Subscribe to Updates
Get the latest creative news from FooBar about art, design and business.
- ಸರಗೂರು: ಅನಂತನಾಥ ತೀರ್ಥಂಕರರ ಜಿನ ಚೈತ್ಯಾಲಯದ 131ನೇ ವಾರ್ಷಿಕ ಪೂಜಾ ಮಹೋತ್ಸವ
- ‘ಚಂದ್ರಗಿರಿ’ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ ಮೊದಲ ಹಂತದ ಶೂಟಿಂಗ್ ಕಂಪ್ಲೀಟ್!
- ಶ್ರವಣ ಸಮಸ್ಯೆ ನಿವಾರಣೆಗೆ ಮಾನವೀಯ ಸ್ಪಂದನೆ: ತುಮಕೂರಿನಲ್ಲಿ ಉಚಿತ ತಪಾಸಣೆ, ಶ್ರವಣ ಯಂತ್ರಕ್ಕೆ 40% ಸಹಾಯಧನ
- ತುಮಕೂರಿನಲ್ಲಿ ಉಚಿತ ಶ್ರವಣ ತಪಾಸಣೆ, ಶ್ರವಣ ಯಂತ್ರಗಳಿಗೆ ಶೇ.40ರಷ್ಟು ಸಹಾಯಧನ | ಜೂ.27ರಂದು ಕಾರ್ಯಕ್ರಮ
- ಮಕ್ಕಳಿಗೆ ಅಸಾಧಾರಣ ಜಿಲ್ಲಾ ಮಟ್ಟದ ಪ್ರಶಸ್ತಿ: 10 ಸಾವಿರ ನಗದು ಬಹುಮಾನಕ್ಕೆ ಅರ್ಜಿ ಸಲ್ಲಿಸಿ
- 20 ಜೋಡಿಗಳ ಸಾಮೂಹಿಕ ವಿವಾಹ: 10 ಸಾವಿರ ಗ್ರಂಥ ದಾಸೋಹಕ್ಕೆ ಚಾಲನೆ | ಬದುಕಿನ ವಿಕಾಸಕ್ಕೆ ಧರ್ಮವೇ ಅಡಿಪಾಯ: ಶ್ರೀರಂಭಾಪುರಿ ಜಗದ್ಗುರು
- ಜೂನ್ 24 ರಂದು ಟಾಟಾ ಪವರ್ ಖಾಸಗೀಕರಣ ವಿರೋಧಿಸಿ ಬೃಹತ್ ಪ್ರತಿಭಟನೆ
- ‘ಪ್ರತಿಯೊಂದು ಮಠವೂ ಪುಸ್ತಕ ದಾಸೋಹ ನಡೆಸಲಿ’: ಸಿದ್ದರಬೆಟ್ಟದ ರಂಭಾಪುರಿ ಶಾಖಾ ಮಠದ ವಾರ್ಷಿಕೋತ್ಸವದಲ್ಲಿ ಹುಲಿಕಲ್ ನಟರಾಜ್
Author: admin
ಸರಗೂರು: ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಈ ದಿನ ಜನಿಸಿದರು ಎಂಬುದಕ್ಕಾಗಿ ಈ ದಿನಕ್ಕೆ ವಾಲ್ಮೀಕಿ ಜಯಂತಿ ಎನ್ನುವ ಹೆಸರು ಬಂದಿದೆ ಎಂದು ಪಪಂ ಸದಸ್ಯ ಶ್ರೀನಿವಾಸ ತಿಳಿಸಿದರು. ಪಟ್ಟಣದ 9 ನೇ ವಾರ್ಡಿನ ಚಿಕ್ಕ ದೇವಮ್ಮ ಸರ್ಕಲ್ ಬಳಿ ನಾಯಕ ಸಮಾಜದ ಹಾಗೂ ಯುವಕರು ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ವಾಲ್ಮೀಕಿ ಫೋಟೋಗೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿದರು. ಮಹರ್ಷಿ ವಾಲ್ಮೀಕಿಯವರ ಜನ್ಮದಿನವನ್ನು ಶರದ್ ಪೂರ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಆದಾಗ್ಯೂ, ಶರದ್ ಪೂರ್ಣಿಮೆಯ ದಿನದಂದು ಲಕ್ಷ್ಮಿ ಮತ್ತು ಚಂದ್ರನನ್ನು ಪೂಜಿಸಲಾಗುತ್ತದೆ. ವಾಲ್ಮೀಕಿ ಜಯಂತಿ ಪ್ರಖ್ಯಾತ ಋಷಿ ಮತ್ತು ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಅವರ ಜನ್ಮದಿನಕ್ಕೆ ಮೀಸಲಾದ ದಿನವಾಗಿದೆ. ಅವರು ಭಗವಾನ್ ಶ್ರೀರಾಮನ ಪರಮ ಭಕ್ತರಾಗಿದ್ದರು ಎನ್ನುವ ನಂಬಿಕೆಯಿದೆ ಎಂದರು. ಈ ದಿನದ ಮೂಲಕ, ಜನರು ಅವರನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಅವರು ನೀಡಿದ ಜ್ಞಾನ ಮತ್ತು ಶಿಕ್ಷಣಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ರಾಮಾಯಣದ ಮೂಲಕ ಮರ್ಯಾದಾ ಪುರುಷೋತ್ತಮ ಶ್ರೀರಾಮನ…
ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಮಾರು 36 ಆರ್ಥಿಕ ಸಂಕಷ್ಟದಲ್ಲಿದ್ದ ವಿದ್ಯಾರ್ಥಿಗಳ ಕಾಲೇಜು ಶುಲ್ಕವನ್ನು ಗ್ರಾಮಸ್ಥರು ಪಾವತಿಸಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ಕಾಲೇಜು ಶುಲ್ಕ ಪಾವತಿಸಲು ಸಾಧ್ಯವಾಗದೆ ಕಾಲೇಜು ಬಿಡುವ ಹಂತದಲ್ಲಿ ಇದ್ದರು. ಇದನ್ನು ಅರಿತ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಮಾನ ಮನಸ್ಕರು ಸೇರಿಕೊಂಡು ಸುಮಾರು 1.20 ಲಕ್ಷ ಶುಲ್ಕವನ್ನು ಕಾಲೇಜಿಗೆ ಪಾವತಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅರ್ಥಿಕ ಸಂಕಷ್ಟದಲ್ಲಿದ್ದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾಲೇಜು ಶುಲ್ಕವನ್ನು ಪಾವತಿಸಿದ್ದೇವೆ. ವಿದ್ಯಾರ್ಥಿಗಳು ಪೋಷಕರ ಸ್ಥಿತಿಯನ್ನು ಅರಿತು ಓದಿನತ್ತ ಗಮನಹರಿಸಬೇಕು. ವಿದ್ಯಾರ್ಥಿಗಳು ಕಾಲಹರಣ ಮಾಡದೆ ಪ್ರಾಧ್ಯಾಪಕರ ಸಲಹೆ ಸೂಚನೆಗಳನ್ನು ಪಾಲಿಸುತ್ತಾ ಓದಿನತ್ತ ಗಮನಹರಿಸಬೇಕು. ಇಂದಿನ ಶ್ರಮವು ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡುವುದು ಎನ್ನುವುದನ್ನು ವಿದ್ಯಾರ್ಥಿಗಳು ಅರಿತು ನಡೆಯಬೇಕಿದೆ ಎಂದು ಗ್ರಾಮಸ್ಥರು ತಿಳಿಸಿದರು. ಗ್ರಾಮಸ್ಥರು ಶುಲ್ಕ ಪಾವತಿಸುವ ಮೂಲಕ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿರುವುದು ಉತ್ತಮ ಬೆಳವಣಿಗೆ, ಸ್ಥಳೀಯರು ಸಹಕಾರ…
ಬೀದರ್: ನವದೆಹಲಿಯ ಸುಪ್ರೀಂಕೋರ್ಟ್ ನಲ್ಲಿ ಪ್ರಕರಣವೊಂದರ ವಿಚಾರಣೆ ವೇಳೆ ವಕೀಲರೊಬ್ಬರು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರತ್ತ ಶೂ ಎಸೆದ ಘಟನೆಯನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಿಸಾನ್ ವಿಭಾಗದ ಜಂಟಿ ಸಂಯೋಜಕ ಜಾನ್ಸನ್ ಘೋಡೆ ತೀವ್ರವಾಗಿ ಖಂಡಿಸಿದ್ದಾರೆ. ವಕೀಲ ಕಿಶೋರ್ ಶೂ ಎಸೆದು ದಲಿತ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿ ಹಾಗೂ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಅವಮಾನಿಸಿದ್ದಾರೆ. ಸಂವಿಧಾನ ಜಾರಿಗೆ ಬಂದ 75 ವರ್ಷಗಳ ನಂತರವೂ ಮನುವಾದಿಗಳ ಮನದಲ್ಲಿ ಪರಿಶಿಷ್ಟರ ಬಗ್ಗೆ ಅಸಹನೆ ಇರುವುದಕ್ಕೆ ಈ ಘಟನೆಯೇ ನಿದರ್ಶನವಾಗಿದೆ ಎಂದು ಹೇಳಿದ್ದಾರೆ. ಗವಾಯಿ ಅವರು ತಮ್ಮ ಅರ್ಹತೆ ಹಾಗೂ ಸಾಧನೆ ಮೂಲಕ ದೇಶದ ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಹುದ್ದೆಗೆ ಏರಿದ್ದಾರೆ. ಅವರನ್ನು ಅವಮಾನಿಸಿರುವ ವಕೀಲರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…
ತುಮಕೂರು(ನಮ್ಮ ತುಮಕೂರು): ರಾಜ್ಯ ಸರ್ಕಾರ ಬಡ ಜನರ ವಿರೋಧಿ ನೀತಿ ಕೈಬಿಡಿ ಎಂದು ಒತ್ತಾಯಿಸಿ, ಅವೈಜ್ಞಾನಿಕ ಬಿಪಿಎಲ್ ಪಡಿತರ ಕಾರ್ಡ್ ರದ್ಧತಿಯನ್ನು ಖಂಡಿಸಿ ಸ್ಲಂ ಜನಾಂದೋಲನ ಕರ್ನಾಟಕ, ತುಮಕೂರು ಜಿಲ್ಲಾ ಹೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ ಪ್ರತಿಭಟನೆ ನಡೆಸಿತು. ಸರ್ಕಾರ ಬಡವರ ಬಿಪಿಎಲ್ ಕಾರ್ಡ್‌ಗಳನ್ನು ವೈಜ್ಞಾನಿಕವಾಗಿ ರದ್ದುಗೊಳಿಸಿರುವುದು ಸಂಪೂರ್ಣ ಜನವಿರೋಧಿ ಕ್ರಮವಾಗಿದ್ದು, ಕೂಲಿಕಾರ್ಮಿಕರು ಹಾಗೂ ಬಡ ಕುಟುಂಬಗಳು ಇದರ ಬಲಿಯಾಗಿದ್ದಾರೆ ಎಂದು ಸಮಿತಿಯ ಮುಖಂಡರು ಆರೋಪಿಸಿದರು. ಇದೇ ವೇಳೆ ಜಿಲ್ಲಾಧಿಕಾರಿಗಳ ಪರವಾಗಿ ಆಹಾರ ಇಲಾಖೆಯ ಅಧಿಕಾರಿ ನಾಗರಾಜ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಜ್ಯೋತಿ, ಶಕ್ತಿ, ಯೂನಿಟ್ ಹಾಗೂ ಅನ್ನಭಾಗ್ಯ ಯೋಜನೆಗಳು ರಾಜ್ಯಾದ್ಯಂತ ಜಾರಿಗೆ ಬಂದಿದ್ದು, ಬಡವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕ್ರಮಗಳು ಮುಂದುವರಿದಿವೆ ಎಂದು ಹೇಳಿದರು. ಆದರೆ ಇದನ್ನು ಒಪ್ಪದ ಪ್ರತಿಭಟನಾಕಾರರು ಸರ್ಕಾರ ನುಡಿದಂತೆ ಕಾರ್ಯಗತಗೊಳಿಸಿಲ್ಲ, ಅನೇಕ ಬಡ ಕುಟುಂಬಗಳಿಗೆ ಎಪಿಎಲ್ ಕಾರ್ಡ್ ನೀಡಿರುವುದರಿಂದ ನಿಜವಾದ…
ತುಮಕೂರು: ತಾಲ್ಲೂಕಿನ ನೆಲಹಾಳ್ ಕೆರೆಯಲ್ಲಿ ನೂರಾರು ಮೀನುಗಳು ಸಾವನ್ನಪ್ಪಿವೆ. ಕೆರೆಗೆ ರಾಸಾಯನಿಕ ತ್ಯಾಜ್ಯ ಸುರಿದ ಆರೋಪದ ಮೇರೆಗೆ ಕೋರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮಹ್ಮದ್ ಇಬ್ರಾಹಿಂ, ಅಲ್ತಾಫ್, ಮಹ್ಮದ್ ಫರ್ವೀಜ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಮೂವರು ಶನಿವಾರ ಮಧ್ಯರಾತ್ರಿ ತಾಲ್ಲೂಕಿನ ಗಿರಿಯನಹಳ್ಳಿ ಸಮೀಪ ಟ್ಯಾಂಕರ್ ನಿಂದ ತ್ಯಾಜ್ಯ ಸುರಿಯುತ್ತಿದ್ದರು. ನೆಲಹಾಳ್ ನ ಎನ್.ನಟರಾಜ್, ರಮೇಶ್ ಇದನ್ನು ಗಮನಿಸಿ, ಟ್ಯಾಂಕರ್ ಚಾಲಕ ಮತ್ತು ಕ್ಲೀನರ್ ನ ವಿಚಾರಿಸಿದಾಗ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರ ತ್ಯಾಜ್ಯ ಎಂಬುವುದು ಗೊತ್ತಾಗಿದೆ. ಟ್ಯಾಂಕರ್ ಜತೆಗೆ ಮೂವರನ್ನು ಕೋರ ಠಾಣೆಗೆ ಒಪ್ಪಿಸಿದ್ದಾರೆ. ‘ಶುಕ್ರವಾರ ರಾತ್ರಿ ಟ್ಯಾಂಕರ್ ವಾಹನದಲ್ಲಿ ರಾಸಾಯನಿಕ ತ್ಯಾಜ್ಯ ತಂದು ನೆಲಹಾಳ್ ಕೆರೆಗೆ ಸುರಿದಿದ್ದಾರೆ. ಇದರಿಂದ ಮೀನುಗಳು ಸತ್ತಿವೆ. ಇದರಂತೆ ಅನೇಕ ಕೆರೆಗಳಿಗೆ ಇವರು ತ್ಯಾಜ್ಯ ಸುರಿದ ಸಾಧ್ಯತೆ ಇದೆ’ ಎಂದು ನಟರಾಜ್ ನೀಡಿದ ದೂರಿನ ಮೇರೆಗೆ ಕೋರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆರೆಗೆ ತ್ಯಾಜ್ಯ ಸುರಿಯುವುದರಿಂದ ಪ್ರಾಣಿ, ಪಕ್ಷಿಗಳ ಜೀವಕ್ಕೆ ಹಾನಿಯಾಗಲಿದೆ. ವಾತಾವರಣ ಮಲಿನವಾಗುತ್ತದೆ.…
