ರಾಜಧಾನಿ ಬೆಂಗಳೂರಿನ ಆಟೋ ಚಾಲಕರಿಗೆ (Auto Driver) ಸರ್ಕಾರ ಶಾಕ್ ಕೊಡೋಕೆ ಸಿದ್ಧವಾಗಿದೆ. ನಗರದಲ್ಲಿ ವಾಯುಮಾಲಿನ್ಯ ನಿಯಂತ್ರಣ ಹೆಸರಿನಲ್ಲಿ ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು 2stroke ಆಟೋಗಳ ಬ್ಯಾನ್ ಗೆ ಮುಂದಾಗಿದೆ.ಏಪ್ರಿಲ್ 1 ರಿಂದ ಅಂತಹ ಆಟೋಗಳು ನಗರದಲ್ಲಿ ಸಂಚಾರಕ್ಕೆ ಅವಕಾಶ ಇಲ್ಲ ಎಂದಿರುವ ಸರ್ಕಾರದ ವಿರುದ್ಧ ಆಟೋ ಚಾಲಕರು ಅಸಮಾಧಾನ ಹೊರಹಾಕಿದ್ದಾರೆ.
ಕೊರೊನಾ ಕರ್ಫ್ಯೂ (Corona Curfew) ಹಾಗೂ ಲಾಕ್ ಡೌನ್ ನಿಂದ ಬಸವಳಿದಿದ್ದ ಆಟೋ ಚಾಲಕರನ್ನು ಈ ನಿಯಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ವಾಯುಮಾಲಿನ್ಯ ನಿಯಂತ್ರಣ ನೆಪದಲ್ಲಿ ಸರ್ಕಾರ ಮಾಡಿದ ಈ ನಿಯಮ ಚಾಲಕರಿಗೆ ಬರೆ ಎಳೆದಂತಾಗಿದೆ.
ಮಾರ್ಚ್ 31ಕ್ಕೆ 2stroke ಆಟೋಗಳಿಗೆ ಅವಕಾಶ ಇಲ್ಲ. ಸರ್ಕಾರದ ನಿರ್ಧಾರದಿಂದ ಆಟೋ ಚಾಲಕರ ಬದುಕು ಅತಂತ್ರ ಸ್ಥಿತಿಗೆ ತಲುಪಿದಂತಾಗಿದೆ. ಹೆಚ್ಚು ಹೊಗೆ ಉಗುಳುವ ಕಾರಣ 2 ಸ್ಟ್ರೋಕ್ ಆಟೋ ನಿಷೇಧಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರದ ಈ ದ್ವಂದ್ವ ನೀತಿ ವಿರುದ್ಧ ಕೋರ್ಟ್ ಮೊರೆ ಹೊರಡಲು ಆಟೋ ಚಾಲಕರು ಸಿದ್ಧತೆ ನಡೆಸಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB