Author: admin

ಚಿತ್ರದುರ್ಗ:  ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಟಿ‌.ಬಿ. ಸರ್ಕಲ್ ಬಳಿ ಇರುವ  ನಗರದ ಪ್ರವಾಸಿ ಮಂದಿರದಲ್ಲಿ ಭಾರತೀಯ ದಲಿತ ಸಂಘರ್ಷ ಸಮಿತಿ ರಾಜ್ಯ ಅಧ್ಯಕ್ಷರಾದ ಸಮಾಜ ಸೇವಾ ರತ್ನ ಡಾ.ಎಚ್.ಪ್ರಕಾಶ್ ಬಿರಾವರ್ ಸಮ್ಮುಖದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ  ಸಭೆಯಲ್ಲಿ ಚಿತ್ರದುರ್ಗ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರಾಗಿ ಗಾಂಧಿನಗರ ಮಹಂತೇಶ್  ಅವರನ್ನು ಹಾಗೂ ಹಿರಿಯೂರು ತಾಲ್ಲೂಕು ಅಧ್ಯಕ್ಷರಾಗಿ ಸೂರಗೊಂಡನಹಳ್ಳಿ ರಮೇಶ್ ಅವರನ್ನು ಆಯ್ಕೆ ಮಾಡಲಾಯಿತು. ಹಿರಿಯೂರು ಹಿಂದುಳಿದ ವರ್ಗಗಳ ತಾಲ್ಲೂಕು ಕಾರ್ಯಾಧ್ಯಕ್ಷರಾಗಿ ದರ್ಶನ್  ಅವರನ್ನು, ಹಿಂದುಳಿದ ವರ್ಗಗಳ ತಾಲ್ಲೂಕು ಪ್ರಧಾನ  ಕಾರ್ಯದರ್ಶಿಗಳಾಗಿ ರವಿಕುಮಾರ್ ಸೋಮೇರಹಳ್ಳಿ ರವರನ್ನು  ತಾಲ್ಲೂಕು  ಸಂಘಟನಾ ಕಾರ್ಯದರ್ಶಿಯಾಗಿ ಮಧು ಸೋಮೇರಹಳ್ಳಿ ರವರನ್ನು  ಆಯ್ಕೆಮಾಡಲಾಯಿತು. ಈ ಸಭೆಯಲ್ಲಿ ರಾಜ್ಯ ಕಾರ್ಯಧ್ಯಕ್ಷರಾದ ಕೆ.ತಿಮ್ಮರಾಜು, ಉಪಾಧ್ಯಕ್ಷರುಗಳಾದ ರಾಜಣ್ಣ, ಘಾಟ್ ಚಂದ್ರಪ್ಪ, ಜಗದೀಶ್, ಯುವ ಘಟಕದ ರಾಜ್ಯ ಅಧ್ಯಕ್ಷರಾದ ಎಂ.ಡಿ.ರಮೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ(ಎಳನೀರು ವೆಂಕಟೇಶ್), ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾದ ಹರೀಶ್, ಉಪಾಧ್ಯಕ್ಷರಾದ ಕರುಣ್ ಕುಮಾರ್, ಕಾರ್ಯದರ್ಶಿಗಳಾದ ಮೋಹನ್ ಕುಮಾರ್, ಕಾರ್ಯದರ್ಶಿಯಾದ ದಿವಾಕರ್ ಘಾಟ್, ದಲಿತ…