ತುಮಕೂರು: ಮನೆಯಲ್ಲಿ ಇದ್ದುಕೊಂಡೇ ಪ್ಲಿಪ್ ಕಾರ್ಟ್‌ನ ಉತ್ಪನ್ನಗಳಿಗೆ ರಿವ್ಯೂ ನೀಡುತ್ತಾ, ಹೆಚ್ಚಿನ ಕಮಿಷನ್ ಪಡೆಯಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರ ಹೊರವಲಯ ಯಲ್ಲಾಪುರದ ಎನ್.ಕುಮಾರಸ್ವಾಮಿ 6 ಲಕ್ಷ ಕಳೆದುಕೊಂಡಿದ್ದಾರೆ. ವಾಟ್ಸ್ ಆ್ಯಪ್ ನಲ್ಲಿ ಮೆಸೇಜ್ ಮಾಡಿದ ವಂಚಕರು ಹಣ ಗಳಿಕೆ ಬಗ್ಗೆ ತಿಳಿಸಿದ್ದಾರೆ. ಕುಮಾರಸ್ವಾಮಿ ಮೊದಲಿಗೆ 1 ಸಾವಿರ ಹೂಡಿಕೆ ಮಾಡಿದ್ದು, ಅದನ್ನು ಮತ್ತೆ ಅವರ ಖಾತೆಗೆ ವರ್ಗಾಯಿಸಿದ್ದಾರೆ. ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿದ್ದಲ್ಲಿ ಉತ್ತಮ ಲಾಭ ಗಳಿಸಬಹುದು ಎಂದು ಹೇಳಿದ್ದಾರೆ. ಇದನ್ನು ನಂಬಿ ಒಟ್ಟು 6,04,800 ವರ್ಗಾಯಿಸಿದ್ದು, ಇದರಲ್ಲಿ 1,600 ಮಾತ್ರ ವಾಪಸ್ ಬಂದಿದೆ. ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ತುಮಕೂರು: ನಗರದ ಮಳೆಕೋಟೆಯ ಉದ್ಯಮಿ ಇದಾಯತ್ ಉಲ್ಲಾ ಖಾನ್ ಫೋನ್ ಪೇ ಖಾತೆಯಿಂದ ಅವರ ಗಮನಕ್ಕೆ ಬಾರದಂತೆ 7.87 ಲಕ್ಷ ವರ್ಗಾವಣೆಯಾಗಿದ್ದು, ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನನ್ನ ಸ್ನೇಹಿತರಿಗೆ ಹಣ ವರ್ಗಾವಣೆ ಮಾಡುವಾಗ ಫೋನ್ ಪೇ ಬಳಕೆಯಾಗಲಿಲ್ಲ. ಪರಿಶೀಲಿಸಿದಾಗ ಸೆ. 18ರಿಂದ 23ರವರೆಗೆ 137 ಬಾರಿ ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಿಕೊಂಡಿರುವುದು ತಿಳಿಯಿತು. ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3.30ರ ಅವಧಿಯಲ್ಲಿ ಹಣ ವರ್ಗಾವಣೆಯಾಗಿದೆ. ಒಟ್ಟು 7,87,558 ಕಡಿತವಾಗಿದೆ’ ಎಂದು ಇದಾಯತ್ ಉಲ್ಲಾ ಖಾನ್ ದೂರು ನೀಡಿದ್ದಾರೆ. ಫೋನ್ ಪೇ ಬಳಸಿ ವಿವಿಧ ಯುಪಿಐ ಐ.ಡಿಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಕೊಡಿಗೇನಹಳ್ಳಿ: ಬೆಂಗಳೂರಿನಲ್ಲಿ ಖಾಸಗಿ ಕಂಪನಿ ಉದ್ಯೋಗ ಮಾಡುತ್ತಿದ್ದ ಹೋಬಳಿಯ ತೆರಿಯೂರು ಗ್ರಾಮದ ಟಿ.ಎನ್. ನಾಗಭೂಷಣ್ ಎಂಬವರು ಕೋವಿಡ್ ಸಂದರ್ಭದಲ್ಲಿ ಗ್ರಾಮಕ್ಕೆ ಮರಳಿದ್ದರು. ಇದೀಗ ಕಳೆದ ನಾಲ್ಕು ವರ್ಷಗಳಿಂದ ತಮ್ಮ ಜಮೀನಿನಲ್ಲಿ ಏಲಕ್ಕಿ ಬಾಳೆ ಬೆಳೆದು ಲಾಭ ಗಳಿಸಿದ್ದಾರೆ. ತಮ್ಮ ಆರು ಎಕರೆ ಜಮೀನಿನ ಜೊತೆಗೆ 10 ಎಕರೆ ಜಮೀನನ್ನು ಬೋಗ್ಯಕ್ಕೆ ಪಡೆದರು. ಅದರಲ್ಲಿ ಕನಕಾಂಬರ, ಟೊಮೆಟೊ, ಕುರಿ ಸಾಕಾಣಿಕೆಗೆ ಮೆಕ್ಕೆಜೋಳದ ಸಪ್ಪೆ ಬೆಳೆಯುತ್ತಿದ್ದಾರೆ. ನಾಲ್ಕು ಎಕರೆಯಲ್ಲಿ ಸುಮಾರು ನಾಲ್ಕು ವರ್ಷಗಳಿಂದ ಏಲಕ್ಕಿ ಬಾಳೆ ಬೆಳೆಯುತ್ತಿದ್ದಾರೆ. ‘ಗುಂಪು ಬಾಳೆಯಾಗಿರುವುದರಿಂದ ವರ್ಷಪೂರ್ತಿ ಬಾಳೆಗೊನೆ ದೊರೆಯುತ್ತದೆ. ಹಾಗಾಗಿ ಪ್ರತಿವರ್ಷ ಖರ್ಚು ಹೋಗಿ ಎಕರೆಗೆ 75ರಿಂದ 76 ಲಕ್ಷ ಲಾಭ ದೊರಕುತ್ತಿದೆ ಎಂದು ನಾಗಭೂಷಣ್ ಹೇಳುತ್ತಾರೆ. ನಾಲ್ಕು ವರ್ಷದ ಹಿಂದೆ ಬಾಳೆಗೆಡ್ಡೆ ಖರೀದಿಸಿ ನಾಟಿ ಮಾಡುವ ಸಂದರ್ಭದಲ್ಲಿ ಮೂರು ಅಡಿ ಆಳದ ಕುಣಿಯಲ್ಲಿ ಹೊಂಗೆ, ಎಕ್ಕ ಹಾಗೂ ತಂಗಡೆ ಸೊಪ್ಪನ್ನು ಹಾಕಿಸಿದ್ದೆ. ನಂತರ ಗಿಡಗಳಿಗೆ ಕಡಿಮೆ ರಸಗೊಬ್ಬರದ ಜೊತೆಗೆ ಹೆಚ್ಚಾಗಿ ಕೊಟ್ಟಿಗೆ ಗೊಬ್ಬರ ನೀಡುತ್ತಿರುವುದರಿಂದ ಬಾಳೆ ತೋಟ…
ಬೆಂಗಳೂರು: ತುಮಕೂರು ಜಿಲ್ಲೆಯಲ್ಲಿ ಚಿರತೆ ಕಾರ್ಯಪಡೆ ರಚನೆಗೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಅನುಮೋದನೆ ನೀಡಿದ್ದಾರೆ. ಕಾರ್ಯಪಡೆಯಲ್ಲಿ ಒಟ್ಟು 59 ಸಿಬ್ಬಂದಿ ಇರಲಿದ್ದಾರೆ ಎಂದು ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ. ತುಮಕೂರಿನ ಕುಣಿಗಲ್, ತಿಪಟೂರು, ಮಧುಗಿರಿ, ಕೊರಟಗೆರೆ, ಪಾವಗಡ ತಾಲ್ಲೂಕು ವ್ಯಾಪ್ತಿಯಲ್ಲಿ ಚಿರತೆ ಮಾನವ ಸಂಘರ್ಷ ತಪ್ಪಿಸಲು ಈ ಕಾರ್ಯಪಡೆ ಕೆಲಸ ಮಾಡಲಿದೆ. ತುಮಕೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ 4 ತಂಡಗಳಾಗಿ ಈ ಕಾರ್ಯಪಡೆ ಕೆಲಸ ಮಾಡಲಿದೆ. ಚಿರತೆ ಹಾವಳಿ ಹೆಚ್ಚುಇರುವ ಗ್ರಾಮಗಳಲ್ಲಿ ಗಸ್ತು, ರೈತರ ಜಮೀನು ಮತ್ತು ವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡರೆ ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಹೊಣೆಗಾರಿಕೆಯನ್ನು ಕಾರ್ಯಪಡೆಗೆ ನೀಡಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪಡೆಯ ಮುಖ್ಯಸ್ಥರಾಗಲಿದ್ದಾರೆ. ತಲಾ ಒಬ್ಬರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಪಶುವೈದ್ಯರು, ಒಬ್ಬ ವಲಯ ಅರಣ್ಯಾಧಿಕಾರಿ ಇರಲಿದ್ದಾರೆ. ಜತೆಗೆ ನಾಲ್ವರು ಉಪ ವಲಯ ಅರಣ್ಯಾಧಿಕಾರಿ, ಎಂಟು ಗಸ್ತು ಅರಣ್ಯ ಪಾಲಕರು, ಐವರು ವಾಹನ ಚಾಲಕರು ಮತ್ತು 40 ಹೊರಗುತ್ತಿಗೆ…
ಬೀದರ್: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಪ್ರಕರಣವನ್ನು ಪತ್ತೆ ಹಚ್ಚಿರುವ ಬೀದರ ಜಿಲ್ಲಾ ಪೊಲೀಸರು 10.50 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆದುಕೊಂಡಿದ್ದಾರೆ. ಚಿಟಗುಪ್ಪಾ ಪೊಲೀಸ್ ಠಾಣಾ ವ್ಯಾಪ್ತಿಯ ಚಿಟಗುಪ್ಪಾ ಪಟ್ಟಣದ ನಾನ್ ಹಜರತ್ ದರ್ಗಾದ ಹತ್ತಿರ ವಾಹನವೊಂದರಲ್ಲಿ ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆಹಾರ ನಿರೀಕ್ಷಕರ ರಾಜು ಪಂಚಾಳ ಅವರ ಸಮಕ್ಷಮದಲ್ಲಿ 4,05,000 ಮೌಲ್ಯದ 180 ಕ್ವಿಂಟಾಲ್ ಪಡಿತರ ಅಕ್ಕಿ ಮತ್ತು 6,00,000 ರೂ. ಮೌಲ್ಯದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದು, ಆರೋಪಿತರ ವಿರುದ್ಧ ಕ್ರಮಕೈಗೊಂಡಿದ್ದಾರೆ. ಬೀದರ ಜಿಲ್ಲಾ ಪೊಲೀಸ್ ಡಿ.ಐ.ಜಿ.ಪಿ, ಈ.ವರವರ ಮಾರ್ಗದರ್ಶನದಂತೆ, ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ನಿರ್ದೇಶನದಂತೆ ಚಿಟಗುಪ್ಪಾ ಪೊಲೀಸರು ಈ ಕಾರ್ಯಾಚರಣೆ ನಡೆಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC