗಳಲ್ಲಿ ಮೈಕ್ ಹಾಕಿ ಭಜನೆ, ಶ್ಲೋಕ ಹೇಳುವಂತೆ ಕರೆ ನೀಡಿವೆ. ಮೇ 9ರಂದು ಬೆಳಗ್ಗೆ 5 ಗಂಟೆಗೆ ಮೈಕ್ ಮೂಲಕ ಭಜನೆ, ಹನುಮಾನ್ ಚಾಲೀಸಾ ಪಠಿಸುವಂತೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ಪ್ರಾರ್ಥನಾ ಮಂದಿರಗಳಲ್ಲಿ ಹಾಕಿರುವ ಮೈಕ್ ತೆಗೆಸುವಂತೆ ಸುಪ್ರೀಂಕೋರ್ಟ್ ಆದೇಶವಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಹೀಗಾಗಿ ನಮ್ಮ ಈ ಹೋರಾಟ ಕೈಬಿಡಬೇಕಾದರೆ ಆಡಳಿತ ನಡೆಸುತ್ತಿರುವವರು ಪ್ರಾರ್ಥನಾ ಮಂದಿರಗಳಲ್ಲಿ ಹಾಕಿರುವ ಮೈಕ್‍ಗಳನ್ನು ತೆಗೆಸಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ದೇವಾಲಯಗಳಲ್ಲಿ ಮೈಕ್‍ನಲ್ಲಿ ಭಜನೆ ಮಾಡುವ ಕಾರ್ಯಕ್ರಮ ನಡೆಸಲಾಗುವುದು.ನಮ್ಮ ನಿರ್ಧಾರವನ್ನು ತಡೆಯಲು ಸರ್ಕಾರ ಪ್ರಯತ್ನಿಸಿದರೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆಯನ್ನು ಪ್ರಮೋದ್ ಮುತಾಲಿಕ್ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy…
ನವದೆಹಲಿ: ಭಯೋತ್ಪಾದನೆ ಮಾನವ ಹಕ್ಕುಗಳ ಉಲ್ಲಂಘನೆಯ ಅತಿದೊಡ್ಡ ರೂಪವಾಗಿದ್ದು ಮಾನವ ಹಕ್ಕುಗಳನ್ನು ರಕ್ಷಿಸಲು ಭಯೋತ್ಪಾದನೆಯನ್ನು ಕಿತ್ತುಹಾಕಬೇಕು ಎಂದು ಅಮಿತ್ ಶಾ ಹೇಳಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆಯ 13ನೇ ಸಂಸ್ಥಾಪನಾ ದಿನವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಧಿಯ ವಿರುದ್ಧ ದಾಖಲಾದ ಪ್ರಕರಣಗಳು ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡಿದೆ ಎಂದರು. ನರೇಂದ್ರ ಮೋದಿ ಸರ್ಕಾರವು ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣು ನೀತಿಯನ್ನು ಅಳವಡಿಸಿಕೊಂಡಿದೆ. ಭಾರತದಿಂದ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯಲು ಕೆಲಸ ಮಾಡುತ್ತಿದೆ. ಎನ್ ಐಎ ದಾಖಲಿಸಿರುವ ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದಕ ನಿಧಿ ಪ್ರಕರಣಗಳ ಕಾರಣ, ಅಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಹಣವನ್ನು ಒದಗಿಸುವುದು ಈಗ ತುಂಬಾ ಕಷ್ಟಕರವಾಗಿದೆ ಎಂದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಕ್ಕಾಗಿ ಮತ್ತು ಅಲ್ಲಿ ಭಯೋತ್ಪಾದನೆಗೆ ಸಂಬಂಧಪಟ್ಟ ವಸ್ತುಗಳು ಮತ್ತು ಹಣಗಳನ್ನು ಒದಗಿಸುವ ಕೊಂಡಿಗಳನ್ನು ನಿಗ್ರಹಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಗೃಹ ಸಚಿವರು ಅಭಿನಂದನೆ…
ಕೋಲಾರ: ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಜೆಡಿಎಸ್ ಪಕ್ಷದಿಂದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಪೆಟ್ರೋಲ್ ಉಚಿತ ಎಂದು ಹೇಳಲಾಗಿತ್ತು. ಜನರು ಸಿಕ್ಕದ್ದೇ ಜಾನ್ಸ್ ಎಂಬಂತೆ ಉಚಿತ ಪೆಟ್ರೋಲ್ ಗೆ ಮುಗಿ ಬಿದ್ದಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಸಿಎಂ ಇಬ್ರಾಹಿಂ ಸೇರಿದಂತೆ ಹಲವಾರು ಜಲಧಾರೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದರು. ಹೀಗಾಗಿ ಮಾಲೂರು ಜೆಡಿಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡ ಬೈಕ್ ರ್ಯಾಲಿಯಲ್ಲಿ ಪಾಲ್ಗೊಳ್ಳುವವರಿಗೆ ಉಚಿತ ಪೆಟ್ರೋಲ್ ವ್ಯವಸ್ಥೆಯನ್ನು ಮಾಡಿದ್ದರು. ಬೈಕ್ ರಾಲಿಗೆ ಬಂದವರಿಗೆ ಜೆಡಿಎಸ್ ಟಿ ಶರ್ಟ್, ಉಚಿತ ಪೆಟ್ರೋಲ್ ಹಾಗೂ ಮಹಿಳೆಯರಿಗೆ ಟೋಕನ್ ನೀಡಲಾಗಿದ್ದು, ಕಾರ್ಯಕ್ರಮ ಮುಗಿದ ಬಳಿಕ ಅಕ್ಕಿಮೂಟೆ ನೀಡುವ ಭರವಸೆ ನೀಡಲಾಗಿತ್ತು ಎಂದು ವರದಿಯಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಕುಶಾಲನಗರ: ತಾಲ್ಲೂಕು ಮಟ್ಟದ ಹೆಬ್ಬಾಲೆ ಕೊಪ್ಪಲು ಗ್ರಾಮದಲ್ಲಿ ಮಹಾನಾಯಕ ಬಹುಜನರ ಸೂರ್ಯ ವಿಶ್ವರತ್ನ ಭೀಮರಾವ್ ಅಂಬೇಡ್ಕರ್ ಅವರ 131ನೇ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಂಜುನಾಥ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವೆಲ್ಲರೂ ಎಲ್ಲ ರಂಗದಲ್ಲೂ ಗುರುತಿಸಿಕೊಂಡು ಮುಖ್ಯವಾಹಿನಿಗೆ ಬರಲು ಸಾಧ್ಯವಾದದ್ದು ಅಂಬೇಡ್ಕರ್ ಅವರಿಂದ. ಅಂಬೇಡ್ಕರ್ ಅವರು ಬರೆದ ಸಂವಿಧಾನದ ಮೂಲಕ ನಾನು ಕೂಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲು ಸಾಧ್ಯವಾಯಿತು. ಇವತ್ತು ಸಮಾಜದಲ್ಲಿ ಅಂಬೇಡ್ಕರ್ ಅವರ ಆಶೀರ್ವಾದದಿಂದ ಹೆಣ್ಣುಮಕ್ಕಳು ಕೂಡ ಎಲ್ಲ ಕ್ಷೇತ್ರದಲ್ಲೂ ಗುರುತಿಸಿಕೊಳ್ಳಲು ಅವಕಾಶವಾಗಿದೆ ಎಂದು ಹೇಳಿದರು ಶ್ರೀನಿವಾಸ್ ಜಿಲ್ಲಾ ಪಂಚಾಯಿತಿ ಸದಸ್ಯರು ಹೆಬ್ಬಾಲೆ ಮಾತನಾಡಿ, ಎಲ್ಲ ಜಾತಿ ಜನಾಂಗ ಒಂದಾಗಿ ಪ್ರೀತಿ ಸ್ನೇಹ ಸಹಬಾಳ್ವೆ ಬೆಳೆಸಿಕೊಂಡು ಬಾಬಾಸಾಹೇಬ ಅಂಬೇಡ್ಕರ್ ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕು ತುಳಿತಕ್ಕೆ ಒಳಗಾದ ಜನರಿಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೂರಾರು ಯೋಜನೆಗಳನ್ನು ತಂದಿದ್ದಾರೆ ಅದನ್ನು ಬಳಸಿಕೊಂಡು ತಾವೆಲ್ಲರೂ ಬೆಳೆಯಬೇಕೆಂದು ಹೇಳಿದರು. ಕೆ.ಬಿ.ರಾಜು ರಾಜ್ಯ…