nammatumakuru

    Subscribe to Updates

    Get the latest creative news from FooBar about art, design and business.

    What's Hot

    “ನೀವು ಹೇಳಿದಂತೆ ಕೇಳದಿದ್ರೆ ದ್ವೇಷಿಸ್ತೀರಾ?”: ಶಾಸಕ ಎಚ್.ಡಿ. ರೇವಣ್ಣಗೆ ಹಾಸನ ಜಿಲ್ಲಾಧಿಕಾರಿ ತಿರುಗೇಟು

    August 25, 2026

    ಕರ್ನಾಟಕ ಸರ್ಕಾರಕ್ಕೆ ಅದಾನಿ ಕೇವಲ ಒಬ್ಬ ಗುತ್ತಿಗೆದಾರ ಅಷ್ಟೇ: ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

    August 25, 2026

    ಮಹಿಳಾ ಪಿಎಸ್ ಐಗೆ ಬಿಜೆಪಿ ಶಾಸಕನ ಪುತ್ರಿಯಿಂದ ಕಪಾಳಮೋಕ್ಷ: ವಿಡಿಯೋ ವೈರಲ್, ಎಫ್ ಐಆರ್ ದಾಖಲಾಗಿದ್ದರೂ ಆಗಿಲ್ಲ ಬಂಧನ

    August 25, 2026
    Facebook Twitter Instagram
    ಟ್ರೆಂಡಿಂಗ್
    • “ನೀವು ಹೇಳಿದಂತೆ ಕೇಳದಿದ್ರೆ ದ್ವೇಷಿಸ್ತೀರಾ?”: ಶಾಸಕ ಎಚ್.ಡಿ. ರೇವಣ್ಣಗೆ ಹಾಸನ ಜಿಲ್ಲಾಧಿಕಾರಿ ತಿರುಗೇಟು
    • ಕರ್ನಾಟಕ ಸರ್ಕಾರಕ್ಕೆ ಅದಾನಿ ಕೇವಲ ಒಬ್ಬ ಗುತ್ತಿಗೆದಾರ ಅಷ್ಟೇ: ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ
    • ಮಹಿಳಾ ಪಿಎಸ್ ಐಗೆ ಬಿಜೆಪಿ ಶಾಸಕನ ಪುತ್ರಿಯಿಂದ ಕಪಾಳಮೋಕ್ಷ: ವಿಡಿಯೋ ವೈರಲ್, ಎಫ್ ಐಆರ್ ದಾಖಲಾಗಿದ್ದರೂ ಆಗಿಲ್ಲ ಬಂಧನ
    • ದೈವಜ್ಞ ಸಮಾಜದ ಹಿರಿಮೆ, ಸಂಸ್ಕೃತಿ ಮತ್ತು ಪಾರಂಪರಿಕ ಮೌಲ್ಯಗಳನ್ನು ಸಾರುವ ‘ದೈವಜ್ಞರು ಚಿತ್ರದ ಶೀರ್ಷಿಕೆ, ಹಾಡುಗಳ ಲೋಕಾರ್ಪಣೆ
    • ಜಲಾಶಯಕ್ಕೆ ನೀರಿನ ಒಳ ಹರಿವು ಆಧಾರದಲ್ಲಿ ರಾಗಿ ಬೆಳೆಗೆ — ಸಾಲು ಕೆರೆಗಳಿಗೆ ನೀರು: ಶಾಸಕ ಡಾ. ಎಚ್.ಡಿ. ರಂಗನಾಥ್
    • ಸಹಕಾರ ಸಂಘಗಳಲ್ಲಿ ಪಾರದರ್ಶಕತೆ ಬಹಳಮುಖ್ಯ: ಕವಿರತ್ನ ಕಾಳಿದಾಸ ಪ.ಸ.ಸಂಘ ಸಭೆಯಲ್ಲಿ ಡಾ. ಹುಲಿನಾಯ್ಕರ್ ಸಲಹೆ
    • ಬದುಕಿನ ತಾತ್ವಿಕ ಶೋಧದ ಕಾದಂಬರಿ ಕಾಡುದೇವರಬೆಟ್ಟ:  ಬರಗೂರು ರಾಮಚಂದ್ರಪ್ಪ ಅಭಿಮತ
    • ಗ್ರಾಮೀಣ ರೋಜ್ ಗಾರ್ ಗ್ಯಾರಂಟಿ ಕಾರ್ಡ್ ವಿತರಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಚನ್ನಗುಂಡಿ ಕಾಲೋನಿಯ ಆಶ್ರಮ ಶಾಲೆ ಪದವಿ ಪೂರ್ವ ಶಿಕ್ಷಣದವರೆಗೆ ಮೇಲ್ದರ್ಜೆಗೆ ಏರಿಸಲಾಗಿದೆ: ಶಾಸಕ ಅನಿಲ್ ಚಿಕ್ಕಮಾದು
    ಜಿಲ್ಲಾ ಸುದ್ದಿ November 12, 2025

