Author: admin

ತುಮಕೂರು: ಟಿಪ್ಪು ಸುಲ್ತಾನ್‌ ನನ್ನ ಬಹಳ ಅವಹೇಳನಕಾರಿಯಾಗಿ ತೋರಿಸಲಾಗುತ್ತೆ. ಆದ್ರೆ ನಾನು ಓದಿರುವ ಪ್ರಕಾರ ಕನ್ನಂಬಾಡಿ ಕಟ್ಟೆಯನ್ನ ಪ್ರಾರಂಭ ಮಾಡಿದ್ದೇ ಅವನು. ಅನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಕಾಲದಲ್ಲಿ ಅದನ್ನ ಸಂಪೂರ್ಣ ಮಾಡಿದ್ದಾರೆ. ನಮ್ಮ ಮಕ್ಕಳಿಗೆ ಇತಿಹಾಸ ಸ್ಪಷ್ಟವಾಗಿ ತಿಳಿಸಬೇಕು, ಅದನ್ನ ತಿರುಚಬಾರದು ಎಂದು ಮಾಜಿ ಸಚಿವ ಕೆ.ಎನ್​.ರಾಜಣ್ಣ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಒಡೆಯರ್ ಕಾಲದಲ್ಲಿ ಕೆಆರ್ ಎಸ್  ಸಂಪೂರ್ಣ ಮಾಡಬೇಕಾದ್ರೆ ಹಣಕಾಸಿನ‌ ತೊಂದರೆ ಬಂತು. ಮನೆಯಲ್ಲಿದ್ದ ಚಿನ್ನ ತೆಗೆದುಕೊಂಡು‌ ಹೋಗಿ ಬಾಂಬೆಯಲ್ಲಿ ಮಾರ್ತಾರೆ. ನಾವು ಇದನ್ನ ಮರೆಯಬಾರದು ಎಂದೂ ರಾಜಣ್ಣ ತಿಳಿದ್ದಾರೆ. ಟಿಪ್ಪು ಸುಲ್ತಾನ್‌ ನಾಲ್ಕು ಯುದ್ಧ ಮಾಡ್ತಾನೆ. 3ನೇ ಯುದ್ದದಲ್ಲಿ ಸೋತು ಬಿಡ್ತಾನೆ. ಈ ವೇಳೆ ಬ್ರಿಟಿಷ್‌ನವರು 3 ಕೋಟಿ 30 ಲಕ್ಷ ಯುದ್ಧದ ಖರ್ಚು ಕೇಳಿದ್ದಕ್ಕೆ ಆತ ಮಕ್ಕಳನ್ನು ಅಡವಿಡುತ್ತಾನೆ. ಜೈಲಿನಲ್ಲಿ ಇಟ್ಟ ಮಕ್ಕಳನ್ನ ದುಡ್ಡು ಕೊಟ್ಟು ಬಿಡಿಸಿಕೊಳ್ಳಬೇಕಾದರೆ, 4ನೇ ಯುದ್ಧದಲ್ಲಿ ಮೀರ್‌ ಸಾದಿಕ್‌ ಕಥೆಯಿಂದಾಗಿ ಸೋಲುತ್ತಾನೆ. ಟಿಪ್ಪು ಸುಲ್ತಾನ್‌ ಗೆ ಮೀರ್‌ ಸಾದಿಕ್‌…