Read More

ಪಾವಗಡ: ಮಹಾಶಿವರಾತ್ರಿ ಅಂಗವಾಗಿ ಜೇಡಿ ಮಣ್ಣಿನಲ್ಲಿ ಶಿವಲಿಂಗಗಳನ್ನು ರಚಿಸಿ,  ಭಾರತಮಾತೆಯ ಮಧ್ಯಭಾಗದಲ್ಲಿ ಶಿವನ ಚಿತ್ರ ಬಿಡಿಸುವ ಮೂಲಕ ಸಾವಿರಾರು ಜನತೆಯ ಪ್ರಸಂಸೆಗೆ ಪ್ರೀತಿ ಪಾತ್ರವಾದ ಪಾವಗಡ ಪಟ್ಟಣದ ಬ್ರಾಹ್ಮಣರ ಬೀದಿಯ 70 ವರ್ಷದ ರಾಧಮ್ಮಜ್ಜಿಗೆ ಇಂದು ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್  ಶಾಲು ಹೊದಿಸಿ ಗೌರವ ಪೂರಕವಾಗಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಧಮ್ಮಜ್ಜಿ, ಕೋವಿಡ್ ಸಂಕಷ್ಟದಿಂದ ಭಾರತವನ್ನು ಪಾರು ಮಾಡುವಂತೆ ಪರಮಾತ್ಮ ಶಿವನನ್ನು   ಪೂಜಿಸುವ ಕಲಾಕೃತಿಯನ್ನು ಸುಮಾರು 2 ತಿಂಗಳುಗಳಿಂದ ಜೇಡಿ ಮಣ್ಣಿನಲ್ಲಿ ಶಿವಲಿಂಗಗಳನ್ನು ರಚಿಸಿ ಸಾಕಷ್ಟು ಶ್ರಮ ವಹಿಸಿ ನನ್ನ ಪ್ರತಿಭೆಯನ್ನು ತೋರ್ಪಡಿಸಿದ್ದೇನೆ. ಕಲಾ ಕೃತಿಯನ್ನು ವೀಕ್ಷಿಸಲು ಸಾವಿರಾರು ಭಕ್ತಾದಿಗಳು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಆದರೆ ಇಂದು ನಮ್ಮ ನಿವಾಸಕ್ಕೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಹಾಗೂ ತಂಡ ನನ್ನ ಪ್ರತಿಭೆಯನ್ನು ಗುರುತಿಸಿ ಆತ್ಮೀಯವಾಗಿ ಸನ್ಮಾನಿಸಿರುವುದು ನನಗೆ ತುಂಬಾ ಸಂತೋಷಕರವಾಗಿದೆ ಎಂದು  ಹೇಳಿದರು. ಹೆಲ್ಪ್ ಸೊಸೈಟಿ ತಂಡಕ್ಕೆ ಇಂತಹ ಪ್ರತಿಭೆಗಳನ್ನು ಮತ್ತಷ್ಟು ಗುರುತಿಸಿ ಸೇವೆ…

Read More

ಸರಗೂರು ಮತ್ತು ಹೆಚ್ ಡಿ ಕೋಟೆ ಹೆಗ್ಗಡ ದೇವನ ಕೋಟೆ ವಿಧಾನ ಸಭಾ ಕ್ಷೇತ್ರದ  ಶಾಸಕರಾದ ಅನಿಲ್ ಚಿಕ್ಕಮಾದುರವರ ಮಗಳ 2ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಶನಿವಾರ  ಮೈಸೂರಿನ  ವಿಜಯ ನಗರದ ಶ್ರೀ ಯೋಗಾನರಸಿಂಹ  ಸ್ವಾಮಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ತೆರಳಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು. ನಂತರ ದೇವಾಲಯದ ಆವರಣದಲ್ಲಿ ಜನರಿಗೆ ಊಟದ ಹಾಗೂ ಸಿಹಿಯನ್ನು ಶಾಸಕ ಅನೀಲ್ ಚಿಕ್ಕಮಾದು ಮತ್ತು ಅವರ ಧರ್ಮ ಪತ್ನಿ ಸೌಮ್ಯ ಅನೀಲ್ ಅವರು ವಿತರಣೆ ಮಾಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಚಿತ್ರದುರ್ಗ:  ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಪ್ರತಿ   ಬುಧವಾರ ಹಾಗೂ ಶನಿವಾರದ ಸಂತೆಗಳು ನಡೆಯುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೊವಿಡ್ ಹಿನ್ನೆಲೆಯಲ್ಲಿ ವಾರದ ಸಂತೆಗಳನ್ನು ರದ್ದುಪಡಿಸಲಾಗಿತ್ತು. ಇದೀಗ ಕೊವಿಡ್ ನಿಯಂತ್ರಣಕ್ಕೆ ಬಂದಿರುವ ಸಂತೆಯನ್ನು ಮತ್ತೆ ಆರಂಭ ಮಾಡಲಾಗಿದೆ. ಹಿರಿಯೂರು ನಗರಸಭೆ ಆಡಳಿತದ ಅಧಿಕಾರಿಗಳ ಆದೇಶದ ಸಂಖ್ಯೆ  ನ. ಸ.ಹಿ.ಕ. ಶಾ. ಸಿ . ಆರ್ ೧/೨೦೨೧-೨೨  ನಗರಸಭೆ ಕಾರ್ಯಾಲಯದ  ಆದೇಶದ ಪ್ರಕಾರ ಕೋವಿಡ್ ಮತ್ತು ಓಮಿಕ್ರೋನ್ ಸಾಂಕ್ರಾಮಿಕ ರೋಗವು ಸಹಜ ಸ್ಥಿತಿಗೆ ತಲುಪಿರುವುದರಿಂದ  ನಗರಸಭೆ ಕಾರ್ಯಾಲಯದ ಆಡಳಿತ ಅಧಿಕಾರಿಗಳ ಆದೇಶದ ಮೇರೆಗೆ ವಾರದ  ಸಂತೆಯನ್ನು ಎ ಪಿ ಎಂಸಿ ಮಾರ್ಕೆಟ್ ನಿಂದ ಮೊದಲಿನಂತೆ  ಶನಿವಾರ ಹಿರಿಯೂರು ಸರ್ಕಾರಿ ಬಸ್ ನಿಲ್ದಾಣದ ಹಿಂಭಾಗದಲ್ಲಿನ ಬನ್ನಿಮಂಟಪ ಸಂತೇಪೇಟೆಯಲ್ಲಿ ಹಾಗೂ ಬುಧವಾರದ  ಟಿ.ಬಿ.ಸರ್ಕಲ್ ಬಳಿ ಮೊದಲಿನಂತೆ ಸಂತೆಯನ್ನು ಮಾಡುವಂತೆ ನಗರಸಭೆ ಆದೇಶ ಮಾಡಿತ್ತು. ಕಳೆದ ಎರಡು ಮೂರು ವರ್ಷಗಳಿಂದ ಕೊರೊಣ ಹಾಗೂ ಓಮಿಕ್ರೋನ್ ಸಾಂಕ್ರಾಮಿಕ ರೋಗದಿಂದ ತರಕಾರಿ ವ್ಯಾಪಾರಿಗಳ ಪರಿಸ್ಥಿತಿ ಗಳು ನೆಲಗುಂದಿದ್ದವು. ನಗರಸಭೆ ಆಡಳಿತ…

Read More

ತುಮಕೂರು: ಪದ್ಮಶ್ರೀ ಪುರಸ್ಕೃತ ಡಾ.ಸೂಲಗಿತ್ತಿ ನರಸಮ್ಮನವರ 101ನೇ ಜನ್ಮ ದಿನಾಚರಣೆಯು ಮಾರ್ಚ್ 6ರಂದು ಆಚರಿಸಲು ಉದ್ದೇಶಿಸಿದ್ದು,  101ನೇ ಜನ್ಮ ದಿನದ ಆಚರಣೆ ಸಮಿತಿಯು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ತುಮಕೂರಿನ ಎಂ.ಜಿ.ರಸ್ತೆಯ ಬಾಲ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಸಚಿವರಾದ ಎ.ನಾರಾಯಣ ಸ್ವಾಮಿ ಅವರು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ್ದಾರೆ. ಬೆಳಗ್ಗೆ 9 ಗಂಟೆಗೆ ಸ್ಥಳದಲ್ಲೇ ಡಾ.ಸೂಲಗಿತ್ತಿ ನರಸಮ್ಮನವರ ಭಾವಚಿತ್ರ ಕಲಾಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು,  ಸ್ಪರ್ಧೆಯಲ್ಲಿ ಆಯ್ಕೆಯಾದವರಿಗೆ ಪ್ರಥಮ ಬಹುಮಾನ 5 ಸಾವಿರ ರೂ. ದ್ವಿತೀಯ ಬಹುಮಾನ 3 ಸಾವಿರ ರೂಪಾಯಿ,  ತೃತೀಯ ಬಹುಮಾನವಾಗಿ 2 ಸಾವಿರ ರೂಪಾಯಿ ನಗದು ಘೋಷಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಗಂಗಸಂದ್ರದ ಸ್ಮಾರಕ ಸ್ಥಳದಲ್ಲಿ ಗದ್ದಿಗೆ ಪೂಜೆ ನೆರವೇರಲಿದೆ. 11:30ಕ್ಕೆ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ರಾಷ್ಟ್ರೀಯ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು 101 ಗರ್ಭಿಣಿಯರಿಗೆ  ಸೀಮಂತ ಕಾರ್ಯ ಮತ್ತು ಮಡಿಲು ತುಂಬುವ ಕಾರ್ಯಕ್ರಮ ಹಾಗೂ 180 ಸೂಲಗಿತ್ತಿಯರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ…

Read More

ಗುಬ್ಬಿ: ಚೀರನಹಳ್ಳಿ ಮತ್ತು ಬೆಳ್ಳಳ್ಳಿ ಗ್ರಾಮದಲ್ಲಿ ದುರಸ್ತಿ ಮತ್ತು ಪರಿವರ್ತಕ ಸ್ಥಳಾಂತರಕ್ಕೆ ಸೂಚಿಸಿದ್ದರೂ ಬೇಜವಾಬ್ದಾರಿ ತೋರಿದ ಬೆಸ್ಕಾಂ ಸಿಬ್ಬಂದಿ  ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಅವರು ಬೆಸ್ಕಾಂ ಮುಖ್ಯ ಎಂಜಿನಿಯರ್ ಲೋಕೇಶ್ ಅವರಿಗೆ ಮೊಬೈಲ್ ಮೂಲಕ ತರಾಟೆಗೆ ತೆಗೆದುಕೊಂಡ ಘಟನೆ ಇಂದು ಚೀರನಹಳ್ಳಿ ಗ್ರಾಮದ ವಿವಿಧ ಕಾಮಗಾರಿ ಪೂಜಾ ಕಾಮಗಾರಿಗೆ ಆಗಮಿಸಿದ ಸಂದರ್ಭದಲ್ಲಿ ಜರುಗಿತು . ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾದ ಹಿನ್ನೆಲೆ ಗದ್ದೆಹಳ್ಳಿ ಗ್ರಾಮದಲ್ಲಿ ಕಳೆದ 15 ವರ್ಷಗಳಿಂದಲೂ ಕೆಲ ಕುಟುಂಬಗಳ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದಿರುವ ಬಗ್ಗೆ ತುಮಕೂರು ಜಿಪಂ ಕೆಡಿಪಿ ಸಭೆಯಲ್ಲಿ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ಬಗ್ಗೆ ಪ್ರಸ್ತಾಪಿಸಿ ಕೂಡಲೇ ಚೀರನಹಳ್ಳಿಯಲ್ಲಿ ವಿದ್ಯುತ್ ದುರಸ್ಥಿ ಹಾಗೂ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ ಹಲವು ಮನೆಗಳ ಕತ್ತಲು ನಿವಾರಿಸಲು ಸೂಚಿಸಿದ್ದರೂ, ಜಿಲ್ಲಾ ಸಚಿವರ ಮುಂದೆ ಕೆಲಸ ಮಾಡುವ ಮಾತು ಆಡಿದ ಸಿಬ್ಬಂದಿ ಈಗ ಕಾಲ ಕಳೆಯುತ್ತಿರುವುದು ಅವರ…

Read More

ಗುಬ್ಬಿ: ನಾನು ಶಾಸಕನಾಗಿ ಅಧಿಕಾರವಹಿಸಿಕೊಂಡ ನಂತರ ರೈತರ ಮನೆ ಬಾಗಿಲಿಗೆ ತೆರಳಿ ಅವರ ಕಷ್ಟ ಸುಖದಲ್ಲಿ ಭಾಗಿಯಾಗಿ ಜನಸೇವಕನಾಗಿ ಕೆಲಸಮಾಡಿದ್ದೇನೆ ಎಂದು ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ತಿಳಿಸಿದರು. ಸಿ.ಎಸ್.ಪುರ ಹೋಬಳಿಯಲ್ಲಿ ಸುಮಾರು 4 ಕೋಟಿ ವೆಚ್ಚದಲ್ಲಿ ಹಲವು ಗ್ರಾಮಗಳ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಸಿ.ಎಸ್. ಪುರ ದಲ್ಲಿರುವ ನಮ್ಮ ದೇವಸ್ಥಾನದ ಆವರಣದಲ್ಲಿ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಮಾರು ವರ್ಷಗಳಿಂದ ಸಿ.ಎಸ್. ಪುರ ಕೆರೆಯು ತುಂಬದೇ ಇದ್ದು, ಈ ಬಾರಿ ಕೆರೆ ತುಂಬಿ ಹರಿದಿತ್ತು, ಈ ಕೆರೆಯ ನೀರನ್ನು ಮಿತವಾಗಿ ಬಳಸುವ ಸಲುವಾಗಿ ಸಿಎಸ್ ಪುರ ಹೋಬಳಿ ರೈತರನ್ನು ಒಂದೆಡೆ ಸೇರಿಸಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೀರನ್ನು ಬಳಕೆ ಮಾಡಿಕೊಳ್ಳುವ ಬಗ್ಗೆ ರೈತರೊಂದಿಗೆ ಚರ್ಚಿಸಲು ಈ ಸಭೆಯನ್ನು ಕರೆಯಲಾಗಿತ್ತು ಎಂದರು. ವಿದ್ಯುಚ್ಛಕ್ತಿ ಸಮಸ್ಯೆ ಹೆಚ್ಚಾಗಲು ರಾಯಚೂರು ತರ್ಮಲ್ ಕೇಂದ್ರದಲ್ಲಿ ತೊಂದರೆಯಾಗಿದ್ದು, ಸಮಸ್ಯೆ ಈಗಾಗಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಗೆಹರಿಸಿದ್ದು ಇನ್ನುಮುಂದೆ ಯಾವುದೇ ರೀತಿಯ ತೊಂದರೆಯಾಗದಂತೆ ಐದು ಗಂಟೆಗಳ…

Read More

ಚಿಕ್ಕನಾಯಕನಹಳ್ಳಿ : ತಾಲ್ಲೂಕು ಹಂದನಕೆರೆ ಹೋಬಳಿ ಬರಗೂರು ಗ್ರಾಮ ಪಂಚಾಯಿತಿ ಗದ್ದೆಗೆ ರಟ್ಟಿ ಗ್ರಾಮದಲ್ಲಿ ಪಂಚಾಯಿತಿ ವತಿಯಿಂದ ಸರಬರಾಜು ಆಗುವ ಓವರ್ ಟ್ಯಾಂಕ್ ನೀರನ್ನು ಕುಡಿದು ಜನರು ಅಸ್ವಸ್ಥರಾದ ಘಟನೆ ನಡೆದಿದೆ. ಟ್ಯಾಂಕ್ ನೀರು ಸೇವಿಸಿದ ಪರಿಣಾಮ ಜನರಿಗೆ ವಾಂತಿ ಭೇದಿ ಆರಂಭವಾಗಿದ್ದು, ತೀವ್ರವಾಗಿ ಅಸ್ವಸ್ಥಗೊಂಡು ಜನರು ನರಳಿದ ಘಟನೆ ನಡೆದಿದೆ.  ವಿಷಯ ತಿಳಿದ ಸಚಿವರಾದ ಮಾಧುಸ್ವಾಮಿ ಗ್ರಾಮಕ್ಕೆ  ಆಗಮಿಸಿ, ಆರೋಗ್ಯ ಇಲಾಖೆಯವರನ್ನು ಕಳುಹಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು. ಕಳೆದ ಮೂರು ದಿನಗಳಿಂದ ಗ್ರಾಮದ ದೇವಾಲಯದ ಆವರಣದಲ್ಲಿ ವೈದ್ಯರ ತಂಡ ಬೀಡು ಬಿಟ್ಟಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ ಹಾಗೂ ಕೆಲವರು ಹಾಸನ ಆಸ್ಪತ್ರೆಗೆ ದಾಖಲಾಗಿದ್ದಾರೆ . ಕಳೆದ ನಾಲ್ಕು ವರ್ಷಗಳಿಂದ ಓವರ್ ಟ್ಯಾಂಕ್ ಸ್ವಚ್ಛಗೊಳಿಸದಿರುವುದರಿಂದಾಗಿ ಈ ಸಮಸ್ಯೆ ಆರಂಭವಾಗಿದ್ದು, ಅಧಿಕಾರಿಗಳು ಈ ಬಗ್ಗೆ ತೀವ್ರವಾಗಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು  ಹೇಳುತ್ತಿದ್ದಾರೆ. ಈ ಬಗ್ಗೆ ಪಿಡಿಓ ನೀರುಗಂಟಿ ಗಮನಕ್ಕೆ ತಂದರೆ ಉಡಾಫೆ ಮಾತನಾಡುತ್ತಾರೆ ಎಂಬ ಆರೋಪ ಕೇಳಿ ಬಂದಿದೆ. ಈ…

Read More

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ತಾಲ್ಲೂಕು ಕಛೇರಿಯ ಆವರಣದಲ್ಲಿರುವ ಪಿ ಬಿ ರೋಡ್ ಶಾಖೆಯಲ್ಲಿ ಶನಿವಾರದಂದು ಬ್ಯಾಂಕ್ ನಲ್ಲಿ ವಿಪರೀತವಾಗಿ ಜನಜಂಗುಳಿ ಇದ್ದು, ಈ ಶಾಖೆಯಲ್ಲಿ ಐದು ಕೌಂಟರ್ ಗಳು ಇದ್ದರೂ ಸಹ ಸಿಬ್ಬಂದಿ ವರ್ಗದ ಕೊರತೆಯಿಂದ ದಿನನಿತ್ಯ ಈ ಬ್ಯಾಂಕಿಗೆ ಬರುವ ಸಾರ್ವಜನಿಕರು ಘಂಟನುಘಂಟಲೇ ಕಾಯುವಂತ ಪರಿಸ್ಥಿತಿ ಉಂಟಾಗಿದೆ .  ಸಾರ್ವಜನಿಕರು ದಿನನಿತ್ಯದ ತಮ್ಮ ಒತ್ತಡದ ನಡುವೆ ಬೇಗನೆ ತಮ್ಮ ವ್ಯವಹಾರ ಮಾಡಿಕೊಂಡು ಹೋಗೋಣ ಎಂದು ಬಂದರೆ, ಯಾವುದೇ ಕೆಲಸಗಳಿಗೂ ಬ್ಯಾಂಕ್ ನಲ್ಲಿ ಘಂಟನುಘಂಟಲೇ ಕಾಯಬೇಕಾದ ಪರಿಸ್ಥಿತಿಯಾಗಿದೆ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದರು. ಸಂಬಂಧಪಟ್ಟ ಶಾಖಾ ವ್ಯವಸ್ಥಾಪಕರು ಈ ಕೂಡಲೇ ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ಶಾಖೆಗೆ ದಿನನಿತ್ಯ ಬರುವ ಸಾರ್ವಜನಿಕರಿಗೆ ಅನುಕೂಲಮಾಡಿಕೊಡುವಂತೆ ಹಾಗೂ ಈ ಶಾಖೆಯಲ್ಲಿ ಸಿಬ್ಬಂದಿ ವರ್ಗದವರ ಕೊರತೆ ಇರುವುದರಿಂದ ಮೇಲ್ಪಾಟ್ಟ ಶಾಖಾ ವ್ಯವಸ್ಥಾಪಕರು ಈ ಕೂಡಲೇ ಈ ಶಾಖೆಗೆ ಸಿಬ್ಬಂದಿ ವರ್ಗದವರನ್ನು ನೇಮಕಮಾಡಿಕೊಂಡು ದಿನನಿತ್ಯ ವ್ಯವಹಾರ ಮಾಡಲು ಬರುವಂತಹ ಸಾರ್ವಜನಿಕರಿಗೆ ಅನುಕೂಲಮಾಡಿಕೊಡುವಂತೆ ಸಾರ್ವಜನಿಕರು ಮನವಿ…

Read More

ಹೆಣ್ಣು ಮಕ್ಕಳ ಚಟಕ್ಕೆ ಬಿದ್ದು ಕಳ್ಳತನ ಮಾಡುತ್ತಿದ್ದ ವೃದ್ಧನನ್ನ ಸುದ್ದುಗುಂಟೆ ಪೊಲೀಸರು ಬಂಧಿಸಿದ್ದಾರೆ. 70 ವರ್ಷದ ರಮೇಶ್ ಬಂಧಿತ ಆರೋಪಿ ಎಂದು ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿ ತಿಳಿಸಿದ್ದಾರೆ. ಸಿಸಿಟಿವಿ ಆಧರಿಸಿ ಮನೆಗಳ್ಳತನ ಪ್ರಕರಣಗಳ ಸಂಬಂಧಗಳ ತನಿಖೆಯ ವಿಚಾರಣೆ ವೇಳೆ ಆರೋಪಿ ರಮೇಶ್ ಗೆ ಹೆಣ್ಣು ಮಕ್ಕಳ ಚಟ ಇರುವ ಬಗ್ಗೆ ಬಯಲಿಗೆ ಬಂದಿದೆ. ಆರೋಪಿ ರಮೇಶ್(Ramesh) ಎರಡು ಮದುವೆ, ಮೂರು ಮಕ್ಕಳಾಗಿದ್ದರು ಆಸೆ ಕಡಿಮೆಯಾಗಿಲ್ಲ. ಆರೋಪಿ ಮೂಲತಃ ಚಿಕ್ಕಮಗಳೂರಿನವ, ತನ್ನ ಚಟಕ್ಕೆ ಮನೆಯಲ್ಲಿ ಹಣ ಕೊಡಲಿಲ್ಲ ಎಂದು ಮನೆ ಕಳ್ಳತನ ಮಾಡಲು ಆರಂಭಿಸಿದ್ದ. ಆರೋಪಿ ರಮೇಶ್ ಕಳೆದ 12 ವರ್ಷಗಳ ಹಿಂದೆ ಮನೆ ತೊರೆದು ತಮಿಳುನಾಡಿಗೆ(Tamilunadu) ತೆರಳಿದ್ದ. ಅಲ್ಲಿ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಬಂದ ಹಣದಲ್ಲಿ ವ್ಯಾಮೊಹ ತೀರಿಸಿಕೊಳ್ಳುತಿದ್ದ. ಆದ್ರೆ ಯಾವಾಗ ತಮಿಳುನಾಡು ಪೊಲೀಸರು ಬಂಧಿಸಿದ್ರೊ ಬಿಡುಗಡೆಯಾದ ಬಳಿಕ ಬೆಂಗಳೂರಿಗೆ ಶಿಫ್ಟ್ ಆಗಿದ್ದ. ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಮನೆಗಳ್ಳತನ ಮಾಡಲು ಆರಂಭಿಸಿದ್ದ. ಸಧ್ಯ ಸುದ್ದುಗುಂಟೆ ಪಾಳ್ಯ…

Read More