Author: admin

ಇತ್ತೀಚೆಗೆ ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆ(Harsha Murder Case)ಯಾದ ಹಿಂದೂಪರ ಸಂಘಟನೆ ಕಾರ್ಯಕರ್ತ ಹರ್ಷ ಮನೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(BS Yediyurappa) ಭೇಟಿ ನೀಡಿದರು. ಹರ್ಷ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಿಎಸ್​ವೈ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಸರ್ಕಾರದ ವತಿಯಿಂದ ಘೋಷಿಸಲಾಗಿದ್ದ 25 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಹರ್ಷ(Bajrang Dal Activist) ಕುಟುಂಬಸ್ಥರಿಗೆ ಬಿಎಸ್ ವೈ ಹಸ್ತಾಂತರ ಮಾಡಿದರು. ಬಳಿಕ ಮಾತನಾಡಿದ ಅವರು, ಭಜರಂಗದಳ ಸಂಘಟನೆ ಕಾರ್ಯಕರ್ತ ಹರ್ಷ ಹತ್ಯೆ ನಡೆದಿರುವುದು ಖಂಡನೀಯ. ಹಿಂದೂ ಸಮಾಜದ ಮುಖಂಡನಾಗಿ ಬೆಳೆಯುತ್ತಿದ್ದ ಹರ್ಷನ ಬೆಳವಣಿಗೆಯನ್ನು ಸಹಿಸಲಾಗದೆ ಕೊಲೆ ಮಾಡಲಾಗಿದೆ. ಯಾರ ತಂಟೆಗೂ ಹೋಗದೆ ತನ್ನ ಪಾಡಿಗೆ ತಾನು ಸಂಘಟನಾ ಕೆಲಸ ಮಾಡುತ್ತಿದ್ದ ಹರ್ಷರನ್ನು ಕೊಲೆ ಮಾಡಿರುವುದು ದುಃಖದ ವಿಷಯವೆಂದು ಬಿಎಸ್​ವೈ(Former CM BSY) ಬೇಸರ ವ್ಯಕ್ತಪಡಿಸಿದರು. ಹರ್ಷನ ಕುಟುಂಬ(Harsha Family) ಸದಸ್ಯರಿಗೆ ಸಾಂತ್ವನ ಹೇಳುವುದುನ್ನು ಬಿಟ್ಟರೆ ಬೇರೇನೂ ಮಾಡಲು ಸಾಧ‍್ಯವಿಲ್ಲ. ಪರಿಹಾರವೆಂದು ಎಷ್ಟೇ ಹಣ ಕೊಟ್ಟರೂ ಅದು ನೆಪಮಾತ್ರ. ಹೋದ ಅಮೂಲ್ಯ ಜೀವ ಮತ್ತೆ ಬರುವುದಿಲ್ಲ.…

Read More

24 ರ ಯುವಕನೋರ್ವ ಮತ್ತು 77 ರ ವಯಸ್ಸಿನ ಮಹಿಳೆಯನ್ನು ವರಿಸಿದ (Marriage) ಘಟನೆ ನಡೆದಿದೆ. ತಮ್ಮ ಸಂಬಂಧವನ್ನು ತಪ್ಪು ಎಂದು ಅನೇಕರು ಕರೆದರೂ ಅವರು ಮುಜುಗರ ಪಟ್ಟಿಲ್ಲ ಎಂದು ಇವರು ಹೇಳಿದ್ದಾರೆ. ಅಕ್ಟೋಬರ್ 2015 ರಲ್ಲಿ ಮದುವೆಯಾದ 53 ವರ್ಷಗಳ ವಯಸ್ಸಿನ (Wedding) ಅಂತರವಿರುವ ಈ ದಂಪತಿಗಳು ತಮ್ಮ ಮದುವೆ “ಅತ್ಯುತ್ತಮ” ಮತ್ತು “ಸ್ಥಿರವಾಗಿದೆ” ಎಂದು ಹೇಳಿದ್ದಾರೆ.2015 ರಲ್ಲಿ ಅಲ್ಮೆಡಾ ಎಂಬ ವೃದ್ಧೆ ಅವರ ಮಗನ ಅಂತ್ಯಕ್ರಿಯೆಯಲ್ಲಿ (Funeral) ಗ್ಯಾರಿ ಎಂಬ ಯುವಕನನ್ನು ಭೇಟಿಯಾದರು. ಆ ನಂತರ ಇವರಿಬ್ಬರು ಎರಡು ವಾರಗಳ ಬಳಿಕ ವಿವಾಹವಾದರು. ಆ ಸಮಯದಲ್ಲಿ, ಗ್ಯಾರಿ ಕೇವಲ 17 ವರ್ಷ ವಯಸ್ಸಿನವರಾಗಿದ್ದರು. “ನಾವು ಯಾವಾಗಲೂ ಅತ್ಯುತ್ತಮವಾದ, ಸ್ಥಿರವಾದ ದಾಂಪತ್ಯವನ್ನು ಹೊಂದಿದ್ದೇವೆ” ಎಂದು ಗ್ಯಾರಿ ಹೇಳುತ್ತಾರೆ. ಇವರಿಬ್ಬರ ನಡುವೆ 53 ವರ್ಷಗಳ ವಯಸ್ಸಿನ ಅಂತರವಿದೆ. ಗ್ಯಾರಿ ಮತ್ತು ಅಲ್ಮೆಡಾ (Gary & Almeda) ಅವರ ದಾಂಪತ್ಯ ಜೀವನ ಸಂತಸದಿಂದ ತುಂಬಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…

Read More

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಅಮಿರಾ ಕಡಲ್‌ ನ ಹರಿ ಸಿಂಗ್ ಹೈ ಸ್ಟ್ರೀಟ್ ಪ್ರದೇಶದಲ್ಲಿ ಭಾನುವಾರ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗ್ರೆನೇಡ್ (Granade Attack) ಅನ್ನು ಎಸೆದಿದ್ದಾರೆ. ಈ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಒಬ್ಬ ಪೊಲೀಸ್ ಸೇರಿದಂತೆ 24 ಜನರು ಗಾಯಗೊಂಡಿದ್ದಾರೆ. “ಸಂಜೆ 4:20ರ ಸುಮಾರಿಗೆ, ಹರಿ ಸಿಂಗ್ ಹೈ ಸ್ಟ್ರೀಟ್‌ನಲ್ಲಿ ನಿಯೋಜಿಸಲಾಗಿದ್ದ ಪೊಲೀಸರು ಮತ್ತು ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗ್ರೆನೇಡ್‌ನಿಂದ ದಾಳಿ ನಡೆಸಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಾಳುಗಳನ್ನು ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಗೆ (Maharaja Hari Singh Hospital) ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಉಗ್ರರನ್ನು (Terror Attack) ಬಂಧಿಸುವ ಪ್ರಯತ್ನ ಮುಂದುವರಿದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಘಟನೆಯಲ್ಲಿ ಓರ್ವ ಪೊಲೀಸ್ ಸೇರಿದಂತೆ 24 ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದರೆ. ಗಾಯಾಳುಗಳನ್ನು ಶ್ರೀ ಮಹಾರಾಜ ಹರಿ ಸಿಂಗ್…

Read More

ಸಿರಾ: ಉಕ್ರೇನ್​ ನಲ್ಲಿ ಎಂಬಿಬಿಎಸ್​​​ನ ಓದುತ್ತಿದ್ದ ವಿದ್ಯಾರ್ಥಿಗಳು ಭಾರತಕ್ಕೆ ಬಂದು ತಲುಪಿದ್ದಾರೆ.  ಮಕ್ಕಳು ಆಗಮಿಸುತ್ತಿದ್ದಂತೆಯೇ ಪೋಷಕರು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಸಿರಾ ನಗರದ ವಿದ್ಯಾರ್ಥಿನಿ ನಗರದ ಪ್ರಿಯಾಂಕ ಮತ್ತು ಮತ್ತೊಬ್ಬ ವಿದ್ಯಾರ್ಥಿ ಸಿರಾ ನಗರದ ಸಪ್ತಗಿರಿ ಬಡಾವಣೆಯ ತ್ರಿಶಾಂಕ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಮಕ್ಕಳ ಆಗಮನದಿಂದ ಪೋಷಕರು ತೀವ್ರ ಸಂತದ ವ್ಯಕ್ತಪಡಿಸಿದ್ದಾರೆ. ಉಕ್ರೇನ್ ದೇಶದ ವಿವಿಧ ವಿವಿಯಲ್ಲಿ ಎಂಬಿಬಿಎಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಯುದ್ಧ ಭೀತಿ ಆವರಿಸಿದಾಗ ಪೋಷಕರ ಒತ್ತಾಯಕ್ಕೆ ಮಣಿದು ಉಕ್ರೇನ್ ​ನಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಅಲ್ಲಿಂದ. ಸಿರಾಕ್ಕೆ ವಾಪಸ್ ಆಗಮಿಸಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಉಕ್ರೇನ್ ದೇಶದಿಂದ ಮರಳಿ ಸುರಕ್ಷಿತವಾಗಿ ಮನೆಗೆ ತಲುಪಿರುವ ವಿದ್ಯಾರ್ಥಿಗಳ ಮನೆಗೆ ಕೇಂದ್ರ ಸಚಿವರಾದ  ನಾರಾಯಣಸ್ವಾಮಿ,  ಶಾಸಕ ಡಾ.ರಾಜೇಶ್ ಗೌಡ, ತಹಶೀಲ್ದಾರ್ ಮಮತಾ ಮತ್ತಿತರರು ಭೇಟಿ ನೀಡಿದರು.  ಮುಂದಿನ ವಿದ್ಯಾಭ್ಯಾಸದ ಕುರಿತು ಸರ್ಕಾರದಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಭರವಸೆಯನ್ನು  ಇದೇ ಸಂದರ್ಭದಲ್ಲಿ ನೀಡಿದರು.  ವರದಿ: ಎ.ಎನ್. ಪೀರ್…

Read More

ಉಕ್ರೇನ್ ನಲ್ಲಿ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಉನ್ನತ ವಿದ್ಯಾಭ್ಯಾಸಕಾಗಿ ಉಕ್ರೇನ್ ಗೆ ತೆರಳಿದ್ದ ಅದೆಷ್ಟೋ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ (Ukraine)ಸಿಲುಕಿದ್ದರು. ಇದೀಗ ಆ ವಿದ್ಯಾರ್ಥಿಗಳನ್ನು ಮರಳಿ ತಾಯ್ನಾಡಿಗೆ ಕರೆ ತರುವ ಕೆಲಸ ನಡೆಯುತ್ತಿದೆ. ಇಂದು ಕೂಡಾ ಉಕ್ರೇನ್ ನಿಂದ ೩೭ ವಿದ್ಯಾರ್ಥಿಗಳ ತಂದ ಬೆಂಗಳೂರಿಗೆ ಬಂದಿಳಿದಿದೆ (Studnts returned from Ukraine). ಈ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ಕಂಡು ಪೋಷಕರು ಕಣ್ಣೀರು ಹಾಕಿದ್ದಾರೆ. ರಷ್ಯಾ ಉಕ್ರೇನ್ ವಿರುದ್ಧ ಯುದ್ಧ (Russia Ukraine War) ಸಾರಿದ ದಿನದಿಂದ ಉಕ್ರೇನ್ ನಲ್ಲಿ ಜನರ ಸ್ಥಿತಿ ದುಸ್ತರವಾಗಿದೆ. ಈ ನಡುವೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ಗೆ ತೆರೆಳಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಕರೆ ತರುವ ಜವಾಬ್ದಾರಿ ಕೂಡಾ ಸರ್ಕಾರದ ಮೇಲಿತ್ತು (Studnts returned from Ukraine). ಈ ಬಗ್ಗೆ ಸರ್ಕಾರ ಸತತ ಪ್ರಯತ್ನಗಳನ್ನು ನಡೆಸುತ್ತಲೇ ಇದೆ. ಅನೇಕ ವಿದ್ಯಾರ್ಥಿಗಳು ಈಗಾಗಲೇ ದೇಶಕ್ಕೆ ಮರಳಿದ್ದಾರೆ. ಇಂದು ಕೂಡಾ ರಾಜ್ಯದ ೩೭ ವಿದ್ಯಾರ್ಥಿಗಳು ವಾಪಾಸಾಗಿದ್ದಾರೆ.…

Read More

ಪಾವಗಡ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಕರ್ನಾಟಕ ರಾಜ್ಯದ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ತಾಲ್ಲೂಕು ಕಸಬಾ ಹೋಬಳಿಯ ಕನ್ನಮೇಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಕೃಷ್ಣಗಿರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶ್ರೀ ಭಗತ್ ಸಿಂಗ್  ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ನಡೆಸಲಾಯಿತು. ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೃಷ್ಣಗಿರಿ ಜೂಲಪ್ಪನಹಟ್ಟಿ, ಆಲದಮರದ ಹಟ್ಟಿ, ಗ್ರಾಮಗಳ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಈ ಶಿಬಿರದ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಮಿಕ ನಿರೀಕ್ಷಕ  ಶ್ರೀ ಅಬ್ದುಲ್ ರವೂಫ್, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಗಾಳಿ-ಮಳೆ ಧೂಳಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅವರ ಆರೋಗ್ಯದ ರಕ್ಷಣೆಗಾಗಿ ಸರ್ಕಾರ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದುಡಿದು ಸಂಸಾರವನ್ನು ನಿರ್ವಹಿಸುವಂತಹ ಕಾರ್ಮಿಕ ಅನಾರೋಗ್ಯಕ್ಕೆ ತುತ್ತಾದರೆ ಕುಟುಂಬವು ಕಷ್ಟಕ್ಕೆ ತುತ್ತಾಗುತ್ತಾರೆ. ಆದ್ದರಿಂದ …

Read More

ಕೊರಟಗೆರೆ: ಪಟ್ಟಣದ ರಾಮೇಶ್ವರ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದ ವತಿಯಿಂದ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಹೆಣ್ಣುಮಕ್ಕಳಿಗೆ ತುಳಸಿಕಟ್ಟೆ ವಿತರಣೆ ಮಾಡಲಾಗಿತ್ತು. ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಕಾವ್ಯ ಶ್ರೀ ಮಾತನಾಡಿ,  ಶ್ರೀಕ್ಷೇತ್ರ ಧರ್ಮಸ್ಥಳ  ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ  ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಸ್ವಂತ ದುಡಿಮೆಗೆ ಅನುಕೂಲವಾಗುವಂತೆ   ಹೆಣ್ಣುಮಕ್ಕಳಿಗೆ ಅನೇಕ ಅನುಕೂಲಗಳನ್ನು ಮಾಡಿಕೊಡುತ್ತಿದೆ ಎಂದರು. ಮದುವೆಯಾಗಿ ಗಂಡನ ಮನೆಗೆ  ಬಂದಿರುವ ಹೆಣ್ಣು ಮಕ್ಕಳು ಮನೆಯಲ್ಲಿಯೇ ಇರಬೇಕಿತ್ತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವದ್ಧಿ ಸಂಸ್ಥೆಯ ವತಿಯಿಂದ ಅಂತಹ ಹೆಣ್ಣು ಮಕ್ಕಳು ಸ್ವಾವಲಂಬಿ ಆಗಲು ಅನೇಕ ಯೋಜನೆಗಳನ್ನು ರೂಪಿಸಿದೆ. ಅವರ ಸ್ಕೂಲಿಗಾಗಿ ಸಂಸ್ಥೆ ವತಿಯಿಂದ ಲೋನ್ ಕೂಡ ಕೊಡಲಾಗುತ್ತಿದೆ.  ಹೆಣ್ಣುಮಕ್ಕಳಿಗೆ ಲೋನ್  ಕೊಡುವುದರಿಂದ ಸರಿಯಾದ ಸಮಯಕ್ಕೆ ತಿರುಗಿಸುತ್ತಾರೆ ಹಾಗೆಯೇ ಆ ಹಣದಿಂದ ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇನೆ  ಎಂದು ತಿಳಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನಾಧಿಕಾರಿ ಬಾಲಕೃಷ್ಣ ಮಾತನಾಡಿ…

Read More

ಪಾವಗಡ: ತಾಲೂಕು ನಿಡಗಲ್ ಹೋಬಳಿ ಸಿಕೆ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಟಿ.ಎನ್.ಕೋಟೆ ಯಲ್ಲಿ ಬೋವಿ ಕಾಲೋನಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಗುದ್ದಲಿ ಪೂಜೆ ನಡೆಯಿತು. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ವೆಂಕಟೇಶಣ್ಣ ಮತ್ತು ಟಿ.ಎಂ.ಕೋಟೆಯ ಪ್ರಭಾಕರ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚಿನ್ನೇನಹಳ್ಳಿಯ ಭೋಜ ರಾಜಣ್ಣ ಮತ್ತು ಗ್ರಾಮದ ಹನುಮಂತರಾಯಪ್ಪ ಹಾಗೂ ಕೊಂಡಪ್ಪ ರವಿಕುಮಾರ್ ಪಾಳ್ಯದ ನಾಗೇಂದ್ರಪ್ಪ ಹನುಮನ ಪಾಳ್ಯದ ಶಿವಮೂರ್ತಿ ಮತ್ತು ಪ್ರಸಾದ್ ಗ್ರಾಮಸ್ಥರು ಈ ಸಂದರ್ಭ ಜೊತೆಗಿದ್ದರು. ವರದಿ: ನಂದೀಶ್ ಕೊತ್ತೂರು, ನಿಡಗಲ್ ಹೋಬಳಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಗುಬ್ಬಿ:  ತಾಲೂಕಿನ ಅಮ್ಮನಘಟ್ಟ ಗ್ರಾಮದಲ್ಲಿ ಶಾರದಮ್ಮ ಲೇಟ್  ದೊಡ್ಡತಿಮ್ಮಯ್ಯ ಎಂಬುವವರ ಜಮೀನಿನಲ್ಲಿ ಯಾವುದೇ ನೋಟಿಸ್ ನೀಡದೆ, ಮೀಸಲು ಅರಣ್ಯ ಪ್ರದೇಶ ಎಂದು ವಲಯ ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಪೊಲೀಸ್ ಭದ್ರತೆಯಲ್ಲಿ ಅಡಕೆ ಮರ ಹಾಗೂ ತೆಂಗಿನ ಮರಗಳನ್ನು ತೆರವುಗೊಳಿಸುತ್ತಿದ್ದು, ಇದರಿಂದಾಗಿ  ಬಡ ರೈತ ಕುಟುಂಬ  ಕಂಗಾಲಾಗಿದೆ. ಇಂದು ಗುಬ್ಬಿ ವಲಯ ಅರಣ್ಯ ಅಧಿಕಾರಿ ದುರ್ಗಪ್ಪ ಮತ್ತು ಸಿಬ್ಬಂದಿ ಪೊಲೀಸ್ ಇಲಾಖೆಯ ಬಂದೋ ಬಸ್ತ್ ಪಡೆದು ರೈತ ಅಡಿಕೆ ಮತ್ತು ತೆಂಗಿನ ಮರಗಳ ತೆರವಿಗೆ ಮುಂದಾದರು. ಈ ವೇಳೆ ರೈತ ಮಹಿಳೆ ಶಾರದಮ್ಮ ಕೋರ್ಟ್ ಗೆ ಆಫೀಲ್ ಹೋಗಿದ್ದು, ತಡೆ ಅರ್ಜಿಯನ್ನು ಸೋಮವಾರ ತೋರಿಸುತ್ತೇವೆ ಎಂದು ಅಂಗಲಾಚಿದರು ಅರಣ್ಯಾಧಿಕಾರಿಗಳು ಯಾವುದಕ್ಕೂ ಜಗ್ಗಲಿಲ್ಲ. ಕಳೆದ 10 ವರ್ಷಗಳ ಹಿಂದೆ ಅರಣ್ಯ ಅಧಿಕಾರಿಗಳು ಬಂದು ಸರ್ವೇ ಕಲ್ಲನ್ನು ಹಾಕಿದ್ದಾರೆ. ಇಂದು ಯಾವುದೇ ಮಾಹಿತಿಯನ್ನು ನೀಡದೆ ಏಕಾಏಕಿ ಅಡಿಕೆ, ತೆಂಗು ಮರಗಳನ್ನು ಉರುಳಿಸುತ್ತಿರುವುದು ಆರಣ್ಯಧಿಕಾರಿಗಳ  ಸರ್ವಾಧಿಕಾರಿ ಧೋರಣೆ ಕಂಡು ಬರುತ್ತಿದೆ ಅಧಿಕಾರಿಗಳ ದೌರ್ಜನ್ಯದ ವಿರುದ್ಧ…

Read More

ತುಮಕೂರು: ಜಿಲ್ಲೆಯಲ್ಲಿ ಭೂಮಿ ವಸತಿಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಎರಡು ತಲೆಮಾರುಗಳಿಂದ ಹೋರಾಟ ನಡೆಸಿಕೊಂಡು ಬರಲಾಗುತ್ತಿದ್ದರೂ, ಈವರೆಗೆ ತುಮಕೂರು ಜಿಲ್ಲಾಡಳಿತ ಸಮಸ್ಯೆ ಬಗೆ ಹರಿಸಿಲ್ಲ. ಹೀಗಾಗಿ ಮಾರ್ಚ್ 15ರಿಂದ ಭೂಮಿ ಮತ್ತು ವಸತಿ ಹೋರಾಟ ಸಮಿತಿಯು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಭೂಮಿ ವಸತಿ ಹಕ್ಕಿಗಾಗಿ ಅನಿರ್ದಿಷ್ಟ ಕಾಲ ಅಹೋ ರಾತ್ರಿ ಧರಣಿ  ಹಮ್ಮಿಕೊಂಡಿದೆ. ಜಿಲ್ಲೆಯ ಸಾವಿರಾರು ಭೂ ರಹಿತರು  ಭೂಮಿ ಮತ್ತು ವಸತಿಗಾಗಿ ಅರ್ಜಿಗಳನ್ನು ಹಾಕಿ ಇಂದು, ನಾಳೆ ಭೂಮಿ ವಸತಿಗೆ ಸಾಗುವಳಿ, ಹಕ್ಕುಪತ್ರ ಸಿಗಬಹುದು ಎಂಬ ಆಶಾ ಭಾವನೆಯಿಂದ ಕಾಯುತ್ತಿದ್ದಾರೆ.  ಅನೇಕ ಬಾರಿ ಕಛೇರಿಯಿಂದ ಕಛೇರಿಗಳಿಗೆ ಅಲೆದರೂ ಕೂಡ ಇದುವರೆಗು ಅರ್ಹರಿಗೆ ಭೂಮಿ ವಸತಿ ದೊರೆತಿಲ್ಲ. ರಾಜ್ಯ ಸೇರಿದಂತೆ ತುಮಕೂರು ಜಿಲ್ಲೆಯ ಈ ಭೂಮಿ ವಸತಿ ಸಮಸ್ಯೆಗಳನ್ನು ಬಗೆ ಹರಿಸಲು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಶ್ರೀ ಹೆಚ್.ಎಸ್.ದೊರೆಸ್ವಾಮಿ ರವರ ನೇತೃತ್ವದ ಭೂಮಿ ವಸತಿ ಹೋರಾಟ ಸಮಿತಿಯಿಂದ 2018 ನೇ ಸಾಲಿನಿಂದ ಅನೇಕ ಬಾರಿ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ,ತಾಲ್ಲೂಕು ಕಛೇರಿಗಳ…

Read More