Subscribe to Updates
Get the latest creative news from FooBar about art, design and business.
- ಫೆಲೋಶಿಪ್ ಗಾಗಿ ಅರ್ಜಿ ಆಹ್ವಾನ | ಜನವರಿ 9 ಕೊನೆಯದಿನ
- ಜ.4ರಂದು ಎತ್ತಿನಹೊಳೆಗೆ ಕೇಂದ್ರ ಅಡ್ಡಿ ವಿರುದ್ಧ ಸಭೆ: ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮುರಳಿಧರ ಹಾಲಪ್ಪ
- ರುಡ್ ಸೆಟ್ ಸಂಸ್ಥೆ: ವಿವಿಧ ತರಬೇತಿಗೆ ಅರ್ಜಿ
- ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ ಕಲ್ಪಿಸಿದ ಕಾಂಗ್ರೆಸ್: ಡಾ.ಇಂತಿಯಾಜ್ ಅಹಮದ್ ಅಭಿಮತ
- ಪದವೀಧರರ ಕ್ಷೇತ್ರ: ಕರಡು ಮತದಾರರ ಪಟ್ಟಿ ಸಿದ್ಧ | ಚಿರತೆ ಬಗ್ಗೆ ಸುಳ್ಳು ಮಾಹಿತಿಗೆ ಕಾನೂನು ಕ್ರಮ
- ಬುದ್ಧ, ಬಸವ, ಅಂಬೇಡ್ಕರ್ ಜಗತ್ತಿನ ಬೆಳಕು: ಶ್ರೀ ರುದ್ರಮುನಿ ಸ್ವಾಮೀಜಿ
- ತುಮಕೂರು | ಅಂಬೇಡ್ಕರ್ ಯುವ ಸೇನೆಯಿಂದ 208ನೇ ಭೀಮ-ಕೋರೆಗಾಂವ್ ವಿಜಯ ದಿನಾಚರಣೆ
- ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಿ: ಎಸ್.ಎನ್.ನಾಗರಾಜು ಒತ್ತಾಯ
Author: admin
ತುಮಕೂರು: ನಮ್ಮ ದೇಶದಲ್ಲಿ ಕ್ರೀಡೆಯನ್ನು ಕೇವಲ ಮನೋರಂಜನೆಯ ದೃಷ್ಟಿಯಲ್ಲಿ ಮಾತ್ರ ನೋಡುತ್ತಿದ್ದಾರೆ. ಅದು ಸಾಧನೆಯ ಮೆಟ್ಟಿಲಾಗಬೇಕು ಎಂದು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಇಂಗ್ಲಿಷ್ ಸಹಪ್ರಾಧ್ಯಾಪಕರಾದ ಡಾ.ರವಿ ಸಿ.ಎಂ. ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗವು ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಟೇಕ್ವಾಂಡೋ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದಲ್ಲಿ ಆಟ ಆಡುವವರಿಗಿಂತಲೂ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಕಾರಣ ಕ್ರೀಡೆಯನ್ನು ಕೇವಲ ಮನೋರಂಜನೆಯ ದೃಷ್ಟಿಯಿಂದ ಮಾತ್ರ ನೋಡಲಾಗುತ್ತಿದೆ. ಈ ದೃಷ್ಟಿಕೋನವನ್ನು ನಾವು ಬದಲಾಯಿಸಿಕೊಳ್ಳಬೇಕು, ಹೆಚ್ಚು ಜನರು ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡಾ ಜಗತ್ತು ಬದಲಾಗಿದೆ ಆ ಬದಲಾವಣೆಗೆ ನಾವು ಹೊಂದಿಕೊಂಡು ಹೋಗಬೇಕು ಎಂದರು. ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಭಾಗದ ನಿರ್ದೇಶಕರಾದ ಡಾ. ಸುದೀಪ್ ಕುಮಾರ್ ಆರ್. ಅವರು ಯುವಕರು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರಬೇಕು. ಕಲಿತ ಕ್ರೀಡೆ ಎಂದಿಗೂ ವ್ಯರ್ಥವಾಗುವುದಿಲ್ಲ. ಅದು ದೈಹಿಕವಾಗಿ ಮನುಷ್ಯನನ್ನು ಸದೃಢನನ್ನಾಗಿ ಮಾಡುತ್ತದೆ ಎಂದರು.…
ತುಮಕೂರು: ಜಾತಿ ಗಣತಿ ವರದಿ ವಿಚಾರದಲ್ಲಿಇದರಲ್ಲಿ ಯಾರಿಗೆ ತೊಂದರೆ ಅನ್ನೋದಕ್ಕಿಂತ ಗೊಂದಲ ಸೃಷ್ಟಿಯಾಗಿದೆ. ಇನ್ನಷ್ಟು ಗೊಂದಲ ಮಾಡಿಕೊಳ್ಳಬೇಡಿ, ವರದಿ ತಿರಸ್ಕಾರ ಮಾಡಿ ಎಂದು ಕೇಂದ್ರ ಸಚಿವ ಸೋಮಣ್ಣ ತಿಳಿಸಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ಮಾತನಾಡಿದ ಅವರು ಮತ್ತೆ ಪ್ರತಿಯೊಂದನ್ನ ಪಾರದರ್ಶಕವಾಗಿ ರೀ ಸರ್ವೆ ಮಾಡಿ. ನಿಮ್ಮ ಕಾಲದಲ್ಲೇ ಅನೌನ್ಸ್ ಮಾಡಿ ನೀವೇ ಕ್ರೆಡಿಟ್ ತಗೊಳ್ಳಿ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಮಾಡಬೇಡಿ ಎಂದರು. ಇಷ್ಟೆಲ್ಲಾ ಗೊಂದಲ ಇಟ್ಟುಕೊಂಡು ಇದನ್ನು ಜಾರಿ ಮಾಡಿದರೆ ಜೇನುಗೂಡಿಗೆ ಕೈ ಹಾಕಿದ ಹಾಗೆ. ಇದರಿಂದ ಏನೂ ಪ್ರಪಂಚ ಮುಳುಗಿ ಹೋಗೋದಿಲ್ಲ, ಸಿದ್ದರಾಮಯ್ಯ ಅರಿವು ಉಳ್ಳವರಾಗಿ ಹೀಗೆ ಮಾಡಬೇಡಿ ಎಂದರು. ಒಂದೂವರೆ ವರ್ಷಗಳ ಕಾಲ ಸಮಯ ಕೊಟ್ಟು ಮತ್ತೊಮ್ಮೆ ಸರ್ವೆ ಮಾಡಿ. ಆವಾಗ ದೇವರಾಜ ಅರಸು ತರ ನಿಮ್ಮನ್ನು ನೆನಪು ಮಾಡಿಕೊಳ್ತಿವಿ ಎಂದರು. ಅದನ್ನು ಬಿಟ್ಟು ಇರೋ ವರದಿ ಜಾರಿ ಮಾಡಿ ಖಳನಾಯಕರಾಗಬೇಡಿ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ಬೆಂಗಳೂರು: ನಗರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮ್ಯೂಸಿಯಂ ಹಾಗೂ ದೇಶದಲ್ಲೇ ಎತ್ತರವಾದ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದು ಸ್ವಾಗತರ್ಹ ಎಂದು ಕಾಂಚಘಟ್ಟ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು. ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂವಿಧಾನ ಪೀಠ ಸ್ಥಾಪನೆ ಮಾಡುವುದು ಹಾಗೂ ಆಂಧ್ರದ ವಿಜಯವಾಡದಲ್ಲಿ ದೇಶ ಹಾಗೂ ವಿಶ್ವದ ಅತಿ ದೊಡ್ಡ ಅಂಬೇಡ್ಕರ್ ಪ್ರತಿಮೆಯಾಗಿದ್ದು ಆ ಪ್ರತಿಮೆ ಒಟ್ಟು ಎತ್ತರ 206 ಅಡಿಯಾಗಿದ್ದು, ಈಗ ಕರ್ನಾಟಕದಲ್ಲಿ ಇದಕ್ಕಿಂತ ಹೆಚ್ಚು ಎತ್ತರದ ಪ್ರತಿಮೆ ನಿರ್ಮಾಣ ಸ್ವಾಗತರ್ಹ ಎಂದರು. ಕರ್ನಾಟಕ ಭೀಮಸೇನೆ ತಾಲೂಕು ಅಧ್ಯಕ್ಷ ಮಂಜುನಾಥ್ ಆಂಜಿನಪ್ಪ ಮಾತನಾಡಿ , ಆಂಧ್ರದ ಮಾದರಿಯಲ್ಲೇ ಬೆಂಗಳೂರಲ್ಲಿ ಅಂಬೇಡ್ಕರ್ ಮ್ಯೂಸಿಯಂ ನಿರ್ಮಾಣಕ್ಕೆ ಪಣ ತೊಟ್ಟಿರುವ ಮುಖ್ಯಮಂತ್ರಿ ಗಳಿಗೆ ಅಭಿನಂದನೆಗಳು. ಈ ಕಾರ್ಯದಲ್ಲಿ ರಾಜ್ಯಾದ್ಯಂತ ಕರ್ನಾಟಕ ಭೀಮಸೇನಾನಿಗಳು ಪ್ರತಿ ಜಿಲ್ಲಾವಾರು ಜಿಲ್ಲಾಧಿಕಾರಿಗಳಿಗೆ ರಾಜ್ಯದಲ್ಲಿ ಅತ್ಯಂತ ಎತ್ತರದ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಈಗಾಗಲೇ ಹೋರಾಟ ನಡೆಸಿದ ಫಲವಾಗಿ ಮುಖ್ಯಮಂತ್ರಿಗಳು…
ಬೆಂಗಳೂರು: ಮೆಟ್ರೋ ಕಾಮಗಾರಿಗೆ ಕೊಂಡೊಯ್ಯುತ್ತಿದ್ದ ವಯಾಡೆಕ್ಟ್ ಉರುಳಿ ಬಿದ್ದು ಆಟೋ ಚಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೋಗಿಲು ಕ್ರಾಸ್ ಬಳಿ ನಡೆದಿದೆ. ಹೆಗಡೆನಗರದ ನಿವಾಸಿಯಾಗಿರುವ ಖಾಸಿಂ ಸಾಬ್ ಮೃತ ಆಟೋ ಚಾಲಕರಾಗಿದ್ದಾರೆ. ಪ್ಯಾಸೆಂಜರ್ ಪಿಕ್ ಮಾಡಿಕೊಂಡು ನಾಗವಾರದ ಕಡೆಗೆ ಹೋಗುತ್ತಿದ್ದ ವೇಳೆ ದುರಂತ ಸಂಭವಿಸಿದೆ. ತಡರಾತ್ರಿ 12:05 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಆಟೋದಲ್ಲಿದ್ದ ಪ್ಯಾಸೆಂಜರ್ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಏರ್ಪೋಟ್ ಮಾರ್ಗದ ಮೆಟ್ರೋ ಕಾಮಗಾರಿಗಾಗಿ 18 ಚಕ್ರದ ದೊಡ್ಡ ಲಾರಿಯಲ್ಲಿ ವಯಾಡೆಕ್ಟ್(ಸಿಮೆಂಟ್ ಗೋಡೆ) ತೆಗೆದುಕೊಂಡು ಹೋಗಲಾಗುತ್ತಿತ್ತು. ಕೋಗಿಲು ಕ್ರಾಸ್ ನಲ್ಲಿ ತಿರುವು ತೆಗೆದುಕೊಳ್ಳುವ ವೇಳೆ ಲಾರಿಯೇ ಎರಡು ತುಂಡಾಗಿದೆ. ಪರಿಣಾಮ ವಯಾಡೆಕ್ಟ್ ನೆಲಕ್ಕುರುಳಿದೆ. ಇದೇ ಸಂದರ್ಭದಲ್ಲಿ ಲಾರಿ ಪಕ್ಕದಲ್ಲೇ ಇದ್ದ ಆಟೋ ಮೇಲೆ ವಯಾಡೆಕ್ಟ್ ಬಿದ್ದಿದೆ. ಲಾರಿ ತುಂಡಾಗಿ ವಯಾಡೆಕ್ಟ್ ಬೀಳುತ್ತಿದ್ದಂತೆ ಆಟೋದಲ್ಲಿದ್ದ ಪ್ಯಾಸೆಂಜರ್ ತಕ್ಷಣಕ್ಕೆ ಇಳಿದು ಓಡಿಹೋಗಿದ್ದಾರೆ, ಆದ್ರೆ, ಚಾಲಕ ಇಳಿಯುವಷ್ಟರಲ್ಲಿ ಆಟೋ ಮೇಲೆ ಬಿದ್ದು, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ…
ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಬಿಗ್ ಬಾಸ್ ಸ್ಪರ್ಧಿ ರಜತ್ ಕಿಶನ್ ಗೆ ಮತ್ತೆ ಸಂಕಷ್ಟ ಎದುರಾಗಿದ್ದು, ರಜತ್ ನನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಬಸವೇಶ್ವರನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಜಾಮೀನು ನೀಡಿದ್ದ ನ್ಯಾಯಾಲಯ ಪ್ರತಿ ವಿಚಾರಣೆಗೆ ಹಾಜರಾಗುವಂತೆ ಷರತ್ತು ವಿಧಿಸಿತ್ತು. ಆದ್ರೆ ರಜತ್ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿ ರಜತ್ ವಿರುದ್ಧ ವಾರೆಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ರಜತ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ರಜತ್ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ಇಂದು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
ರಾಮನಗರ: ಭೀಕರ ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, 10 ಮಂದಿಗೆ ಗಂಭೀರ ಗಾಯಗೊಂಡ ಘಟನೆ ಚನ್ನಪಟ್ಟಣ ತಾಲೂಕಿನ ಲಂಬಾಣಿ ತಾಂಡ್ಯದ ಬಳಿಯ ಬೆಂಗಳೂರು–ಮೈಸೂರು ಎಕ್ಸ್ ಪ್ರೆಸ್ ಹೈವೆಯಲ್ಲಿ ನಡೆದಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ವೇಗವಾಗಿ ಬರುತ್ತಿದ್ದ ಹೋಂಡಾ ಸಿವಿಕ್ ಕಾರಿನ ಚಾಲಕ, ಲಂಬಾಣಿ ತಾಂಡ್ಯದ ಬಳಿ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕದ ಮೇಲೆ ಕಾರು ಹತ್ತಿಸಿದ್ದಾನೆ. ಕಾರು ಪಲ್ಟಿಯಾಗಿ ಪಕ್ಕದ ರಸ್ತೆಗೆ ಜಿಗಿದು, ಬೆಂಗಳೂರು ಕಡೆಗೆ ಹೋಗುತ್ತಿದ್ದ ಮಾರುತಿ ಡಿಸೈರ್ ಮತ್ತು ವ್ಯಾಗನರ್ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವ್ಯಾಗನರ್ ಕಾರಿನಲ್ಲಿದ್ದ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೂರೂ ಕಾರುಗಳಲ್ಲಿದ್ದ 10 ಮಂದಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಅನುಪ್ ಭಂಡಾರಿ ಅವರ ಬಿಲ್ಲ ರಂಗ ಭಾಷ ಚಿತ್ರ ಇಂದಿನಿಂದ ಶೂಟಿಂಗ್ ಆರಂಭಗೊಂಡಿದೆ. ಪೋಸ್ಟರ್ ರಿಲೀಸ್ ಮಾಡುವ ಮೂಲಕ ಈ ಬಗ್ಗೆ ಕಿಚ್ಚ ಸುದೀಪ್ ಮಾಹಿತಿ ನೀಡಿದ್ದಾರೆ. ವಿಕ್ರಾಂತ್ ರೋಣದ ಬಳಿಕ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಅನುಪ್ ಭಂಡಾರಿ ಬಿಲ್ಲ ರಂಗ ಭಾಷ ಚಿತ್ರದ ಮೂಲಕ ಕೈಜೋಡಿಸಿದ್ದಾರೆ. ಹಿಮ ಬೀಳುವ ಪ್ರದೇಶದಲ್ಲಿ ಸುದೀಪ್ ನಿಂತಿದ್ದಾರೆ. ಅವರ ಮೈಮೇಲೆ ನೀರಿನ ಹನಿ ಇದೆ. ಅವರು ಕನ್ನಡಕದ ರೀತಿಯ ವಸ್ತುವನ್ನು ಹಣೆಮೇಲೆ ಇಟ್ಟುಕೊಂಡಿದ್ದಾರೆ. ಕನ್ನಡಕದ ಮೇಲಿನ ಪ್ರತಿಬಿಂಬದಲ್ಲಿ ಕಟ್ಟವೊಂದಕ್ಕೆ ಬೆಂಕಿ ಬಿದ್ದಿರುವಂತೆ ಕಾಣಿತ್ತಿದೆ. ಸುದೀಪ್ ಹಿಂಭಾಗದಲ್ಲಿ ಕಟ್ಟವೊಂದು ಇದೆ. ಈ ಪೋಸ್ಟರ್ ಈಗ ಸಿನಿಪ್ರಿಯರ ಗಮನ ಸೆಳೆದಿದೆ. ‘ಇದು ನನ್ನ ವೃತ್ತಿ ಜೀವನದ ಅತಿ ದೊಡ್ಡ ಸಿನಿಮಾ. ಬಜೆಟ್ ಹಾಗೂ ಸಿನಿಮಾ ಮೇಕಿಂಗ್ ಎರಡೂ ವಿಚಾರದಲ್ಲೂ ಇದು ದೊಡ್ಡದೇ’ ಎಂದು ಸುದೀಪ್ ಹೇಳಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…
ಬೀದರ್: ಜಿಲ್ಲೆಯ ಕಮಲನಗರ ತಾಲ್ಲೂಕಿನ ಹಂದಿಖೇರಾ ಗ್ರಾಮದಲ್ಲಿ ಏಪ್ರಿಲ್ 13ರಿಂದ 20ರವರೆಗೆ ಹರಿನಾಮ ಸಪ್ತಾಹ ಹಾಗೂ ಜಗದ್ಗುರು ತುಕೋಬರಾಯರ 365ನೇ ಮಹೋತ್ಸವ ನಡೆಯುತ್ತಿದೆ. ಅಖಂಡ ಹರಿನಾಮ ಸಪ್ತಾಹ ಭಾಗವತ ಕಥಾ ಹಾಗೂ ವಿ.ಗುರುವರ್ಯ ದಾದಾಸಾಹೇಬ ಮಹಾರಾಜ ಪಂಢರಪುರಕರ್ ವಿ.ಗುರುವರ್ಯ ಬಾಲಕೃಷ್ಣ ಮಹಾರಾಜ್ ಖಡಕು ಉಂಬರೇಕರರವರ ಆಶೀರ್ವಾದದೊಂದಿಗೆ ಹಾಗೂ ಗುರುವರ್ಯ ಸಂಜಯ ಮಹಾರಾಜ್ ಖಡಕು ಉಂಬರೇಕರರವರ ಅಧ್ಯಕ್ಷತೆಯಲ್ಲಿ ಹಾಗೂ ಕಾಶಿನಾಥ ಮಹಾರಾಜ ಪಾಂಚಾಲ ಹಂದಿಕೇರಾ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿದಿನ ಸಂಜೆ 9 ರಿಂದ 11ರವರೆಗೆ ಕೀರ್ತನೆ ನಡೆಸಲಾಗುತ್ತದೆ. ವೈ. ಸಮಾರಂಭ ಗುರುವರ್ಯ ದಾದಾಸಾಹೇಬ್ ಮಹಾರಾಜ ಪಂಢರಪುರಕರ್ ವೈ.ಗುರುವರ್ಯ ಬಾಲಕೃಷ್ಣ ನಡೆಯಲಿದೆ. ಪಂಚಕ್ರೋಶಿಯಲ್ಲಿ ಭಜನಿ ಮಂಡಲದ ಈ ಕಾರ್ಯಕ್ರಮದ ಲಾಭವನ್ನು ಪಡೆದು ಕೊಳ್ಳುವಂತೆ ಹಂದಿಕೇರ ಗ್ರಾಮಸ್ಥರಿಗೆ ಅಮೂಲ ಬಿರಾದಾರ ಮನವಿ ಮಾಡಿದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…
ಔರಾದ: ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಳೆದ ಎರಡು ವರ್ಷದಿಂದ ಅಂಕಪಟ್ಟಿಗಾಗಿ ಪರದಾಡಿದರು ಸ್ಪಂದಿಸದ ಶಾಸಕ ಪ್ರಭು ಚವ್ಹಾಣ, ಈಗ ನಾನು ಅಂಕಪಟ್ಟಿ ತಂದಿರುವದಾಗಿ ಹೇಳಿದ್ದಾರೆ ಎಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಡಿ.ಕೆ.ಚಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಅಂಕಪಟ್ಟಿ ಪಡೆದ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಶಾಸಕ ಪ್ರಭು ಚವ್ಹಾಣ ನಡೆಯನ್ನು ಪ್ರಶ್ನಿಸಿದರಲ್ಲದೇ, ಕಳೆದ ಎರಡು ವರ್ಷದಿಂದ ಶಾಸಕ ಪ್ರಭು ಚವ್ಹಾಣ ಅವರಿಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಬಂದಿಲ್ಲ. ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಹಾಗೂ ಎಬಿವಿಪಿ ಕಾರ್ಯಕರ್ತರು ಸೇರಿದಂತೆ ವಿದ್ಯಾರ್ಥಿಗಳು ರಸ್ತೆಗಿಳಿದು ಹೋರಾಟ ಮಾಡಿದ್ದಾರೆ. ಆದರೆ ಕ್ಯಾರೆ ಎನ್ನದೆ ಪ್ರಭು ಚವ್ಹಾಣ ಸಂಘಟನೆಗಳ ಹೋರಾಟದಿಂದ ಅಂಕಪಟ್ಟಿ ಬಂದಿವೆ ಎನ್ನುವದಿಲ್ಲ. ಬದಲಿಗಾಗಿ ನನ್ನಿಂದ ಅಂಕಪಟ್ಟಿ ಬಂದಿದೆ ಎಂದಿದ್ದಾರೆ ಎಂದು ದೂರಿದರು. ಕಾಲೇಜಿನ ಪ್ರಾಂಶುಪಾಲ ಅಂಬಿಕಾದೇವಿ ಕೋತಮಿರ್, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ. ಪ್ರಾಂಶುಪಾಲರ ವಿರುದ್ಧ ಸದ್ಯದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಉನ್ನತ ಶಿಕ್ಷಣ…
ತುಮಕೂರು: ಜಾತಿ ಗಣತಿ ವರದಿ ವಿಚಾರದಲ್ಲಿ ಎಲ್ಲ ಸಚಿವರಿಗೂ ವರದಿ ಸಾರಾಂಶದ ಒಂದೊಂದು ಪ್ರತಿ ಕೊಟ್ಟಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರ ಜೊತೆಗೆ ಮಾತನಾಡಿದ ಅವರು, ಈ ವರದಿಯಲ್ಲಿ ಸುಮಾರು 8–10 ಸಂಪುಟ ಇದೆ. ಓದಲು ಮೂರುತಿಂಗಳು ಬೇಕು. ನಮಗೆ ಕೊಟ್ಟಿರೋದು ಕೇವಲ ಸಾರಾಂಶದ ಪ್ರತಿ ಮಾತ್ರ. ಜಾತಿ ಗಣತಿ ವರದಿ ಸಂಬಂಧಿಸಿದಂತೆ ಒಕ್ಕಲಿಗ ಸಮುದಾಯದ ಸಭೆಗೆ ನನ್ನ ಅಭ್ಯಂತರ ಇಲ್ಲ ಎಂದರು. ಸಭೆ ಮಾಡಿ ಚರ್ಚೆ ಮಾಡಲಿ, ಅದರಲ್ಲಿ ಯಾವ ಅಂಶ ತಮಗೆ ಇಷ್ಟ ಆಗಿಲ್ಲ ಎಂದು ತಿಳಿಸಲಿ. ಅದನ್ನು ಸರಿಪಡಿಸುವ ಕೆಲಸ ಸರ್ಕಾರ ಮಾಡಲಿದೆ ಎಂದರು. ಬಿಜೆಪಿ ಅವರು ಮೀಸಲಾತಿ ವಿರೋಧಿಗಳು, ಅದಕ್ಕೆ ಜಾತಿ ಗಣತಿ ವಿರೋಧಿಸುತ್ತಾರೆ. 10 ವರ್ಷಗಳ ಹಳೆಯ ವರದಿ ಮರು ಸರ್ವೆ ಆಗಲಿ ಅನ್ನೋದನ್ನು ಒಪ್ಪಬಹುದು ಎಂದರು. ತೆಲಂಗಾಣದಲ್ಲಿ ಒಳ ಮೀಸಲಾತಿ ಜಾರಿಯಾಗಿರುವಂತೆ ಕರ್ನಾಟಕದಲ್ಲಿ ಜಾರಿಯಾಗಲಿದೆ. ಒಳ ಮೀಸಲಾತಿ ಜಾರಿಗೆ ಸರ್ಕಾರ ಬದ್ದವಾಗಿದೆ ಎಂದರು. ಸರ್ಕಾರದಿಂದ ಯಾವ ನೇಮಕಾತಿ…