Author: admin

ಉಕ್ರೇನ್ ಯುದ್ಧ ಜಾಗತಿಕ ಪರಿಣಾಮ ಬೀರುವುದರಿಂದ ದಿನನಿತ್ಯದ ಆಹಾರಕ್ಕೆ ಪರದಾಡುವವರ ಸಂಖ್ಯೆಗರಿಷ್ಠ ಮಟ್ಟಕ್ಕೆ ತಲುಪಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತ ಪಡಿಸಿದೆ.ಹವಾಮಾನ ವೈಪರೀತ್ಯಗಳು, ಕೊರೊನಾ ಸಾಂಕ್ರಾಮಿಕದ ಆರ್ಥಿಕ ಪರಿಣಾಮ, ಉಕ್ರೇನ್ ಸಂಘರ್ಷಗಳು ಮೂರು ವಿಷಕಾರಿ ಸಂಯೋಜನೆಯಾಗಿದ್ದು, 2021 ರಲ್ಲಿ 53 ದೇಶಗಳ ಸುಮಾರು 193 ಮಿಲಿಯನ್ ಜನರು ತೀವ್ರ ಆಹಾರ ಕೊರತೆ ಅನುಭವಿಸಿದರು. ಈ ವರ್ಷ ಅದಕ್ಕೆ ಮತ್ತೆ 40 ಮಿಲಿಯನ್ ಜನ ಸೇರ್ಪಡೆಯಾಗಿದ್ಧಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ವಿಶ್ವ ಆಹಾರ ಕಾರ್ಯಕ್ರಮ ಮತ್ತು ಯುರೋಪಿಯನ್ ಯೂನಿಯನ್ ಜಂಟಿಯಾಗಿ ತಯಾರಿಸಿದ ಆಹಾರ ಬಿಕ್ಕಟ್ಟಿನ ಜಾಗತಿಕ ವರದಿಯಲ್ಲಿ ಈ ಅಂಕಿಅಂಶಗಳು ಕಾಣಿಸಿಕೊಂಡಿವೆ.ವರದಿಯ ಪ್ರಕಾರ ಅಫ್ಘಾನಿಸ್ತಾನ, ಕಾಂಗೋ, ಇಥಿಯೋಪಿಯಾ, ನೈಜೀರಿಯಾ, ದಕ್ಷಿಣ ಸುಡಾನ್, ಸಿರಿಯಾ ಮತ್ತು ಯೆಮೆನ್ ಸೇರಿದಂತೆ ಸುದೀರ್ಘ ಸಂಘರ್ಷಗಳನ್ನು ಅನುಭವಿಸುತ್ತಿರುವ ದೇಶಗಳು ಆಹಾರದ ಕೊರತೆ ಅನುಭವಿಸುತ್ತಿವೆ. ದೀರ್ಘಕಾಲದ ಬರ, ಹೆಚ್ಚುತ್ತಿರುವ ಆಹಾರ ಬೆಲೆಗಳು ಮತ್ತು ನಿರಂತರ ಹಿಂಸಾಚಾರದಿಂದಾಗಿ ಸೊಮಾಲಿಯಾ 2022 ರಲ್ಲಿ ವಿಶ್ವದ ಅತ್ಯಂತ…

Read More

ಎರಡು ವರ್ಷ ಪ್ರೀತಿ ಎಂದು ನಾಟಕವಾಡಿ, ಕೊನೆಗೂ ಮದುವೆಯಾಗುವುದಾಗಿ ಹೇಳಿ ಇನ್ನೇನು ನೋಂದಣಾಧಿಕಾರಿ ಕಚೇರಿಗೆ ಬರುವ ಮಾರ್ಗ ಮಧ್ಯದಲ್ಲೇ ಯುವಕ ನಾಪತ್ತೆಯಾಗಿರುವ ಘಟನೆ ಹನೂರು ತಾಲೂಕಿನ ರಾಮಾಪುರದಲ್ಲಿ ನಡೆದಿದೆ. ಹನೂರು ತಾಲೂಕಿನ ಗ್ರಾಮವೊಂದರ 20 ವರ್ಷದ ಯುವತಿ ಮೋಸ ಹೋದಾಕೆ. ಪೊನ್ನಾಚಿ ಗ್ರಾಮದ ಪರಂಜ್ಯೋತಿ(25) ಎಂಬ ಯುವಕ ಯುವತಿಗೆ ಕೈಕೊಟ್ಟು ಪರಾರಿಯಾದ ಪ್ರಿಯಕರ. ಇಬ್ಬರು ಪ್ರೇಮಿಗಳಾಗಿ ಎರಡು ವರ್ಷ ಕಾಲ ಕಳೆದಿದ್ದಾರೆ.ಮದುವೆಯಾಗು ಎಂದಾಗ ಮೊದಮೊದಲು ಯುವಕ ನಿರಾಕರಿಸಿದ್ದಾನೆ ಎನ್ನಲಾಗಿದೆ. ಬಳಿಕ ನಡೆದ ಪಂಚಾಯಿತಿಯಲ್ಲಿ ಮದುವೆಯಾಗುವುದಾಗಿ ಒಪ್ಪಿ ವಿವಾಹ ನೋಂದಣಿಗಾಗಿ ರಾಮಾಪುರಕ್ಕೆ ತೆರಳುವ ಮಾರ್ಗ ಮಧ್ಯೆಯೇ ಪರಾರಿಯಾಗಿದ್ದಾನೆ. ಸದ್ಯ ಮೋಸ ಹೋದ ಯುವತಿ ರಾಮಾಪುರ ಪೊಲೀಸ್​​ ಠಾಣೆಗೆ ದೂರು ನೀಡಿದ್ದಾಳೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರ ಒಂದೇ ಮಳೆಗೆ ಅಸ್ತವ್ಯಸ್ತವಾದ ಘಟನೆ ನಡೆದಿದ್ದು,  ರಸ್ತೆಗಳ ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರೆ, ಇತ್ತ ಸಾರ್ವಜನಿಕರು ಸರಿಯಾದ ಬಸ್ ತಂಗುದಾಣವಿಲ್ಲದೇ ಪರದಾಡಿದ್ದಾರೆ. ಇತ್ತೀಚೆಗಷ್ಟೇ ಇದೇ ರಸ್ತೆಯ ಅವ್ಯವಸ್ಥೆಯ ಬಗ್ಗೆ ನಮ್ಮತುಮಕೂರು ವರದಿ ಮಾಡಿದ ಬಳಿಕ ಫೆಬ್ರವರಿ 6ರಂದು ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಆದರೆ, ರಸ್ತೆ ಡಾಂಬರೀಕರಣ ಮಾಡಿದರೂ ರಸ್ತೆಯಲ್ಲೇ ನೀರು ನಿಂತು ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆಗೀಡಾಗುವಂತಾಗಿದೆ. ಹಿರಿಯೂರು ತಾಲ್ಲೂಕಿನ ಪ್ರಮುಖ ರಸ್ತೆಗಳಾದ ಹುಳಿಯಾರು ರಸ್ತೆಯಿಂದ ಟಿ.ಬಿ ಸರ್ಕಲ್ ಮಧ್ಯ ಇರುವ ಗಾಂಧಿಸರ್ಕಲ್ ನ ಬಳಿ ಇರುವ ಅಪೋಲೋ ಮೆಡಿಕಲ್ ಬಳಿ ರಸ್ತೆಯಲ್ಲಿ ನೀರು ನಿಂತಿದ್ದು, ರಸ್ತೆ ನದಿಯಂತೆ ಕಂಡು ಬಂತು. ರಸ್ತೆಯ ಗುಂಡಿಗಳಲ್ಲಿ ನೀರು ನಿಂತಿದ್ದು, ಇದನ್ನು ಅರಿಯದೇ ವೇಗವಾಗಿ ಬರುವ ವಾಹನಗಳು ಅಪಘಾತಕ್ಕೀಡಾಗುವ ಸಾಧ್ಯತೆಗಳು ಕಂಡು ಬಂದಿದೆ. ದ್ವಿಚಕ್ರ ವಾಹನ ಸವಾರರ ಪಾಡಂತೂ ಹೇಳತೀರದು. ಹಿರಿಯೂರು ನಗರದಲ್ಲೇ ಇಂತಹ ನಿರ್ಲಕ್ಷ್ಯ ನಡೆಯುತ್ತಿರುವುದರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.…

Read More

ನವದೆಹಲಿಯಲ್ಲಿರುವ ಖಾಸಗಿ ಶಾಲೆಗಳು ತಮ್ಮ ಸ್ವಂತ ಅಂಗಡಿಗಳಿಂದ ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ಖರೀದಿಸಲು ಪೋಷಕರನ್ನು ಒತ್ತಾಯಿಸುವಂತಿಲ್ಲ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಪ್ರತಿ ಶಾಲೆಯು ಪುಸ್ತಕಗಳು ಮತ್ತು ಬಟ್ಟೆಗಳನ್ನು ಖರೀದಿಸಬಹುದಾದ ಕನಿಷ್ಠ 5 ಹತ್ತಿರದ ಅಂಗಡಿಗಳ ಪಟ್ಟಿಯನ್ನು ನೀಡಬೇಕಾಗುತ್ತದೆ ಎಂದು ಅವರು ಹಿಂದಿಯಲ್ಲಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.ಈ ಆದೇಶವನ್ನು ಉಲ್ಲಂಘಿಸುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಇಂದು ಮುಂಜಾನೆ, ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎಸ್‌ಸಿಇಆರ್‌ಟಿ) 35 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಮನೀಶ್ ಶಿಸೋಡಿಯಾ, ಬಲವಾದ ಸಂಶೋಧನೆ ಮತ್ತು ತರಬೇತಿಯಿಂದಾಗಿ ಕಳೆದ ಏಳು ವರ್ಷಗಳಲ್ಲಿ ನಗರದ ಶಿಕ್ಷಣ ಮಾದರಿ ಕ್ರಾಂತಿಕಾರಿ ಬದಲಾವಣೆಗಳನ್ನು ಕಂಡಿದೆ ಎಂದು ಹೇಳಿದರು. ಕಳೆದ ಏಳು ವರ್ಷಗಳಲ್ಲಿ ದೆಹಲಿಯ ಶಿಕ್ಷಣ ಮಾದರಿಯು ಕ್ರಾಂತಿಕಾರಿ ಬದಲಾವಣೆಗಳನ್ನು ಕಂಡಿದೆ.ನಾವು ಹೊಸ ಶಾಲೆಗಳನ್ನು ನಿರ್ಮಿಸಿದ್ದೇವೆ, ಉದ್ಯಮಶೀಲತೆ ಮತ್ತು ದೇಶಭಕ್ತಿಯಂತಹ ಹೊಸ ಪಠ್ಯಕ್ರಮಗಳನ್ನು ಪರಿಚಯಿಸಿದ್ದೇವೆ. ಶಿಕ್ಷಕರು ತರಬೇತಿ ಪಡೆಯಲು ವಿದೇಶಕ್ಕೆ ಕಳುಹಿಸಲಾಗಿದೆ, ಹಾಗಾಗಿ ನಮ್ಮ…

Read More

ತುಮಕೂರು: ಮಳೆಯ ವೇಳೆ ಮರದಡಿಯಲ್ಲಿ ನಿಂತಿದ್ದ ಮಹಿಳೆಯೊಬ್ಬರು ಸಿಡಿಲು ಬಡಿದು ದಾರುಣವಾಗಿ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬೂದನಹಳ್ಳಿಯಲ್ಲಿ ನಡೆದಿದೆ. 43 ವರ್ಷ ವಯಸ್ಸಿನ ಲಕ್ಷ್ಮಮ್ಮ ಅವರು ಮೃತ ಮಹಿಳೆ ಎಂದು ಗುರುತಿಸಲಾಗಿದ್ದು, ಗುರುವಾರ ತುಮಕೂರಿನ ವಿವಿಧೆಡೆ ಮಳೆ ಸುರಿದಿದ್ದು, ಮಳೆಯಿಂದ ರಕ್ಷಣೆ ಪಡೆಯಲು ಮಹಿಳೆ ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದಿದ್ದು, ಪರಿಣಾಮವಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ಕುಣಿಗಲ್ ಶಾಸಕ ಡಾ.ರಂಗನಾಥ್ ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಘಟನೆ ಸಂಬಂಧ ಹುಲಿಯೂರುದುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಪಶ್ಚಿಮ ಬಂಗಾಳ: ಕೋವಿಡ್ ಅಲೆ ಮುಗಿದ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಗುರುವಾರ ಪಶ್ಚಿಮ ಬಂಗಾಳದಲ್ಲಿ ಹೇಳಿಕೆ ನೀಡಿದ್ದಾರೆ. ಉತ್ತರ ಬಂಗಾಳದ ಸಿಲಿಗುರಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಪೌರತ್ವ ಕಾನೂನು ಕೇಂದ್ರದ ಕಾರ್ಯಸೂಚಿಯಲ್ಲಿ ಮರಳಲಿದೆ. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೊಸ ಪೌರತ್ವ ಕಾನೂನನ್ನು ಜಾರಿಗೊಳಿಸುವುದಿಲ್ಲ ಎಂದು ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದರು.  ನಾನು ಇಂದು ಉತ್ತರ ಬಂಗಾಳಕ್ಕೆ ಬಂದಿದ್ದೇನೆ. ತೃಣಮೂಲ ಕಾಂಗ್ರೆಸ್ ಸಿಎಎ ಜಾರಿಗೊಳಿಸುವುದಿಲ್ಲ ಎಂದು ವದಂತಿಗಳನ್ನು ಹರಡುತ್ತಿದೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ, ಕೋವಿಡ್ ಅಲೆ ಕಡಿಮೆಯಾದ ತಕ್ಷಣ ನಾವು ಈ ನೆಲದ ಮೇಲೆ ಸಿಎಎ ಅನ್ನು ಜಾರಿಗೊಳಿಸುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ತುಮಕೂರು: ಮಾಜಿ ಶಾಸಕರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಡಾ.ರಫೀಕ್ ಅಹಮದ್ ರವರಿಗೆ ಅಖಿಲ ಕರ್ನಾಟಕ ಜಮಾತ್ ಎ ಮನ್ಸೂರ್ ನ ಜಿಲ್ಲಾ ಸಂಘಟನಾ ಹಾಗೂ ಅ ಸಂಘಟಿತ ಕಾರ್ಮಿಕರ ವಿಭಾಗದ ಬಶೀರ್ ಅಹ್ಮದ್ ಹಾಗೂ  ಪದಾಧಿಕಾರಿಗಳು ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿ  ಸನ್ಮಾನಿಸಿದರು. ಬಶೀರ್ ಅಹಮದ್ ಹಾಗೂ ಕಾರ್ಯದರ್ಶಿ ಸಾಹಿಲ್ ಪಾಷಾ  ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಬಳಿಕ ತುಮಕೂರು ನಗರದಲ್ಲಿ  ಕಾರ್ಮಿಕ ವಿಭಾಗದ ಪದಾಧಿಕಾರಿಗಳಿಗೆ ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್ ರವರು ಪದಾಧಿಕಾರಿಗಳಿಗೆ ಪಕ್ಷ ಸಂಘಟನೆ ಹಾಗೂ ಪಕ್ಷ ಬಲವರ್ಧನೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು ತುಂಬಾ ಹೆಮ್ಮೆಯ ವಿಚಾರವೆಂದು ತಿಳಿಸಿದರು ಮುಂದಿನ ದಿನಗಳಲ್ಲೂ ಸಹ ಕಾರ್ಮಿಕ ವಿಭಾಗದ ಪದಾಧಿಕಾರಿ ಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿ ತುಮಕೂರು ವಿಧಾನ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ತಮ್ಮ ಪ್ರೋತ್ಸಾಹ ಸದಾ ಕಾಲ ಇರಬೇಕೆಂದು ಮನವಿ ಮಾಡಿಕೊಂಡರು. ವರದಿ: ಎ.ಎನ್ . ಪೀರ್ , ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ತಿಪಟೂರು: ವೀರಶೈವ – ಲಿಂಗಾಯಿತ ಎಂಬ ಪ್ರತ್ಯೇಕ ಧರ್ಮ ಸ್ಥಾಪನೆಗೆ ಮುಂದಾಗದೇ ವೀರಶೈವ ಲಿಂಗಾಯಿತ ಧರ್ಮ ಸ್ಥಾಪನೆಗೆ ಎಲ್ಲಾರೂ ಒಂದಾಗಿ ಸರ್ಕಾರದಿಂದ ಮಾನ್ಯತೆ ಪಡೆಯಬೇಕಿದೆ ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಚರಪಟ್ಟಾಧ್ಯಕ್ಷ ಮೃತ್ಯುಂಜಯದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು.  ನಗರದ ಬಯಲುರಂಗ ಮಂದಿರದಲ್ಲಿ ಬುಧವಾರ ಲಿಂಗಾಯಿತ ವೀರಶೈವ ಸಮಾಜದ ವತಿಯಿಂದ ಆಯೋಜಿಸಿದ್ದ ಬಸವೇಶ್ವರ ಹಾಗೂ ರೇಣುಕಾಚಾರ್ಯರ ಜಯಂತೋತ್ಸವವದ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.  ವೀರಶೈವ ಲಿಂಗಾಯಿತ ಧರ್ಮ ವಿಶ್ವದಲ್ಲಿಯೇ ಶ್ರೇಷ್ಠವಾದಂತಹ ಧರ್ಮವಾಗಿದ್ದು, ವೀರಶೈವ, ಲಿಂಗಾಯಿತ ಎಂಬ ಪ್ರತ್ಯೇಕ ಧರ್ಮಗಳ ರಚನೆಗೆ ಮುಂದಾಗುವ ಬದಲು ವೀರಶೈವ ಲಿಂಗಾಯಿತ ಧರ್ಮದ ಸ್ಥಾಪನೆಗೆ ದೇಶದಾದ್ಯಂತ ಒಂದಾಗಬೇಕಿದೆ. ಇಸ್ಲಾಂ, ಕೈಸ್ತ, ಬೌದ್ಧ ಧರ್ಮದಂತೆಯೇ ವೀರಶೈವ ಲಿಂಗಾಯಿತ ಧರ್ಮದಲ್ಲಿಯೂ ಆರ್ಥಿಕವಾಗಿ ಸದೃಢತೆ ಇಲ್ಲವರು ಅನೇಕರಿದ್ದಾರೆ. ಇತರೆ ಧರ್ಮಗಳಂತೆಯೇ ನಮ್ಮ ಧರ್ಮದ ಜನಾಂಗದವರಿಗೂ ಸಹ ಮೀಸಲಾತಿ ದೊರೆತರೆ ಎಲ್ಲಾ ಕ್ಷೇತ್ರದಲ್ಲಿಯೂ ಸಾಧನೆ ಮಾಡಲು ಅನುಕೂಲವಾಗುತ್ತದೆ. ಇದೀಗ ಯಾವುದೇ ಸೌಲಭ್ಯ ದೊರಕೆ ಜನಾಂಗದ ಯುವಜನತೆ ಶಿಕ್ಷಣ, ಉದ್ಯೋಗ ಇತರೆ ಕ್ಷೇತ್ರದಲ್ಲಿ ಹಿನ್ನೆಡೆಯನ್ನು ಅನುಭವಿಸಿದ್ದಾರೆ. ಸರ್ಕಾರದ…

