Author: admin

ಪಾವಗಡ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಪಾವಗಡ ಸಮಿತಿ ವತಿಯಿಂದ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. ಕಾಂಗ್ರೆಸ್ ಅಧ್ಯಕ್ಷರಾದ ಎಚ್.ವಿ. ವೆಂಕಟೇಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳುವಂತೆ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಇದೇ ವೇಳೆ ಮಾತನಾಡಿದ ಎಚ್.ವಿ. ವೆಂಕಟೇಶ್, ಕೆ.ಎಸ್. ಈಶ್ವರಪ್ಪ ಅವರು ರಾಜ್ಯ ಸರ್ಕಾರದ ಸಚಿವರಾಗಿ ರಾಜ್ಯದ ಹಾಗೂ ದೇಶದ ಘನತೆಯನ್ನು ಕಾಪಾಡಬೇಕು. ಆದರೆ, ತ್ರಿವರ್ಣ ಧ್ವಜವದ ಹಾರಾಡುವ ಜಾಗದಲ್ಲಿ ಕೇಸರಿ ಧ್ವಜವನ್ನು ಆರಿಸುತ್ತೇನೆ ಎಂದು ದೇಶದ್ರೋಹಿ ಹೇಳಿಕೆ ನೀಡಿರುವುದು ಖಂಡನೀಯ ಎಂದರು. ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸುದೇಶ್ ಕುಮಾರ್ ಜಿ. ಮಾತನಾಡಿ, ಶಾಂತಿಯುತ ರಾಷ್ಟ್ರ ಹಾಗೂ ಜಾತ್ಯತೀತ ರಾಷ್ಟ್ರದಲ್ಲಿ ಶಾಂತಿ ಕದಡುವ ಕೆಲಸಕ್ಕೆ ರಾಜ್ಯ ಸರ್ಕಾರದ ಸಚಿವರಾದ ಕೆ.ಎಸ್ .ಈಶ್ವರಪ್ಪರವರು ಮುಂದಾಗಿದ್ದು, ತ್ರಿವರ್ಣ ಧ್ವಜದ ಬಗ್ಗೆ ಇಲ್ಲಸಲ್ಲದ ಗೊಂದಲ ಹೇಳಿಕೆ ನೀಡಿ, ದೇಶದಲ್ಲಿ ಗಲಭೆ ಸೃಷ್ಟಿಸಲು ಸಂಚು ರೂಪಿಸುತ್ತಿದ್ದಾರೆ. ಇಂತಹ ಸಚಿವರನ್ನು ರಾಜ್ಯಪಾಲರು…

Read More

ತುಮಕೂರು: ಕರ್ನಾಟಕ ತಾಂಡ ಅಭಿವೃದ್ಧಿ ನಿಯಮ ನಿಯಮಿತ ಬೆಂಗಳೂರು ಹಾಗೂ ವಲಯ ಕಚೇರಿ ತುಮಕೂರು ವತಿಯಿಂದ ವಿಭಾಗ ಮಟ್ಟದ ಕಲಾ ಮೇಳ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ತುಮಕೂರು ಬಂಜಾರ ಭವನದಲ್ಲಿ ಸರಿ ಸುಮಾರು 8  ಜಿಲ್ಲೆಯ  ( ಚಾಮರಾಜನಗರ, ಮೈಸೂರು, ಬೆಂಗಳೂರು ನಗರ  ಮತ್ತು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಹಾಗೂ ಕೋಲಾರ ) ಬಂಜಾರ ಬಹುಮುಖಿ  ಆಡಿಷನ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ  ಉದ್ಘಾಟಿಸಿ  ಮಾಡಿ ಮಾತಾಡಿದ ಡಾ.ರಮೇಶ್ ನಾಯ್ಕ,  ಬಂಜಾರ ಸಮುದಾಯದದ ಆಚಾರ-ವಿಚಾರ ನಡೆ-ನುಡಿ ಸಾಂಸ್ಕೃತಿಕ ಉಳಿವಿಗಾಗಿ ಕಲಾಮೇಳ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ  ಎಂದು ತಿಳಿಸಿದರು. ಇದೇ ವೇಳೆ  ಶಿವಣ್ಣ, ಇಂಜಿನಿಯರ್ ಮೋಹನ್, ಮಹೇಶ್, ಕರ್ನಾಟಕ ಜಾಗೃತದಳ ರಾಜ್ಯಾಧ್ಯಕ್ಷ ತಿಪ್ಪ ಸರ್ ನಾಯ್ಕ, ಜಯಂ ನಾಯ್ಕ, ಗೋವಿಂದ್ ನಾಯ್ಕ, ವೆಂಕಟೇಶ್ ಚೌಹಾನ್, ರವಿ ಕುಮಾರ್, ಆಶಾ ರಾಠೋಡ್, ಹಾಗೂ ಬೇರೆ ಜೆಲ್ಲೆಯ  ಕಲಾವಿದರು ಹಾಜರಿದ್ದರು. ವರದಿ: ನಂದೀಶ್ ನಾಯ್ಕ ಪಿ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ವಾಣಿವಿಲಾಸ ಸಾಗರ ಕರ್ನಾಟಕದ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿದ್ದು,  ವೇದಾವತಿ ನದಿಗೆ ಅಡ್ಡಲಾಗಿ, ‘ಮಾರಿಕಣಿವೆ’ ಎಂಬಲ್ಲಿ ಕಟ್ಟಲಾಗಿರುವ ಈ ಅಣೆಕಟ್ಟಿನ ಎತ್ತರ  ಇದರ 50 ಮೀ, ಉದ್ದ 405 ಮೀಟರ್ ಗಳು. 135 ಅಡಿಗಳವರೆಗೆ ನೀರನ್ನು ಸಂಗ್ರಹಿಸಬಹುದಾಗಿದೆ. ಹಿರಿಯೂರು ತಾಲ್ಲೂಕಿನ ಸುಮಾರು 1/3 ರಷ್ಟು (ಸುಮಾರು 10,000 ಹೆಕ್ಟೇರ್ ಪ್ರದೇಶ) ನೆಲಕ್ಕೆ ನೀರುಣಿಸುವುದಲ್ಲದೆ ಹಿರಿಯೂರು ಮತ್ತು ಚಿತ್ರದುರ್ಗ ನಗರಗಳಿಗೆ ಕುಡಿಯುವ ನೀರನ್ನೂ ಒದಗಿಸುತ್ತದೆ. ಸಿಮೆಂಟ್ ಉಪಯೋಗವಿಲ್ಲದೆ ಕೇವಲ ಗಾರೆಯಿಂದಲೇ ಇದನ್ನು ಕಟ್ಟಲಾಗಿದೆ.  ಒಂದು ಬದಿಯಿಂದ ನೋಡಿದಾಗ, ‘ಭಾರತದ ಭೂಪಟ’ವನ್ನು ನಾವು ಕಾಣಬಹುದಾಗಿದೆ. ಮಾನಿ ಕಣಿವೆ (ಕನ್ನಡ: ಮಾರಿ ಕಣಿವೆ) ಎಂದು ಜನಪ್ರಿಯವಾಗಿ ಕರೆಯಲ್ಪಡುವ ವಾಣಿ ವಿಲಾಸ ಸಾಗರ ಭಾರತದ ರಾಜ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಸಮೀಪವಿರುವ ಒಂದು ಅಣೆಕಟ್ಟು. ಇದು ರಾಜ್ಯದ ಅತ್ಯಂತ ಹಳೆಯ ಅಣೆಕಟ್ಟು. ಈ ಅಣೆಕಟ್ಟನ್ನು ವೇದಾವತಿ ನದಿಗೆ ಅಡ್ಡಲಾಗಿ ಮೈಸೂರು ಮಹಾರಾಜರು ಸ್ವಾತಂತ್ರ್ಯ ಪೂರ್ವ…

Read More

ಪ್ರಾಣಿಗಳ ಜೀವವನ್ನು ಮಾನವರು ವೀರೋಚಿತವಾಗಿ ಉಳಿಸಿದ ಹಲವು ಸಂದರ್ಭಗಳಿವೆ. ಅಂಥದ್ದೇ ಒಂದು ಘಟನೆ ಮತ್ತೆ ಬೆಳಕಿಗೆ ಬಂದಿದ್ದು, ಈ ಬಾರಿ ಆಳವಾದ ಕಂದರದಲ್ಲಿ ಬಿದ್ದಿದ್ದ ಆನೆಯನ್ನು ಅರಣ್ಯ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಈ ಕುರಿತಾದ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ (Elephant Saving Viral Video) ಆಗುತ್ತಿದೆ. ಈ ಇಡೀ ಘಟನೆಯ ವಿಶೇಷವೆಂದರೆ ಆರ್ಕಿಮಿಡಿಸ್ ತತ್ವವನ್ನು (Archimedes Principle Saved Elephant Life) ಅನ್ವಯಿಸಿ ಆನೆಯನ್ನು ಉಳಿಸಲಾಗಿದೆ. ಪ್ರಕರಣ ಏನು ತಿಳಿದುಕೊಳ್ಳೋಣ ಬನ್ನಿ, ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಆನೆಯೊಂದು ನಾಲೆಗೆ ಬಿದ್ದ ಘಟನೆ ಸಂಭವಿಸಿದೆ. ಹೊಂಡ ತುಂಬಾ ಆಳವಾಗಿದ್ದರಿಂದ ಆನೆ ನಾಲೆಯಲ್ಲಿಯೇ ಸಿಕ್ಕಿಬಿದ್ದಿದೆ ಆನೆಯನ್ನು ರಕ್ಷಿಸುವ ಸಲುವಾಗಿ ಅರಣ್ಯ ರಕ್ಷಕರ ತಂಡ ಕುತೂಹಲಕಾರಿಯಾಗಿ ಹೊಂಡಕ್ಕೆ ನೀರನ್ನು ತುಂಬಿಸಿದ್ದಾರೆ. ಹಳ್ಳಕ್ಕೆ ನೀರು ತುಂಬಿಸಿದ್ದರಿಂದ ಆನೆ ಮೇಲಕ್ಕೆ ಈಜಲು ಸಹಾಯ ಮಾಡಿತು ಮತ್ತು ನಂತರ ಹಗ್ಗಗಳ ಸಹಾಯದಿಂದ ತಂಡವು ಆನೆಯನ್ನು ನಾಲೆಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.ಘಟನೆಯ ಸಂಪೂರ್ಣ ವೀಡಿಯೊವನ್ನು IFS ಅಧಿಕಾರಿ ಪರ್ವೀನ್…

Read More

ನಿಂಬೆ ಪಾನಕವು ಭಾರತದ ಬಹುತೇಕ ಭಾಗಗಳಲ್ಲಿ ಜನಪ್ರಿಯವಾಗಿರುವ ಪಾನೀಯವಾಗಿದೆ. ದೇಶದಲ್ಲಿ ಬೇಸಿಗೆ ಕಾಲ ಆರಂಭವಾಗಿರುವುದರಿಂದ ಈಗ ಇದರ ಸೇವನೆಯೂ ಹೆಚ್ಚಾಗಲಿದೆ. ಆದರೆ ನಿಮಗೆ ಗೊತ್ತಾ ಪ್ರತಿದಿನ ಬೆಳಗ್ಗೆ ನಿಂಬೆ ನೀರು ಕುಡಿಯುವುದರಿಂದ ನಿಮ್ಮ ಬೊಜ್ಜು ಕಡಿಮೆಯಾಗುವುದು ಮಾತ್ರವಲ್ಲದೆ ನೀವು ಅನೇಕ ಕಾಯಿಲೆಗಳಿಂದ ದೂರವಿರಲು ಸಹಕಾರಿಯಾಗಲಿದೆ. ಏಕೆಂದರೆ ದೇಹದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ತೆಗೆದುಹಾಕಲು ನಿಂಬೆ ನೀರನ್ನು ಕುಡಿಯುವುದು ಹೆಚ್ಚು ಪ್ರಯೋಜನಕಾರಿ. ನಿಂಬೆ ನೀರಿನಲ್ಲಿ ಪ್ರೋಟೀನ್‌ಗಳು, ಕಾರ್ಬೋಹೈಡ್ರೇಟ್‌ಗಳು, ವಿಟಮಿನ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ನಿಂಬೆ ನೀರು ನಿಮ್ಮ ಆರೋಗ್ಯದ ಮೇಲೆ ಯಾವ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಿಳಿಯೋಣ. ನಿತ್ಯ ಮುಂಜಾನೆ ನಿಂಬೆ ನೀರನ್ನು ಕುಡಿಯುವುದರಿಂದ ಸಿಗುವ 5 ದೊಡ್ಡ ಪ್ರಯೋಜನಗಳಿವು: 1. ಬೊಜ್ಜನ್ನು ಕಡಿಮೆ ಮಾಡಬಹುದು: ನೀವೂ ಸಹ ನಿಮ್ಮ ಬೊಜ್ಜನ್ನು (Obesity) ಕಡಿಮೆ ಮಾಡಿಕೊಳ್ಳಲು ಬಯಸಿದರೆ, ಇದು ನಿಮಗೆ ಸುಲಭವಾದ ಮಾರ್ಗವಾಗಿದೆ, ಪ್ರತಿದಿನ ಬೆಳಿಗ್ಗೆ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸವನ್ನು ಸೇರಿಸಿ ಮತ್ತು ದಿನಕ್ಕೆ ಎರಡು…

Read More

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಹೊಸ ವರ್ಷದ ಮೊದಲ ದಿನದಂದು ಕೇಂದ್ರ ಸರ್ಕಾರ 10 ನೇ ಕಂತಿನ 2000 ರೂಪಾಯಿಗಳನ್ನು ರೈತರ ಖಾತೆಗೆ ವರ್ಗಾಯಿಸಿದೆ. ಈಗ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Nidhi Yojana) 2022 ರಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ, ಇದು 12 ಕೋಟಿಗೂ ಹೆಚ್ಚು ನೋಂದಾಯಿತ ರೈತರ ಮೇಲೆ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಈಗ ರೈತರು ಮುಂದಿನ ಕಂತಿಗೆ ಹಲವು ದಾಖಲೆಗಳನ್ನು ನವೀಕರಿಸಬೇಕಾಗುತ್ತದೆ, ಇಲ್ಲದಿದ್ದರೆ ಅವರು ಮುಂದಿನ ಕಂತನ್ನು ಪಡೆಯುವುದಿಲ್ಲ. ಇದಲ್ಲದೇ ಈ ಯೋಜನೆಯಡಿ ರೈತರಿಗೆ ದೊರೆಯುತ್ತಿದ್ದ ದೊಡ್ಡ ಸೌಲಭ್ಯವನ್ನೂ ಕಸಿದುಕೊಳ್ಳಲಾಗಿದೆ. ಪಿಎಂ ಕಿಸಾನ್‌ನಲ್ಲಿ ದೊಡ್ಡ ಬದಲಾವಣೆ: ಪ್ರಧಾನಮಂತ್ರಿ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ದೊಡ್ಡ ಬದಲಾವಣೆ (Big Changes in PM Kisan Yojana) ಮಾಡಿದೆ. ಇಲ್ಲಿಯವರೆಗೆ ರೈತರು ನೋಂದಣಿಯ ನಂತರ ತಮ್ಮ ಸ್ಥಿತಿಗತಿ, ಅರ್ಜಿಯ ಸ್ಥಿತಿ ಏನು, ನಿಮ್ಮ ಬ್ಯಾಂಕ್ ಖಾತೆಗೆ ಎಷ್ಟು ಹಣ ಬಂದಿದೆ ಅಥವಾ ಯಾವಾಗ…

Read More

ಶಿವಮೊಗ್ಗ: ಕೋಟೆ ಪ್ರಖಂಡದ ಬಜರಂಗದಳ ಸಹಸಂಯೋಜಕ  ಹರ್ಷ ಕಗ್ಗೊಲೆ ಖಂಡಿಸಿ ಬಜರಂಗದಳ ತಾಲೂಕು ಪ್ರಖಂಡದಿಂದ ಶನಿಮಹಾತ್ಮ ವೃತದಿಂದ ತಾಲೂಕು ಕಚೇರಿಯ ವರೆಗೆ ತೆರಳಿ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ಸುಮನ್ ಮಾತನಾಡಿ, ಹರ್ಷ ಕೊಲೆಯ ಹಿಂದೆ SDPI , PFI, CFI ಸಂಘಟನೆಗಳ ಕೈವಾಡವಿದೆ  ಎಂದು ಆರೋಪಿಸಿದರು. ಆರೋಪಿಗಳನ್ನು ಗಲ್ಲಿಗೇರಿಸಬೇಕು ಹರ್ಷರವರ ಕುಟುಂಬಕ್ಕೆ  ಸರ್ಕಾರ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಇದೇ  ವೇಳೆ ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ರಾಮಾಂಜಿ, ಅಲಕುಂದ್ರಾಜ್, ಬಜರಂಗದಳ ಪದಾಧಿಕಾರಿಗಳಾದ ರಾಕೇಶ್ , ವಾಸು, ಕಾರ್ತಿಕ್, ವಿನೋದ್ , ಶ್ರೀನಾಥ್ , ನಾಗೇಶ್ ಇದ್ದರು. ವರದಿ: ನಂದೀಶ್ ನಾಯ್ಕ ಪಿ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಶಿವಮೊಗ್ಗದಲ್ಲಿ ಹಿಂದುಪರ ಸಂಘಟನೆ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ(Shivamogga Youth Murder Case) ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ನಾನೇಂದ್ರ(Araga Jnanendra) ಹೇಳಿದ್ದಾರೆಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ. ಮಾಹಿತಿ ಪ್ರಕಾರ ಈ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳು ಭಾಗಿಯಾಗಿರುವ ಬಗ್ಗೆ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ. ಭಜರಂಗ ದಳ(Bajrang Dal)ದ ಕಾರ್ಯಕರ್ತ ಹರ್ಷರನ್ನು ಬರ್ಬರವಾಗಿ ಹತ್ಯೆ(Youth Murder Case) ಮಾಡಲಾಗಿದೆ. ನಾವು ಹರ್ಷ ಅವರ ಪೋಷಕರು ಮತ್ತು ಸಹೋದರಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇವೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಅವರಿಗೆ ನಾವು ಭರವಸೆ ನೀಡಿದ್ದೇವೆ. ಪ್ರಕರಣ ಸಂಬಂಧ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ನಾವು ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಅಂತಾ ಹೇಳಿದ್ದಾರೆ. ಶಿವಮೊಗ್ಗದಲ್ಲಿ ನಡೆದಿರುವ ಘಟನೆ ಬಗ್ಗೆ ಸಿಎಂ(Basavaraj Bommai)ಗೆ ವಿವರಣೆ ಕೊಟ್ಟಿದ್ದೇನೆ. ಈ ಬಗ್ಗೆ ಚರ್ಚಿಸಲು ಮತ್ತೆ ಸಭೆ ಸೇರೋಣವೆಂದು…

Read More

ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಕೊಲೆಗೆ ಹಳೆ ದ್ವೇಷವೇ ಕಾರಣವಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಹರ್ಷ ಅವರ ಕೊಲೆಗೆ ಕಳೆದ ಆರು ತಿಂಗಳ ಹಿಂದೆ ನಡೆದಿದೆ ಎನ್ನಲಾದ ಗಲಾಟೆ ಕಾರಣವಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಈ ಹಿಂದೆ ಒಂದು ಕೋಮಿನ ಯುವಕರ ಗುಂಪು ಹಾಗೂ ಹರ್ಷ ನಡುವೆ ಗಲಾಟೆ ನಡೆದಿತ್ತು ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಅಂದು ಯಾವ ವಿಚಾರಕ್ಕಾಗಿ ಗಲಾಟೆ ಮಾಡಿಕೊಂಡಿದ್ದರು. ಯಾರು ಜಗಳವಾಡಿದ್ದರು ಎಂಬಿತ್ಯಾದಿ ಅಂಶಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಹರ್ಷ ಅವರ ಕೊಲೆಗೆ ಹಳೆ ದ್ವೇಷ ಕಾರಣವೇ ಅಥವಾ ಬೇರೆ ಕಾರಣವಿರಬಹುದೇ ಎಂಬ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹರ್ಷ ಅವರ ಸ್ನೇಹಿತರು, ನೆರೆಹೊರೆಯವರಿಂದಲೂ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಮೂವರು ವಶಕ್ಕೆ: ಭಜರಂಗದಳ ಕಾರ್ಯಕರ್ತ ಹರ್ಷ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ತನಿಖೆ ಕೈಗೊಂಡು ಇಬ್ಬರನ್ನು ಬಂಧಿಸಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಇದುವರೆಗಿನ ತನಿಖೆ ಪ್ರಕಾರ, ಕೊಲೆಗೆ ಹಳೆಯ…

Read More

ತುಮಕೂರು: ಶಿವಮೊಗ್ಗ ನಗರದ ಭಾರತಿ ನಗರದಲ್ಲಿ ನಡೆದ ಬಜರಂಗದಳದ ಕಾರ್ಯಕರ್ತನ ಹತ್ಯೆ ಖಂಡಿಸಿ ತುಮಕೂರಿನಲ್ಲಿ ಬಜರಂಗದಳದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಸೋಮವಾರ ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯ ಆರೋಪಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರ ಹಾಕಿದರು. ಹತ್ಯೆ ಮಾಡಿದ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ  ಮುಖಂಡ ಜಿ.ಕೆ ಶ್ರೀನಿವಾಸ್,  ರಾಜ್ಯದಲ್ಲಿ ಪದೇಪದೇ ಹಿಂದೂ ಪರ ಸಂಘಟನೆಯ ಕಾರ್ಯಕರ್ತರ ಮೇಲೆ ಹಲ್ಲೆ, ಹತ್ಯೆ ಪ್ರಕರಣಗಳು ನಡೆಯುತ್ತಿದ್ದು, ಕೂಡಲೇ ಸರ್ಕಾರ ಆರೋಪಿಗಳನ್ನು ಬಂಧಿಸಿ ಎನ್ ಕೌಂಟರ್ ಮಾಡುವ ಮೂಲಕ ತಕ್ಕ ಉತ್ತರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯದಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಹಿಂದೂಪರ ಸಂಘಟನೆಯಲ್ಲಿ ಕೆಲಸ ಮಾಡುವ ಹುಡುಗರು ಬಡ ಹಾಗೂ ಮಧ್ಯಮ ವರ್ಗದ ಕಾರ್ಯಕರ್ತರ ಮೇಲೆ  ಪದೇ ಪದೇ ಹತ್ಯೆ ಹಾಗೂ ಹಲ್ಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು,  ಉತ್ತರಪ್ರದೇಶದ ಯೋಗಿ…

Read More