Subscribe to Updates
Get the latest creative news from FooBar about art, design and business.
- ಯುವ ಜನತೆ ಕಾನೂನು ಸುರಕ್ಷತೆ ಪಾಲನೆ, ಸಾಮಾಜಿಕ ಜವಾಬ್ದಾರಿ ರೂಢಿಸಿಕೊಳ್ಳಬೇಕು: ಪ್ರಸನ್ನ ಕುಮಾರ್ ಸಲಹೆ
- ಮೇಕೆದಾಟು ಯೋಜನೆ: ಕಾಂಗ್ರೆಸ್ ಗೆ ಮತ್ತೆ ಸವಾಲು ಹಾಕಿದ ಹೆಚ್.ಡಿ.ಕುಮಾರಸ್ವಾಮಿ
- ಮದುವೆ ದಿಬ್ಬಣದ ಕಾರು ಭೀಕರ ಅಪಘಾತ: ವರ ಸಹಿತ 8 ಮಂದಿ ಸಾವು
- ಹಿಂದೂ ಮುಖಂಡನ ಮೊಬೈಲ್ ನಲ್ಲಿ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಪತ್ತೆ
- ನದಿಗೆ ಹಾರಿದ್ದ ಯುವತಿ ಮರಕ್ಕೆ ಸಿಲುಕಿ ರಾತ್ರಿಯಿಡೀ ಒದ್ದಾಟ!
- ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ!
- ಸುಭಾಷ್ ಪದವಿ ಪೂರ್ವ ಕಾಲೇಜಿನಲ್ಲಿ ವೆಲ್ಕಮ್ ಡೇ
- ಚಿಕ್ಕದೇವಮ್ಮನ ಬೆಟ್ಟವನ್ನು ಪ್ರವಾಸಿ ತಾಣ ಮಾಡಲು ಸಿಎಂಗೆ ಮನವಿ: ಶಾಸಕ ಅನಿಲ್ ಚಿಕ್ಕಮಾದು
Author: admin
ಬೆಳಗಾವಿ: ಮತಾಂತರ ನಿಷೇಧ ಮಸೂದೆ ಇದೇ ಅಧಿವೇಶನದಲ್ಲಿ ಮಂಡಿಸುವ ಬಗ್ಗೆ ಬುಧವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆಯಿತು. ಈ ವಿಷಯವನ್ನು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಬಿಟ್ಟು ನಂತರ ಮಂಡಿಸುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂದಿತು. ಇನ್ನು ಕೆಲವು ಶಾಸಕರು ಸಾರ್ವಜನಿಕ ಚರ್ಚೆ ನಡೆಸದೇ ಮಂಡಿಸುವುದು ಸೂಕ್ತ ಎಂಬ ವಾದವನ್ನೂ ಮುಂದಿಟ್ಟರು. ಆ ರೀತಿ ಮಾಡುವುದೇ ಆದರೆ, ಕೆಲವು ತಿದ್ದುಪಡಿಗಳನ್ನು ಮಾಡಬೇಕು ಎಂಬ ಅಭಿಪ್ರಾಯ ಕೇಳಿ ಬಂದಿತು ಎಂದು ಮೂಲಗಳು ತಿಳಿಸಿವೆ ಮಸೂದೆ ಮಂಡಿಸುವುದೇ ಆದರೆ, ಮುಂದಿನ ವಾರ ವಿಧಾನಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಈ ಮಸೂದೆಯ ಅಂಗೀಕಾರಕ್ಕೆ ವಿರೋಧ ಪಕ್ಷಗಳು ಅಡ್ಡಿ ಉಂಟು ಮಾಡುವ ಸಾಧ್ಯತೆ ಇದ್ದು, ವಿಧಾನಪರಿಷತ್ತಿನಲ್ಲಿ ಬಹುಮತ ಇಲ್ಲದ ಕಾರಣ ಜೆಡಿಎಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬಗ್ಗೆಯೂ ಚರ್ಚಿಸಲಾಯಿತು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ತುಮಕೂರು: ಇತಿಹಾಸ ಪ್ರಸಿದ್ಧ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಹನುಮ ಜಯಂತಿ ಪ್ರಯುಕ್ತ ಕೋಟೆ ಶ್ರೀಆಂಜನೇಯ ಸ್ವಾಮಿ ವೃತ್ತ ಕೇಸರಿ ಧ್ವಜಗಳಲ್ಲಿ ಕಂಗೊಳಿಸುತ್ತಿದ್ದು, ಕೋಟೆ ಶ್ರೀ ಆಂಜನೇಯಸ್ವಾಮಿ ಯುವಕರ ಬಳಗ ಹನುಮ ಜಯಂತಿ ಪ್ರಯುಕ್ತ ಸಕಲ ಕೆಲಸ ಕಾರ್ಯಗಳಲ್ಲಿಯೂ ಭಾಗಿಯಾಗುತ್ತಿದೆ. ಗುರುವಾರ 10ನೇ ವರ್ಷದ ವೈಭವದ ಹನುಮ ಜಯಂತಿ ಹಾಗೂ ನೂತನ ರಥೋತ್ಸವ ನಡೆಯಲಿದ್ದು, ಶುಕ್ರವಾರ ಬೆಳಗ್ಗೆ 11:30ಕ್ಕೆ ಕೋಟೆ ಶ್ರೀ ಆಂಜನೇಯ ಸ್ವಾಮಿಯ ವೈಭವದ ಮೆರವಣಿಗೆಯನ್ನು ತುಮಕೂರಿನ ರಾಜಬೀದಿಗಳಲ್ಲಿ ನಡೆಯಲಿದೆ. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಪುರಾತನ ದೇವಸ್ಥಾನವಾಗಿದ್ದು, ಈ ದೇವಸ್ಥಾನದ ವಿಶೇಷತೆ ಏನೆಂದರೆ, ಗರ್ಭಗುಡಿಯ ಒಳಗೆ ಹನುಮನ ಎರಡು ಮೂರ್ತಿಗಳಿವೆ. ಈ ಪೈಕಿ ಒಂದು ಮೂರ್ತಿ ಪುರಾತನ ಕಾಲದ್ದಾಗಿದ್ದು, ಇನ್ನೊಂದು ಆ ಬಳಿಕ ಸ್ಥಾಪನೆ ಮಾಡಿದ ಮೂರ್ತಿಯಾಗಿದೆ. ಈ ದೇವಸ್ಥಾನದ ಹೊರ ಭಾಗಗಳಲ್ಲಿ ವಿಶಾಲವಾದ ಕೋಟೆ ಇದ್ದುದರಿಂದಾಗಿ ಈ ದೇವಸ್ಥಾನಕ್ಕೆ ಕೋಟೆ ಆಂಜನೇಯ ದೇವಸ್ಥಾನ ಎಂಬ ಹೆಸರು ಬಂದಿದೆ. ಆದರೆ, ಪ್ರಸ್ತುತ…
ಬೆಂಗಳೂರು: ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಚಿತ್ರ ಪುಷ್ಪ ಸಿನಿಮಾ 17ಕ್ಕೆ ರಿಲೀಸ್ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಚಿತ್ರ ತಂಡ ಚಿತ್ರದ ಪ್ರಚಾರ ನಡೆಸಿತು. ನಟ ಅಲ್ಲು ಅರ್ಜುನ್ , ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಚಿತ್ರದ ವಿವಿಧ ಕಲಾವಿದರು ಪ್ರಚಾರದಲ್ಲಿ ಭಾಗಿಯಾಗಿದ್ದರು. ಚಿತ್ರದ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ, 17 ಪುಷ್ಪ ಸಿನಿಮಾ ರಿಲೀಸ್ ಆಗ್ತಿದೆ… ಎನ್ನುತ್ತಲೇ ಯಾವ ಭಾಷೆಯಲ್ಲಿ ಮಾತನಾಡಬೇಕು ಎಂದು ತಿಳಿಯದೇ ಗೊಂದಕ್ಕೀಡಾಗಿ ಜೋರಾಗಿ ನಕ್ಕರು ಬಳಿಕ ಮಾತು ಮುಂದುವರಿಸಿ, ಎಲ್ಲ ಲಾಂಗ್ವೇಜ್ ಮಿಕ್ಸ್ ಆಗಿದೆ ತುಂಬಾ ಹಿಂದೆ ಹೋಗಿ ಬಿಟ್ಟಿದ್ದೇನೆ ಎಂದರು. ನನ್ನ ಕ್ಯಾರೆಕ್ಟರ್ ಬಗ್ಗೆ ಹೇಳ್ಬೇಕೆಂದ್ರೆ, ನೀವು ಟ್ರೈಲರ್ ನಲ್ಲಿ, ಸಾಂಗ್ಸ್ ನಲ್ಲಿ ನೋಡಿದ್ದೀರಿ ನಿಮಗೆಲ್ಲರಿಗೂ ಖುಷಿಯಾಗಿದೆ ಅಂದ್ಕೊಂಡಿದ್ದೇನೆ. ಪುಷ್ಪಂನಲ್ಲಿ ಚಿತ್ರ ತಂಡ ಹಾರ್ಡ್ ವರ್ಕ್ ಮಾಡಿದೆ. ಅದು ಟ್ರೈಲರ್ ನಲ್ಲಿ, ಸಾಂಗ್ಸ್ ನಲ್ಲಿ ಕಾಣಿಸುತ್ತಿದೆ. ಇದೊಂದು ಟೀಂ ವರ್ಕ್, ನನಗೆ ಏನ್ ಹೇಳ್ಬೇಕು ಅಂತ ಅರ್ಥವಾಗ್ತಿಲ್ಲ, 17ಕ್ಕೆ ನಮ್ಮೆಲ್ಲರ…
ನವದೆಹಲಿ: ತಮಿಳುನಾಡಿನಲ್ಲಿ ನಡೆದ ಹೆಲಿಕಾಫ್ಟರ್ ದುರಂತದಲ್ಲಿ ಬದುಕುಳಿದಿದ್ದ ಅನುಭವಿ ಪೈಲಟ್ ಎನಿಸಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಬುಧವಾರ ಬೆಂಗಳೂರಿನ ಕಮಾಂಡೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. 2020ರಲ್ಲಿ, ಲಘು ಯುದ್ಧವಿಮಾನ (ಎಲ್‌ಸಿಎ) ತೇಜಸ್ ತಾಂತ್ರಿಕ ವೈಫಲ್ಯದಿಂದ ಪತನವಾಗುವ ಅಪಾಯವಿದ್ದಾಗಲೂ, ತಮ್ಮ ಪ್ರಾಣವನ್ನು ಲೆಕ್ಕಿಸದೆ ಅದನ್ನು ರಕ್ಷಿಸಿದ್ದ ವರುಣ್ ಸಿಂಗ್ ಅವರಿಗೆ ಸ್ವಾತಂತ್ರ್ಯೋತ್ಸವದಲ್ಲಿ ಶೌರ್ಯಚಕ್ರ ನೀಡಲಾಗಿತ್ತು. ವರುಣ್ ಸಿಂಗ್ ಅವರು ಎಲ್ ಸಿಎ ಸ್ಕ್ವಾಡ್ರನ್ ನಲ್ಲಿ ಪೈಲಟ್ ಆಗಿದ್ದರು. ಯುದ್ಧವಿಮಾನದಲ್ಲಿ ಕಾಣಿಸಿದ್ದ ತಾಂತ್ರಿಕ ದೋಷವನ್ನು ಸರಿಪಡಿಸಿದ ಬಳಿಕ, ಅದನ್ನು ಪರೀಕ್ಷಾರ್ಥವಾಗಿ ಹಾರಾಟ ನಡೆಸುವ ಹೊಣೆಯನ್ನು ವರುಣ್ ಹೊತ್ತಿದ್ದರು. ಅತ್ಯಂತ ಎತ್ತರದ ಪ್ರದೇಶದಲ್ಲಿ ವಿಮಾನ ನಿಯಂತ್ರಣ ವ್ಯವಸ್ಥೆ ಮತ್ತು ವಿಮಾನದೊಳಗಿನ ಗಾಳಿಯ ಒತ್ತಡ ವ್ಯವಸ್ಥೆಯನ್ನು ಅವರು ಪರೀಕ್ಷಿಸಬೇಕಿತ್ತು. ಅತ್ಯಂತ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ವಿಮಾನದಲ್ಲಿ ಮತ್ತೆ ತಾಂತ್ರಿಕ ದೋಷ ಇರುವುದನ್ನು ಅವರು ಪತ್ತೆಹಚ್ಚಿದರು. ತಕ್ಷಣ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಅವರು ಮುಂದಾದರು. ವಿಮಾನವನ್ನು ಇಳಿಸುವಾಗ ವಿಮಾನ ನಿಯಂತ್ರಣ ವ್ಯವಸ್ಥೆ ಕೈಕೊಟ್ಟಿತು. ಪೈಲಟ್…
ಸರಗೂರು: ಮಳೆಯಿಂದ ಹಾನಿಗೊಳಗಾದ ಮನೆ ದುರಸ್ತಿಗೆ ಪರಿಶೀಲನೆಗೆ ಬರುವ ಗ್ರಾಮ ಲೆಕ್ಕಿಗರು 60ರಿಂದ 80 ಸಾವಿರ ರೂಪಾಯಿ ಹಣ ಲಂಚ ನೀಡಬೇಕು ಎಂದು ಬೇಡಿಕೆಯಿಡುತ್ತಿದ್ದಾರೆ ಎಂದು ಆರೋಪಿಸಿ, ಕೊತ್ತೇಗಾಲ ಗ್ರಾಮಸ್ಥರು ತಾಲ್ಲೂಕು ಕಛೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು. ಈ ಸಂಬಂಧ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ತಹಸೀಲ್ದಾರ್ ಚಲುವರಾಜು ರವರಿಗೆ ಮನವಿ ಪತ್ರ ಸಲ್ಲಿಸಿದರು. ತಾಲ್ಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ಉಂಟಾದ ಭಾರಿ ಮಳೆಯಿಂದಾಗಿ ಸಾಕಷ್ಟು ಮನೆಯ ಗೋಡೆಗಳು, ಮೇಲ್ಚಾವಣಿಗಳು ಕುಸಿದು ಹೋಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಹಾನಿಯುಂಟಾಗಿತ್ತು. ಗ್ರಾಮಸ್ಥರು ಸಹ ಪ್ರವಾಹ ಪೀಡಿತ ಯೋಜನೆಯ ಅಡಿಯಲ್ಲಿ ಪರಿಹಾರವನ್ನು ನೀಡಿ ಮನೆಗಳ ದುರಸ್ತಿಗೆ ಸಹಕರಿಸುವಂತೆ ಕೋರಿ ಅರ್ಜಿಗಳನ್ನು ಸಹ ಗ್ರಾಮ ಪಂಚಾಯಿತಿಗೆ ಸಲ್ಲಿಸಿದ್ದರು. ಆ ಸಂಬಂಧ ಪರಿಶೀಲನೆಗೆ ಬಂದಿದ್ದ ಗ್ರಾಮ ಲೆಕ್ಕಿಗರು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿರುವ ಸುಮಾರು 20 ಮನೆಗಳನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಅಲ್ಲದೇ ಕೆಲವರ ಬಳಿ ಹಣ ಪಡೆದು ಅವರನ್ನು…
ತಿಪಟೂರು: ತಿಪಟೂರು ಕನ್ನಡ ರಕ್ಷಣಾ ವೇದಿಕೆ ಕಾರ್ಯಾಲಯದಲ್ಲಿ ಪ್ರಾರಂಭೋತ್ಸವ ನಡೆಯಿತು. ಬಳಿಕ ನೂರಾರು ಯುವ ಕಾರ್ಯಕರ್ತರನ್ನೊಳಗೊಂಡ ಕನ್ನಡ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಬೈಕ್ ರ್ಯಾಲಿ ನಡೆಸಿ, ತಾಲೂಕು ಕಚೇರಿ ಆವರಣದಲ್ಲಿ ಸೇರಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ ಪುಂಡರ ವಿರುದ್ಧ ಪ್ರತಿಭಟನೆ ನಡೆಸಿದರು. ಶಿವಸೇನೆಯ ಪುಂಡರು ಕನ್ನಡ ಧ್ವಜವನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆಯನ್ನು ಖಂಡಿಸಿ ಗ್ರೇಡ್ 2 ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಇದೇ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಆರ್.ವಿಜಯ್ ಕುಮಾರ್, ಬೆಳಗಾವಿಯ ವಿಷಯದಲ್ಲಿ ಪದೇ ಪದೇ ಜಗಳ ತೆಗೆದು ಕನ್ನಡಿಗರ ಮತ್ತು ಮರಾಠಿಗರ ನಡುವೆ ಸಾಮರಸ್ಯ ಕದಡಿಸುವ ಕಿಡಿಗೇಡಿಗಳು ಶಿವಸೇನೆ, ಮಹಾರಾಷ್ಟ್ರ ಏಕೀಕರಣ ಸಮಿತಿ, ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಎಂಬ ಸಂಘಟನೆಗಳ ಹೆಸರಿನಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕ ಇವುಗಳ ವಿರುದ್ಧ ಕಿಡಿಗೇಡಿ ಕೃತ್ಯ ನಿರಂತರವಾಗಿ ನಡೆಸುತ್ತಿದ್ದರೂ, ಸಹ ನಮ್ಮ ಕರ್ನಾಟಕದ ರಾಜ್ಯಾಡಳಿತ ಬೆಳಗಾವಿ ಜಿಲ್ಲಾಡಳಿತಗಳು ಅವರ ಮೇಲೆ ಯಾವುದೇ ಕಠಿಣ ಕ್ರಮ…
ತಿಪಟೂರು: ನಗರದಲ್ಲಿನ ಶ್ರೀ ಶಂಕರ ವೀರಭದ್ರೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘದ ವತಿಯಿಂದ ವಾರ್ಷಿಕ ಸಮಾರಂಭ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಮಾರ್ ಆಸ್ಪತ್ರೆ ಡಾಕ್ಟರ್ ಶ್ರೀಧರ್ ಅವರು, ಸಂಘ ಸಂಸ್ಥೆಗಳ ಕಾರ್ಯಕ್ರಮದಲ್ಲಿ ನಾವೆಲ್ಲರೂ ಒಂದೇ ರೀತಿಯಲ್ಲಿ ಒಟ್ಟಾಗಿ ಇರುತ್ತೇವೆ. ಸಹಕಾರ ಸಂಘದ ದೇಶದ ಆರ್ಥಿಕ ಸುಭದ್ರತೆ ಅಡಿಪಾಯವನ್ನು ದೊರಕಿಸಿಕೊಟ್ಟಿದೆ. ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಹೊಂದಿರುವ ಭಾರತಕ್ಕೆ ಬ್ಯಾಂಕುಗಳ ಕೊಡುಗೆ ಅಪಾರವಾಗಿದೆ ಎಂದು ಮೆಚ್ಚುಗೆ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಶ್ರೀ ಶ್ರೀ ಕ್ಷೇತ್ರ ಸ್ವಾಮೀಜಿಯವರು, ಡಾಕ್ಟರ್ ಶ್ರೀಧರ್ ಅವರು ಸಹಕಾರ ಸಂಘದ ಕಾರ್ಯದರ್ಶಿಗಳು ಮತ್ತಿತರರು ಉಪಸ್ಥಿತರಿದ್ದರು ವರದಿ: ಮಂಜು ಗುರುಗದಹಳ್ಳಿ ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಮಧುಗಿರಿ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ನೀಲಿಹಳ್ಳಿ ಸಮೀಪ ಸೋಮವಾರ ರಾತ್ರಿ ನಡೆದಿದೆ. ಪಟ್ಟಣದ ಬೂರ್ಕನಹಟ್ಟಿಯ 25 ವರ್ಷ ವಯಸ್ಸಿನ ರಂಜಿತ್ ರಮೇಶ್ ಮೃತಪಟ್ಟವರಾಗಿದ್ದಾರೆ. ಸೋಮವಾರ ರಾತ್ರಿ ವೇಳೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ತುಮಕೂರು: ಮಧುಗಿರಿ ತಾಲ್ಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ ಡಿಸೆಂಬರ್ 15ರಂದು ಪಶು ಆರೋಗ್ಯ ಮತ್ತು ಬರಡು ರಾಸುಗಳ ಚಿಕಿತ್ಸೆ ಶಿಬಿರವನ್ನು ನಡೆಸಲಾಯಿತು. ಈ ವೇಳೆ ಸಹಾಯಕ ನಿರ್ದೇಶಕರಾದ ಡಾ.ಜಿ.ಗಿರೀಶ್ ಬಾಬು ರೆಡ್ಡಿ, ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ಅಶ್ವಥ್ ನಾರಾಯಣ, ಡಾ.ಗಂಗಾಧರ್ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಸರಗೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಂಜೇಗೌಡ ಗೆಲುವಿನ ನಗೆ ಬೀರಿದ ಹಿನ್ನೆಲೆಯಲ್ಲಿ ಸರಗೂರು ತಾಲ್ಲೂಕು ಜೆಡಿಎಸ್ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯಿತು. ಬಿಜೆಪಿ ಹಾಗೂ ಜೆಡಿಎಸ್ ನಡುವೆ ನಡೆದಿದ್ದ ನೇರ ಸ್ಪರ್ಧೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಂಜೇಗೌಡ ಐದು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಮಂಜೇಗೌಡ ಗೆಲುವು ಸಾಧಿಸುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು, ಸದಸ್ಯರು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಜಿ.ಗೋಪಾಲಸ್ವಾಮಿ, ಹನು ಎಚ್.ಮಾ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಪ.ಪಂ. ಸದಸ್ಯ ಎಸ್.ಎಲ್ ರಾಜಣ್ಣ, ಚೈತ್ರ ಸ್ವಾಮಿ ಪಟ್ಟಣ ಪಂಚಾಯಿತಿ ಸದಸ್ಯೆ ಪ.ಪಂ. ಸದಸ್ಯೆ ಮಗನಾದ ಪುಟ್ಟ ಹನುಮಯ್ಯ, ಶ್ರೀನಿವಾಸ ಪ್ರಧಾನ ಕಾರ್ಯದರ್ಶಿ, ಕಲೀಲ್ ಅಲ್ಪಸಂಖ್ಯಾತರ ಅಧ್ಯಕ್ಷ ಸರಗೂರು, ಮಹದೇವಪ್ಪ ಕೆ.ಪಿ.ಉದಯಕುಮಾರ್, ಸಿದ್ದರಾಜು ಆರ್.ಸುರೇಂದ್ರ ಕುಮಾರ್ ನರಸೀಪುರ, ನಾಗರಾಜ್, ನಾಗೇಂದ್ರ, ನಾಗರಾಜ್ ಸರಗೂರು, ಮಹೇಂದ್ರ ಸಾಗರೆ, ಜಯರಾಮ, ಚೆನ್ನಪ್ಪ ಕಾಳೇಗೌಡರಹುಂಡಿ, ಆರ್ ಉದಯಕುಮಾರ್, ಉಮೇಶ್, ಪುಟ್ಟಸ್ವಾಮಿ, ಮಂಜು ಕಾಳೇಗೌಡರಹುಂಡಿ ಇದ್ದರು.…