    ಚನ್ನಗುಂಡಿ ಕಾಲೋನಿಯ ಆಶ್ರಮ ಶಾಲೆ ಪದವಿ ಪೂರ್ವ ಶಿಕ್ಷಣದವರೆಗೆ ಮೇಲ್ದರ್ಜೆಗೆ ಏರಿಸಲಾಗಿದೆ: ಶಾಸಕ ಅನಿಲ್ ಚಿಕ್ಕಮಾದು

    By adminNovember 12, 2025No Comments2 Mins Read

    ಸರಗೂರು: ಚನ್ನಗುಂಡಿ ಕಾಲೋನಿಯ ಆಶ್ರಮ ಶಾಲೆಯನ್ನು ತಮ್ಮೆಲ್ಲರ ಆಶಯದಂತೆ ಹಂತಹಂತವಾಗಿ ಪದವಿ ಪೂರ್ವ ಶಿಕ್ಷಣದವರೆಗೆ ಮೇಲ್ದರ್ಜೆಗೆ ಏರಿಸಲಾಗಿದೆ,‌ ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

    ತಾಲ್ಲೂಕಿನ ಎಂ.ಸಿ.ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಗುಂಡಿ ಕಾಲೋನಿಯ ವಾಲ್ಮೀಕಿ ಮಹರ್ಷಿ ಗಿರಿಜನ ಆಶ್ರಮ ಶಾಲೆಯಲ್ಲಿ ಮಂಗಳವಾರದಂದು ಶಾಸಕರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿ ಹಾಡಿಯ ಮತ್ತು ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿ ನಂತರ ಮಾತನಾಡಿದರು.

    ಶಾಲೆಯ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಾಗುವುದು, ಆದಿವಾಸಿ ಜನಾಂಗದ ವಸತಿ ರಹಿತರಿಗೆ ವಿಷೇಶ ಘಟಕ ಯೋಜನೆಯಡಿ ವಸತಿ ಮಂಜೂರು ಮಾಡಲು ಕ್ರಮ ವಹಿಸಲಾಗುವುದು ಎಂದರು.

    ಆದಿವಾಸಿಗಳಿಗೆ ಆರು ತಿಂಗಳು ನೀಡುತ್ತಿದ್ದ ಪೌಷ್ಟಿಕ ಆಹಾರದ ಕಿಟ್ ಗಳನ್ನು ವರ್ಷಪೂರ್ತಿ ನೀಡುವಂತೆ ಮುಖ್ಯ ಮಂತ್ರಿಗಳ ಗಮನ ಸೆಳೆದು ರಾಜ್ಯಾದ್ಯಾಂತ ಆದಿವಾಸಿಗಳಿಗೆ ವಿತರಿಸಲಾಗುತ್ತಿದೆ ಇದರ ಸದ್ಬಳಕೆಯನ್ನು ಮಾಡಿಕೊಂಡು ಆರೋಗ್ಯವಂತರಾಗಿ ಜೀವನ ನಡೆಸಬೇಕೆಂದರು ಎಂದರು.

    ಚನ್ನಗುಂಡಿ ಕಾಲೋನಿ, ಅಳಲಹಳ್ಳಿ ಕಾಲೋನಿ, ಯಶವಂತಪುರ, ಎತ್ತಿಗೆ ಗ್ರಾಮಗಳ ಸಿಸಿ ರಸ್ತೆ ಹಾಗೂ ಅಂಗನವಾಡಿ ಕೇಂದ್ರದ ನೂತನ ಕಟ್ಟಡಗಳ ನಿರ್ಮಾಣಕ್ಕೆ ಸದ್ಯದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು. ಸಾರಿಗೆ ಸಮಸ್ಯೆನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ತಿಳಿಸಿದರು.

    ಇತ್ತೀಚೆಗೆ ಹುಲಿ ದಾಳಿಗೆ ಒಳಗಾದ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕುವಂತೆ ಮಾಡಿದ್ದೇನೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಅರಣ್ಯ ಸಚಿವರಾದ ಈಶ್ವರ್ ಖಂಡ್ರೆರವರೊಂದಿಗೆ ಈ ವಿಚಾರವಾಗಿ ಸುದೀರ್ಘವಾಗಿ ಮಾತನಾಡಿ,  ಅರಣ್ಯದ ಅಂಚಿನಲ್ಲಿ ಇಪಿಟಿ, ರೈಲ್ವೆ ಬ್ಯಾರಿಕೇಡ್, ಜಾಲರಿ ಅಳವಡಿಸುವಂತೆ ಮನವಿ ಮಾಡಿದ್ದೇನೆ, ಕಾಡಿನಿಂದ ಪ್ರಾಣಿಗಳು ಹೊರ ಬರಲು ಹಾಗೂ ಅವುಗಳನ್ನು ತಡೆಗಟ್ಟಲು ವೈಜ್ಞಾನಿಕ ಕಾರಣ ಮತ್ತು ಪರಿಹಾರವನ್ನು ತಿಳಿಸುವಂತೆ ಮೇಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ, ಇದೆಲ್ಲವೂ ಹತೋಟಿಗೆ ಬಂದ ನಂತರ ಸರ್ಕಾರದ ನಿರ್ದೇಶನದಂತೆ ಸಫಾರಿ ಪ್ರಾರಂಭಿಸಲಾಗುವುದು. ಸಾರ್ವಜನಿಕರು ಜಾಗೃತರಾಗಬೇಕು, ಕಾಡು ಪ್ರಾಣಿಗಳು ಹೊರಬಂದಾಗ ಹತ್ತಿರ ಹೋಗದೆ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕು, ಕಾರ್ಯಾಚರಣೆ ವೇಳೆ ಹತ್ತಿರ ಹೋಗದೆ ಇಲಾಖಾಧಿಕಾರಿಗಳಿಗೆ ಸಹಕರಿಸುವಂತೆ ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಚಿಕ್ಕಕ್ಯಾತ, ಪ್ರಕಾಶ್ ಚಂದ್ರ, ಶಿವಲಿಂಗಯ್ಯ ಯಶವಂತಪುರ, ಹಾದನೂರು ಪ್ರಕಾಶ್, ಮುಖಂಡರಾದ ಅಣ್ಣಯ್ಯಸ್ವಾಮಿ, ಮನುಗನಹಳ್ಳಿ ಗುರುಸ್ವಾಮಿ, ಬೀರ್ವಾಳು ಚಿಕ್ಕಣ್ಣ, ಸೌಮ್ಯ ಮಂಜುನಾಥ್, ವೆಂಕಟರಾಮು, ನಾಗೇಂದ್ರ, ಪುಟ್ಟಸ್ವಾಮಿ, ಶಿವಮೂರ್ತಿ, ಶಶಿಪಾಟೀಲ್, ಸಿದ್ದರಾಮು, ಅಶ್ರಫಲಿ, ಜಯಕುಮಾರ್, ಅಶೋಕ್. ರೇವಣ್ಣ, ಬಿ.ಸೋಮಣ್ಣ, ನಂದೀಶ್, ಸೋಮ, ಕೃಷ್ಣ, ಮಾಣ್ಬಾ, ಪದ್ಮ, ಗೀತಾ, ರಾಧ, ಶಿವಮ್ಮ, ಲಕ್ಷ್ಮಿಬಾಯಿ, ಸರಸ್ವತಿ, ಪರಿಶಿಷ್ಟ ಪಂಗಡ ಸಹಾಯಕ ನಿರ್ದೇಶಕ ಮಹೇಶ್, ಮ್ಯಾನೇಜರ್ ನಾಗರಾಜು, ಇನ್ನೂ ಮುಖಂಡರು ಹಾಗೂ ಶಾಲೆಯ ಶಿಕ್ಷಕರು ಮತ್ತಿತರರು ಹಾಜರಿದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಬೀದರ್: ಸಿಸಿಟಿ ಕಾಮಗಾರಿ ಸ್ಥಳದಲ್ಲೇ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ; 330 ಜನರಿಗೆ ನೆರವು

