Author: admin

ದೇಶಾದ್ಯಂತ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಬೂಸ್ಟರ್ ಡೋಸ್ ಲಸಿಕೆಯನ್ನು ನೀಡುವ ಕಾರ್ಯ ಆರಂಭವಾಗಿದ್ದರೂ ಕರ್ನಾಟಕ ಸೇರಿದಂತೆ ದೇಶದ ಬಹುತೇಕ ಕಡೆ ಬೂಸ್ಟರ್ ಡೋಸ್ ಲಸಿಕೆಗೆ ಹೆಚ್ಚಿನ ಆಸಕ್ತಿ ತೋರಿಲ್ಲ. ಕೊರೊನಾ ಸೋಂಕು ಪ್ರಕರಣಗಳು ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಮುನ್ನೆಚೆರಿಕೆ ಡೋಸ್ ಪಡೆಯಲು ಜನ ಹೆಚ್ಚಿನ ಉತ್ಸಾಹ ಕಂಡು ಬಂದಿಲ್ಲ. ಲಸಿಕಾ ಕೇಂದ್ರಗಳತ್ತ ಜನ ಬೂಸ್ಟರ್ ಡೋಸ್ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ. ಕೋವಿಡ್‌ ನ 1 ಮತ್ತು 2ನೇ ಅಲೆ ಸಂದರ್ಭದಲ್ಲಿ ಲಸಿಕೆಗಾಗಿ ಲಸಿಕಾ ಕೇಂದ್ರಗಳಿಗೆ ಮುಗಿಬಿದ್ದು, ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಲಸಿಕೆ ಹಾಕಿಸಿಕೊಳ್ಳುತ್ತಿದ್ದ ಜನ, ಬೂಸ್ಟರ್ ಡೋಸ್ ಲಸಿಕೆ ಬಗ್ಗೆ ಮಾತ್ರ ಅಷ್ಟೇನೂ ಉತ್ಸಾಹ ತೋರುತ್ತಿಲ್ಲ. ನೋಡೋಣ ಸರ್ಕಾರವೇ ಉಚಿತವಾಗಿ ಲಸಿಕೆ ಕೊಡಬಹುದು ಎಂಬ ನಿರೀಕ್ಷೆಯಲ್ಲಿ ಕೆಲವರಿದ್ದರೆ, ಇನ್ನೂ ಕೆಲವರು ಈಗ ಕೊರೊನಾ ಇಲ್ಲ, ಮುಂದೆ ಕೊರೊನಾ ಸೋಂಕು ಜಾಸ್ತಿಯಾದರೆ ಆಗ ಲಸಿಕೆ ಹಾಕಿಸಿಕೊಳ್ಳೋಣ ಎಂಬ ಮನಃಸ್ಥಿತಿಯಲ್ಲಿರುವುದು ಬೂಸ್ಟರ್ ಡೋಸ್ ಲಸಿಕೆಗೆ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿಲ್ಲ. ಬೂಸ್ಟರ್…

Read More

ತುಮಕೂರು: ತುರುವೇಕೆರೆ  ವಿಧಾನಸಭಾ ಶಾಸಕ ಮಸಾಲ ಜಯರಾಮ್ ಅವರು ತಮ್ಮ  54 ನೇ ಹುಟ್ಟು ಹಬ್ಬವನ್ನು ಬೆಂಬಲಿಗರು ಪಕ್ಷದ ಕಾರ್ಯಕರ್ತರು ಸಮ್ಮುಖದಲ್ಲಿ ಆಚರಿಸಿದರು. ತಮ್ಮ ಹುಟ್ಟೂರಿನಿಂದ ಕುಟುಂಬ ಸಮೇತ ಪ್ರಮುಖ, ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ  ತುರುವೇಕೆರೆಗೆ ಸಾಗುವ ಮಾರ್ಗ ಮಧ್ಯೆ ತಮ್ಮ ಬೆಂಬಲಿಗರು ಶುಭಾಶಯ ಕೋರಿದರು. ತುರುವೇಕೆರೆ ಪಟ್ಟಣದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಬಾಣಸಂದ್ರ ವೃತದಲ್ಲಿ ಸೇರಿ ಶಾಸಕರಿಗೆ ಜೈಕಾರ ಕೂಗುತ್ತ ,ಪಟಾಕಿ ,ಸಿಡಿಸಿ ಹೂಮಾಲೆ ಹಾಕಿ ಸಂಭ್ರಮಿಸಿದರು . ಬಳಿಕ ಶಾಸಕ ಮಸಾಲ ಜಯರಾಮ್ ತಮ್ಮ ,ತೋಟದ ಮನೆಯಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿಕೊಂಡರು. ಹುಟ್ಟು ಹಬ್ಬದ ಪ್ರಯುಕ್ತ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ವರದಿ: ಸುರೇಶ್ ಬಾಬು .ಎಂ.ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ತುಮಕೂರು: ರೈತರೊಬ್ಬರು ತನ್ನ ಜಮೀನು ತಕರಾರಿಗೆ ಸಂಬಂಧಿಸಿದಂತೆ ಸಮಸ್ಯೆ ನಿವಾರಣೆಗೆ ಸರ್ಕಾರಿ ಕಚೇರಿಗೆ ಅಲೆದಾಡಿ ಸುಸ್ತಾಗಿದ್ದು, ಕೊನೆಗೆ ಅಧಿಕಾರಿಗಳ ಕಾಲಿಗೆ ಬಿದ್ದು, ತನ್ನ ಕೆಲಸ ಬೇಗನೆ ಮಾಡಿಕೊಡಿ ಎಂದು ಗೋಗರೆದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ತಾಲ್ಲೂಕಿನ ನಾಗವಲ್ಲಿ ಮೂಲದ ಮುನಿಯಪ್ಪ ಎಂಬ ವೃದ್ಧ ರೈತ ತುಮಕೂರು ತಾಲೂಕು ಕಚೇರಿಗೆ ಅಲೆದಾಡಿ ಸುಸ್ತಾಗಿದ್ದು, ಕೊನೆಗೆ ಅಧಿಕಾರಿಗಳು ಹಾಗೂ ತಾಲೂಕು ಕಚೇರಿಯ ನೌಕರರ ನಿರ್ಲಕ್ಷ್ಯದಿಂದ ಬೇಸತ್ತು, ತಹಸೀಲ್ದಾರ್ ಕಾಲಿಗೆ ಬಿದ್ದು ಗೋಗರೆದಿದ್ದಾರೆ. ಇದುವರೆಗೂ ಯಾರೂ ಸಹ ನನ್ನ ಜಮೀನಿನ ವಿಚಾರವಾಗಿ ಸಹಾಯಕ್ಕೆ ಮುಂದಾಗಿಲ್ಲ. ನನಗೆ ನ್ಯಾಯ ಸಿಗಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಬಳಿ ತಾಲೂಕು ದಂಡಾಧಿಕಾರಿಗಳ ಕಾಲನ್ನು ಹಿಡಿದು ನ್ಯಾಯಕ್ಕಾಗಿ ಅಂಗಲಾಚಿದ ಘಟನೆ ನಡೆದಿದೆ. ಕಳೆದ ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ರೈತ ಮುನಿಯಪ್ಪಗೆ ಸಂಬಂಧಿಸಿದ  ಜಮೀನು ಇಲ್ಲಿದ್ದು, ಹಲವು ವರ್ಷಗಳಿಂದ ಜಮೀನಿಗೆ ಸಾಗುವಳಿ ಚೀಟಿ ಸಹ ನೀಡಲಾಗಿತ್ತು. ಅದರ  ಸಂಬಂಧ ತಕರಾರು ಇದ್ದು, ಈ ವಿಚಾರವಾಗಿ ರೈತ ತಾಲೂಕು…

Read More

ತುಮಕೂರು: 161 ಅಡಿ ಎತ್ತರದ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಯಾಗಿರುವುದು  ಮುಂದಿನ ದಿನಗಳಲ್ಲಿ ಕನ್ನಡನಾಡಿಗೆ ಒಳ್ಳೆಯ ಕಾಲವಿದೆ ಎನ್ನುವುದರ ಸೂಚನೆ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ಇಂದು ಕುಣಿಗಲ್ ತಾಲ್ಲೂಕಿನ  ಬಿದನಗೆರೆ ಶ್ರೀ ಬಸವೇಶ್ವರ ಮಠದ ವತಿಯಿಂದ ನಿರ್ಮಿಸಿರುವ 161 ಅಡಿ ಎತ್ತರದ ಪಂಚಮುಖಿ ಆಂಜನೇಯ ಸ್ವಾಮಿ ಮೂರ್ತಿಯನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ರಾಮನವಮಿಯ ದಿನದಂದು ಪವಿತ್ರ ಕೆಲಸ ಕಾರ್ಯಗಳು ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿದೆ.  ಇಲ್ಲಿಯ ಅಭಿವೃದ್ಧಿ ಕಾರ್ಯಗಳು  ಕೆಲವೇ ವರ್ಷಗಳಲ್ಲಿ ಎಷ್ಟು ದೊಡ್ಡ ಶಕ್ತಿಯಾಗಿ  ಕ್ಷೇತ್ರಕ್ಕೆ ಬೆಳೆದಿದೆ ಎಂದು ತಿಳಿಯುತ್ತದೆ. ಇಲ್ಲಿನ ಭಕ್ತರ  ಮನಸ್ಸು  ಬಹಳ ದೊಡ್ಡದಿದೆ  ಎಂದು ತಿಳಿಯುತ್ತದೆ ಎಂದರು. ಪಂಚಮುಖಿ ಆಂಜನೇಯ ಬಹಳ ವಿಶಿಷ್ಟ. ರಾಮಾಯಣದಲ್ಲಿ ವಿಶೇಷವಾದ ಸಂದರ್ಭದಲ್ಲಿ ಹನುಮನ ಅವತಾರವಿದು . ಸಂಪೂರ್ಣವಾಗಿ ಲೋಕಕಲ್ಯಾಣ ಕ್ಕಾಗಿ ಹನುಮ ಈ ಅವತಾರವನ್ನು  ಎತ್ತಿದ ಎನ್ನುವುದು ತಿಳಿದ ಸಂಗತಿ. ಕನ್ನಡನಾಡಿನಲ್ಲಿ 161 ಅಡಿ ಎತ್ತರದ ಮೂರ್ತಿ ಸ್ಥಾಪನೆಯಾಗಿರುವುದು ಹನುಮನ ಇಚ್ಛೆ. ಶಿಲ್ಪಿಗಳು ಅದ್ಭುತವಾದ ಕಲಾಕೃತಿ ನಿರ್ಮಿಸಿದ್ದಾರೆ.…

Read More

ಸರಗೂರು: ತಾಲ್ಲೂಕಿನ ಚಿಕ್ಕದೇವಮ್ಮನ ಬೆಟ್ಟದ ಬಳಿ ಇರುವ ಹಾಲುಗಡಿ ಕಬಿನಿ ಹೊಳೆ ಕಾವಲಿಯಲ್ಲಿ ಹಸುವಿಗೆ ನೀರು ಕುಡಿಸಲು  ತೆರಳಿದ್ದ ಯುವಕ ಕಾಲು ಜಾರಿ ಬಿದ್ದು ನೀರು ಪಾಲಾಗಿರುವ ಘಟನೆ ನಡೆದಿದೆ. ತಾಲ್ಲೂಕಿನ ಲಂಕೆ ಗ್ರಾಮದ 23 ವರ್ಷದ ಯುವಕ ಮನು ಮೃತ ಯುವಕನಾಗಿದ್ದು, ಈತ ತನ್ನ  ಜಮೀನು ಬಳಿ ಇರುವ ಕಬಿನಿ ಹೊಳೆಯಲ್ಲಿ ಹುಸುವಿಗೆ ನೀರು  ಕುಡಿಸಲು ಹೋಗಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ನಂತರ ತಾಲ್ಲೂಕಿನ ಜೆಡಿಎಸ್ ಯುವ ಮುಖಂಡ ಜಯಪ್ರಕಾಶ್ ಅವರು ಘಟನೆಯ ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಅಗ್ನಿಶಾಮಕ ದಳದ ಸಿಬ್ಬಂದಿ ಕರೆ ಮಾಡಿ, ಪಿಎಸ್ಐ ಶ್ರಾಮಣದಾಸ ರೆಡ್ಡಿ  ಅವರಿಗೂ ವಿಷಯ ಮುಟ್ಟಿಸಿದ್ದು, ಸದ್ಯ ಯುವಕ ಮೃತದೇಹ ಹೊರ ತೆಗೆಯಲಾಗಿದೆ. ಹಸುಗಳಿಗೆ ನೀರು ಕುಡಿಸಿ ಬರುತ್ತೇನೆ ಎಂದು ಹೋಗಿದ್ದ ಯುವಕ ಬಹಳಷ್ಟು ಹೊತ್ತಾದರೂ ಮರಳಿ ಬಂದಿರಲಿಲ್ಲ. ಇದರಿಂದಾ ಆತಂಕಗೊಂಡ ಪೋಷಕರು ಸಾಕಷ್ಟು ಹುಡುಕಾಟ ನಡೆಸಿದ್ದರೂ ಮನುವಿನ ಪತ್ತೆಯಾಗಿರಲಿಲ್ಲ. ಘಟನೆ ಸಂಬಂಧ ಸರಗೂರು ಪೊಲೀಸ್…

Read More

ಕೊರಟಗೆರೆ:  ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಶ್ರೀ  ರಾಮನವಮಿಯ ಅಂಗವಾಗಿ ಬೆಳಿಗ್ಗಿನಿಂದಲೇ ಅಭಿಷೇಕ ವಿವಿಧ ಅಲಂಕಾರಗಳೊಂದಿಗೆ ವಿಶೇಷ ಪೂಜೆಯನ್ನು ಭಕ್ತಾದಿಗಳ ಸಮಕ್ಷಮದಲ್ಲಿ ನೆರವೇರಿಸಲಾಯಿತು. ಅದರಲ್ಲೂ ಶ್ರೀರಾಮ ಬಂಟ ಹನುಮನ ದೇವಾಲಯಗಳಲ್ಲಿ ಯಾವ ದೇವಾಲಯಗಳಲ್ಲೂ ಕಾಣದ ಸಡಗರ ಸಂಭ್ರಮ ಶ್ರೀರಾಮನ ಬಂಟ ಹನುಮನಿಗೆ  ಪ್ರಿಯವಾದ ನೈವೇದ್ಯದ  ತಿನಿಸುಗಳನ್ನು ಇಟ್ಟು ಶ್ರೀರಾಮನವಮಿಯ ವಿಶೇಷ ಮಜ್ಜಿಗೆ ಪಾನಕವನ್ನು ಭಕ್ತಾದಿಗಳಿಗೆ ನೀಡುವ ಮೂಲಕ ಶ್ರೀರಾಮನವಮಿ ಆಚರಣೆ ಯಿಂದ ಭಕ್ತಾದಿಗಳು ಆಚರಿಸಿದರು: ಇಂದು ಇಡೀ ದೇಶದಲ್ಲೇ ಶ್ರೀ ರಾಮನವಮಿಯ ಆಚರಣೆ ಮಾಡಲಾಗುತ್ತಿದೆ. ಈ ದಿನದಂದು  ದೇವಾಲಯಗಳಲ್ಲಿ ಮಜ್ಜಿಗೆ, ಪಾನಕ ಹಂಚುವ ಮೂಲಕ ಭಕ್ತರು ವಿಶೇಷವಾಗಿ ರಾಮನವಮಿ ಆಚರಿಸುತ್ತಾರೆ. ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ತುಮಕೂರು: ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರು ತಾಲೂಕಿನ ಕಟ್ಟಿಗೇನಗಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ನಡೆದಿದೆ. ತುಮಕೂರಿನಿಂದ ಶಿರಾ ಕಡೆಗೆ ತೆರಳುತ್ತಿದ್ದ ಕಾರು ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಕಾರಿನಲ್ಲಿ ಇನ್ನೂ ಮೂವರು ಮಕ್ಕಳಿದ್ದರು. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ತುಮಕೂರು: ಲೋಕಾರ್ಪಣೆಗೊಂಡು ಕೆಲವೇ ತಿಂಗಳುಗಳಲ್ಲಿ ಅತ್ಯಧಿಕ ಓದುಗರನ್ನು ತಲುಪುತ್ತಿರುವ ನಮ್ಮತುಮಕೂರು ಮಾಧ್ಯಮವು ಮೊದಲ ಬಾರಿಗೆ ಡಾ.ಬಿ.ಆರ್.ಅಂಬೇಡ್ಕರ್ ರವರ ಜನ್ಮದಿನದ ಈ ಪ್ರಯುಕ್ತ ಮಕ್ಕಳಿಗೆ ವಿಶೇಷ ಸ್ಪರ್ಧೆಯನ್ನು ಆಯೋಜಿಸಿದೆ. 10 ವರ್ಷದ ಒಳಗಿನ ಮಕ್ಕಳಿಗೆ ಆನ್ ಲೈನ್ ನಲ್ಲಿ ಈ ಸಂಗೀತ ಸ್ಪರ್ಧೆ ಹಮ್ಮಿಕೊಂಡಿದ್ದು, ಮಕ್ಕಳು ಡಾ.ಬಿ.ಆರ್.ಅಂಬೇಡ್ಕರ್ ರವರ ಹಾಡನ್ನು ಹಾಡಿ ಮೊಬೈಲ್ ನಲ್ಲಿ ಚಿತ್ರೀಕರಿಸಿ ಹೆಸರು ವಿಳಾಸಗಳೊಂದಿಗೆ 9164942910 ಈ ನಂಬರಿಗೆ ವಾಟ್ಸಾಪ್ ಮಾಡಿ. ಅತ್ಯುತ್ತಮವಾಗಿ ಹಾಡಿದ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು. ಉತ್ತಮವಾಗಿ ಹಾಡಿದ ಮಕ್ಕಳ ವಿಡಿಯೋಗಳನ್ನು ‘ನಮ್ಮ ತುಮಕೂರು’ ಚಾನೆಲ್ ನಲ್ಲಿ ಪ್ರಸಾರ ಮಾಡಿ ಪ್ರೋತ್ಸಾಹಿಸಲಾಗುವುದು. > ಏಪ್ರಿಲ್ 13 ಸಂಜೆ 3ಗಂಟೆಯ ಒಳಗೆ ವಿಡಿಯೋ ಕಳುಹಿಸ ತಕ್ಕದ್ದು. > ಹಾಡು 5 ನಿಮಿಷದ ಒಳಗೆ ಇರಬೇಕು >ಹಾಡನ್ನು ಸ್ವತಃ ಮಗುವೇ ಹಾಡಿರಬೇಕು ಬಹುಮಾನಗಳ ವಿವರ: ಪ್ರಥಮ: 2,000 ದ್ವಿತೀಯ: 1,000 ತೃತೀಯ: 500 ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ತುಮಕೂರು: ರಾಮನವಮಿಯನ್ನು ಹಿಂದೂ-ಮುಸ್ಲಿಂ ಮುಖಂಡರು ಸೌಹಾರ್ದ ಆಚರಿಸಿರುವ ಘಟನೆ, ತುಮಕೂರಿನಲ್ಲಿ ನಡೆದಿದೆ. ಇಂದು ತುಮಕೂರಿನ ಭದ್ರಮ್ಮ ಸರ್ಕಲ್ ನಲ್ಲಿ ಇಂದು ರಾಮನವಮಿಯ ಸಂದರ್ಭದಲ್ಲಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಕೇಸರಿ ಶಾಲು ತೊಟ್ಟು, ಜೈ ಶ್ರೀರಾಮ್ ಘೋಷಣೆ ಕೂಗಿ, ಸಾರ್ವಜನಿಕರಿಗೆ ಪಾನಕ-ಪಲಾರ, ಮಜ್ಜಿಗೆ ಹಂಚಿ ಗಮನ ಸೆಳೆದರು. ಕಾಂಗ್ರೆಸ್ ಯುವ ಕಾರ್ಯಕರ್ತರು ಕೇಸರಿ ಶಾಲು ಧರಿಸಿದ್ರೇ, ಮುಸ್ಲೀಮರು ಟೋಪಿ ಧರಿಸಿ, ಶ್ರೀರಾಮ ನವಮಿ ಪೂಜೆಯಲ್ಲಿ ಭಾಗಿಯಾಗಿದ್ದು ಕಂಡು ಬಂತು. ಜೊತೆಗೆ ಪಾನಕ ಹಂಚಿ, ರಾಮನವಮಿ ಆಚರಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಬೆಂಗಳೂರು: ಜೆ.ಜೆ.ನಗರ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ವಿಚಾರ ತಿಳಿಸಿದರು. ಜೆ.ಜೆ.ನಗರ ಚಂದ್ರು ಕೊಲೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ನಿನ್ನೆ ಡಿಜಿ ಐಜಿಪಿ ಮತ್ತು ಕಮಿಷನರ್ ಕರೆದು ಮಾತನಾಡಿದ್ದೇನೆ. ಆರೋಪ-ಪ್ರತ್ಯಾರೋಪ ಏನೇ ಇರಲಿ, ಸತ್ಯ ಹೊರಗೆ ಬರಲಿ ಎನ್ನುವ ಉದ್ದೇಶದಿಂದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More