Subscribe to Updates
Get the latest creative news from FooBar about art, design and business.
- ಗ್ರಾಮೀಣ ಮೂಲಭೂತ ಸೌಕರ್ಯ ಕಲ್ಪಿಸುವುದೇ ನಮ್ಮ ಆದ್ಯತೆ, ಜು.1 ರಿಂದ ನರೇಗಾ ಬದಲು ವಿಬಿಜಿ ರಾಮ್ ಜಿ ಯೋಜನೆ ಜಾರಿ : ಜಿಪಂ ಸಿಇಒ
- ಬೆಳಕುಣಿ ಚೌದ್ರಿ ಗ್ರಾಮದಲ್ಲಿ ನೀರಿನ ಹಾಹಾಕಾರ: ಸ್ಥಳಕ್ಕೆ ತಾಲೂಕು ಅಧಿಕಾರಿಗಳ ಭೇಟಿ, ಭರವಸೆ
- ಸರಗೂರು: ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷರಾಗಿ ಮನುಗನಹಳ್ಳಿ ಎಂ.ಪಿ. ಮಂಜುನಾಥ್ ನೇಮಕ
- ತುಮಕೂರು: ವಿಮೆ ಹಣ, ಮದ್ಯದ ಅಮಲಿಗೆ ನಡೆದಿದ್ದ 3 ಭೀಕರ ಕೊಲೆ ಕೇಸ್ ಭೇದಿಸಿದ ಪೊಲೀಸರು; 7 ಮಂದಿ ಬಂಧನ
- ಉತ್ತಮ ಆರೋಗ್ಯಕ್ಕೆ ರಕ್ತ ಪರೀಕ್ಷೆ ಸಹಕಾರಿ: ಮುರಳೀಧರ್ ಹಾಲಪ್ಪ
- ತುಮಕೂರು: ಆನ್ಲೈನ್ ಕೌನ್ಸಿಲಿಂಗ್ ಮೂಲಕ 41 ಸರ್ಕಾರಿ ನೌಕರರ ವರ್ಗಾವಣೆ
- ವೃದ್ದೆಯನ್ನು ಕೊಲೆ ಮಾಡಿ ಕೇರಳ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ
- ಸರಗೂರು: ಕೆಎಸ್ ಆರ್ ಟಿಸಿ ಬಸ್ ಹರಿದು ಮಹಿಳೆಗೆ ಗಂಭೀರ ಗಾಯ; ಆಕ್ರೋಶ
Author: admin
ಬೆಂಗಳೂರು: ಶಾಲೆಗಳಲ್ಲಿ ವಿನಾಯಕನ ಪ್ರತಿಷ್ಠಾಪನೆಗೆ ಯಾವುದೇ ನಿರ್ಬಂಧವಿಲ್ಲ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟ ಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಶಾಲೆಗಳಲ್ಲಿ ಗಣೇಷ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಬಂಧವಿಲ್ಲ. ಸರಸ್ವತಿ ಪೂಜೆ, ಗಣೇಶ ಪ್ರತಿಷ್ಠಾಪನೆ ನಡೆಯುತ್ತಿದೆ. ಮುಂದೆಯೂ ಸರಸ್ವತಿ ಪೂಜೆ, ಗಣೇಶ ಪ್ರತಿಷ್ಠಾಪನೆ ನಡೆಯಲಿದೆ ಎಂದರು. ಶಾಲೆಗಳಲ್ಲಿ ಈ ಪದ್ಧತಿಯು ಬಾಲಗಂಗಾಧರ ತಿಲಕ್ ಕಾಲದಿಂದಲೂ ಇದೆ. ಆದರೇ ಯಾವುದೇ ನಮಾಜ್, ಕೃಷ್ಣ ಪೂಜೆ, ಅಯ್ಯಪ್ಪ ಪೂಜೆ, ಕ್ರೈಸ್ತರ ಪ್ರಾರ್ಥನೆಗೆ ಶಾಲೆಗಳಲ್ಲಿ ಅವಕಾಶವಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಕೊರಟಗೆರೆ: ನೊಣದ ಕಾಟದಿಂದ ತಪ್ಪಿಸಿಕೊಳ್ಳಲು ಗ್ರಾಮಸ್ಥರು ಊರು ತೊರೆದ ಘಟನೆ ನಡೆದಿದ್ದು, ಕೊರಟಗೆರೆ ತಾಲೂಕಿನ ಬೋಮ್ಮಲದೇವಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತೊಗರಿಘಟ್ಟ ಗ್ರಾಮದ ಪಕ್ಕ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಕೋಳಿ ಫಾರಂನಿಂದಾಗಿ ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಿದೆ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಕೋಳಿಗಳನ್ನು ಈ ಕೋಳಿ ಸಾಕಾಣಿಕೆ ಫಾರಂ ಸಾಕಲಾಗುತ್ತಿದೆ. ಪಕ್ಕದಲ್ಲಿಯೇ ಶ್ರೀ ಆದಿ ತಿಮ್ಮಪ್ಪ ದೇವಸ್ಥಾನ ಇದ್ದು, ಈ ಭಾಗದ ಸುತ್ತ ಮುತ್ತಲಿನ ಸುಮಾರು 15-20 ಗ್ರಾಮದವರು ಮದುವೆ, ಮುಂಜಿ, ನಾಮಕರಣ ಸೇರಿದಂತೆ ಇಂತಹ ಶುಭ ಸಮಾರಂಭಗಳನ್ನು ಮಾಡುತಿದ್ದರು. ಆದರೆ ಈ ಕೋಳಿ ಫಾರಂ ಆದಾಗಿನಿಂದ ನೊಣಗಳಕಾಟ ಹಾಗೂ ಗೊಬ್ಬರದ ಗಬ್ಬುನಾತ ಬೀರುತ್ತಿದೆ. ಈ ದುರ್ವಾಸನೆಗೆ ತೊಗರಿಘಟ್ಟ,ಮುದ್ದನಹಳ್ಳಿ ಬಿ.ಡಿ.ಪುರ ದುಗ್ಗೆನಹಳ್ಳಿ, ಶಕುನಿತಿಮ್ಮನಹಳ್ಳಿ , ಸೇರಿದಂತೆ ಸುಮಾರು ಹದಿನೈದು ಇಪ್ಪತ್ತು ಹಳ್ಳಿಗಳ ಜನರು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಜನ ಮಾತ್ರವಲ್ಲದೇ ಜಾನುವಾರುಗಳು ಕೂಡ ನೊಣದ ಕಾಟದಿಂದ ಸಂಕಷ್ಟಕ್ಕೀಡಾಗಿದೆ. ಕುರಿ, ಮೇಕೆಗಳ ಕಣ್ಣು ಮೂಗು ಬಾಯಿ ಮೇಲೆ ನೋಟಗಳ ಕಾಟದಿಂದ…
ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ ಕ್ಯಾತಗಾನಹಳ್ಳಿ ಗ್ರಾಮದ ರಂಗಪ್ಪನ ಮಗ ಮಹೇಶ್ ಎನ್ನುವ 35 ವರ್ಷದ ರೈತ ನಿನ್ನೆ ಸಂಜೆ ಮನೆಯಿಂದ ತನ್ನ ತೋಟಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೊರಟಿದ್ದ ಮಹೇಶ್ ರಾತ್ರಿ 8ಗಂಟೆಯಾದರೂ ಮನೆಗೆ ಬರಲಿಲ್ಲ . ಮಹೇಶ್ ಪತ್ನಿ ಅನೇಕ ಬಾರಿ ಮಹೇಶ್ ಫೋನ್ ಗೆ ಕರೆ ಮಾಡಿದರೂ ಫೋನ್ ಸ್ವೀಕರಿಸದ ಕಾರಣ ಅನುಮಾನಗೊಂಡ ಕುಟುಂಬಸ್ಥರು . ತೋಟದ ಕಡೆ ಹುಡುಕಾಟ ನಡೆಸಿದ್ದು, ಅವರಿಗೆ ಅಕ್ಕಪಕ್ಕದ ಮನೆಯವರೂ ಹುಡುಕಾಟಕ್ಕೆ ಸಹಕಾರ ಮಾಡಿದ್ದಾರೆ. ತೋಟದ ಬಳಿ ಹೋಗಿ ನೋಡಿದಾಗ ಮಹೇಶ್ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವುದು ಕಂಡು ಬಂದಿತ್ತು. ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು ಬೆಸ್ಕಾಂ ಇಲಾಖೆಗೆ ಫೋನ್ ಮಾಡಿ ವಿಷಯ ಮುಟ್ಟಿಸಿದ್ದಾರೆ ವಿಷಯ ತಿಳಿದ ಕೋಳಾಲ ಬೆಸ್ಕಾಂ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರದೆ ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯತನ ತೋರಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಹೇಶ್ ಮದುವೆಯಾಗಿ ವರ್ಷ ಕೂಡ ಕಳೆದಿಲ್ಲ ಇದಕ್ಕೆಲ್ಲ ಕಾರಣ ಬೆಸ್ಕಾಂ ಇಲಾಖೆ ಅಧಿಕಾರಿಗಳೆಂದು ಮಹೇಶ್ ಸ್ನೇಹಿತರು…
ಬೆಂಗಳೂರು: ಬ್ರಿಟನ್ನಿನಲ್ಲಿದ್ದಾಗ ಸಾವರ್ಕರ್ ಗೋ ಮಾಂಸ ತಿಂದಿದ್ದರು, ಅವರು ಗೋಪೂಜೆಯನ್ನು ವಿರೋಧಿಸುತ್ತಿದ್ದರು ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಗೋವು ಮಾತೆಯಲ್ಲ, ಅದು ಅದರ ಕರುವಿನ ಮಾತೆ ಎಂದು ಸಾವರ್ಕರ್ ಹೇಳಿದ್ದರು. ಭಗತ್ ಸಿಂಗ್ ನಿಜವಾದ ದೇಶಭಕ್ತರು, ಸಾವರ್ಕರ್ ಅಲ್ಲ. ರವಿಕುಮಾರ್ ಇದರ ಇತಿಹಾಸವನ್ನು ಓದಿಕೊಳ್ಳಲಿ ಎಂದಿದ್ದಾರೆ. ಇನ್ನು ಜನೋತ್ಸವ ಮಾಡಲು ಸರ್ಕಾರದ ಪ್ರಯತ್ನ ನಡೆದಿತ್ತು. ಜನರ ಆಕ್ರೋಶದಿಂದ ಎರಡು ಮೂರು ಬಾರಿ ಮುಂದೂಡಿಕೆಯಾಗಿದೆ. ಇದೀಗ ಜನೋತ್ಸವ ಬಿಟ್ಟು ಸಾವರ್ಕರ್ ಉತ್ಸವ ಮಾಡುತ್ತಿದ್ದಾರೆ. ಬಿಜೆಪಿಯವರದ್ದು ವಾಟ್ಸಾಪ್ ಯೂನಿರ್ಸಿಟಿ ಹಾಗಾಗಿ ಅದರಲ್ಲಿ ಏನೂ ಇರುವುದಿಲ್ಲ ಎಂದು ಕಿಡಿಕಾರಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಧಾರವಾಡ: ಖಾಸಗಿ ಬಸ್ ಮತ್ತು ಲಾರಿ ನಡುವೆ ಡಿಕ್ಕಿಯಾಗಿ ಸ್ಥಳದಲ್ಲಿಯೇ ಲಾರಿ ಕ್ಲೀನರ್ ಸಾವನ್ನಪ್ಪಿರುವ ಘಟನೆ ಧಾರವಾಡ ಹೊರವಲಯದ ಹಳಿಯಾಳ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಲಾರಿ ಚಾಲಕನಿಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಖಾಸಗಿ ಬಸ್ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಶೀಘ್ರದಲ್ಲೇ ಕೇಂದ್ರ ಸರ್ಕಾರ ಟೋಲ್ ಪ್ಲಾಜಾಗಳನ್ನು ತೆಗೆದುಹಾಕಲಿದೆ. ಇದರರ್ಥ ಇನ್ನು ಮುಂದೆ ಟೋಲ್ ಸಂಗ್ರಹ ಇರುವುದಿಲ್ಲವೆ? ಅಲ್ಲ, ಆದರೆ ಟೋಲ್ ಗೇಟ್ ಇರುವುದಿಲ್ಲ.. ಟೋಲ್ ಸಂಗ್ರಹ ಇರುತ್ತದೆ. ಮತ್ತು ಟೋಲ್ ಪ್ಲಾಜಾಗಳನ್ನು ತೆಗೆದುಹಾಕಿದರೆ, ಸಂಗ್ರಹಗಳು ಹೇಗೆ ಮಾಡುತ್ತವೆ ಎಂಬ ಅನುಮಾನ ಬರಬಹುದು. ಆದರೆ ತಂತ್ರಜ್ಞಾನ ಅಭಿವೃದ್ಧಿಯ ಭಾಗವಾಗಿ ಏನು ಬೇಕಾದರೂ ಆಗಬಹುದು. ಸರಕಾರವು ಅದರ ಭಾಗವಾಗಿ FASTAG ವ್ಯವಸ್ಥೆಯನ್ನು ಲಭ್ಯಗೊಳಿಸಿದೆ. ಆದರೆ ಇದು ಇನ್ನು ಮುಂದೆ ಇರುವುದಿಲ್ಲ. ಆದರೆ, ನೇರವಾಗಿ ಬ್ಯಾಂಕ್ ಖಾತೆಯಿಂದ ಟೋಲ್ ಸಂಗ್ರಹ ಮಾಡಲಾಗುವುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ಟೋಲ್ ಪ್ಲಾಜಾಗಳಿಲ್ಲದೆ ದಟ್ಟಣೆ ಕಡಿಮೆಯಾಗಲಿದೆ. ಟೋಲ್ ಪ್ಲಾಜಾಗಳಿಲ್ಲದಿದ್ದರೆ ಏನಾಗಬಹುದು? ಇದರಿಂದ ವಾಹನ ಸವಾರರಿಗೆ ಸಾಕಷ್ಟು ಸಮಯ ಉಳಿತಾಯವಾಗುತ್ತದೆ. ಅದೇ ಪ್ರೇರಣೆಯಿಂದ ಕೇಂದ್ರ ಸರ್ಕಾರವು ಟೋಲ್ ಪ್ಲಾಜಾಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಯೋಜನೆಗೆ ಹೆಜ್ಜೆ ಹಾಕುತ್ತಿದೆ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಕುರಿತು ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಟೋಲ್ ಪ್ಲಾಜಾಗಳಿಲ್ಲದಿದ್ದರೆ, ಟೋಲ್…
ವಡಗಾವಿಯ ತೆಗ್ಗಿನಗಲ್ಲಿ ನಿವಾಸಿ ಶೋಭಾ ವಲ್ಲೇಪೂರಕರ ಅನ್ನುವ 40 ವರ್ಷದ ಮಹಿಳೆ ಆಗಸ್ಟ್ 21 ರಂದು ಬೆಳಿಗ್ಗೆ 8:7 ಗಂಟೆಗೆ ಶಹಾಪೂರದಲ್ಲಿರುವ ಚಂದ್ರಕಲಾ ಹೇಡಾ ಇವರ ಮನೆಗೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಮಹಿಳೆ ಚಹರೆ:4 ಅಡಿ 8 ಇಂಚು ಎತ್ತರ, ದುಂಡು ಮುಖ, ಗಿಡ್ಡ ಮೂಗು, ಸಡಪಾತಾಳ ಮೈಕಟ್ಟು, ಗೋದಿಗೆಂಪು ಮೈಬಣ್ಣ ಹೊಂದಿರುವ ಮಹಿಳೆ ನಾಪತ್ತೆ ವೇಳೆಯಲ್ಲಿ ಬಿಳಿ ಮತ್ತು ಕೆಂಪು ಬಣ್ಣದ ಸಾಡಿ ಹಳದಿ ಬಣ್ಣದ ಜಂಪರ್ ಧರಿಸಿದ್ದಳು.. ಕನ್ನಡ, ಹಿಂದಿ, ತೆಲಗು, ಮರಾಠಿ ಭಾಷೆ ಬಲ್ಲ ಮಹಿಳೆ ಸುಳಿವು ಸಿಕ್ಕವರು ತಕ್ಷಣವೇ ಶಹಾಪೂರ ಪೊಲೀಸ್ ಠಾಣೆ ದೂರವಾಣ ಸಂಖ್ಯೆ 9480804046, 0831-2405233 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲ ತಿಳಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು : ರಾಜ್ಯ ಸರ್ಕಾರದ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮುಖ್ಯಮಂತ್ರಿ ಬೊಮ್ಮಾಯಿಯಿಂದ ಹಿಡಿದು ಎಲ್ಲ ಸಚಿವರುಗಳು, ಶಾಸಕರು ಪ್ರತಿಯೊಂದು ಇಲಾಖೆಯಲ್ಲಿಯೂ ಭ್ರಷ್ಟಾಚಾರ ನಡೆಸುತ್ತಿದ್ದು, ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಮತ್ತೊಮ್ಮೆ ಪ್ರಧಾನಿ ಮೋದಿಗೆ ಪತ್ರ ಬರೆಯುವುದಾಗಿ ಕೆಂಪಣ್ಣ ಹೇಳಿದ್ದು ಕೋಲಾರ ಜಿಲ್ಲೆ ಉಸ್ತುವಾರಿ ಸಚಿವ ಮುನಿರತ್ನ ಅವರ ಹೆಸರನ್ನು ಮಾಧ್ಯಮಗಳ ಮುಂದೆ ಪ್ರಸ್ತಾಪಿಸಿರುವ ಗುತ್ತಿಗೆದಾರರ ಕೆಲಸ ಮಂಜೂರು ಆಗಬೇಕೆಂದರೆ ಲಂಚ ಕೊಡಬೇಕು, ಇಲ್ಲದಿದ್ದರೆ ಗುತ್ತಿಗೆ ರದ್ದು ಮಾಡಲಾಗುವುದು,ಹಣ ಕಲೆಕ್ಟ್ ಮಾಡಿ ತನ್ನಿ ಎಂದು ತೋಟಗಾರಿಕೆ ಸಚಿವ ಮುನಿರತ್ನ ನೇರವಾಗಿ ಬೆದರಿಕೆ ಹಾಕುತ್ತಾರೆ ಎಂದು ಕೆಂಪಣ್ಣ ದೂರಿದರು. ಸರ್ಕಾರದ ಸಚಿವರು, ಶಾಸಕರು ಲಂಚ, ಭ್ರಷ್ಟಾಚಾರದಲ್ಲಿ ನಂಬರ್ 1 ಮತ್ತು 2 ಸ್ಥಾನದಲ್ಲಿದ್ದಾರೆ. ಗುತ್ತಿಗೆದಾರರಿಂದ ಕಾಮಗಾರಿ ಹಣದಲ್ಲಿ ಶೇಕಡಾ 40ರಷ್ಟು ಲಂಚ ಪಡೆಯುತ್ತಾರೆ. ಅವರಿಗೆ ಇಷ್ಟೊಂದು ಲಂಚ ಹೋದರೆ ಉಳಿದ ಹಣದಲ್ಲಿ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಲು…
ಬೆಳಗಾವಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳು ಸ್ಥಾಪನೆಗೊಂಡಾಗಿನಿಂದ ಬಡವರಿಗೆ ಅಕ್ಷಯ ಪಾತ್ರೆಯಾಗಿ ಹೊರಹೊಮ್ಮಿದೆ. ಲಕ್ಷಾಂತರ ಬಡಜನರು ಈ ಗ್ರಾಮಾಭಿವೃದ್ಧಿ ಸಂಘಗಳ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇತ್ತಿಚಿನ ದಿನಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಶಾಖೆಗಳು ರಾಜ್ಯಾದ್ಯಂತ ಹರಡಿ ಜನರ ಸೇವೆ ಮಾಡುತ್ತಿವೆ. ತನ್ಮೂಲಕ ಸಮಾಜಕ್ಕೆ ಆದರ್ಶವಾಗಿವೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಮೊದಗಾ ಹಾಗೂ ಸುಳೇಭಾವಿ ಕಾರ್ಯಕ್ಷೇತ್ರದ ಸ್ವಸಹಾಯ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ವರಮಹಾಲಕ್ಷ್ಮೀ ಪೂಜಾ ಹಾಗೂ ಧಾರ್ಮಿಕ ಸಭೆಯನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು. ಈ ಸಮಯದಲ್ಲಿ ದತ್ತಾ ಬಂಡಿಗಿಣಿ, ಶಂಕರಗೌಡ ಪಾಟೀಲ, ಲಕ್ಷ್ಮೀ ನಾರಾಯಣ ಕಲ್ಲೂರ, ವಿಠ್ಠಲ ಬಂಡಿಗಿಣಿ, ರುದ್ರಪ್ಪ, ಮಹೇಶ ಸುಗಣೆನ್ನವರ, ದುಗ್ಗೇಗೌಡ, ಪ್ರದೀಪ ಶೆಟ್ಟಿ, ಮಹಾಂತೇಶ ಬಸ್ಸಾಪುರ, ಗೀತ ಹಣಗೋಜಿ, ಶೈಲಾ ವಠಾರೆ ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…
ಬೆಂಗಳೂರು : ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ ಕಾರ್ಡ್ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದೇಶದಲ್ಲಿ ತಿಳಿಸಿರುವಂತೆ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದ ಅಡುಗೆ ಸಿಬ್ಬಂದಿಯು ಸರ್ಕಾರದ ಪೂರ್ಣಕಾಲಿಕ ನೌಕರರಾಗುವುದಿಲ್ಲ. ನಿಗದಿತ ಗೌರವಧನ ಪಡೆದು ಪ್ರತಿ ದಿನ 4 ಗಂಟೆಗಳ ಅವಧಿಗೆ ಶಾಲೆಗಳಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಾರೆ. ಆದ್ದರಿಂದ ಈ ಅಡುಗೆ ಸಿಬ್ಬಂದಿಯ ವಾಸಸ್ಥಳವನ್ನು ಪರಿಶೀಲಿಸಿ ಮಹಾತ್ಮಗಾಂಧಿ ನರೇಗಾ ಅಧಿನಿಯಮದನ್ವಯ ಜಾಬ್ ಕಾರ್ಡ್ ನೀಡಲು ಮತ್ತು ಯೋಜನೆಯ ಕಾಮಗಾರಿಗಳಲ್ಲಿ ಕೆಲಸ ಒದಗಿಸಲು ಅಗತ್ಯ ಕ್ರಮವಹಿಸುವಂತೆ ಆದೇಶಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy