Author: admin

ಬಿದ್ದರು, ಎದ್ದರು ವಟರಗಪ್ಪೆಯಂತೆ ಜಿಗಿದರು- ಧುಮುಕಿದರು ಹಿಂದೆ- ಮುಂದೆ ನೋಡದೆ, ನವವಧುವಿನಂತೆ ಕಂಗೊಳಿಸುತ್ತಿರುವ ಪಂಚರಂಗಿಯ ನವ ನೌಕೆಯ ಹತ್ತಲು ಆತುರ – ಕಾತರ. ಅಂಗೈಯಲ್ಲಿ ಆಕಾಶ ತೋರಿಸುವ ಚತುರ ನುಡಿಗೆ ಪಟಪಟನೆ ಉರಿಯುವ ದೀಪಕ್ಕೆ ಮುತ್ತಿಡುವ ಪತಂಗಗಳಂತೆ ಮನಸೋತು ಹಳೆಯ ನೌಕೆಯನ್ನು ದೂರತಳ್ಳಿ ಈ ಜೀವನ ಅಮರವೆಂದು ಕನಸು ಕಂಡರು. ದಶಕಗಳು ನಮ್ಮವರು ತಮ್ಮವರೆಂದು ಪಯಣ ಮಾಡಿಸಿದ ನೌಕೆಯ ಕಥೆ-ವ್ಯಥೆಯಾಗಿಲ್ಲವೇ? ಮುಂದೊಮ್ಮೆ ನವ ನೌಕೆ ಏರಿದವರೆಲ್ಲ ನಡು ನೀರಲ್ಲಿ ಮುಳುಗುವ ಅರಿವು ಇಲ್ಲದಿರುವುದು ವಿಪರ್ಯಾಸ. ಪ್ರಲೋಭನೆ ದಿಕ್ಕು ಗೆಡಿಸಿದೆ, ಜಾತಿ-ಧರ್ಮ ಸವಾಲಾಗಿದೆ, ಅಂಧ ಭಕ್ತರ ಮುಗಿಲ ಕೂಗು ಧೂಳು ಹಿಡಿದಿದೆ. ಗೆದ್ದೆತ್ತಿನ ಬಾಲ ಹಿಡಿದಂತೆ ಜನಪ್ರತಿನಿಧಿಗಳು , ನಾವಿಕನ ಹೊಗಳುಭಟ್ಟರು ತಪ್ಪುಗಳಿಗೆ ತೇಪೆ ಹಾಕುತ್ತಲಿಹರು. ಅನುಭವ ಹೀನ ಪಕ್ಷವಾಗಲಿ- ನಾಯಕನಾಗಲಿ ನಾಮದ ಬಲವೊಂದಿದ್ದರೆ ಸಾಲದು ಆತ್ಮ ಸೌಂದರ್ಯ ವಿರಬೇಕು. ಹತ್ತಿದವರಿಗೂ  ಹತ್ತಿಸಿಕೊಂಡವರಿಗೂ ನಷ್ಟವೇ ನಷ್ಟ . ಸಮತೋಲನ ವಿಲ್ಲದ ಪ್ರಯಾಣ ದಿಕ್ಕು ತಪ್ಪೀತು ಓ ಯಾತ್ರಿಕರೇ ,ಎಚ್ಚರ !ಎಚ್ಚರ!  ●ವಾಜಿದ್ ಖಾನ್…

Read More

ಸರಗೂರು: ತಾಲ್ಲೂಕಿನ ಮನುಗನಹಳ್ಳಿ ಗ್ರಾಪಂ ವ್ಯಾಪ್ತಿಯ ಲಂಕೆ ಗ್ರಾಮದಲ್ಲಿ ಸತ್ಯೇಶ್ವೆರಸ್ವಾಮಿ ಮತ್ತು ಬಸವೇಶ್ವರ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ಸತ್ಯೇಶ್ವೆರಸ್ವಾಮಿ ಗೆ  ಹೋಮ ಅಭಿಕ್ಷೆಕ ವಿವಿಧ ಪೂಜೆ ಸೇರಿದಂತೆ ಕಾರ್ಯಕ್ರಮ ವನ್ನು ನಡೆಯಿತು. ನಂತರ ಕೆರೆಗೆ ಪೂಜೆ ಸಲ್ಲಿಸಿ, ಅಲ್ಲಿಂದ  ಆರಂಭವಾದ ಹಾಲರವಿ ಹಾಗೂ  ಸತ್ಯೇಶ್ವೆರಸ್ವಾಮಿ ಪಲ್ಲಕ್ಕಿ ಉತ್ಸವ ಮತ್ತು ಸತ್ತಿಗೆ ಜೊತೆಯಲ್ಲಿ ಗ್ರಾಮದ ಹೆಣ್ಣು ಮಕ್ಕಳು ಹಾಗೂ ಗಂಡು 101 ಕಳಶ ತರುವ ಮೂಲಕ ಗಮನ ಸೆಳೆದರು. ವೀರಗಾಸೆ ಮತ್ತು ವಾಧ್ಯಗೋಷ್ಟಿ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಭಕ್ತರು ಬಾಯಿಗೆ ಬೀಗವನ್ನು ಹಾಕಿಕೊಂಡು ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರು ಹಾಗೂ ಸತ್ಯೇಶ್ವರಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಭಕ್ತರು ಮಲಗಿ ಬಸವ ದಾಟುವ ಕಾರ್ಯಕ್ರಮ ನಡೆಸಲಾಯಿತು ಬಸವ ತಮ್ಮನ್ನು ದಾಟಿದರೆ  ಭಕ್ತರ ಕಷ್ಟವನ್ನು ಪರಿಹಾರ ಆಗುತ್ತದೆ ಎಂದು ಇಲ್ಲಿನ ಜನರ ನಂಬಿಕೆಯಾಗಿದೆ. ಗ್ರಾಪಂ ಅಧ್ಯಕ್ಷೆ ನಂಜುಮಣಿಕರಿಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಸೋಮುಶೇಖರ್, ಗ್ರಾಪಂ ಸದಸ್ಯರು ರಮೇಶ್, ಗೌಡಿಕೆ ಬಸವಣ್ಣ, ಸೋಮಣ್ಣ, ಗ್ರಾಮದ ಶ್ರೀನಿವಾಸ, ಉರಿಲಿಂಗಯ್ಯ, ಚಿನ್ನಸ್ವಾಮಿ ಸೇರಿದಂತೆ…

Read More

ಹಿರಿಯೂರು: ದಾವಣಗೆರೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್‌ ಆರ್‌ಟಿಸಿ ಬಸ್ ಚಾಲಕ ಇದ್ದಕ್ಕಿದ್ದಂತೆ ಎಚ್ಚರತಪ್ಪಿದ್ದಾರೆ. ಈ ವೇಳೆ ಸಮಯಪ್ರಜ್ಞೆ ಮೆರೆದ ನಿರ್ವಾಹಕ ಹ್ಯಾಂಡ್ ಬ್ರೇಕ್ ಹಾಕಿ ಬಸ್ಸನ್ನು ನಿಲ್ಲಿಸಿ ಸಂಭವಿಸಬಹುದಾಗಿದ್ದ ಅವಘಡವನ್ನು ತಪ್ಪಿಸಿರುವ ಘಟನೆ ನಗರದ ಗಾಂಧಿ ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. 50 ವರ್ಷ ವಯಸ್ಸಿನ ಚಾಲಕ ರವಿ ಇದ್ದಕ್ಕಿದ್ದಂತೆ ಎಚ್ಚರ ತಪ್ಪಿದಾಗ ನಿರ್ವಾಹಕ ಗಂಗಾಧರ್ ಹ್ಯಾಂಡ್ ಬ್ರೇಕ್ ಹಾಕಿ ಬಸ್ಸನ್ನು ನಿಲ್ಲಿಸಿದ್ದಾರೆ. ತಕ್ಷಣ ರವಿ ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಸ್ಸಿನಲ್ಲಿ 10 ಪ್ರಯಾಣಿಕರಿದ್ದರು. ಯಾವುದೇ ಅಪಾಯ ಸಂಭವಿಸಿಲ್ಲ.

Read More

ಚಿತ್ರದುರ್ಗ:  ಜಿಲ್ಲೆ  ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿಯ ಶ್ರೀಮದ್ ಆದಿಜಾಂಬವ ಮಾತಂಗ ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ಮಾರ್ಕಂಡೇಯ ದೇಶಿಕೇಂದ್ರ ಸ್ವಾಮೀಜಿಯವರು  ಗುರುವಾರ ಜಂಬೂಶಾಂತಿ ಹೊಂದಿರುತ್ತಾರೆ. ಆದಿಜಾಂಬವ ಮಾತಂಗ ಪರಂಪರೆಯಲ್ಲಿ  ಪ್ರಾಚೀನ ಕಾಲದಿಂದಲೂ ಮಠ ಪರಂಪರೆಯಿದ್ದು, ಶ್ರೀ ಮಠದ ಸಂರಕ್ಷಿತ ದಾಖಲೆಗಳ ಪ್ರಕಾರ ಆಂಧ್ರಪ್ರದೇಶ ಕಡಪ ಮೂಲದ ಶ್ರೀ ಚಂದಾಯಮುನಿ ಅವರಿಂದ ಶ್ರೀಮನೃಪ ಶಾಲಿವಾಹನ ಶಕೆ 1061 ರಲ್ಲಿ ಅಂದರೆ ಕ್ರಿ.ಶ 1139 ನೇ ಇಸವಿಯಲ್ಲಿ ಸ್ಥಾಪಿತವಾದ ಮಠ ಇದು. ಇಂತಹ ಪುರಾತನ ಗುರು ಪರಂಪರೆಯ ಮಠಕ್ಕೆ ಮುಸ್ಲಿಂ ನವಾಬರು, ಟಿಪ್ಪೂ ಸುಲ್ತಾನ್ ಹಾಗೂ ಮೈಸೂರು ಅರಸರು ಅಧಿಕಾರ ಮುದ್ರೆಯುಂಗುರ, ಬಿಲ್ಲೆ ಜವಾನರ ಸರ್ಕೀಟು ಸೇವೆ, ಬಿಕ್ಕಲಂ ಲೆಕ್ಕಣಿಗರು, ಭೂ ಇನಾಮು, ಕುದುರೆ, ತುರಾಯಿ ಟೊಪ್ಪಿಗೆ,  ಡವಾಲಿ, ಬಿಳಿಜರಿಯ ಕೆಂಪು ಅಡ್ಡಶಲ್ಯ, ನಿಶಾನಿ ಲಾಂಛನಗಳನ್ನು ಒದಗಿಸಿರುವ ದಾಖಲೆಗಳಿವೆ. ಈಗಿನ ಸೀಮಾಂಧ್ರದಲ್ಲಿರುವ ಕಡಪ ಪಟ್ಟಣವು ಟಿಪ್ಪು ಸುಲ್ತಾನನ ಕಾಲದಲ್ಲಿ ಮೈಸೂರು ರಾಜ್ಯಕ್ಕೆ ಸೇರಿತ್ತು.  ಕ್ರಿಶ.1784 ರಲ್ಲಿ ಮಾದಿಗರ ಸಾಂಸ್ಕೃತಿಕ ರಾಜಧಾನಿ ಎನ್ನಿಸಿದ್ದ ಕಡಪ ಪಟ್ಟಣದ…

Read More

ತಿಪಟೂರು: ಸಿಂದಗಿ ಉಪಚುನಾವಣೆ ವೇಳೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ದಲಿತರು ಬಿಜೆಪಿಯಲ್ಲಿ ಹೊಟ್ಟೆಪಾಡಿಗೆ ಗೋಸ್ಕರ ಇದ್ದಾರೆ ಎಂಬ ದಲಿತ ವಿರೋಧಿಯಾಗಿ ಅವಮಾನಕರ ಹೇಳಿಕೆ ನೀಡಿ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದು , ಸದ್ಯದಲ್ಲಿ ಅವರ ಹೇಳಿಕೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಮೋರ್ಚಾ ತಾಲೂಕು ಅಧ್ಯಕ್ಷ ಮತಿಘಟ್ಟ ಎಂ.ಪಿ. ಅಶೋಕ್ ಹೇಳಿದರು. ತಿಪಟೂರು ನಗರದ ಕಲ್ಪತರು ಗ್ರಾಂಡ್ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ದಲಿತ ವಿರೋಧಿ ಹೇಳಿಕೆ ಕೂಡಲೇ ವಾಪಸ್ಸು ಪಡೆದು ದಲಿತರಲ್ಲಿ ಕ್ಷಮೆಯಾಚಿಸಬೇಕು ಇಲ್ಲವಾದರೆ, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹೋರಾಟ ಮಾಡಲಾಗುವುದು. ದಲಿತರ ಬಗ್ಗೆ ಕೀಳಾಗಿ ಮಾತನಾಡುವುದನ್ನು  ನಿಲ್ಲಿಸಬೇಕು. ದಲಿತರು ಯಾವುದೇ ಪಕ್ಷದಲ್ಲಿ ಜೀತ ಪದ್ಧತಿ ಜೀವನ ಮಾಡುತ್ತಿಲ್ಲ. ಸುಖಾಸುಮ್ಮನೆ ದಲಿತರನ್ನು ಕೆಣಕುವ ಕೆಲಸ ಮಾಡಬಾರದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಎಸ್ ಸಿ ಮೋರ್ಚಾ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾತನಾಡಿ, ದೇಶದ ಅತ್ಯುನ್ನತ ಹುದ್ದೆ ರಾಷ್ಟ್ರಪತಿ ಸ್ಥಾನವನ್ನು ರಮಾನಾಥ್…

Read More

ತುಮಕೂರು: ಪರಿಶಿಷ್ಟ ಜಾತಿಯವರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿದ್ದಾರೆ ಎಂದು ಹೇಳುವ ಮೂಲಕ ಸಮುದಾಯದವರನ್ನು ಅವಮಾನ ಮಾಡಿದ್ದಾರೆ. ನಮ್ಮ ಸ್ವಾಭಿಮಾನವನ್ನು ಕೆಣಕಿದ್ದಾರೆ ಎಂದು ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಟ್ಟೆಪಾಡಿಗೆ ಪರಿಶಿಷ್ಟ ಜಾತಿಯ ನಾಯಕರು ಬಿಜೆಪಿಯಲ್ಲಿ ಇದ್ದಾರೆ ಎಂಬ ಸಿದ್ದರಾಮಯ್ಯನವರ ಹೇಳಿಕೆ ವಿರುದ್ಧ ನಗರದ ಬಿಜಿಎಸ್ ವೃತ್ತದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ನಲ್ಲಿದ್ದ ಸಿದ್ದರಾಮಯ್ಯನವರು ಕಾಂಗ್ರೆಸ್ ಗೆ ಹೋಗಿರುವುದು ಕೂಡ ಹೊಟ್ಟೆ ಪಾಡಿಗೆಯೇ? ಎಂದು ಪ್ರಶ್ನಿಸಿದರು. ರಾಜಕೀಯ ಪಕ್ಷಗಳನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ, ಸ್ವಾತಂತ್ರ್ಯ ಜನಸಾಮಾನ್ಯರಿಗೆ ಇದೆ. ಸಿದ್ದರಾಮಯ್ಯ ಹೇಳಿಕೆಯನ್ನು ಗಮನಿಸಿದರೆ ಅವರಿಗೆ ಹುಚ್ಚು ಹಿಡಿದಂತೆ ಕಾಣುತ್ತಿದೆ. ಅವರಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಮಾತನಾಡಿ, ಪರಿಶಿಷ್ಟ ಜಾತಿಯವರೂ ಕಾಂಗ್ರೆಸ್ ತೊರೆಯುತ್ತಿದ್ದಾರೆ. ನಮ್ಮನ್ನು ಕಳೆದುಕೊಂಡು ಕಾಂಗ್ರೆಸ್ ಅಧಿಕಾರವನ್ನೂ ಕಳೆದುಕೊಂಡಿದೆ ಎಂದು ವ್ಯಂಗ್ಯವಾಡಿದರು. ಬಿಜೆಪಿ ಜಿಲ್ಲಾ ಘಟಕದ…

Read More

ತುಮಕೂರು : ಬೆಲೆ ಏರಿಕೆ ಸಂದರ್ಭದಲ್ಲಿಯೂ ಬಿಜೆಪಿಗೆ 30 ಸಾವಿರ ಲೀಡ್ ಸಿಕ್ಕಿದೆ ಎಂದರೆ ಆಶ್ಚರ್ಯ ತಂದಿದೆ. ಸಿಂದಗಿಯಲ್ಲಿ ನಮ್ಮ ಪಕ್ಷ ಅಷ್ಟೋಂದು ಮತ ಸೆಳೆಯಲು ಆಗಿಲ್ಲ. ಅದಕ್ಕೆ ಕಾರಣ ಏನು ಎನ್ನುವುದನ್ನು ಪರಿಶೀಲನೆ ಮಾಡುತ್ತೇವೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಉಪಚುನಾವಣೆ ಫಲಿತಾಂಶದ ವಿಚಾರವಾಗಿ ಮಾತನಾಡಿದ ಅವರು, ಹಾನಗಲ್ ಸಿಎಂ ತವರು ಜಿಲ್ಲೆಯಾದರೂ ನಾವು ಗೆದ್ದಿರೋದು ಸಂತಸ ತಂದಿದೆ. ಜನ ಇವತ್ತು ಶ್ರೀನಿವಾಸ್ ಮಾನೆಯವರ ಕೈ ಹಿಡಿದಿದ್ದಾರೆ. ಅವರು ಕ್ಷೇತ್ರದಲ್ಲೇ ಕೆಲಸ ಮಾಡಿಕೊಂಡಿದ್ದರು, ಜನರ ಸಂಪರ್ಕಗಳಿಸಿದ್ದರು, ಹಾಗಾಗಿ ಜನ ಇಂದು ಅವರ ಕೈ ಹಿಡಿದಿದ್ದಾರೆ ಎಂದರು. ಇನ್ನು ಎರಡು ಕ್ಷೇತ್ರದಲ್ಲಿ ಜನತಾದಳಕ್ಕೆ ನೆಲೆ ಇಲ್ಲದ ರೀತಿಯಾಗಿದೆ. ಸಿಂದಗಿಯಲ್ಲಿ ಜೆಡಿಎಸ್ ಪ್ರಾಬಲ್ಯ ಇತ್ತು ಈಗ ನೆಲೆ ಕಳೆದುಕೊಂಡಿದೆ. ಇಷ್ಟೋಂದು ಬೆಲೆ ಏರಿಕೆ, ಪೆಟ್ರೋಲ್, ಡಿಸೇಲ್ ಹೀಗೆ ಅಗತ್ಯವಸ್ತು ಬೆಲೆ ಏರಿಕೆಯಾದ್ರು ಸಿಂದಗಿಯಲ್ಲಿ ಇನ್ನೂ ಬಿಜೆಪಿ ಅವರಿಗೆ ಮತ ಹಾಕ್ತಾರೆ ಅದು ನನಗೆ ಆಶ್ಚರ್ಯವಾಗಿದೆ. ಇಂದಿನ ಫಲಿತಾಂಶ ನೋಡಿದ್ರೆ, ಅಗತ್ಯ ವಸ್ತು…

Read More

ಕೊರಟಗೆರೆ : ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ  ಮುಂದೆ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ವಿವಿಧ ಕನ್ನಡಪರ ಸಂಘಟನೆಗಳ ಅಧ್ಯಕ್ಷರು ಹಾಗೂ ಮುಖಂಡರ ನೇತೃತ್ವದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಚಾಲನೆ. 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಿ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನೂ ಮಾಡಿ ಕೊರಟಗೆರೆ ಪಟ್ಟಣದ ಮುಖ್ಯರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಿ ತಾಯಿ ಭುವನೇಶ್ವರಿಗೆ ಜೈಕಾರ ವನ್ನು ಕೂಗಿ ವೈಭವ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ಹಾಗೂ ಕೊರಟಗೆರೆ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ನಟರಾಜ್,ಕರ್ನಾಟಕ ರಣಧೀರರ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎನ್ ದೇವರಾಜ್, ಕರ್ನಾಟಕ ರಣಧೀರರ ವೇದಿಕೆ ತಾಲ್ಲೂಕು ಅಧ್ಯಕ್ಷರು ಹಾಗೂ ಪತ್ರಕರ್ತರಾದ ಮಂಜುಸ್ವಾಮಿ.ಎಂ. ಎನ್. ಕನ್ನಡ ಪರ ಸಂಘಟನೆಯ ಮುಖಂಡರುಗಳಾದ ದಿನೇಶ್,ರವಿಕುಮಾರ್, ಉಮೇಶ್, ಮಾರುತಿ,ಕಲೀಮ್, ಪುನೀತ್, ಇತರೇ ಮುಖಂಡರುಗಳು ಹಾಜರಿದ್ದರು. ವರದಿ :…

Read More

‘ಜೈ ಭೀಮ್’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪರಮೇಶ್ವರಪ್ಪ IPS (ಪ್ರಕಾಶ್ ರಾಜ್) ಹಿಂದಿಯಲ್ಲಿ ಮಾತಾಡುತ್ತಿದ್ದ ಮಾರ್ವಾಡಿಯೊಬ್ಬನಿಗೆ ‘ಕನ್ನಡದಲ್ಲಿ (ತಮಿಳು, ತೆಲುಗು, ಮಲಯಾಳಂ) ಮಾತಾಡು’ ಎಂದು ಕೆನ್ನೆಗೆ ಬಾರಿಸಿರುವ ದೃಶ್ಯವು ಅನೇಕ ರೀತಿಯ ವಾಗ್ವಾದಗಳಿಗೆ ಕಾರಣವಾಗಿದೆ. ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಬಂದು ಅನೇಕ ವರ್ಷಗಳ ಕಾಲ‌ ಇಲ್ಲಿಯ ಸ್ಥಳೀಯರಾಗಿಯೇ ನೆಲೆ ಕಂಡುಕೊಂಡಿರುವ ಮಾರ್ವಾಡಿಗಳಿಗೆ ಹೀಗೆ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸುವಂತೆ ಹೊಡೆದು ಬುದ್ಧಿ ಕಲಿಸಬೇಕಾದ ಅಗತ್ಯವಿದೆ ಎಂದು ‘ಜೈ ಭೀಮ್’ ಸಿನಿಮಾ ನೋಡಿದ ಬಳಿಕ ದಕ್ಷಿಣದ ಜನರಲ್ಲಿ ಜನಾಭಿಪ್ರಾಯ ಮೂಡುತ್ತಿದೆ. ಪರಮೇಶ್ವರಪ್ಪ IPS (ಪ್ರಕಾಶ್ ರಾಜ್) ಜಿಗುಟು ಹಿಂದಿ ಭಾಷಿಕ ಮಾರ್ವಾಡಿಗೆ ಹೊಡೆದಿರುವುದು ಸಿನಿಮಾದಲ್ಲಿ ನಟನೆಗಾಗಿ. ಉತ್ತರ ಭಾರತದ ಮಾರ್ವಾಡಿಗಳು ದಕ್ಷಿಣ ಭಾರತೀಯರ ಆರ್ಥಿಕ ಉತ್ಪಾದನಾ ನೆಲೆಗಳನ್ನು ಕಬ್ಜಾ ಮಾಡಿಕೊಂಡಿರುವುದಲ್ಲದೆ ಸ್ಥಳೀಯ ಭಾಷೆಗಳ ‌ಮೇಲೆ ಹಿಂದಿ ಭಾಷೆಯನ್ನು ಹೇರುತ್ತಾ ದಕ್ಷಿಣ ಭಾರತೀಯರ ಬದುಕಿನ ಮೇಲೆಯೇ ಹೊಡೆದಿದ್ದಾರೆ. ಇದಕ್ಕೆ ಯಾರು ಹೊಣೆ? ಉತ್ತರ ಭಾರತದ ಮಾರ್ವಾಡಿಗಳು ಹಿಂದಿ ಭಾಷೆಯನ್ನು ದಕ್ಷಿಣ ಭಾರತದ ದ್ರಾವಿಡ ದೇಶಭಾಷಿಕರ…

Read More

ಗುಬ್ಬಿ: ಕೆಂದ್ರ ಸರ್ಕಾರದ ಮಹತ್ವದ ಯೋಜನೆಯಾದ  ಅಂತರ್ಜಲ ಚೇತನ ಎಂಬ ಯೋಜನೆಯಿಂದ ಗ್ರಾಮೀಣ ಪ್ರದೇಶಗಳ ರೈತರ ಜಮೀನಿನಲ್ಲಿ  ಅಂತರ್ಜಲ ಹೆಚ್ಚಿಸುವ ಕಾಮಗಾರಿ ಮಾಡುವುದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಗುಬ್ಬಿ ತಾಲ್ಲೂಕಿನ ಕ್ವಾರ್ಡಿನೇಟರ್ ಜನಾರ್ದನ್  ತಿಳಿಸಿದರು. ಗುಬ್ಬಿ ನಗರದ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಡಾ ಶ್ರೀ ಶ್ರೀ ರವಿಶಂಕರ್ ಗುರೂಜಿ ಯವರ ಆರ್ಟ್ ಆಫ್ ಲಿವಿಂಗ್ ಸೆಂಟರ್ ನ ಸಹಯೋಗದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಅಂತರ್ಜಲ ಚೇತನ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆ ಸಂಪೂರ್ಣ ಕೆಂದ್ರ ಸರ್ಕಾರದ ಯೋಜನೆಯಾಗಿದ್ದು ಗುಬ್ಬಿ ತಾಲ್ಲೂಕಿನ 34 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಪ್ರತಿ ಗ್ರಾಮಗಳಿಗೆ ಒಳಪಟ್ಟಿದ್ದು  ಗ್ರಾಮ ಪಂಚಾಯ್ತಿಗೆ ಒಬ್ಬರು ಆಸಕ್ತಿಯುಳ್ಳ  ಯುವಕರನ್ನು C P O ಗಳನ್ನು (ಗ್ರಾಮ ಪಂಚಾಯ್ತಿ ಕ್ವಾರ್ಡಿನೇಟರ್)ಆಗಿ ಆಯ್ಕೆ ಮಾಡುವ ಮೂಲಕ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದರು. ಈ ಯೋಜನೆಯ ಅಡಿಯಲ್ಲಿ ಗ್ರಾಮೀಣ ಭಾಗದ ರೈತರ ಜಮೀನಿನಲ್ಲಿ ಯಾವ…

Read More