    August 23, 2026

    ಸರಗೂರಿನ ಬಿಡಗಲು ಗ್ರಾಮದಲ್ಲಿ ₹30 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿ ಪೂರ್ಣ

    August 23, 2026

    ಬೀದರ್: ಬರ ಘೋಷಣೆ, ಸಾಲಮನ್ನಾ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರಿಂದ ಬೃಹತ್ ರಸ್ತೆ ತಡೆ

    August 22, 2026

    Leave A Reply Cancel Reply

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    “ನೀವು ಹೇಳಿದಂತೆ ಕೇಳದಿದ್ರೆ ದ್ವೇಷಿಸ್ತೀರಾ?”: ಶಾಸಕ ಎಚ್.ಡಿ. ರೇವಣ್ಣಗೆ ಹಾಸನ ಜಿಲ್ಲಾಧಿಕಾರಿ ತಿರುಗೇಟು

    August 25, 2026

    ಹಾಸನ: ಗ್ರಾಮ ಪಂಚಾಯತಿ ಚುನಾವಣೆಯ ಮೀಸಲಾತಿ ನಿಗದಿ ವಿಷಯಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರು ಮಾಡಿದ್ದ ಟೀಕೆಗಳಿಗೆ…

    ಕರ್ನಾಟಕ ಸರ್ಕಾರಕ್ಕೆ ಅದಾನಿ ಕೇವಲ ಒಬ್ಬ ಗುತ್ತಿಗೆದಾರ ಅಷ್ಟೇ: ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

    August 25, 2026

    ಮಹಿಳಾ ಪಿಎಸ್ ಐಗೆ ಬಿಜೆಪಿ ಶಾಸಕನ ಪುತ್ರಿಯಿಂದ ಕಪಾಳಮೋಕ್ಷ: ವಿಡಿಯೋ ವೈರಲ್, ಎಫ್ ಐಆರ್ ದಾಖಲಾಗಿದ್ದರೂ ಆಗಿಲ್ಲ ಬಂಧನ

    August 25, 2026

    ದೈವಜ್ಞ ಸಮಾಜದ ಹಿರಿಮೆ, ಸಂಸ್ಕೃತಿ ಮತ್ತು ಪಾರಂಪರಿಕ ಮೌಲ್ಯಗಳನ್ನು ಸಾರುವ ‘ದೈವಜ್ಞರು ಚಿತ್ರದ ಶೀರ್ಷಿಕೆ, ಹಾಡುಗಳ ಲೋಕಾರ್ಪಣೆ

    August 24, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.