Read More

ತುಮಕೂರು: ಸಕಾರಣವಿಲ್ಲದೆ ಡೇರಿ ಆಡಳಿತ ಮಂಡಳಿ ವಜಾ ಮಾಡಿರುವುದನ್ನು ವಿರೋಧಿಸಿ ಕುಣಿಗಲ್ ತಾಲ್ಲೂಕು ಬೇಗೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ನಿರ್ದೇಶಕರು ನಗರದಲ್ಲಿರುವ ಸಹಕಾರ ಇಲಾಖೆ ಸಹಾಯಕ ನಿಬಂಧಕರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಡೇರಿ ಆಡಳಿತ ಮಂಡಳಿ ನಿರ್ಣಯ ಧಿಕ್ಕರಿಸಿ, ರಾಜಕೀಯ ದುರುದ್ದೇಶದಿಂದ ಆಡಳಿತ ಮಂಡಳಿ ವಜಾಗೊಳಿಸಲಾಗಿದೆ. ಹೊಸದಾಗಿ ಡೇರಿ ಕಾರ್ಯದರ್ಶಿ ನೇಮಕ ಮಾಡಿದ ನಂತರ ಈ ರೀತಿ ಮಾಡಲಾಗಿದೆ. ಎಲ್ಲ ರೀತಿಯಲ್ಲೂ ನಿಯಮ ಪಾಲನೆಯಾಗಿದ್ದರೂ ಉದ್ದೇಶಪೂರ್ವಕವಾಗಿ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಇದಕ್ಕೆ ಕಾರಣಕರ್ತರಾದ ಸಹಕಾರ ಇಲಾಖೆ ಸಹಾಯಕ ನಿಬಂಧಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸೂಪರ್ ಸೀಡ್ ಮಾಡುವ ಮುನ್ನ ಅನುಸರಿಸಬೇಕಾದ ಕಾನೂನು ಕ್ರಮಗಳನ್ನು ಪಾಲಿಸಿಲ್ಲ. ಸಂಘಕ್ಕೆ ನೋಟಿಸ್ ಸಹ ನೀಡದೆ, ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಕೂಡಲೇ ಆದೇಶ ವಾಪಸ್ ಪಡೆಯಬೇಕು. ವಯೋ ನಿವೃತ್ತಿಯಿಂದ ತೆರವಾದ ಕಾರ್ಯದರ್ಶಿ ಸ್ಥಾನಕ್ಕೆ ನಿಯಮಬದ್ಧವಾಗಿ ಮಾಡಿರುವ ನೇಮಕಕ್ಕೆ ಒಪ್ಪಿಗೆ ನೀಡಬೇಕು ಎಂದು ಒತ್ತಾಯಿಸಿದರು. ಜೆಡಿಎಸ್‌, ಬಿಜೆಪಿ ಮುಖಂಡರ…

Read More

ಕೊರಟಗೆರೆ : ಈ ದೇಶಕ್ಕೆ ಅನ್ನ ನೀಡುವ ರೈತನ ಯಾರು ಕೂಡ ಮರೆಯಬಾರದು, ದೇಶದಲ್ಲಿ ಯಾರು ಕೂಡ ಉಪವಾಸ ಇರಬಾರದು ಎನ್ನುವ ಉದ್ದೇಶದಿಂದ ರೈತ ಬಿಸಿಲಿನಲ್ಲಿ ದುಡಿದು ನಮಗೆಲ್ಲ ಅನ್ನ ಕೊಡುತ್ತಾನೆ. ಪ್ರತಿನಿತ್ಯ ನಾವು ಅನ್ನದಾತನನ್ನ ಸ್ಮರಿಸಬೇಕಿದೆ ಎಂದು ಬೆಳ್ಳಾವಿ ಕಾರದೇಶ್ವರ ಮಠದ ಪೀಠಾಧ್ಯಕ್ಷ ಕಾರದ ವೀರಬಸವ ಮಹಾಸ್ವಾಮಿ ತಿಳಿಸಿದರು. ತಾಲೂಕಿನ ಹೊಳವನಹಳ್ಳಿ ಹೋಬಳಿಯ ಹೆಚ್.ವಿ.ಪಾಳ್ಯ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಗಾಂಧಿಕೃಷಿ ವಿಜ್ಞಾನಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ, ರೇಷ್ಮೆ, ಅರಣ್ಯ, ಮೀನುಗಾರಿಕೆ, ಹಾಗೂ ಗ್ರಾಪಂ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಕೃಷಿ ಮಂಥನ ಮತ್ತು ಬೆಳೆ ಕ್ಷೇತ್ರೋತ್ಸವ, ರೈತ ಹಾಗೂ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿ ಮಾತನಾಡಿದರು. ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ ಅದರೆ ರೈತನ ಪರಿಸ್ಥಿತಿ ಯಾರು ಕೇಳೋದಿಲ್ಲ. ಇವತ್ತಿನ ಯುವ ಪೀಳಿಗೆ ಕೃಷಿಯ ಕಡೆ ಹೆಚ್ಚು ಒತ್ತು ನೀಡುವ ಸಲುವಾಗಿ ಜಿಕೆವಿಕೆ ಸೇರಿ ಗ್ರಾಮೀಣ ಭಾಗದ ರೈತರಿಗೆ ಇವತ್ತಿನ ಮಳೆಯ ಅನುಗುಣವಾಗಿ ಬೆಳೆ ಬೆಳೆಯುವುದರ ಬಗ್ಗೆ ಕಳೆದ…

Read More

ಮೈಸೂರಿನ ವಿಜ್ಞಾನ ಶಿಕ್ಷಕರಾದ ಶ್ರೀ ಮಲ್ಲೇಶ್ ರವರಿಗೆ ಮೊದಲು ನನ್ನ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ. ಕೊನೆಯಲ್ಲಿ ಶಿಕ್ಷಕರು ಓಲ್ಟರ್ ಕೇಳಿದ್ದ ಒಂದು ಪ್ರಶ್ನೆಯನ್ನು ಉಲ್ಲೇಖಿಸಿರುತ್ತೀರಿ. ಬಹಳ ಸಂತೋಷವಾಯಿತು. ವಿಜ್ಞಾನ ಆಸಕ್ತರಿಗೆ ಇಂತಹ ವಿಷಯಗಳು ಮತ್ತಷ್ಟು ತಿಳಿಯುವ ಅಥವಾ ತಿಳಿದಿದ್ದನ್ನು ತಿಳಿಸುವ ಉತ್ಸುಕತೆ ಉಂಟಾಗುತ್ತದೆ. ಈಗ ವಿಚಾರಕ್ಕೆ ಬರುವುದಾದರೆ, ರಾತ್ರಿಯ ಆಕಾಶದಲ್ಲಿ ಹಲವಾರು ಕೋಟಿ ನಕ್ಷತ್ರಗಳು ಎಲ್ಲ ದಿಕ್ಕಿನಲ್ಲಿ ಇದ್ದರೂ, ಅವುಗಳಿಂದ ನಿರಂತರ ಬೆಳಕು ಬರುತ್ತಿದ್ದರೂ ಕೂಡ ಆಗಸದ ಬಣ್ಣ ಮಾತ್ರ ಕಪ್ಪು ಏಕೆ? ಈ ಪ್ರಶ್ನೆಗೆ ನನಗೆ ತಿಳಿದಿರುವ ಅತ್ಯಂತ ಸಮಾಧಾನಕರ ಉತ್ತರ ತಿಳಿಸಲು ಬಯಸುತ್ತೇನೆ. ಇದನ್ನು ತಿಳಿಯುವ ಮೊದಲು, ಈ ಸಂದರ್ಭದಲ್ಲಿ ನಾನು ಬಹಳ ಹಿಂದೆ ನಕ್ಷತ್ರಗಳ ‘ಟ್ರಯಾಂಗಲ್ ಥಿಯರಿ’ (ನಕ್ಷತ್ರಗಳ ತ್ರಿಕೋನ ಸಿದ್ಧಾಂತ) ಬಗ್ಗೆ ಒಂದು ಸಣ್ಣ ಚಿತ್ರಸಹಿತ ಲೇಖನ ಬರೆದಿದ್ದೆ. ಅದು ಬಾಲವಿಜ್ಞಾನ ಎಂಬ ಮಾಸ ಪತ್ರಿಕೆಯಲ್ಲಿ ಬಹಳ ಹಿಂದೆ ಪ್ರಕಟವಾಗಿತ್ತು. ಆ ಸಿದ್ಧಾಂತವನ್ನು ಇಲ್ಲಿ ನೆನಪಿಸಿಕೊಳ್ಳಲು ಬಯಸುತ್ತೇನೆ. ಕ್ಷಮೆ ಇರಲಿ ಈ ಸಿದ್ಧಾಂತದ ಬಗ್ಗೆ ಬಹುಶಃ ಶಿಕ್ಷಕರಿಗೆ…

Read More

ಸರಗೂರು:   ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಒಂದೇ ಸೂರಿನಡಿ 32 ಇಲಾಖೆಗಳು ಬರುವಂತೆ ‘ಪ್ರಜಾಸೌಧ’ ಕಟ್ಟಡ ವಿನ್ಯಾಸಗೊಳಿಸಿದ್ದು, ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು  ಶಾಸಕರು, ಅರಣ್ಯ ಮತ್ತು ವಸತಿ ವಿಹಾರಧಾಮ ಸಂಸ್ಥೆಗಳ ಅಧ್ಯಕ್ಷ ಅನಿಲ್ ಚಿಕ್ಕಮಾದು ತಿಳಿಸಿದರು. ಪಟ್ಟಣದ ನೀರಾವರಿ ಇಲಾಖೆಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 8.60  ಕೋಟಿ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ‘ಪ್ರಜಾಸೌಧ’ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಾಜಿ ಶಾಸಕ ದಿ.ಎಸ್.ಚಿಕ್ಕಮಾದು, ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ್ ಅವರು ಸತತ ಪರಿಶ್ರಮದಿಂದಾಗಿ ಹೋಬಳಿ ಕೇಂದ್ರವಾಗಿದ್ದ ಸರಗೂರು, ಕೋಟೆ ತಾಲೂಕಿನಿಂದ ಬೇರ್ಪಟ್ಟು ನೂತನ ತಾಲೂಕಾಗಿ ಘೋಷಣೆಯಾಗಿ 8 ವರ್ಷ ಕಳೆದಿದೆ. ಸದ್ಯ ನೀರಾವರಿ ಇಲಾಖೆ ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿಕೊಂಡು ಸಿಎಂ ಸಿದ್ದರಾಮಯ್ಯ ಅವರಿಂದ ಅನುದಾನ ಬಿಡುಗಡೆ ಮಾಡಿಸಿ ‘ಪ್ರಜಾಸೌಧ’ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಇಲ್ಲಿ 32 ಇಲಾಖೆಗಳೂ ಕಾರ್ಯನಿರ್ವಹಿಸಲಿವೆ ಎಂದು ಅವರು ಹೇಳಿದರು. ಆಸ್ಪತ್ರೆ, ಕೋರ್ಟ್, ಅಗ್ನಿಶಾಮಕ ಠಾಣೆ:…

Read More

ಬೀದರ್: ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮದಲ್ಲಿ ನವರಾತ್ರಿ ಅಂಗವಾಗಿ ಭವಾನಿ ದೇವಿಮೂರ್ತಿ ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಕೊನೆಯ ದಿನ ಗ್ರಾಮದ ಮಾದಿಗ ಸಮುದಾಯದಿಂದ ಬಸವೇಶ್ವರ ವೃತ ಸೇರಿದಂತೆ ವಿವಿಧ ಬಡಾವಣೆಗಳಿಂದ ದೇವಿಯ ಭವ್ಯ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ  ಅಧ್ಯಕ್ಷ ದೇವಿದಾಸ ಧೂಳೆ, ಪ್ರಭಾಕರ್ ಇಂಗಳೇ, ರಾಜಕುಮಾರ್ ಹಚಕಮಟೆ, ಬಂಡೆಪ್ಪ ಧೂಳೆ ಹಾಗೂ ಊರಿನ ಗಣ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಪಾವಗಡ: ಶತ ಶತಮಾನಗಳಿಂದ ನಾಡಿನ ಜನರಿಗೆ ಅನ್ನ ನೀಡುವ ಒಕ್ಕಲಿಗ ಸಮುದಾಯ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದೆ ಎಂದು ಆದಿಚುಂಚನಗಿರಿ ಸಂಸ್ಥಾನದ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು. ತಾಲ್ಲೂಕಿನ ಕೆ.ಟಿ.ಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ, ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಕ್ಕಲಿಗರ ಕುಲ ಕಸುಬು ವ್ಯವಸಾಯ. ಈ ಭಾಗದಲ್ಲಿ ಸಮುದಾಯದ ಅಭಿವೃದ್ಧಿಗಾಗಿ ನೀರಾವರಿ ಯೋಜನೆಗಳು ಅನುಷ್ಠಾನವಾಗಬೇಕು. ಜನತೆ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಬೇಕು. ಸಮುದಾಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆದಿಚುಂಚನಗಿರಿ ಸಂಸ್ಥೆಯಿಂದ ಮಧುಗಿರಿ, ಕೊರಟಗೆರೆ ಭಾಗದಲ್ಲಿ ಕೃಷಿ ವಿಜ್ಞಾನ ಕಾಲೇಜು ಪ್ರಾರಂಭಿಸಲು ಸಿದ್ಧತೆ ನಡೆಯುತ್ತಿದೆ ಎಂದರು. ಶಾಸಕ ಎಚ್‌.ವಿ. ವೆಂಕಟೇಶ್‌ ಮಾತನಾಡಿ, ಒಕ್ಕಲಿಗ ಸಮಾಜ ಸಂಘಟಿತರಾಗಿ, ಸಮುದಾಯಕ್ಕೆ ಬೇಕಾದ ಸೌಕರ್ಯ ಕಲ್ಪಿಸಲಾಗುವುದು ಎಂದರು. ಸಂಸದ ಗೋವಿಂದ ಕಾರಜೋಳ ಮಾತನಾಡಿ, ಕೆಂಪೇಗೌಡರು ಕೋಟೆ, ಪೇಟೆಗಳ ನಿರ್ಮಾಣದ ಮೂಲಕ ಎಲ್ಲಾ ವರ್ಗದ ಜನರ ಅಭಿವೃದ್ಧಿಗಾರಿ ಶ್ರಮಿಸಿದ್ದರು. ಕೆರೆ ಕಟ್ಟೆಗಳ ನಿರ್ಮಾಣ, ಮಾರುಕಟ್ಟೆಗಳ ನಿರ್ಮಾಣ ಮಾಡಿದ್ದ ಅವರು ತಮ್ಮ ಆಳ್ವಿಕೆಯ…

Read More

ಪಾವಗಡ: ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಹೊರವಲಯದಲ್ಲಿ ಇರುವ ಈಶ್ವರ ದೇವಾಲಯದ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಬಾಲಾಜಿ ಮಠವನ್ನು ಗುರುವಾರದಂದು ಭಕ್ತಿಭಾವದಿಂದ ಪ್ರತಿಷ್ಠಾಪನೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಶ್ರೀ ನಾಗಾನಂದ ಸ್ವಾಮೀಜಿ ಸೇರಿದಂತೆ ಅನೇಕ ಭಕ್ತಾದಿಗಳು ಭಾಗವಹಿಸಿ ಪೂಜೆ, ಭಜನೆ ಹಾಗೂ ಧ್ಯಾನ ಕಾರ್ಯಕ್ರಮಗಳಲ್ಲಿ ತೊಡಗಿದರು. ಮಠದ ಆಶಯವಾಗಿ “ಶ್ರೀ ನಾದಾಬ್ರಹ್ಮ ಯೋಗದಿಂದ ಆರೋಗ್ಯ ಕ್ಷೇಮ ಮತ್ತು ಯೋಗ ಕ್ಷೇಮ” ಎಂಬ ಸಂದೇಶವನ್ನು ಪ್ರಚಾರ ಮಾಡಲಾಯಿತು. ನಾದಾಬ್ರಹ್ಮ ಯೋಗದ ಮೂಲಕ ದೈಹಿಕ–ಮಾನಸಿಕ ಆರೋಗ್ಯ, ಆತ್ಮಶುದ್ಧಿ ಹಾಗೂ ಆಧ್ಯಾತ್ಮಿಕ ಶಾಂತಿಯ ಅನುಭವವನ್ನು ಪಡೆಯಬಹುದು ಎಂದು ಸ್ವಾಮೀಜಿಯವರು ಭಕ್ತರಿಗೆ ತಿಳಿಸಿದರು. “ಭವರೋಗ ಪಿಂಡದಿಂದ ಆರೋಗ್ಯ ಪಿಂಡ, ಮಂತ್ರ ಪಿಂಡ, ಯೋಗ ಪಿಂಡ ಮತ್ತು ಕೊನೆಗೆ ಬ್ರಹ್ಮಾಂಡ ಪಿಂಡದತ್ತ ಸಾಗುವ ಪಯಣವೇ ನಾದಾಬ್ರಹ್ಮ ಯೋಗ,” ಎಂದು ಸ್ವಾಮೀಜಿಯವರು ಉಪದೇಶಿಸಿದರು. ಈ ಯೋಗದಿಂದ ಹೃದಯರೋಗ, ತಲೆನೋವು, ಹೊಟ್ಟೆನೋವು ಮುಂತಾದ ದೈಹಿಕ ತೊಂದರೆಗಳು ನಿವಾರಣೆಯಾಗುತ್ತವೆ. ಮನಸ್ಸು ಚುರುಕಾಗುತ್ತದೆ, ಆಲಸ್ಯ-ಸೋಮಾರಿತನ ದೂರಾಗುತ್ತದೆ ಎಂದು ಅವರು ಹೇಳಿದರು. “ಕಾಯಕವೇ ಕೈಲಾಸ,…

Read More

ವೈ.ಎನ್.ಹೊಸಕೋಟೆ: ಯಲ್ಲಪ್ಪನಾಯಕನ ಹೊಸಕೋಟೆ ಸಂಸ್ಥಾನದ ನಿರ್ಮಾತೃ ಪಾಳೇಗಾರ ಕಾಲದಿಂದಲೂ ಸಾಗಿ ಬಂದಿರುವ ಪಾರಂಪರಿಕ ಜಂಬೂ ಸವಾರಿಯು ಗುರುವಾರದ ವಿಜಯದಶಮಿಯಂದು ಎಂದಿನಂತೆ ಈ ವರ್ಷವೂ ಗ್ರಾಮದಲ್ಲಿ ನಡೆಯಿತು. ಸಂಸ್ಥಾನದ ದೊರೆಯ ಮನೆಯಲ್ಲಿ ಪಾಡ್ಯಮಿಯಿಂದಲೇ ಆರಂಭಗೊಂಡಿದ್ದ ನವರಾತ್ರಿಯ ಸಾಂಪ್ರದಾಯಿಕ ಪೂಜೆಗಳು ಪೂರ್ಣಗೊಂಡ ನಂತರ ವಿಜಯದಶಮಿಯಂದು ಸಂಜೆ 3 ಗಂಟೆ ಸಮಯದಲ್ಲಿ ಅಶ್ವಾರೂಢರಾದ ದೊರೆ ರಾಜಾ ಜಯಚಂದ್ರರಾಜುರವರು ಕೋಟೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದರು. ಕೊಂಬು ಕಹಳೆ ವಾದ್ಯತಾಳಗಳೊಂದಿಗೆ, ದಂಡು ದಳವಾಯಿವಾಯಿಗಳು, ಸಂಸ್ಥಾನದ ಖಾವಂದಾರರುಗಳಿಂದ ಕೂಡಿದ ಮೆರೆವಣಿಗೆ ಗ್ರಾಮದೇವತೆ ಗೌರಸಮುದ್ರ ಮಾರಮ್ಮ, ತುಮ್ಮಲುಮಾರಮ್ಮ, ನಿಡಗಲ್ ಮಾರಮ್ಮ, ಬೊಮ್ಮಲಿಂಗೇಶ್ವರ, ಕೊಲ್ಲಾಪುರದಮ್ಮ, ರಾಮದೇವರು, ಇತ್ಯಾದಿ ದೇವರುಗಳ ಉತ್ಸವ ಮೂರ್ತಿಗಳೊಂದಿಗೆ ಪುರ ಜನರ ಸಮೇತವಾಗಿ ಹೊರಟ ಮೆರವಣಿಗೆ ಪುರಬೀದಿಗಳಲ್ಲಿ ಸಾಗಿ ಬಂದು ಗ್ರಾಮದ ಪೂರ್ವದಲ್ಲಿರುವ ಬನ್ನಿ ಮಂಟಪಕ್ಕೆ ಬಂದು ಸೇರಿತು. ಬನ್ನಿ ಮಂಟಪದ ಬನ್ನಿ ಮರಕ್ಕೆ ದೊರೆಯು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ನಾಲ್ಕು ದಿಕ್ಕುಗಳಿಗೂ ಅಂಬು ಹಾಕಿ ಎಲ್ಲಾ ಕಡೆ ಮಳೆ ಬಿದ್ದು…

Read More

ತುಮಕೂರು: ಸರ್ಕಾರದ ಆದೇಶದಂತೆ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯೊಬ್ಬರಿಗೆ ಧರ್ಮದ ಹೆಸರಿನಲ್ಲಿ ಅವಮಾನಿಸಿ, ಸಮೀಕ್ಷೆಗೆ ಅವಕಾಶ ನೀಡದೇ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮುಸ್ಲಿಂ ಸಮುದಾಯದ ಶಿಕ್ಷಕಿ ಎಂಬ ಕಾರಣಕ್ಕೆ ಸಮೀಕ್ಷೆಗೆ ಅವಕಾಶ ನೀಡದೆ ಗಲಾಟೆ ಮಾಡುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಮುಸ್ಲಿಂ ಆಗಿ ಸಮೀಕ್ಷೆಗೆ ಹೇಗೆ ಮನೆ ಬಳಿ ಬಂದಿದ್ದೀಯಾ? ಸಮೀಕ್ಷೆ ಮಾಡಲು ನೀನು ಯಾರು? ಮುಸ್ಲಿಮರ ಮನೆ ಹತ್ತಿರ ಬಿಟ್ಟುಕೊಳ್ಳಬಾರದು. ಮನೆ ಬಳಿಗೆ ಏಕೆ ಬರುತ್ತೀರಾ? ಸಮೀಕ್ಷೆಗೆ ಬರುವಾಗ ಗುರುತಿನ ಕಾರ್ಡ್ ಏಕೆ ತಂದಿಲ್ಲ? ಎಂದೆಲ್ಲ ಪ್ರಶ್ನಿಸಿ ಶಿಕ್ಷಕಿಯನ್ನು ಅವಮಾನಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ನಮ್ಮಮನೆ ಸಮೀಪದಲ್ಲೇ ಇದ್ದು, ಐ.ಡಿ ಕಾರ್ಡ್ ತರುತ್ತೇನೆ. ಸಮೀಕ್ಷೆಗೆ ಅವಕಾಶ ಮಾಡಿಕೊಡಿ ಎಂದು ಶಿಕ್ಷಕಿ ಮನವೊಲಿಸಲು ಮುಂದಾದರೂ, ಅವಕಾಶ ನೀಡದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಶಿಕ್ಷಕಿ ದೂರು ನೀಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿರುವ ಮಾಹಿತಿ ಲಭ್ಯವಾಗಿಲ್ಲ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…

Read More