Author: admin

ರಾಜಧಾನಿ ಬೆಂಗಳೂರಿನ ಆಟೋ ಚಾಲಕರಿಗೆ (Auto Driver) ಸರ್ಕಾರ ಶಾಕ್ ಕೊಡೋಕೆ ಸಿದ್ಧವಾಗಿದೆ. ನಗರದಲ್ಲಿ ವಾಯುಮಾಲಿನ್ಯ ನಿಯಂತ್ರಣ ಹೆಸರಿನಲ್ಲಿ ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು 2stroke ಆಟೋಗಳ ಬ್ಯಾನ್ ಗೆ ಮುಂದಾಗಿದೆ.ಏಪ್ರಿಲ್ 1 ರಿಂದ ಅಂತಹ ಆಟೋಗಳು ನಗರದಲ್ಲಿ ಸಂಚಾರಕ್ಕೆ ಅವಕಾಶ ಇಲ್ಲ ಎಂದಿರುವ ಸರ್ಕಾರದ ವಿರುದ್ಧ ಆಟೋ ಚಾಲಕರು ಅಸಮಾಧಾನ ಹೊರಹಾಕಿದ್ದಾರೆ.‌ ಕೊರೊನಾ ಕರ್ಫ್ಯೂ (Corona Curfew) ಹಾಗೂ ಲಾಕ್ ಡೌನ್ ನಿಂದ ಬಸವಳಿದಿದ್ದ ಆಟೋ ಚಾಲಕರನ್ನು ಈ ನಿಯಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ವಾಯುಮಾಲಿನ್ಯ ನಿಯಂತ್ರಣ ನೆಪದಲ್ಲಿ ಸರ್ಕಾರ ಮಾಡಿದ ಈ ನಿಯಮ ಚಾಲಕರಿಗೆ ಬರೆ ಎಳೆದಂತಾಗಿದೆ. ಮಾರ್ಚ್ 31ಕ್ಕೆ 2stroke ಆಟೋಗಳಿಗೆ ಅವಕಾಶ ಇಲ್ಲ. ಸರ್ಕಾರದ ನಿರ್ಧಾರದಿಂದ ಆಟೋ ಚಾಲಕರ ಬದುಕು ಅತಂತ್ರ ಸ್ಥಿತಿಗೆ ತಲುಪಿದಂತಾಗಿದೆ. ಹೆಚ್ಚು ಹೊಗೆ ಉಗುಳುವ ಕಾರಣ 2 ಸ್ಟ್ರೋಕ್ ಆಟೋ ನಿಷೇಧಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರದ ಈ ದ್ವಂದ್ವ ನೀತಿ ವಿರುದ್ಧ ಕೋರ್ಟ್ ಮೊರೆ ಹೊರಡಲು ಆಟೋ ಚಾಲಕರು ಸಿದ್ಧತೆ…

Read More

ಪಾವಗಡ: ಪಟ್ಟಣದ ಸರ್ಕಾರಿ YER ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಸಮಿತಿಯಿಂದ ಬಿ. ಗ್ರೇಡ್ ನೀಡಿರುವುದಾಗಿ ಪ್ರಾಂಶುಪಾಲರಾದ ಡಾ. ಎನ್. ಶ್ರೀಧರ್ ಹರ್ಷ ತಿಳಿಸಿದ್ದರು. ಗುರುವಾರ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರೋಪದಲ್ಲಿ ಮಾತನಾಡಿದ ಅವರು, ಫೆಬ್ರವರಿ 18 ಮತ್ತು 19 ರಂದು ನ್ಯಾಕ್ ಸಮಿತಿ ಕಾಲೇಜಿಗೆ ಭೇಟಿ ನೀಡಿದ್ದು, ಸಮಿತಿಯ ಮುಖ್ಯಸ್ಥ  ಪ್ರೊ.ಮಹಮದ್  ಇಕ್ಬಾಲ್ ಅಲಿ,  ವೇದಂ, ಭೇಟಿ ನೀಡಿ ಪರಿಶೀಲಿಸಿ ಕಾಲೇಜಿನ ಕಾರ್ಯವೈಖಾಲಿ ಬಗ್ಗೆ ಗುಣಗಾನ ಮಾಡಿದ್ದಾರೆ ಎಂದು ತಿಳಿಸಿದರು. ಇನ್ನೂ  ಕಳೆದ ಸಾಲಿನಲ್ಲಿ  ಕೂಡ ಕಾಲೇಜು ಬಿ ಗ್ರೇಡ್ ನ್ನು ಪಡೆದುಕೊಂಡಿತ್ತು. ಈ ಬಾರಿಯೂ ಬಿ ಗ್ರೇಡ್ ಪಡೆದುಕೊಂಡಿದೆ. ವರದಿ: ನಂದೀಶ್ ನಾಯ್ಕ ಪಿ., ಪಾವಗಡ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಪಾವಗಡ: 4ನೇ ಕ್ಲಸ್ಟರ್ ಹಂತದ SDMC ಮತ್ತು ಪೋಷಕರ ತರಬೇತಿಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮರಿದಾಸನಹಳ್ಳಿಯಲ್ಲಿ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ CRP ನರೇಂದ್ರ ನಾಯ್ಕ ಎನ್.,  SOP ಅಡಿಯಲ್ಲಿ ಎಲ್ಲರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಶುಚಿಯಾದ ನೀರು ಕುಡಿಯುವುದು,  ಆರೋಗ್ಯವನ್ನು ಆಗಾಗ ತೋರಿಸಿಕೊಳ್ಳಬೇಕು. ಪೋಷಕರು ಹೆಚ್ಚು ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಗಮನ ಹರಿಸಬೇಕು ಎಂದರು. 100 ದಿನಗಳು ಓದು ಕರ್ನಾಟಕ ಮತ್ತು ಓದುವ ಆಂದೋಲನದ ಬಗ್ಗೆ ಇದೇ ವೇಳೆ ಮಾಹಿತಿ ನೀಡಿದರು. SDMC ಅವರು ಗ್ರಾಮ ಪಂಚಾತಿಯಿಂದ ಶಾಲೆಗೆ ಬರುವ ಅನುಕೂಲತೆಗಳನ್ನು ತುರ್ತಾಗಿ ಅರ್ಜಿ ಸಲ್ಲಿಸುವುದರೊಂದಿಗೆ ಪಡೆಯಲು ತಿಳಿಸಲಾಯಿತು. ಈ ಕಾರ್ಯದಲ್ಲಿ ಮರಿದಾಸನಹಳ್ಳಿ  ಪ್ರೌಢ ಶಾಲೆಯ ಮುಖ್ಯಶಿಕ್ಷಕರಾದ ರಾಜ ಗೋಪಾಲ, ಮರಿದಾಸನಹಳ್ಳಿ ಪ್ರಾರ್ಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಹನುಮಂತರಾಜು B N, SDMC ಅಧ್ಯಕ್ಷರಾದ ಹೆಂಜರಪ್ಪ, ಕ್ಲಸ್ಟರಿನ ಎಲ್ಲಾ ಮುಖ್ಯಶಿಕ್ಷಕರು, ಎಲ್ಲಾ ಶಾಲೆಯ SDMC ಅಧ್ಯಕ್ಷರುಗಳು ಹಾಗೂ ಪೋಷಕ ಪ್ರತಿನಿಧಿಗಳು ಭಾಗಿಯಾಗಿದ್ದರು. ವರದಿ:…

Read More

ಪಾವಗಡ:  ತಾಲೂಕು ಕೆ.ಟಿ. ಹಳ್ಳಿ  ಕ್ಲಸ್ಟರ್ ಸಿ.ಅರ್. ಪಿ. ಬಸವರಾಜ್ ಅವರಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದ ಕೆ.ಟಿ.ಹಳ್ಳಿ. ಗ್ರಾಮದಲ್ಲಿ ಕ್ಲಸ್ಟರ್ ಮಟ್ಟದ ಎಲ್ಲಾ ಶಾಲೆಗಳ ವತಿಯಿಂದ  ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ. ಮಂಜುನಾಥ್ ಉದ್ಘಾಟಿಸಿ ಮಾತನಾಡಿ,  ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಕಲಿಕೆಗೆ ಉತ್ತಮ ರೀತಿಯ ಸಹಾಯ ಸಹಕಾರ ನೀಡಿ ಐದು ವರ್ಷಗಳ ಕಾಲ  ಸಲ್ಲಿಸಿರುವ ಸೇವೆಯನ್ನು ಪ್ರಶಂಸಿಸಿದರು. ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸಿ.ಅರ್. ಪಿ. ಬಸವರಾಜು,  ಸುಮಾರು ಐದು ವರ್ಷಗಳ  ಕಾಲ ಕ್ಲಸ್ಟರ್ ಶಾಲೆಗಳ  ಸಂಪನ್ಮೂಲ ವ್ಯಕ್ತಿಯಾಗಿ ಎಲ್ಲಾ ಶಾಲೆಗಳ ಶಿಕ್ಷಕರುಗಳ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಗಳ  ಸಹಾಯ ಸಹಕಾರದೊಂದಿಗೆ ಉತ್ತಮ ರೀತಿಯ ಕೆಲಸಗಳನ್ನು ಮಾಡಿದ್ದೇನೆ. ನನಗೆ ಶಿಕ್ಷಕರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಕ್ಲಸ್ಟರ್ ಗೆ ಉತ್ತಮ ಹೆಸರು ಬರಲು ಶಿಕ್ಷಕರ ಸಹಕಾರವೇ ಕಾರಣ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು.  ಮುಂದಿನ ದಿನಗಳಲ್ಲಿ ತಮ್ಮ ಶಾಲೆಗಳನ್ನು ಉತ್ತಮ ಗುಣಮಟ್ಟದ…

Read More

ಪಾವಗಡ: ಬಗರ್ ಹುಕ್ಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರಾಗಿ ಕಡಪಲಕೆರೆ ನವೀನ್ ಆಯ್ಕೆಯಾಗಿದ್ದಾರೆ,. ಈ ಸಂಬಂಧ ತಾಲ್ಲೂಕು ಬಿಜೆಪಿ ಘಟಕವು ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಆದೇಶ ಪ್ರತಿ ನೀಡಿ ಮಾತನಾಡಿದ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ರವಿಶಂಕರ್ ನಾಯ್ಕ ಪಕ್ಷವು ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ, ಉತ್ತಮ  ಜವಾಬ್ದಾರಿಗಳನ್ನು ವಹಿಸುತ್ತಿದೆ. ಈ ನಿಟ್ಟಿನಲ್ಲಿ ಆಯ್ಕೆಯಾದ ಕಾರ್ಯಕರ್ತರು ಜನಸಾಮಾನ್ಯರ ಸೇವೆ ಮಾಡಿ ಉತ್ತಮ ಹೆಸರು ಪಡೆಯಬೇಕು ಎಂದು ತಿಳಿಸಿದರು. ಗ್ರಾ.ಪಂ. ಸದಸ್ಯ ಹಾಗೂ ಬಿ.ಜೆ.ಪಿ.ಮುಖಂಡ ಕಡಪಲಕೆರೆ ನವೀನ್ ಮಾತನಾಡಿ,  ನನ್ನನ್ನು ಪಕ್ಷ  ಗುರುತಿಸಿ ಜವಾಬ್ದಾರಿ ಕೆಲಸ ನೀಡಿದೆ. ಅದನ್ನು ಸಮರ್ಪಕವಾಗಿ ನಿರ್ವಹಿಸಿ ನನ್ನ ಮೇಲೆ ಪಕ್ಷ ಇಟ್ಟಿರುವ ನಂಬಿಕೆಯನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಪ್ರತಿಕ್ರಿಯಿಸಿದರು. ತಾಲ್ಲೂಕು ಬಿ.ಜೆ.ಪಿ.ಯ ಕಾರ್ಯಕರ್ತ ರಾದ ಬೆಳ್ಳಿಬಟ್ಲು ಪಾಲಯ್ಯ, ಕನ್ನಮೇಡಿಯ ಸಿದ್ದಗಂಗಮ್ಮ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷರು ಶ್ರೀ ರವಿಶಂಕರ್ ನಾಯ್ಕ್,  ನಾಮನಿರ್ದೇಶನ ಸದಸ್ಯರಾದ ಕೆ.ಎಸ್.ನವೀನ್ ಕುಮಾರ್, ಬಿ.ಓ. ಪಾಲಯ್ಯ, ಸಿದ್ದಗಂಗಾಮ್ಮ ಮತ್ತು ಜಿಲ್ಲಾ ಪ್ರಧಾನ…

Read More

ತುಮಕೂರು: ಕಲ್ಪತರು ನಾಡು ತುಮಕೂರು ನಗರದಲ್ಲಿ ಸಾಕಷ್ಟು ಕಾಲೇಜುಗಳು ಮೂಲಭೂತ ಸೌಕರ್ಯಗಳು ಇದ್ದು ಅಧಿಕೃತವಾಗಿ  ನಡೆಯುತ್ತವೆ ಇನ್ನು ಕೆಲವು ಶಿಕ್ಷಣ ಸಂಸ್ಥೆಗಳು ಮೂಲಭೂತ ಸೌಕರ್ಯಗಳು ಇಲ್ಲದೆ ಇದ್ದರೂ ಅನಧಿಕೃತವಾಗಿ ಕೆಲ ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡುವಲ್ಲಿ ನಿರತರಾಗಿದ್ದಾರೆ.  ಈ ಬಗ್ಗೆ ಪಿಯು ಇಲಾಖಾ  ಮಂಡಳಿ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದೆ ಎಂದು ಬೆಳಗುಂಬ ಟಿ.ದಾಸಪ್ಪ ಎಂಬುವವರು ಆರೋಪ ಮಾಡಿದ್ದಾರೆ. ಆರ್. ಟಿ ಐ ಅಡಿಯಲ್ಲಿ ತುಮಕೂರು ನಗರದ ಕೆಲ ಕಾಲೇಜುಗಳ ಮಾಹಿತಿಯನ್ನು ದಾಸಪ್ಪ ಎಂಬುವರು ಪಿಯು ಶಿಕ್ಷಣ ಇಲಾಖೆಯಿಂದ ಪಡೆಯಲು ಮುಂದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪಿಯು ಉಪನಿರ್ದೇಶಕರು ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ ಎಂದು ಆರೋಪಿಸಿದ್ದಾರೆ. ಇನ್ನು ಕೆಲ ಖಾಸಗಿ ಕಾಲೇಜುಗಳು ಇಲಾಖೆಗಳ ಗಮನಕ್ಕೆ ತಾರದೆ ಸರ್ಕಾರಿ ಆದೇಶಗಳನ್ನು ಗಾಳಿಗೆ ತೂರಿ ಯಾವುದೇ ಮಾಹಿತಿ ನೀಡದೆ ಸ್ಥಳಾಂತರಗೊಂಡಿದ್ದು , ಇದಕ್ಕೆ ಸಂಬಂಧಿಸಿದಂತೆ ಆರ್ ಟಿ ಐ ಅಡಿಯಲ್ಲಿ  2019ರಿಂದ ಇಲ್ಲಿಯವರೆಗೂ ಸತತ ಹೋರಾಟ ಮಾಡಿ ಆಯೋಗದ ಮೊರೆಹೋದರು…

Read More

ಹಲವಾರು ದಿನಗಳ ನಿರಂತರ ಸಂಘರ್ಷದ ನಂತರ, ರಷ್ಯಾ ಗುರುವಾರ ಉಕ್ರೇನ್ (ರಷ್ಯಾ-ಉಕ್ರೇನ್ ಘರ್ಷಣೆ) ಮೇಲೆ ದಾಳಿ ಮಾಡಿತು. ರಷ್ಯಾದ ಸೇನೆ ಮತ್ತು ಉಕ್ರೇನಿಯನ್ ಸೈನಿಕರ ನಡುವಿನ ಸಂಘರ್ಷ ಮುಂದುವರಿದಿದೆ. ಇದೆಲ್ಲದರ ಮಧ್ಯೆ ಉಕ್ರೇನ್ ಬಿಕ್ಕಟ್ಟಿನ ಕುರಿತು ಗುರುವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ ನಂತರ, ಪಿಎಂಒ ಈ ಮಾಹಿತಿಯನ್ನು ನೀಡಿದೆ. ‘ಉಕ್ರೇನ್‌ಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ಪ್ರಧಾನಮಂತ್ರಿ ನರೇಂದ್ರ ಮೋದಿಗೆ ವಿವರಿಸಿದರು. ಈ ವೇಳೆ ರಷ್ಯಾ ಮತ್ತು ನ್ಯಾಟೋ (NATO) ನಡುವಿನ ಭಿನ್ನಾಭಿಪ್ರಾಯಗಳನ್ನು ಪ್ರಾಮಾಣಿಕ ಸಂವಾದದ ಮೂಲಕ ಮಾತ್ರ ಪರಿಹರಿಸಬಹುದು ಎಂಬ ತಮ್ಮ ದೀರ್ಘಕಾಲದ ನಂಬಿಕೆಯನ್ನು ಪ್ರಧಾನಿ ಪುನರುಚ್ಚರಿಸಿದರು ಎಂದು ಪಿಎಂಒ ತಿಳಿಸಿದೆ. ಪಿಎಂಒ ಹೊರಡಿಸಿದ ಅಧಿಕೃತ ಹೇಳಿಕೆಯ ಪ್ರಕಾರ, ಹಿಂಸಾಚಾರವನ್ನು ತಕ್ಷಣವೇ…

Read More

ಗೂಳೂರಿನ ಶ್ರೀ ಮಹಾಗಣಪತಿ ದೇವಾಲಯದ ನೂತನ ಪ್ರವೇಶದ್ವಾರ ಕಾಮಗಾರಿಗೆ ಶಾಸಕ ಡಿ.ಸಿ.ಗೌರಿಶಂಕರ್ ಭೂಮಿ ಪೂಜೆ ಸಲ್ಲಿಸಿದರು. ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಪ್ರವೇಶದ್ವಾರ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ . ಗ್ರಾಮಸ್ಥರ ಮನವಿಯಂತೆ ಶಾಸಕ ಗೌರಿಶಂಕರ್ ತಮ್ಮ ವೈಯಕ್ತಿಕ 25 ಲಕ್ಷ ರೂ.ಗಳ ವೆಚ್ಚದಲ್ಲಿ ಈ ಪ್ರವೇಶ ದ್ವಾರ ನಿರ್ಮಾಣ ಮಾಡಲು ಮುಂದಾಗಿದ್ದು ಅದರ ಭೂಮಿ ಪೂಜೆ  ನೆರವೇರಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಮಹಾರಾಷ್ಟ್ರದಲ್ಲಿ ಮಹಾಗಣಪತಿ ಪೂಜೆಯನ್ನು ಹೇಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆಯೋ ಹಾಗೆಯೇ  ಕರ್ನಾಟಕದಲ್ಲಿ ಆಚರಿಸುತ್ತಿರುವ  ಏಕೈಕ ಸ್ಥಳ ಗೂಳೂರಿನಲ್ಲಿ ಮಾತ್ರ.  ಮಹಾಗಣಪತಿ ಜಾತ್ರೆ ಮಹೋತ್ಸವ ಹಾಗೂ ಪೂಜಾ ಮಹೋತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.  ಆದಕಾರಣ ಗ್ರಾಮಸ್ಥರ ಮನವಿಯಂತೆ ಮಹಾಗಣಪತಿ ದೇವಾಲಯದ ನೂತನ ಪ್ರವೇಶದ್ವಾರ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು,  ಅಂತೆಯೇ ಇಂದು ಭೂಮಿ ಪೂಜೆ ನೆರವೇರಿಸಿ ರುವುದಾಗಿ ತಿಳಿಸಿದರು. ನಾನು ಧರ್ಮ ಜಾತಿಯನ್ನು ಮುಂದಿಟ್ಟುಕೊಂಡು ಎಂದಿಗೂ ರಾಜಕಾರಣ ಮಾಡಿಲ್ಲ . ಮಾಡುವುದೂ ಇಲ್ಲ. ಅಂತಹ ಸಂದರ್ಭ ಒದಗಿ…

Read More

ರಾತ್ರಿ ಕಳೆದು ಬೆಳಗಾಗೊವಷ್ಟರಲ್ಲಿ ಇಡೀ ಕುಟುಂಬವೆ ಪ್ರಾಣ ಬಿಟ್ಟ ಘಟನೆ ಹಾಸನದಲ್ಲಿ (Hasan) ನಡೆದಿದೆ. ನಿನ್ನೆ ರಾತ್ರಿ ಕೂಡ ಸಂಬಂಧಿಕರೊಂದಿಗೆ ಚೆನ್ನಾಗಿ ಫೋನ್ ನಲ್ಲಿ ಮಾತಾಡಿದ್ದ ತಂದೆ, ತಾಯಿ ಮತ್ತು ಮಗ ಸಾವನ್ನಪ್ಪಿದ್ದಾರೆ. ಮೊನ್ನೆಯಷ್ಟೆ ನೂರಾರು ಜನರ ಜೊತೆ ಸಂಭ್ರಮದಿಂದ ಕಾರ್ಯಕ್ರಮ ಮಾಡಿದ್ದ ಈ ಕುಟುಂಬಕ್ಕೆ ಅದೇನಾಗಿತ್ತೋ? ಮಗನ ಉಪನಯನ ಕಾರ್ಯಕ್ರಮ ಮಾಡಿ ಖುಷಿಯಾಗಿದ್ದವರು ಸಾವಿನೂರಿಗೆ ಪಯಣಿಸಿದ್ದಾರೆ. ಹಾಸನದ ಹೇಮಾವತಿ ನಗರದಲ್ಲಿರೋ ಮನೆಯೊಂದರಲ್ಲಿ ಇಂತಹ ಘಟನೆ ನಡೆದಿದೆ. ಮನೆಯ ಮಾಲೀಕ ಸತ್ಯಪ್ರಕಾಶ್, ಹಂಡತಿ ಅನ್ನಪೂರ್ಣ, ಮಗ ಗೌರವ್ ಮತ್ತು ತಾಯಿ ಎಲ್ಲರೂ ಊಟ ಮಾಡಿ ಮಲಗಿದ್ದಾರೆ. ಸತ್ಯಪ್ರಕಾಶ್ ತಾಯಿ ಪ್ರತಿನಿತ್ಯದಂತೆ ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದಾರೆ. ಬೆಳಗ್ಗೆ 9 ಗಂಟೆಗೆ ಎದ್ದ ಆಕೆ ಪ್ರತಿ ದಿನ ನಾನು ಏಳೋ ಮುಂಚೆಯೇ ಕಾಫಿ ತರ್ತಿದ್ರಲ್ಲಾ ಇವತ್ತು ಇನ್ನೂ ಏಕೆ ತಂದಿಲ್ಲ ಎಂದು ಕೆಳಗಿಳಿದು ಬಂದು ರೂಂ ನಲ್ಲಿ ನೋಡಿದ್ದಾರೆ. ಆಗ ಮೂವರೂ ಕೂಡ ಒಂದೇ ಮಂಚದ ಮೇಲೆ ಮಲಗಿರುವಂತೆ ಕಂಡಿದ್ದಾರೆ. ಎಬ್ಬಿಸಲು ಪ್ರಯತ್ನಿಸಿದ್ದಾರೆ,…

Read More

ತಿಪಟೂರು:  ರಾಜ್ಯದ ವೃತ್ತಿಪರ ನೇಕಾರರ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ, ತಿಪಟೂರು ತಾಲ್ಲೂಕು ಜಯಕರ್ನಾಟಕ ಜನಪರ ವೇದಿಕೆ ಕಾರ್ಮಿಕ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು. ತಿಪಟೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಹೊರಟು, ಉಪವಿಭಾಗಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ಕೆ. ಎಲ್.ಪರಮೇಶ್ವರಯ್ಯ  ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ತಾಲ್ಲೂಕು ಕಾರ್ಯದರ್ಶಿ ರವಿ ಹಿಂಡಿಸ್ಕೆರೆ, ಕಾರ್ಮಿಕ ಘಟಕದ ಉಪಾಧ್ಯಕ್ಷ ಉಮಾಶಂಕರ್ ಮತ್ತು ಹಿಂದುಳಿದ ವರ್ಗಗಳ ರಾಜ್ಯ ಸಂಘಟನ ಕಾರ್ಯದರ್ಶಿ ಲೋಕೇಶ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಅಧ್ಯಕ್ಷ ಬಿ.ಟಿ.ಕುಮಾರ್, ಜಿಲ್ಲಾ  ಯುವ ಘಟಕದ ಉಪಾಧ್ಯಕ್ಷ ಬಿ.ಬಿ.ಬಸವರಾಜ್, ಮಾಜಿ ತಾ.ಪಂ.ಅಧ್ಯಕ್ಷ ವಿರುಪಾಕ್ಷಯ್ಯ, ಗ್ರಾ.ಪಂ. ಸದಸ್ಯ ಜಗನ್ನಾಥ್, ತಾಲ್ಲೂಕು ಉಪಾಧ್ಯಕ್ಷ ಸಿದ್ದೇಶ್, ನಗರ ಕಾರ್ಯದರ್ಶಿ ಲೋಕೇಶ್, ಮುಖಂಡರಾದ ದಸರೀಘಟ್ಟ ಬಾಬು, ಲೋಕೇಶ್, ಧನ್ ಪಾಲ್   ತಿಮ್ಮರಾಜು, ವಿದ್ಯಾರ್ಥಿ ಘಟಕದ ರಾಖಿ, ರಾಹುಲ್ ಕಾರ್ಮಿಕ ಘಟಕದ ಗುರುಮೂರ್ತಿ,  ರಾಮಚಂದ್ರ, ಸತೀಶ್ಚಂದ್ರ, ನಾಗೇಶ್, ರಘು ಸತೀಶ್ ಬಾಬು ದರ್ಶನ್, ಮಧು ಮತ್ತು ರಾಜಣ್ಣ ಸೇರಿದಂತೆ ಕಾರ್ಮಿಕ, ವಿದ್ಯಾರ್ಥಿ ಘಟಕ ಮತ್ತು ನೇಕಾರರ ಹೋರಾಟ ಹಾಗೂ ಒಕ್ಕೂಟದ …

Read More