Read More

ತುಮಕೂರು: ತುಮಕೂರು ನಗರದ ಮಹಿಳಾ ಪೊಲೀಸ್ ಠಾಣೆಯ ನೂತನ ಸಬ್ ಇನ್ಸ್ ಪೆಕ್ಟರ್ ಮಂಗಳಾಮ್ಮ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ಪದಾಧಿಕಾರಿಗಳು ಭೇಟಿಯಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ವಿ.ಎಸ್.ಸೈಯದ್ ದಾದಾಪೀರ್, ಕಾರ್ಮಿಕ ವಿಭಾಗದ ತುಮಕೂರು ಜಿಲ್ಲಾಧ್ಯಕ್ಷ ಅಬ್ದುಲ್ ರಹೀಂ ಜಿ. ಹಾಗೂ ಕಾರ್ಮಿಕ ವಿಭಾಗದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು ವರದಿ: ಎ.ಎನ್. ಪೀರ್,   ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ತುಮಕೂರು: ಮಾಜಿ ಶಾಸಕರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಡಾ.ರಫೀಕ್ ಅಹಮದ್  ಅವರ ಹುಟ್ಟು ಹಬ್ಬದ ಪ್ರಯುಕ್ತ ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ಪದಾಧಿಕಾರಿಗಳು ಹುಟ್ಟು ಹಬ್ಬದ ಶುಭಾಶಯ ತಿಳಿಸಿ ಸನ್ಮಾನಿಸಿದರು. ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಗಳಾದ ವಿ.ಎಸ್. ಸೈಯದ್ ದಾದಾಪೀರ್  ಅವರು ಈ ವೇಳೆ ಮಾತನಾಡಿ, ಡಾ. ರಫೀಕ್ ಅಹಮದ್ ರವರಿಗೆ ಕೆಪಿಸಿಸಿ ಕಾರ್ಮಿಕ ವಿಭಾಗದ ವತಿಯಿಂದ ಹಾಗೂ ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು. ಶಾಸಕರಾದ ಡಾ.ರಫೀಕ್ ಅಹಮದ್ ರವರು ಪದಾಧಿಕಾರಿಗಳಿಗೆ ಪಕ್ಷ ಸಂಘಟನೆ ಹಾಗೂ ಪಕ್ಷ ಬಲವರ್ಧನೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ತುಂಬಾ ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲೂ ಸಹ ಕಾರ್ಮಿಕ ವಿಭಾಗದ ಪದಾಧಿಕಾರಿಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿ ತುಮಕೂರು ವಿಧಾನ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ತಮ್ಮ ಪ್ರೋತ್ಸಾಹ ಸದಾ ಕಾಲ ಪ್ರೋತ್ಸಾಹ ನೀಡಲಿ ಎಂದು ಅವರು ಹಾರೈಸಿದರು. ಈ ವೇಳೆ, ಕಾಂಗ್ರೆಸ್ ಕಾರ್ಮಿಕ…

Read More